ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ 05-06-2021 ರಂದು ಪಿರ್ಯಾದಿದಾರರಾದ ಯೋಗೀಶ್ ಕುಮಾರ್ ರವರ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-ER-9709 ನೇಯದರಲ್ಲಿ ಕುಳಾಯಿ ಕಡೆಯಿಂದ ಸುರತ್ಕಲ್ ಕಡೆಗೆ ರಾ ಹೆ 66 ರಲ್ಲಿ ಸವಾರಿ ಮಾಡಿಕೊಂಡು ಬಂದು ಹೊನ್ನಕಟ್ಟೆ ಜಂಕ್ಷನ್ ನಲ್ಲಿ ನಿಲ್ಲಿಸಿದ ಸಮಯ ಬೆಳಿಗ್ಗೆ 07:45 ಗಂಟೆಗೆ ಕುಳಾಯಿಗುಡ್ಡೆ ಕಡೆಯಿಂದ ಕಾರು ನಂಬ್ರ KA-20-Z-6710 ನೇಯದನ್ನು ಅದರ ಚಾಲಕ ವೀರೆಂದ್ರ ಶೆಟ್ಟಿ ಎಂಬವರು ನಿರ್ಲಕ್ಷತನದಿಂದ ಮಾನವಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಾರಿನ ಚಾಲನೆಯ ನಿಯಂತ್ರಣ ತಪ್ಪಿ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿ ನಂತರ ಮುಂದಕ್ಕೆ ಚಲಾಯಿಸಿ ಶ್ರೀ ಗುರು ಗಣೇಶ್ ಫರ್ನಿಚರ್ ಅಂಗಡಿಯ ಎದುರು ನಿಲ್ಲಿಸಿದ್ದ ಕಾರು ನಂಬ್ರ KA-19-D-6201 ನೇಯದಕ್ಕೆ ಡಿಕ್ಕಿ ಪಡಿಸಿದ ಪರಿಣಾಮ KA-19-D-6201 ನೇ ನಂಬ್ರದ ಕಾರು ಮುಂದಕ್ಕೆ ಚಲಸಿ ಶ್ರೀ ಗುರು ಗಣೇಶ್ ಫರ್ನಿಚರ್ ಅಂಗಡಿಯ ಶಲ್ಟರ್ ಬಾಗಿಲಿಗೆ ಡಿಕ್ಕಿಯಾಗಿದ್ದು ಈ ಅಪಘಾತದಿಂದ ಪಿರ್ಯಾದಿದಾರರ ತಲೆಗೆ ಗುದ್ದಿದ ಗಾಯವಾಗಿ ಅವರ ಬೈಕ್ ಸಂಪೂರ್ಣ ಜಖಂಗೊಂಡು ಹಾಗೂ ಶ್ರೀ ಗುರು ಗಣೇಶ್ ಫರ್ನಿಚರ್ ಅಂಗಡಿಯ ಎದುರು ನಿಂತಿದ್ದ ಕಾರಿನ ಬಲಬದಿ ಹಾಗೂ ಹಿಂಬದಿ ಸಂಪೂರ್ಣ ಜಖಂಗೊಂಡು ಹಾಗೂ ಶ್ರೀ ಗುರು ಗಣೇಶ್ ಫರ್ನಿಚರ್ ಅಂಗಡಿಯ ಶಲ್ಟರ್ ಬಾಗಿಲು ಜಖಂಗೊಂಡು ಅಪಘಾತ ಪಡಿಸಿದ ಕಾರು ಸಹ ಜಖಂಗೊಂಡು ಅದರ ಚಾಲಕನ ತಲೆಗೆ ಗುದ್ದಿದ ಗಾಯವಾಗಿರುವುದಾಗಿ ಪಿರ್ಯಾದಿ ಸಾರಾಂಶ.

