Crime Reported in Urva PS
ದಿನಾಂಕ 05-07.2021 ರಂದು ಸಾಂಕ್ರಾಮಿಕ ರೋಗವಾದ ಕೋವಿಡ್ -19, ಕೊರೋನಾ ಸಾಂಕ್ರಾಮಿಕ ಖಾಯಿಲೆ ಹಿನ್ನಲೆಯಲ್ಲಿ ರಾಜ್ಯಾದ್ಯಾಂತ ರಾತ್ರಿ ಕರ್ಫ್ಯೂ ಘೋಷಣೆಯಾಗಿದ್ದು ಅದರಂತೆ ಸರಕಾರದ ಮಾರ್ಗಸೂಚಿಯಂತೆ ರಾತ್ರಿ 9-00 ಗಂಟೆಯಿಂದ ಬೆಳಿಗ್ಗೆ 05-00 ಗಂಟೆವರೆಗೆ ರಾತ್ರಿ ಕರ್ಫ್ಯೂ ಆದೇಶವಿರುತ್ತದೆ. ಬೆಳಿಗ್ಗೆ 05-00 ಗಂಟೆಯಿಂದ ರಾತ್ರಿ 9-00 ಗಂಟೆವರೆಗೆ ಸರಕಾರವು ಲಾಕ್ ಡೌನ್ ಸಡಿಲಿಕೆಯ ಸಮಯಾವಕಾಶವನ್ನು ನೀಡಿರುತ್ತದೆ . ದಿನಾಂಕ: 05-07-2021 ರಂದು ರಾತ್ರಿ 10.00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಪಿರ್ಯಾದಿ DHANRAJ PSI ರವರು , ಸಿಬ್ಬಂದಿಗಳಾದ ಎ.ಎಸ್.ಐ ರಾಜೇಶ್ ಹೆಚ್, ಹೆಚ್ ಸಿ ನಾರಾಯಣ, ಪಿಸಿ ವಿವೇಕ ರವರ ಜೊತೆಯಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ರಾತ್ರಿ 11.00 ಗಂಟೆಯ ವೇಳೆಗೆ ಮಂಗಳೂರು ನಗರದ ಕದ್ರಿ ಗ್ರಾಮದ ಬಿಜೈ ಆನೆಗುಂಡಿ ಜಂಕ್ಷನ್ ಬಳಿ ಹೋದಾಗ ಇಬ್ಬರು ವ್ಯಕ್ತಿಗಳು ಒಂದು ಆಟೋ ರಿಕ್ಷಾ ಬಳಿ ನಿಂತಿದ್ದಾರೆ ಎಂದು ಮಾಹಿತಿ ಬಂದಂತೆ ಅವರ ಬಳಿ ಹೋಗಿ ವಿಚಾರಿಸಿದಾಗ ಅವರು ಕುದ್ರೋಳಿ ಕಂಬ್ಳ ಕ್ರಾಸ್ ಮತ್ತು ಬಿಜೈಯಿಂದ KA-19-AB-4222 ಅಟೋ ರಿಕ್ಷಾದಲ್ಲಿ ಸುಮ್ಮನೆ ತಿರುಗಾಡಲು ಬಂದಿರುವುದಾಗಿ ತಿಳಿಸಿದ್ದು, ಅವರುಗಳ ಹೆಸರು ವಿಳಾಸ ಕೇಳಲಾಗಿ 1) ಜ್ಞಾನೆಶ್ ಕುಮಾರ್, ಪ್ರಾಯ: 28 ವರ್ಷ, ತಂದೆ: ಪ್ರವೀಣ್ ಕುಮಾರ್ ವಾಸ: ಕಂಬ್ಳ ಕ್ರಾಸ್ ರೋಡ್, ಬರ್ಕೆ, ಮಂಗಳೂರು, 2) ನಿತಿನ್, ಪ್ರಾಯ:28 ವರ್ಷ, ತಂದೆ: ನಾಗರಾಜ್, ವಾಸ: ಆಶ್ರಯ 3ನೇ ಕ್ರಾಸ್, ಬಿಜೈ ಆನೆಗುಂಡಿ ಮಂಗಳೂರು ಎಂಬುದಾಗಿಯೂ ಜ್ಞಾನೇಶ್ ಕುಮಾರ್ ರವರು KA-19-AB-4222 