ಅಭಿಪ್ರಾಯ / ಸಲಹೆಗಳು

Crime Reported in  Cyber Crime PS

ಪಿರ್ಯಾದಿದಾರರು HDFC ಬ್ಯಾಂಕ್ ಬೆಂಗಳೂರು  ಕೋರಮಂಗಲ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು ಪಿರ್ಯಾದಿದಾರರ ಸ್ನೇಹಿತರಾದ SARAVANAN ಎಂಬವರು ಯು.ಎಸ್.ಎ ಯಲ್ಲಿ ವಾಸ್ತವ್ಯವಿದ್ದು  ದಿನಾಂಕ 29-06-2021 ರಂದು ಬೆಳಿಗ್ಗೆ ಸಮಯ ಸುಮಾರು 00.12 ಗಂಟೆಗೆ ಪಿರ್ಯಾದಿದಾರರಿಗೆ WHATS APP ಮೂಲಕ ತನ್ನ ಸಂಬಂಧಿಕರಿಗೆ  COVID  ಚಿಕಿತ್ಸೆಯ ಬಗ್ಗೆ ಹಣವನ್ನು ಕಳುಹಿಸಿಕೊಡುವಂತೆ ಕೇಳಿದ್ದು ಇದನ್ನು ನಂಬಿದ ಪಿರ್ಯಾದಿದಾರರು ತನ್ನ ಗೂಗಲ್ ಪೇ ದಿಂದ ಸ್ನೇಹಿತನು ನೀಡಿದ ಗೂಗಲ್ ಪೇ ನಂಬ್ರ  +918729881191 ಕ್ಕೆ  ಹಂತ ಹಂತವಾಗಿ ಒಟ್ಟು ರೂ. 1.00,000/- ವರ್ಗಾವಣೆ  ಮಾಡಿರುತ್ತಾರೆ ನಂತರ ರ್ಪಿರ್ಯಾದಿದಾರರು ತನ್ನ ಸ್ನೇಹಿತರಾದ SARAVANAN ರವರ ಮೊಬೈಲ್ ಗೆ ಕರೆ ಮಾಡಿ ವಿಚಾರಿಸಿದ್ದು SARAVANAN ರವರು ತನ್ನ ವಾಟ್ಸಪ್ ಖಾತೆಯು ಹ್ಯಾಕ್ ಆಗಿದ್ದು ಯಾರೋ ಅಪರಿಚಿತರು ಈ ರೀತಿ ಮಾಡಿರುವುದಾಗಿ ತಿಳಸಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ಸೈಬರ್ ಪೋರ್ಟಲ್ ನಲ್ಲಿ ದೂರು ನೀಡಿದ್ದು ಈ ದಿನ ಠಾಣೆಗೆ ಬಂದು ವಿಳಂಬವಾಗಿ ದೂರು ನೀಡಿರುವುದಾಗಿದೆ. ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ವಾಟ್ಸಪ್ ಖಾತೆಯನ್ನು ಹ್ಯಾಕ್ ಮಾಡಿದ್ದು ಅದರ ಮೂಲಕ ಪಿರ್ಯಾದಿದಾರರಿಗೆ SARAVANAN ರವರಿಗೆ ಸಂಬಂಧಿಕರ ಕೋವಿಡ್ ಚಿಕಿತ್ಸೆ ಬಗ್ಗೆ ಹಣದ ಅವಶ್ಯಕತೆಯಿದೆ ಎಂದು ಸಂದೇಶ ಕಳುಹಿಸಿ ಮೋಸದಿಂದ ಪಿರ್ಯಾದಿದಾರರ ಖಾತೆಯಿಂದ ರೂ.1,00,000/- ನ್ನು ತನ್ನ ಖಾತೆಗೆ ವರ್ಗಾಯಿಸಿರುವುದಾಗಿದೆ. ಎಂಬಿತ್ಯಾದಿ.

