Feedback / Suggestions

Crime Reported in Urva PS

ದಿನಾಂಕ : 04.06.2021 ರಂದು  ಪಿರ್ಯಾದಿದಾರರು ಸಾಂಕ್ರಾಮಿಕ ರೋಗವಾದ  ಕೋವಿಡ್ -19,  ಕೊರೋನಾ ಸಾಂಕ್ರಾಮಿಕ  ಖಾಯಿಲೆ  ಹಿನ್ನಲೆ ಯಲ್ಲಿ  ರಾಜ್ಯಾದ್ಯಾಂತ  ಲಾಕ್ ಡೌನ್  ಘೋಷಣೆಯಾಗಿದ್ದು  ಅದರಂತೆ  ಸರಕಾರದ ಮಾರ್ಗಸೂಚಿಯಂತೆ  ಬೆಳಿಗ್ಗೆ 06:00 ಗಂಟೆಯಿಂದ  10:00 ಗಂಟೆ  ವರೆಗೆ  ಅಗತ್ಯ  ವಸ್ತುಗಳ  ಅಂಗಡಿ ಗಳನ್ನು  ತೆರೆಯಲು  ಸರಕಾರವು  ಸಮಯಾವಕಾಶವನ್ನು ನೀಡಿರುತ್ತದೆ.  ಅದರಂತೆ ಪಿರ್ಯಾದಿ Smt Srikala K T PSI ರವರು ಮೇಲಾಧಿಕಾರಿಯವರ ಆದೇಶದಂತೆ  ಲಾಕ್ ಡೌನ್ ನಿಮಿತ್ತಾ ಠಾಣಾ  ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ನಗರದ ಉರ್ವಾ ಅಶೋಕ ನಗರ ಜಂಕ್ಷನ್ ಬಳಿಯಿರುವ ಮಹಾಲಕ್ಷ್ಮಿ ಸ್ಟೋರ್  ಅಂಗಡಿಯ ಶಟರ್ ತೆರೆದು ನಿಗದಿತ ಸಮಯ ಕಳೆದರೂ  ಸಮಯ 12.00 ಗಂಟೆ  ವೇಳೆಗೆ  ಅಂಗಡಿಯ  ಮುಂಭಾಗದ ಶೆಟರ್ ಬಾಗಿಲನ್ನು ತೆರೆದು  ವ್ಯಾಪಾರ  ಮಾಡಿಕೊಂಡು ಇರುವುದು ಕಂಡು ಬಂದಿರುತ್ತದೆ. ಸದ್ರಿಯವರಿಗೆ ಲಾಕ್ ಡೌನ್  ನಿಯಮಾವಳಿಯ  ಬಗ್ಗೆ ಪದೇಪದೇ ತಿಳುವಳಿಕೆಯನ್ನು ನೀಡಿದರೂ ಸಹಃ ಅಂಗಡಿ ಮಾಲಿಕರು ಸದ್ರಿ ಅಂಗಡಿಯನ್ನು ತೆರೆದು ಮಾಸ್ಕ್ ಧರಿಸದೆ, ಲಾಕ್  ಡೌನ್ ನಿಯಮಾವಳಿಯನ್ನು ಉಲ್ಲಂಘನೆ  ಮಾಡಿರುವುದು  ಕಂಡು ಬಂದಿರುತ್ತದೆ ಸದ್ರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲಕರನ್ನು ವಿಚಾರಿಸಿಕೊಂಡು  ಅವರ  ಹೆಸರು  ವಿಳಾಸ ಪಡೆಯಲಾಗಿ ಆತನು ತನ್ನ ಹೆಸರು ಸೀತಾರಾಮ್ ರಾವ್, ಪ್ರಾಯ : 73 ವರ್ಷ ತಂದೆ : ದಿ| ಶಂಕರನಾರಾಯಣ ರಾವ್, ವಾಸ : ಕಾವ್ಯ ಸದನ ಉರ್ವಾ ಮಂಗಳೂರು ಎಂಬುದಾಗಿ  ತಿಳಿಸಿ ರುತ್ತಾರೆ. ಸದ್ರಿ ಅಂಗಡಿಯ ಮಾಲಿಕರು ಉದ್ದೇಶಪೂರ್ವಕವಾಗಿ ಮಾನವ ದೇಹಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗವಾದ ಕೊರೋನಾ ವೈರಸ್ ನ್ನು ಹರಡುವ ಸಾದ್ಯತೆ ಯನ್ನು  ಉಂಟು ಮಾಡಿದ್ದು ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ

