ಅಭಿಪ್ರಾಯ / ಸಲಹೆಗಳು

Crime Reported in  Mangalore East PS

1) ದಿನಾಂಕ: 03-08-2021 ರಂದು ಸಂಜೆ 7-30 ಗಂಟೆಗೆ ಮಂಗಳೂರು ನಗರದ    ಬಿಜೈ ವೈನ್ ಗೇಟ್ ಎದುರುಗಡೆ ವಾಹನ ಪಾರ್ಕಿಂಗ್ ನ  ತೆರೆದ ಸ್ಥಳದಲ್ಲಿ   ಹಣವನ್ನು ಪಣವಾಗಿಟ್ಟು ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯನ್ನು  ಖಚಿತ ಪಡಿಸಿಕೊಂಡು ಸಿಬ್ಬಂದಿಗಳ ಜೊತೆ 21-40 ಗಂಟೆಗೆ ಸದ್ರಿ ಪಾರ್ಕಿಂಗ್ ಸ್ಥಳವನ್ನು ಸುತ್ತುವರಿದು ನೋಡಿದಾಗ, ವಿದ್ಯುತ್ ದೀಪದ ಬೆಳಕಿನಲ್ಲಿ ವಾಹನ ಪಾರ್ಕಿಂಗ್  ನೆಲಕ್ಕೆ  ದಿನಪತ್ರಿಕೆಯನ್ನು ಹಾಸಿ, ವೃತ್ತಾಕಾರವಾಗಿ ಒಟ್ಟು 8 ಜನರು ಕುಳಿತುಕೊಂಡಿದ್ದು, ಓರ್ವನು ಕೈಯಲ್ಲಿ ಇಸ್ಪೀಟ್ ಕಾರ್ಡ್ ಗಳನ್ನು ಚಾಪೆ ಮೇಲೆ ಹಾಕುತ್ತಿದ್ದು, ಕುಳಿತುಕೊಂಡಿದ್ದ ಉಳಿದವರು ಉಲಾಯಿ ಪಿದಾಯಿ  ಎಂಬುದಾಗಿ ಜುಗಾರಿ ಆಟ ಆಡುತ್ತಿದ್ದು ಸದ್ರಿಯವರುಗಳನ್ನು ಸುತ್ತುವರಿದು ಹಿಡಿದು ಜುಗಾರಿ ಆಟಕ್ಕೆ ಉಪಯೋಗಿಸಿರುವ ನಗದು ಹಣ ರೂ. 24,410/-  ಮತ್ತು ಇಸ್ಪೀಟ್ ಎಲೆಗಳು-52 ಸ್ವಾದೀನ ಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಕಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

2) ಮಂಗಳೂರು ಪೂರ್ವ ಠಾಣೆ ಹೆಚ್ ಸಿ 461 ಲೋಕೇಶ್ ರವರು ದಿನಾಂಕ: 5-8-2021 ರಂದು ಬೆಳಿಗ್ಗೆ: 10-30 ಗಂಟೆಗೆ ರೌಂಡ್ಸ್ ನಲ್ಲಿದ್ದ  ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ  ಮಂಗಳೂರು ನಗರ ಕದ್ರಿ ಶಿವಭಾಗ್ ನ 1 ನೇ ಅಡ್ಡ ರಸ್ತೆಯಲ್ಲಿರುವ ದಯಾ ಸಾಗರ್ ಆಪಾರ್ಟ್ ಮೆಂಟ್ ನ  5ನೇ ಮಹಡಿಯಲ್ಲಿರುವ ಬೀಮಪ್ಪ ನಿವಾಸ ಎಂಬ ಪ್ಲಾಟ್ ನಲ್ಲಿ 6 ರಿಂದ 7 ಜನರು ಹುಡುಗರು ಗಾಂಜಾ ಸೇವನೆ ಮಾಡಿಕೊಂಡು ಗಾಂಜಾವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಬಗ್ಗೆ ಮಾಹಿತಿ ಬಂದಂತೆ ಸ್ಥಳಕ್ಕೆ ದಾಳಿ ನಡಸಿ  1) ವಿಷ್ಣು 2) ವಿಷ್ಣು ಪಿ.ಆರ್ 3) ಬಿಪಿನ್ 4) ಶರೀಫ್ 5) ಅಕ್ಷಯ್ 6) ಸಿಯಾದ್ 7) ಅಭಿನಂದನ್ ಎಂಬವರುಗಳನ್ನು ವಶಕ್ಕೆ ಪಡೆದು ಅವರ ವಶದಿಂದ ಒಟ್ಟು 825 ಗ್ರಾಂ ಗಾಂಜಾವನ್ನು  ಹಾಗೂ 7 ಮೊಬೈಲ್ ಫೋನ್ ಗಳನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ ಸ್ವಾಧೀನ ಪಡಿಸಿರುವ ಗಾಂಜಾದ ಮೌಲ್ಯ ರೂ 15000/- ಎಂಬಿತ್ಯಾದಿ.

