ಅಭಿಪ್ರಾಯ / ಸಲಹೆಗಳು

Crime Reported in  Ullal PS

ಪ್ರಕರಣದ ಫಿರ್ಯಾದಿದಾರ ಸೋಮವಾರಪೇಟೆ ವಾಸಿ ಡಿ.ಇ.ರವಿ ಯವರ ಮಗಳಾದ ರಕ್ಷಾ.ಡಿ.ಆರ್. (19 ವರ್ಷ) ಈಕೆಯು ಮಂಗಳೂರು ಕಾರ್ಸ್ಟ್ರೀಟ್್ನಡಲ್ಲಿರುವ ಡಾ:ದಯಾನಂದ ಪೈ- ಸತೀಶ ಪೈ,  ಸರಕಾರಿ ಫಸ್ಟ್ ಗ್ರೇಡ್  ಕಾಲೇಜಿನಲ್ಲಿ 1ನೇ ವರ್ಷದ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ  ಆಕೆಗೆ ಕಾಲೇಜಿಗೆ  ಹೋಗಿ ಬರಲು ಅನುಕೂಲಕ್ಕಾಗಿ ಫಿರ್ಯಾದಿದಾರರ ಪತ್ನಿಯ ತಂಗಿ ಸವಿತ ಗಂಡ. ಅಶೋಕ್ ವಾಸ. ಮರಿಯಾನಪಾಲ್, ಕೊಂಡಾಣ ಮಾಡೂರು  ಕೋಟೆಕಾರು ಗ್ರಾಮ ಎಂಬಲ್ಲಿ ಕಳೆದ 2 ವರ್ಷಗಳಿಂದ ವಾಸವಾಗಿದ್ದು, ಆದರೆ ಈಗ ಲಾಕ್ಡೌನ್ ಆದ ಕಾರಣ ಕಾಲೇಜಿಗೆ ಹೋಗದೇ ಮನೆಯಲ್ಲಿಯೇ ಓನ್ಲೈನ್ ವಿದ್ಯಾಬ್ಯಾಸ ಇದ್ದು, ಅದರಂತೆ ದಿನಾಂಕ. 2-7-2021 ರಂದು ಬೆಳಿಗ್ಗೆ ರಕ್ಷಾ.ಡಿ.ಆರ್. ಈಕೆಯು ಕೋಟೆಕಾರು ಗ್ರಾಮದ ಮರಿಯಾನಪಾಲ್ ರೋಡ್, ಸಾಯಿಧಾಮ ಎಕ್ಸ್ಟೆನ್ಸನ್  ಬಳಿಯ ಶ್ರೀಭ್ರಾಮರಿ ಮನೆಯಲ್ಲಿ ಸವಿತ ಮತ್ತು ಇವರ ಗಂಡ ಅಶೋಕ್  ರವರು ಕೆಲಸಕ್ಕೆ ಹೋಗಿದ್ದ ಸಮಯ ಮನೆಯಲ್ಲಿ ಸವಿತ  ರವರ ತಂದೆ, ತಾಯಿ, ಮತ್ತು 3 ವರ್ಷದ ಮಗ ಮಾತ್ರ ಇದ್ದಾಗ ಬೆಳಿಗ್ಗೆ ಸುಮಾರು 11-30 ಗಂಟೆಯ ಸಮಯಕ್ಕೆ ರಕ್ಷಾ.ಡಿ.ಆರ್. ಳು ತಾನು ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೊರಟು ಹೋದವಳು ವಾಪಾಸು ಮನೆಗೆ ಬಾರದೇ ಇದ್ದು, ಮತ್ತು ಸೋಮವಾರಪೇಟೆಗೆ  ಕೂಡಾ ಹೋಗದೇ ಕಾಣೆಯಾಗಿದ್ದು, ಆಕೆಯನ್ನು ಹುಡುಕಾಡಿ ಈತನಕ ಪತ್ತೆಯಾಗದೇ ಇದ್ದುದರಿಂದ ಕಾಣೆಯಾದವಳನ್ನು ಪತ್ತೆ ಹಚ್ಚಿ ಕೊಡುವಂತೆ ಫಿರ್ಯಾದಿದಾರರು ದಿನಾಂಕ. 3-7-2021 ರಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Crime Reported in  Urva PS

