ಅಭಿಪ್ರಾಯ / ಸಲಹೆಗಳು

Crime Reported in  Urva PS

ದಿನಾಂಕ : 01.06.2021 ರಂದು  ಸಾಂಕ್ರಾಮಿಕ ರೋಗವಾದ  ಕೋವಿಡ್ -19,  ಕೊರೋನಾ ಸಾಂಕ್ರಾಮಿಕ  ಖಾಯಿಲೆ  ಹಿನ್ನಲೆ ಯಲ್ಲಿ  ರಾಜ್ಯಾದ್ಯಾಂತ  ಲಾಕ್ ಡೌನ್  ಘೋಷಣೆಯಾಗಿದ್ದು  ಅದರಂತೆ  ಸರಕಾರದ  ಮಾರ್ಗಸೂಚಿಯಂತೆ  ಬೆಳಿಗ್ಗೆ 06:00 ಗಂಟೆಯಿಂದ  10:00  ಗಂಟೆ  ವರೆಗೆ  ಅಗತ್ಯ  ವಸ್ತುಗಳ  ಅಂಗಡಿಗಳನ್ನು  ತೆರೆಯಲು  ಸರಕಾರವು  ಸಮಯವಕಾಶವನ್ನು  ನೀಡಿರುತ್ತದೆ.  ಆದರೆ  ಈ  ದಿನ ನಗರದ  ಉರ್ವಾ  ಕೊಟ್ಟಾರ ಚೌಕಿ ಇನ್ ಪೋಸಿಸ್ ಬಳಿಯ ಮಲ್ಲಿನಾಥ್  ಹಾರ್ಡ್ ವೇರ್ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್  ಪಾಯಿಂಟ್  ಎಂಬ ಹೆಸರಿನ  ಅಂಗಡಿಯ ಶಟರ್ ತೆರೆದು ನಿಗದಿತ ಸಮಯ ಕಳೆದರೂ ವ್ಯಾಪಾರ  ಮಾಡಿಕೊಂಡಿರುವ  ಬಗ್ಗೆ  ಮೇಲಾದಿಕಾರಿಗಳಿಗೆ  ಬಂದ ಮಾಹಿತಿಯಂತೆ ಠಾಣೆಯಲ್ಲಿ  ಕರ್ತವ್ಯದ್ದಲ್ಲಿದ್ದ, ಪಿರ್ಯಾದು PSI Smt Srikala K T ರವರು ಠಾಣಾ ಸಿಬ್ಬಂದಿಗಳೊಂದಿಗೆ ಸಮಯ 10-30 ಗಂಟೆ  ವೇಳೆಗೆ  ಹೊರಟು ಸಮಯ 10-45 ಗಂಟೆ  ವೇಳೆಗೆ  ಮಾಹಿತಿ  ಬಂದ  ಸ್ಥಳವಾದ ಅಂಗಡಿ  ಬಳಿಗೆ  ತಲುಪಿ    ಪರಿಶೀಲಿಸಿದಾಗ   ಸದ್ರಿ  ಅಂಗಡಿಯ  ಮುಂಭಾಗದ  ಶೆಟರ್ ಬಾಗಿಲನ್ನು  ತೆರೆದು  ವ್ಯಾಪಾರ  ಮಾಡಿಕೊಂಡು  ಇರುವುದು ಕಂಡು  ಬಂದಿರುತ್ತದೆ.  ಸದ್ರಿ  ಅಂಗಡಿಯಲ್ಲಿದ್ದ ವ್ಯಕ್ತಿಯನ್ನು   ವಿಚಾರಿಸಿಕೊಂಡು  ಅವರ  ಹೆಸರು  ವಿಳಾಸ ಪಡೆಯಲಾಗಿ,  ರಾಜೇಶ್  ಜಗದೀಶ್ ಭಾಯಿ, ಪ್ರಾಯ 25 ವರ್ಷ, ತಂದೆ: ಜಗಧೀಶ್ ಭಾಯಿ,  ವಾಸ: ಅಶೋಕ  ನಗರ  ವಿದ್ಯಾಲಯ, ಉರ್ವ ಸ್ಟೋರ್, ಮಂಗಳೂರು, ಸ್ವಂತ  ವಿಳಾಸ:  604.  ಶಿವಂ  ಅಪಾರ್ಟ್ಮೆಂಟ್  ಸೂರ್ಯ ನಗರ  ಸಹರಾ  ದರ್ವಾಜ್ ,  ಸೂರಜ್  ಸಿಟಿ,  ಮುಂಬೈ  ಮಾರ್ಕೆಟ್ ,  ಸೂರತ್,  ಗುಜರಾತ್  ಎಂಬುದಾಗಿ  ತಿಳಿಸಿರುತ್ತಾರೆ, ಸದ್ರಿ  ಅಂಗಡಿಯಲ್ಲಿ  ತಾನು ಸೇಲ್ಸ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು,  ಅಂಗಡಿಯ ಮಾಲೀಕರ ಹೆಸರು  ವಿಳಾಸ  ಕೇಳಿದಾಗ,   ಮಾಲಿ ದಿನೇಶ್  ಪ್ರಾಯ 30 ವರ್ಷ, ಸೂರತ್  ಗುಜರಾತ್ ಎಂಬುದಾಗಿ  ತಿಳಿಸಿರುತ್ತದೆ. ತಕ್ಷೀರು  ನಡೆದ ಅಂಗಡಿ ಇರುವ  ಕಟ್ಟಡ  ಹೆಸರು   ಅಂಜು ಕೋರ್ಟ್ ಎಂಬುದಾಗಿ ಇರುತ್ತದೆ.  ಸದ್ರಿ   ಅಂಗಡಿಯ   ಡೋರ್  ನಂಬ್ರ 1-N-2-180/3 ಆಗಿರುತ್ತದೆ.  .  ಪ್ರಸ್ತುತ  ಕೊರೋನಾ  ಸಾಂಕ್ರಾಮಿಕ  ರೋಗವು  ತೀವ್ರ ಗತಿಯಲ್ಲಿ  ಹರಡುತ್ತಿದ್ದು  ಸದ್ರಿ  ಅಂಗಡಿಯ  ಮಾಲಿಕರು ಯಾವುದೇ   ರೀತಿಯಲ್ಲಿ  ಲಾಕ್  ಡೌನ್  ನಿಯಮವನ್ನು ಪಾಲಿಸದೆ  ಸಾಂಕ್ರಮಿಕ  ರೋಗವಾದ  ಕೊರೋನಾ  ವೈರಸ್  ನ್ನು  ಹರಡಲು  ಸಾದ್ಯತೆಯನ್ನು ಉಂಟು  ಮಾಡಿದ್ದು, ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ನೀಡಿದ ಪಿರ್ಯಾದು ಸಾರಾಂಶವಾಗಿರುತ್ತದೆ.

