ಅಭಿಪ್ರಾಯ / ಸಲಹೆಗಳು

Crime Reported in  Traffic South PS

ಪಿರ್ಯಾದಿದಾರರಾದ ಡೈನಿ ರೋಷನ್ ಡಿಸೋಜಾ ರವರು ದಿನಾಂಕ 04-08-2021 ರಂದು ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ KA-19-EF-1557  ನೇದರಲ್ಲಿ ಮಂಜೇಶ್ವರದ ಕಡೆಯಿಂದ ದೇರಳಕಟ್ಟೆ ಕಡೆಗೆ ಮುಡಿಪು ಮಾರ್ಗವಾಗಿ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 08.30 ಗಂಟೆಗೆ  ಅಸೈಗೋಳಿ ಹತ್ತಿರ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ದೇರಳಕಟ್ಟೆ ಕಡೆಯಿಂದ  ಮುಡಿಪು ಕಡೆಗೆ ಮೋಟಾರ್ ಸೈಕಲ್ ನೊಂದಣಿ  ಸಂಖ್ಯೆ  KA-19-HG-5886 ನೇದನ್ನು ಸವಾರ ಅಜಿತ್ ಚಾಕೋ ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡು ಮೊಟಾರ್ ಸೈಕಲ್ ಸವಾರರು ರಸ್ತೆಗೆ ಬಿದ್ದು, ಪಿರ್ಯಾದಿದಾರರ  ಬಲಕೈ ಬೆರಳುಗಳಿಗೆ ತರಚಿದ ರಕ್ತಗಾಯ, ಎಡಕೈ ಬೆರಳುಗಳಿಗೆ ಗುದ್ದಿದ ರೀತಿಯ ಗಾಯ ಹಾಗೂ  ಬಲಕಾಲಿನ ಪಾದದ ಮೇಲೆ ಮೂಳೆ ಮುರಿತದ ಗಾಯ  ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೆ ಸಣ್ಣ ಪುಟ್ಟ ಗಾಯ ಉಂಟಾಗಿದ್ದವರನ್ನು ಅಲ್ಲಿ ಸೇರಿದ ಜನರು ಆಟೋರಿಕ್ಷಾವೊಂದರಲ್ಲಿ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ

Crime Reported in  Surathkal PS         

ದಿನಾಂಕ 04/08/2021 ರಂದು ಪಿರ್ಯಾದಿದಾರರಾದ ಶ್ರೀಮತಿ ವಿಧ್ಯಾ ಇವರು ಸುರತ್ಕಲ್ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ನ 3ನೇಯ ಮಹಡಿಯಲ್ಲಿರುವ ತನ್ನ ಮನೆಯಿಂದ ತಾನು ಶಿಕ್ಷಕಿಯಾಗಿ ಕೆಲಸ ಮಾಡುವ ವಿಧ್ಯಾದಾಯಿನಿ ಪ್ರೌಡ ಶಾಲೆಯ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಮಧ್ಯಾಹ್ನ 01-10 ಗಂಟೆಗೆ ಧಾರಿ ಮಧ್ಯೆ ಮೇಲ್ಕಾಣಿಸಿದ ಶಾಲೆಯ ಬಳಿ ಇರುವ ಅಂಡರ್ ಪಾಸ್ ನೊಳಗೆ ಎದುರುನಿಂದ ಪ್ರಾಯ ಸುಮಾರು 25 ವರ್ಷದ ಕಪ್ಪು ಬಣ್ಣದ ರೈನ ಕೋರ್ಟ್  ಧರಿಸಿದ ಸುಮಾರು 06 ಅಡಿ ಎತ್ತರದ ಅಪರಿಚಿತ ಯುವಕನು ಏಕಾಏಕಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 02 ಪವನ ಒಂದು ಎಳೆಯ ಮುಷ್ಠಿ ಗಂಟಿನ ಕರಿಮಣಿ ಸರವನ್ನು ಎಳೆದುಕೊಂಡು ಹೋಗಿದಲ್ಲದೇ ಪಿರ್ಯಾದಿದಾರರನ್ನು ನೆಲಕ್ಕೆ ದೂಡಿದ ಪರಿಣಾಮ,ಆಕೆಯ ಬಲಗೈಯ ಮಧ್ಯ ಹಾಗೂ ಉಂಗುರ ಬೆರಳಿಗ್ಗೆ ತರಚಿದ ಗಾಯವಾಗಿರುವುದಾಗಿದೆ. ಮೇಲ್ಕಾಣಿಸಿದ ಕರಿಮಣಿ ಸರದ ಮೌಲ್ಯ ಸುಮಾರು 50,000/- (ಐವತ್ತು ಸಾವಿರ ರೂಪಾಯಿ) ಆಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ

ಇತ್ತೀಚಿನ ನವೀಕರಣ​ : 04-08-2021 08:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080