Crime Reported in  Bajpe PS

ಫಿರ್ಯಾದಿ Claren Sicvera ರವರು ದಿನಾಂಕ 26.07.2021 ರಂದು ಸಂಜೆ ವೇಳಗೆ ತಮ್ಮ ಮಾವ ಮೈಕಲ್ ಎಂಬವರ ಮನೆಗೆ ಸ್ನೇಹಿತನ ಮೋಟಾರ್ ಸೈಕಲ್ ನಂಬ್ರ ಕೆಎ-19ಹೆಚ್.ಬಿ-6816 ನೇಯದರಲ್ಲಿ ಬಂದಿದ್ದು, ಬಳಿಕ ವಾಪಾಸ್ಸು ಮನೆ ಕಡೆಗೆ ಬಜಪೆಯಿಂದ ಹೋಗುತ್ತಾ ರಾತ್ರಿ ಸುಮಾರು 9:00 ಗಂಟೆಗೆ ಮಂಗಳೂರು ತಾಲೂಕು, ಬಜಪೆ ಗ್ರಾಮದ, ನಿಸರ್ಗ ಹೊಟೇಲ್ ಬಳಿ ತಲುಪುತ್ತಿದ್ದಂತೆಯೇ ಫಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ಮೊಟಾರ್ ಸೈಕಲ್ ನಂಬ್ರ ಕೆಎ-19ಹೆಚ್.ಎಫ್-6678 ನೇಯದನ್ನು ಅದರ ಸವಾರ ಸಾಹಿಲ್ ಎಂಬಾತನು ಯಾವುದೇ ಸೂಚನೆ ನೀಡದೇ ಏಕಾಏಕಿ ಬಲಕ್ಕೆ ಚಲಾಯಿಸಿದ ಪರಿಣಾಮ ಫಿರ್ಯಾದಿದಾರರ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರ ಮುಖಕ್ಕೆ ಮತ್ತು ಎಡಕಣ್ಣಿಗೆ ಗುದ್ದಿದ ಗಾಯವಾಗಿದ್ದು ಗಾಯಾಳು ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿ ಇಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಆರೋಪಿಯು ಫಿರ್ಯಾದಿದಾರರ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ನಂತರ ಆಸ್ಪತ್ರೆಯ ಬಿಲ್ಲ್ ಅನ್ನು ಭರಿಸದೇ ಇದ್ದುದರಿಂದ ಈ ದಿನ ಠಾಣೆಗೆ ಬಂದು ಫಿರ್ಯಾದಿ ನೀಡಿರುವುದಾಗಿದೆ” ಎಂಬಿತ್ಯಾದಿ.

