Crime Reported in Mangalore East PS
IPC 1860 (U/s-428,429); PREVENTION OF CRUELTY TO ANIMALS ACT, 1960 (U/s-11(1) (L))
ದಿನಾಂಕ: 01/06/2021 ರಂದು ಸಂಜೆ ಸುಮಾರು 5:00 ಗಂಟೆಯ ಸಮಯಕ್ಕೆ ಠಾಣಾ ಸರಹದ್ದಿನ ಮಂಗಳೂರು ನಗರದ ಕದ್ರಿ ಗ್ರಾಮದ ಶಿವಭಾಗ್ ಎಂಬಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಇದ್ದ ಬೀದಿ ನಾಯಿಯೊಂದಕ್ಕೆ ಆರೋಪಿ ಅನಿಲ್ ಸೊಸ್ಸ್ ಎಂಬಾತನು ಯಾವುದೋ ಮಾರಕಾಯುಧದಿಂದ ಹಲ್ಲೆ ಮಾಡಿ ತೀವ್ರ ರೀತಿಯ ಗಾಯಗೊಳಿಸಿ ಕೊಂದು ಹಾಕಿದ್ದು ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿಕೆ ಎಂಬಿತ್ಯಾದಿ ಫೀರ್ಯಾದಿದಾರರ ಲಿಖಿತ ದೂರಿನ ಸಾರಾಂಶವಾಗಿದೆ
Crime Reported in Panambur PS
ದಿನಾಂಕ 06-01-2021 ರಂದು ಕುಮಾರೇಶನ್ ಪೊಲೀಸ್ ಉಪ ನಿರೀಕ್ಷಕರು ಅಪರಾಧ ವಿಭಾಗ, ರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ ಸಮಯ ಸುಮಾರು 14-00 ಗಂಟೆಗೆ ಮಂಗಳೂರು ತಾಲೂಕು ಬೇಂಗ್ರೆ ಗ್ರಾಮದ ಕಸಬಾ ಬೇಂಗ್ರೆ. ಕಿಲಾರೆ ಮಸೀದಿ ಸಮೀಪದ ಸಮುದ್ರ ಕಿನಾರೆ ಅಂಚಿನ ಡಾಂಬಾರು ರಸ್ತೆಯ ಬಳಿ 3 ಜನ ಯುವಕರು ಸಿಗರೇಟು ಸೇದುತ್ತ ನಿಂತುಕೊಂಡ್ಡಿದ್ದು, ಅವರ ಹೆಸರು ಕೇಳಲಾಗಿ ಅವರು ಯಾವುದೋ ಅಮಲು ಪದಾರ್ಥ ಸೇವಿಸಿದವನಂತೆ ತೊದಲುತ್ತಾ ಮೂವರು ಪೈಕಿ. 1ನೇಯವನು ಮೊಹಮ್ಮದ್ ಫರಾಜ್ ಪ್ರಾಯ:22 ವರ್ಷ,ತಂದೆಃ- ಮುಸ್ತಫ್ ವಾಸಃ- ಎಂ.ಜೆ.ಎಂ ನಂ-1154, ಕಿಲಾರೆ ಮಸೀದಿ ಹತ್ತಿರ, ಸಮುದ್ರ ಕಿನಾರೆ ರಸ್ತೆ, ಕಸಬಾ ಬೆಂಗ್ರೆ ಮಂಗಳೂರು ತಾಲೂಕು ದ.ಕ ಜಿಲ್ಲೆ ಎಂಬುದಾಗಿ 2ನೇಯವನು . ಮೊಹಮ್ಮದ ಗೌಸ್ ಪ್ರಾಯ:23 ವರ್ಷ,ತಂದೆಃ-ಮೊಹಮ್ಮದ ಶರೀಫ್ ವಾಸಃ- ಎಂ.ಜೆಂ 829, ಚಪ್ಪೆತನ್ನಿ ರಹಿಂ ರವರ ಮನೆಯ ಬಳಿ ಕಸಬಾ ಬೆಂಗ್ರೆ ಮಂಗಳೂರು ತಾಲೂಕು ದ.ಕ ಜಿಲ್ಲೆ ಎಂಬುದಾಗಿ 3ನೇಯವನು ಅಹಮ್ಮದ್ ಸಿನಾನ್ ಪ್ರಾಯ:23 ವರ್ಷ,ತಂದೆಃ-ಮೊಹಮ್ಮದ ಶರೀಫ್ ವಾಸಃ- ಎಂ.ಜೆಂ 829, ಚಪ್ಪೆತನ್ನಿ ರಹಿಂ ರವರ ಮನೆಯ ಬಳಿ ಕಸಬಾ ಬೆಂಗ್ರೆ ಮಂಗಳೂರು ತಾಲೂಕು ದ.ಕ ಜಿಲ್ಲೆ ಎಂಬುದಾಗಿ ಹೆಸರುಗಳು ತಿಳಿಸಿರುತ್ತಾರೆ. ಸದ್ರಿಯವರಲ್ಲಿ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಲಾಗಿದೆಯೇ ಎಂದು ಕೇಳಲಾಗಿ, ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅವರನ್ನು ವಶಕ್ಕೆ ತೆಗೆದು ಕೊಂಡು ವೈದ್ಯಕೀಯ ತಪಾಸಣೆ ನಡೆಸಲಾಗಿ ಆಪಾದಿತರುಗಳು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟ ಮೇರೆಗೆ ಆರೋಪಿಗಳ ವಿರುದ್ದ ಕಲಂ: 27(ಬಿ) 1985 ಎನ್.ಡಿ.ಪಿ.ಎಸ್ ಕಾಯ್ದೆ 1985 . ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in E and N Crime PS
