ಅಭಿಪ್ರಾಯ / ಸಲಹೆಗಳು

Crime Reported in  Mangalore Rural PS

ಕೋವಿಡ್-19 ಎರಡನೇ ಅಲೆಗೆ ಸಂಬಂಧಪಟ್ಟು ಸಾಂಕ್ರಮಿಕ ರೋಗವಾದ ಕೋವಿಡ್ ರೋಗವು ಹರಡದಂತೆ ರಾಜ್ಯ ಸರಕಾರವು ಕಟ್ಟುನಿಟ್ಟಿನ ಲಾಕ್ ಡೌನ್ ಜ್ಯಾರಿಗೊಳಿಸಿ, ತುರ್ತು ಕೆಲಸವನ್ನು ಹೊರತುಪಡಿಸಿ ಸಾರ್ವಜನಿಕರು ಅನಗತ್ಯವಾಗಿ ಸಂಚರಿಸುವುದನ್ನು ನಿರ್ಬಂಧಿಸಿ ಹೊರಡಿಸಿದ ಅದೇಶ ಇದ್ದರೂ ತಾರೀಕು 05-05-2021 ರಂದು ಮದ್ಯಾಹ್ನ ಸುಮಾರು 13-30 ಗಂಟೆಗೆ ಮಂಗಳೂರು ತಾಲೂಕು, ಮಲ್ಲೂರು ಗ್ರಾಮದ ಬದ್ರಿಯಾನಗರ ಸೈಟ್ ಬಳಿಯ ಸಾರ್ವಜನಿಕ ಡಾಮಾರು ರಸ್ತೆಯ ಬಳಿ KA-19-HD-0140 ನೇ ದ್ವಿಚಕ್ರ ವಾಹನದ ಸವಾರನಾದ ಸೂರಜ್ ಎಂಬಾತನು ಸರಕಾರದ ಆದೇಶವನ್ನು ಉಲ್ಲಂಘಿಸಿ ಸಾಂಕ್ರಾಮಿಕ ರೋಗದ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿರುವುದಲ್ಲದೇ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿ  ಸುತ್ತಾಡುತ್ತಿದ್ದುದರಿಂದ ಆರೋಪಿತನ ವಿರುದ್ದ THE DISASTER MANAGEMENT ACT, 2005 (U/s-51(b)); IPC 1860 (U/s-269) ಪ್ರಕಾರ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ   

Crime Reported in  Panambur PS

ದಿನಾಂಕ: 05-05-2021 ರಂದು 09-45 ಗಂಟೆಗೆ ವೇಳೆಗೆ ಮಂಗಳೂರು ನಗರದ ಬೈಕಂಪಾಡಿ ಮಾರುಕಟ್ಟೆಯಲ್ಲಿ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಚಪ್ಪಲಿಗಳ ರಾಶಿ ಹಾಕಿ ವ್ಯಾಪಾರ, ವಹಿವಾಟನ್ನು ಪ್ರಸ್ತುತ 2 ನೇ ಅಲೆಯ ಕೋವಿಡ್ 19, ನೇದಕ್ಕೆ ಸಂಬಂಧಪಟ್ಟು, ಇದನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಕರ್ನಾಟಕ ಸರಕಾರ ಹೊರಡಿಸಿರುವ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ಚಪ್ಪಲಿಗಳನ್ನು ಮಾರಾಟ  ಮಾಡುತ್ತಿದ್ದು,  ಪ್ರಸ್ತುತ ಇರುವ ಕೋರೊನಾ ಮಾರಕ ರೋಗವನ್ನು ಹರಡಿಸುವುದಕ್ಕೆ ಕಾರಣರಾಗುವಂತೆ ಇದ್ದು  ಸದ್ರಿಯವನನ್ನು ಈ ಬಗ್ಗೆ ವಿಚಾರಿಸಿಕೊಂಡಲ್ಲಿ, ತಾನು ಈ ಚಪ್ಪಲಿಗಳನ್ನು ರಸ್ತೆ ಬದಿಯಲ್ಲಿ ರಾಶಿ ಹಾಕಿ ಮಾರಾಟ ಮಾಡುತ್ತಿರುವುದಾಗಿಯೂ ತಿಳಿಸಿದ್ದು, ಸದ್ರಿಯವನ ಹೆಸರು ವಿಳಾಸ ಕೇಳಲಾಗಿ ಮಹಮ್ಮದ್ ಮುಸ್ತಾಫ ಪ್ರಾಯ 36 ವರ್ಷ, ತಂದೆ; ಕೆ.ಹೆಚ್. ಬಾವ, ವಾಸ: ಡೋರ್ ನಂಬ್ರ 6-36, 6 ನೇ ಬ್ಲಾಕ್, ಕೃಷ್ಙಾಪುರ, ಮಂಗಳೂರುರವರ ವಿರುದ್ದ THE KARNATAKA EPIDEMIC DISEASES ACT, 2020 (U/s-5(1),4); IPC 1860 (U/s-269) ಪ್ರಕಾರ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ

Crime Reported in  Moodabidre PS

ದಿನಾಂಕ: 05-05-2021 ರಂದು 10.00 ಗಂಟೆಗೆ ಮೂಡಬಿದರೆ ತಾಲೂಕು, ಮಾರ್ಪಾಡಿ ಗ್ರಾಮದ, ಎಮ್.ಸಿ.ಎಸ್. ಬ್ಯಾಂಕ್ ಬಳಿಯಿರುವ ಸುಧಾ ಜ್ಯೂವೇಲರ್ಸ್ ಅಂಗಡಿಯ ಮಾಲಿಕರು ಕೋವಿಡ್-19 ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅಂಗಡಿಯ ತೆರೆಯಲು ಅನುಮತಿ ಇಲ್ಲದೇ ಇದ್ದರೂ ಕೂಡ ಅಂಗಡಿಯನ್ನು ತೆರೆದು ಹಾಗೂ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡದೆ ನಿರ್ಲಕ್ಷ ತೋರಿರುತ್ತಾರೆ.  ಈತನ ವಿರುದ್ದ ಕಲಂ: 269 ಐ.ಪಿ.ಸಿ ಮತ್ತು ಕಲಂ: 4 ಮತ್ತು5 ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರಂತೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ

01-05-2021

Crime Reported in  Barke PS  

ಜಿಲ್ಲಾ ಕಾರಾಗೃಹ ಮಂಗಳೂರುನಲ್ಲಿ, ದಿನಾಂಕ:30.04.2021ರಂದು ಸಂಜೆ ಸಮಯ ಸುಮಾರು 18.00 ಗಂಟೆಗೆ ವಿಚಾರಣಾ ಬಂದಿ ಸಂಖ್ಯೆ: 15345 ಅಭಿಷೇಕ್ ತಂದೆ ಮುರಳೀಧರ ಈತನು 'ಬಿ' ಬ್ಲಾಕ್ನ ಮೊದಲನೇ ಮಹಡಿಯ 5ನೇ ಕೊಠಡಿಯಲ್ಲಿದ್ದು, ಅದೇ ಬ್ಲಾಕ್ನ ನೆಲ ಮಹಡಿಯಲ್ಲಿರುವ 2ನೇ ಕೊಠಡಿಯಲ್ಲಿರುವ ತನ್ನ ಸ್ನೇಹಿತರನ್ನು ಮಾತನಾಡಿಸಿಕೊಂಡು 2ನೇ ಕೊಠಡಿಯಿಂದ 3ನೇ ಕೊಠಡಿಯ ಮುಂಭಾಗದಿಂದ ಹಾದು ಹೋಗುತ್ತಿರುವಾಗ, ಬೀಗಮುದ್ರೆ ಮಾಡಲಾಗಿದ್ದ 3ನೇ ಕೊಠಡಿಯ ಬಾಗಿಲ ಬಳಿಯೇ ನಿಂತಿದ್ದ ವಿಚಾರಣಾ ಬಂದಿ ಸಂಖ್ಯೆ:15463 ಮೊಹಮ್ಮದ್ ಅರ್ಫಾನ್ @ ಅರ್ಫಾ ತಂದೆ ಅಬೂಬಕ್ಕರ್ ಸಿದ್ದಿಕ್ ಈತನು ವಿಚಾರಣಾ ಬಂದಿ ಸಂಖ್ಯೆ: 15345 ಅಭಿಷೇಕ್ ತಂದೆ ಮುರಳೀಧರ ಈತನನ್ನು ನೋಡಿದವನೇ ಈ ಕಡೆ ಏನು ನೋಡುತ್ತಿದ್ದೀಯೆ ಹೇ ಬೇವರ್ಸಿ, ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು, ದುರುಗುಟ್ಟಿ ನೋಡುತ್ತಾನೆ. ಅಲ್ಲಿಯೇ 3ನೇ ಕೊಠಡಿಯ ಒಳಗೆ ಮೊಹಮ್ಮದ್ ಅರ್ಫಾನ್ @ ಅರ್ಫಾ ತಂದೆ ಅಬೂಬಕ್ಕರ್ ಸಿದ್ದಿಕ್ ಈತನ ಜೊತೆಗೆ ನಿಂತಿದ್ದ ವಿಚಾರಣಾ ಬಂದಿ ಸಂಖ್ಯೆ: 15462 ಮೊಹಮ್ಮದ್ ಸಮೀರ್ @ ಸಮೀರ್ ಕಡಪರ ತಂದೆ ಅಲಿಯಬ್ಬ ಈತನು ಲಾಕ್ ಮಾಡಲಾಗಿದ್ದ 3ನೇ ಕೊಠಡಿಯ ಒಳಗಿನಿಂದಲೇ ಅಭಿಷೇಕ್ ತಂದೆ ಮುರಳೀಧರ ಈತನನ್ನು ಅತ್ತಿತ್ತ ಹೋಗದಂತೆ ಹೊರಕ್ಕೆ ಕೈಚಾಚಿ ಎಡಗೈಯನ್ನು ಬಿಗಿಯಾಗಿ ಹಿಡಿದು, ನಿನ್ನನ್ನು ನೋಡಿಕೊಳ್ಳುತ್ತೇನೆ, ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಲ್ಲದೆ, ಅದೇ ಸಮಯಕ್ಕೆ ಮೊಹಮ್ಮದ್ ಅರ್ಫಾನ್ @ ಅರ್ಫಾ ತಂದೆ ಅಬೂಬಕ್ಕರ್ ಸಿದ್ದಿಕ್ ಈತನು ಅಭಿಷೇಕ್ ತಂದೆ ಮುರಳೀಧರನ ಎಡ ಭುಜದ ಹತ್ತಿರ ಜೋರಾಗಿ ಗುದ್ದಿದ ಕಾರಣ ಸ್ವಲ್ಪ ಹಿಂದಕ್ಕೆ ತಳ್ಳಲ್ಪಟ್ಟಿರುತ್ತಾನೆ. ಆದ ಕಾರಣ ಅಭಿಷೇಕ್ ತಂದೆ ಮುರಳೀಧರ ಈತನ ಮೇಲೆ ಯಾವುದೋ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾಗಿದೆ, ಎಂಬಿತ್ಯಾದಿ

Crime Reported in  Ullal PS

ಫಿರ್ಯಾದಿದಾರರಾದ ಹರ್ಷಿತ್ ರವರು ಮುಡಿಪು ಬಳಿ ಇರುವ ಈಕಾರ್ಟ್ ಲೋಗಿಸ್ಟಿಕ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ: 29-04-2021 ರಂದು ಫಿರ್ಯಾದಿದಾರರು ಬೆಳಿಗ್ಗೆ 08-30 ಗಂಟೆಗೆ ಪ್ಲಿಪ್ ಕಾರ್ಟ್ ಸಂಸ್ಥೆಯ ಡ್ರೆಸ್, ಸ್ಯಾನಿಟೈಸರ್, ಮೊಬೈಲ್ ಫೋನ್ ಇತ್ಯಾದಿ ಸಾಮಾಗ್ರಿಗಳನ್ನು ಬ್ಯಾಗಿನಲ್ಲಿ ಇರಿಸಿಕೊಂಡು ತನ್ನ ಬೈಕ್ ನಂಬ್ರ ಕೆಎ 19 ಇಎಕ್ಸ್ 6813 ನೇದರಲ್ಲಿ ಬೇರೆ ಬೇರೆ ಕಡೆಗೆ ಸಪ್ಲೈ ಮಾಡಿ , ನಂತರ ವಿವೋ ವಿ 20 ಪ್ರೋ ಎಂಬ ಮೊಬೈಲ್ ಫೋನ್ ಕಸ್ಟಮರ್ ಶಿವಕುಮಾರ್ ಬೀರಿ ಕಾಟೇಜ್, 7891 ಸಂಕೋಳಿಗೆ ಹಾಲ್, ಉಳ್ಳಾಲ ಎಂಬ ಹೆಸರಿನವರಿಗೆ ಡೆಲಿವರಿ ಮಾಡಲಿದ್ದರಿಂದ ಕಸ್ಟಮರ್ ಮೊಬೈಲ್ ನಂಬ್ರ  ನೇದಕ್ಕೆ ಕರೆ ಮಾಡಿ ಡೆಲಿವರಿ ಬಗ್ಗೆ ತಿಳಿಸಿದ್ದು, ಹಾಗೂ ಕಸ್ಟಮರ್ ಉಚ್ಚಿಲ ಭಗವತಿ ಶಾಲೆಯ ಬಳಿಯಲ್ಲಿ ಇರುತ್ತೇನೆ ಎಂದು ಅಲ್ಲಿಗೆ ಬನ್ನಿ ಎಂದು ತಿಳಿಸಿದಂತೆ ದಿನಾಂಕ: 29-04-2021 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರ ಉಚ್ಚಿಲ ಭಗವತಿ ಶಾಲೆಯ ಬಳಿಯ ಹೈವೇ 66 ಕ್ಕೆ ಬಂದಾಗ ಒರ್ವ ಯುವಕನು ಫಿರ್ಯಾದಿದಾರರ ಬಳಿಗೆ ಬಂದಿದ್ದು, ಆತನ ಹೆಸರು ಕೇಳಿದಲ್ಲಿ ಶಿವಕುಮಾರ್ ಎಂದು ತಿಳಿಸಿದ್ದು, ಅರ್ಡರ್ ಬಗ್ಗೆ ತಿಳಿಯಲಾಗಿ ವಿವೋ ವಿ 20 ಪ್ರೋ ಎಂಬ ಮೊಬೈಲ್ ಫೋನ್ ಮತ್ತು ಮೊಬೈಲ್ ಕವರ್ ಇರುವುದೆಂದು ತಿಳಿಸಿರುತ್ತಾನೆ.  ಫಿರ್ಯಾದಿದಾರರು ಕಸ್ಟಮರ್ ಇವರೇ ಎಂದು ದೃಢಪಟ್ಟ ಮೇರೆಗೆ ಬ್ಯಾಗ್ ನ್ನು ಕೆಳಗೆ ಇರಿಸಿ, ಕಸ್ಟಮರ್ ಗೆ ಕೊಡಲು ಮೊಬೈಲ್ ಫೋನ್ ಮತ್ತು ಮೊಬೈಲ್ ಕವರ್ ಇದ್ದ ಪ್ಯಾಕ್ ನ್ನು ಬೈಕ್ ನ ಸೀಟಿನಲ್ಲಿ ಇರಿಸಿ, ಬ್ಯಾಗ್ ನ ಜಿಪ್ ಹಾಕಲೆಂದು ಬಗ್ಗಿದಾಗ ಕಸ್ಟಮರ್ ಶಿವಕುಮಾರ್ ಹೆಸರಿನವನು ಹಣವನ್ನು ಪಾವತಿ ಮಾಡದೇ ಮೊಬೈಲ್ ಫೋನ್ ಮತ್ತು ಮೊಬೈಲ್ ಫೋನ್ ಕವರ್ ನ ಪ್ಯಾಕ್ ನ್ನು ಕಳವು ಮಾಡಿಕೊಂಡು ಹೈವೇಯಲ್ಲಿ ಓಡಿದ್ದು, ಪಿರ್ಯಾದಿದಾರರು ಕೂಡಾ ಹಿಂದೆ ಓಡಿದ್ದು, ಆತನು ಹೈವೇಯಲ್ಲಿ ಬದಿಯಲ್ಲಿ ಚಾಲನೆಯ ಸ್ಥಿತಿಯಲ್ಲಿದ್ದ ಇನ್ನೊಬ್ಬ ಯುವಕನ ಎಕ್ಸೆಸ್ ಸ್ಕೂಟರ್ ನಲ್ಲಿ ಕುಳಿತುಕೊಂಡು ಕೋಟೆಕಾರು ಕಡೆಗೆ ಪರಾರಿಯಾಗಿರುತ್ತಾನೆ. ಕಳವಾದ ವಿವೋ ವಿ 20 ಪ್ರೋ ಎಂಬ ಮೊಬೈಲ್ ಫೋನ್ ಮತ್ತು ಮೊಬೈಲ್ ಕವರ್ ಮೌಲ್ಯ 30,289/- ರೂಪಾಯಿ ಆಗಿರುತ್ತದೆ.ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ಪಿರ್ಯಾದಿ.