Crime Reported in  Traffic South PS

ದಿನಾಂಕ:30.06.2021ರಂದು ಪಿರ್ಯಾದಿದಾರರಾದ ಸುಷ್ಮ ವಿಯಾನ್ನ ಡಿಸೋಜಾ(20) ರವರ ಭಾವ ಲಾರೆನ್ಸ್ ಪಿಂಟೋ ರವರು ತಮ್ಮ ತಾಯಿಯ ಆಸ್ಪತ್ರೆಯ ಚಿಕಿತ್ಸೆಗೆಂದು ರೇಷನ್ ಕಾರ್ಡ್ ನ್ನು ತೆಗೆದುಕೊಂಡು ತಮ್ಮ ಊರಾದ ಚಿಕ್ಕಮಗಳೂರು (ಜಿ) ಕೊಟ್ಟಿಗೆಹಾರ ದಿಂದ ಬೆಳ್ಳಿಗ್ಗೆ KA 18 F 1068   ನೇ ಕೆ ಎಸ್ ಆರ್ ಟಿ ಸಿ ಬಸ್ಸ್  ನೇದರಲ್ಲಿ ಮಂಗಳೂರಿಗೆ ಬಂದು ಮಂಗಳೂರಿನ ಪಂಪವೆಲ್ ಬಸ್ಸ್ ಸ್ಟಾಪ್ ನಲ್ಲಿ ಬಸ್ಸಿನಿಂದ ಕೆಳಗೆ ಹಿಳಿಯುವಾಗ ಬಸ್ಸ್ ಚಾಲಕ ಕುಮಾರ್ ಚೌಗೌಳಿ ರವರು ಒಮ್ಮೆಲೆ  ಬಸ್ಸ್ ನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಭಾವ ಬಸ್ಸಿನಿಂದ ಕೆಳಗೆ ಬಿದ್ದು ಅವರ ತಲೆಗೆ ಗುದ್ದಿದ ರೀತಿಯಾ ಗಾಯ ಹಾಗೂ ಕಾಲಿಗೆ ತೆರಚಿದ ರೀತಿಯಾ ಗಾಯವಾಗಿರುತ್ತದೆ ಅವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಬಸ್ಸ್ ನ ಚಾಲಕ ಹಾಗೂ ನಿರ್ವಾಹಕ ವೆನ್ಲಾಕ್ ಆಸ್ಪತ್ರೆಗೆ ದಾಖಲುಮಾಡಿರುತ್ತಾರೆ ಎಂಬಿತ್ಯಾ.ಧಿ

