ಅಭಿಪ್ರಾಯ / ಸಲಹೆಗಳು

Crime Reported in  Mangalore West  PS

ದಿನಾಂಕ 02-06-2021 ರಂದು ಸಮಯ ಸುಮಾರು ಬೆಳಿಗ್ಗೆ 9.00 ಗಂಟೆಗೆ ಪಿರ್ಯಾದಿ PRAJWAL ರವರು ಅವರ ಸ್ನೇಹಿತ ಅಭಿಷೇಕ್ ಜೊತೆಗೆ ಮಂಗಳೂರು ನಗರದ ಕೊಟ್ಟಾರ ದಡ್ಡಲಕಾಡ್ 2ನೇ ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿರುವಾಗ ಕೊಟ್ಟಾರ ಇನ್ಫೋಸಿಸ್ ಕಡೆಯಿಂದ ಕೊಟ್ಟಾರ ಕ್ರಾಸ್ ಕಡೆಗೆ KA-19-MK-1019 ನೇ ಕಾರನ್ನು ಅದರ ಚಾಲಕ ಗುಣಪಾಲ ಶೆಟ್ಟಿ ರವರು ಸಾರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದಡ್ಡಲಕಾಡು 2ನೇ ಕ್ರಾಸ್ ಬಳಿ ಪಿರ್ಯಾದಿದಾರರಿಗೆ ಹಾಗೂ ತಳ್ಳುಗಾಡಿಗೆ ಡಿಕ್ಕಿ ಹೊಡೆದು ನಂತರ ಅಲ್ಲಿಯೇ ಇದ್ದ KA-19-EQ-1254 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಜಖಂ ಗೊಂಡಿದ್ದು ಕಾರು ಸುಮಾರು 10 ಅಡಿ ಮುಂದಕ್ಕೆ ಹೋಗಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರ ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಾಯ ಹಾಗೂ ಎಡ ಕಾಲಿನ ಕೋಲು ಕಾಲಿಗೆ ತರಚಿದ ರಕ್ತ ಗಾಯವಾಗಿದ್ದು, ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಸ್ನೇಹಿತ ಅಭಿಷೇಕ್ ಹಾಗೂ ಕಾರಿನ ಚಾಲಕನು ಉಪಚರಿಸಿ ಚಿಕಿತ್ಸೆಯ ಬಗ್ಗೆ ನಗರದ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