Crime Reported in  Kankanady Town PS

ಪಿರ್ಯಾದುದಾರರಾದ ಶ್ರೀಮತಿ ವೀಣಾರವರು ದಿನಾಂಕ 30-05-2021 ರಂದು ಮನೆಯಲ್ಲಿರುವ ಸಮಯ ರಾತ್ರಿ ಸುಮಾರು 08:00 ಗಂಟೆಗೆ ಸರಿಪಲ್ಲದ ಹೇಮಂತ್ ಮತ್ತು ಕೋಡಿಕಲ್‌ನ ರಂಜಿತ್ ಎಂಬವರು ಕುಂಜತ್‌ ಬೈಲಿನ ಸುಶಾಲ್, ಕಾವೂರಿನ ಯತೀರಾಜ್‌, ಕೊಟ್ಟಾರ ಕಲ್ಬಾವಿಯ ಅವಿನಾಶ್, ಉರ್ವಾ ಸ್ಟೋರ್ ಸುಂಕದ ಕಟ್ಟೆಯ ಧನುಷ್, ಕೊಟ್ಟಾರ ಚೌಕಿಯ ಪ್ರಜ್ವಲ್ , ದಕ್ಕೆಯ ದೀಕ್ಷಿತ್,  ಉರ್ವಾ ಸ್ಟೋರ್ ನ ದೀಪಕ್‌ ಎಂಬವರುಗಳು ಕೈಯಲ್ಲಿ ಉದ್ದವಾದ ತಲವಾರು, ರಾಡ್‌, ಕೊಡಲಿ ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಪಿರ್ಯಾದಿದಾರರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಮನೆಯಲ್ಲಿದ್ದ ಪಿರ್ಯಾದಿದಾರರಲ್ಲಿ ಅವರ ಮಕ್ಕಳಾದ  ಆಕಾಶ್‌ ಹಾಗೂ ಕೀರ್ತನ್‌ ಎಂಬವರನ್ನು ಕೇಳಿದಾಗ, ಅವರು ಮನೆಯಲ್ಲಿ ಇಲ್ಲ ಹೊರಗಡೆ ಹೋಗಿದ್ದಾರೆ ಎಂದು ಹೇಳಿದಾಗ, ಹೇಮಂತ್ ಎಂಬಾತನು ಪಿರ್ಯಾದಿದಾರರಲ್ಲಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದು ನಾನೇ, “ಏನು ಮಾಡ್ತಾರೆ, ನಿಮ್ಮ ಮಕ್ಕಳಿಬ್ಬರನ್ನು ಜೀವ ಸಹಿತ ಬಿಡುವುದಿಲ್ಲವಾಗಿ” ಬೈಯುತ್ತಿದ್ದಂತೆ, ರಂಜಿತ್ ಎಂಬಾತನು  ಪಿರ್ಯಾದಿದಾರರನ್ನು ಉದ್ದೇಶಿಸಿ ನಿಮ್ಮನ್ನು ಕೂಡಾ ಬಿಡುವುದಿಲ್ಲವೆಂದು ಅವನ ಕೈಯ್ಯಲ್ಲಿದ್ದ ತಲವಾರ್ ನಿಂದ ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿದಾರರ ಕಡೆಗೆ ಬೀಸಿದಾಗ, ಪಿರ್ಯಾದಿದಾರರು ಬಗ್ಗಿ ತಲವಾರಿನ ಏಟಿನಿಂದ  ತಪ್ಪಿಸಿ ಜೋರಾಗಿ ಬೊಬ್ಬೆ ಹೊಡೆದು ಮನೆಯ ಹೊರಗಡೆ ಓಡಿದರು. ಇದೇ ವೇಳೆ ರಂಜಿತ್ ನ ಜೊತೆಯಲ್ಲಿದ್ದ ಇತರರು ಅವರ ಕೈಯಲ್ಲಿದ್ದ ತಲವಾರುಗಳನ್ನು ಯದ್ವಾ-ತದ್ವಾ ಬೀಸಿ ಪಿರ್ಯಾದಿದಾರರ ಮನೆಯಲ್ಲಿದ್ದ ಟಿ.