Crime Reported at KANKANADY TOWN PS
ಪಿರ್ಯಾದುದ Smt. Manjula ರವರು ತನ್ನ ಗಂಡನೊಂದಿಗೆ ಮರೋಳಿ, ಕೆಂಬಾರು, ಮಂಗಳೂರು ಎಂಬಲ್ಲಿ ವಾಸವಾಗಿದ್ದು, ಖಾಸಗಿ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತೀರುವುದಾಗಿದೆ. ದಿನಾಂಕ 15-01-2021 ರಂದು ಶಾಲೆಗೆ ರಜೆಯಾಗಿರುವುದರಿಂದ ಪಿರ್ಯಾದುದಾರರು ತಮ್ಮ ತಾಯಿಯ ಮನೆಯಾದ ಶಕ್ತಿನಗರದ ಕಕ್ಕೆಬೆಟ್ಟು ಕಾರ್ಮಿಕ ಕಾಲನಿಗೆ ಬಂದಿರುವುದಾಗಿದೆ. ಪಿರ್ಯಾದುದಾರರು ಮನೆಯಲ್ಲಿದ್ದ ಸಮಯ ಮದ್ಯಾಹ್ನ ಸುಮಾರು 2 ಗಂಟೆಗೆ ಪಿರ್ಯಾದುದಾರರ ತಂದೆ ಮೋಹನ್ ಎಂಬುವರು ಕೆ.ಎ-19-ಎಡಿ-2189 ನಂಬ್ರದ ಪಿಕ್ ಅಪ್ ವಾಹನದಲ್ಲಿ ಟೈಲ್ಸ್ ತುಂಬಿಕೊಂಡು ತಂದು, ಮನೆಯ ಅಂಗಳದಲ್ಲಿ ನಿಲ್ಲಿಸಿ, ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹಿಂದಕ್ಕೆ ತೆಗೆಯುವ ಸಮಯದಲ್ಲಿ, ಪಿಕ್ ಅಪ್ ವಾಹನವು ಅಲ್ಲಿಯೇ ಅಂಗಳದ ಬದಿಯಲ್ಲಿದ್ದ ಪಿರ್ಯಾದುದಾರರ ದೊಡ್ಡಪ್ಪ ಕೊರಗಪ್ಪನವರ ತಲೆಯ ಭಾಗಕ್ಕೆ ತಾಗಿ ನೆಲಕ್ಕೆ ಬಿದ್ದಿರುತ್ತಾರೆ. ನಂತರ ಅವರನ್ನು ಉಪಚರಿಸಿ, ಆಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಮದ್ಯಾಹ್ನ 2:35 ಗಂಟೆಗೆ ಕರೆದುಕೊಂಡು ಹೋದಲ್ಲಿ, ಕೊರಗಪ್ಪನವರನ್ನು (85) ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಆದ್ದರಿಂದ ಕೆ.ಎ-19-ಎಡಿ-2189 ನಂಬ್ರದ ಪಿಕ್ ಅಪ್ ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ ಚಾಲಕನಾದ ಮೋಹನ್ ಎಂಬಾತನ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.
Crime Reported at Traffic North PS
ದಿನಾಂಕ:11-01-2022 ರಂದು ಪಿರ್ಯಾದಿ K Abdulla ರವರು ತನ್ನ ಬಾಬ್ತು KA-19-D-4174 ನಂಬ್ರದ ಆಟೋರಿಕ್ಷಾದಲ್ಲಿ ಚಾಲಕನಾಗಿ ಹಳೆಯಂಗಡಿ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆಗಾಗಿ ನಿಂತಿರುವಾಗ ಅಂಬೇಡ್ಕರ್ ಭವನದ ಬಳಿಯ ಇಂದಿರಾ ನಗರದ ವಾಸಿ ಬಾಡಿಗೆಗೆ ಕರೆದಂತೆ ಅವರನ್ನು ಕರೆದುಕೊಂಡು ಹೋಗಿ ಅವರ ಮನೆಗೆ ಬಿಟ್ಟು ವಾಪಸ್ಸು ಹಳೆಯಂಗಡಿ ಕಡೆಗೆ ಬರುತ್ತಿದ್ದ ಸಮಯ ಮಧ್ಯಾಹ್ನ ಸುಮಾರು 2:30 ಗಂಟೆಗೆ ಮುಹಮ್ಮದ್ ಅಲಿ ಎಂಬುವರ ಮನೆಯ ಬಳಿ 04 ರಸ್ತೆಗಳು ಸೇರುವ ಜಾಗ ತಲುಪಿದಾಗ ನೀರಿನ ಟ್ಯಾಂಕಿನ ಕಡೆಗೆ ಹೋಗುವ ರಸ್ತೆಯಿಂದ KA-19-ML-0668 ನಂಬ್ರದ ಕಾರನ್ನು ಅದರ ಚಾಲಕ ಮುಹಮ್ಮದ್ ರಫೀಕ್ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋರಿಕ್ಷಾದ ಎಡಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಆಟೋರಿಕ್ಷಾ ಸೀಟಿನಿಂದ ಕೆಳಗೆ ಬಿದ್ದಿದ್ದು ಆ ಸಮಯ ರಿಕ್ಷಾದ ಹ್ಯಾಂಡಲ್ ಪಿರ್ಯಾದಿದಾರರ ಎಡಬದಿಯ ಪಕ್ಕೆಲುಬಿನ ಬಳಿ ಗುದ್ದಿದ ಪರಿಣಾಮ ಪಿರ್ಯಾದಿದಾರರ ಎಡಬದಿಯ ಪಕ್ಕೆಲುಬಿನ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಎಡಕೈ ಕೋಲು ಕೈಗೆ ರಕ್ತಗಾಯವಾಗಿದ್ದು, ಪಿರ್ಯದಿದಾರರನ್ನು ಚಿಕಿತ್ಸೆಯ ಬಗ್ಗೆ ಅಪಘಾತ ಪಡಿಸಿದ ಕಾರು ಚಾಲಕನು ಸುರತ್ಕಲಿನ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿರುತ್ತಾರೆ. ಎಂಬಿತ್ಯಾದಿ.
