ಅಭಿಪ್ರಾಯ / ಸಲಹೆಗಳು

Crime Reported in  Mangalore Women PS

1) ದಿನಾಂಕ 03-08-2021 ರಂದು ಮದ್ಯಾಹ್ನ 14.30 ಗಂಟೆಗೆ ಪಿರ್ಯಾದಿ  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರಿಗೆ ತುಷಾರ್ ಬಿ. ಮನೈ ಎಂಬುವರು ತನಗೆ ದುಬೈನಲ್ಲಿ ಹೊಟೇಲ್ ನಡೆಸುತ್ತಿದ್ದೇನೆ ಎಂದು ನಂಬಿಸಿ ಮದುವೆಯಾಗಿದ್ದು, ಮದುವೆಯ ಎಲ್ಲಾ ಖರ್ಚುಗಳನ್ನು ಪಿರ್ಯಾದಿದಾರರ ಮನೆಯವರೇ ಭರಿಸಿದ್ದು, ಆರೋಪಿಗಳ ಬೇಡಿಕೆಯಂತೆ ಪಿರ್ಯಾದಿದಾರರ ತಾಯಿಯ ಹೆಸರಿನಲ್ಲಿದ್ದ ಮಡಿಕೇರಿಯ 12 ಲಕ್ಷದ ಜಾಗವನ್ನು ಕೇವಲ 03 ಲಕ್ಷಕ್ಕೆ ಮಾರಿ, ಟೀಚರ್ಸ್ ಕೋ-ಅಪರೇಟಿವ್ ಬ್ಯಾಂಕಿನಿಂದ 02 ಲಕ್ಷ ಸಾಲ ಮಾಡಿ, ಸಂಬಂಧಿಕರಿಂದ 10 ಲಕ್ಷ ಸಾಲವನ್ನು ಪಿರ್ಯಾದಿದಾರರ ತಂದೆ ಪಡೆದು ದಿನಾಂಕ 06-05-2018 ರಂದು 1ನೇ ಆರೋಪಿ ತುಷಾರ್ ಬಿ. ನೊಂದಿಗೆ ಮದುವೆ ಮಾಡಿರುತ್ತಾರೆ. ಮದುವೆಯಾದ ನಂತರ ಎಲ್ಲಾ ಆರೋಪಿಗಳು ಸೇರಿಕೊಂಡು ಪಿರ್ಯಾದಿದಾರರಿಗೆ ನಿರಂತರವಾಗಿ ದೈಹಿಕ, ಮಾನಸಿಕ ಚಿತ್ರಹಿಂಸೆ ನೀಡಿ, ಕಾರನ್ನು ಖರೀದಿಸುವರೇ 10 ಲಕ್ಷ ಹಣವನ್ನು ಹೆಚ್ಚಿನ ವರದಕ್ಷಿಣೆಯಾಗಿ ತವರು ಮನೆಯಿಂದ ತರುವಂತೆ ಬಲವಂತ ಮಾಡಿ ಹಿಂಸೆ ನೀಡುತ್ತಿದ್ದರು. ಅಲ್ಲದೇ 1ನೇ ಆರೋಪಿತನ ಹೊಸ ಕಾರಿನ ಸಾಲದ ಜಾಮೀನಿಗೆ ಬಲವಂತವಾಗಿ ಹೆದರಿಸಿ ಬೆದರಿಸಿ ಸಹಿ ಮಾಡಿಸಿರುತ್ತಾರೆ. ಹಾಗೂ 1ನೇ ಆರೋಪಿ ಕುಡಿದು ಬಂದು ಹೊಡೆಯುತ್ತಿದ್ದು, ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆಂಬಿತ್ಯಾದಿ.

2)ದಿನಾಂಕ 02-08-2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ಈ ದಿನ ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರರು bondanthila ಮನೆಯಲ್ಲಿರುವ ಸಮಯ ಆರೋಪಿ ಹರಿಯಪ್ಪ ಎಂಬಾತನು ಲಾರಿಯಲ್ಲಿ ಕೆಂಪು ಕಲ್ಲುಗಳನ್ನು ತಂದು ಮುಖ್ಯ ರಸ್ತೆಯಿಂದ ಪಿರ್ಯಾದಿದಾರರ ಮನೆಗೆ ಬರುವ ರಸ್ತೆಗೆ ಅಡ್ಡವಾಗಿ ಹಾಕಿರುವುದನ್ನು ನೋಡಿ ಪಿರ್ಯಾದಿದಾರರು ವಿಚಾರಿಸಿದಾಗ ಆರೋಪಿತನು ...... ನಿನಗೆ ಈ ರಸ್ತೆಯಲ್ಲಿ ಏನು ಅಧಿಕಾರ ಇದೆ, ಇದು ನನ್ನ ರಸ್ತೆ ನಾನು ಏನೂ ಬೇಕಾದರೂ ಮಾಡುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಪಿರ್ಯಾದಿದಾರರು ನ್ಯಾಯಾಲಯದಲ್ಲಿ ಕೇಸು ಇರುವಾಗ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ಆರೋಪಿತನು ....ಏನೀಗ ? ತಾಕತ್ತಿದ್ದರೆ ಈ ಕಲ್ಲುಗಳನ್ನು ತೆಗಿ ಎಂದು ಹೇಳಿ ಪಿರ್ಯಾದಿದಾರರ ಮೈ ಮೇಲೆ ಕೈ ಹಾಕಲು ಬಂದುದನ್ನು ನೋಡಿ ಪಿರ್ಯಾದಿದಾರರು ಆರೋಪಿತನಿಗೆ ದೂರ ನಿಲ್ಲು ಮೈ ಮುಟ್ಟಬೇಡ ಎಂದು ಹೇಳಿದಾಗ ಆರೋಪಿತನು ಮುಟ್ಟಿದರೆ ಏನಾಗುತ್ತೆ ಎಂದು ಹೇಳಿ, ಪಿರ್ಯಾದಿದಾರರ ಸೀರೆಯ ಸೆರಗನ್ನು ಎಳೆದು ಈಗ ನೀನು ಏನು ಮಾಡುತ್ತೀಯಾ ಎಂದು ಬೆದರಿಸಿ ಅಲ್ಲಿಯೇ ಇದ್ದ ಕೆಂಪು ಕಲ್ಲನ್ನು ಎತ್ತಿ ಇದರಿಂದ ನಿನ್ನನ್ನು ಜಜ್ಜಿ ಹಾಕುತ್ತೇನೆ ಮತ್ತು ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದಾಗ ಪಿರ್ಯಾದಿದಾರರು ಮನೆಗೆ ಹೋಗಿ ಬಾಗಿಲು ಹಾಕಿರುವುದನ್ನು ನೋಡಿ ಆರೋಪಿತನು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಬಾಗಿಲಿಗೆ ತುಳಿದು ಇನ್ನೊಂದು ಸಲ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಸಿರುತ್ತಾನೆ ಎಂಬಿತ್ಯಾದಿ.

Crime Reported in  Moodabidre PS     

ದಿನಾಂಕ 02-08-2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ RAMESH PRABHU  ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ವೈ-1862 ನೇದನ್ನು ಸವಾರಿ ಮಾಡಿಕೊಂಡು  ತನ್ನ ಮನೆಯಿಂದ ಮೂಡುಬಿದ್ರೆ ಪೇಟೆಗೆ ಬರುತ್ತಾ ಮಾರ್ಪಾಡಿ ಗ್ರಾಮದ ಸಮಗಾರಗುಂಡಿ ಬಳಿ ಇರುವ ಲೋಕಯ್ಯ ಎಂಬುವರ ಹೋಟೆಲ್ಲಿನ ಮುಂಭಾಗ ತಲುಪುತ್ತಿದ್ದಂತೆ ಹಿಂದಿನಿಂದ  ಅಂದರೇ ಗಾಂಧಿನಗರ ಕಡೆಯಿಂದ ಕೆಎ 19 ಇ ಹೆಚ್ 4147 ನೇ ಮೊಟಾರು ಸೈಕಲ್ ನ್ನು ಅದರ  ಸವಾರ ಭಾಸ್ಕರ ಎಂಬುವರು ಅತೀ ವೇಗ ಅಜಾಕರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಮೊಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

