ಅಭಿಪ್ರಾಯ / ಸಲಹೆಗಳು

Crime Reported in  Mangalore North PS

ಪಿರ್ಯಾದಿ NABI BEGUM LASKAR ರವರು ಹಾಗೂ ಅವರ ಪತಿ ಹಬಿಜುರ್ ರಹಮಾನ್ ಲಷ್ಕರ್(24) ರವರು ಮಂಗಳೂರು ಬಂದರ್ ನಲ್ಲಿರುವ ಅನ್ಸಾರಿ ರಸ್ತೆಯ ವಿ.ಆರ್.ಪಿ.ಎಂ. ಬಿಲ್ಡಿಂಗ್ 1ನೇ ಮಹಡಿಯಲ್ಲಿ ವಾಸ ಮಾಡಿಕೊಂಡಿದ್ದು, ಅವರ ಪತಿಯು ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 02.07.2021 ರಂದು ಸಂಜೆ 17:00 ಗಂಟೆಗೆ ಮನೆಯಿಂದ ಹೋದವರು ಈ ವರೆಗೆ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಕಾಣೆಯಾದ ಹಬಿಜುರ್ ರಹಮಾನ್ ಲಷ್ಕರ್ ರವರನ್ನು ಪತ್ತೆ ಮಾಡಿಕೊಡಬೇಕೆಂಬಿತ್ಯಾದಿ ನೀಡಿದ ಪಿರ್ಯಾದಿ.

ಕಾಣೆಯಾದ ಗಂಡಸಿನ ಚಹರೆ: ಹೆಸರು- ಹಬಿಜುರ್ ರಹಮಾನ್ ಲಷ್ಕರ್, ಪ್ರಾಯ 24, ತಂದೆ: ಅಬ್ದುಲ್ ಹಸೀಂ ಲಷ್ಕರ್, ಎತ್ತರ 5 ಅಡಿ,ಸಾಧಾರಣ ಮೈ ಕಟ್ಟು, ಗೋಧಿ ಮೈಬಣ್ಣ, ಕಪ್ಪು ಕೂದಲು, ಹೂಗಳಿರುವ ನೀಲಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಮಾತನಾಡುವ ಭಾಷೆ: ಅಸ್ಸಾಮಿ, ಹಿಂದಿ.

Crime Reported in  Mangalore East PS

ದಿನಾಂಕ:02-07-2021 ರಂದು ಸಂಜೆ 5-30 ಗಂಟೆಯಿಂದ ದಿನಾಂಕ:05-07-2021 ರಂದು ಬೆಳಿಗ್ಗೆ 7-30 ಗಂಟೆಗೆ  ಮಂಗಳೂರು ನಗರದ ಬಲ್ಮಠದಲ್ಲಿರುವ ಮೆಪಲ್  ಶೋ ರೋಮ್ ಗೆ ಯಾರೋ ಕಳ್ಳರು ಶೋ ರೂಮ್ ನ ಹಿಂಬದಿಯ ಕಿಟಿಕಿಯ ಸರಳನ್ನು ಯಾವುದೋ ಆಯುಧದಿಂದ ತುಂಡು ಮಾಡಿ ಶೋ ರೂಮ್ ನ ಒಳಗೆ ಹೋಗಿ ಶೋ ರೂಮ್ ನೊಳಗೆ ಕಪಾಟಿನಲ್ಲಿರಿಸಿದ ಬೆಲೆ ಬಾಳುವ ಮೊಬೈಲ್ ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತುಗಳನ್ನು ಪರಿಶೀಲಿಸಿ ಮುಂದಕ್ಕೆ ಇದರ ನಿಖರವಾದ ಮಾಹಿತಿಯನ್ನು ನೀಡುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