2) ಮಾನ್ಯ 3ನೇ ಸಿ.ಜೆ.ಎಂ. ನ್ಯಾಯಾಲಯದಿಂದ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಬಂದ ಖಾಸಗಿ ಫಿರ್ಯಾದಿಯ ಸಾರಾಂಶವೇನೆಂದರೆ, “ಆರೋಪಿ ಸಲ್ಮಾ ಎಸ್. ಎಂಬಾಕೆಯು ಫಿರ್ಯಾದಿ ಇಮ್ರಾನ್ ಇವರ ಮೊಬೈಲ್ ನಂಬರನ್ನು ಯಾರಿಂದಲೋ ಪಡೆದುಕೊಂಡು ಮೊದ ಮೊದಲು ಸಾಮಾನ್ಯವಾಗಿ ಮಾತನಾಡಿ ನಂತರ ಫಿರ್ಯಾದಿದಾರರನ್ನು ಪುಸಲಾಯಿಸಿ ಕೆಲವು ಕಡೆ ಕರೆದು ಕೊಂಡು ಹೋಗಿ ಫೋಟ್ ತೆಗೆದಿದ್ದು, ಆ ನಂತರ ಆ ಫೊಟೋವನ್ನು ಹಿಡಿದು ಫಿರ್ಯಾದಿದಾರರ ತಮ್ಮ, ಅಜ್ಜಿ ಚಿಕ್ಕಮ್ಮರವರನ್ನು ಬೆದರಿಸಿ ಫಿರ್ಯಾದಿಯೊಂದಿಗೆ ಮದುವೆಯಾಗಬೇಕೆಂದು ತಾಕೀತು ಮಾಡಿರುತ್ತಾರೆ. ನಂತರ ಫಿರ್ಯಾದಿಯನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿ ಬಜಪೆಯ ಜಮಾತಿಗೆ ಸೇರಿದವರೆಂದು ತಿಳಿಸುವ ನಕಲಿ ಪತ್ರವನ್ನು ಸೃಷ್ಟಿಸಿ ಸಲ್ಮಾಳ ತಮ್ಮ ರಮೀಝ್, ಚಿಕ್ಕಮ್ಮ ಕಮರ್, ಅಜ್ಜಿ ಅಮೀನ ಮತ್ತು ಇಬ್ಬರು ಗೂಂಡಾಗಳ ಜೊತೆ ಸೇರಿ ಫಿರ್ಯಾದಿಗೆ ಸಲ್ಮಾಳನ್ನು ಮದುವೆ ಆಗಬೇಕೆಂದು ಬೆದರಿಸಿ ಅಲ್ಲಿಯ ಮಸೀದಿಗೆ ಕರೆದುಕೊಂಡು ಹೋಗಿ ನಿಖಾ ಮಾಡಿಸಿ ಫಿರ್ಯಾದಿದಾರರ ಕಿಸೆಯಲ್ಲಿದ್ದ ರೂ. 20,000/- ವನ್ನು ಕಸಿದುಕೊಂಡಿರುತ್ತಾರೆ. ಆರೋಪಿ ಸಲ್ಮಾಳಿಗೆ ಈ ಮೊದಲು ಮದುವೆಯಾಗಿದ್ದು  ಆಕೆಗೆ ಒಂದು ಗಂಡು ಮಗು ಇರುವ ವಿಷಯ ಮತ್ತು ಆಕೆಯು ಎರಡನೇ ಮದುವೆಯನ್ನು ಆನ್ ಲೈನ್ ಮೂಲಕ ಮಾಡಿದ್ದನ್ನು ಫಿರ್ಯಾದಿದಾರರು ಪ್ರಶ್ನಿಸಿದಕ್ಕೆ ಸಲ್ಮಾ ಮತ್ತು ಇತರರು ಸೇರಿಕೊಂಡು ಬ್ಯಾಟಿನಿಂದ ಮತ್ತು ಕೈಯಿಂದ ಹಲ್ಲೆ ನಡೆಸಿರುವುದಾಗಿದೆ” ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 05-08-2021 07:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080