ವಿ. ಮಿಕ್ಸಿ, ಸೋಫಾ, ಮನೆಯ ಹಿಂಬಾಗಿಲಿಗೆ ಹಾನಿ ಮಾಡಿ ನಷ್ಟವುಂಟು ಮಾಡಿರುತ್ತಾರೆ. ಅಲ್ಲದೇ ಮನೆಯ ಹೊರಗಡೆ ಬರುವ ವೇಳೆ ಜನರು ಸೇರಿದ್ದನ್ನು ನೋಡಿ ರಂಜಿತ್‌ನು ಪಿರ್ಯಾದಿದಾರರನ್ನು ಉದ್ದೇಶಿಸಿ “ ಮಕ್ಕಳನ್ನು ತೆಗೆಯದೇ ಬಿಡುವುದಿಲ್ಲ” ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿ  ಆರೋಪಿಗಳು ಅಲ್ಲಿಂದ ಹೋಗಿರುತ್ತಾರೆ.  ಪಿರ್ಯಾದಿದಾರರ ಮಗಳು ಕುಮಾರಿ ಬಿಂದಿಯಾಳನ್ನು ಹೇಮಂತನು ಎರಡು ವಾರದ ಹಿಂದೆ ಮೋಟಾರ್ ಸೈಕಲ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದನ್ನು ನೋಡಿ ಪಿರ್ಯಾದಿದಾರರ ಮಕ್ಕಳಾದ ಆಕಾಶ್‌ ಹಾಗೂ ಕೀರ್ತನ್‌ ನು ಪೋನ್‌ ಮಾಡಿ ಹೇಮಂತ್‌ನಿಗೆ ಕೇಳಿದಕ್ಕೆ, ಕೋಪಗೊಂಡ ಹೇಮಂತ ಹಾಗೂ ರಂಜಿತನು ಆಕಾಶ್‌ ಹಾಗೂ ಕೀರ್ತನ್‌ ರವರನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಸ್ನೇಹಿತರನ್ನು ಕರೆತಂದು, ಪ್ರಸ್ತುತ ಎಲ್ಲಾ ಕಡೆ ಕೊರೋನಾ  ಸಾಂಕ್ರಾಮಿಕ ರೋಗದ ಬಗ್ಗೆ ಬಂದ್ ಇದ್ದರೂ ಕೂಡಾ ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತ್ರದೊಂದಿಗೆ ಪಿರ್ಯಾದಿದಾರರ ಮನೆಗೆ ಬಂದು, ಪಿರ್ಯಾದಿದಾರರ ಮಕ್ಕಳಿಲ್ಲದ್ದನ್ನು ನೋಡಿ ಪಿರ್ಯಾದಿದಾರರ ಕೊಲೆಗೆ ಯತ್ನಿಸಿ, ಮನೆಯ ಸೊತ್ತುಗಳಿಗೆ ಹಾನಿ ಮಾಡಿ ನಷ್ಟಗೊಳಿಸಿ, ಜೀವಬೆದರಿಕೆ ಒಡ್ಡಿರುವುದಾಗಿದೆ ಎಂಬಿತ್ಯಾದಿಯಾಗಿದೆ