Crime Reported in  Mangalore North PS

ಪಿರ್ಯಾದಿ K KARTHIPK PAI ರವರು LADYGOSCHEN HOSPITAL ಹಿಂಬದಿಯ ಲಕ್ಮೀ ನಾರಾಯಣ ಕಾಂಪ್ಲೆಕ್ಸ್ ಕಟ್ಟಡದ ನೆಲ ಮಹಡಿಯಲ್ಲಿ ಕಾರ್ತಿಕ್ ಸ್ಕೂಲ್ ಬುಕ್ ಮತ್ತು ಸ್ಟೇಷನರಿ ಎಂಬ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು, ಸದ್ರಿ ಕೆಲಸಕ್ಕೆಂದು KA19 EY 0544 ನಂಬ್ರದ ಟಿ.ವಿ.ಎಸ್ ಜುಪಿಟರ್ ಸ್ಕೂಟರನ್ನು ಉಪಯೋಗಿಸಿಕೊಂಡಿರುತ್ತಾರೆ. ದಿನಾಂಕ: 16-04-2021 ರಂದು ಪಿರ್ಯಾದಿದಾರರು ಅವರ ಬಾಬ್ತು KA 19 EY 0544 ಟಿ.ವಿ.ಎಸ್ ಜುಪಿಟರ್ ಸ್ಕೂಟರನ್ನು ಅಂಗಡಿಯ ಹಿಂಬದಿಯಲ್ಲಿ ಜೈನ್ ಮಂದಿರ ರಸ್ತೆಯ ಬದಿಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಎಂದಿನಂತೆ ಬೆಳಿಗ್ಗೆ ಸುಮಾರು 9.30 ಗಂಟೆಯ ಸಮಯಕ್ಕೆ ನಿಲ್ಲಿಸಿ ನಂತರ ಅಂಗಡಿಗೆ ಹೋಗಿರುತ್ತಾರೆ. ನಂತರ ವ್ಯಾಪಾರ ಮಾಡಿ ಮದ್ಯಾಹ್ನ ಸಮಯ ಸುಮಾರು 1.30 ಗಂಟೆ ಸಮಯಕ್ಕೆ ಸದ್ರಿ ಸ್ಕೂಟರನ್ನು ತೆಗೆಯಲು ಸ್ಕೂಟರ್ ನಿಲ್ಲಿಸಿದ ಸ್ಥಳಕ್ಕೆ ಹೋದಾಗ ಸ್ಕೂಟರ್ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಕಾಣೆಯಾಗಿರುತ್ತದೆ. ಸದ್ರಿ ಸ್ಕೂಟರ್ ಎಲ್ಲಿಯಾದರೂ ಪತ್ತೆಯಾಗಬಹುದೆಂದು ಮಂಗಳೂರು ನಗರದಲ್ಲಿ ಹುಡುಕಾಡಿದ್ದು, ನಂತರ ರಾಜ್ಯ ಸರ್ಕಾರವು ಕೊರೊನ ರೋಗದ ಬಗ್ಗೆ ರಾಜ್ಯಾದ್ಯಂತ ಲಾಕ್ ಡೌನ್ ವಿಧಿಸಿರುವುದರಿಂದ ಠಾಣೆಗೆ ದೂರು ನೀಡಲು ತಡವಾಗಿದ್ದು,  ಸದ್ರಿ ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. 

ಕಳವಾದ ಸ್ಕೂಟರ್ ನ ವಿವರ ಈ ಕೆಳಗಿನಂತಿದೆ:

  1. KA19 EY 0544 TVS JUPITER

2.ಬಣ್ಣ- ಗ್ರೇ ಬಣ್ಣ,

3.ಇಂಜಿನ್ ನಂಬ್ರ: EG4BJ1373025

4.ಚೆಸಿಸ್ ನಂಬ್ರ: MD626EG4XJ1B50203

5.ಮೊಡೆಲ್- 2018,

 

Crime Reported in  Panambur PS

ದಿನಾಂಕ 01-06-2021 ರಂದು ಬೆಳಿಗ್ಗೆ 10-45 ಗಂಟೆಗೆ ಮಂಗಳೂರು ತಾಲೂಕು ಬೆಂಗರೆ ಗ್ರಾಮದ ಕಸ್ಬಾ ಬೆಂಗ್ರೆಯಲ್ಲಿರುವ ಕಸ್ಬಾ ಬೆಂಗರೆ ಫೆರಿ ಬಳಿಯಿರುವ ಎಂ.ಜೆ. ಆಸಿಪ್ ಸ್ಟೋರ್ ದಿನಸಿ ಅಂಗಡಿಯಲ್ಲಿ ದ.ಕ. ಜಿಲ್ಲಾಧಿಕಾರಿಯವರ ಆದೇಶದಂತೆ ಕರ್ಪ್ಯೂ ನಿಯಮವನ್ನು ಉಲ್ಲಂಘಿಸಿಕೊಂಡು ಅಂಗಡಿಯನ್ನು ತೆರೆದು ವ್ಯವಹಾರ ಮಾಡುತ್ತಿದ್ದು, ಯಾವುದೇ ದಿನಸಿ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಬಾರದೆಂದು ಸರ್ಕಾರದ ಕಟ್ಟು ನಿಟ್ಟಿನ ಆದೇಶವಿದ್ದರೂ, ದಿನಸಿ ಅಂಗಡಿಯ ಮಾಲಕರಾದ ಸಮೀರ್ ರವರು ಸದ್ರಿ ಅಂಗಡಿಯನ್ನು ತೆರೆದು ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದು ಗೊತ್ತಿದ್ದರೂ ಕೂಡಾ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿಕೊಂಡಿರುವುದು ಕಂಡು ಬಂದಿದ್ದು, ಹೆಸರು ವಿಳಾಸ ಕೇಳಲಾಗಿ ಅಬ್ದುಲ್ ಆಸಿಪ್ ಪ್ರಾಯ 40 ವರ್ಷ, ತಂದೆ; ಮಹಮ್ಮದ್, ವಾಸ: ಎಂ.ಜೆ.ಎಂ. -18 , ಅಪ್ಲಾ ಮಂಜಿಲ್, ಕಸ್ಬಾ ಬೆಂಗ್ರೆ, ಬೆಂಗ್ರೆ ಗ್ರಾಮ, ಮಂಗಳೂರು. ಎಂಬುದಾಗಿ ತಿಳಿಸಿದ್ದು, ಸದ್ರಿಯವರು ಕೋವಿಡ್ 19 ನಿಯಮಾವಳಿಗಳನ್ನು ಹಾಗೂ ಮಾನ್ಯ ಸರಕಾರದ ಮತ್ತು ದಂಡಾಧಿಕಾರಿಯವರ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿಕೊಂಡು ವ್ಯಾಪಾರ ವ್ಯವಹಾರವನ್ನು ಮಾಡುತ್ತಿದ್ದುದ್ದರಿಂದ ಈ ಆರೋಪಿತನ ವಿರುದ್ಧ ಕ್ರಮ ಜರುಗಿಸಲು ಘನ ನ್ಯಾಯಾಲಯದಲ್ಲಿ ಈ ಪಿರ್ಯಾದನ್ನು ಸಲ್ಲಿಸಿರುವುದಾಗಿದೆ