30-04-2021

Crime Reported in  Moodabidre PS

ದಿನಾಂಕ: 30.-04-2021 ರಂದು ಸಮಯ ಸುಮಾರು 10-30 ಗಂಟೆಗೆ ಮೂಡಬಿದ್ರೆ ತಾಲೂಕು ಇರುವೈಲು  ಗ್ರಾಮದ ಮುಖ್ಯ ರಸ್ತೆಯಲ್ಲಿ ಪಿರ್ಯಾದಿ POOVAPPA SAPALIGA (52) ದಾರರು ಮನೆ ಮನೆಗೆ ತೆರಳಿ ಮೀನಿನ ವ್ಯಾಪಾರ ಮಾಡಿಕೊಂಡಿದ್ದು  ಮೀನು ವ್ಯಾಪಾರ ಮಾಡಿ  ಮೀನಿನ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಪಿರ್ಯಾದುದಾರರ ಪರಿಚಯದ  ಸುನೀಲ್ ಇರುವೈಲ್ ಎಂಬಾತನು ತನ್ನ  ಮಾರುತಿ ಕಾರು ನಂಬ್ರ ಕೆಎ-19-ಎಮ್ ಎಲ್-1469 ರಲ್ಲಿ ಬಂದು ತಡೆದು ನಿಲ್ಲಿಸಿ ಪಿರ್ಯಾದುದಾರರಲ್ಲಿ ನೀನು ಹೇಗೆ ನನ್ನಲ್ಲಿ ಕೇಳದೆ ಇರುವೈಲ್ ಪರಿಸರದಲ್ಲಿ ಮೀನಿನ ವ್ಯಾಪಾರ ಮಾಡುತ್ತಿದ್ದಿಯಾ ಈ ಏರಿಯಾಗೆ ನಾನೇ ಬಾಸ್ ನಾನು ಈ ಏರಿಯಾದಲ್ಲಿ ದೊಡ್ಡ ರೌಡಿ ನೀನು ಈ ಏರಿಯಾದಲ್ಲಿ ಮೀನಿನ ವ್ಯಾಪಾರ ಮಾಡಬೇಕಾದರೇ ನನಗೆ ಹಫ್ತಾ ಕೋಡಬೇಕು ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲಾ ಎಂದು ಬೆದರಿಕೆ ಹಾಕಿರುತ್ತಾನೆ, ಮತ್ತು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಆರೋಪಿತನು ಮುಖಕ್ಕೆ ಮಾಸ್ಕ್ ಧರಿಸದೇ, ದೈಹಿಕ ಅಂತರವನ್ನು ಕಾಯ್ದುಕೊಳ್ಳುದೇ ಕರ್ನಾಟಕ ಸರ್ಕಾರದ ಸಾಂಕ್ರಾಮಿಕ ರೋಗಗಳ ಅಧ್ಯಾದೇಶವನ್ನು ಉಲ್ಲಂಘಿಸಿರುವುದು ಎಂಬಿತ್ಯಾದಿ.

29-04-2021

Crime Reported in  Urva PS

ಫಿರ್ಯಾದಿ Nelson Joseph (31) ರವರು  ದಿನಾಂಕ 29-04-2021 ರಂದು ಕೆಲಸಕ್ಕೆಂದು ಮಂಗಳೂರು ನಗರದ ಬಿಜೈ ನ್ಯೂ ರೋಡ್ ನಲ್ಲಿ ಸಮಯ ಬೆಳಿಗ್ಗೆ 11.00 ಗಂಟೆ ವೇಳೆಗೆ ನಡೆದುಕೊಂಡು ಹೋಗುತ್ತಿದ್ದಾಗ ಫಿರ್ಯಾದುದಾರಿಗೆ ಪರಿಚಯದ ಲ್ಯಾನ್ಸಿ ಫಿರ್ಯಾದುದಾರರನ್ನು ಒಮ್ಮೆಲೇ ತಡೆದು ನಿಲ್ಲಿಸಿ ....ಮಗನೇ ನಿನ್ನ ಹಣ ವಾಪಾಸು ಕೊಡುವುದಿಲ್ಲ, ನೀನು ಎನು ಮಾಡುತೀ? ಎಂಬುದಾಗ ಹೇಳಿ ಒಮ್ಮೆಲೇ ಆತನ ಕೈಯಲಿದ್ದ ಚೂರಿಯಿಂದ ಫಿರ್ಯಾದುದಾರರ ಹೊಟ್ಟೆಯ ಬಲ ಭಾಗಕ್ಕೆ ಗೀರಿ ರಕ್ತ ಗಾಯಗೊಳಿಸಿರುತ್ತಾನೆ ಆದೇ ಸಮಯ ಫಿರ್ಯಾದುದಾರರು ಜೋರಾಗಿ ಬೊಬ್ಬೆ ಹಾಕಿದಾಗ ಆರೋಪಿಯು ಫಿರ್ಯಾದುದಾರರನ್ನು ಉದ್ದೇಶಿಸಿ ....ಇನ್ನೂ ಮುಂದಕ್ಕೆ ಹಣ ಕೇಳಿದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿದ್ದು, ಘಟನೆಯ ಸಮಯ ಅಲ್ಲಿಯೇ ಇದ್ದ ಫಿರ್ಯಾದುದಾರರ ಪರಿಚಯದ ಯತೀಶನು ಫಿರ್ಯಾದುದಾರರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ನಗರದ ಏ.ಜೆ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಘಟನೆಯ ಸಮಯ ಫಿರ್ಯಾದುದಾರರ ಕೈಯಲ್ಲಿದ್ದ ಬೆಳ್ಳಿಯ ಬ್ರಾಸ್ ಲೈಟ್ ಅಲ್ಲೇ ಕೆಳಗಡೆ ಬಿದ್ದುಹೋಗಿರುತ್ತದೆ ಅಲ್ಲದೇ ಘಟನೆಯ ಸಮಯ ಫಿರ್ಯಾದುದಾರರು ಕೆಳಗೆ ಬಿದ್ದು ಅವರ ಎಡಗೈ ಮೊಣಗಂಟಿಗೆ ರಕ್ತ ಗಾಯವಾಗಿರುತ್ತದೆ ಹಣಕಾಸಿನ ವಿಚಾರದಲ್ಲಿ ಈ ಹಲ್ಲೇ ನಡೆದಿರುವುದಾಗಿದೆ ಎಂಬಿತ್ಯಾದಿಯಾಗಿ ಫಿರ್ಯಾಧಿಯ ಸಾರಾಂಶ

Crime Reported in  Konaje PS 

ದಿನಾಂಕ 29-04-2021 ರಂದು ಪಿರ್ಯಾದಿ Prakash Devadiga PI ರವರು  ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ ಸುಮಾರು 12.15 ಗಂಟೆಗೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಗ್ರೀನ್ ಗ್ರೌಂಡ್ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಸಫೀತ್ ಆಲಿ ಎಂಬುವರನ್ನು ನಶೆಯಲ್ಲಿದ್ದವನಂತೆ ಕಂಡು ಬಂದಿದ್ದರಿಂದ ಅನುಮಾನಗೊಂಡು ಆತನನ್ನು ವಿಚಾರಿಸಿದಾಗ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿ ಸಫೀತ್ ಆಲಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದಲ್ಲಿ ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಆತನ ವಿರುದ್ದ ಕಲಂ: 27 (ಬಿ) ಎನ್ ಡಿ ಪಿಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ

28-04-2021

Crime Reported in  Moodabidre PS

ಮೂಡುಬಿದಿರೆ ತಾಲೂಕು ಬೆಳುವಾಯಿ ಗ್ರಾಮದ ಬೆಳುವಾಯಿ ಎಂಬಲ್ಲಿ ಪಿರ್ಯಾದಿ Arif (36) ದಾರರು ತನ್ನ ಬಾಬ್ತು ಕೆಎ-02-ಡಿ-0869 ನಂಬ್ರದ ಲಾರಿಯನ್ನು ತನ್ನ ಕೆಲಸದವರು ತಂಗುವ ರೂಮಿನ ಬಳಿ ನಿಲ್ಲಿಸಿದ್ದು ದಿನಾಂಕ: 27--8-2021 ರಂದು ರಾತ್ರಿ 8.00 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಕೆಲಸಗಾರರ ರೂಮಿನ ಬಳಿ ಮತನಾಡಿಕೊಂಡಿರುವಾಗ ಲಾರಿ ನಿಲ್ಲಿಸಿದ್ದ ಸ್ಥಳದಿಂದ ಲಾರಿಯು ರಸ್ತೆಯಲ್ಲಿ ಹೋದಂತೆ ಕಂಡುಬಂದು  ಪಿರ್ಯಾದಿ ಮತ್ತು ಕೆಲಸದವರು ಲಾರಿ ನಿಲ್ಲಿಸಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಪಿರ್ಯಾದಿದಾರರ ಬಾಬ್ತು ಕೆಎ-02-ಡಿ-0869 ನಂಬ್ರದ ಲಾರಿಯನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿದು ಪಿರ್ಯಾದಿ  ಮತ್ತು ಅವರ ಕೆಲಸದವರಾದ ಸತೀಶ ಮತ್ತು ರವಿ ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದು  ಅವರು ಲಾರಿಯನ್ನು ಕಾರ್ಕಳ ಮಾರ್ಗವಾಗಿ ಚಲಾಯಿಸಿಕೊಂಡು ಹೋಗಿ ಲಾರಿಯನ್ನು ಚಾಲಕ ಬೈ ಪಾಸ್ ಬಳಿ ತಿರುಗಿಸಿ ಪಡುಬಿದ್ರೆ ಕಡೆಗೆ ಹೋಗಿ ಪಡುಬಿದ್ರೆ ಬಳಿ ಲಾರಿಯನ್ನು ಬಿಟ್ಟು ಕತ್ತಲೆಯಲ್ಲಿ ಓಡಿ ಹೋಗಿರುತ್ತಾರೆ. ಪಿರ್ಯಾದಿದಾರರು  ಹಿಂಬಾಲಿಸುತ್ತಿರುವಾಗ ಚಾಲಕನನ್ನು ನೋಡಿದ್ದು ಅತನು ಅವರ ಕೆಲಸದವರು ವಾಸ್ತವ್ಯ ವಿರುವ ರೂಮಿನ ಬಳಿ ವಾಸ ವಾಗಿರುವ ಪ್ರದೀಪ್ @ ಪದ್ದು ಎಂಬವನಾಗಿದ್ದು ಅತನ ಜೊತೆಗೆ ಇನ್ನೊಬ್ಬ ವ್ಯಕ್ತಿ ಇದ್ದು ಅತನ ಹೆಸರು ತಿಳಿದಿಲ್ಲ. ಲಾರಿಯ ನೇಮ್ ಬೋರ್ಡಿನಲ್ಲಿ “ಜ್ವಾಲಮಾಲಿನಿ” ಎಂದು ಹೆಸರು ಬರೆದಿದ್ದು ಟಾ ಟಾ ಕಂಪೆನಿಯದ್ದಾಗಿರುತ್ತದೆ. ಇದರ ಅಂದಾಜು ಮೌಲ್ಯ ರೂ 8,00,000/- ಅಗ ಬಹುದು. ಕೆಎ-02-ಡಿ-0869 ನಂಬ್ರದ ಲಾರಿಯನ್ನು ಕಳವು ಮಾಡಿಕೊಂಡು ಹೋದ ಪ್ರದೀಪ್ @ ಪದ್ದು ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ಕೋರಿಕೆ ಎಂಬಿತ್ಯಾದಿ

27-04-2021

Crime Reported in  Mangalore Women PS  

ದಿನಾಂಕ;27-04-2021 ರಂದು ಪ್ರಕರಣದ ಪಿರ್ಯಾದಿದಾರರಾದ ನೊಂದ ಅಪ್ರಾಪ್ತ ಬಾಲಕಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ;26-04-20201 ರಂದು ಸಂಜೆ 7-00 ಗಂಟೆಗೆ ಆರೋಪಿತರಾದ ಭವ್ಯ, ಸುಧಾ, ಆಶಾ, ರಮೇಶ್ ಎಂಬವರು ಪಿರ್ಯಾದಿದಾರರು Jothinagar, Kunjathabail Kavoor ನಲ್ಲಿರುವ ಅವರ   ಮನೆಯ ಗಿಡಗಳಿಗೆ ನೀರನ್ನು ಹಾಕುತ್ತಿರುವ ಸಮಯ ಸ್ವಲ್ಪ ನೀರು ರಸ್ತೆಗೆ ಚೆಲ್ಲಿದ್ದನ್ನು ಕಂಡು ಅಲ್ಲಿದ್ದ ಆರೋಪಿತರೆಲ್ಲರು ಅವಾಚ್ಯ ಶಬ್ದಗಳಿಂದ ಬೈದು , ಕಬ್ಬಿಣದ ಸಲಾಕೆಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದು ಆರೋಪಿ ರಮೇಶ್ ಎಂಬಾತನು ನೀವು ಚಪ್ಪಲಿ ಹೊಲಿಯುವವರು ನಾಯಿ ಹಿಡಿಯುವವರು ಮೋಚುಗಳು ಎಂಬುದಾಗಿ ಜಾತಿ ನಿಂದನೆ ಮಾಡಿರುತ್ತಾನೆ ಎಂಬಿತ್ಯಾದಿ