Crime Reported in  Kavoor PS  

ದಿನಾಂಕ 01-06-2021 ರಂದು ಪಿರ್ಯಾದಿ HARISH H V PSI ರವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ಕೂಳೂರು ಅಯ್ಯಪ್ಪ ಗುಡಿಯ ಬಳಿಯಿರುವ ಚೆಕ್ ಪಾಯಿಂಟ್ ಗೆ ತಲುಪಿ ವಾಹನ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿರುವ ಸಮಯ ಸುಮಾರು ಬೆಳಿಗ್ಗೆ 11.30 ಗಂಟೆಗೆ ಪಣಂಬೂರು ಕಡೆಯಿಂದ ಬಂದ KA 19 MG 7913 ನಂಬ್ರದ ಕಾರನ್ನು ಪರಿಶೀಲಿಸುವ ಬಗ್ಗೆ ತಡೆದು ನಿಲ್ಲಿಸಿ ನೋಡಿದಾಗ ಅದರ ಚಾಲಕ ಸಂದೇಶ್. ಸಿ ಎಂಬವರು ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಇದ್ದು ಚಾಲಕನ ಬದಿಯ ಸೀಟಿನಲ್ಲಿ ಓರ್ವ ಹಾಗೂ ಕಾರಿನ ಹಿಂಬದಿ ಸೀಟಿನಲ್ಲಿ ಒಬ್ಬರಿಗೊಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಳ್ಳದೇ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಕುಳಿತುಕೊಂಡಿದ್ದು, ಇವರು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರು ಮಂಗಳೂರು ರವರು ಹೊರಡಿಸಿರುವ ಮಾರ್ಗಸೂಚಿ ಆದೇಶವನ್ನು ಉಲ್ಲಂಘಿಸಿ ಸಕಾರಣವಿಲ್ಲದೇ ಕಾರಿನಲ್ಲಿ ಚಾಲಕ ಸೇರಿ 4 ಪ್ರಯಾಣಿಕರಿಗಿಂತ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸಬಾರದೆಂಬ ಮಾರ್ಗಸೂಚಿ ಆದೇಶದ ಬಗ್ಗೆ ತಿಳಿದು ಕೂಡ ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವಿರುವುದನ್ನು ತಿಳಿದು ಕೂಡ ನಿರ್ಲಕ್ಷವಹಿಸಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