ಅಟೋ ರಿಕ್ಷಾವನ್ನು ಚಾಲನೆ ಮಾಡಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ. ಇವರುಗಳು ಮಾಸ್ಕ್ ದರಿಸದೆ, ಕೋವಿಡ್ -19 ನಿಯಾವಳಿಯನ್ನು ಪಾಲಿಸದೇ ನಿಂತಿದ್ದು, ಸಾಂಕ್ರಾಮಿಕ ರೋಗವಾದ ಕೋವಿಡ್ -19, ಕೊರೋನಾ ಸಾಂಕ್ರಾಮಿಕ ಖಾಯಿಲೆ ಹಿನ್ನಲೆಯಲ್ಲಿ ರಾಜ್ಯಾದ್ಯಾಂತ ರಾತ್ರಿ ಕರ್ಫ್ಯೂ ಘೋಷಣೆಯಾಗಿದ್ದು ಅದರಂತೆ ಸರಕಾರದ ಮಾರ್ಗಸೂಚಿಯಂತೆ ರಾತ್ರಿ 9-00 ಗಂಟೆಯಿಂದ ಬೆಳಿಗ್ಗೆ 05-00 ಗಂಟೆವರೆಗೆ ರಾತ್ರಿ ಕರ್ಫ್ಯೂ ಆದೇಶವಿದ್ದರೂ ಕೂಡ ಅದನ್ನು ಉಲ್ಲಂಘಿಸಿರುತ್ತಾರೆ. ಪ್ರಸ್ತುತ ಕೊರೋನಾ ಸಾಂಕ್ರಾಮಿಕ ರೋಗವು ಹರಡುತ್ತಿದ್ದು ಸದ್ರಿ ಯವರುಗಳು ಸರಕಾರದ ನಿಯಮವನ್ನು ಪಾಲಿಸದೆ ಸಾಂಕ್ರಮಿಕ ರೋಗವಾದ ಕೊರೋನಾ ವೈರಸ್ ನ್ನು ಹರಡಲು ಸಾದ್ಯತೆಯನ್ನು ಉಂಟು ಮಾಡಿದ್ದು, ಇವರುಗಳ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in Mangalore East PS
ದಿನಾಂಕ:05-07-2021 ರಂದು ಪ್ರಕರಣದ ಪಿರ್ಯಾದಿದಾರ ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಜ್ಞಾನಶೇಖರ ರವರು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಢಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಇವರು ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಹೊರಡಿಸಿದ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 05-07-2021 ರ ರಾತ್ರಿ 9 ಗಂಟೆಯ ಬಳಿಕ ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ಸಂಚರಿಸುತ್ತಾ ರಾತ್ರಿ 11.15 ಗಂಟೆಯ ಸುಮಾರಿಗೆ ಮಂಗಳೂರು ನಗರದ ಕದ್ರಿ ಮೈದಾನ ಬಳಿಯಲ್ಲಿ ಪ್ರಕಾಶಮಾನವಾದ ಬೀದಿ ದೀಪದ ಬೆಳಕಿರುವಲ್ಲಿ ರಸ್ತೆಯಲ್ಲಿ ವಾಹನ ತಪಾಸಣೆಯನ್ನು ಮಾಡುತ್ತಿರುವ ಸಮಯ ರಾತ್ರಿ 11.20 ಗಂಟೆಯ ಸುಮಾರಿಗೆ ಮಲ್ಲಿಕಟ್ಟೆಯ ಕಡೆಯಿಂದ ಬರುತ್ತಿದ್ದ ಮೋಟಾರು ಸೈಕಲೊಂದನ್ನು ನಿಲ್ಲಿಸಿ ನೋಡಿದಾಗ ಇದರ ನಂಬ್ರ KA-19-EY-9965 ನೇ ಮೋಟಾರು ಸೈಕಲನ್ನು ಅದರ ಸವಾರನು ತನ್ನ ಹಿಂಬದಿಯಲ್ಲಿ ಇಬ್ಬರನ್ನು ಕುಳ್ಳಿರಿಸಿಕೊಂಡು ಮುಖಕ್ಕೆ ಮಾಸ್ಕನ್ನು ಧರಿಸದೇ ಚಲಾಯಿಸಿಕೊಂಡು ಬಂದಿದ್ದು , ಇವರಲ್ಲಿ ಈ ಸಮಯದಲ್ಲಿ ಓಡಾಡುತ್ತಿರುವ ಬಗ್ಗೆ ಸಕಾರಣವನ್ನು ಕೇಳಿದಾಗ ಯಾವುದೇ ಸಮಂಜಸವಾದ ಉತ್ತರವನ್ನು ನೀಡದೆ ಇದ್ದುದಲ್ಲದೆ ಸದ್ರಿ ಮೋಟಾರು ಸೈಕಲ್ ಸವಾರ ಹಾಗೂ ಆತನ ಜೊತೆಗಿದ್ದ ಇಬ್ಬರೂ ನಗರದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವಾ 5 ಗಂಟೆಯವರೇಗೆ ಅನಧಿಕೃತ ವಾಹನ ಸಂಚಾರವನ್ನು ನಿಷೇಧಿಸಿ ರಾತ್ರಿ ಕರ್ಪ್ಯೂವನ್ನು ಹೇರಿರುವ ಮಾಹಿತಿಯನ್ನು ತಿಳಿದೂ ಈ ಓಡಾಟವನ್ನು ನಡೆಸುವ ಮೂಲಕ ಕೊರೋನಾ ಎಂಬ ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆಯಿರುವುದೂ ತಿಳಿದೂ ನಗರದ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿ ಸರಕಾರದ ಆದೇಶವನ್ನು ಉಲ್ಲಂಘಿಸಿರುವುದಾಗಿದೆ ಎಂಬಿತ್ಯಾದಿ.
Crime Reported in Kavoor PS
ಪಿರ್ಯಾದಿ N Rekha Rao ರವರ ಮಗನಾದ ರಾಕೇಶ್ ಎಂಬವರು 15 ದಿನಗಳಿಂದ ಅಮೇಜಾನ್ Transoprtation ನಲ್ಲಿ ಕೆಲಸದಲ್ಲಿ ಇದ್ದವರು ನಂತರ ಅವರು ದೆಹಲಿಯ ಡೆಹರಾಡೂನ್ ನಲ್ಲಿ ವರ್ಗಾವಣೆಗೊಂಡು ಈ ಬಗ್ಗೆ ತನ್ನ ಉಪಯೋಗಕ್ಕೆ ಕಾರು ನಂಬ್ರ JH01BH4988 ವನ್ನು ಮಂಗಳೂರಿನಿಂದ ದೆಹಲಿಯ ಡೆಹರಾಡೂನ್ ಗೆ Professional Packers ಮತ್ತು Cargo Movers ಇವರಿಂದ ದಿನಾಂಕ 02-06-2021 ರಂದು 18.00 ಗಂಟೆಗೆ ಕಾರನ್ನು ಕಳುಹಿಸಿ ಕೊಟ್ಟಿದ್ದು ಈ ಕಂಪನಿಯ Representative ಆದ ಡೇವಿಡ್ ಎಂಬುವರು ಅಮೇಜಾನ್ ವೇರ್ ಹೌಸ್ ಸ್ಥಳದಿಂದ Professional ಕೋರಿಯರ್ ನ ಕೃಷ್ಣಕುಮಾರ್ ಇವರ ಮುಂಖಾಂತರ ಕಳುಹಿಸಿ ಕೊಟ್ಟಿದ್ದು, ದಿನಾಂಕ 14-06-2021 ರಂದು ದೆಹಲಿಯ ದೆಹರಾಡೂನ್ ಗೆ ಕೊಡಬೇಕಾಗಿದ್ದು ಈ ವರೆಗೆ ನನ್ನ ಮಗನಿಗೆ ವಾಹನವನ್ನು ಕೊಡದೇ ಪೋನ್ ಮುಂಖಾಂತರ ಸಂರ್ಪಕಿಸಲಾಗಿ ಇವತ್ತು ಕೊಡುತ್ತೇನೆ ನಾಳೆ ಕೊಡುತ್ತೇನೆ ಎಂದು ಹೇಳಿ ಈವರೆಗೆ ಕಾರನ್ನು ನೀಡದೆ ಇದ್ದುದ್ದರಿಂದ ಅವರ ಮೇಲೆ ಸೂಕ್ತ ಕ್ರಮ ಕೈಗೊಳಬೇಕಾಗಿ ಎಂಬಿತ್ಯಾದಿ.
2) ಫಿರ್ಯಾದಿ PRATIBHA K H PSI ದಿನಾಂಕ 05-07-2021 ರಂದು ಸಿಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ರಾತ್ರಿ 9.15 ಗಂಟೆಗೆ ಠಾಣೆಯಿಂದ ಹೊರಟು ಸಕಾರಣವಿಲ್ಲದೇ ಓಡಾಡುವ ವಾಹನ ಸವಾರರನ್ನು ಕಾವೂರು ಕಟ್ಟೆಯ ಬಳಿ ತಪಾಸಣೆ ನಡೆಸಲು ಪ್ರಾರಂಬಿಸಿದ್ದು ಅದರಂತೆ ಸಿಬ್ಬಂದಿಗಳ ಜೊತೆಯಲ್ಲಿ ವಾಹನ ತಪಾಸಣೆ ನಡೆಸುತಿದ್ದಾಗ 06-07-2021 ರಂದು ಸಮಯ ಸುಮಾರು ರಾತ್ರಿ 02.00 ಗಂಟೆಗೆ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಕಡೆಯಿಂದ ಕಾವೂರು ಜಂಕ್ಷನ್ ಕಡೆಗೆ ಮೋಟಾರ್ ಸೈಕಲ್ ಅನ್ನು ಅದರ ಚಾಲಕನು ಚಲಾಯಿಸಿಕೊಂಡು ಬಂದಾಗ ವಾಹನವನ್ನು ನಿಲ್ಲಿಸುವಂತೆ ಅದರ ಚಾಲಕನಿಗೆ ಸೂಚಿಸಿದ್ದು ಅದರಂತೆ ಚಾಲಕನು ವಾಹನವನ್ನು ನಿಲ್ಲಿಸಿದಾಗ ಅದರ ನಂಬ್ರವನ್ನು ನೋಡಲಾಗಿ KA 19 EX 0076 ನಂಬ್ರದ ಮೋಟಾರ್ ಸೈಕಲ್ ಆಗಿದ್ದು ಅದರ ಚಾಲಕನು ಮತ್ತು ಜೊತೆಯಲ್ಲಿ ಸಹಸವಾರ ಕೂಡ ಇದ್ದು ಇವರಿಬ್ಬರು ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಇದ್ದು ಆತನ ಬಗ್ಗೆ ವಿಚಾರಿಸಿದಲ್ಲಿ ಚಾಲಕ ವಿನಯ (28 ವರ್ಷ) ಮತ್ತು ಸಹಸವಾರ ಸುದರ್ಶನ (32 ವರ್ಷ) ಎಂಬುದಾಗಿ ತನ್ನ ಹೆಸರು ವಿಳಾಸವನ್ನು ತಿಳಿಸಿದ್ದು ರಾತ್ರಿ ಸಂಚರಿಸುತಿದ್ದ ಬಗ್ಗೆ ವಿಚಾರಿಸಿದಲ್ಲಿ ಯಾವುದೇ ಸಕಾರಣವನ್ನು ನೀಡಿರುವುದಿಲ್ಲ. ಇವರಿಗೆ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಆದೇಶ ತಿಳುವಳಿಕೆ ಇದ್ದರೂ ಕೂಡ ಉಲ್ಲಂಘಿಸಿ ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವಿರುವುದನ್ನು ತಿಳಿದು ಕೂಡ ನಿರ್ಲಕ್ಷ ವಹಿಸಿರುವುದರಿಂದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ
Crime Reported in Traffic North PS
ದಿನಾಂಕ: 05-07-2021 ರಂದು ಫಿರ್ಯಾದಿದಾರರಾದ ಪ್ರಜ್ವಲ್ ಕುಮಾರ್ ಎಮ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ರಚನಾ ಪ್ಯಾಲೇಸ್ ನಲ್ಲಿ ಅಡಿಗೆ ಕೆಲಸ ಮಾಡುವ ಪ್ರೇಮಶರ್ಮರವರು KA01JE7260 ನಂಬ್ರ ಸ್ಕೂಟರ್ ನಲ್ಲಿ ರಚನಾ ಪ್ಯಾಲೇಸ್ ಸುರತ್ಕಲ್ ನಿಂದ ತಡಂಬೈಲ್ ಕಡೆಗೆ ಮಂಗಳೂರು-ಉಡುಪಿಯ ರಾ.ಹೆ 66 ರಲ್ಲಿ ಹೋಗುತ್ತಾ ಸಮಯ ರಾತ್ರಿ 10-40 ಗಂಟೆಗೆ ತಡಂಬೈಲ್ ಬಳಿ ತಲುಪಿದಾಗ ಪ್ರೇಮಶರ್ಮ ರವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಾಕಾರಿಯಾದ ರೀತಿಯಲ್ಲಿ ಚಲಾಯಿಸಿ ಮೋಟಾರ್ ಸೈಕಲ್ ಮೇಲಿನ ಚಾಲನೆಯ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಹಾಕಿರುವ ಕಬ್ಬಿಣದ ತಡೆ ಬೇಲಿಗೆ ಗುದ್ದಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರ್ ಸವಾರ ಪ್ರೇಮಶರ್ಮರವರ ತಲೆಗೆ ಗಂಭಿರ ಸ್ವರೂಪದ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈಧ್ಯರು ಪರಿಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮದ್ಯೆ ಸಮಯ 11-00 ಗಂಟೆಗೆ ಮೃತಪಟ್ಟಿರುವುದಾಗಿದೆ ಪಿರ್ಯಾದಿ ಸಾರಾಂಶ