Crime Reported in Bajpe PS

ಪಿರ್ಯಾದಿ H.B. Srinivas Babu ರವರ ಹಿರಿಯ ಮಗಳು ಭಾನು ಪ್ರೀಯಾ (22) ಎಂಬಾಕೆಗೆ ಮಂಗಳೂರಿನ ನಿವಾಸಿ ಜಯಂತ ಎಂಬಾತನ ಜೊತೆ ದಿನಾಂಕ 30-05-2018 ರಂದು ಮದುವೆ ಮಾಡಿಕೊಟ್ಟಿದ್ದು ಪಿರ್ಯಾದಿದಾರರ ಮಗಳು, ಅಳಿಯ ಜಯಂತ, ಮಾವ ಬೆಳ್ಳಿಯಪ್ಪ, ಅತ್ತೆ ಗಂಗಮ್ಮ ಮತ್ತು ನಾದಿನಿ ಜಯಶ್ರೀ ರವರು ಮಂಗಳೂರಿನ ಬಜಪೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಮಗಳು ಆಗಾಗ ಪಿರ್ಯಾದಿದಾರರಿಗೆ ಪೋನ್ ಮಾಡಿ ಅವಳ ಗಂಡ, ಅತ್ತೆ, ಮಾವ ಮತ್ತು ನಾದಿನಿ ರವರು ಸಣ್ಣ ಪುಟ್ಟ ವಿಚಾರದಲ್ಲಿ ಕಿರುಕುಳ ನೀಡುತ್ತಿರುವುದಾಗಿ ತಿಳಿಸುತ್ತಿದ್ದು ಸುಮಾರು 15 ದಿನಗಳ ಹಿಂದೆ ಭಾನು ಪ್ರೀಯಾ ಪಿರ್ಯಾದಿದಾರರಿಗೆ ಪೋನ್ ಮಾಡಿ ಅಳಿಯ ಜಯಂತ ಮನೆ ಬಿಟ್ಟು ಕೆಲಸಕ್ಕೆ ಹೋದರೆ ಒಂದೊಂದು ವಾರ ಮನೆ ಬರುವುದಿಲ್ಲ ಆ ಸಮಯ ಅತ್ತೆ, ಮಾವ ಮತ್ತು ನಾದಿನಿ ಹೊಟ್ಟೆಗೆ ಸರಿಯಾಗಿ ಊಟ ಕೊಡದೆ ಹಿಂಸೆ ನೀಡುತ್ತಿರುವುದಾಗಿ ಮತ್ತು ಗಂಡ ಅವಳ ಜೊತೆ ಸರಿಯಾಗಿ ವರ್ತಿಸದೆ ಡೈವರ್ಸ್ ಕೊಡುತ್ತೇನೆ ಎಂದು ಹೇಳುತ್ತಿರುವುದಾಗಿ ಅಳುತ್ತಾ ಪೋನ್ ನಲ್ಲಿ ಹೇಳಿದ್ದು ಅದಕ್ಕೆ ಪಿರ್ಯಾದಿದಾರರು ಆಕೆಗೆ ಲಾಕ್ ಡೌನ್ ಕಳೆದ ನಂತರ ಬಂದು ಸರಿ ಮಾಡುತ್ತೇನೆ ಎಂಬುದಾಗಿ ಹೇಳಿ ಸಮಾಧಾನಪಡಿಸಿರುತ್ತಾರೆ. ದಿನಾಂಕ 02-06-2021 ರಂದು ಮದ್ಯಾಹ್ನದ ಸಮಯ ಪಿರ್ಯಾದಿದಾರರ ಅಳಿಯ ಅವರಿಗೆ ಪೋನ್ ಮಾಡಿ “ನಿಮ್ಮ ಮಗಳು ನಮ್ಮ ವಿರುದ್ದ ಮಹಿಳಾ ಸಮಾಜಕ್ಕೆ ದೂರು ಕೊಟ್ಟಿದ್ದಾಳೆ. ನಮಗೆ ಅವಳ ಅವಶ್ಯಕತೆಯಿಲ್ಲ. ನೀವು ಅವಳನ್ನು ಕರೆದುಕೊಂಡು ಹೋಗಿ. ಅವಳು ಸತ್ತರೇ ಒಳ್ಳೇಯದ್ದು” ಎಂದು ಹೇಳಿರುವುದಲ್ಲದೆ ಆ ದಿನ ರಾತ್ರಿ ಸುಮಾರು 7-30 ಗಂಟೆಯಿಂದ ರಾತ್ರಿ 9-00 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದಿದಾರರ ಮಗಳು ಪೋನ್ ಮಾಡಿ ಜೋರಾಗಿ ಅಳುತ್ತಾ “ಇವರು ನನ್ನನ್ನು ಡೈವರ್ಸ್ ಕೊಡು ಎಂದು ಹೇಳಿ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಹೇಳಿ ಕೂಗುತ್ತಿದ್ದು ಆ ಸಮಯ ಪೋನಿನಲ್ಲಿ ಮಗಳಿಗೆ ಆಕೆಯ ಗಂಡ, ಅತ್ತೆ, ಮಾವ ಮತ್ತು ನಾದಿನಿ ಹೊಡೆಯವ ಶಬ್ದ ಮತ್ತು “ನೀನು ಸತ್ತು ಹೋಗು ನೀನು ಸತ್ತರೆ ನಮಗೆ ಒಳ್ಳೇಯದ್ದು” ಎಂದು ಹೇಳುತ್ತಿರುವ ಶಬ್ದ ಕೇಳಿ ಬಂದಿರುತ್ತದೆ. ಈ ದಿನ ದಿನಾಂಕ 03-06-2021 ರಂದು ಬೆಳಿಗ್ಗೆ ಸುಮಾರು 6-00 ಗಂಟೆಗೆ ಶ್ರೀನಿವಾಸ ಕಾವೂರು ರವರು ಪಿರ್ಯಾದಿದಾರರಿಗೆ ಪೋನ್ ಮಾಡಿ ಭಾನು ಪ್ರೀಯಾ ಅವಳ ರೂಮಿನ ಫ್ಯಾನಿಗೆ ಚೂಡಿದಾರದ ಶಾಲ್ ನಿಂದ ಕುತ್ತಿಗೆ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ.ಪಿರ್ಯಾದಿದಾರರ ಮಗಳು ಭಾನು ಪ್ರೀಯಾಳಿಗೆ ಆಕೆಯ ಗಂಡ ಜಯಂತ, ಮಾವ ಬೆಳ್ಳಿಯಪ್ಪ, ಅತ್ತೆ ಗಂಗಮ್ಮ, ನಾದಿನಿ ಜಯಶ್ರೀ ಮತ್ತು ಸಂಬಂಧಿ ಶ್ರೀನಿವಾಸ ಕಾವೂರು ರವರು ಸಣ್ಣ ಪುಟ್ಟ ಕಾರಣಗಳಿಂದ ಹೊಡೆದು ದೈಹಿಕವಾಗಿ ಹಿಂಸೆ ನೀಡಿ “ನೀನು ಸಾಯಿ ನೀನು ಸತ್ತರೇ ಒಳ್ಳೇಯದ್ದು” ಎಂದು ಹೇಳಿ ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವುದರಿಂದ ಭಾನು ಪ್ರೀಯಾ ಮಾನಸಿಕವಾಗಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಭಾನು ಪ್ರೀಯಾಳ ಸಾವಿಗೆ ಅವಳ ಗಂಡ ಜಯಂತ,  ಮಾವ ಬೆಳ್ಳಿಯಪ್ಪ, ಅತ್ತೆ ಗಂಗಮ್ಮ, ನಾದಿನಿ ಜಯಶ್ರೀ ಮತ್ತು ಸಂಬಂಧಿ ಶ್ರೀನಿವಾಸ ಕಾವೂರು ಎಂಬವರೇ ಕಾರಣರಾಗಿರುತ್ತಾರೆ ಎಂಬಿತ್ಯಾದಿ

2) ದಿನಾಂಕ: 03/06/2021 ರಂದು 17.00 ಗಂಟೆಗೆ ನೊಂದ ಬಾಲಕಿ ಮಂಗಳೂರು ತಾಲೂಕು ಮುತ್ತೂರು ಗ್ರಾಮದ ಮಾರ್ಗದಂಗಡಿ ಬಳಿ ಇರುವ ತನ್ನ ಮನೆಯಲ್ಲಿರುವ ಸಮಯ ನೊಂದ ಬಾಲಕಿಯ ನೆರೆಮನೆಯ ನಿವಾಸಿ ಹಮೀದ್ ಎಂಬಾತನು, ನೊಂದ ಬಾಲಕಿಯ ಮನೆಗೆ ಅಕ್ರಮ ಪ್ರವೇಶ ಮಾಡಿ, ಏಕಾಏಕಿ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿಯ ಎದೆಯ ಭಾಗಕ್ಕೆ ಕೈಹಾಕಿ ಎಳೆದಾಡಿ ಮಾನ ಭಂಗ ಮಾಡಲು ಪ್ರಯತ್ನಿಸಿದ್ದು, ಪಿರ್ಯಾದಿದಾರರು ಜೋರಾಗಿ ಕೂಗಿದಾಗ, ಆರೋಪಿಯು ನೊಂದ ಬಾಲಕಿಯ ಬಲಕೈಯನ್ನು ಜೋರಾಗಿ ತಿರುಗಿಸಿ  ಈ ವಿಚಾರವನ್ನು ಯಾರಿಗಾದರು ಹೇಳಿದರೆ, ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ ಎಂಬಿತ್ಯಾದಿ