Crime Reported in  Kavoor PS

ಫಿರ್ಯಾದಿ BHAVYA (26) ದಾರರು ಕುಟುಂಬದೊಂದಿಗೆ ಜ್ಯೋತಿನಗರ, ಕುಂಜತ್ತ್ ಬೈಲ್ ಗ್ರಾಮದಲ್ಲಿ ವಾಸ ಮಾಡಿಕೊಂಡಿದ್ದು ದಿನಾಂಕ 26/04/2021 ರಂದು ಸಂಜೆ ಸಮಯ 07:30 ಗಂಟೆಗೆ ಫಿರ್ಯಾದಿದಾರರು ಕೆಲಸದಿಂದ ಮನೆಗೆ ಬಂದಾಗ ಫಿರ್ಯಾದಿದಾರರ ಮನೆಯ  ಮೇಲಿನ ಮನೆಯಲ್ಲಿ ವಾಸವಾಗಿರುವ ಶಿವಕುಮಾರ ಎಂಬುವರ ಮಗಳು ಸ್ನೇಹ ಎಂಬವರು ಅವರ ಮನೆಯೊಳಗೆ ಹೂವಿನ ಗಿಡಗಳಿಗೆ ನೀರು ಹಾಕುತ್ತಿದ್ದು ಆ ನೀರು ಫಿರ್ಯಾದಿದಾರರ ಮನೆಯೊಳಗಡೆ ಸಿಡಿಯುತ್ತಿದ್ದ ಕಾರಣ ಫಿರ್ಯಾದುದಾರರು ಸ್ನೇಹರವರಲ್ಲಿ ನೀರು ಮನೆಯೊಳಗಡೆ ಬೀಳುವ ಹಾಗೆ ಸಿಡಿಸಬೇಡ ಎಂದು ಹೇಳಿ ಮನೆಯೊಳಗಡೆ ಹೋಗಿದ್ದು ಸ್ವಲ್ಪ ಸಮಯದ ನಂತರ ಸ್ನೇಹ ರವರ ತಂದೆ ಶಿವಕುಮಾರ ರವರು ಫಿರ್ಯಾದುದಾರರು ಪಾತ್ರೆ ತೊಳೆಯುವ ಸ್ಥಳಕ್ಕೆ ಬಂದು ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ, ನೀನು ನನ್ನ ಮಗಳ ಬಳಿ ಏನು ಮಾತನಾಡುವುದು ನನ್ನಲ್ಲಿ ಮಾತನಾಡು ಬೇವರ್ಸಿ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿ ಹಾಕಿ ಫಿರ್ಯಾದಿದಾರರ ಎದೆಗೆ ರಾಡಿನಿಂದ ಹೊಡೆದು ನಿಮ್ಮನ್ನು ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದು ಎಂಬಿತ್ಯಾದಿ

Crime Reported in  Ullal PS      

ಫಿರ್ಯಾದಿ Vijaya ರವರ ಅಣ್ಣ ನಿತಿನ್ ಪ್ರಾಯ 36 ವರ್ಷ ಈತನು ದಿನಾಂಕ: 26-04-2021 ರಂದು ಬೆಳಿಗ್ಗೆ 09-00 ಗಂಟೆಗೆ ತನ್ನ ಮನೆಯಾದ ಡೋರ್ ನಂಬ್ರ 18-25, ಉಳ್ಳಾಲ ಬೈಲ್, ಕೆಳಗಿನ ಮನೆ, ಉಳ್ಳಾಲ ಗ್ರಾಮ ಇಲ್ಲಿಂದ ಬೈಕಂಪಾಡಿಯಲ್ಲಿ ವೆಲ್ಡಿಂಗ್ ಕೆಲಸಕ್ಕೆಂದು ಮನೆಯಿಂದ ಹೊರಟು ಹೋದವನು ನಂತರ ಬೈಕಂಪಾಡಿಗೆ ಬಸ್ಸು ಇಲ್ಲವೆಂದು ಬೈಕಂಪಾಡಿಗೂ ಹೋಗದೇ ಮನೆಗೂ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ

26-04-2021

Crime Reported in  Urva PS

ಪಿರ್ಯಾದಿದಾರರಾದ ದಿನೇಶ್ ಸಿ ಹೆಚ್‌ ಎಂಬವರು ಪುತ್ತೂರು ವಿಭಾಗ ಕೆ.ಎಸ್.ಆರ್‌.ಟಿ.ಸಿ ಪುತ್ತೂರು ಘಟಕದಲ ಬಸ್ಸು ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 24-04-2021 ರಂದು ತನ್ನ ಮನೆಯಾದ ಬಿಜೈ ಕಾಪಿಕಾಡ್ ನಲ್ಲಿದ್ದ ಸಮಯ ರಾತ್ರಿ ಸುಮಾರು 11-30 ರ ವೇಳೆಗೆ ಅನಾಮಧೇಯ ಮೊಬೈಲ್ ನಂಬ್ರಗಳಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರಕ್ಕೆ ಕರೆ ಬಂದಿದ್ದು  ಸದ್ರಿ ಕರೆಯಲ್ಲಿ “ ನೀನು ನಮ್ಮ ಮುಸ್ಲಿಂ ಹುಡುಗಿಯರನ್ನು ಕಂಡ ಕೂಡಲೇ ಅವರನ್ನು ಅವಮಾನಿಸುತ್ತಿದ್ದೀಯಾ ಮುಸ್ಲೀಂ ರವರನ್ನು ನೋಡಿದರೆ ದ್ವೇಷ ಸಾಧಿಸುತ್ತಿ ನೀನು ನಮ್ಮ ಮುಸ್ಲಿಂ ತಂಟೆಗೆ ಬಂದಲ್ಲಿ ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣ ಎಂಬಿತ್ಯಾದಿ.

Crime Reported in  Mangalore Women PS       

ಪಿರ್ಯಾದಿದಾರರು ಹಾಗೂ ಆರೋಪಿ NAGENDRA(A1) UJJODIMangaluru ರವರು 6 ವರ್ಷಗಳ ಹಿಂದೆ ಫೇಸ್ಬುಕ್ ಮುಖಾಂತರ ಪರಿಚಯವಾಗಿದ್ದು, ಅನಂತರ ಪರಸ್ಪರ ಪ್ರೀತಿಸುತ್ತಿದ್ದು, 03 ವರ್ಷಗಳ ಹಿಂದೆ  ಪಿರ್ಯಾದಿದಾರರ ತಂದೆ ತಾಯಿಗೆ ವಿಷಯ ಗೊತ್ತಾಗಿ ಇಬ್ಬರಿಗೂ ಬುದ್ಧಿವಾದ ಹೇಳಿ ಬೇರೆ ಮಾಡಿರುತ್ತಾರೆ. ಆನಂತರ ದಿನಾಂಕ 17-04-2021 ರಂದು ಆರೋಪಿತನು ಪಿರ್ಯಾದಿದಾರರ ತಾಯಿಗೆ ಫೋನ್ ಕರೆ ಮಾಡಿ ನನಗೂ ನಿಮ್ಮ ಮಗಳಿಗೂ ಈಗಾಗಲೇ ಮದುವೆಯಾಗಿದೆ ಎಂದು ತಿಳಿಸಿದ್ದು, ಆಗ ಪಿರ್ಯಾದಿದಾರರ ತಾಯಿ ಪಿರ್ಯಾದಿದಾರರಲ್ಲಿ ವಿಚಾರಿಸಿದಾಗ ದಿನಾಂಕ 28-02-2020 ರಲ್ಲಿ ಯುನಿಟಿ ಆಸ್ಪತ್ರೆಯಲ್ಲಿ ಇದ್ದ ಸಮಯ ಆರೋಪಿತನು ಆಸ್ಪತ್ರೆಯ ಬಳಿ ಬಂದು ಆಸ್ಪತ್ರೆಯ ಆವರಣದಲ್ಲಿ ನಿನ್ನ ತಂದೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದು ಮೈಗೆ ಕೈಹಾಕಿ, ಕೈಯಿಂದ ಹೊಡೆದು, ಬಲವಂತವಾಗಿ ಮಂಗಳೂರಿನ ಸಬ್ ರಿಜಿಸ್ಟರ್ ಆಪೀಸಿಗೆ ಎಳೆದುಕೊಂಡು ಹೋಗಿರುತ್ತಾನೆ. ಆದರೆ ಮದುವೆ ಆಗಿರುವುದಿಲ್ಲ. 03 ವರ್ಷಗಳ ಹಿಂದೆ ಮಾತುಕತೆಯಾದ  ಆದ ಬಳಿಕ ಕೂಡ ಆರೋಪಿತನು ಪಿರ್ಯಾದಿದಾರರ ಬಗ್ಗೆ ಅಪಪ್ರಚಾರ ಮಾಡುವುದಾಗಿ ಬೆದರಿಸಿ ನಿರಂತರ ಫೋನ್ ಕಾಂಟೆಕ್ಟ್ ನಲ್ಲಿ ಇರುವ ಹಾಗೇ ನೋಡಿಕೊಂಡು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾನೆ

Crime Reported in  Bajpe PS 

ಫಿರ್ಯಾದಿ Laxmisha ರವರ ತಂಗಿ ಭಾರತಿ  (32 ವರ್ಷ) ಎಂಬವರು ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದವರು,  ದಿನಾಂಕ 26-04-2021  ರಂದು ಬೆಳಿಗ್ಗೆ 08-15 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲೂಕು,  ಮಳವೂರು ಗ್ರಾಮದ, ಸಿದ್ಧಾರ್ಥ ನಗರ ಮನೆಯಿಂದ ಮಂಗಳೂರಿಗೆ ಕೆಲಸಕ್ಕೆಂದು  ಹೋಗಿ ಬರುವುದಾಗಿ ಹೇಳಿ ಹೋಗಿರುತ್ತಾರೆ. ನಂತರ ತಮ್ಮ ಮನೆಯಲ್ಲಿ ಭಾರತಿ ರವರು ಬರೆದ ಪತ್ರವೊಂದು ಸಿಕ್ಕಿದ್ದು ಅದರಲ್ಲಿ ತಾನು ವೈಯಕ್ತಿಕ ಕಾರಣಗಳಿಂದ ಮನನೊಂದು ಮನೆಬಿಟ್ಟು ಹೋಗುತ್ತಿರುವುದಾಗಿ ಬರೆದಿರುವುದಾಗಿದೆ. ಆದುದರಿಂದ ಕಾಣೆಯಾದ ಭಾರತಿ ರವರನ್ನು ಪತ್ತೆಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿದೆ.

ಕಾಣೆಯಾದವರ ಚಹರೆ

ಹೆಸರು: ಭಾರತಿ, ಪ್ರಾಯ: 32 ವರ್ಷ

ತಂದೆ:ದಿ.ಸದಾನಂದ

ವಾಸ: ಸಿದ್ಧಾರ್ಥ ನಗರ, ಮಳವೂರು ಗ್ರಾಮ, ನಿರ್ವಸಿತರ ಪುನರ್ವಸತಿ ಕಾಲನಿ, ಮಂಗಳೂರು ತಾಲೂಕು.

ಎತ್ತರ : ಸುಮಾರು 5’2” 

ಮೈ ಬಣ್ಣ  : ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ

25-04-2021

Crime Reported in  Barke PS              

ಜಿಲ್ಲಾ ಕಾರಾಗೃಹ ಮಂಗಳೂರಿನಲ್ಲಿ ದಿನಾಂಕ 25-04-2021 ರಂದು ಬೆಳಿಗ್ಗೆ 06-50 ಗಂಟೆಯಿಂದ 07-00 ಗಂಟೆಯ ಮಧ್ಯೆ ಹಗಲು ಮತ್ತು ರಾತ್ರಿ ಸಿಬ್ಬಂದಿಗಳಾದ ಶ್ರೀ.ಬಸಪ್ಪ ದೇವೇಂದ್ರ ತೇವರಿ, ಸಹಾಯಕ ಜೈಲರ್, ಶ್ರೀ. ಆದಿನಾಥ್ ಚಿಪ್ಪರಗಿ, ವೀಕ್ಷಕರು, ಶ್ರೀ.ಮೆಹಬೂಬ್ ಡೋಣೂರ್, ವೀಕ್ಷಕರು, ಶ್ರೀ.ಭರತೇಶ್,ವೈ. ವೀಕ್ಷಕರು,  ಶ್ರೀ ರಾಜೇಶ್.ಟಿ, ವೀಕ್ಷಕರುಗಳು ಸೇರಿ 'ಎ' ಬ್ಯಾರಕ್ನ ಮೊದಲ ಮಹಡಿಯ 3, ಮತ್ತು 4ನೇ ಕೊಠಡಿಗಳ ಬೀಗಮುದ್ರೆ ತೆರೆದ ಬಳಿಕ 5ನೇ ಕೊಠಡಿಯ ಬೀಗಮುದ್ರೆ ತೆರೆಯುತ್ತಿದ್ದಂತೆ  'ಎ' ಬ್ಯಾರಕ್ನ 3ನೇ ಕೊಠಡಿಯಲ್ಲಿನ  ಈ ಕೆಳಕಂಡ ಬಂದಿಗಳು ಏಕಾಏಕಿ  5 ನೇ ಕೊಠಡಿಗೆ ಬಂದು ಸಿಬ್ಬಂದಿಗಳನ್ನು ತಳ್ಳಿ ಕೊಠಡಿಯ ನೆಲದಲ್ಲಿ ವಿಚಾರಣಾ ಬಂಧಿ ಅನ್ಸಾರ್ ಪಕ್ಕದಲ್ಲಿ ಮಲಗಿಕೊಂಡಿದ್ದ ವಿಚಾರಣಾ ಬಂದಿ ಸಂಖ್ಯೆ:15666 ಮಹಮ್ಮದ್ ಜೈನುದ್ದೀನ್ ತಂದೆ: ಹೈದರಾಲಿ ಈತನಿಗೆ ಬ್ಯಾರಿ ಭಾಷೆಯಲ್ಲಿ ಅನ್ಸಾರ್ನ್ ಬಿಡೆಂಡ, ಕೊಲ್ಲುಲಾ ಕೊಲ್ಲುಲಾ ಎಂದು ಹೇಳುತ್ತಾ  ಈಗಾಗಲೇ ತಯಾರು ಮಾಡಿ ಇಟ್ಟುಕೊಂಡಿದ್ದ ಚೂಪಾದ ಸ್ಪೂನ್ನಿಂದ, ಸ್ಟೀಲ್ ಲೋಟದ ಮೇಲಿನ ಚೂಪಾದ ಅಲಗಿನಿಂದ, ಸ್ಟೀಲ್ ಚೊಂಬಿನ ಒಳಗಡೆ ಅಕ್ಕಿಯನ್ನು ತುಂಬಿಸಿ ಬಟ್ಟೆಯಿಂದ ಸುತ್ತಿ ಬಲವಾಗಿ ಹೊಡೆಯುವ ಸಾಧನದ ಹಾಗೇ ಮಾಡಿಕೊಂಡು ಈ ಎಲ್ಲಾ ಮಾರಕಾಯುಧಗಳಿಂದ  ಜೈನುದ್ದೀನ್ನ  ದೇಹದ ಸಿಕ್ಕ ಸಿಕ್ಕ ಭಾಗಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ರಕ್ತಗಾಯ ಮಾಡಿ ಕೊಲೆಗೆ ಪ್ರಯತ್ನಿಸಿರುತ್ತಾರೆ.  ಸದರಿ ವಿಚಾರಣಾ ಬಂದಿ ಜೈನುದ್ದೀನ್ ತಂದೆ ಹೈದರಾಲಿ  ಈತನನ್ನು ಮಾರಣಂತಿಕ ಹಲ್ಲೆ ಮಾಡುತ್ತಿರುವಾಗ, ತಡೆಯಲು ಬಂದ ಅಲ್ಲೇ ಇದ್ದ ಸಿಬ್ಬಂದಿಗಳನ್ನು ಕೂಡ ಹಲ್ಲೆ ನಡೆಸಿ ಗಾಯಗೊಳಿಸಿರುತ್ತಾರೆ. ಎಂಬಿತ್ಯಾದಿ

