Crime Reported in Mangalore Women PS
ದಿನಾಂಕ 5/04/2021 ರಂದು ರಾತ್ರಿ ಸುಮಾರು 9 ಗಂಟೆಗೆ ಪಿರ್ಯಾದುದಾರರು ರಾಯಿಕಟ್ಟೆ ಹೌಸ್ ಪಂಜಿಮೊಗರು ಮಂಗಳೂರು ನಲ್ಲಿರುವ ಅವರ ಮನೆಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪಿರ್ಯಾದಿದಾರರ 4 ವರ್ಷದ ಅಪ್ರಾಪ್ತ ಬಾಲಕಿ ಅವರ ಬಾಡಿಗೆ ಮನೆಯ ಹಿಂಬಾಗಿಲಿನಿಂದ ಓಡಿಕೊಂಡು ಬಂದು GANESH N(A1) PANJIMOGARU, MANGALURU ಎಂಬಾತನು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿಸಿರುವ ಮೇರೆಗ ಆರೋಫಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ
Crime Reported in Urva PS
ಪಿರ್ಯಾದಿ HEMAVATHI (30) ರವರು ದಿನಾಂಕ 05-04-2021 ರಂದು ಬೆಳಿಗ್ಗೆ 11-45 ಗಂಟೆಗೆ ದಡ್ಡಲ್ ಕಾಡ್ ನಲ್ಲಿರುವ ತನ್ನ ತಾಯಿ ಮನೆಗೆ ತಂದೆ ತಾಯಿಯನ್ನು ನೋಡಲು ಮತ್ತು ಆಧಾರ್ ಕಾರ್ಡ್ ಕೊಂಡು ಹೋಗಲು ಬಂದಿದ್ದ ಸಮಯ ಮನೆಯಲ್ಲಿದ್ದ ಪಿರ್ಯಾದಿದಾರರ ಅಕ್ಕ ಚಂದ್ರಕಲಾ ಎಂಬವರು ಪಿರ್ಯಾದಿದಾರರನ್ನು ಉದ್ದೇಶ ಪೂರ್ವಕವಾಗಿ ಜಗಳಕ್ಕೆ ಕರೆದು ಅವಾಚ್ಯಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಮನೆಯಲ್ಲಿದ್ದ ಬಟ್ಟಲಿನಿಂದ ಪಿರ್ಯಾದಿದಾರರ ತೆಲೆಗೆ ಹೊಡೆದು ಗಾಯಗೊಳಿಸಿದ್ದು ಈ ಬಗ್ಗೆ ಪಿರ್ಯಾದಿದಾರರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಮತ್ತು ಹಲ್ಲೆ ಮಾಡಿದ ಚಂದ್ರಕಲಾ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ದೂರು
2) ದಿನಾಂಕ 05-04-2021 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಪಿರ್ಯಾದಿ Chandrakala (33) ರವರ ಅಕ್ಕ ಜಯಶ್ರೀ, ಚಿಕ್ಕಮ್ಮ ಮೋಹಿನಿ, ಮನೆಯಲ್ಲಿದ್ದಾಗ ಪಿರ್ಯಾದಿದಾರರ ತಂಗಿ ಹೇಮಾವತಿ ಎಂಬಾಕೆಯು ಏಕ ಏಕಿ ಮನೆಗೆ ಬಂದು ಮನೆಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಪಿರ್ಯಾದಿದಾರರು ಪೊಲೀಸ್ ವಿನಂತಿಯ ಮೇರೆಗೆ ಬರಲು ತಿಳಿಸಿದ್ದು ಇದನ್ನು ಮೀರಿ ಕಾನೂನು ಉಲ್ಲಂಘನೆ ಮಾಡಿ ಮನೆಯ ಒಳಗಡೆ ಬಂದಾಗ ಬಾಗಿಲು ಹಾಕಿದ್ದು ಆಗ ಆಕೆಯು ಬಾಗಿಲನ್ನು ದೂಡಿ ಬೇವರ್ಸಿ ಬಾಗಿಲು ತಗಿಯುತ್ತಿಯೋ ಇಲ್ಲವೋ ಎಂಬುದಾಗಿ ಅವಾಚ್ಯವಾಗಿ ಬೈದು ಮನೆಯ ಒಳಗಡೆ ಪ್ರವೇಶಿಸಿ ಅಲ್ಲಿಯೇ ಇದ್ದ ಪ್ಲಾಸ್ಟಿಕ್ ಚೈರ್ ನ್ನು