Crime Reported in Konaje PS

ಕೊಣಾಜೆ ಠಾಣಾ ಪಿಎಸ್ಐ Yogishwaran ರವರು ದಿನಾಂಕ 04.06.2021 ರಂದು ರೌಂಡ್ಸ್ ನಲ್ಲಿ ಇರುತ್ತಾ 11.00 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಕೋಡಿಜಾಲ್  ಎಂಬಲ್ಲಿ ತಲುಪುತ್ತಿದ್ದಂತೆ  ಶ್ರೀ ದುರ್ಗಾ ಫ್ಯಾನ್ಸಿ ಎಂಬ ಅಂಗಡಿಯನ್ನು ತೆರೆದಿಟ್ಟು ವ್ಯಾಪಾರ ಮಾಡುತ್ತಿರುವುದು  ಕಂಡು ಬಂದಿದ್ದು , ಸದ್ರಿಯವರು ಪ್ರಸ್ತುತ ಕೋವಿಡ್-19 ರೋಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ, ಕೋವಿಡ್-19 ರೋಗ ಹರಡುವಿಕೆಯ ಬಗ್ಗೆ ತಿಳಿದು, ಮಾನ್ಯ ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘಿಸಿ  ನಿರ್ಲಕ್ಷ್ಯತನ ವಹಿಸಿರುವುದರಿಂದ ಅಂಗಡಿಯವರ ಹೆಸರು ಕೇಳಲಾಗಿ ಅಶೋಕ್, ಪ್ರಾಯ: 44 ವರ್ಷ,ವಾಸ: ದುರ್ಗಾ ನಿಲಯ, ಕೊಣಾಜೆ ಪಂಚಾಯತು ಹತ್ತಿರ, ಕೊಣಾಜೆ ಗ್ರಾಮ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದ್ದು ಸದ್ರಿಯವರ  ವಿರುದ್ದ ಕಲಂ 269 ಐಪಿಸಿ ಮತ್ತು 5(1), 5(3ಎ) ಕರ್ನಾಟಕ ಎಪಿಡಮಿಕ್ ಡಿಸೀಸ್ ಆಕ್ಟ್ ಯಂತೆ ಕ್ರಮ ಕೈಗೊಳ್ಳಲಾಗಿರುತ್ತದೆ ಎಂಬಿತ್ಯಾದಿ.

