ಅಭಿಪ್ರಾಯ / ಸಲಹೆಗಳು

Crime Reported in Mangalore South PS

ದಿನಾಂಕ 03-06-2021 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿ.ಎಸ್.ಐ ಶೀತಲ್ ಅಲಗೂರರವರು ಠಾಣಾ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸಮಯ ಸುಮಾರು 10-30 ಗಂಟೆಗೆ ಮಂಗಳೂರು ನಗರದ ಎ.ಬಿ ಶೆಟ್ಟಿ ಸರ್ಕಲ್ ಬಳಿ, ಬೋರ್ಡ್ ಇಲ್ಲದ ತರಕಾರಿ  ಹಾಗೂ ಹಣ್ಣಿನ ಮಾರಾಟದ ಅಂಗಡಿ ಮುಂಭಾಗ ಗ್ರಾಹಕರುಗಳು ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗೂಡಿ ನಿಂತುಕೊಂಡಿದ್ದು, ಸದ್ರಿ ಅಂಗಡಿಯಲ್ಲಿ ವ್ಯಾಪಾರ ಮಾಡುವ ಗ್ರಾಹಕರ ಪೈಕಿ ಯಾರಿಗಾದರೂ ಕೋವಿಡ್-19 ಸಾಂಕ್ರಾಮಿಕ ರೋಗದ ಲಕ್ಷಣಗಳಿದ್ದರೆ, ಅದು ಒಬ್ಬ ವ್ಯಕ್ತಿಯಿಂದ ಇತರೇ ವ್ಯಕ್ತಿ ಅಥವಾ ಸಮೂದಾಯಕ್ಕೆ ಹರಡುವ ಸಾಧ್ಯತೆ ಇರುವ ಬಗ್ಗೆ ತಿಳಿದೂ, ಈ ಬಗ್ಗೆ ಸದ್ರಿ ಅಂಗಡಿ ಮಾಲಿಕ ತಾನು ಮಾಸ್ಕ್ ಹಾಕದೆ ಗ್ರಾಹಕರುಗಳಿಗೂ ಸೂಚನೆ ನೀಡದೇ, ಮಾನ್ಯ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನಿಗಧಿಪಡಿಸಿದ ಸಮಯದ ನಂತರವೂ ಅಂಗಡಿಯನ್ನು ತೆರೆದು ನಿರ್ಲಕ್ಷ್ಯತನದಿಂದ ವ್ಯಾಪಾರ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿರುತ್ತಾರೆ. ಅಂಗಡಿಯ ಹೆಸರು ಹೇಮಂತ್ ತರಕಾರಿ ಹಾಗೂ ಹಣ್ಣಿನ ಅಂಗಡಿ ಎಂಬುದಾಗಿದ್ದು, ಸದ್ರಿ ಅಂಗಡಿಯ ಮಾಲಕನ ವಿರುದ್ದ ಕಲಂ-51 (ಬಿ) ವಿಪತ್ತು ನಿರ್ವಹಣಾ ಕಾಯಿದೆ ಹಾಗೂ ಕಲಂ 269 ಐ.ಪಿ.ಸಿ ಯಂತೆ ಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ,  ಎಂಬಿತ್ಯಾದಿಯಾಗಿರುತ್ತದೆ.