ಎತ್ತಿ ಪಿರ್ಯಾದಿದಾರರ ತಲೆಗೆ ಹಲ್ಲೆ ಮಾಡಿರುವುದಲ್ಲದೆ ಪಿರ್ಯಾದಿದಾರರ ತಲೆ ಕೂದಲನ್ನು ಹಿಡಿದು ಎಳೆದ ಪರಿಣಾಮ ತಲೆಯು ಗೋಡೆಗೆ ತಾಗಿ ನೋವುಂಟಾಗಿದ್ದಲ್ಲದೆ ಕೈಯಿಂದ ಹೊಡೆದ ಪರಿಣಾಮ ಮೈಕೈ ಗೆ ನೋವುಂಟು ಮಾಡಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಪಿರ್ಯಾದಿದಾರರನ್ನು ಹಿಡಿದು ಎಳೆದಾಗ ಪಿರ್ಯಾದಿದಾರರ ಚಿಕ್ಕಮ್ಮ ಬಿಡಿಸಲು ಬಂದಿದ್ದು ಆಗ ಅವರಿಗೆ ಕೂಡಾ ಕೈಯಿಂದ ಹೊಡೆದು ನೊವುಂಟು ಮಾಡಿರುತ್ತಾಳೆ ಈ ಹಲ್ಲೆಯಿಂದ ಆಸ್ಪತ್ರೆಗೆ ಹೋಗಿ ಚಿಲಿತ್ಸೆ ಪಡೆದುಕೊಂಡಿರುವುದಿಲ್ಲ. ಈ ಘಟನೆಗೆ ಈ ಹಿಂದೆ ತಂಗಿ ಹೇಮಾವತಿ ಆಕೆಯ ಗಂಡ ಶ್ರೀಧರ, ಅತ್ತೆ ಶಶಿಕಲಾ, ನಾದಿನಿ ಸಂದ್ಯ ಎಂಬವರ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ಇದೇ ದ್ವೇಷದಿಂದ ಹಲ್ಲೆ ಮಾಡಿರುವುದಾಗಿದೆ ಎಂಬಿತ್ಯಾದಿ.
Crime Reported in Mangalore East PS
ಪಿರ್ಯಾದಿ Pramod B Patil ರವರು ಫೆಡರಲ್ ಬ್ಯಾಂಕ್ ನ ನೋಡಲ್ ಆಫೀಸರ್ ಅಗಿದ್ದು ಪಿರ್ಯಾದಿದಾರರು ತನ್ನ ಆದೀನದ ಕಂಕನಾಡಿ ಬ್ರಾಂಚ್ ನ ಫೆಡರಲ್ ಬ್ಯಾಂಕ್ ನ ಸಿ ಡಿ ಎಂ ಮಿಷಿ ನ್ ಗೆ ದಿನಾಂಕ: 23-02-2021 ರಂದು ರಾತ್ರಿ 22-32 ಗಂಟೆಗೆ ಫೆಡರಲ್ ಬ್ಯಾಂಕ್ ಮೂಡಬಿದ್ರಿ ಶಾಖೆಯ ಅಕೌಂಟ್ ನಂಬ್ರ ಹೊಂದಿದ್ದ ಅಬ್ದುಲ್ ಯುವೇಶ್ ಎಂಬವನು 31,500/ ಹಣವನ್ನು ಸಿ ಡಿ ಎಂ ಮಿಷನ್ ನಲ್ಲಿ ಡೆಪೋಸಿಟ್ ಮಾಡಿದ್ದು, ಆ ಪೈಕಿ 2000 ಮಖಬೆಲೆಯ ಮತ್ತು 500 ಮುಖಬೆಲೆಯ 3 ನೋಟುಗಳು ಇದ್ದವು, ದಿನಾಂಕ: 24-02- 2021 ರಂದು ಸಿ ಡಿ ಎಂ ಮಿಷನ್ ಸ್ಥಗಿತ ಗೊಂಡ ಕಾರಣ ಮಿಷನ್ ನ್ನು ಚೆಕ್ ಮಾಡಿದಾಗ ಮಿಷನ್ ನ ಹಣವಿರುವ ಸ್ಥಳದಲ್ಲಿ 2000 ಮುಖ ಬೆಲೆಯ 15 ನೋಟುಗಳು ಹಾಗೂ 500 ಮುಖ ಬೆಲೆಯ ನೋಟುಗಳು ಮಿಷನ್ ನಲ್ಲಿ ಇದ್ದು ಸ್ಥಗಿತ ಗೊಂಡಿದ್ದು ಸದ್ರಿ ನೋಟುಗಳನ್ನು ಮಿಷನ್ ನಿಂದ ಹೊರತೆಗೆದು ಪರಿಶೀಲಿಸಿದಾಗ 2000/- ರೂ ಮುಖ ಬೆಲೆಯ 15 ನೋಟುಗಳು ನಕಲಿ ನೋಟಿನಂತೆ ಕಂಡು ಬಂದಿರುತ್ತದೆ. ಆದುದರಿಂದ ನಕಲಿ ನೋಟನ್ನು ಬ್ಯಾಂಕ್ ನ ಸಿ ಡಿ ಎಂ ಮಿಷ ನ್ ಗೆ ಹಾಕಿದ ವ್ಯಕ್ತಿಯ ಮೇಲೆ ಸೂಕ್ತ ಕಾನೂ ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ
2) ದಿನಾಂಕ: 5-4-2021 ರಂದು ಬೆಳಿಗ್ಗೆ: 6-50 ಗಂಟೆಗೆ ಮಂಗಳೂರು ತಾಲೂಕು ಕಂಕನಾಡಿ ಗ್ರಾಮದ ಬೆಂದೂರ್ ಸೈಂಟ್ ಸೆಬಸ್ಟಿಯನ್ ಚರ್ಚ್ ನ ಪಾರಿಸ್ ಪ್ರೀಸ್ಟ್ ರೆವೆಲೆಂಟ್ ಫಾದರ್ ವಿನ್ಸೆಂಟ್ ಮೊಂತೋರೋ ರವರ ಆಫೀಸ್ ಮತ್ತು ರೂಂಗೆ ಯಾರೋ ಕಳ್ಳರು ಬಂದು ಆಫೀಸ್ ನ ಟೇಬಲ್ ನ ಡ್ರಾವರ್ ನಲ್ಲಿದ್ದ ಮತ್ತು ರೂಮ್ ನ ಕಪಾಟಿನಲ್ಲಿದ್ದ ರೂ: 4,98,605/- ನಗದು ಮತ್ತು ಸುಮಾರು ರೂ.50,000/- ಮೌಲ್ಯದ 12 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿದೆ.
Crime Reported in Ullal PS
ಪಿರ್ಯಾದಿ Pavan (23) ರವರು ದಿನಾಂಕ 04-04-2021 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಮನೆಯಲ್ಲಿದ್ದವರು ರಾತ್ರಿ ಸುಮಾರು 10-50 ಗಂಟೆಯ ಸಮಯಕ್ಕೆ ಕುಂಪಲ ಶಾಲಾ ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಅವರ ಸ್ನೇಹಿತರಾದ ಕಾರ್ತಿಕ್, ಆದಿತ್ಯ, ಒಟ್ಟು ಸೇರಿ ಕಾರ್ತಿಕ್ ನ ಸ್ಕೂಟರ್ ನಲ್ಲಿ ಪಿರ್ಯಾದಿದಾರರು ಚಲಾಯಿಸುತ್ತಾ ಹಿಂಬದಿಯಲ್ಲಿ ಆದಿತ್ಯ ಹಾಗೂ ಕಾರ್ತಿಕನನ್ನು ಕುಳ್ಳಿರಿಸಿಕೊಂಡು ಮನೆಯಿಂದ ಹೊರಟಿದ್ದು ರಾತ್ರಿ 11-00 ಗಂಟೆಗೆ ಪ್ರಕಾಶ್ ನಗರ ಅಜ್ಜನಕಟ್ಟೆಯ ಎದುರು ಬರುತ್ತಿದ್ದಂತೆ ಅಲ್ಲಿನ ಪರಿಸರದ ಕೆಲವು ಜನ ಯುವಕರು ಪಿರ್ಯಾದಿದಾರರ ಸ್ಕೂಟರ್ ನ್ನು ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದರು. ಇವರು ಯಾರು ಎಂದು ನೋಡುವಾಗ ಪಿರ್ಯಾದಿದಾರರಿಗೆ ಪರಿಚಯದ ಪೃಥ್ವಿರಾಜ್, ಅವನ ತಮ್ಮ ಚೇತನ್, ಚಿರಾಂಜನ್, ನಿಶಾಂತ್, ಶಶಿ, ಗೋಡ್ವೀನ್, ಕಿರಣ್ @ ಚೂಚಿ, ರಾಜೇಶ್ @ ಮುನ್ನ ಎಂಬವರುಗಳಾಗಿದ್ದು, ಅವರು ಪಿರ್ಯಾದಿದಾರರನ್ನು ನೀವು ಯಾಕೆ ಇಲ್ಲಿಗೆ ಗಲಾಟೆ ಮಾಡಲು ಬಂದಿದ್ದಿರಾ ಎಂದು ಕೇಳಿದಾಗ ಅದಕ್ಕೆ ಪಿರ್ಯಾದಿದಾರರು ನಾವು ಇಲ್ಲಿಗೆ ಗಲಾಟೆ ಮಾಡಲು ಬಂದಿಲ್ಲ ಎಂದು ಹೇಳುತ್ತಿರುವಾಗಲೇ ಪೃಥ್ವಿರಾಜನು ತನ್ನ ಕೈಯಲ್ಲಿದ್ದ ರಾಡ್ ನಿಂದ ಪಿರ್ಯಾದಿದಾರರ ತಲೆಯ ಬಲಭಾಗಕ್ಕೆ ಹೊಡೆದು ರಕ್ತಗಾಯವಾಗಿರುತ್ತದೆ ಮತ್ತು ಬ್ಯಾಟಿನಿಂದ ಕೂಡ ಹೊಡೆದಿರುತ್ತಾನೆ. ಉಳಿದವರು ಕೈಯಿಂದ ಹೊಡೆದಿರುತ್ತಾರೆ. ನಂತರ ಅಲ್ಲಿಂದ ಪಿರ್ಯಾದಿದಾರರು & ಕಾರ್ತಿಕರವರು ಸ್ನೇಹಿತರಾದ ಸುಧೀರವರ ಮನೆಗೆ ಬಂದಿದ್ದು, ಸುದೀರ್ ರವರು ಪಿರ್ಯಾದಿದಾರರನ್ನು ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಎಂಬುದಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.