ದಿನಾಂಕ 01-07-2021 ರಂದು 14-00 ಗಂಟೆಗೆ ಇ & ಎನ್. ಕ್ರೈಂ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಸತೀಶ್ ಎಂ.ಪಿ. ಠಾಣೆಯಲ್ಲಿ ದಾಖಲಾಗಿದ್ದ NDPS ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪ್ರಜ್ವಲ್ ಪಿಣ್ಯಾಸ್, ಪ್ರಾಯ 24 ವರ್ಷ, ಎಂಬಾತನಿಂದ ಸೇವನೆಗಾಗಿ ಗಾಂಜಾವನ್ನು ಖರೀದಿಸಿರುವ ಮಂಗಳೂರು ನಗರದ ವೈದ್ಯನಾಥ ನಗರ, ಅತ್ತಾವರ ಮತ್ತು ಬೆಂದೂರ್ ವೆಲ್ ನಲ್ಲಿ ವಾಸವಿರುವ ಅಲೆಕ್ಸ್ ರಾಜನ್, ಗಲೀಬ್ ಅಹ್ಮದ್, ಸಮೀರ್, ಬೋದಿ ಆನಂತನ್ ಮತ್ತು ರೋಹಿತ್ ಕರಣ್ ಎಂಬವರುಗಳನ್ನು ತೋರಿಸಿ ಕೊಡುವುದಾಗಿ ತಿಳಿಸಿ ದ್ದಂತೆ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪ್ರಜ್ವಲ್ ಪಿಣ್ಯಾಸ್, ಎಂಬಾತನನ್ನು ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ. ವಿಜಯ ಕಾಂಚನ್, ಹೆಚ್.ಸಿ. ಶಿವಕುಮಾರ್ ರಾವ್ ಮತ್ತು ಪಿ.ಸಿ. ಭೀಮಣ್ಣ ಪೂಜಾರ್ ರವರ ಭದ್ರಿಕೆಯಲ್ಲಿ ತೆರಳಿ ಆರೋಪಿತನು ತೋರಿಸಿಕೊಟ್ಟಂತೆ ಅಲೆಕ್ಸ್ ರಾಜನ್, 24 ವರ್ಷ, ಗಲೀಬ್ ಅಹ್ಮದ್, 25 ವರ್ಷ, ಸಮೀರ್, ಪಜಿಲುಲ್ ಹಕ್ಯು 30 ವರ್ಷ, ಬೋದಿ ಆನಂತನ್ 26 ವರ್ಷ, ಮತ್ತು ರೋಹಿತ್ ಕರಣ್ 25 ವರ್ಷ, ಎಂಬವರು ವಾಸವಿದ್ದ ಮನೆಗೆ ದಾಳಿ ನಡೆಸಿ ಗಾಂಜಾ ಸೇವನೆ ಮಾಡಿದ ಬಗ್ಗೆ ವಿಚಾರಿಸಿದ್ದಲ್ಲಿ ಆರೋಪಿ ಪ್ರಜ್ವಲ್ ಪಿಣ್ಯಾಸ್ ಎಂಬಾತನಿಂದ ಗಾಂಜಾ ಖರೀದಿಸಿ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಂತೆ ಅವರುಗಳನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಪಾದಿತರು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರದ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ
Crime Reported in Bajpe PS
“ಪಿರ್ಯಾದಿ Hanumantha ರವರ ನೆರೆಮನೆಯ ಪ್ರಭು, ಪ್ರಾಯ 35 ವರ್ಷ ಎಂಬವರು ದಿನಾಂಕಃ 01-07-2021 ರಂದು ಸಮಯ ಸುಮಾರು 13.30 ಗಂಟೆಗೆ ಮಂಗಳೂರು ತಾಲೂಕು ನಡುಗೋಡು ಗ್ರಾಮದ ಕಟೀಲು ಬಳಿಯ ನಡುಗೋಡು ಎಂಬಲ್ಲಿ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 37 ಇಜಿ 8848 ನೇದರಲ್ಲಿ ಸವಾರನಾಗಿದ್ದುಕೊಂಡು ಕಟೀಲು-ಕಿನ್ನಿಗೋಳಿ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಪ್ರಭು ರವರ ತಲೆಗೆ ಶರೀರಕ್ಕೆ ಗಂಭಿರ ಗಾಯವಾಗಿದ್ದು ಪ್ರಜ್ಞಾಹೀನರಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ ಎಂಬಿತ್ಯಾದಿ.