Crime Reported in  Mangalore South PS

ಪ್ರಕರಣದ ಪಿರ್ಯಾದಿದಾರರಾದ ಹೆಚ್.ಸಿ  ಸುನಿಲ್ ಕುಮಾರ್ ರವರು ದಿನಾಂಕ : 30-06-2021 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ವೆಲೆನ್ಸಿಯಾದಲ್ಲಿರುವ ಸಮಯ ಮಧ್ಯಾಹ್ನ ಸುಮಾರು 3-00 ಗಂಟೆಗೆ, ಮಂಗಳೂರು ನಗರದ ಕಂಕನಾಡಿ ಹಸನ್ ಹೆರಿಟೇಜ್ ಕಟ್ಟಡದಲ್ಲಿರುವ CLOUD SHISHA CAFE ಎಂಬ ಹವಾನಿಯಂತ್ರಿತ ರೆಸ್ಟೋರೆಂಟ್ ನ ಮಾಲಕರಾದ ಹುಸೈನ್ ಸಾಹಿಲ್ ಹಾಗೂ ಮೊಹಮ್ಮದ್ ಸಿರಾಜುದ್ದೀನ್ ರವರು ಹಾಗೂ ಸದ್ರಿ ರೆಸ್ಟೊರೆಂಟ್ ನಲ್ಲಿ ಕೆಲಸ ಮಾಡುತ್ತಿರುವ  ಅಬ್ದುಲ್ ಮುಕ್ಷಿತ್, ಫಯಾಜ್, ನಿಖಿಲ್ ನಾಯರ್ ರವರು ರೆಸ್ಟೋರೆಂಟನ್ನು ತೆರೆದು, ಗ್ರಾಹಕರಿಗೆ ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಯಾವುದೇ ಸೂಚನಾ ಫಲಕವನ್ನು ರೆಸ್ಟೋರೆಂಟ್ ಮುಂಭಾಗ ತೂಗು ಹಾಕದೆ ನಿರ್ಲಕ್ಷತನದಿಂದ ಹವಾನಿಯಂತ್ರಿತ ರೆಸ್ಟೊರೆಂಟ್ ನ ಒಳಗಡೆ ವ್ಯವಹಾರ ನಡೆಸುತ್ತಿದ್ದಾರೆ. ಅಲ್ಲದೆ ಈ ರೆಸ್ಟೋರೆಂಟ್ ನಲ್ಲಿ  ಕೆಫೆ ನಡೆಸುವ ಬಗ್ಗೆ ಅನುಮತಿ ಪಡೆದುಕೊಂಡು, ಇದರಲ್ಲಿ ಪ್ರತ್ಯೇಕವಾದ ಸ್ಮೋಕಿಂಗ್ ಝೋನ್ ಕಂಪಾರ್ಟಮೆಂಟ್ ನಿರ್ಮಿಸದೇ ಹಾಗೂ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಇತ್ಯಾದಿ ಬೋರ್ಡ್ ಗಳನ್ನು ಹಾಕದೇ ಗ್ರಾಹಕರನ್ನು ಗುಂಪು ಸೇರಿಸಿಕೊಂಡು, ಹುಕ್ಕಾ ಸೇವನೆಗೆ ಬೇಕಾದ ಸಲಕರಣೆಗಳನ್ನು ಇಟ್ಟು ವಿವಿಧ ಪ್ಲೇವರ್ ಗಳಿಗೆ ತಂಬಾಕು ಮಿಶ್ರಣ ಮಾಡಿ ಆರೋಗ್ಯಕ್ಕೆ ಹಾನಿಕರವಾದ ಹುಕ್ಕಾ ಸೇವಿಸಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಇದರಲ್ಲಿ ಗ್ರಾಹಕರು ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಹುಕ್ಕಾ ಸೇವನೆ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಿರುತ್ತದೆ. ಈ ಗ್ರಾಹಕರುಗಳ ಪೈಕಿ ಯಾರಿಗಾದರೂ ಕೋವಿಡ್-19 ಸಾಂಕ್ರಾಮಿಕ ರೋಗವಿದ್ದರೆ, ಅದು ಇತರ ಗ್ರಾಹಕರಿಗೆ ಹರಡುವ ಸಾಧ್ಯತೆ ಇರುತ್ತದೆ ಎಂಬಿತ್ಯಾದಿಯಾಗಿರುತ್ತದೆ

Crime Reported in  Moodabidre PS

ಪಿರ್ಯಾದಿ Mohammed Sinan ದಾರರು “TIS CAFE”ಎಂಬ ಕೆಫೆ ರೆಸ್ಟೋರೆಂಟ್ ನಲ್ಲಿ ಮ್ಯಾನೇಜರ್ ಬ್ಯೂಸಿನೆಸ್ ಅಡ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 28-06-2021ರಂದು ಸಂಜೆ 18.30 ಗಂಟೆ ಸಮುಯದಲ್ಲಿ ತಮ್ಮ ಅಂಗಡಿ ವೈ-ಪೈ ಬಳಸಿಕೊಂಡು ಯಾರೋ ಒಬ್ಬಾತ ಅಶ್ಲೀಲ ಸಿನೆಮಾ/ಚಿತ್ರದ ಆಡಿಯೋವನ್ನು ಜೋರಾಗಿ ಸೌಂಡ್ ಕೊಟ್ಟಿದ್ದು ನಾನು ಯಾರು ಎಂದು ತಿಳಿಯುವ ಸಲುವಾಗಿ ಹೊರಗೆ ಹೋದಾಗ ಅಲ್ಲಿ ನನ್ನ ಪರಿಚಯದ 4-5 ಜನ ಯುವಕರು ಕುಳಿತಿದ್ದು ನಾನು ಅವರಲ್ಲಿ ಯಾರು ಈ ಅಶ್ಲಿಲ ಆಡಿಯೋ ಪ್ಲೇ ಮಾಡಿದ್ದು ಎಂದು ಕೇಳಿದಾಗ ಅವರಲ್ಲಿ ಮುನೀರ್ ಎಂಬಾತ ಕೈಗಳಿಂದ ನನ್ನ ಮುಖಕ್ಕೆ ಗುದ್ದಿ ಗಾಯಗೊಳಿಸಿ ನೆಲಕ್ಕೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾನೆಂದು ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿರುವ ದೂರು.

 

ಇತ್ತೀಚಿನ ನವೀಕರಣ​ : 02-07-2021 04:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080