Crime Reported in  Kankanady Town PS

ಕೋವಿಡ್ -19 ಸಾಂಕ್ರಮಿಕ ರೋಗವಾಗಿದ್ದು ಸಾಮಾಜಿಕವಾಗಿ ಹರಡುತ್ತಿರುವ ಕಾರಣದಿಂದ ಪಿರ್ಯಾದಿದಾರರಾದ ಪಿಎಸ್ಐ  ರಘುನಾಯಕ  ರವರು ಸಿಬ್ಬಂದಿಯವರೊಂದಿಗೆ ದಿನಾಂಕ 01-06-2021 ರಂದು  ಮೇಲಾಧಿಕಾರಿಗಳ ಆದೇಶದಂತೆ ಠಾಣಾ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ  ತಡೆಗಟ್ಟುವಿಕೆ ಸಂಬಂಧ ಸರ್ಕಾರವು ಲಾಕ್ ಡೌನ್ ವಿಧಿಸಿ ಹೊರಡಿಸಿದ  ಅದೇಶಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆಯೇ ಎಂಬ ಬಗ್ಗೆ ನಿಗಾ ವಹಿಸಲು ಮತ್ತು ಕಾಯ್ದೆಯ ಅದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಾಗುರಿ ಬಳಿ ಸಿಬ್ಬಂದಿಗಳೂಂದಿಗೆ ವಾಹನ ತಪಾಸಣೆ ನಡೆಸುತ್ತಿರುವ ಸಮಯ ಸಾಯಂಕಾಲ 18:30 ಗಂಟೆಗೆ KL-46-L-6447 ನೇ ದ್ವಿಚಕ್ರ ವಾಹನದ ಸವಾರನು ಯಾವುದೇ ನಿಯಮ ಪಾಲಿಸದೇ ಸಾರ್ವಜನಿಕವಾಗಿ ತಿರುಗಾಡಿಕೊಂಡು ನಿರ್ಲಕ್ಷ್ಯತನವನ್ನು ಉಂಟು ಮಾಡಿ ಸರ್ಕಾರದ ಆದೇಶವನ್ನು ಪಾಲಿಸದೇ ಆದೇಶವನ್ನು ಉಲ್ಲಂಘಿಸಿರುವುದರಿಂದ ಕ್ರಮಕ್ಕಾಗಿ ವರದಿ ನೀಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 02-06-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080