ಹಲ್ಲೆ ಮಾಡಿದ ಬಂದಿಗಳು:-

  1. ವಿಚಾರಣಾ ಬಂದಿ ಸಂಖ್ಯೆ:14730 ಸಮೀರ್ ತಂದೆ ಸುಲೈಮಾನ್ 2. ವಿಚಾರಣಾ ಬಂದಿ ಸಂಖ್ಯೆ:15448 ಶಾಕಿಬ್ @ ಶಬ್ಬು ತಂದೆ ಸುಲೈಮಾನ್ 3. ವಿಚಾರಣಾ ಬಂದಿ ಸಂಖ್ಯೆ:15847 ಮೊಹಮ್ಮದ್ ಅಲ್ತಾಫ್ @ ಅಲ್ತಾಫ್ ರಾಜ್ ತಂದೆ ಹಸನಬ್ಬ4. ವಿಚಾರಣಾ ಬಂದಿ ಸಂಖ್ಯೆ:15261 ರಾಜೇಶ್ ನಾಯ್ಕ್ ತಂದೆ ವಿಠ್ಠಲ್ ನಾಯ್ಕ್ 5. ವಿಚಾರಣಾ ಬಂದಿ ಸಂಖ್ಯೆ:15213 ನಿಸಾರ್ @ ನಿಸಾರ್ ಅಹ್ಮದ್ ತಂದೆ ಪಿ.ಎಂ. ಮೊಹಮ್ಮದ್ ಇಸ್ಮಾಯಿಲ್ 6. ವಿಚಾರಣಾ ಬಂದಿ ಸಂಖ್ಯೆ:15380 ಮೊಹಮ್ಮದ್ ಸಫ್ವಾನ್ ತಂದೆ ಅಬುಸಾಲಿ 7. ವಿಚಾರಣಾ ಬಂದಿ ಸಂಖ್ಯೆ:14850 ಮೊಹಮ್ಮದ್ ಅಬ್ದುಲ್ ಫಯಾನ್ ತಂದೆ ಕೆ.ಎಂ.ಅಬ್ಬಾಸ್. 8. ವಿಚಾರಣಾ ಬಂದಿ ಸಂಖ್ಯೆ:15518 ಉಮ್ಮರ್ ಫಾರೂಕ್ ತಂದೆ ಪಿ.ಎ.ಅಬ್ಬಾಸ್  9. ವಿಚಾರಣಾ ಬಂದಿ ಸಂಖ್ಯೆ:15342 ಅಬ್ದುಲ್ ಅಜೀಜ್ @ ಫೋಕರ್ ಅಜೀಜ್ ತಂದೆ ಇಬ್ರಾಹಿಂ 10. ವಿಚಾರಣಾ ಬಂದಿ ಸಂಖ್ಯೆ:15246 ಮೊಹಮ್ಮದ್ ಶಾಕೀರ್

2)ದಿನಾಂಕ 25-04-2021 ರಂದು ಬೆಳಗ್ಗೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳು ಡೆದಾಡಿಕೊಂಡಿರುತ್ತಾರೆಂದು ಮಾಹಿತಿ ಬಂದಂತೆ ಪಿರ್ಯಾದಿ Harun Aqther PSI Barke PS ರವರು ಸಿಬ್ಬಂದಿಗಳೊಂದಿಗೆ  ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ತೆರಳಿ ಜೈಲ್ ಅಧಿಕಾರಿಗಳನ್ನು ಕಂಡು ವಿಚಾರ ತಿಳಿದುಕೊಂಡು ಜೈಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ ಸುಮಾರು 10-00 ಗಂಟೆಗೆ ಖೈದಿಗಳು ಹೊಡೆದಾಡಿಕೊಂಡ  'ಎ' ಬ್ಯಾರಕ್ನ ಮೊದಲ ಮಹಡಿಯ 3ನೇ ಕೊಠಡಿಗೆ ತೆರಳಿ ಅಲ್ಲಿ ಹೊಡೆದಾಡಿಕೊಂಡಿದ್ದ ಬಂದಿಗಳಿಗೆ ಜೈಲು ಅಧಿಕಾರಿಗಳು ನೀವುಗಳು ಗುಂಪು ಗೂಡಿ ಈ ರೀತಿ ನ್ಯಾಯಾಂಗ ಬಂಧನದಲ್ಲಿರುವಾಗ ಇನ್ನೊಬ್ಬ ಬಂದಿಯ ಮೇಲೆ ಹಲ್ಲೆ ಮಾಡಬಾರದಾಗಿ ತಿಳಿ ಹೇಳಲು ಯತ್ನಿಸುತ್ತಿದ್ದಾಗ ಜೈಲು ಅಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಇದ್ದ ಪಿರ್ಯಾದಿ ಹಾಗೂ ಸಿಬ್ಬಂದಿಗಳನ್ನು  ಉದ್ದೇಶಿಸಿ ಪೊಲೀಸರು ನೀವು ಇಲ್ಲಿ ಏತಕ್ಕಾಗಿ ಬಂದಿದ್ದೀರಿ, ನಿಮಗೆ ಇಲ್ಲಿ ಏನು ಕೆಲಸ, ಪೊಲೀಸರು ನೀವು ಇಲ್ಲಿಂದ ಹೋಗಿ ಎಂದು ಹೇಳಿದ್ದು, ನಾವುಗಳು ಹೋಗದೇ ಇದ್ದಾಗ ಅಲ್ಲಿದ್ದ ಬಂದಿಗಳು ಸಮಾನ ಉದ್ದೇಶದಿಂದ ಆಕ್ರಮಕೂಟ ಸೇರಿ ಒಮ್ಮೆಲೇ ನಮ್ಮ ಮೇಲೆರಗಿ ಅವರುಗಳು ನಮ್ಮೆಲ್ಲಾರನ್ನೂ ಕೈಯಿಂದ ಬಲವಾಗಿ ತಳ್ಳಿ ಕೆಳಗೆ ದೂಡಿ ಹಾಕಿರುವುದಲ್ಲದೇ ಆಕ್ರಮಕೂಟದ ಗುಂಪಿನಲ್ಲಿದ್ದ ಒಬ್ಬಾತ ಬಟ್ಟೆಯಲ್ಲಿ ಏನೋ ಒಂದು ಗಟ್ಟಿ ಸೊತ್ತನ್ನು ಕಟ್ಟಿ ಬಲವಾಗಿ ಪಿರ್ಯಾದಿ ಮೇಲೆ ಬೀಸಿದ್ದು, ಇದರಿಂದ ಬಲಕೈಗೆ ಹಾಗೂ ಕುತ್ತಿಗೆಗೆ ತಾಗಿ ನೋವುಂಟು ಮಾಡಿರುವುದರಿಮದ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿರುವ ಬಗ್ಗೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ

3) ಜಿಲ್ಲಾ ಕಾರಾಗೃಹ ಮಂಗಳೂರಿನಲ್ಲಿ ದಿನಾಂಕ 25-04-2021 ರಂದು ಬೆಳಗ್ಗೆ ಸಂಸ್ಥೆಯ ಹಗಲು ಮತ್ತು ರಾತ್ರಿ ಸಿಬ್ಬಂದಿಗಳಾದ 1.ಶ್ರೀ.ಬಸಪ್ಪ ದೇವೇಂದ್ರ ತೇವರಿ, ಸಹಾಯಕ ಜೈಲರ್, 2.ಶ್ರೀ. ಎ.ಎ.ಶಿರೋಳ್, ಸಹಾಯಕ ಜೈಲರ್, 3.ಶ್ರೀ.ಆದಿನಾಥ್ ಚಿಪ್ಪರಗಿ, ವೀಕ್ಷಕರು, 4.ಶ್ರೀ.ಮೆಹಬೂಬ್ ಡೋಣೂರ್, ವೀಕ್ಷಕರು, 5.ಶ್ರೀ.ಭರತೇಶ್,ವೈ. ವೀಕ್ಷಕರು,  6. ಶ್ರೀ.ರಾಜೇಶ್.ಟಿ, ವೀಕ್ಷಕರುಗಳು ಸೇರಿ 'ಎ' ಬ್ಯಾರಕ್ನ ಮೊದಲ ಮಹಡಿಯ 3, ಮತ್ತು 4ನೇ ಕೊಠಡಿಗಳ ಬೀಗಮುದ್ರೆ ತೆರೆದ ಬಳಿಕ 5ನೇ ಕೊಠಡಿಯ ಬೀಗಮುದ್ರೆಯನ್ನು ತೆರೆದು ಬಂದಿ ಎಣಿಕೆ ಮಾಡುತ್ತಿದ್ದಾಗ 'ಎ' ಬ್ಯಾರಕ್ನ 3ನೇ ಕೊಠಡಿಯಲ್ಲಿನ ಬಂದಿಗಳು ಆಕ್ರಮಕೂಟ ಸೇರಿಕೊಂಡು ಸಮಾನ ಉದ್ದೇಶದಿಂದ ಏಕಾಏಕಿ  5 ನೇ ಕೊಠಡಿಯ ಒಳಗೆ ನುಗ್ಗಿ ಸಿಬ್ಬಂದಿಗಳನ್ನು ತಳ್ಳಿ, ಪಿರ್ಯಾದಿ Chandan J Patel  Jail Staff ರವರ ಮೇಲೆ ಹಲ್ಲೆ ಮಾಡಿ ಕೊಠಡಿಯ ನೆಲದ ಮೇಲೆ ಮಲಗಿದ್ದ ಜೈನುದ್ದೀನ್ ಮೇಲೆ ಮೊದಲಿಗೆ ಹಲ್ಲೆ ನಡೆಸಿ ನಂತರ ಅನ್ಸಾರ್ ಈತನನ್ನು ಊಟದ ಪ್ಲೇಟ್ & ಚಮಚಗಳಿಂದ ತಯಾರಿಸಿದ ಚೂಪಾದ ವಸ್ತುಗಳಿಂದ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾಗ ಹಗಲು ಮತ್ತು ರಾತ್ರಿ ಸಿಬ್ಬಂದಿಗಳಾದ ಶ್ರೀ.ಬಸಪ್ಪ ದೇವೇಂದ್ರ ತೇವರಿ, ಸಹಾಯಕ ಜೈಲರ್, ಶ್ರೀ. ಎ.ಎ.ಶಿರೋಳ್, ಸಹಾಯಕ ಜೈಲರ್, ಶ್ರೀ. ಆದಿನಾಥ್ ಚಿಪ್ಪರಗಿ, ವೀಕ್ಷಕರು, ಶ್ರೀ.ಮೆಹಬೂಬ್ ಡೋಣೂರ್, ವೀಕ್ಷಕರು, ಶ್ರೀ.ಭರತೇಶ್,ವೈ. ವೀಕ್ಷಕರು, ಶ್ರೀ.ರಾಜೇಶ್.ಟಿ, ವೀಕ್ಷಕರುಗಳು ತಡೆಯಲು ಯತ್ನಿಸಿದಾಗ ಅಡ್ಡ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ನಿಮ್ಮನ್ನು ಮೊದಲು ಕೊಲೆ ಮಾಡಿಯಾದರೂ ಅವರನ್ನು ಸಾಯಿಸುತ್ತೇವೆ, ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತ ಮಕ್ಳ, ಬೇವರರ್ಸಿಗಳು ಸರೀರ್ಲೆ ಪಕ್ಕೆಕ್ಕೆ ಎಂದು ದೂಡಾಡುತ್ತಾ ಕೈಗಳಿಂದ ಹಲ್ಲೆ ಮಾಡುತ್ತಿದ್ದಾಗ ಉಳಿದ ಸಿಬ್ಬಂದಿಗಳನ್ನು ಜೋರಾಗಿ ಕೂಗಿ ಕರೆದಾಗ ಅಲ್ಲಿಗೆ ಆಗಮಿಸಿದ ಇತರೆ ಸಿಬ್ಬಂದಿಳಾದ ಶ್ರೀ.ಅಕ್ಷಯ್.ಎಂ, ಶ್ರೀ.ಮುತ್ತು ಚೌವ್ಹಾಣ್, ಶ್ರೀ.ಸಿರಾಜ್ ತರಾಳ್, ಎಲ್ಲ ಸಿಬ್ಬಂದಿಗಳು ಸೇರಿ ಒಟ್ಟುಗೂಡಿ 3ನೇ ಕೊಠಡಿಯ ಸದರಿ ಬಂದಿಗಳನ್ನು ಪುನಃ 3 ನೇ ಕೊಠಡಿಗೆ ತಂದು ಬೀಗಮುದ್ರೆ ಮಾಡಿ, ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಜೈನುದ್ದೀನ್ & ಅನ್ಸಾರ್ ಇವರುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ನಂತರ ಕೂಡಲೇ ಸಂಸ್ಥೆಯ ಸಿಬ್ಬಂದಿಗಳ ಬೆಂಗಾವಲಿನಲ್ಲಿ ಜಿಲ್ಲಾ ಸರ್ಕಾರಿ ವೆನ್ಲಾಕ್, ಆಸ್ಪತ್ರೆ ಮಂಗಳೂರು ಇಲ್ಲಿಗೆ ಕಳುಹಿಸಿ ಕೊಟ್ಟು  ಆರೋಪಿಗಳು ಅಕ್ರಮ ಕೂಟ ಸೇರಿ ಸರಿಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿರುವುದುದರಿಂದ ಆರೋಪಿಗಳ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Crime Reported in  E and N Crime PS

ಪ್ರಕರಣದ ಪಿರ್ಯಾದಿ SMT.SHUSHMA ರವರು ಶ್ರೀ ಭಗವತಿ ಸಹಕಾರ ಬ್ಯಾಂಕ.ನಿ ಜೆಪ್ಪು ಮಂಗಳೂರಿನ ಪ್ರಧಾನ ವ್ಯವಸ್ಥಾಪಕರಾಗಿದ್ದು ಆರೋಪಿ 5ನೇ ನಾಗೇಶ ಅಡ್ಕರವರು 2016-2017 ನೇ ಸಾಲಿನಲ್ಲಿ ಜೆಪ್ಪು ಶಾಖೆಯ ಶಾಖಾ ವ್ಯವಸ್ಥಾಪಕರಾಗಿದ್ದ ಸಮಯ ಆರೋಪಿ 4ನೇ ಫೆಡ್ರಿಕ್ ಡಿ’ಸೋಜಾ ರವರು ಅವರ ಬಾಬ್ತು ಬಂಟ್ವಾಳ ತಾಲೂಕು ಪಜೀರು ಗ್ರಾಮದ ಸರ್ವೆ ನಂ.9/11ಎ ರಲ್ಲಿನ 6 ಸೆಂಟ್ಸ್ ಜಾಗವನ್ನು ಮಾರಾಟ ಮಾಡವುದಾಗಿಯು 1ನೇ ಆರೋಪಿ ಚಂದ್ರಶೇಖರ್ ರವರು  ಸದ್ರಿ ಜಾಗವನ್ನು ಖರೀದಿ ಮಾಡುವದಾಗಿಯು  ಸದ್ರಿ ಜಾಗವು  ಖಾಲಿ ಜಾಗವಾಗಿದ್ದು ಆರೋಪಿತರೆಲ್ಲರು ಒಟ್ಟು ಸೇರಿ ಬ್ಯಾಂಕಿಗೆ  ವಂಚಿಸುವ ಉದ್ದೇಶದಿಂದಲೇ ಖಾಲಿ ಜಾಗದಲ್ಲಿ ಮನೆ ಇರುವಂತೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ದಾಖಲಾತಿಗಳನ್ನು ಬ್ಯಾಂಕ್ ನಲ್ಲಿ ಅಡಮಾನ ಇರಿಸಿ ನೈಜವೆಂದು ನಂಬಿಸಿ ಬ್ಯಾಂಕ್ ನಿಂದ ರೂ 18 ಲಕ್ಷ ಸಾಲವನ್ನು ಪಡೆದು ಬ್ಯಾಂಕ್ ಗೆ ಮರುಪಾವತಿಸದೆ ಮೋಸದಿಂದ ವಂಚಿಸಿರುವದಾಗಿದೆ.

24-04-2021

Crime Reported in  Mangalore North PS

ಪಿರ್ಯಾದಿ NAZIR MOHAMMAD ದಾರರು ದಿನಾಂಕ 24.04.2021 ರಂದು ಸಂಜೆ ಸಮಯ 06.00 ಗಂಟೆಗೆ ಕುದ್ರೋಳಿ A1 ಪ್ಲಾಟ್ ಬಳಿ KA-19-EV-4984 ನೇ ಸ್ಕೂಟರ್ ನಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಸಮಯ ಆರೋಪಿಗಳಾದ  ಸುಹೇಲ್ ಮತ್ತು ಅನೀಫ್ ಕಪ್ಪು ಬಣ್ಣದ ಸ್ಕೂಟರ್ ನಲ್ಲಿ ಕುಳಿತ್ತಿದ್ದವರು  ಮತ್ತು ಅವರ ಜೊತೆಗಿದ್ದ 03 ಮಂದಿ ಆರೋಪಿಗಳು ಸೇರಿ ಕೊಲೆ ಮಾಡುವ ಉದ್ದೇಶದಿಂದ  ಪಿರ್ಯಾದಿದಾರರನ್ನು ಅಡ್ಡ ಗಟ್ಟಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ......ಮೊನು ನಿಕ್ಕ ಬಾರಿ ಅಹಂಕಾರ ಉಂಡುಲಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಸುಹೇಲ್ ಮತ್ತು ಅನೀಫ್ ಪಿರ್ಯಾದಿದಾರರನ್ನು ಸ್ಕೂಟರ್ ನಿಂದ ಎಳೆದು ಹಾಕಿ ಹಿಂಬದಿಯಿಂದ ಉಳಿದ ಮೂವರು ಪಿರ್ಯಾದಿದಾರರ ಕೈಯನ್ನು ಲಾಕ್ ಹಾಕಿ ಹಿಡಿದಾಗ ಅವರ ಪೈಕಿ ಸುಹೇಲ್ ನು  ಕಬ್ಬಿಣದ ರಾಡಿನಿಂದ ಪಿರ್ಯಾದಿದಾರರ ತಲೆಗೆ ಬಲವಾಗಿ ಹೊಡೆದು ರಕ್ತ ಗಾಯಗೊಳಿಸಿ  ಆರೋಪಿ ಅನೀಫ್ ನು ಮರದ ರೀಪ್ ನಿಂದ ಎಡಕಾಲಿಗೆ ಹೊಡೆದು  ಗಾಯಗೊಳಿಸಿ ನಂತರ ಎಲ್ಲಾ 05 ಜನ ಆರೋಪಿಗಳು ಸೇರಿಕೊಂಡು ಕಾಲಿನಿಂದ ತುಳಿದು ಕೊಲೆಗೆ ಪ್ರಯತ್ನಿಸಿರುವುದಾಗಿದೆ ಎಂಬಿತ್ಯಾದಿ.

Crime Reported in  Surathkal PS   

ಫಿರ್ಯಾದಿ P Sadashiv Karantha ರವರು ದಿನಾಂಕ:23-04-2021 ರಂದು ರಾತ್ರಿ ಕುಳಾಯಿ ಗ್ರಾಮದ ಕಾವಿನಕಲ್ಲು ಎಂಬಲ್ಲಿರುವ ತಮ್ಮ ಕುಟುಂಬದ ಶ್ರೀ ಸತ್ಯದೇವತೆ ಗುಡಿಗೆ ಬೀಗ ಹಾಕಿ ತೆರಳಿದ್ದು ದಿನಾಂಕ: 24-04-2021 ರಂದು ಬೆಳಿಗ್ಗೆ 08-00 ಗಂಟೆಗೆ ನೋಡಲಾಗಿ ಗುಡಿಯ ಬಾಗಿಲಿಗೆ ಅಳವಡಿಸಿದ ಬೀಗವನ್ನು ಯಾವುದೋ ಆಯುಧದಿಂದ ಒಡೆದು ಒಳಗೆ ಪ್ರವೇಶಿಸಿ ಗುಡಿಯಲ್ಲಿದ್ದ ಸುಮಾರು 800 ಗ್ರಾಂ ತೂಕದ ಬೆಳ್ಳಿಯ ದೇವರ ವಿಗ್ರಹ, 20 ಗ್ರಾಂ ತೂಕದ ಬೆಳ್ಳಿಯ ನಾಗನ ಹೆಡೆ, ಸುಮಾರು 15 ಗ್ರಾಂ ತೂಕದ ಬೆಳ್ಳಿ ಕಟ್ಟಿಸಿದ ಶಂಖ ಮತ್ತು ಸುಮಾರು 15 ಗ್ರಾಂ ತೂಕದ ಶಂಖ ಇಡುವ ಬೆಳ್ಳಿಯ ಪೀಠ ಮತ್ತು ಸ್ಟೀಲ್ ಕಾಣಿಕೆ ಡಬ್ಬಿ ಇತ್ಯಾದಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಗುಡಿಯಲ್ಲಿದ್ದ ಕಪಾಟನ್ನು ಬಲವಂತವಾಗಿ ಒಡೆದು ಜಖಂಗೊಳಿಸಿರುತ್ತಾರೆ. ಅಲ್ಲದೇ ಹತ್ತಿರದಲ್ಲಿ ಇದ್ದ ಶ್ರೀ ಕಲ್ಲುರ್ಟಿ- ಕಲ್ಕುಡ- ಪಂಜುರ್ಲಿ ದೈವಗಳ ಗುಡಿಗೆ ಹಾಕಿದ ಬೀಗವನ್ನು ಒಡೆದಿರುತ್ತಾರೆ. ಕಳವಾದ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 40,000/- ಗಳಷ್ಟಾಗಿರುತ್ತದೆ ಎಂಬಿತ್ಯಾದಿ

Crime Reported in  Moodabidre PS     

ದಿನಾಂಕ: 24-04-2021 ರಂದು ಬೆಳಗ್ಗೆ ಪಿರ್ಯಾದಿ Suresh Gowda  ದಾರರು ಕೆ.ಎ-21-ಎ-4495 ನೇ ಟ್ಯಾಂಕರ್ ಲಾರಿಯನ್ನು ಮಂಗಳೂರಿನಿಂದ ಹೋಸ್ಮಾರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಬೆಳಗ್ಗೆ 11.00 ಗಂಟೆಗೆ ಶಿರ್ತಾಡಿ ಸಮೀಪ ತಲುಪುತ್ತಿದ್ದಂತೆ ಎದುರುಗಡೆ ಅಂದರೆ ಶಿರ್ತಾಡಿ ಕಡೆಯಿಂದ ಅಂದರೆ ಮೀನಿ ಗೂಡ್ಸ್ ಟೆಂಪೋ ಚಾಲಕನು ತನ್ನ ಬಾಬ್ತು ವಾಹನವನ್ನು ರಾಂಗ್ ಸೈಡಿನಲ್ಲಿ ವೇಗವಾಗಿ ಮೋಬೈಲ್ ಪೋನಿನಲ್ಲಿ ಮಾತನಾಡುತ್ತಾ ಚಲಾಯಿಸಿಕೊಂಡು ಬರುವುದನ್ನು ಕಂಡ ಪಿರ್ಯಾದಿದಾರರು ತನ್ನ ಟ್ಯಾಂಕರ್ ನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದು ಎದುರಿನಿಂದ ಬಂದ ಮೀನಿ ಗೂಡ್ಸ್ ಟೆಂಪೋ ದ ಚಾಲಕನು ವೇಗವಾಗಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನವು ತಿರುಗಿ ಬಿದ್ದಿದ್ದು ಇದರ ಪರಿಣಾಮ ಗೂಡ್ಸ್ ವಾಹನದ ಚಾಲಕನಿಗೆ ತೀವ್ರ ತರದ ಗಾಯಗಳಾಗಿ ಆಳ್ವಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರದುಕೊಂಡು ಹೊದಲ್ಲಿ ಮದ್ಯಾಹ್ನ ಸಮಯ ಸುಮಾರು 2.00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಸದ್ರಿ ಮೀನಿ ಗೂಡ್ಸ ವಾಹನದ ನಂಬ್ರ ಕೆ.ಎ-70-2202 ಆಗಿರುತ್ತದೆ. ಕೆ.ಎ-70-2202 ನೇ ವಾಹನದ ಚಾಲಕ ಭವಿಷ್ ಕುಮಾರ್ ರವರು ತನ್ನ ಬಾಬ್ತು ವಾಹನವನ್ನು ಅತೀ ವೇಗ ನಿರ್ಲಕ್ಷತನದಿಂದ ಚಲಾಯಿಸಿರುವುದೇ ಕಾರಣವಾಗಿರುತ್ತದೆ ಎಂಬಿತ್ಯಾದಿ.

23-04-2021

Crime Reported in  Mangalore Women PS

 ದಿನಾಂಕ 17-04-2021 ರಂದು  ಸಂಜೆ  ಸುಮಾರು 7.00 ಗಂಟೆಯ ಹೊತ್ತಿಗೆ ಒಬ್ಬ ಮುಸ್ಲಿಂ ಹುಡುಗ ಮೊಹಮ್ಮದ್ ವಾಸೀಂ ಹಸೈನಾರ್ ಎಂಬಾತನು ಪಿರ್ಯಾದಿ SWATHI ಎಂಬವರಿಗೆ  ಬೇಡದ ವಿಷಯದಿಂದ ಅವಹೇಳನ ಮಾಡಿರುತ್ತಾರೆ, ಪಿರ್ಯಾದಿದಾರರು ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಎಂಬಿತ್ಯಾದಿ

Crime Reported in  Ullal PS

ಪಿರ್ಯಾದಿ Rasheeda ರವರ ಗಂಡ ಅಹಮ್ಮದ್ ಅಶ್ರಫ್ ರವರು ದಿನಾಂಕ 22-4-2021 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಸಂಜೆ ಉಪವಾಸ ಬಿಡುವ ಸಮಯದಲ್ಲಿ ಬಾರದೇ ಇದ್ದಾಗ ಪಿರ್ಯಾದಿದಾರರು ಅಹಮ್ಮದ್ ಅಶ್ರಫ್ ರವರಿಗೆ ಪೋನ್ ಕರೆ ಮಾಡಿದಾಗ  ಪೋನ್ ಕರೆಯನ್ನು ಸ್ವೀಕರಿಸದೇ ಇದ್ದು, ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದರು ಎಲ್ಲಿದ್ದಾರೆಂದು ತಿಳಿಯದೇ ಮತ್ತು ಅವರನ್ನು ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ನಂತರ ದಿನಾಂಕ 22-04-2021 ರಂದು ಸಂಜೆ 4-21 ಗಂಟೆಗೆ ಪಿರ್ಯಾದಿದಾರರ ಗಂಡನ ತಮ್ಮಅಬ್ದುಲ್ ಸಮದ್ ಉಪಯೋಗಿಸುವ ಮೊಬೈಲ್ ನಂಬ್ರ ನೇಯದಕ್ಕೆ +53071351 ನೇ ನೆಟ್ಕಾಲ್ ಮುಖಾಂತರ ಕರೆ  ಮಾಡಿದ ವ್ಯಕ್ತಿ ಇಕ್ಬಾಲ್ ಎಂದು ಪರಿಚಯಿಸಿಕೊಂಡು, ಪಿರ್ಯಾದಿದಾರರ ಗಂಡ ಅಹಮ್ಮದ್ ಅಶ್ರಫ್ ರವರನ್ನು ಅಪಹರಿಸಿರುವುದಾಗಿ ತಿಳಿಸಿ  ರೂ 25,00,000/- ಹಣವನ್ನು ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯಲ್ಲಿ ಕೊಡಬೇಕೆಂದು ಬೇಡಿಕೆ ಒಡ್ಡಿ ಅವರ ಮೊಬೈಲ್ ನಂಬ್ರ ನೀಡಿದ್ದು, +53071351  ಪದೇ ಪದೇ ಕರೆ ಮಾಡಿ ಹಣವನ್ನು ಕೊಡದಿದ್ದರೆ ಪಿರ್ಯಾದಿದಾರರ ಗಂಡನನ್ನು ಹಾಗೂ ಪ್ಯಾಮಿಲಿಯ ಎಲ್ಲರನ್ನು ಸಾಯಿಸುವುದಾಗಿ ಬೆದರಿಕೆ ಒಡ್ಡಿರುತ್ತಾರೆ. ಪಿರ್ಯಾದಿದಾರರ ಗಂಡ ಅಹಮ್ಮದ್ ಅಶ್ರಫ್  ರವರು ಮಂಜೇಶ್ವರ ಮಚ್ಚಂಪಾಡಿ ವಾಸಿ ಇಕ್ಬಾಲ್ ರವರ ಜೊತೆಯಲ್ಲಿ ನೆಟ್ವರ್ಕ್ ವ್ಯವಹಾರ ನಡೆಸುತ್ತಿದ್ದು ವ್ಯವಹಾರದಲ್ಲಿ ತಕರಾರು ಉಂಟಾದ  ಕಾರಣಕ್ಕೆ ಪಿರ್ಯಾದಿದಾರರ ಗಂಡನನ್ನು ಇಕ್ಬಾಲ್ ಮತ್ತು ಅವರ ಸಹಚರರು ಅಪಹರಿಸಿಕೊಂಡು ಹೋಗಿರುವ ಸಾಧ್ಯತೆ ಇದ್ದು, ಅಪಹರಣಕ್ಕೊಳಗಾಗಿರುವ ನನ್ನ ಗಂಡನನ್ನು ಪತ್ತೆ ಮಾಡಿ ಇಕ್ಬಾಲ್ ಮತ್ತು ಅವರ ಸಹಚರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ

22-04-2021

Crime Reported in  Mangalore East PS 

ಪಿರ್ಯಾದಿ Mohammed Haneef ರವರು ದುಬೈಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಕಳೆದ 7 ತಿಂಗಳಿಂದ ಊರಿಗೆ ಬಂದಿದ್ದು, ಅಗಾಗ ಮಂಗಳೂರಿಗೆ ಭೇಟಿ ನೀಡುತ್ತಿದ್ದರು. ಪಿರ್ಯಾದಿ ದಾರರ ಅಣ್ಣ ಹಣಕಾಸು ಸಮಸ್ಯೆಯಿಂದ ಬಳಲುತ್ತಿದ್ದು, ಸದ್ರಿ ಸಮಸ್ಯೆಯನ್ನು ಬಗೆಹರಿಸಲು ದಿವ್ಯ ದರ್ಶನ್ ಎಂಬ ಪ್ರಭಾವಿಯನ್ನು ಅಗಸ್ಟ್ 2018 ರಂದು ಪಿರ್ಯಾದಿ ಮತ್ತು ಪಿರ್ಯಾದಿಯ ತಮ್ಮ ಬಾಷಾ ರವರು ಆತನ ಹೈಲ್ಯಾಂಡ್ ಬಿಷಪ್ ರೋಡ್ ನಲ್ಲಿರುವ ಮನೆಯಲ್ಲಿ ಭೇಟಿಯಾಗಿದ್ದು, ಆ ವೇಳೆಗೆ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಮಾತುಕೊಟ್ಟಿರುತ್ತಾರೆ. ಎರಡು ದಿನಗಳ ನಂತರ ದಿವ್ಯ ದರ್ಶನ್ ಕರೆ ಮಾಡಿ 25 ಲಕ್ಷ ತಕ್ಷಣ ವ್ಯವಸ್ಥೆ ಮಾಡಿ ಎಂದು ಕೇಳಿದ್ದು, ಆ ಸಮಯಕ್ಕೆ ಹಣದ ವ್ಯವಸ್ಥೆ ಮಾಡಲಾಗದೇ ಇದ್ದಾಗ ತಾನು ಹಣದ ವ್ಯವಸ್ಥೆ ಮಾಡುತ್ತೇನೆ, ತಿಂಗಳಿಗೆ ರೂ. 3 ಲಕ್ಷದಂತೆ  ಪಾವತಿಸಬೇಕು ಎಂದು ಹೇಳಿದ್ದಕ್ಕೆ ಪಿರ್ಯಾದಿದಾರರು ಒಪ್ಪಿರುತ್ತಾರೆ. ಆದರೆ ಪಿರ್ಯಾದಿದಾರರಿಗೆ ಹಣ ಪಾವತಿಸಲು ಸಾಧ್ಯವಾಗದೇ ಇದ್ದಾಗ ದಿವ್ಯದರ್ಶನ್ ದಿನಾಂಕ 31-12-2018 ರಂದು ಪಿರ್ಯಾದಿದಾರರ ಮನೆಗೆ ಬಂದು ಅವರ ಹೊಸ ಜಾಗ್ವಾರ್ ಕಾರನ್ನು ಕೊಂಡು ಹೋಗಿರುತ್ತಾರೆ. ಬಳಿಕ ಪಿರ್ಯಾದಿದಾರರು ಸಾಲ ಮಾಡಿ ಒಟ್ಟು ರೂ. 55 ಲಕ್ಷವನ್ನು ದಿವ್ಯ ದರ್ಶನ್ ಗೆ ನೀಡಿ ಕಾರನ್ನು ವಾಪಾಸು ಪಡೆದುಕೊಂಡಿರುತ್ತಾರೆ. ಆ ಬಳಿಕ ದಿವ್ಯದರ್ಶನ್ ನಂಬಿಕಸ್ತನಂತೆ ಇದ್ದರು. ಬಳಿಕ ದಿವ್ಯದರ್ಶನ್  ಪಿರ್ಯಾದಿದಾರರಿಗೆ ಮಂಗಳೂರಿನಲ್ಲಿ ಉಳಕೊಳ್ಳಲು ದೋಸಾ ಕ್ಯಾಂಪ್ ಬಳಿ ಅಪಾರ್ಟ್ ಮೆಂಟನ್ನು  ವ್ಯವಸ್ಥೆ ಮಾಡಿರುತ್ತಾರೆ. ಅಲ್ಲಿಗೆ ಉಪ್ಪಲದ ಶರೀಫ್, ಶನೀಫ್, ಮಹೇಶ್, ಸಾಜೀರ್, ಸುಧೀರ್ ರಾಜ್ ಮತ್ತು ಪ್ರೀತಮ್  ರವರು ದಿವ್ಯದರ್ಶನ್ ನೊಂದಿಗೆ ಬಂದು ನೀನು ದುಬೈಯಲ್ಲಿ ಬಿಸ್ ನೆಸ್ ಪಾರ್ಟ್ ನರ್ ಆಗಿದ್ದ ಶರೀಫ್ ಗೆ ಮೋಸ ಮಾಡಿ ಹಣ ಮತ್ತು ಚಿನ್ನಾಭರಣಗಳನ್ನು ಊರಿಗೆ ಬಂದು ಕಾರು ಬಂಗ್ಲೆ ಮತ್ತು ಆಸ್ತಿಯನ್ನು ಹೊಂದಿದ್ದು, ಅದನ್ನು ರಿಕವರಿ ಮಾಡಿ ವಾಪಾಸು ಶರೀಫ್ ಗೆ   2 ಕೋಟಿ ಹಣ ಕೊಡಬೇಕು. ಕೂಡಲೇ ಹಣದ  ವ್ಯವಸ್ಥೆ ಮಾಡಬೇಕೆಂದು ಅವಾಚ್ಯ ಶಬ್ದಗಳಿಂದ ಬೈದು, ಬಂದೂಕು ತೋರಿಸಿ,  ಹಣ ಕೊಡದೇ ಇದ್ದಲ್ಲಿ ಪಿರ್ಯಾದಿದಾರರನ್ನು ಮತ್ತು ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಪಿರ್ಯಾದಿದಾರರನ್ನು  ದಿವ್ಯದರ್ಶನ್  ಮತ್ತು ಆತನ ಗ್ಯಾಂಗ್ ನವರು  ಪ್ಲಾಟ್ ನಲ್ಲಿ   ಅಕ್ರಮ ಬಂಧನದಲ್ಲಿಟ್ಟು, ಕೊಲ್ಲುವ ಬೆದರಿಕೆ ಹಾಕಿ ಹಣವನ್ನು ಸುಲಿಗೆ ಮಾಡಿರುತ್ತಾರೆ ಅಲ್ಲದೇ  ದಿನಾಂಕ 04-01-2020 ರಂದು ಪಿರ್ಯಾದಿದಾರರ ಕಣ್ಣೂರಿನಲ್ಲಿರುವ ಮನೆಯ ಕಾಗದ ಪತ್ರವನ್ನು ಪಡೆದು ಬಲಾತ್ಕಾರವಾಗಿ ಮನೆಯ ಸೇಲ್ ಅಗ್ರಿಮೆಂಟ್ ಮಾಡಿದ ಬಳಿಕ ಪಿರ್ಯಾದಿದಾರರನ್ನು ಬಿಡುಗಡೆ ಮಾಡಿರುತ್ತಾರೆ ಎಂಬಿತ್ಯಾದಿ

Crime Reported in  Konaje PS

ದಿನಾಂಕ:22.04.2021 ರಂದು ಪಿರ್ಯಾದಿದಾರರಾದ ಪಿಎಸ್ಐ ಮಲ್ಲಿಕಾರ್ಜುನ್ ಬಿರಾದಾರ ರವರು ಸಿಬ್ಬಂದಿದಾರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಮಾಡುತ್ತಾ ಸಮಯ 18-30 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ತಿಬ್ಲೆಪದವು ಎಂಬಲ್ಲಿ ತಲುಪಿದಾಗ ಕೊಣಾಜೆ ಕಡೆಯಿಂದ ದೇರಳಕಟ್ಟೆ ಕಡೆಗೆ  ಬರುತ್ತಿದ್ದ ಮರಳು ತುಂಬಿದ ಲಾರಿ ನಂಬ್ರ ಕೆಎಲ್.04.ಎಕ್ಸ್ 0945 ನೇದರ ಚಾಲಕನು ಪೊಲೀಸು ವಾಹನವನ್ನು ಕಂಡು  ರಸ್ತೆ ಬದಿಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದು, ಆರೋಪಿಯು ಸದ್ರಿ ಲಾರಿಯಲ್ಲಿ ಎಲ್ಲಿಯೋ ನದಿ ತೀರದಿಂದ ಮರಳನ್ನು ಕಳವು ಮಾಡಿ ತುಂಬಿಸಿ ಕರ್ನಾಟಕ ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ ಹಾಗೂ ಯಾವುದೇ ದಾಖಲೆ ಪತ್ರಗಳಿಲ್ಲದೇ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ, ಮರಳು ತುಂಬಿದ ಲಾರಿಯನ್ನು ಸ್ವಾಧೀನಪಡಿಸಿಕೊಂಡು ಠಾಣೆಗೆ ತಂದು ಆರೋಪಿಯ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in  Surathkal PS

1) ದಿನಾಂಕ: 21-04-2021 ರಂದು ರಾತ್ರಿ 22-30 ಗಂಟೆಗೆ ಕಾಟಿಪಳ್ಳ ಗ್ರಾಮದ 3ನೇ ಬ್ಲಾಕ್ ನಲ್ಲಿ ಫಿರ್ಯಾಧಿದಾರರಾದ ಶ್ರೀಮತಿ ಸಪ್ನಾ ಸುನೀಲ್ ಇವರು ಅವರ ಗಂಡ ಸುನೀಲ್ ಜೊತೆ ಅವರ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವಾಗ  ಅವರ ಎದುರಿನಲ್ಲಿ ನಡೆದುಕೊಂಡು ಬರುತ್ತಿದ್ದ ನೆರೆಮನೆಯ ವಾಸಿ ಫೌಲ್ ಡಿಸೋಜಾ ಎಂಬವರು ಸುನೀಲ್ ಅವರನ್ನು ತಡೆದು ನಿಲ್ಲಿಸಿ ನೀನು ಬಾರಿ ಪೊಲೀಸ್ ಕಂಪ್ಲೆಂಟ್ ಕೊಡುತ್ತೀಯಾ ಬೇವರ್ಸಿ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಸುನೀಲ್ ರವರ ಮುಖಕ್ಕೆ ಗುದ್ದಿ ತುಟಿಗೆ ಗಾಯಗೊಳಿಸಿ ಬಿಡಿಸಲು ಹೋದ ಫಿರ್ಯಾಧಿದಾರರಾದ ಶ್ರೀಮತಿ ಸಪ್ನಾ ಸುನೀಲ್ ರವರ ಎದೆಗೆ ಕೈ ಹಾಕಿ ಆಕೆಯ ಚೂಡಿದಾರದ ಟಾಪ್ ನ ಬಲಭುಜವು ಫೌಲ್ ಡಿಸೋಜಾರವರ ಕೈಗೆ ಸಿಕ್ಕಿ ಹರಿದಿರುವುದಾಗಿದೆ. ಫೌಲ್ ಡಿಸೋಜಾರವರು ಫಿರ್ಯಾಧಿದಾರರನ್ನು ತಳ್ಳಿದಾಗ ಅವರ ಕೈ ಉಂಗುರ ಫಿರ್ಯಾಧಿದಾರರ ಕುತ್ತಿಗೆ ಬಳಿ ತಾಗಿ ಪರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿರುತ್ತದೆ.ದಿನಾಂಕ: 20-04-2021 ರಂದು ಫೌಲ್ ಡಿಸೋಜಾ ರವರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಕ್ಕೆ ಆರೋಪಿ ಈ ಕೃತ್ಯ ಮಾಡಿದ್ದಾಗಿದೆ. ಆರೋಪಿ ವಿರುದ್ದ ಕ್ರಮ ಜರುಗಿಸುವರೇ ಎಂಬಿತ್ಯಾದಿಯಾಗಿರುತ್ತದೆ

2)ದಿನಾಂಕ: 21-04-2021 ರಂದು ರಾತ್ರಿ 10-30 ಗಂಟೆಗೆ ವಾಕಿಂಗ್ ಹೋಗಿದ್ದ ಫಿರ್ಯಾದಿದಾರರಾದ ಶ್ರೀಮತಿ ವೀಣಾ ಡಿಸೋಜಾರವರ ಗಂಡನಿಗೆ ಅವರ ನೆರೆಮನೆಯ ಸುನೀಲ್ ಎಂಬವರು ಅವರ ಮನೆಯ ಬಳಿ ಕೈಯಿಂದ ಹೊಡೆದ ವಿಚಾರವಾಗಿ ಫಿರ್ಯಾದಿದಾರರು ಅವರ ಗಂಡ ಪೌಲ್ ಡಿಸೋಜಾ ಜೊತೆ ಅವರ ಬಾಬ್ತು ಕಾಟಿಪಳ್ಳ ಗ್ರಾಮದ ಕಾಟಿಪಳ್ಳ 3ನೇ ಬ್ಲಾಕಿನ ಮನೆಯ ಎದುರಿನ ರಸ್ತೆಯಲ್ಲಿದ್ದ ಸುನೀಲ್ ರವರಲ್ಲಿ ವಿಚಾರಿಸಿದ್ದಕ್ಕೆ, ಸುನೀಲ್ ಹಾಗೂ ಅವರ ಹೆಂಡತಿ ಸಪ್ನಾ ಇವರು ‘ಲೋಫರ್, ..ಮಗ, ಬೇವರ್ಸಿ ನಿನಗೆ ಏನು ಮಾಡಬೇಕೆಂದು’ ಹೇಳಿ ಕೈಗಳಿಂದ ಪೌಲ್ ಡಿಸೋಜಾ ರವರ ಬೆನ್ನಿಗೆ ಹೊಡೆದು ಕೈಯಿಂದ ಗಟ್ಟಿಯಾಗಿ ಹಿಡಿದು ಲಾಕ್ ಮಾಡಿದ್ದು, ಆ ಸಮಯ ಶ್ರೀಮತಿ ಸಪ್ನ ರವರು ಕೈಯಿಂದ ಪೌಲ್ ಡಿಸೋಜಾ ರವರ ಭುಜಕ್ಕೆ ಹೊಡೆದು ಬಿಡಿಸಲು ಬಂದ ಫಿರ್ಯಾದಿದಾರರ ಬಲಭುಜಕ್ಕೆ ಕೈಹಾಕಿ ನೈಟಿಯ ಬಲಭುಜವನ್ನು ಹರಿದು ಮಾನಹಾನಿ ಮಾಡಿದ್ದಾಗಿದೆ. ಹಾಗೂ ಶ್ರೀಮತಿ ಸಪ್ನಾ ರವರು ಫಿರ್ಯಾದಿದಾರರನ್ನು ರಸ್ತೆಗೆ ದೂಡಿದ್ದಾಗಿದೆ. ಈ ಘಟನೆ ದಿನಾಂಕ 21.04.2021 ರಂದು ರಾತ್ರಿ 10.30 ಗಂಟೆಯಿಂದ ರಾತ್ರಿ 10.45 ಗಂಟೆಯ ಮಧ್ಯೆ ನಡೆದಿದ್ದು ಅವರೊಳಗಿನ ಜಾಗದ ಗಡಿ ಗುರುತಿನ ವಿಚಾರದಲ್ಲಿ ದ್ವೇಷಗೊಂಡು ಹಲ್ಲೆ ಮಾಡಿದ್ದಾಗಿದೆ. ಆರೋಪಿಗಳ ವಿರುದ್ಧ ಕ್ರಮ ಜರುಗಿಸುವರೇ ಎಂಬಿತ್ಯಾದಿಯಾಗಿರುತ್ತದೆ.

3) ಪಿರ್ಯಾದಿ Jeevan (27) ದಾರರು ದಿನಾಂಕ 15.04.2021 ರಂದು ಕೆಲಸ ಮುಗಿಸಿ ಸಹೋದ್ಯೋಗಿ ಸುಧೀರ್ ರವರೊಂದಿಗೆ ಅವರ ಮೋಟಾರ್ ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಮನೆಗೆ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 08.20 ಗಂಟೆಗೆ ಎನ್.ಐ.ಟಿ.ಕೆ ಕಾಲೇಜ್ ಸಮೀಪಿಸುತ್ತಿದ್ದಂತೆ ಸರ್ವೀಸ್ ರಸ್ತೆಯಲ್ಲಿ ಮೋಟಾರ್ ಸೈಕಲ್ ಸವಾರಿಬ್ಬರ ಪೈಕಿ ಹಿಂಬದಿ ಸವಾರನು ಒಂದು ಕಂದು ಬಣ್ಣದ ನಾಯಿಯೊಂದರ ಕಾಲಿಗೆ ಹಗ್ಗವನ್ನು ಕಟ್ಟಿಕೊಂಡು ರಸ್ತೆಯಲ್ಲಿ ಎಳೆದಾಡಿಕೊಂಡು ಹೋಗುತ್ತಿರುವುದನ್ನು ಕಂಡು ಪಿರ್ಯಾದಿದಾರರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಕರಣ ಮಾಡಿಕೊಂಡಿರುತ್ತಾರೆ. ಅಲ್ಲದೇ ಬೊಬ್ಬೆ ಹೊಡೆದು ಅವರನ್ನು ತಡೆಯಲು ಪ್ರಯತ್ನಿಸಿದ್ದು ಪಿರ್ಯಾದಿದಾರರು ಬೈಕ್ ತಿರುಗಿಸಿ ಸರ್ವೀಸ್ ರಸ್ತೆಗೆ ವಾಪಾಸು ಬರುವಷ್ಟರಲ್ಲಿ ಬೈಕ್ ಸವಾರಿಬ್ಬರು ಪರಾರಿಯಾಗಿರುತ್ತಾರೆ. ಬೈಕ್ ಸವಾರಿಬ್ಬರ ಚಹರೆಯನ್ನು ಪಿರ್ಯಾದಿದಾರರು ದೀಪದ ಬೆಳಕಿನಲ್ಲಿ ನೋಡಿದ್ದು ಹಾಗೂ ಮುಂದಕ್ಕೆ ನೋಡಿದಲ್ಲಿ ಗುರುತಿಸುವುದಾಗಿ, ಈವರೆಗೆ ಬೈಕ್ ಸವಾರಿಬ್ಬರನ್ನು ಪತ್ತೆ ಮಾಡಲು ಪಿರ್ಯಾದಿದಾರರರು ಪ್ರಯತ್ನಿಸಿ ಅವರು ಪತ್ತೆಯಾಗದ ಕಾರಣ ಸಂಬಂಧಪಟ್ಟ ಸಂಘಕ್ಕೆ ಮಾಹಿತಿ ನೀಡಿ ಅವರ ಸೂಚನೆಯಂತೆ ಇಂದು ವಿಳಂಭವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿರುತ್ತದೆ ಎಂಬಿತ್ಯಾದಿ.

21-04-2021

Crime Reported in  Kavoor PS

ಪಿರ್ಯಾದಿ VENUGOPALA (60) ದಾರರ ಮಗಳಾದ ರೇವತಿ (21) ವರ್ಷ, ಎಂಬವರು ಡಿಗ್ರಿಯವರೆಗೆ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಕೆಲಸಕ್ಕಾಗಿ ಹುಡುಕಾಡುತ್ತಿದ್ದು ದಿನಾಂಕ 19/04/2021 ರಂದು ಬೆಳಿಗ್ಗೆ ಸುಮಾರು 8:00 ಗಂಟೆಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಕಾವೂರಿನ ದಿಯಾ ಸಿಸ್ಟಮ್ ಸಂಸ್ಥೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವಳು, ಈವರೆಗೂ ಮನೆಗೂ ಬಾರದೇ ಸಂಬಂದಿಕರ ಮನೆಗೂ ಹೋಗದೆ ವಾಪಸ್ಸು ಬಾರದೆ ಕಾಣಿಯಾಗಿರುತ್ತಾಳೆ. ಈ ಬಗ್ಗೆ ಆಕೆಯ ಸ್ನೇಹಿತರಲ್ಲಿ, ನೆರೆಹೊರೆಯವರಲ್ಲಿ ವಿಚಾರಿಸಿದ್ದು ಯಾವುದೇ ಉಪಯುಕ್ತ ಮಾಹಿತಿ ಲಭ್ಯವಾಗಿರುವುದಿಲ್ಲ ಆದ್ದುದರಿಂದ ಕಾಣಿಯಾದ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ.

ಚಹರೆ:ರೇವತಿ (21)

ಎತ್ತರ: 5’ ಅಡಿ,  ದುಂಡು ಮುಖ, ಎಣ್ಣೆ ಕಪ್ಪು ಮೈ ಬಣ್ಣ, ದಪ್ಪ ಶರೀರ, ನೀಳ ಕಪ್ಪು ಕೂದಲು.

Crime Reported in  Mangalore South PS

ಪ್ರಕರಣದ ಪಿರ್ಯಾದಿದಾರರಾದ  ಗಿಲ್ಬರ್ಟ್  ಮೆನ್ ಜೆಸ್ ಪ್ರಾಯ:72 ವರ್ಷ ರವರು ದಿನಾಂಕ : 21-04-2021 ರಂದು ಸಾಯಂಕಾಲ 6-00 ಗಂಟೆಗೆ ಮಂಗಳೂರು ನಗರದ ಪಳ್ಳಿರ್ ರಸ್ತೆಯಲ್ಲಿರುವ  ಚರ್ಚ್ ಗೆ ಪ್ರಾರ್ಥನೆ ಮಾಡಲು ಹೋದಾಗ ಸೇಕ್ಯುರಿಟಿ ಗಾರ್ಡ್ ಗೇಟ್ ತರೆಯದ ಕಾರಣ  ಪಿರ್ಯಾದಿದಾರರು  ಚರ್ಚ್ ನ ಬಲ ಭಾಗದಲ್ಲಿರುವ ಬ್ಲೆಸ್ಸಡ್ ಸ್ಯಾಕ್ರಿಮೇಂಟ್  ಎಂಬಲ್ಲಿಗೆ ಪ್ರಾರ್ಥನೆ ಮಾಡಲು ಹೋದಾಗ   ಪಿರ್ಯಾದಿದಾರರಿಗೆ ಪರಿಚಯ ವಿಲ್ಲದ ಅಪರಿಚಿತ 3 ಮಂದಿ ವ್ಯಕ್ತಿಗಳು ಬಂದು ಅವರಲ್ಲಿ ಒಬ್ಬನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ನಿನು ಚರ್ಚನ ಒಳಗಡೆ ಹೊಗಿವಂತಿಲ್ಲ ಎಂದು ಕೈಯಿಂದ ಹೋಡೆದು, ಕಾಲಿನಿಂದ ಒದ್ದಿದ್ದು,  ಹಾಗೂ ಕಬ್ಬಿಣ ರಾಡಿನಿಂದ  ಹೊಡೆದನು. ಆಗ   ಸೇಕ್ಯುರಿಟಿ ಗಾರ್ಡ್ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಿಗೆ ಇನ್ನು ಹೊಡೆಯುವಂತೆ ಪ್ರೇರೆಪಿಸಿತ್ತಿದ್ದ್ರು ಪಿರ್ಯಾದಿದಾರರಿಗೆ ಹಲ್ಲೆ ನಡೆಸಿದ ಪರಿಣಾಮ ಪಿರ್ಯಾದಿದಾರರು ನೆಲಕ್ಕೆ ಬಿದ್ದರುತ್ತಾರೆ.  ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ ವ್ಯಕ್ತಿಯು ನೀನು ಮತ್ತೆ ಚರ್ಚ್ ನ ಒಳಗೆ ಬಂದರೆ ನೀನು ಎಲ್ಲೆ ಹೊದರು ನೀನ್ನ ಕೋಲ್ಲದೆ ಜೀವ ಸಹಿತ ಬಿಡುವದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅವರು ಅಲ್ಲಿಂದ ಪರಾರಿಯಾಗಿರುತ್ತಾರೆ. ಈ ಸಮಯ ಪಿರ್ಯದಿದಾರರ ಕನ್ನಡಕ ಹಾಗೂ ಅವರ ಬಳಿ ಇದ್ದ 10,000/- ರೂ ಗಳು ಬಿದ್ದುಹೊಗಿರುತ್ತವೆ .ನಂತರ ಪಿರ್ಯದಿದಾರರು ಚಿಕಿತ್ಸೆಯ ಬಗ್ಗೆ  ವೆನ್ಲಾಕ್ ಆಸ್ಪತ್ರೆ ಹೋಗಿ  ಚಿಕಿತ್ಸೆ ಪಡೆದುಕೊಂಡಿರುತ್ತಾರೆ.   ಎಂಬಿತ್ಯಾದಿಯಾಗಿರುತ್ತದೆ.

20-04-2021

Crime Reported in  Ullal PS

ದಿನಾಂಕ. 20-04-2021  ರಂದು ಫಿರ್ಯಾದಿದಾರರಾದ ಪ್ರದೀಪ್ ಟಿ.ಅರ್.  ಪಿಎಸ್ಐ ಉಳ್ಳಾಲ ರವರು ಸಿಬ್ಬಂದಿಯವರ ಜೊತೆಯಲ್ಲಿ ಠಾಣಾ ಸರಹದ್ದಿನಲ್ಲಿ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ದೊರೆತ ಖಚಿತ ಮಾಹಿತಿ ಮೇರೆಗೆ 14-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ತಲಪಾಡಿ ಗ್ರಾಮದ ಕೆ.ಸಿ. ರೋಡ್ ನಗರದ ಫಲಹಾ ಶಾಲೆಯ ಬಳಿಯ ಮೈದಾನದಂತಿರುವ ಖಾಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ  ಸಿರಾಜ್ ಎಂಬಾತನು ಯಾವುದೋ ನಶೆ ಬರುವ ವಸ್ತುವನ್ನು ಸಾರ್ವಜನಿಕ ಸ್ಥಳದಲ್ಲಿ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು ಕಂಡು ವಶಕ್ಕೆ ತೆಗೆದುಕೊಂಡು ಬಳಿಕ ಆರೋಪಿಯನ್ನು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಅಸ್ಪತ್ರೆಯ ಫಾರೆನ್ಸಿಕ್ ವಿಭಾಗದಲ್ಲಿ ವೈದ್ಯಾಧಿಕಾರಿಯವರಿಂದ ವೈದ್ಯಕೀಯ ತಪಾಸಣೆಗೊಳಪಡಿಸಿದ್ದಲ್ಲಿ ಈತನು ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯರು ಅಭಿಪ್ರಾಯ ಪತ್ರ ನೀಡಿರುವುದರಿಂದ ಆರೋಪಿ ವಿರುದ್ಧ ದಾಖಲಿಸಿದ ಪ್ರಕರಣವಾಗಿರುತ್ತದೆ

Crime Reported in  Surathkal PS          

ದಿನಾಂಕ 20/04/2021 ರಂದು ಪಿರ್ಯಾದಿದಾರರಾದ ರಾಜೇಂದ್ರ ಬಿ ಪೊಲೀಸ್ ಉಪ-ನಿರೀಕ್ಷಕರು ನಗರ ಅಪರಾಧ ಪತ್ತೆ ವಿಭಾಗ (ಸಿಸಿಬಿ) ಮಂಗಳೂರು ನಗರ ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಸುಮಾರು 18.15 ಗಂಟೆಗೆ ಇಡ್ಯಾ ಗ್ರಾಮದ ಸುರತ್ಕಲ್ ಸಮುದ್ರ ತೀರದಲ್ಲಿ ಮಾದಕ ವಸ್ತುಗಳ್ನನ್ನು ಸೇದುತ್ತಿದ್ದ ಸುಮನ್ ಮತ್ತು ಮನೀಷ್ ಇವರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಅವರುಗಳನ್ನು ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದಲ್ಲಿ ವೈದ್ಯರು “Tetrahydracannabinoid: POSITIVE ಎಂದು ನೀಡಿದ ಧೃಡ ಪತ್ರವನ್ನು ಸ್ವೀಕರಿಸಿ ಕ್ರಮ ಜರುಗಿಸಿದ್ದಾಗಿ ಎಂಬಿತ್ಯಾದಿ.

19-04-2021

Crime Reported in  Urva PS

ತಾರೀಕು 19-04-2021 ರಂದು ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ  ರವರು ಸಿಬ್ಬಮದಿಗಳೊಂದಿಗೆ ಮಂಗಳೂರು ನಗರದ  ಉರ್ವ ಮಾರ್ಕೇಟ್ ಪರಿಸರದ ದಂಬೆಲ್  ನದಿ  ಕಿನಾರೆ ಬಳಿ  19:30  ಗಂಟೆ ಸಮಯಕ್ಕೆ  ದಂಬೆಲ್  ನದಿ  ಕಿನಾರೆ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು  ಯುವಕನು ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡು ಸಿಗರೇಟನ್ನು ಸೇದುತ್ತಿರುವುದನ್ನು ಕಂಡ ಪಿ ಎಸ್ ಐ ಹಾಗೂ ಸಿಬ್ಬಂದಿಗಳು ವಾಹನಗಳಿಂದ ಇಳಿದು  ಹತ್ತಿರ ಹೋಗಿ ಅವರುಗಳಲ್ಲಿ  ವಿಚಾರಿಸಿದಲ್ಲಿ ಅವರುಗಳು ಅಸ್ಪಷ್ಟವಾದ ಉತ್ತರವನ್ನು ನೀಡಿದ್ದು, ಮಾತನಾಡುವಾಗ ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿದ್ದು, ಮಾತು ತೊದಲುತ್ತಿದ್ದುದರಿಂದ ಸದ್ರಿಯವರುಗಳನ್ನು ಕೂಲಂಕುಷವಾಗಿ ವಿಚಾರಿಸಿದಲ್ಲಿ ತನ್ನ ಹೆಸರು  ರೋಶನ್ (29)  ತಂದೆ: ದಿ  ಸುಕುಮಾರ್,  ವಾಸ:  ದಾಮೋಧರ ಕಂಪೌಂಡ್,  ಕಂಬ್ಳ ಕ್ರಾಸ್  ರಸ್ತೆ,  ಬರ್ಕೆ,  ಮಂಗಳೂರು ಇನ್ನೋರ್ವ ನ  ಹೆಸರು  ರೋಹಿತ್ (24) ತಂದೆ: ಶಿವಾನಂದ್,  ವಾಸ:  ಮೇಗಿನ ಮನೆ,  ಬಿರ್ಕನಕಟ್ಟೆ,  ಮಂಗಳೂರು ಎಂಬುದಾಗಿ ತಿಳಿಸಿದ್ದು ಇವರುಗಳನ್ನು ಕುಂಟಿಕಾನ ಎ,ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ತಮ್ಮ ವರದಿಯಲ್ಲಿ OPINION : Tetra hydracannabinoid : POSITIVE :” ಎಂಬುದಾಗಿ ಅಭಿಪ್ರಾಯ ನೀಡಿದ್ದು, ಗಾಂಜಾ ಸೇವನೆ ಮಾಡಿರುವುದು ಕಂಡು ಬಂದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Crime Reported in  Kankanady Town PS  