Crime Reported in Mulki PS
ದಿನಾಂಕ 04-07-2021 ರಂದು ಪಿರ್ಯಾದಿ Mrs Gunavathi (57)ರವರ ಮಗ ಕಿರ್ತೇಶ್ ನು ಕ್ರಿಕೆಟ್ ಆಡಲು ಫಲಿಮಾರಿಗೆ ಹೋಗಿದ್ದು ಅಲ್ಲಿ ಕ್ರಿಕೆಟ್ ಮ್ಯಾಚ್ ವಿಚಾರದಲ್ಲಿ ಕಿರ್ತೇಶನಿಗೂ ಹಾಗೂ ಆರೋಪಿ ಆದರ್ಶ ನಿಗೂ ಮಾತುಕತೆಯಾಗಿದ್ದು ಇದೇ ವಿಚಾರದಲ್ಲಿ ಆರೋಪಿ ಆದರ್ಶನು ಇತರ ಎಳು ಮಂದಿಯನ್ನು ಕರೆದುಕೊಂಡು ದಿನಾಂಕ 05-07-2021 ರಂದು ಸಂಜೆ 5:00 ಗಂಟೆಗೆ ಮಂಗಳೂರು ತಾಲೂಕು ಕರ್ನಿರೆ ಗ್ರಾಮದ ಕರ್ನಿರೆ ಕೊಪ್ಪಲ ಎಂಬಲ್ಲಿರುವ ಪಿರ್ಯಾದಿದಾರರ ವಾಸದ ಮನೆಗೆ ಬಂದು ಪಿರ್ಯಾದಿದಾರರಲ್ಲಿ ಕೀರ್ತೇಶನನ್ನು ಕೇಳಿದಾಗ ಪಿರ್ಯಾದಿದಾರರು ಆರೋಪಿತರಲ್ಲಿ ಆತನು ಮನೆಯಲ್ಲಿ ಇಲ್ಲ ಎಂದು ಹೇಳಿದ್ದು, ನಂತರ ಆರೋಪಿತರು ಪಿರ್ಯಾದಿದಾರರ ಮನೆಯೊಳಗೆ ಬಂದು ಮನೆಯ ಚಾವಡಿಯಲ್ಲಿದ್ದ ಪಿರ್ಯಾದಿದಾರರನ್ನು ಹಾಗೂ ಅವರ ತಂಗಿ ಶ್ರೀಮತಿ ಮೀನಾಕ್ಷಿ ರವರನ್ನು ಎಳೆದು, ಕೈಯಿಂದ ಹೊಡೆದು ನಂತರ ಕೀರ್ತೇಶನನ್ನು ಎಳೆದುಕೊಂಡು ಬಂದು ಕೈಯಿಂದ ಹೊಡೆಯುತ್ತಿದ್ದಾಗ ಪಿರ್ಯಾದಿದಾರರ ಮನೆಯವರು ಹಾಗೂ ನೆರೆಕರೆಯವರು ಬಂದು ಬಿಡಿಸಿದ್ದು ನಂತರ ಆರೋಪಿತರು ವಾಪಾಸು ಹೋಗುವಾಗ ಆರೋಪಿ ಸಚ್ಚಿನ್ ಎಂಬಾತನು ಕಿರ್ತೇಶನನ್ನು ಉದ್ದೇಶಿಸಿ “ನನ್ನ ತಮ್ಮ ಆದರ್ಶನಿಗೆ ಹೊಡೆದಿದ್ದೀಯಾ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಹೇಳಿ ಆರೋಪಿಗಳು ಬಂದ ಕಾರಿನಲ್ಲಿ ಹೋಗಿರುವುದಾಗಿದೆ ಎಂಬಿತ್ಯಾದಿ.
Crime Reported in Surathkal PS
ಪಿರ್ಯಾದಿದಾರರಾದ ಮನೀಷ್ ಎಲ್ ಕುಲಾಲ್ ರವರು ದಿನಾಂಕ 05/07/2021 ರಂದು ಸಂಜೆ 05 ಗಂಟೆ 10 ನಿಮಿಷಕ್ಕೆ ಕುಳಾಯಿ ಗ್ರಾಮದ ಕೋಡಿಕೇರೆ ಎಂಬಲ್ಲಿರುವ ಸ್ಯಾಡ್ ಸ್ಟಾಪ್ ಎಂಬಲ್ಲಿಗೆ ಪಲ್ಸರ್ ಬೈಕ್ ನಲ್ಲಿ ಹೋದಾಗ ಅಲ್ಲಿಂದ ಭರತ ಮತ್ತು ರಜತ್ ಎಂಬುವರು ಬಂದು ಬೈಕ್ ನ್ನು ತಡೆದು ನಿಲ್ಲಿಸಿ ಅವರ ಬೈಕಿಗೆ ರಜತ್ ಎಂಬುವನು ನೀನು ಇಲ್ಲಿಗೆ ಬರಬೇಡ ವಾಪಸ್ಸು ಹೋಗು ಎಂದು ಹೇಳಿದಾಗ ಪಿರ್ಯಾದದಾರರು ನಾನು ಇಲ್ಲಿ ಕುಳಿತುಕೊಳ್ಳಲು ಬಂದಿರುತ್ತೇನೆ ಎಂದು ಹೇಳಿದಾಗ ಏನು ಗುರಾಯಿಸಿಕೊಂಡು ನೋಡುತ್ತಿಯಾ ನಾನು ಯಾರೆಂದು ನಿನಗೆ ತಿಳಿದಿದ್ದೆಯಾ ನೀನು ಬಸ್ಸು ತೋಳೆಯುವ ನಾಯಿ ಎಂಬುದಾಗಿ ಅವ್ಯಾಚ್ಛ ಶಬ್ದಗಳಿಂದ ಬೈದು ರಜತ್ ಮತ್ತು ಭರತ್ ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಬಲವಾಗಿ ಹೊಡೆದರು ಪಿರ್ಯಾದಿದಾರರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಭರತನು ರಜತ್ ನಲ್ಲಿ ಇವನನ್ನು ಹೀಗೆ ಬಿಡಬಾರದು ಕೊಲೆಯೆ ಮಾಡಿ ಬಿಡಬೇಕೆಂದು ದ್ವೇಷದಿಂದ ಆತನ ದ್ವಿಚಕ್ರ ವಾಹನದಲ್ಲಿದ ವಿಕೇಟ್ ನಿಂದ ಬಲವಾಗಿ ಬೀಸಿದ ಸದ್ರಿ ಪೆಟ್ಟನ್ನು ಪಿರ್ಯಾದಿದಾರರು ತಪ್ಪಿಸಿಕೊಂಡ ಸಮಯದಲ್ಲಿ ಸದ್ರಿ ಏಟು ಎಡ ಹಣೆಗೆ ತಾಗಿ ಉಬ್ಬಿದ ಗಾಯವಾಗಿರುತ್ತದೆ. ಪುನ: ಭರತನ್ನು ಎರಡನೇಯ ಏಟನ್ನು ಹೊಡೆದಾಗ ತಪ್ಪಿಸಿಕೊಂಡ ಸಮಯದಲ್ಲಿ ಸದ್ರಿ ಏಟು ಬೈಕಿನ ಮೇಲೆ ಬಿದ್ದಿರುತ್ತದೆ ಪಿರ್ಯಾದಿದಾರರು ಅಲ್ಲಿಂದ ಬೊಂಬೆ ಹೊಡೆದುಕೊಂಡು ಓಡಿಕೊಂಡು ಬರುವಾಗ ಇಬ್ಬರು ಆರೋಪಿಗಳು ಬೆನ್ನಟ್ಟಿಕೊಂಡು ಬಂದು ನೀನು ಇನ್ನೂ ಮುಂದಕ್ಕೆ ಇಲ್ಲಿಗೆ ಬಂದರೆ ನೀನನ್ನು ಕೊಲೆ ಮಾಡುವುದಾಗಿ ಜೀವ ಬೇದರಿಕೆ ಹಾಕಿ ಆ ಸಮಯದಲ್ಲಿ ಸ್ಥಳಿಯರು ಬರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಓಡಿಹೋಗಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ.