Crime Reported in  Ullal PS

ಪ್ರಕರಣದ ಫಿರ್ಯಾದಿದಾರರಾದ ರೇವಣ ಸಿದ್ದಪ್ಪ ಪಿಎಸ್ಐ ರವರು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ  ಮಂಗಳೂರು ತಾಲೂಕು ಕಿನ್ಯಾ ಗ್ರಾಮ ದ ಮಾಧವಪುರ ಬಸ್ ನಿಲ್ದಾಣದ ಬಳಿಯಲ್ಲಿ ತಲುಪಿದಾಗ ಫಿರ್ಯಾದಿದಾರರ ಎದುರಗಡೆಯಿಂದ 3  ದ್ವಿಚಕ್ರ ವಾಹನಗಳನ್ನು ಅದರ ಸವಾರರು ಸವಾರಿ ಮಾಡಿಕೊಂಡು  ಬರುತ್ತಿದ್ದುದ್ದನ್ನು ಕಂಡು ಸದ್ರಿ ದ್ವಿ ಚಕ್ರ ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ಕೊಟ್ಟಾಗ 3 ಮಂದಿ ಸವಾರರು ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಓಡಿ ಹೋಗಿ ಪರಾರಿಯಾಗಿರುತ್ತಾರೆ. ಸದ್ರಿ ದ್ವಿ ಚಕ್ರವನ್ನು ಪರಿಶೀಲಿಸಿದಾಗ KA 19 EW 2549 , (2) KE 19 HB 4139 (3) KA 19 EJ 6357 ಆಗಿದ್ದು, ಇವುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮೂರು  ಜನ ದ್ವಿ ಚಕ್ರ ವಾಹನ ಸವಾರರು ಸರಕಾರದ ಲಾಕ್ ಡೌನ್ ಅದೇಶವನ್ನು ಉಲ್ಳಂಘಿಸಿ ವಿನಾ ಕಾರಣ ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸಿ, ಕೋವಿಡ್ 19 ಸಾಂಕ್ರಾಮಿಕ ರೋಗ ಹರಡಲು ಕಾರಣಕರ್ತರಾಗಿದ್ದು, ಇವರುಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ದಾಖಲಿಸಿದ ಪ್ರಕರಣವಾಗಿರುತ್ತದೆ. ಎಂಬಿತ್ಯಾದಿಯಾಗಿರುತ್ತದೆ

Crime Reported in  Mangalore South PS

ದಿನಾಂಕ 01-06-2021 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿಎಸ್ಐ ಕಾ&ಸು-01  ಶೀತಲ್ ಅಲಗೂರು ಠಾಣಾ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ  ಸುಮಾರು 10-30 ಗಂಟೆಗೆ ಮಂಗಳೂರು ನಗರದ ಯು.ಪಿ ಮಲ್ಯ ರಸ್ತೆಯಲ್ಲಿರುವ ತಾಲೂಕ ಪಂಚಾಯತ್ ಕಚೇರಿ ಬಳಿ ಇರುವ  “ಸಾಯಿದೇವ ಜ್ಯೂಸ್ ಸೆಂಟರ್” ಎಂಬ ಹೆಸರಿನ ಜ್ಯೂಸ್ ಸೆಂಟರ್  ಮಾಲಕ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಲ್ಲಿ ನಿಗದಿ ಪಡಿಸಿದ ಸಮಯಕ್ಕಿಂತ ಹೆಚ್ಚಿನ ಅವಧಿಯವರೆಗೆ   ಜ್ಯೂಸ್ ಸೆಂಟರ್ ನ್ನು ತೆರೆದು, ವ್ಯಾಪಾರ ಮಾಡಿ, ಕೋವಿಡ್-19 ಸಾಂಕ್ರಾಮಿಕ  ರೋಗ   ಹರಡುವಿಕೆಯನ್ನು ತಡೆಗಟ್ಟುವಿಕೆ ಬಗ್ಗೆ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಆದೇಶಗಳನ್ನು ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿರುತ್ತಾರೆ. ಸದ್ರಿ ಜ್ಯೂಸ್ ಸೆಂಟರ್ ಮಾಲಕನ ವಿರುದ್ದ ಕಲಂ: 51 (B)  ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕಲಂ 269 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ  ಎಂಬಿತ್ಯಾದಿಯಾಗಿರುತ್ತದೆ

ಇತ್ತೀಚಿನ ನವೀಕರಣ​ : 01-06-2021 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080