2) ಪಿರ್ಯಾದಿದಾರರಾದ ಲಕ್ಕಪ್ಪ ರವರು ರವರು ತನ್ನ ಬಾಬ್ತು  ಕೆಎ 19-ಇ.ಎಫ್- 8921 ನೇ ಹೀರೋ ಹೋಂಡಾ ಸ್ಪ್ಲೆಂಡರ್ ಪ್ರೋ ಬೈಕ್ ನ್ನು ದಿನಾಂಕ: 26-06-2021 ರಂದು ಸಂಜೆ 6-00 ಗಂಟೆಗೆ ನಗರದ  ಪಂಪವೆಲ್ ನ ಪ್ರಮೋದ್ ನರ್ಸರಿ ಗಾರ್ಡನ ಬಳಿ ಬೈಕ್ ನ್ನು ಇಟ್ಟು  ನರ್ಸರಿ  ಹೋಗಿ ವಾಪಾಸು ಸಂಜೆ 6-30 ಗಂಟೆಗೆ ಬಂದು ನೋಡಿದಾಗ  ಅಲ್ಲಿ ಪಿರ್ಯಾದಿದಾರರ ಬೈಕ್ ಇಲ್ಲದೇ ಇದ್ದು,  ಪಿರ್ಯಾದಿದಾರರ ಹೀರೋ ಹೋಂಡಾ ಸ್ಪ್ಮೇಂಡರ್ ಪ್ರೋ ಬೈಕನ್ನು ದಿನಾಂಕ: 26-06-2021 ರಂದು ಸಂಜೆ 6-00 ಗಂಟೆಯಿಂದ ಸಂಜೆ 6-30 ಗಂಟೆಗೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿದ್ದು, ಇದರ ಮೌಲ್ಯ ರೂ: 15,000/- ಆಗಬಹುದು. ಇದರ ಚಾಸಿಸ್ ನಂ: MBLHA10ASC9G22054, ಇಂಜಿನ್ ನಂಬರ್: HA10ELC9G22640 ಮಾಡೆಲ್- 2012, ಬಣ್ಣ: ಕಪ್ಪು ಪರ್ಪಲ್  ಆಗಿರುತ್ತದೆ ಪಿರ್ಯಾದಿದಾರರು ಕಳವಾದ ತನ್ನ ಬೈಕ್ ನ್ನು ನಗರ ಎಲ್ಲಾ ಕಡೆ ಹುಡಕಾಡಿದ್ದು,  ಪತ್ತೆಯಾಗದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Crime Reported in  Kankanady Town PS