Crime Reported in Bajpe PS
ದಿನಾಂಕ 05.07.2021 ರಂದು ರಾತ್ರಿ ಸುಮಾರು 22:40 ಗಂಟೆ ಸಮಯಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ರನ್ ವೇ ಕಾಮಗಾರಿ ನಡೆಯುತ್ತಿದ್ದು, ಆ ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಕಂಡು ಬಂದಿದ್ದು, ಆತನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ರಾಕೇಶ್, ತಂದೆಃ ಬಬ್ಲು, ವಾಸಃ ಬಧುಹಾ ಗ್ರಾಮ, ಮುರ್ಸಿದಾಬಾದ್, ಪಶ್ಚಿಮ ಬಂಗಾಲ ಎಂದು ತಿಳಿಸಿದ್ದು, ತಾನು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ಇಲ್ಲೇ ಸಮೀಪದಲ್ಲಿ ಲಾರಿ ಡ್ರೈವರ್ ತನ್ನನ್ನು ಸಂಬಳ ನೀಡದೇ ಇಲ್ಲೇ ಬಿಟ್ಟು ಹೋಗಿದ್ದು, ದಾರಿ ಕಾಣದೇ ವಿಮಾನ ನಿಲ್ದಾಣ ಎಂದು ತಿಳಿಯದೇ ಈ ಭಾಗಕ್ಕೆ ಬಂದಿರುತ್ತೇನೆ ಎಂದು ತಿಳಿಸಿರುತ್ತಾನೆ. ಆರೋಪಿಯು ನಿಷೇದಿತ ಪ್ರದೇಶವಾದ ಮಂಗಳೂರು ತಾಲೂಕು, ಕೆಂಜಾರು ಗ್ರಾಮದ, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮ ಪ್ರವೇಶ ಮಾಡಿರುವುದರಿಂದ ಆರೋಪಿಯನ್ನು ಪಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಬಜಪೆ ಠಾಣೆಗೆ ಹಸ್ತಾಂತರಿಸುವುದಾಗಿದೆ.” ಎಂಬಿತ್ಯಾದಿಯಾಗಿರುತ್ತದೆ.
Crime Reported in Moodabidre PS
ದಿನಾಂಕ: 04-07-2021 ರಂದು ಮಧ್ಯಾಹ್ನ 2.00 ಗಂಟೆಯ ವೇಳೆಗೆ ಠಾಣಾ ಸರಹದ್ದಿನ ಮೂಡಬಿದ್ರೆ ತಾಲೂಕು ಪ್ರಾಂತ್ಯ ಗ್ರಾಮ ಪೇಪರ್ ಮಿಲ್ ಎಂಬಲ್ಲಿ ಪಿರ್ಯಾದಿ MOHAMMED RIZA ರವರ ಆಡು ಸಾಗಾಣಿಕೆಯ ಶೆಡ್ಡಿನ ಬಳಿಗೆ ಆರೋಪಿ ರಿಜ್ವಾನ ಹಾಗೂ ಆತನ ಸಹಚರರು ಬಿಳಿ ಬಣ್ಣದ ಕ್ವಿಡ್ ಕಾರಿನಲ್ಲಿ ಬಂದು ಪಿರ್ಯಾದಿದಾರರಿಗೆ ಆರೋಪಿಗಳ ಪೈಕಿ ರಿಜ್ವಾನ್ ಎಂಬಾತನು ತಲವಾರನ್ನು ತೋರಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ “ ನಂಗಲೂ ಮುಟ್ಟಾ ಬರಂಡ ನಿಂಡೊ ಕೊಲ್ಡೆ ಎಂಬುದಾಗಿ ಬೆದರಿಕೆ ಹಾಕಿ ಪಿರ್ಯಾದಿದಾರರ ಶೆಡ್ಡಿನಿಂದ ಅವರ ಆಡನ್ನು ಬಲವಂತವಾಗಿ ತುಂಬಿಸಿಕೊಂಡು ಹೋಗಿರುತ್ತಾರೆ. ಈ ಹಿಂದೆ ಕೂಡಾ ತನ್ನ ಮೂರು ಆಡುಗಳನ್ನು ಈ ಆರೋಪಿಗಳೆ ತುಂಬಿಸಿಕೊಂಡು ಹೋಗಿರುವ ಬಗ್ಗೆ ಸಂಶಯವಿರುತ್ತದೆ ಎಂಬುದಾಗಿ ಪಿರ್ಯಾದಿಯ ಸಾರಾಂಶವಾಗಿರುತ್ತದೆ