ಪಿರ್ಯಾದಿ 9th cross Kodikal ನಿವಾಸಿ Smt Pramoda ರವರು  ದಿನಾಂಕ 02.07.2021  ರಂದು  ತನ್ನ  ವಾಸದ  ಮನೆಯಲ್ಲಿ  ಗಂಡನಾದ  ರಾಮ   ಮತ್ತು  ಮಗನಾದ  ದಿವ್ಯಜೀತ್  ಜೊತೆಯಲ್ಲಿದ್ದಾಗ  ಆರೋಪಿ  ರಂಜಿತ್    ಮದ್ಯಾಹ್ನ  12:00  ಗಂಟೆ  ವೇಳೆಗೆ ಪಿರ್ಯಾದಿದಾರರ  ಮನೆಗೆ  ಅಕ್ರಮ  ಪ್ರವೇಶ  ಮಾಡಿ  ಅವಾಚ್ಯ  ಶಬ್ದದಿಂದ  ಬೈದು  ಆತನ  ಕೈಯಲ್ಲಿದ್ದ  ಕತ್ತಿಯಿಂದ ಪಿರ್ಯಾದಿದಾರರ  ಗಂಡನಿಗೆ  ಹೊಡೆಯಲು  ಮುಂದಾಗಿ,  ನಂತರ  ತಡೆದು ನಿಲ್ಲಿಸಿ  ಕೈಯಿಂದ  ಅವರ ಎಡ  ಕೆನ್ನೆಯ ಬಳಿಗೆ  ಹೊಡೆದಿರುವುದಲ್ಲದೆ,  ಹಲ್ಲೆಯನ್ನು  ತಡೆಯಲು  ಮುಂದಾದ  ಪಿರ್ಯಾದಿದಾರರಿಗೆ  ಅಲ್ಲಿಯೇ  ಇದ್ದ  ಮರದ  ರೀಪಿನಿಂದ  ಎಡ  ಕೈ ಗೆ  ಮತ್ತು  ಎಡ  ಕಾಲಿಗೆ ಹೊಡೆದು  ಹಲ್ಲೆ  ನಡೆಸಿರುವುದಲ್ಲದೆ , ಪಿರ್ಯಾದಿದಾರರ  ಮಗನಾದ  ದಿವ್ಯಜೀತ್  ನನ್ನು  ತಡೆದು  ನಿಲ್ಲಿಸಿ ದೂಡಿ  ನೆಲಕ್ಕೆ  ಬೀಳಿಸಿ  ಬೆನ್ನಿನ  ಬಲ  ಭಾಗಕ್ಕೆ  ಕಚ್ಚಿ  ರಕ್ತ  ಗಾಯಗೊಳಿಸಿರುವುದಲ್ಲದೆ,  ಅವಾಚ್ಯ  ಶಬ್ದಗಳಿಂದ  “ ಬೇವಾರ್ಸಿ    ಮಕ್ಕಳೆ, ನಿಮ್ಮನ್ನು  ಸುಮ್ಮನೆ  ಬದುಕಳು  ಬಿಡುವುದಿಲ್ಲ  ಕೊಂದೇ  ಬಿಡುತ್ತೇನೆ”  ಎಂಬುದಾಗಿ  ಜೀವ  ಬೆದರಿಕೆ  ಹಾಕಿರುತ್ತಾನೆ.,  ಜಾಗದ  ವಿಚಾರದ  ಕಾರಣವನ್ನು  ನೆಪ  ಮಾಡಿಕೊಂಡು  ಈ  ರೀತಿಯಾದ ಹಲ್ಲೆ ಯನ್ನು  ರಂಜಿತ್  ನು  ನಡೆಸಿರುವುದಾಗಿದೆ  ಎಂಬಿತ್ಯಾದಿ.