Crime Reported at Moodabidre PS
ಪಿರ್ಯಾದಿ ASHALATHA ರವರ ಗಂಡನಾದ ಹರೀಶ್ ಪೂಜಾರಿ ಎಂಬವರು ಈ ದಿನ ದಿನಾಂಕ:14-01-2022 ರಂದು ಬೆಳಿಗ್ಗೆ 08:30 ಗಂಟೆಗೆ ಕಡಂದಲೆ ತನ್ನ ಮನೆಯಿಂದ ಸಚ್ಚೇರಿಪೇಟೆಯ ಆನಂದ ಪೂಜಾರಿ ಎಂಬವರ ತೋಟದ ಕೂಲಿ ಕೆಲಸಕ್ಕೆ ಹೋಗುತ್ತೇನೆ ಎಂದು ಪಿರ್ಯಾದಿದಾರರಿಗೆ ತಿಳಿಸಿ ಮನೆಯಿಂದ ಹೊರಟು ಹೋದವರು ರಾತ್ರಿಯಾದರೂ ಮನೆಗೆ ಬಾರದನ್ನು ನೋಡಿ ಪಿರ್ಯಾದಿದಾರರು ಆನಂದ ಪೂಜಾರಿ ರವರ ಮನೆಗೆ ತೆರಳಿ ವಿಚಾರಿಸಿದಾಗ, ನಿನ್ನೆ ದಿನ ಹರೀಶ್ ಪೂಜಾರಿರವರು ಶರಾಬು ಕುಡಿದು ಕೆಲಸಕ್ಕೆ ಬಂದಿದ್ದರಿಂದ ಕೆಲಸ ಮಾಡುವುದು ಬೇಡ ಮನೆಗೆ ಹೋಗಿ ಎಂದು ಹೇಳಿರುವುದಾಗಿ ಆನಂದ ಪೂಜಾರಿ ರವರು ತಿಳಿಸಿರುತ್ತಾರೆ, ನಂತರ ನಾವು ಸಚ್ಚೇರಿಪೇಟೆ ಪ್ರದೇಶದಲ್ಲಿ ಹಾಗೂ ನಮ್ಮ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರು ಪಿರ್ಯಾದಿದಾರರ ಗಂಡ ಪತ್ತೆಯಾಗಿರುವುದಿಲ್ಲ ಪಿರ್ಯಾದಿದಾರರ ಗಂಡ ಶರಾಬು ಕುಡಿಯುವ ಹವ್ಯಾಸ ಉಳ್ಳವರಾಗಿದ್ದು, ಆದುದರಿಂದ ಕಾಣೆಯಾದ ಗಂಡ ಹರೀಶ್ ಪೂಜಾರಿ, 55 ವರ್ಷ ರವರನ್ನು ಪತ್ತೆ ಮಾಡಿ ಕೊಡಬೇಕಾಗಿ ಈ ಮೂಲಕ ಕೋರಿಕೆ ಎಂಬಿತ್ಯಾದಿ
Crime Reported at MANGALURU SOUTH PS
1.ಪ್ರಕರಣದ ಪಿರ್ಯಾದಿ Devendrappa Akalada HC ರವರು ದಿನಾಂಕ:14-01-2022 ರಂದು ಪಿ.ಸಿ. ಯಮನಪ್ಪ ವಂದಾಲ ರವರ ಜೊತೆ ಹೋಯ್ಸಳ-6 ವಾಹನದಲ್ಲಿ ಕರ್ತವ್ಯದಲ್ಲಿರುವ ಸಮಯ 17-20 ಗಂಟೆಗೆ ಕಂಟ್ರೋಲ್ ರೂಮ್ ನಿಂದ, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಬಳಿ ಗಲಾಟೆ ಆಗುತ್ತಿರುವುದರಿಂದ ಕೂಡಲೇ ಸ್ಥಳಕ್ಕೆ ಹೋಗುವಂತೆ ತಿಳಿಸಿದಂತೆ, ಪಿರ್ಯಾದಿದಾರರು 17-30 ಗಂಟೆಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಬಳಿ ಇರುವ CLOUD SHISHA CEFE ರೆಸ್ಟೋರೆಂಟ್ ನ ಒಳಗೆ ಹೋದಾಗ ಮೊಹಮದ್ ಸಿನಾನ್, ನೌಫಾಲ್, ಮೊಹಮದ್ ಅರ್ಫಾನ್, ಮೊಹಮದ್ ರಾಝಿಕ್, ಮೊಹಮದ್ ಝಕಾರಿಯಾ, ಮೊಹಮದ್ ಇರ್ಷಾದ್ ಹಾಗೂ ಅಬ್ದುಲ್ ರೆಹಮಾನ್ ಶಫಿಕ್ ಎಂಬುವರುಗಳು, ಸಾರ್ವಜನಿಕ ಸ್ಥಳವಾದ CLOUD SHISHA CEFE ರೆಸ್ಟೋರೆಂಟ್ ನಲ್ಲಿ ಬೊಬ್ಬೆ ಹಾಕಿ ಬೈಯ್ಯುತ್ತಾ, ಒಬ್ಬರಿಗೊಬ್ಬರು ಕೈಗಳಿಂದ ಹಲ್ಲೆ ನಡೆಸಿಕೊಂಡು, ಸಾರ್ವಜನಿಕ ಶಾಂತಿ ನೆಮ್ಮದಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದವರಿಗೆ ಪಿರ್ಯಾದಿದಾರರು ಗಲಾಟೆ ಮಾಡದಂತೆ ತಿಳಿ ಹೇಳಿದರು ಕೂಡ, ಆರೋಪಿಗಳು ಪಿರ್ಯಾದಿದಾರರ ಎದುರು ಪುನಃ ಪರಸ್ಪರ ಹಲ್ಲೆ ನಡೆಸಿಕೊಂಡು ಗಲಾಟೆ ಮಾಡಿರುವುದರಿಂದ ಾರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.
2.ಪಿರ್ಯಾದಿದಾರರಾದ ಜಲಜಾ ಪ್ರಾಯ 62 ವರ್ಷ ರವರು ಮನೆ ವಾರ್ತೆ ಮಾಡಿಕೊಂಡಿದ್ದು, ಪಿರ್ಯಾದಿದಾರರ ಗಂಡ ಸಿ ರಾಜನ್ ಪ್ರಾಯ 80 ವರ್ಷ ರವರು ದಿನಾಂಕ 24-12-2021 ರಂದು ಸಂಜೆ 04.00 ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಹೊರಗೆ ಹೋಗಿದ್ದು ಮರಳಿ ಮನೆಗೆ ಬಂದಿರುವುದಿಲ್ಲ. ಕೂಡಲೇ ಪಿರ್ಯಾದಿದಾರರು ಮಂಗಳೂರು ನಗರದ ಕೆಲವೊಂದು ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ನೆರೆ ಕೆರೆಯವರಲ್ಲಿ ಮತ್ತು ಸಂಬಂಧಿಕರಲ್ಲಿ ಹಾಗೂ ಪರಿಚಯದ ಸ್ನೇಹಿತರಲ್ಲಿ ವಿಚಾರಿಸಿದ್ದಲ್ಲಿ ಈ ವರಗೂ ಪಿರ್ಯಾದಿದಾರರ ಗಂಡ ಪತ್ತೆಯಾಗಿರುವುದಿಲ್ಲ ಕಾಣೆಯಾದ ಸಿ ರಾಜನ್ ರವರನ್ನು ಹುಡುಕಿಕೊಡಬೇಕಾಗಿ ವಿನಂತಿ ಎಂಬಿತ್ಯಾಧಿ .
ಚಹರೆ ವಿವರ: ಪ್ರಾಯ 80 ವರ್ಷ, ಎತ್ತರ: 5 ಅಡಿ 3 ಇಂಚು, ಎಣ್ಣೆ ಗಪ್ಪು ಬಣ್ಣ,(ಬೊಕ್ಕ ತಲೆ ) ಕಂದು ಬಣ್ಣದ ಅಂಗಿ, ಖಾದಿ ಬಣ್ಣದ ಪಂಚೆ/ಲುಂಗಿ ದರಿಸಿದ್ದು ಮಲೆಯಾಳಂ,ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ.