Crime Reported in Panambur PS
1) ದಿನಾಂಕ 04-05-2021 ರಂದು 11-00 ಗಂಟೆಗೆ ಮಂಗಳೂರು ನಗರದ ಬೈಕಂಪಾಡಿ ಮೀನಕಳಿಯ ಕ್ರಾಸ್ ರಸ್ತೆಯಲ್ಲಿ ಆರೋಪಿ ಕೆಎ 20 ಝಡ್ 4795 ಮಾರುತಿ ಓಮಿನಿ ಕಾರಿನ ಮಾಲಕ ಹಾಗೂ ಚಾಲಕ ರಮೇಶ್ ಇಲಗಾರ್ ಪ್ರಾಯ 27 ವರ್ಷ, ತಂದೆ; ಬಾಳಪ್ಪ ವಾಸ: ಡೋರ್ ನಂಬ್ರ 4-579/, ಇಂದ್ರಪ್ರಸ್ಥ ನಿಲಯ, ರಾಜೀವನಗರ 10 ನೇ ಕ್ರಾಸ್ ರಸ್ತೆ, ಬಡಗುಬೆಟ್ಟು, ಮಣಿಪಾಲ, ಉಡುಪಿ ಜಿಲ್ಲೆ ಎಂಬಾತನು ಕೋವಿಡ್ 19 ನಿಯಮಾವಳಿಗಳನ್ನು ಹಾಗೂ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೆ ಸುಮಾರು 9 ಜನರನ್ನು ವಾಹನದೊಳಗೆ ಕುಳ್ಳಿರಿಸಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದು, ಯಾವುದೇ ಅಗತ್ಯ ದಾಖಲೆಗಳಿಲ್ಲದೆ ಮಾನ್ಯ ಸರಕಾರದ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿಕೊಂಡು ವಾಹನವನ್ನು ಚಲಾಯಿಸುತ್ತಿದ್ದುದ್ದರಿಂದ ಈ ಆರೋಪಿತನ ವಿರುದ್ಧ THE DISASTER MANAGEMENT ACT, 2005 (U/s-51(b)) ಪ್ರಕಾರ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ
2) ದಿನಾಂಕ 04-05-2021 ರಂದು 12-00 ಗಂಟೆಗೆ ಮಂಗಳೂರು ನಗರದ ಬೈಕಂಪಾಡಿ ಮೀನಕಳಿಯ ಕ್ರಾಸ್ ರಸ್ತೆಯಲ್ಲಿ ಆರೋಪಿ ಕೆಎ 20 ಬಿ 8130 ಟಾಟಾ ಸುಮೋ ವಾಹನದ ಚಾಲಕ ಮನೋಜ್ ಪ್ರಾಯ 24 ತಂದೆ; ಲೋಕಯ್ಯ ಪೂಜಾರಿ ವಾಸ:ತುಂಬೆದಡ್ಕ,ಕೊಡೆಮಣಿ, ಸುಲ್ಕೇರಿ ಮೊಗ್ರು ಗ್ರಾಮ ಬೆಳ್ತಂಗಡಿ ತಾಲೂಕು. ಎಂಬಾತನು ಕೋವಿಡ್ 19 ನಿಯಮಾವಳಿಗಳನ್ನು ಹಾಗೂ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೆ ಸುಮಾರು 6 ಜನರನ್ನು ವಾಹನದೊಳಗೆ ಕುಳ್ಳಿರಿಸಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದು, ಯಾವುದೇ ಅಗತ್ಯ ದಾಖಲೆಗಳಿಲ್ಲದೆ ಮಾನ್ಯ ಸರಕಾರದ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿಕೊಂಡು ವಾಹನವನ್ನು ಚಲಾಯಿಸುತ್ತಿದ್ದುದ್ದರಿಂದ ಈ ಆರೋಪಿತನ ವಿರುದ್ಧ THE DISASTER MANAGEMENT ACT, 2005 (U/s-51(b)) ಪ್ರಕಾರ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ
Crime Reported in Bajpe PS
1) ದಿನಾಂಕ 04-05-2021 ರಂದು ಬೆಳಿಗ್ಗೆ ಸುಮಾರು 10:15 ಗಂಟೆಗೆ ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ ಕೈಕಂಬ ಜಂಕ್ಷನ್ ಬಳಿಯಿರುವ ವೈಟ್ ಸ್ಟೋನ್ ಎಂಬ ಬಟ್ಟೆ ಅಂಗಡಿಯನ್ನು ಆರೋಪಿ ಮಹಮ್ಮದ್ ಆಲಿ ಎಂಬವರು ಸರ್ಕಾರದ ಲಾಕಡನ್ ಆದೇಶವನ್ನು ಉಲ್ಲಂಘಿಸಿ ತೆರೆದಿದ್ದು, ಸದ್ರಿ ಅಂಗಡಿಯಲ್ಲಿ ಗ್ರಾಹಕರಿದ್ದು ಅವರೆಲ್ಲರೂ ಸಾಮಾಜಿಕ ಅಂತರವನ್ನು ಇಟ್ಟುಕೊಳ್ಳದೇ, ನಿಂತುಕೊಂಡಿದ್ದು. ಅಂಗಡಿಯ ಮಾಲಕ ಮುಖಗವಚ, ಕೈಗವಚವನ್ನು ಹಾಕದೇ ಸ್ಥಳದಲ್ಲಿ ಸ್ಯಾನಿಟೈಸರ್, ಇಡದೇ ನಿರ್ಲಕ್ಷತನವನ್ನು ತೋರಿ ಹಾಗೂ ಸರ್ಕಾರದ ಆದೇಶವನ್ನು ಪಾಲಿಸದೇ ಪ್ರಾಣಕ್ಕೆ ಅಪಾಯಕರವಾದ ಕರೋನ ಸೋಂಕು ಹರಡುವ ಸಾದ್ಯತೆ ಇರುವುದು ಗೊತ್ತಿದ್ದರೂ ಸಹ ಅಂಗಡಿಯನ್ನು ತೆರೆದಿಟ್ಟಿರುವುದರಿಂದ ಆರೋಪಿಯ ಮೇಲೆ ಕಲಂ: 269 ಐ.ಪಿ.ಸಿ. ಮತ್ತು ಕಲಂ: 51(ಬಿ) ವಿಪತ್ತು ನಿರ್ವಹಣಾ ಕಾಯ್ದೆ 2005 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ” ಎಂಬಿತ್ಯಾದಿ.
Crime Reported in Surathkal PS
ದಿನಾಂಕ: 04-05-2021 ರಂದು ಸುರತ್ಕಲ್ ಇಡ್ಯಾ ಗ್ರಾಮದ ಕುಡುವಾಸ್ ಗ್ರಾಂಡ್ಯೂರ್ ಬಿಲ್ಡಿಂಗ್ ಕಟ್ಟಡದ 2ನೇ ಮಹಡಿಯಲ್ಲಿರುವ ಲೇಡಿಸ್ ಕಿಡ್ಸ್ ವೆಡ್ಡಿಂಗ್ಸ್ ಹೆಸರಿನ ಬಟ್ಟೆ ಶಾಫ್ ಮಾಲಕರಾದ ಹಮೀದ್(35) ಎಂಬವರು ಬೆಳಿಗ್ಗೆ ಸಮಯ ಸುಮಾರು 08.15 ಗಂಟೆಗೆ ಶಾಫ್ ತೆರೆದು ವ್ಯಾಪಾರ ಮಾಡುತ್ತಿದ್ದು ಬಟ್ಟೆ ಅಂಗಡಿಯನ್ನು ತೆರೆಯಲು ಆದೇಶ ಇಲ್ಲದೇ ಇದ್ದರೂ ಮಾನವ ಜೀವಕ್ಕೆ ಅಪಾಯಕರವಾದ ಕರೋನ ಸೊಂಕು ಹರಡುವ ಸಾದ್ಯತೆಯಿರುವುದನ್ನು ಮನಗಂಡು ಸಹ ಬಟ್ಟೆ ಅಂಗಡಿಯನ್ನು ತೆರೆದು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶವನ್ನು ಉಲ್ಲಂಘಿಸಿರುವುದರಿಂದ ಆರೋಪಿ ವಿರುದ್ದ THE KARNATAKA EPIDEMIC DISEASES ACT, 2020 (U/s-4,5 (1),5(4)) ಪ್ರಕಾರ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿಯಾಗಿರುತ್ತದೆ
Crime Reported in Ullal PS
ದಿನಾಂಕ 04-05-2021 ರಂದು 08-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಮುನ್ನೂರು ಗ್ರಾಮದ ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಎದುರುಗಡೆಯಿರುವ ಎಲೆಕ್ಟ್ರೋ ಮೊಬೈಲ್ ಸೆಂಟರ್ ಅಂಗಡಿಯನ್ನು ತೆರೆದು ಕಾರ್ಯಾಚರಿಸುತ್ತಿದ್ದುದರಿಂದ ಸದ್ರಿಯವರ ಅಂಗಡಿಗೆ ಬಂದಿರುವ ಗ್ರಾಹಕರು ಸರಿಯಾಗಿ ಮಾಸ್ಕನ್ನು ಧರಿಸದೇ ಸಾಮಾಜಿಕ ಅಂತರವನ್ನು ಕೂಡಾ ಪಾಲಿಸದೇ ಸಾಂಕ್ರಾಂಮಿಕ ರೋಗವನ್ನು ಹರಡಲು ಸಹಕರಿಸುದನ್ನು ಕಂಡು ಸದ್ರಿ ಅಂಗಡಿಯಲ್ಲಿದ್ದವರಿಗೆ ಸರಕಾರದ ಅದೇಶವನ್ನು ಪಾಲಿಸುವಂತೆ ಸೂಚಿಸಿದಾಗ ಅಂಗಡಿಯಲ್ಲಿದ್ದ ವ್ಯಕ್ತಿಯು ಅದೇಶವನ್ನು ಪಾಲನೆ ಮಾಡುವ ಬಗ್ಗೆ ಉಡಾಫೆಯಾಗಿ ವರ್ತಿಸಿರುತ್ತಾರೆ. ಆತನ ಹೆಸರು ವಿಚಾರಿಸಲಾಗಿ ಮೊಹಮ್ಮದ್ ಫಿರಾಝ್ ಎಂಬುದಾಗಿ ತಿಳಿಸಿದ್ದು, ಸರಕಾರದ ಆದೇಶವನ್ನು ಉಲ್ಲಂಘಿಸಿರುವುದರಿಂದ ಮೊಹಮ್ಮದ್ ಫಿರಾಝ್ ಎಂಬಾತನ ವಿರುದ್ಧ THE KARNATAKA EPIDEMIC DISEASES ACT, 2020 (U/s-5(4)); IPC 1860 (U/s-269) ರಂತೆ ದಾಖಲಿಸಿದ ಪ್ರಕರಣದ ಸಾರಾಂಶ.
2)ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪಿರ್ಯಾದಿದಾರರು ದಿನಾಂಕ :04-05-2021 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಸರಹದ್ದಿನ ಮುಕ್ಕಚ್ಚೇರಿ, ಸೋಮೇಶ್ವರ, ಓವರ್ ಬ್ರಿಡ್ಜ್, ತೊಕ್ಕೊಟ್ಟು ಮುಂತಾದ ಕಡೆಗಳಲ್ಲಿ ಸಂಚರಿಸಿಕೊಂಡಿದ್ದು ಬೆಳಿಗ್ಗೆ 09-45 ಗಂಟೆಗೆ ಕುತ್ತಾರು ಜಂಕ್ಷನ್ ಬಳಿಗೆ ಬಂದಿದ್ದು, ಬೆಳಿಗ್ಗೆ 10-15 ಗಂಟೆಯ ಸಮಯಕ್ಕೆ ತೊಕ್ಕೊಟ್ಟು ಕಡೆಯಿಂದ ಎರಡು ಟಿಪ್ಪರ್ ಲಾರಿಗಳು ಒಂದರ ಹಿಂದೆ ಒಂದರಂತೆ ಬರುತ್ತಿರುವುದನ್ನು ಕಂಡು ಟಿಪ್ಪರ್ ಲಾರಿಗಳನ್ನು ನಿಲ್ಲಿಸಲು ಸೂಚಿಸಿದ್ದು, ಎರಡು ಟಿಪ್ಪರ್ ಲಾರಿಗಳನ್ನು ಪರಿಶೀಲನೆಯ ಬಗ್ಗೆ ನಿಲ್ಲಿಸಿದಾಗ ಟಿಪ್ಪರ್ ಲಾರಿಗಳ ಚಾಲಕರು ಟಿಪ್ಪರ್ ಲಾರಿಯನ್ನು ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದು, ಮೊದಲ ಟಿಪ್ಪರ್ ಲಾರಿಯ ನೊಂದಣಿ ನಂಬ್ರ ನೋಡಲಾಗಿ ಕೆಎ 19 ಎಬಿ 4409 ಆಗಿದ್ದು, ಎರಡನೇ ಟಿಪ್ಪರ್ ಲಾರಿಯ ನಂಬ್ರ ಕೆಎಲ್ 41 ಎ 923 ಆಗಿದ್ದು ಎರಡೂ ಟಿಪ್ಪರ್ ಲಾರಿಗಳಲ್ಲಿ ಕಲ್ಲಾಪು ಬಳಿಯಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯಿಂದ ಯಾವುದೇ ಪರವಾಣಿಗೆ ಇಲ್ಲದೇ ಸಾಮಾನ್ಯ ಮರಳನ್ನು ತುಂಬಿಸಿ ಸಾಗಿಸುತ್ತಿದ್ದುದರಿಂದ ಅಲ್ಲದೇ ಆರೋಪಿಗಳು ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಿರುವ ಕರ್ನಾಟಕ ಸರಕಾರದ ಆದೇಶ ಉಲ್ಲಂಘಿಸಿರುವುದರಿಂದ ಕೋವಿಡ್ 19 ವೈರಾಣು ಹರಡುವ ವಿಚಾರದಲ್ಲಿ ನಿರ್ಲಕ್ಷತನ ವಹಿಸಿರುವುದರಿಂದ ಟಿಪ್ಪರ್ ಲಾರಿ ಕೆಎ 19 ಎಬಿ 4409 ನೇದರ ಚಾಲಕ ಮೊಹಿದ್ದೀನ್ ಬಾವ, ಉಸ್ತುವಾರಿ ಪುತ್ತುಬಾವ, ಟಿಪ್ಪರ್ ಲಾರಿ ಮಾಲಕ, ಇತರ ಲೋಡರ್ ಗಳು ಮತ್ತು ಟಿಪ್ಪರ್ ಲಾರಿ ಕೆಎಲ್ 41 ಎ 923 ನೇದರ ಚಾಲಕ ಮತ್ತು ಮಾಲಕ ಇವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.
Crime Reported in Moodabidre PS
ದಿನಾಂಕ: 03-05-2021 ರಂದು ಠಾಣಾ ಸಿಬ್ಬಂದಿಯವರಾದ ಚಂದ್ರಹಾಸ್ ರೈ, ಸಂತೋಷ್ ರವರೊಂದಿಗೆ ಠಾಣಾ ಸರಹದ್ದಿನ ಮೂಡಬಿದ್ರೆ ತಾಲೂಕು ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ ಸಮಯ ಸುಮಾರು 13.00 ಗಂಟೆಗೆ ಆರೋಪಿಯು Ritesh Nayak(A1) ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯ ಹಿನ್ನೆಲೆಯಲ್ಲಿ ಸರ್ಕಾರದ ಹೊರಡಿಸಿದ ಲಾಕ್ ಡೌನ್ ಆದೇಶವನ್ನು ಅನುಸರಿಸದೇ ಹಾಗೂ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಅಂಗಡಿಯನ್ನು ಮುಚ್ಚದೆ ಅವಧಿ ಮೀರಿ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಆರೋಪಿತರ ವಿರುದ್ಧ THE DISASTER MANAGEMENT ACT, 2005 (U/s-51(b)) ಪ್ರಕಾರ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ
Crime Reported in Cyber Crime PS
1) ಪಿಯಾದಿ SUHAIL KANDAK ರವರು ಕರ್ನಾಟಕ ರಾಜ್ಯ ಯುವ ಕಾಂಗ್ರೇಸ್ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸ್ತುತ ಗುತ್ತಿಗೆದಾರ ವೃತ್ತಿಯನ್ನು ಮಾಡುತ್ತಿದ್ದು, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುತ್ತಾರೆ. ದಿನಾಂಕ 20-04-2021 ಮತ್ತು ನಂತರದ ದಿನಗಳಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಹೆಸರಿನಲ್ಲಿ @suhail__kandak ಎಂಬುವ ನಕಲಿ ಇನ್ ಸ್ಟ್ರಾಗ್ರಾಂ ಖಾತೆಯನ್ನು ತೆರೆದು ಅದರಲ್ಲಿ ಸಮಾಜಕ್ಕೆ ಆಗೌರವ ಉಂಟುಮಾಡುವ ಮತ್ತು ಪಿರ್ಯಾದಿದಾರರ ಭಾವಚಿತ್ರವನ್ನು ಅಸಭ್ಯ ರೀತಿಯಲ್ಲಿ ಎಡಿಟ್ ಮಾಡಿ ಆಶ್ಲೀಲ ವಿಡೀಯೋ ಹಾಗೂ ಭಾವಚಿತ್ರ ಸದ್ರಿ ಇನ್ ಸ್ಟ್ರಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿರುತ್ತಾರೆ. ಸದ್ರಿ ಇನ್ ಸ್ಟ್ರಾಗ್ರಾಂ ಖಾತೆಗೆ ಪಿರ್ಯಾದಿದಾರರ ಸ್ನೇಹಿತರು ರಿಪೊರ್ಟ್ ಮಾಡಿದಾಗ ಅವರಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿರುತ್ತಾರೆ, ಅಲ್ಲದೇ ಕೋಮು ಸೌಹರ್ದತೆಗೆ ದಕ್ಕೆ ತರುವ ಸಂದೇಶಗಳನ್ನು ಪ್ರಕಟಿಸಿರುತ್ತಾರೆ.ಎಂಬಿತ್ಯಾದಿಯಾಗಿದೆ
2) ಪಿರ್ಯಾದಿದಾರರಿಗೆ ದಿನಾಂಕ 22/04/2021 ರಂದು INSTAGRAM ಖಾತೆಯ ಮುಖೇನ Alex Willson ಎಂಬವರ ಪರಿಚಯವಾಗಿದ್ದು,ನಂತರ INSTAGRAM ನಲ್ಲಿ ಚ್ಯಾಟಿಂಗ್ ಮಾಡುತ್ತಿದು ಈ ಸಮಯದಲ್ಲಿ ಪಿರ್ಯಾದಿದಾರರಿಗೆ ಹಣ, ಹಾಗೂ ಚಿನ್ನಾಭರಣಗಳನ್ನು ಉಡುಗೊರೆಯಾಗಿ ಕೊಡುವುದಾಗಿ ನಂಬಿಸಿ ತದ ನಂತರದ ದಿನಗಳಲ್ಲಿ ದಿನಾಂಕ 27/04/2021 ರಂದು ಪಿರ್ಯಾದಿದಾರರಿಗೆ ಒರ್ವ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಡೆಲ್ಲಿ ಕಸ್ಟಮ್ ಕಛೇರಿಯಿಂದ ಮಾತನಾಡುವುದಾಗಿ ತಿಳಿಸಿ ಅಲೆಕ್ಸ್ ವಿಲ್ಸನ್ ಎಂಬವರು ಪಿರ್ಯಾದಿದಾರರಿಗೆ ಉಡುಗೊರೆ ಕಳುಹಿಸಿಕೊಟ್ಟಿದ್ದು ಸದ್ರಿ ಉಡುಗೊರೆಯನ್ನು ಪಡೆಯ ಬೇಕಾದಲ್ಲಿ ಹಣವನ್ನು ಪಾವತಿಸಬೇಕೆಂದು ತಿಳಿಸಿ ವಿವಿಧ ಕಾರಣಗಳನ್ನು ಒಡ್ಡಿ ದಿನಾಂಕ 27/04/2021 ರಿಂದ ದಿನಾಂಕ: 29/04/2021 ರ ಮಧ್ಯೆ ಹಂತ ಹಂತವಾಗಿ ಒಟ್ಟು ರೂ. 3,75,000/- ಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಮೋಸಮಾಡಿರುವುದಾಗಿದೆ ಎಂಬಿತ್ಯಾದಿಯಾಗಿದೆ
Crime Reported in Mangalore Women PS
ಪಿರ್ಯಾದಿದಾರರಿಗೆ ಮದುವೆಯಾಗಿದ್ದು, ಅವರ ಸಂಸಾರೀಕ ಜೀವನದಲ್ಲಿ ಸಮಸ್ಯೆ ಉಂಟಾಗಿ ಅವರು ಮಂಗಳೂರಿನ ಪಿಜಿಯೊಂದರಲ್ಲಿ ವಾಸಮಾಡಿಕೊಂಡಿದ್ದು, ಎಲ್.ಐ.ಸಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದ ಸಮಯ ದಿನಾಂಕ 06-07-2020 ರಂದು ಆರೋಪಿ ಅರುಣ್ ರಾಜ್ ಕಾಪಿಕಾಡ್ ಎಂಬುವರ ಪರಿಚಯವಾಗಿದ್ದು, ದಿನಾಂಕ 31-12-2020 ರಂದು ಪಿರ್ಯಾದಿದಾರರು ಹೊಸವರುಷ ಆಚರಣೆಯ ಬಗ್ಗೆ ಮಂಗಳೂರಿನ ಗೋಲ್ಡ್ ಪಿಂಚ್ ಹೊಟೇಲ್ ನಲ್ಲಿದ್ದ ಸಮಯ ಮನೆಗೆ ಹೋಗಲು ಯಾವುದೇ ಕ್ಯಾಬ್ ವ್ಯವಸ್ಥೆ ಸಿಗದೇ ಇದ್ದು, ಆರೋಪಿ ಅರುಣ್ ರಾಜ್ ನ ಹೈಟೆನ್ ಕಾರಿನಲ್ಲಿ ಪಿರ್ಯಾದಿದಾರರು ಪಿ.ಜಿಗೆ ತೆರಳಿದಾಗ ಸದ್ರಿಯವರ ಪಿ.ಜಿ ಬಂದ್ ಆಗಿದ್ದು, ಆ ಸಮಯ ಆರೋಪಿ ಹಂಪನಕಟ್ಟ ಬಳಿ ಇರುವ ರೂಪ ಹೊಟೇಲ್ ಗೆ ಕರೆದುಕೊಂಡು ಹೋಗಿ ರೂಮ್ ಮಾಡಿ ನಿಲ್ಲಿಸಿದ್ದು, ಅಲ್ಲಿ ಆರೋಪಿ ಯಾವುದೋ ಒಂದು ಜ್ಯೂಸನ್ನು ಪಿರ್ಯಾದಿದಾರರಿಗೆ ನೀಡಿದ್ದು, ಅದನ್ನು ಕುಡಿದ ಪಿರ್ಯಾದಿದಾರರು ಪ್ರಜ್ಞಾಹೀನರಾಗಿದ್ದು, ಪ್ರಜ್ಞೆ ಬಂದಾಗ ಆರೋಪಿ ಅರುಣ್ ರಾಜ್ ಪಿರ್ಯಾದಿದಾರರಿಗೆ ಬಲತ್ಕಾರವಾಗಿ ಲೈಂಗಿಕ ಸಂಪರ್ಕ ಮಾಡಿರುವುದಾಗಿ ಗೊತ್ತಾಗಿ ಬೊಬ್ಬೆ ಹೊಡೆಯಲು ಪ್ರಯತ್ನಿಸಿದಾಗ ಆರೋಪಿ ಪಿರ್ಯಾದಿದಾರರ ಬಾಯಿಗೆ ಕೈಯಿಟ್ಟು ಇದು ನನ್ನದೇ ಊರು ಎಂದು ಬೆದರಿಸಿ, ನಾನು ನಿನ್ನನ್ನು 05 ತಿಂಗಳ ಒಳಗಡೆ ಮದುವೆಯಾಗುವುದಾಗಿ ನಂಬಿಸಿರುತ್ತಾನೆ. ನಂತರ ಪಿರ್ಯಾದುದಾರರು ಬೆಂದೂರ್ ವೆಲ್ ನಲ್ಲಿರುವ ಕಾತ್ಯಾಯನಿ ಅಪಾರ್ಟ್ ಮೆಂಟಿನಲ್ಲಿ ಮನೆ ಮಾಡಿದ್ದು, ಆ ಸಮಯ ಆರೋಪಿ ಅರುಣ್ ರಾಜ್ ಹಲವು ಬಾರಿ ಮನೆಗೆ ಬಂದು ದೈಹಿಕ ಸಂಪರ್ಕ ನಡೆಸಿದ್ದು, ಇದರಿಂದ ಗರ್ಭವತಿಯಾದ ಪಿರ್ಯಾದಿದಾರರಿಗೆ ಒತ್ತಾಯಪೂರ್ಕವಾಗಿ ಯಾವುದೋ ಮಾತ್ರೆಯನ್ನು ತಿನ್ನಿಸಿ ಗರ್ಭಪಾತ ಮಾಡಿಸಿದ್ದಲ್ಲದೇ, ವಿನೋದ ಎಂಬ ಮಹಿಳೆ ಫೋನ್ ಮಾಡಿ ತಾನು ಅರುಣ್ ರಾಜ್ ಎಂಬಾತನನ್ನು ಮದುವೆಯಾಗಿರುವುದಾಗಿ ತಿಳಿಸಿ ಬೆದರಿಕೆಯನ್ನು ಹಾಕಿದ್ದು, ಆನಂತರ ಆರೋಪಿತನು ಮದುವೆಯಾಗುವುದಿಲ್ಲವೆಂದು ಹೇಳಿ, ದಿನಾಂಕ 13-03-2021 ರಂದು ಹೊಡೆದಿದ್ದು, ಈ ಬಗ್ಗೆ ದೂರು ನೀಡಿದ್ದ ಸಮಯ ಆರೋಪಿತನು ಮದುವೆಯಾಗುವುದಾಗಿ ಠಾಣೆಯಲ್ಲಿ ತಿಳಿಸಿ ಈ ವರೆಗೂ ಯಾವುದೇ ಸಂಪರ್ಕಕ್ಕೂ ಸಿಗದೇ ಮೋಸ ಮಾಡಿರುತ್ತಾನೆ ಎಂಬಿತ್ಯಾದಿ.
Crime Reported in Traffic South PS
ದಿನಾಂಕ :03-05-2021 ರಂದು ಪಿರ್ಯಾದಿ MEENAKSHI ರವರ ಗಂಡ ಚಂದ್ರಶೇಖರ್(58) ರವರು ಕೆಲಸಮುಗಿಸಿಕೊಂಡು ಮುಡಿಪು ಜಂಕ್ಷನನಲ್ಲಿ ಸಮಯ ಸುಮಾರು ಸಂಜೆ 19:00 ಗಂಟೆಗೆ ರಸ್ತೆ ದಾಟುತ್ತಿರುವಾಗ ಮುಡಿಪು ಕಡೆಯಿಂದ ಬಾಳೆಪುಣಿ ಕಡೆಗೆ ಹೋಗುತ್ತಿದ್ದ KA-70-1375 ನೇದರ ಆಟೋರಿಕ್ಷಾ ಚಾಲಕನು ಅಜಾಗರೂಕತೆ ಹಾಗೂ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ರವರಿಗೆ ಡಿಕ್ಕಿಪಡಿಸಿದ್ದು ಇದರ ಪರಿಣಾಮ ಚಂದ್ರಶೇಖರ್(58) ರವರಿಗೆ ಬಲಗೈ ಮೋನಕೈಗೆ ರಕ್ತಗಾಯ, ಹಣೆ ಎಡಬದಿಗೆ, ಹಾಗೂ ಎಡಗೈ ಮೊನಕೈಗೆ ಮತ್ತು ಎರಡುಕಾಲಿನ ಮೊನಗಂಟಿಗೆ ಹಾಗೂ ಬಲಗಾಲಿನ ಪಾದಕ್ಕೆ ಮತ್ತು ತಲೆ ಹಿಂಬದಿಗೆ ತೀವ್ರತರದ ರಕ್ತಗಾಯವಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಕೆ,ಎಸ್ ಹೆಗ್ಡೆ ಆಸ್ವತ್ರೆಗೆ ದಾಖಲಿಸಿದ್ದು ಅವರನ್ನು ಪರಿಕ್ಷಿಸಿದ ವೈದ್ಯರು ರವರು ಮೃತರಾಗಿದ್ದರೆ ಎಂದು ತಿಳಿಸಿದರು. ಈ ಅಪಘಾತಕ್ಕೆ ಆಟೋರಿಕ್ಷಾ ಸಂಖ್ಯೆ KA-70-1375 ನೇದರ ಚಾಲಕ ಲೋಕೆಶ್ ರವರ ಅಜಾಗರೂಕತೆ ಮತ್ತು ದುಡುಕುತನ ವಾಹನ ಚಾಲಯಿಸಿದೆ ಕಾರಣ ಎಂಬಿತ್ಯಾದಿ.