 

2) ದಿನಾಂಕ : 02.07.2021 ರಂದು  20.00 ಗಂಟೆ ಸಮಯಕ್ಕೆ KL-79-7130 ನೇ ನಂಬ್ರದ ಬೊಲೆರೋ  ಮ್ಯಾಕ್ಷಿ ಟ್ರಕ್ ವಾಹನದಲ್ಲಿ  ಆರೋಪಿತರುಗಳು ಆಂದ್ರ ಪ್ರದೇಶದ ನೆಲ್ಲೂರಿನಿಂದ ಲಿಂಬೆಹಣ್ಣುಗಳನ್ನು ತುಂಬಿದ ಪ್ಲಾಸ್ಟಿಕ್ ಟ್ರೇಗಳ ಒಳಗಡೆ ಪ್ಲಾಸ್ಟಿಕ್ ಗಮ್ ಟೇಪ್ ನಲ್ಲಿ ಪ್ಯಾಕ್ ಮಾಡಿದ ತಲಾ 2 ಕೆ.ಜಿ.ಯ ಗಾಂಜಾದ ಪ್ಯಾಕ್ ಗಳನ್ನು ಇರಿಸಿ ಯಾವುದೇ ಪರವಾನಿಗೆ ಇಲ್ಲದೇ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದುದ್ದನ್ನು ಪಿರ್ಯಾದಿ JYOTHIRLINGA HONNAKATTI PI ರವರು ಸಿಬ್ಬಂದಿಗಳೊಡನೆ ಕೋವಿಡ್-19 ರ ಬಗ್ಗೆ ಕೊಟ್ಟಾರ ಚೌಕಿಯಲ್ಲಿ ಬ್ಯಾರಿಕೇಡ್  ಚೆಕ್ ಪೋಸ್ಟ್ ಕರ್ತವ್ಯದಲ್ಲಿ ಇದ್ದ ಸಮಯ ಪತ್ತೆ ಹಚ್ಚಿ ತಲಾ 2 ಕೆ.ಜಿ ತೂಕದ 20 ಗಾಂಜಾ ಪ್ಯಾಕ್ ಗಳನ್ನು ಹಾಗೂ ಸುಮಾರು 200 ಕೆ.ಜಿಯಷ್ಟು ಲಿಂಬೆ ಹಣ್ಣುಗಳನ್ನು ಆರೋಪಿತರ ಬಾಬ್ತು ಎರಡು ಮೊಬೈಲ್ ಪೋನ್ ಗಳನ್ನು ಹಾಗೂ ಈ ಕೃತ್ಯಕ್ಕೆ ಉಪಯೋಗಿಸಿದ ಬೊಲೆರೋ  ಮ್ಯಾಕ್ಷಿ ಟ್ರಕ್ ವಾಹನವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ ರೂ. 11,17,000/- ಆಗಿರುತ್ತದೆ ಎಂಬಿತ್ಯಾದಿ