Crime Reported in Kankanady Town PS

ಕೋವಿಡ್ -19 ಸಾಂಕ್ರಮಿಕ ರೋಗವಾಗಿದ್ದು ಸಾಮಾಜಿಕವಾಗಿ ಹರಡುತ್ತಿರುವ ಕಾರಣದಿಂದ ಪಿರ್ಯಾದಿದಾರರಾದ ಪಿಎಸ್ಐ ಸುಂದರ್ ರಾಜ್ ರವರು ಸಿಬ್ಬಂದಿಯವರೊಂದಿಗೆ ದಿನಾಂಕ 04-06-2021 ರಂದು  ಮೇಲಾಧಿಕಾರಿಗಳ ಆದೇಶದಂತೆ ಠಾಣಾ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ  ತಡೆಗಟ್ಟುವಿಕೆ ಸಂಬಂಧ ಸರ್ಕಾರವು ಲಾಕ್ ಡೌನ್ ವಿಧಿಸಿ ಹೊರಡಿಸಿದ  ಅದೇಶಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆಯೇ ಎಂಬ ಬಗ್ಗೆ ನಿಗಾ ವಹಿಸಲು ಮತ್ತು ಕಾಯ್ದೆಯ ಅದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಪಿತಾನಿಯೋ ಬಳಿ ಸಿಬ್ಬಂದಿಗಳೂಂದಿಗೆ ವಾಹನ ತಪಾಸಣೆ ನಡೆಸುತ್ತಿರುವ ಸಮಯ ಬೆಳಗ್ಗೆ 11:00 ಗಂಟೆಗೆ KA-19-HA-1549 ನೇ ದ್ವಿಚಕ್ರ ವಾಹನದ ಸವಾರನು ಯಾವುದೇ ನಿಯಮ ಪಾಲಿಸದೇ ಸಾರ್ವಜನಿಕವಾಗಿ ತಿರುಗಾಡಿಕೊಂಡು ನಿರ್ಲಕ್ಷ್ಯತನವನ್ನು ಉಂಟು ಮಾಡಿ ಸರ್ಕಾರದ ಆದೇಶವನ್ನು ಪಾಲಿಸದೇ ಆದೇಶವನ್ನು ಉಲ್ಲಂಘಿಸಿರುವುದರಿಂದ ಆರೋಪಿ ವಿರುದ್ದ IPC 1860 (U/s-269); THE DISASTER MANAGEMENT ACT, 2005 (U/s-51(b)) ರಂತೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in Moodabidre PS        

ದಿನಾಂಕ: 04-06-2021 ರಂದು ಠಾಣಾ ಉಪನಿರೀಕ್ಷಕರಾದ ಪಿ.ಎಸ್.ಐ ಸುದೀಪ್ ಎಮ್.ವಿ ಮತ್ತು ಸಿಬ್ಬಂದಿಗಳಾದ ಸಿ.ಪಿ.ಸಿ  ಸುಜನ್ ಮತ್ತು ಸಿ.ಪಿ.ಸಿ  ಯಶವಂತ್ ರವರ ಜೊತೆಯಲ್ಲಿ ಸಮಯ ಸುಮಾರು 10.50 ಗಂಟೆಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆ ತಾಲೂಕು ಮಾರ್ಪಾಡಿ ಗ್ರಾಮದ, ಮೂಡಬಿದರೆ ಮುಖ್ಯರಸ್ತೆಯಲ್ಲಿರುವ ಐ ಯೋಗಿಶ್ ಪ್ರಭು ಅಂಗಡಿಯನ್ನು ಆರೋಪಿಯು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ನಿಗದಿತ ಅವಧಿಯನ್ನು ಮೀರಿ ಅಂಗಡಿಯನ್ನು ತೆರೆಯಲು ಅನುಮತಿ ಇಲ್ಲದೆ ಇದ್ದರೂ ಸಹ ತೆರೆದಿಟ್ಟು ವ್ಯಾಪಾರದಲ್ಲಿ ತೊಡಗಿರುತ್ತಾರೆ. ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಪಿರ್ಯಾದಿದರರು ಆರೋಪಿತರ ವಿರುದ್ಧ IPC 1860 (U/s-269); THE DISASTER MANAGEMENT ACT, 2005 (U/s-51(b))  ರಂತೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

2) ಪಿರ್ಯಾದಿ Mohammed Haneef ದಾರರು ನಿನ್ನೆ ದಿನ ದಿನಾಂಕ: 03-06-2021 ರಂದು ಹೋಟೆಲ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಾ ಮೂಡಬಿದರೆ ಪೇಟೆ ಸಿಹೆಚ್ ಮೆಡಿಕಲ್ ಬಳಿ ತಲುಪುತ್ತಿದ್ದಂತೆ ಸಮಯ ಸುಮಾರು ರಾತ್ರಿ 8.00 ಗಂಟೆಗೆ ಕೆಎ-19-ಎಮ್ ಎಫ್-9406 ನಂಬ್ರದ ಕಾರು ಚಾಲಕನಾದ ನವೀನ್ ಎಂಬಾತನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸಂಜೀವ ಪೂಜಾರಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸಂಜೀವ ಪೂಜಾರಿಯವರು ರಸ್ತೆಗೆ ಬಿದ್ದು ಅವರ ಬಲ ಕಾಲಿಗೆ ಮುಳೆ ಮುರಿತದ ಗಾಯವಾಗಿದ್ದು ಈ ಬಗ್ಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಆಳ್ವಾಸ್ ಆಸ್ಪತ್ರೆಗೆ ಕರೆತಂದಿದ್ದು ಪರೀಕ್ಷಿಸಿದ ವೈದ್ಯರ ಒಳ ರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಎಂಬಿತ್ಯಾದಿ