ಪಿರ್ಯಾದುದಾರ ಸೆಂಥಿಮಲ್ ಮಗೇಂದ್ರನ್  ಎಂಬವರು ತಾನು ಚಾಲಕನಾಗಿ  ಕೆಲಸ ಮಾಡುತ್ತಿದ್ದ  ಲಾರಿ ನಂಬ್ರ TN-23 BD-0474 ನೇದರಲ್ಲಿ   ದಿನಾಂಕ 04-07-2021 ರಂದು ಮಧ್ಯಾಹ್ನ 12.00 ಗಂಟೆಗೆ ಬಾಡಿಗೆಗಾಗಿ ಮಂಗಳೂರು ನಗರದ ಪಡೀಲ್ ನಲ್ಲಿರುವ ಐಡಿಯಾಲ್ ಟ್ರಾನ್ಸ್ ಪೋರ್ಟ್ ಕಛೇರಿಯ ಪಾರ್ಕಿಂಗ್ ಯಾರ್ಡ್ ನಲ್ಲಿ ಲಾರಿಯಲ್ಲಿ  ಬಾಡಿಗೆಗಾಗಿ  ಕಾಯುತ್ತಿದ್ದಂತೆ, ಇದೇ ಯಾರ್ಡ್ ನಲ್ಲಿ  ಪಾರ್ಕಿಂಗ್ ನಲ್ಲಿದ್ದ ಪಿರ್ಯಾದುದಾರಾರಿಗೆ ಪರಿಚಯವಿರುವ ಲಾರಿಯ ಚಾಲಕನಾದ ಆಯ್ಯಪ್ಪನ್ ಎಂಬಾತನು ಪಿರ್ಯಾದುದಾರರ  ಲಾರಿಯ  ಕ್ಯಾಬಿನ್ ಒಳಗೆ ಬಂದಾಗ    ಪಿರ್ಯಾದುದಾರರು  ಆಯ್ಯಪ್ಪನ್ ರವರಲ್ಲಿ ಆತನ ಸಂಬಂಧಿಕರ  ದ್ವಿಚಕ್ರ ವಾಹನದ ಲೋನ್ ಪಾವತಿಸದ  ವಿಚಾರವಾಗಿ  ಮಾತನಾಡುತ್ತಿದ್ದಂತೆ ಮಾತಿಗೆ ಮಾತು ಬೆಳೆದು ಕೋಪಗೊಂಡ   ಆಯ್ಯಪ್ಪನ್ ಪಿರ್ಯಾದುದಾರರ ಲಾರಿಯ ಕ್ಯಾಬಿನ್ ನಲ್ಲಿದ್ದ  ಚಾಕುವನ್ನು ತೆಗೆದು  ಪಿರ್ಯಾದುದಾರರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಪಿರ್ಯದುದಾರರ ಹೊಟ್ಟೆಯ ಎಡಭಾಗಕ್ಕೆ ತೀವ್ರವಾಗಿ ಚುಚ್ಚಿ, ಕೊಲೆಗೆ ಯತ್ನಿಸಿದಾಗ ಪಿರ್ಯಾದುದಾರರು ಲಾರಿಯಿಂದ ಕೆಳಗಡೆ ಹಾರಿ ತಪ್ಪಿಸಿಕೊಂಡಿದ್ದು,  ನಂತರ ಚಿಕಿತ್ಸೆಯ ಕುರಿತು   ಮಂಗಳೂರಿನ  ಓಮೆಗಾ ಆಸ್ಪತ್ರೆಗೆ ಓಳರೋಗಿಯಾಗಿ   ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

Crime Reported in  Moodabidre PS

ಪಿರ್ಯಾದಿ DIVAKAR RAI PSI ರವರು ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಾಯಂಕಾಲ 6-00 ಗಂಟೆಗೆ ದೊರೆತ ಖಚಿತ ವರ್ತಮಾನವನ್ನಾಧರಿಸಿ ಮೂಡಬಿದ್ರೆ ತಾಲೂಕು ಪಡುಮಾರ್ನಾಡು ಗ್ರಾಮದ ಬಸವನಕಜೆ ಎಂಬಲ್ಲಿರುವ ಆರೋಪಿ ಮಹಾಬಲ ಶೆಟ್ಟಿ ಪ್ರಾಯ: 65 ವರ್ಷರವರು ತನ್ನ ಮಗ ರಾಜೇಶ್, ಪ್ರಾಯ: 32 ವರ್ಷರವರ ಜೊತೆಗೆ ಸೇರಿಕೊಂಡು ತನ್ನ ಮನೆಯ ಅಂಗಳದಲ್ಲಿರುವ ದೈವದ ಗುಡಿಯ ಹಿಂಭಾಗದಲ್ಲಿ ತೆರೆದ ಸ್ಥಳದಲ್ಲಿ ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕುರಿತು ಸರಕಾರದ ನಿಯಮಾವಳಿಯಂತೆ ಸಾಮಾಜಿಕ ಅಂತರವನ್ನು ಕಾಪಾಡಬೇಕಿದ್ದರೂ ಗ್ರಾಹಕರನ್ನು ಗುಂಪು ಗುಂಪಾಗಿ ಸೇರಿಸಿಕೊಂಡು ಮದ್ಯ ಖರೀದಿಗೆ ಅವಕಾಶ ಮಾಡಿಕೊಟ್ಟು ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆ ಇದೆ ಎಂದು ತಿಳಿದೂ ಸರಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ಯಾವುದೇ ಪರಿವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಸಾಯಂಕಾಲ 6-45 ಗಂಟೆಗೆ ದಾಳಿ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ರೂ: 15201-00 ಮೌಲ್ಯದ ಮದ್ಯವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವುದು ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 05-07-2021 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080