2) ದಿನಾಂಕ04-04-2021 ರಂದು ಪಿರ್ಯಾದಿ Sadashiva (42) ರವರ ನೆರೆಮನೆಯವರಾದ ಚೇತನ ಎಂಬುವರು ಪಂಡಿತಹೌಸ್ ನಿಂದ ಪ್ರಕಾಶನಗರದ ಮನೆಗೆ ಹೋಗುತ್ತಿರುವಾಗ ಸುಮಾರು 4-5 ಮಂದಿ ಬೈಕನಲ್ಲಿ ಬಂದವರು ಚೇತನ ಎಂಬುವರನ್ನು ತಡೆದು ನಿಲ್ಲಿಸಿ, ಜೀವ ಬೇದರಿಕೆ ಹಾಕಿರುತ್ತಾರೆ. ಅದೇ ದಿನ ಸುಮಾರು ಸಂಜೆ 07-30 ಗಂಟೆಗೆ ಪಿರ್ಯಾದಿದಾರರ ಮತ್ತು ಅವರ ನೆರೆಮನೆಯವರ ಹತ್ತಿರ ಬಂದಂತಹ ಯುವಕರಾದ ಸಂಜು, ಗೌರವ, ಪವನ್, ಆದಿತ್ಯೆ, ಜ್ಞಾನೇಶ(ಚಿನ್ನು) ಮುಂತಾದವರು ಬಂದು ಕಲ್ಲು ಮತ್ತು ಬಾಟಲಿಯನ್ನು ಎಸೆದು ಹಲ್ಲೆ ಗೈದಿರುತ್ತಾರೆ. ಪಿರ್ಯಾದಿದಾರರು ಮತ್ತು ಊರಿನ ಜನ ಸೇರಿಕೊಂಡು ಹಿಂದಕ್ಕೆ ಕಳುಹಿಸಿರುತ್ತೆವೆ. ಹಾಗೂ ಅದೇ ದಿನ 08-30 ಗಂಟೆಗೆ ಅದೇ ತಂಡ ಪಿರ್ಯಾದಿದಾರರ ಪರಿಚಯ ವಿರುವ ಪ್ರಕಾಶ ನಗರದ ಪೃಥ್ವಿ ಎಂಬುವನು ಆತನ ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ಪಂಡಿತ ಹೌಸ ಎಂಬಲ್ಲಿ ಬರುವಾಗ ಸುನೀಲ, ವಜ್ರೇಶ, ಪ್ರತೀಕ್, ಸಂತೋಷನಗರದ ಹೀತೇಶ, ಮುರಳಿ, ಧನುಷ, ಸುಧೀರ, ಮುಂತಾದವರು ಹಲ್ಲೆ ನಡೆಸಿರುತ್ತಾರೆ. ಅದೇ ದಿನ ಸುಮಾರು ರಾತ್ರಿ 11-00 ಗಂಟೆಗೆ ಅಜ್ಜನಕಟ್ಟೆಯ ಕೆಲಸ ಮಾಡುತ್ತೀರುವಾಗ ಅದೇ ಯುವಕರು 4-5 ಬೈಕುಗಳಲ್ಲಿ ಬಂದು ರಾಡ್ ಹಿಡಿದುಕೊಂಡು ಬಂದು ಪಿರ್ಯಾದಿದಾರರಿಗೆ ಅವ್ಯಾಚ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ. ಹಾಗೂ ಊರಿನ ಹೆಂಗಸರಿಗೆ ಕೊಡ ಅವ್ಯಾಚ ಬೈದಿರುತ್ತಾರೆ. ಜೀವ ತೆಗೆಯುತ್ತೆನೆಂದು ಬೇದರಿಕೆ ಹಾಕಿರುತ್ತಾರೆ. ಎಂದು ಪಿರ್ಯಾದಾರರ ದೂರು ಅರ್ಜಿ.