Crime Reported in Panambur PS

ದಿನಾಂಕ 02-06-2021 ರಂದು ಬೆಳಿಗ್ಗೆ 11-30 ಗಂಟೆಗೆ ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ಕುಡುಂಬೂರು ಎಂಬಲ್ಲಿ ಬಾಗ್ಯವಂತಿ ಸ್ಟೋರ್ ಎಂಬ ದಿನಸಿ ಅಂಗಡಿಯಲ್ಲಿ ದ.ಕ. ಜಿಲ್ಲಾಧಿಕಾರಿಯವರ ಆದೇಶದಂತೆ ಕರ್ಪ್ಯೂ ನಿಯಮವನ್ನು ಉಲ್ಲಂಘಿಸಿಕೊಂಡು ಅಂಗಡಿಯನ್ನು ತೆರೆದು ವ್ಯವಹಾರ ಮಾಡುತ್ತಿದ್ದು, ಯಾವುದೇ ದಿನಸಿ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಬಾರದೆಂದು ಸರ್ಕಾರದ ಕಟ್ಟು ನಿಟ್ಟಿನ ಆದೇಶವಿದ್ದರೂ, ದಿನಸಿ ಅಂಗಡಿಯ ಮಾಲಕರಾದ ರಾಜು ಮೊರಟ್ಟಿಗೆ ರವರು ಸದ್ರಿ ಅಂಗಡಿಯನ್ನು ತೆರೆದು ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದು ಗೊತ್ತಿದ್ದರೂ ಕೂಡಾ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿಕೊಂಡಿರುವುದು ಕಂಡು ಬಂದಿದ್ದು, ಹೆಸರು ವಿಳಾಸ ಕೇಳಲಾಗಿ ರಾಜು ಮೊರಟ್ಟಿಗೆ ಪ್ರಾಯ 39 ವರ್ಷ, ತಂದೆ; ದಿವಂಗತ ರಾಮಣ್ಣ, ವಾಸ: ಡೋರ್ ನಂಬ್ರ 19/163, ಬಿಜಾಪುರ ಕಾಲನಿ, ಕೆ.ಎಸ್.ರಾವ್ ನಗರ, ಕಾರ್ನಾಡ್, ನಾಗಬನದ ಹತ್ತಿರ, ಮುಲ್ಕಿ,ಮಂಗಳೂರು ತಾಲೂಕು. ಎಂಬುದಾಗಿ ತಿಳಿಸಿದ್ದು, ಸದ್ರಿಯವರು ಕೋವಿಡ್ 19 ನಿಯಮಾವಳಿಗಳನ್ನು ಹಾಗೂ ಮಾನ್ಯ ಸರಕಾರದ ಮತ್ತು ದಂಡಾಧಿಕಾರಿಯವರ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿಕೊಂಡು ವ್ಯಾಪಾರ ವ್ಯವಹಾರವನ್ನು ಮಾಡುತ್ತಿದ್ದುದ್ದರಿಂದ ಈ ಆರೋಪಿತನ ವಿರುದ್ಧ ಕ್ರಮ ಜರುಗಿಸಲು ಘನ ನ್ಯಾಯಾಲಯದಲ್ಲಿ ಈ ಪಿರ್ಯಾದನ್ನು ಸಲ್ಲಿಸಿರುವುದಾಗಿದೆ.

Crime Reported in Kavoor PS   

ಪಿರ್ಯಾದಿ HARISH H V PSI ರವರು ದಿನಾಂಕ 02/06/2021 ರಂದು  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ಜ್ಯೋತಿನಗರ ಬಸ್ಸು ನಿಲ್ದಾಣ ಬಳಿ ತಲುಪಿದಾಗ ಸಾರ್ವಜನಿಕರೊಬ್ಬರಿಂದ ಬಂದ ಮಾಹಿತಿಯೇನೆಂದರೆ ಠಾಣಾ ವ್ಯಾಪ್ತಿಯ ಕುಂಜತ್ತ್ ಬೈಲ್ ನ ದೇವಿನಗರದಲ್ಲಿರುವ ಗಿಲ್ಬರ್ಟ ಎಂಬವರ ಮನೆಯ ಬಳಿ  ಸುಮಾರು 7-8 ಜನ ಸೇರಿ ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವುದಾಗಿ ಮಾಹಿತಿ ಇದ್ದು, ಸುಮಾರು 15.20 ಗಂಟೆಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದಲ್ಲಿ ಆಪಾದಿತರುಗಳಾದ GILBERT NORONHA(A1) RAJU(A2) RIZWAN(A3) SHIVAJI(A4) ALEXANDER(A5) TANGASWAMI(A6) MANJUNATHA(A7) STIVERT(A8) ರವರುಗಳು ಸರ್ಕಾರವು ಕೊರೊನಾ ವೈರಸ್ ತಡೆಗಟ್ಟಲು ಹೊರಡಿಸಿದ ಮಾರ್ಗಸೂಚಿ ಆದೇಶವನ್ನು ಉಲ್ಲಂಘಿಸಿ ಮಾನವ ಜೀವಕ್ಕೆ ಅಪಾಯಕಾರಿ ರೋಗದ ಸೊಂಕನ್ನು ಹರಡುವಲ್ಲಿ ನಿರ್ಲಕ್ಷವಹಿಸಿ ಗಿಲ್ಬರ್ಟರವರ ಮನೆಯಲ್ಲಿ ಕುರ್ಚಿ ಮತ್ತು ಟೇಬಲ್ ಗಳನ್ನು ಇರಿಸಿ ಗುಂಪಾಗಿ ಕುಳಿತುಕೊಂಡು ಒಬ್ಬರಿಗೊಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಳ್ಳದೇ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಕುಳಿತುಕೊಂಡಿದ್ದು ಹಣವನ್ನು ಪಣವಾಗಿಟ್ಟು ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವುದನ್ನು ನೋಡಿದ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಆಪಾದಿತರನ್ನು ತಡೆದು ನಿಲ್ಲಿಸಿ ಇಸ್ಪಿಟ್ ಜುಗಾರಿ ಆಟದಲ್ಲಿ ಬಳಸಿದ ನಗದು ರೂ.13,775/- ಸೇರಿದಂತೆ ಒಟ್ಟು ಸುಮಾರು 15,225/- ರೂ.ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 03-06-2021 05:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080