ಅಭಿಪ್ರಾಯ / ಸಲಹೆಗಳು

CRIME REPORTED IN Moodabidre PS

ಪಿರ್ಯಾದಿ THEJAS ACHARರವರ ಮಾಲೀಕತ್ವದ ಮೂಡಬಿದ್ರೆ ತಾಲೂಕು ಪಡುಮಾರ್ನಾಡು ಗ್ರಾಮದ ಬನ್ನಡ್ಡದಲ್ಲಿರುವ ಎಸ್,ಕೆ,ಎಫ್ ಎಲಿಕ್ಸರ್ ಸಂಸ್ಥೆಗೆ ದಿನಾಂಕ: 07-07-2021 ರಂದು 2670 ಮೀಟರ್ ಗಾರ್ಲೆಂಡ್ ಮಿಡಿಯಾವನ್ನು ಮತ್ತು ದಿನಾಂಕ: 31-07-2021 ರಂದು 6100 ಮೀಟರ್ ಗಾರ್ಲೆಂಡ್ ಮಿಡಿಯಾವನ್ನು ಸರಬರಾಜು ಮಾಡುವ ಸಲುವಾಗಿ ಸಾಗಾಟ ಶುಲ್ಕ ಸಮೇತ 13,82,550/- ರೂನ್ನು ಪಿರ್ಯಾದಿದಾರರು 1 ನೇ ಆರೋಪಿಯ ಕನ್ಯಕಾ ಪರಮೇಶ್ವರಿ ಕೋ ಅಪರೇಟಿವ್ ಲಿ. ನ ಖಾತೆ  ಕ್ಕೆ ವರ್ಗಾವಣೆ ಮಾಡಿರುತ್ತಾರೆ. ಆದರೆ ಆರೋಪಿ ಕಂಪನಿಯವರು ಇದುವರೆಗೆ 1750 ಮೀಟರ್ ನ ಗಾರ್ಲೆಂಡ್ ಮಿಡಿಯಾವನ್ನು ಕಳುಹಿಸಿಕೊಟ್ಟಿದ್ದು, ಇನ್ನು ಬಾಕಿ ಉಳಿದ 7020 ಮೀಟರ್ ಗಾರ್ಲೆಂಡ್ ಮಿಡಿಯಾವನ್ನು ಪೂರೈಕೆ ಮಾಡದೆ 1 ನೇ ಆರೋಪಿಯ ಸಂಸ್ಥೆಯಲ್ಲಿ ಕೆಲಸ ಮಾಡುವ ಆರೋಪಿತರು ಸೇರಿ ಪಿರ್ಯಾದಿದಾರರಿಗೆ ಮೋಸ ವಂಚನೆ, ನಂಬಿಕೆ ದ್ರೋಹ ಮಾಡಿರುತ್ತಾರೆ.

 