Crime Reported in Konaje PS

ಪಿರ್ಯಾದಿ Shanaranappa Bhandhari PSI ರವರಿಗೆ  ದಿನಾಂಕ 03.06.2021 ರಂದು ಠಾಣೆಯಲ್ಲಿರುವಾಗ 14:00 ಗಂಟೆಗೆ ಗುಂಡ್ಯಾ ಕಡೆಯಿಂದ ಬೋಳಿಯಾರು- ಕಂಬ್ಲಪದವು ನಾಟೆಕಲ್ ರಸ್ತೆಯಾಗಿ ಕೇರಳಕ್ಕೆ ಎಮ್ ಹೆಚ್ 14- ಜಿಡಿ-0561 ನೇ ಕೆಂಪು ಬಣ್ಣದ ಕಾರಿನಲ್ಲಿ ಮೂವರು ಯುವಕರು ಮಾದಕ ವಸ್ತುವಾದ ನಿಷೇದಿತ ಎಮ್ ಡಿ ಎಮ್ ಎ ಸಾಗಿಸುತ್ತಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಹಾಗೂ ಸಿಸಿಬಿ ಅಧಿಕಾರಿ ಸಿಬ್ಬಂದಿಯೊಂದಿಗೆ ಸುಮಾರು 15:45 ಗಂಟೆಗೆ  ಕೊಣಾಜೆ ಗ್ರಾಮದ ಗಣೇಶ್ ಮಹಲ್ ಎಂಬಲ್ಲಿಗೆ  ತಲುಪಿ ಕಾಯುತ್ತಿದ್ದಾಗ ಸುಮಾರು 16;15 ಗಂಟೆಗೆ ಕಂಬ್ಲಪದವು ಕಡೆಯಿಂದ ಕೆಂಪು ಬಣ್ಣದ ಕಾರನ್ನು ನಿಲ್ಲಿಸಿ ನೋಡಲಾಗಿ ಸದ್ರಿ ಕಾರಿನ ಮುಂಬಾಗದ ಡ್ಯಾಷ್ ಬೊರ್ಡಿನಲ್ಲಿದ್ದ 140 ಗ್ರಾಂ ಎಮ್ ಡಿ ಎಮ್ ಎ ಎಂಬ ಮಾದಕ ವಸ್ತುವನ್ನು ಹಾಗು ಅಬ್ದುಲ್ ಮುನಾಫ್ ರವರ ಬಳಿ ಇದ್ದ 10 ಗ್ರಾಂ ಎಮ್ ಡಿ ಎಮ್ ಎ ಎಂಬ ಮಾದಕ ವಸ್ತುವನ್ನು ಮತ್ತು ಮಹಮ್ಮದ್ ಮುಝಾಂಬಿಲ್ ಎಂಬುವವರಿಂದ 10 ಗ್ರಾಂ ಎಮ್ ಡಿ ಎಮ್ ಎ ಎಂಬ ಮಾದಕ ವಸ್ತುವನ್ನು, ಅಹಮ್ಮದ್ ಮಸೂಕ್ ಎಂಬುವವರ ಬಳಿ ಇದ್ದ 10 ಗ್ರಾಂ ಎಮ್ ಡಿ ಎಮ್ ಎ ಎಂಬ ಮಾದಕ ವಸ್ತುವನ್ನು ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿದ್ದುದರಿಂದ, ಆರೋಪಿಗಳನ್ನು ಮತ್ತು ಅವರ ಬಳಿ ಇದ್ದ 4 ಮೊಬೈಲ್ ಮತ್ತು ಸಾಗಾಟಕ್ಕೆ ಬಳಸಿದ ಹೊಂಡ ಕಂಪನಿಯ JAZZ ಮಾದರಿಯ ಸುಮಾರು 5 ಲಕ್ಷ ಮೌಲ್ಯದ ಕಾರು ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported in Kankanady Town PS