ದಿನಾಂಕ:19-04-2021 ರಂದು ಪಿರ್ಯಾದಿ  ಪಿಎಸ್ಐ ಸುಂದರ್ ರಾಜ್ ರವರು ವಿರೇಶ್ ಪಾಟೀಲ್ ರವರೊಂದಿಗೆ ಉಜ್ಜೋಡಿ ಬಳಿ ರೌಂಡ್ಸ್ ನಲ್ಲಿದ್ದ ಸಮಯ ಸಂಜೆ 17.40  ಗಂಟೆಗೆ ಅರ್ಕುಳ ಕಡೆಯಿಂದ ಪಂಪವೆಲ್ ಕಡೆಗೆ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ 17:45 ಗಂಟೆಗೆ ಪಂಪವೆಲ್ ಬಳಿ ಬಂದಾಗ  KA20AA3123 ನೇ ಮಿನಿ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವ ಲಾರಿಯನ್ನು ತಡೆದು ನಿಲ್ಲಿಸಿದಾಗ ಚಾಲಕನು ವಾಹನವನ್ನು ನಿಲ್ಲಿಸಿ ಪರಾರಿಯಾಗಿರುತ್ತಾನೆ. ಸದ್ರಿ ಮಿನಿ ಟಿಪ್ಪರ್ ಲಾರಿಯಲ್ಲಿ ಮರಳನ್ನು  ತುಂಬಿಸಿರುವುದು ಕಂಡು ಬಂದಿದ್ದು, ಸದ್ರಿ ಮಿನಿ ಟಿಪ್ಪರ್ ಲಾರಿಯ ಚಾಲಕ ತಮ್ಮ ಮಾಲೀಕರೊಂದಿಗೆ ಸೇರಿ ಸರಕಾರಕ್ಕೆ ಸೇರಿದ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ನದಿ ಕಿನಾರೆಯಿಂದ ಯಾವುದೇ ಪರವಾನಿಗೆಯನ್ನೂ ಪಡೆಯದೆ ಸರಕಾರಕ್ಕೆ ರಾಜಧನವನ್ನು ಪಾವತಿಸದೇ ಅಕ್ರಮವಾಗಿ ಲಾರಿಯಲ್ಲಿ ತುಂಬಿಸಿ ಸಾಗಾಟವನ್ನು ಮಾಡುತ್ತಿರುವುದರಿಂದ ವಶಕ್ಕೆ ಪಡೆದಿರುವುದಾಗಿದೆ  ಸದ್ರಿ ಮರಳಿನ ಅಂದಾಜು ಮೌಲ್ಯ ರೂಪಾಯಿ 7  ಸಾವಿರ ಆಗಬಹದು ಎಂಬಿತ್ಯಾದಿ

Crime Reported in  Mulki PS

ಪಿರ್ಯಾಧಿ Smt Bhavani (85) ದಾರರು ಅವರ  ತಮ್ಮ ಸೋಮಪ್ಪ ಅಂಚನ್ ರವರ ಮನೆಯಾದ ಬಪ್ಪನಾಡು ಗ್ರಾಮದ ಬಡಗಹಿತ್ಲು ಎಂಬಲ್ಲಿಗೆ  ಹರಕೆಯ ಯಕ್ಷಗಾನ ಕಾರ್ಯಕ್ರಮದ ಬಗ್ಗೆ ಬಂದಿದ್ದು, ಅಲ್ಲಿ ರಾತ್ರಿ ಇಡಿ ಸಂಬಂಧಿಕರಂತೆ ವರ್ತಿಸಿಕೊಂಡಿದ್ದ ಪ್ರಾಯ ಸುಮಾರು 25 ರಿಂದ 30 ವರ್ಷದ ಯುವಕನು ದಿನಾಂಕ 18.04.2021 ರಂದು ಪಿರ್ಯಾಧಿದಾರರನ್ನು ಚೌಕಿ ಪೂಜೆಗೆ ತೆರಳುವಂತೆ ಹೇಳಿ ಮುಖ ತೊಳೆದುಕೊಳ್ಳಲು ತಿಳಿಸಿ  ಪಿರ್ಯಾಧಿದಾರರು ಬಾತ್ ರೂಂ ಗೆ ಬಂದು ಮುಖ ತೊಳೆಯಿತ್ತಿದ್ದಾಗ ಹಿಂದಿನಿಂದ ಬಂದ ಸದ್ರಿ ವ್ಯಕ್ತಿ ಪಿರ್ಯಾಧಿದಾರರ ಕುತ್ತಿಗೆಯಲ್ಲಿದ್ದ ಸುಮಾರು 96,000 ರೂ ಮೌಲ್ಯದ  ಬಂಗಾರದ ರೋಪ್ ಚೈನನ್ನು ಕಿತ್ತುಕೊಂಡು ಹೋಗಿದ್ದು ಸದ್ರಿ ಆರೋಪಿತನು ಸುಮಾರು 5 ‘7’  ಅಡಿ  ಎತ್ತರವಿದ್ದು, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟನ್ನು ಹೊಂದಿದ್ದು, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ತಿಳಿ ನೀಲಿ ಬಣ್ಣದ ಪ್ಯಾಂಟ್ ನ್ನು ಧರಿಸಿರುತ್ತಾರೆ ಎಂಬಿತ್ಯಾದಿ

18-04-2021

Crime Reported in  Kavoor PS

ದಿನಾಂಕ : 18-04-2021 ರಂದು ನಾನು ರಾತ್ರಿ ಠಾಣಾ ಪ್ರಭಾರದಲ್ಲಿರುವ ಸಮಯ ಸುಮಾರು 20:05 ರ ವೇಳೆಗೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷರಾದ ರಾಜೇಂದ್ರ ರವರು ಸಿಸಿಬಿ ಸಿಬ್ಬಂದಿಗಳನ್ನು ಕರೆದುಕೊಂಡು ಕರ್ತವ್ಯದಲ್ಲಿ ಬಂಗ್ರಕೂಳೂರು ದಂಬೇಲ್ ಬಳಿ ತಲುಪಿದಾಗ ಸಂಜೆ ಸಮಯ ಸುಮಾರು 18:30 ರ ವೇಳೆಗೆ ಬಂಗ್ರಕೂಳೂರು ಹೊಳೆಯ ಬದಿಯಲ್ಲಿ 7 ಮಂದಿ ಯುವಕರು ನಿಂತಿದ್ದು ಅವರುಗಳ ಪೈಕಿ 4 ಮಂದಿ ಯುವಕರು ಸಿಗರೇಟನ್ನು ಸೇದುತ್ತಿದ್ದು ಸಂಶಯಗೊಂಡ 7 ಮಂದಿಯನ್ನು ಯುವಕರನ್ನು ಸುತ್ತುವರೆದು ವಿಚಾರಿಸಿದಲ್ಲಿ ಇವರುಗಳು ಸಂಜೆ ಸಮಯ ಸಮಯವನ್ನು ಕಳೆಯುವುದಕ್ಕಾಗಿ ದಂಬೇಲ್ ಗೆ ಬಂದಿರುವುದಾಗಿ ತಿಳಿಸಿದ್ದು, ಇವರುಗಳ ಪೈಕಿ ಸಿಗರೇಟನ್ನು ಸೇದುತ್ತಿದ್ದ 1) ಶಶಿಧರ 2) ಕೌಶಿಕ್ 3) ಹರ್ಷ ಜೈನ್ 4) ಲವಿಶ್ ಜೈನ್ ಎಂಬವರನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಇವರುಗಳು ಸಿಗರೇಟಿನ ಒಳಗಡೆ ಮಾದಕ ದ್ರವ್ಯವಾದ ಗಾಂಜಾವನ್ನು ತುಂಬಿಸಿ ಸೇದಿರುವುದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ ಈ ನಾಲ್ವರು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಯಿಂದ ದೃಢಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ಪರೀಕ್ಷೆಗಾಗಿ ಎ.ಜೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಇವರುಗಳು ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಢ ಪತ್ರವನ್ನು ನೀಡಿರುವ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Crime Reported in  Kankanady Town PS

ದಿನಾಂಕ   31-03-2021 ರಂದು   ಪಿರ್ಯಾದಿ ASSISTANT ENGINEER,MESCOM GANESH KUNDAR ದಾರರು   ಕರ್ತವ್ಯ ನಿರ್ವಹಿಸುತ್ತಿರುವ     ವ್ಯಾಪ್ತಿಗೆ   ಒಳಪಡುವಂತಹ   ರಾಷ್ಟ್ರೀಯ  ಹೆದ್ದಾರಿ   73 ರ   ರಸ್ತೆಯ   ಬದಿಯಲ್ಲಿ ಅಳವಡಿಸಿರುವ  ಮೆಸ್ಕಾಂ    ಇಲಾಖೆಯ  9.5 ಮೀಟರ್   ವಿದ್ಯುತ್   ಕಂಬಕ್ಕೆ     ಸಮಯ    ಸುಮಾರು   15:10 ಗಂಟೆಗೆ   ಲಾರಿ   ನೊಂದಣಿ   ಸಂಖ್ಯೆ KA-06-D-8998  ನೇದನ್ನು  ಅದರ   ಚಾಲಕ  ಇಮ್ರಾನ್ ಎಂಬಾತನು    ನಂತೂರು  ಕಡೆಯಿಂದ   ಪಡೀಲ್   ಕಡೆಗೆ    ರಾಷ್ಟ್ರೀಯ  ಹೆದ್ದಾರಿ   73 ರ   ರಸ್ತೆಯಲ್ಲಿ  ದುಡುಕುತನ ಹಾಗೂ   ನಿರ್ಲಕ್ಷ್ಯತನದಿಂದ    ಚಲಾಯಿಸಿಕೊಂಡು    ಬಂದು ಕೆಂಬಾರ್  ಗರೋಡಿ  ಸ್ಟೀಲ್ ಬಳಿ  ತಲುಪುತ್ತಿದ್ದಂತೆ   ನಿಯಂತ್ರಣ  ತಪ್ಪಿ   ರಸ್ತೆಯ  ತೀರಾ  ಎಡಬದಿಯ   ಎತ್ತರ ಪ್ರೆದೇಶಕ್ಕೆ  ಚಲಾಯಿಸಿದ್ದರಿಂದ    ಲಾರಿ  ಮಗುಚಿ  ಡಿಕ್ಕಿ ಹೊಡೆದ   ಪರಿಣಾಮ ಕಂಬವು    ಸಂಪೂರ್ಣ  ಜಖಂಗೊಂಡಿರುತ್ತದೆ. ಈ  ಅಪಘಾತದಿಂದ   ಮೆಸ್ಕಾಂ ಇಲಾಖೆಗೆ   42838  ರೂಪಾಯಿ   ನಷ್ಟ ಉಂಟಾಗಿರುತ್ತದೆ  ಎಂಬಿತ್ಯಾದಿ

Crime Reported in  Bajpe PS 

ಪಿರ್ಯಾದಿ POOVAPPA H M PSI ರವರು ದಿನಾಂಕ 17-04-2021 ರಂದು 23-45 ಗಂಟೆಗೆ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಕೈಕಂಬ ಜಂಕ್ಷನ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಮಯ 3 ಜನ ಯುವಕರು ಬೈಕಿನಲ್ಲಿ ಗುರುಪುರ ಕಡೆಯಿಂದ ಕೈಕಂಬ ಕಡೆಗೆ ಬರುತ್ತಿದ್ದು ಬೈಕಿನ ಹಿಂಬದಿ ಕುಳಿತ್ತಿದ್ದ ಸಹ ಸವಾರನು ಕೈಯಲ್ಲಿ ಮಾರಕಾಯುಧ ತಲವಾರನ್ನು ಹಿಡಿದುಕೊಂಡಿರುವುದನ್ನು ಕಂಡು ಪಿರ್ಯಾದಿದಾರರು ಸಿಬ್ಬಂದಿಗಳ ಸಹಾಯದಿಂದ ಬೈಕ್ ನ್ನು ತಡೆದು ನಿಲ್ಲಿಸಿ ಬೈಕಿನಲ್ಲಿದ್ದ ಆಪಾಧಿತರುಗಳಾದ 1.ಭರತ್ ರಾಜ್, 2.ದನುಷ ಮತ್ತು 3.ಪ್ರದೀಪ್ ಎಂಬವರನ್ನು ಹಿಡಿದು ವಿಚಾರಿಸಿದಾಗ ಸದ್ರಿಯವರು ಮಾರಕಾಯುಧ ತಲವಾರನ್ನು ವಶದಲ್ಲಿ ಇರಿಸಿಕೊಂಡ ಬಗ್ಗೆ ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಆಪಾಧಿತರು ಯಾವುದೋ ದುಷ್ಕ್ರತ್ಯ ನಡೆಸುವ ಉದ್ದೇಶದಿಂದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಕಾಯುಧ ತಲವಾರನ್ನು ವಶದಲ್ಲಿರಿಸಿಕೊಂಡು ಸುತ್ತಾಡುತ್ತಿರುವುದರಿಂದ ಆಪಾಧಿತರುಗಳ ವಶದಲ್ಲಿದ್ದ KA 19 EB 4301 ನೇ ನಂಬ್ರದ ಬೈಕ್ ಮತ್ತು ತಲವಾರನ್ನು ಮಹಜರು ಮುಖಾಂತರ ಸ್ವಾಧೀನಪಡಿಸಿಕೊಂಡು ಸದ್ರಿಯವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ

Crime Reported in  Ullal PS

ದಿನಾಂಕ. 18-4-2021 ರಂದು ರಾತ್ರಿ 8-30 ಗಂಟೆಯ ಸಮಯಕ್ಕೆ ಸೋಮೇಶ್ವರ ಗ್ರಾಮದ ಕುಂಪಲ ಬೈಪಾಸ್ ಎಂಬಲ್ಲಿ ಫಿರ್ಯಾದಿ ಸಂಜಯ್ ರವರು ಕಬಾಬ್ ತಿನ್ನುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿಗಳಾದ ಜ್ಞಾನೇಶ್ ಮತ್ತು ಅಭಿಷೇಕ್ ರವರು ಫಿರ್ಯಾದಿಯನ್ನು ಉದ್ದೇಶಿಸಿ ವಿನಾಃ ಕಾರಣ ನೀನು ಏನು ಬೇವಾರ್ಸಿ ಹಾಗೇ ಮಾಡುತ್ತೀ ಎಂದು ಅವಾಚ್ಯಶಬ್ದಗಳಿಂದ ಬೈದಿರುವುದಲ್ಲದೆ, ನಂತರ ರಾತ್ರಿ 8:45 ಗಂಟೆಗೆ ಆರೋಪಿಗಳಾದ ಜ್ಞಾನೇಶ್ ಮತ್ತು ಅಭಿಷೇಕ್ ರವರು ಫಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿ ಯನ್ನು ವಿಚಾರಿಸಿಕೊಂಡು ಫಿರ್ಯಾದಿದಾರರ ಶರ್ಟಿನ ಕಾಲರ್ ಹಿಡಿದು ಮನೆಯ ಹೊರಗೆ ಎಳೆದುಕೊಂಡು ತಂದು ಕೈಗಳಿಂದ ಹೊಡೆಯುತ್ತಿದ್ದಾಗ ರಿಕ್ಷಾ ಡ್ರೈವರ್ ಯತಿರಾಜ್ ರವರು ಗಲಾಟೆ ಬಿಡಿಸಲು ಬಂದಾಗ ಜ್ಞಾನೇಶ್ ಮತ್ತು ಅಭಿಷೇಕ್ ರವರು ಯತಿರಾಜ್ ರವರ ಕೈಹಿಡಿದು ನಿಲ್ಲಿಸಿ ಅವರನ್ನು ಉದ್ದೇಶಿಸಿ ರಂಡೇಮಗ ನಿನಗೇಕೆ, ನೀನು ಇಲ್ಲಿಂದ ನಡಿ ಎಂದು ಬೈದು ಕೈಗಳಿಂದ ಹೊಡೆದು ಅವರಿಬ್ಬರು ಸೇರಿ ಯತಿರಾಜ್ನನ್ನು ಬಲವಾಗಿ ನೆಲಕ್ಕೆ ದೂಡಿ ಹಾಕಿದ ಪರಿಣಾಮ ಯತಿರಾಜ್ ರವರ ಬಲಕೈಗೆ ಮೂಳೆ ಮುರಿತದ ಗಾಯ ಉಂಟಾಗಿದ್ದು, ಆಗ ಆಸುಪಾಸಿನವರು ಬರುವುದನ್ನು ಕಂಡು ಆರೋಪಿಗಳು ಫಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿರುತ್ತಾರೆ. ಗಾಯಾಳು ಯತಿರಾಜ್ ರವರು ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ ಫಿರ್ಯಾದಿಯ ಸಾರಾಂಶ.

ಇತ್ತೀಚಿನ ನವೀಕರಣ​ : 06-05-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080