CRIME REPORTED IN Ullal PS

ಫಿರ್ಯಾದಿದಾರರಾದ ಉಮ್ಮರ್ ರಾಫಿ ಯವರು ಉಳ್ಳಾಲ ದರ್ಗಾದಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದು, ಅದರಂತೆ ದಿನಾಂಕ. 28-2-2022 ರಂದು ಸಂಜೆಯಿಂದ ಉಳ್ಳಾಲ ದರ್ಗಾದಲ್ಲಿ ಫಿರ್ಯಾದಿದಾರರು ಸ್ವಯಂ ಸೇವಕನಾಗಿದ್ದು ರಾತ್ರಿ ಸುಮಾರು 11-10 ಗಂಟೆಯ ಸಮಯಕ್ಕೆ ಉಳ್ಳಾಲ ದರ್ಗಾದ ಕಂಪೌಂಡಿನ ಒಳಗೆ ಮರಣ ದಫನ ಮಾಡುವ ಜಾಗದಲ್ಲಿ ಕಡಪರ ನಿವಾಸಿ ಜುಬೇರ್ ರವರ ಮಗ ಮುನ್ನ, ರಾಝಿಕ್, ನಿಹಾಲ್, ಜುನೈದ್ @ ಫವಾಜ್ ಮತ್ತು ಇತರರು ಉಳ್ಳಾಲ ಉರೂಸ್ ಕಾರ್ಯಕ್ರಮ ವೀಕ್ಷಿಸಲು ಬರುವ ಭಕ್ತಾಧಿಗಳಿಗೆ ಮತ್ತು ಪ್ರವಾಸಿಗರಿಗೆ ತೊಂದರೆ ಮಾಡುತ್ತಿರುವುದನ್ನು ಗಮನಿಸಿದ ಫಿರ್ಯಾದಿದಾರರು ಮುನ್ನ ಮತ್ತು ಇತರರಿಗೆ ಆ ರೀತಿ ತೊಂದರೆ ಮಾಡುವುದು ಸರಿಯಲ್ಲ ಎಂದು ಬುದ್ದಿಮಾತು ಹೇಳಿದಕ್ಕೆ ಕೋಪಗೊಂಡ ಆರೋಪಿಗಳು ಫಿರ್ಯಾದಿದಾರರನ್ನು ಉದ್ದೇಶಿಸಿ “…..ಮಗ, ನೀನು ಯಾರ ಬಳಿ ಮಾತನಾಡುವುದು, ನನ್ನ ಮುಖದ ಗುರುತು ಇಲ್ಲವೇ, ನನ್ನಲ್ಲಿ ಹೆಚ್ಚೇನು ಮಾತಾಡಿದರೆ ಕೊಲೆ ಮಾಡುತ್ತೇನೆ ಎಂದು ಬೈದು ಬೆದರಿಕೆ ಒಡ್ಡಿ ಆರೋಪಿಗಳೆಲ್ಲರೂ ಒಂದೇ ಸವನೆ ಕೈಗಳಿಂದ ಮತ್ತು ಕಲ್ಲುಗಳಿಂದ ಮೈಕೈಗೆ ಹಲ್ಲೆ ನಡೆಸಿದಲ್ಲದೆ, ಜೀವ ಬೆದರಿಕೆ ಒಡ್ಡಿ ಹೋಗಿರುತ್ತಾರೆ. ಆರೋಪಿಗಳ ಕೃತ್ಯದಿಂದ ಗಾಯಗೊಂಡ ಫಿರ್ಯಾದಿದಾರರು ಉಳ್ಳಾಲ ಸಹರಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

CRIME REPORTED IN Traffic South PS

ದಿನಾಂಕ: 28-02-2022 ರಂದು ಪಿರ್ಯಾದಿ UMAR FARUK ರವರು ಅವರ ಮನೆಯಾದ ಕೆ ಸಿ ನಗರಕ್ಕೆ ಹೋಗುವರೇ ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ:KL-14-W-6494 ನೇದನ್ನು ಸವಾರಿ ಮಾಡಿಕೊಂಡು ಸಮಯ ಸಂಜೆ 5-45 ಗಂಟೆಗೆ ಮಂಗಳೂರು ತಾಲ್ಲೂಕು ತಲಪಾಡಿ ಗ್ರಾಮದ ಕೆ ಸಿ ರೋಡಿನ ಸೂಪರ್ ಬಜಾರ್ ತಲುಪಿತ್ತಿದ್ದಂತೆ  ವಾಹನ ದಟ್ಟನೆಯಿಂದಾಗಿ ಪಿರ್ಯಾದಿದಾರರು ನಿಂತಿದ್ದಾಗ ಎದುರಿನಿಂದ KA-19-MF-3079  ನೇದರ ಕಾರಿನ ಚಾಲಕನು ಏಕಾಎಕಿ ಪಿರ್ಯಾದಿದಾರರ ಬಲಕಾಲಿನ ಪಾದದ ಮೇಲೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು  ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾಲಿಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ ಬಳಿಕ ಪಿರ್ಯಾದಿದಾರರು  ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ತೊಕ್ಕೊಟ್ಟು ನೇತಾಜಿ  ಆಸ್ಪತ್ರೆಗೆ ಹೋಗಿ ದಾಖಲಾಗಿರುತ್ತಾರೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 01-03-2022 07:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080