ಪಿರ್ಯಾದಿ Naveena ASI ರವರು ಕೋವಿಡ್ -19 ಲಾಕ್ ಡೌನ್ ನಿಮಿತ್ತ ಪಡೀಲ್ ಚೆಕ್ ಪಾಯಿಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವಾಹನ ತಪಾಸಣೆ ಮಾಡುತ್ತಿದ್ದ ಸಮಯ ಬೆಳಿಗ್ಗೆ ಸುಮಾರು 11.15 ಗಂಟೆಗೆ ಒಂದು ಕಪ್ಪು ಬಣ್ಣದ ರೋಯಲ್ ಎನ್ ಫೀಲ್ಡ್  ಮೋಟಾರು ಸೈಕಲ್ ಬರುತ್ತಿರುವುದನ್ನು ಗಮನಿಸಿ, ಸದ್ರಿ ಸವಾರರು ಚಲಾಯಿಸುತ್ತಿದ್ದ ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲದೇ ಇದ್ದು ಹಾಗೂ ಸವಾರ ಹಾಗೂ ಸಹಸವಾರನು ಹೆಲ್ಮೇಟ್ ನ್ನು ಧರಿಸದೇ ಇದ್ದುದನ್ನು ಗಮನಿಸಿ ತಡೆದು ನಿಲ್ಲಿಸಿ ವಿಚಾರಿಸಿದಾಗ ನೀವು ಯಾರು ನಮ್ಮನ್ನು ನಿಲ್ಲಿಸಲು ನಿಮಗೆ ಏನು ಬೇಕು , ನೀವು ಖಾಲಿ ಪೊಲೀಸ್, ನಿಮಗೆ ವಾಹನ ನಿಲ್ಲಿಸುವ ಹಾಗೂ  ಕೇಸು ಮಾಡುವ ಅಧಿಕಾರ ಇದೆಯಾ? ಎಂದು ಹೇಳಿ ಹಿಂದೆ ಇದ್ದ ಸಹ ಸವಾರ ಪಿರ್ಯಾದಿಯ ಸಮವಸ್ತ್ರ ಹಿಡಿದು ಜಗ್ಗಾಡಿದ್ದು, ಅಲ್ಲದೇ ತಳ್ಳಿದ್ದು ಆತನನ್ನು ಹಿಡಿಯುವರೇ ಆತನು  ಬೈಕಿನಿಂದ ಹಾರಿ ಓಡಿ ಹೋಗಿರುತ್ತಾನೆ ಹಾಗೂ ಸದ್ರಿ ಬೈಕ್ ಸವಾರನು  ಮೋಟಾರು ಸೈಕಲನ್ನು ತಕ್ಷಣ ಮುಂದಕ್ಕೆ ಚಲಾಯಿಸಿದ್ದು , ಪಿರ್ಯಾದುದಾರರು ಹಾಗೂ  ಸಿಬ್ಬಂದಿಗಳು ಬೆನ್ನಟ್ಟುವಾಗ ಬೈಕ್ ಸವಾರ ಬೈಕನ್ನು ಬಿಟ್ಟು ಓಡಿ ಹೋಗಿರುತ್ತಾನೆ ಸದ್ರಿ ಮೋಟಾರು ಸೈಕಲಿನ ಸವಾರನ ಹೆಸರು ಟೊಪ್ಪಿ ನೌಫಲ್ ಹಾಗೂ ಸಹ ಸವಾರನ ಹೆಸರು ನಿಶಾಕ್ @ ಪುಚ್ಚೆ ನಿಶಾಕ್ ಎಂಬುದಾಗಿದ್ದು, ಸದ್ರಿ  ಟೊಪ್ಪಿ ನೌಫಲ್ ಹಾಗೂ   ನಿಶಾಕ್ @ ಪುಚ್ಚೆ ನಿಶಾಕ್ ಎಂಬವರುಗಳು  ಕರ್ನಾಟಕ ಸರ್ಕಾರವು ಹೊರಡಿಸಿದ ಕೋವಿಡ್ -19 ಲಾಕ್ ಡೌನ್  ನಿಯಮವನ್ನು ಉಲ್ಲಂಘಿಸಿ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಬಂದಿದ್ದಲ್ಲದೇ ಕರ್ತವ್ಯದಲ್ಲಿರುವ ಪಿರ್ಯಾದಿಯವರೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿದೆ  ಎಂಬಿತ್ಯಾದಿ

Last Updated: 04-06-2021 05:30 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080