Crime Reported in Traffic North PS
ದಿನಾಂಕ:01-07-2021 ರಂದು ಸಮಯ ರಾತ್ರಿ 22-00 ಗಂಟೆಗೆ ಪಿರ್ಯಾದಿದಾರರಾದ ನಿಧಿ ಎಂ.ಪಿ ರವರ ತಮ್ಮನಾದ ನಿಕ್ಷೇಪ್ ಎಂ.ಪಿ ರವರು ಅವರ ಬಾಬ್ತು KA18EE6530 ನೇ ನಂಬ್ರದ ಮೋಟಾರ್ ಸೈಕಲಿನಲ್ಲಿ ಬೈಕಂಪಾಡಿ ಕಡೆಯಿಂದ ಹೊಸಬೆಟ್ಟು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ರಾಹೆ 66 ಹೊಸಬೆಟ್ಟು ಜಂಕ್ಷನ್ ಬಳಿ ತಲುಪಿದಾಗ ನಿಕ್ಷೇಪ್ ಎಂ.ಪಿ ರವರ ಹಿಂದಿನಿಂದ ಅಂದರೆ ಬೈಕಂಪಾಡಿ ಕಡೆಯಿಂದ ಸುರತ್ಕಲ್ ಕಡೆಗೆ KA01AF8669 ನೇ ನಂಬ್ರದ ಲಾರಿಯನ್ನು ಅದರ ಚಾಲಕ ತಿಮ್ಮಪ್ಪ ಕೆ ಬಿ ಎಂಬುವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಾಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಿಕ್ಷೇಪ್ ಎಂ.ಪಿ ರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನಿಕ್ಷೇಪ್ ಎಂ.ಪಿ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಎಡಗೈ ಮೇಲ್ಭಾಗದಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಚಕಿತ್ಸೆಯ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರಯಾದಿ ಸಾರಾಂಶ
Crime Reported in Mulki PS
ಪಿರ್ಯಾದಿ Donet Aranha ರವರ ಮಗಳು ಆಂಡ್ರಿಯಾ ಸುಸಾನ್ ಅರಾನ್ಹ (ಪ್ರಾಯ 19 ವರ್ಷ) ಎಂಬುವಳು ಪಿ.ಯು.ಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದು, ದಿನಾಂಕ 30.06.2021 ರಂದು ರಾತ್ರಿ 10.30 ಗಂಟೆಗೆ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದವಳು ದಿನಾಂಕ 01.07.2021 ರಂದು ಬೆಳಿಗ್ಗೆ 04.45 ಗಂಟೆಗೆ ಪಿರ್ಯಾದಿದಾರರ ಹೆಂಡತಿ ವಿನ್ಸಿಲ್ಲಾ ಅರಾನ್ಹ ರವರು ಎದ್ದು ನೋಡಿದಾಗ ಮಗಳು ಮಲಗಿದ್ದಲ್ಲಿ ಇಲ್ಲದೇ ಇದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಆಂಡ್ರಿಯಾ ಸುಸಾನ್ ಅರಾನ್ಹಳನ್ನು ಪತ್ತೆಮಾಡಿಕೊಡಬೇಕಾಗಿ ಎಂಬಿತ್ಯಾದಿಯಾಗಿ ಸಾರಾಂಶ
ಕಾಣೆಯಾದವರ ಚಹರೆ:-
ಪ್ರಾಯ: 19 ವರ್ಷ
ಎತ್ತರ: 5.4 ಅಡಿ, ಗೋಧಿ ಮೈ ಬಣ್ಣ ದುಂಡು ಮುಖ, ಸಪೂರ ಶರೀರ, ಕನ್ನಡಕ ಧರಿಸಿರುತ್ತಾಳೆ
ಧರಿಸಿದ ಬಟ್ಟೆ: ನೀಲಿ ಬಣ್ಣದ ಚೂಡಿದಾರ್ ಟಾಪ್ ಮತ್ತು ಪ್ಯಾಂಟ್