Crime Reported in  Panambur PS

ದಿನಾಂಕ 02-07-2021 ರಂದು ಪಿರ್ಯಾಧಿದಾರರಾದ ಪಣಂಬೂರು ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ-ನಿರೀಕ್ಷಕ ಉಮೇಶ್ ಕುಮಾರ್, ಎಮ್.ಎನ್. ರವರು ಪಣಂಬೂರು ಪೊಲೀಸ್  ಠಾಣಾ ಸಿಬ್ಬಂದಿಗಳಾದ ಹೆಚ್.ಸಿ. ಕಮಲಾಕ್ಷ ಮತ್ತು ಪಿಸಿ  ದಾದಾಸಾಬ್ ರವರನ್ನು ಜೊತೆಯಲ್ಲಿ ಕರೆದುಕೊಂಡು ರೌಂಡ್ಸ್ ನಿರ್ವಹಿಸುತ್ತಾ ಬೆಳಿಗ್ಗೆ ಸಮಯ ಸುಮಾರು 11-15 ಗಂಟೆಗೆ ತಣ್ಣೀರು ಬಾವಿ ಬೀಚ್ ಸಮೀಪ ತಲುಪಿದಾಗ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಜೋರಾಗಿ ಬೊಬ್ಬೆಹೊಡೆಯುತ್ತಾ ಆ ಸಮಯ ಅವರಿಬ್ಬರು ಯಾವುದೋ ಅಮಲಿನ ನಶೆಯಲ್ಲಿ ಇದ್ದು ತೂರಾಡುತ್ತಿದ್ದುದು ಸರಿಯಾಗಿ ನಿಂತುಕೊಳ್ಳಲು ಆಗದ ಸ್ಥಿತಿಯಲ್ಲಿದ್ದವರ ವರ್ತನೆಯನ್ನು ಗಮನಿಸಿದಾಗ  ಅವರುಗಳು ಯಾವುದೋ ನಿಷೇದಿತ ಮಾದಕವಸ್ತುವಿನ ಸೇವನೆಯ ಅಮಲಿನಲ್ಲಿ ಇರುವ ಬಗ್ಗೆ  ಸಂಶಯಬಂದಿದ್ದರಿಂದ ಅವರುಗಳ ಹೆಸರು ವಿಳಾಸಗಳನ್ನು ವಿಚಾರಿಸಿದಾಗ ಅವರ ಪೈಕಿ ಒಬ್ಬಾತನು ತನ್ನ ಹೆಸರು ಅಹಮ್ಮದ್ ಸಿನಾನ್  ಪ್ರಾಯ:23 ವರ್ಷ,ತಂದೆಃ-ಮೊಹಮ್ಮದ ಶರೀಫ್ ವಾಸಃ- ಎಂ.ಜೆಂ 829, ಚಪ್ಪೆತನ್ನಿ ರಹಿಂ ರವರ ಮನೆಯ ಬಳಿ ಕಸಬಾ ಬೆಂಗ್ರೆ ಮಂಗಳೂರು ತಾಲೂಕು ದ.ಕ ಜಿಲ್ಲೆ ಎಂದು ಮತ್ತು ಇನ್ನೋಬ್ಬಾತನು ತನ್ನ ಹೆಸರು ಸೈಯ್ಯದ್ ಅಪ್ರಿದ್  ಯಾನೆ ಕುಡಿಯಪ್ಪಿ, ಪ್ರಾಯ 21 ವರ್ಷ, ತಂದೆ. ಅಬ್ದುಲ್ ಗಪೂರ್, ವಾಸ. ಹೆಚ್.ಪಿ. ಗ್ಯಾಸ್ ಡೀಲರ್ಸ್ ಬಳಿ, ಎಂ.ಜಿ.ಎಂ.920, ಕಸಬಾ ಬೆಂಗ್ರೆ, ಮಂಗಳೂರು ತಾಲೂಕು ಎಂದು ತಿಳಿಸಿರುತ್ತಾರೆ. ಸದ್ರಿಯವರುಗಳನ್ನು ಸ್ಥಳದಿಂದ ವಶಕ್ಕೆ ಪಡೆದು ಬಳಿಕ ಅವರುಗಳನ್ನು ಮಾದಕ ವಸ್ತು ಸೇವನೆಯ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ನೀಡುವಂತೆ ಎ.ಜೆ. ಇನ್ ಸ್ಟಿಟೂಟ್ ಆಪ್ ಮೆಡಿಕಲ್ ಸೈನ್ಸ್, ಅಂಡ್ ರಿಸರ್ಚ್ ಸೆಂಟರ್  ಮಂಗಳೂರು ಗೆ ಸಿಬ್ಬಂದಿ ಜತೆಯಲ್ಲಿ ಕಳುಹಿಸಿಕೊಟ್ಟು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಸದ್ರಿಯವರುಗಳು ನಿಷೇದಿತ ಮಾದಕವಸ್ತು ಗಾಂಜಾ ವನ್ನು ಸೇವನೆ ಮಾಡಿರುತ್ತಾರೆ ಎಂಬ ಬಗ್ಗೆ ದೃಡಪತ್ರವನ್ನು ನೀಡಿರುವುದರಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ

Crime Reported in  Traffic North PS

ದಿನಾಂಕ:01-07-2021 ರಂದು ಸಮಯ ರಾತ್ರಿ 22-00 ಗಂಟೆಗೆ ಪಿರ್ಯಾದಿದಾರರಾದ ನಿಧಿ ಎಂ.ಪಿ ರವರ ತಮ್ಮನಾದ ನಿಕ್ಷೇಪ್ ಎಂ.ಪಿ ರವರು ಅವರ ಬಾಬ್ತು KA18EE6530 ನೇ ನಂಬ್ರದ ಮೋಟಾರ್ ಸೈಕಲಿನಲ್ಲಿ ಬೈಕಂಪಾಡಿ ಕಡೆಯಿಂದ ಹೊಸಬೆಟ್ಟು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ರಾಹೆ 66 ಹೊಸಬೆಟ್ಟು ಜಂಕ್ಷನ್ ಬಳಿ ತಲುಪಿದಾಗ ನಿಕ್ಷೇಪ್ ಎಂ.ಪಿ ರವರ ಹಿಂದಿನಿಂದ ಅಂದರೆ ಬೈಕಂಪಾಡಿ ಕಡೆಯಿಂದ ಸುರತ್ಕಲ್ ಕಡೆಗೆ KA01AF8669 ನೇ ನಂಬ್ರದ ಲಾರಿಯನ್ನು ಅದರ ಚಾಲಕ ತಿಮ್ಮಪ್ಪ ಕೆ ಬಿ ಎಂಬುವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಾಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಿಕ್ಷೇಪ್ ಎಂ.ಪಿ ರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನಿಕ್ಷೇಪ್ ಎಂ.ಪಿ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಎಡಗೈ ಮೇಲ್ಭಾಗದಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಚಕಿತ್ಸೆಯ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರಯಾದಿ ಸಾರಾಂಶ.

Crime Reported in  Mangalore South PS

ಪಿರ್ಯಾದಿ Sumathiರವರ  ಗಂಡ ಆಕಾಶ್ (39) ರವರು ದಿನಾಂಕ : 02-07-2021 ರಂದು ಮಂಗಳೂರು ನಗರದ ಮಂಗಳಾದೇವಿ ದೇವಸ್ಥಾನ ರಸ್ತೆಯ ಪೆಂಟ್ರೋಲ್ ಪಂಪ್ ಎದುರುಗಡೆ ಇರುವ ಸಚಿನ್ ಎಂಬವರ ಮನೆಯ 2 ನೇ ಮಹಡಿಯ ಒಳಗೆ ಪ್ಯಾಸೇಜ್ ನಲ್ಲಿ ಸುಮಾರು 2 ಅಡಿ ಎತ್ತರದ ಪ್ಯಾರಾಪಟ್ಟಿಯ ಬಳಿ ನಿಂತುಕೊಂಡು ಹೊರಗಡೆಗೆ ಬಗ್ಗಿ ಅಲ್ಯೂಮಿನಿಯಂ ಸ್ಟಿಕ್ ನ ಮುಖಾಂತರ ಪೈಂಟಿಂಗ್ ಮಾಡುತ್ತಿರುವ ಸಂಜೆ 3-30 ಗಂಟೆಗೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ. ಮನೆಯ ಪೈಂಟಿಂಗ್ ಕಾಂಟ್ರ್ಯಾಕ್ಟ್ ನ್ನು ವಹಿಸಿಕೊಂಡಿದ್ದ ಸಂದೀಪ್ ರವರು, ಆಕಾಶ್ ರವರಿಗೆ  ಪೈಂಟಿಂಗ್ ಕೆಲಸ ಮಾಡುತ್ತಿರುವ ಸಮಯ ಸೊಂಟಕ್ಕೆ ಬೆಲ್ಟ್, ತಲೆಗೆ ಹೆಲ್ಮೆಟ್ ನೀಡದೇ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ನೆಟ್ ಅಳವಡಿಸದೇ ತೀವ್ರ ನಿರ್ಲಕ್ಷತನಿಂದ ಕೆಲಸ ಮಾಡಿಸಿರುವುದರಿಂದ ಆಕಾಶ್ ರವರು ಆಯತಪ್ಪಿ ಕೆಳಗೆ ಬಿದ್ದಾಗ  ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ

 

 

ಇತ್ತೀಚಿನ ನವೀಕರಣ​ : 03-07-2021 06:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080