2) ದಿನಾಂಕ; 02-08-2021 ರಂದು ಸಮಯ ಸುಮಾರು 23.00 ಗಂಟೆಗೆ ಪಿರ್ಯಾದಿ RAJESH (27) ದಾರರು ತಮ್ಮ ಮನೆಯಾದ ಸಂಪಿಗೆಯಿಂದ ಮೂಡಬಿದ್ರೆಯ ಅಂಗಡಿಗೆ ಬಂದು ಅಂಗಡಿಯಲ್ಲಿಟ್ಟಿದ್ದ ಮಗುವಿನ ಔಷಧಿ ತೆಗೆದುಕೊಂಡು ಮನೆಗೆ ತೆರೆಳುತ್ತಿರುವಾಗ ಜೆರಾಲ್ಡ್ ಕ್ರಸ್ಟಾ ಆಪಾರ್ಟಮೆಂಟ್ ಎದುರುಗಡೆ ಆರೋಪಿಗಳಾದ ಸಚಿತ್ ಕುಮಾರ್ ಮತ್ತು ಸಂದೀಪ್‌ರವರು ಮುಖ್ಯ ರಸ್ತೆಗೆ ಅಡ್ಡಲಾಗಿ ಕೆಂಪು ಕಲ್ಲುಗಳನ್ನು ಇಟ್ಟಿದ್ದು ಅದನ್ನು ನೋಡದೇ  ಕಾರು ಕೆಂಪು ಕಲ್ಲುಗಳಿಗೆ ತಾಗಿ ನಾನು ಮತ್ತು ಹೆಂಡತಿ ಕಾರಿನಿಂದ ಇಳಿದು ನೋಡಲಾಗಿ ಅಲ್ಲಿಯೇ ಪಕ್ಕದಲ್ಲಿದ್ದ ಮೇಲಿನ ವ್ಯಕ್ತಿಗಳು ನಮ್ಮೊಡನೆ ಗಲಾಟೆಗೆ ಬಂದು ನನಗೆ ಮತ್ತು ನನ್ನ ಹೆಂಡತಿಗೆ ಕೈಯಿಂದ ಹಲ್ಲೇ ನಡೆಸಿ, ನನ್ನ ಹೆಂಡತಿಯ ಮಾನಭಂಗಕ್ಕೆ ಯತ್ನಿಸಿರುತ್ತಾರೆ, ಹಾಗೂ ಆವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದು ಆಗ ನಾವು ಜೋರಾಗಿ ಕೂಗಲಾಗಿ ಅಲ್ಲಿಗೆ ಅಪಾರ್ಟಮೆಂಟ್‌ನ ಜನರು ಹಾಗೂ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಬಂದ ಕೊಡಲೇ ಆರೋಪಿಗಳು ಹೆದರಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ನೆಲಕ್ಕೆ ಬಿದ್ದು ಮೈ ಕೈ-ಕಾಲುಗಳಿಗೆ ತೆರಚಿದ ಗಾಯಗಳಾಗಿರುತ್ತದೆ ಎಂಬಿತ್ಯಾದಿ.

Crime Reported in  Kankanady Town PS

ಪಿರ್ಯಾದುದಾರರಾದ ದರ್ಶನ್ ಜಿ (29) ಎಂಬವರು ತಮ್ಮ ಬಾಬ್ತು  KA-19-EB-9793   ನೇ ನಂಬ್ರದ Hero Honda Splendor Plus ಬೈಕ್ ನ್ನು ದಿನಾಂಕ:06-07-2021 ರಂದು ಪದವು ಗ್ರಾಮದ ಶಕ್ತಿನಗರ  ನಿವಾಸದ ಕಂಪೌಂಡ್ ಹೊರಗಡೆ ರಾತ್ರಿ 08:30 ಗಂಟೆಗೆ  ಇರಿಸಿ ಮನೆಯೊಳಗೆ  ಇದ್ದು,  ನಂತರ ಮರುದಿನ ದಿನಾಂಕ 07-07-2021 ರಂದು ಸುಮಾರು ಬೆಳಗ್ಗೆ 10:00 ಗಂಟೆಗೆ ನೋಡಿದಾಗ ಪಿರ್ಯಾದಿದಾರರ ಬೈಕ್ ಇರಿಸಿದ ಸ್ಥಳದಲ್ಲಿ ಇಲ್ಲದೇ ಸುತ್ತಲಿನ ಪರಿಸರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಪಿರ್ಯಾದಿದಾರರ ಬೈಕ್ ನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವು ಮಾಡಿಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ  ಜರುಗಿಸಬೇಕಾಗಿ ಕೋರಿಕೆ ಎಂಬಿತ್ಯಾದಿ. ಕಳುವಾದ ಬೈಕ್ ನ ಅಂದಾಜು ಮೌಲ್ಯ 16,000/- ರೂಪಾಯಿಗಳು ಆಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 03-08-2021 08:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080