Crime Reported in Moodabidre PS

ದಿನಾಂಕ: 05-06-2021 ರಂದು ಠಾಣಾ ಉಪನಿರೀಕ್ಷಕರಾದ ಪಿ.ಎಸ್.ಐ ಸುದೀಪ್ ಎಮ್.ವಿ ಮತ್ತು ಸಿಬ್ಬಂದಿಗಳಾದ ಸಿ.ಪಿ.ಸಿ ಪ್ರದೀಪ್ ಮತ್ತು ಸಿ.ಪಿ.ಸಿ ಯಶವಂತ್ ರವರ ಜೊತೆಯಲ್ಲಿ ಸಮಯ ಸುಮಾರು 10.40 ಗಂಟೆಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆ ತಾಲೂಕು ಮಾರ್ಪಾಡಿ ಗ್ರಾಮದ, ಮೂಡಬಿದರೆಯ ಮುಖ್ಯ ರಸ್ತೆಯ ಬಳಿಯಿರುವ ಜೈರಾಮ್ ಟೀ ಟ್ರೇಡರ್ಸ್ ಅಂಗಡಿಯನ್ನು ಆರೋಪಿಯು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ನಿಗದಿಪಡಿಸಿದ ಅವಧಿಯನ್ನು ಮೀರಿ ಅಂಗಡಿಯನ್ನು ತೆರೆದಿಟ್ಟು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ವ್ಯವಸ್ಥೆ ಮಾಡದೆ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿರುವುದು ಎಂಬಿತ್ಯಾದಿ.

Crime Reported in Kankanady Town PS

 ಪಿರ್ಯಾದು Mrs. Rovena Seqveira (54)ರವರ  ಗಂಡ ವಿವಿನ್ ಸಿಕ್ವೇರಾರವರು ಕೋವಿಡ್ ರೋಗಕ್ಕೆ ತುತ್ತಾಗಿ  ದಿನಾಂಕ 28-04-2021 ರಂದು ಇಂಡಿಯಾನ  ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 30-04-2021 ರಂದು ವಿವಿನ್ ಸಿಕ್ವೇರಾರವರನ್ನು ನೋಡಿಕೊಳ್ಳಲು, ಕೇರ್ ಟೇಕರ್  ಆಗಿ  ಆಶಾ  ಹೋಮ್ ನರ್ಸ್ ಸ್ ರವರ ಮುಖೇನ ಆರೋಪಿ ಫೈಜಿರವರನ್ನು ನೇಮಕ ಮಾಡಿದ್ದು, ಈ ಸಮಯ ಮೋಸದಿಂದ ಅವರ ಡೆಬಿಟ್  ಕಾರ್ಡ್ ನ ಪಿನ್ ನಂಬರನ್ನು ಪಡೆದಿರುತ್ತಾನೆ. ದಿನಾಂಕ 18-05-2021 ರಂದು  ಚಿಕಿತ್ಸೆ ಫಲಾಕಾರಿಯಾಗದೆ ವಿವಿಎನ್ ಸಿಕ್ವೇರಾರವರು ಮೃತಪಟ್ಟಿರುತ್ತಾರೆ. ಪೈಜಿರನು ಕೇರ್ ಟೇಕರ್ ಆಗಿ ಕೆಲಸ ಮಾಡುವ ಸಮಯದಲ್ಲಿ ವಿವಿಎನ್ ಸಿಕ್ವೇರಾರವರ ಕೆನಾರ ಬ್ಯಾಂಕಿನ ಡೇಬಿಟ್   ಕಾರ್ಡ್ ನ್ನು ಕಳ್ಳತನ ಮಾಡಿ ದಿನಾಂಕ 01-05-2021 ರಿಂದ ದಿನಾಂಕ 26-05-2021 ರ ಮಧ್ಯೆ  ಒಟ್ಟು 3,77,000/- ರೂಗಳನ್ನು  ಡ್ರಾ ಮಾಡಿ ಮೋಸದಿಂದ ಕಳವು ಮಾಡಿರುವುದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 05-06-2021 06:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080