ಅಭಿಪ್ರಾಯ / ಸಲಹೆಗಳು

Crime Reported in  Urva PS

ಪಿರ್ಯಾದಿ ABHISHEK KARADKA ರವರು ಮಂಗಳೂರು ಬಳ್ಳಾಲ್ ಬಾಗ್ ಶಿಂಗ್ಲರ್ ಇಂಡಿಯಾ ಪ್ರೈ.ಲಿ ಕಂಪನಿಯಲ್ಲಿ ಸೀನಿಯರ್ ಎಕ್ಸ್ ಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 06-08-2021 ರಂದು ಪಿರ್ಯಾದಿದಾರರು ಅವರ ಬಾಬ್ತು KA-19-MB-4033 ನೇ ನಂಬ್ರದ ರಿಟ್ಜ್ ಕಾರಿನಲ್ಲಿ ಮಂಗಳೂರು ಉರ್ವಾಸ್ಟೋರ್ ಮುಡಾ ಕಚೇರಿ ಮುಂಭಾಗ ಸಮಯ ಸುಮಾರು 12-00 ಗಂಟೆ ವೇಳೆಗೆ ಕಾರಿನ ಗ್ಲಾಸ್ ನ್ನು ಹಾಕಿ ಲಾಕ್ ಮಾಡಿ, ಕಾರನ್ನು ಪಾರ್ಕ್ ಮಾಡಿ ಹೋಟೆಲ್ ಗೆ ಹೋದವರು ಸಮಯ ಸುಮಾರು 12-25 ಗಂಟೆ ವೇಳೆಗೆ ವಾಪಸ್ಸು  ಪಿರ್ಯಾದಿದಾರರು ಬಂದು ನೋಡಿದಾಗ ಪಿರ್ಯಾದಿದಾರರ ಕಾರಿನ ಎಡ ಭಾಗದ ಹಿಂಭಾಗದ ಡೋರ್ ನ ಗ್ಲಾಸ್ ನ್ನು ಯಾರೋ ಕಳ್ಳರು ಹೊಡೆದು ಜಖಂ ಗೊಳಿಸಿ ಕಾರಿನೊಳಗಿದ್ದ ಕಪ್ಪು ಬಣ್ಣದ ಬ್ಯಾಗ್  ಹಾಗೂ ಅದರಲ್ಲಿದ್ದ ಡೆಲ್ ಕಂಪನಿಯ ಲ್ಯಾಪ್ ಟಾಪ್(MODEL DELL LATITUDE 5490, SERIAL NO H8FC2X2) ಇದ್ದು ಅದರ ಅಂದಾಜು ಮೌಲ್ಯ ರೂಪಾಯಿ 90,000/- ಆಗಬಹುದು. ಹಾಗೂ ಐ ಫೋನ್ 5-ಎಸ್ ಇದ್ದು ಅದರ ಅಂದಾಜು ಮೌಲ್ಯ 10,000/- ಆಗಬಹುದು ಹಾಗೂ ವಿವಿದ ಬ್ಯಾಂಕ್ ನ 20 ಚೆಕ್ ಹಾಳೆಗಳು ಕಳವಾಗಿರುತ್ತವೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,00,000/- ಆಗಬಹುದು. ಈ ಬಗ್ಗೆ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿಕೆ. ಎಂಬಿತ್ಯಾದಿಯಾಗಿರುತ್ತದೆ.

2) ಪಿರ್ಯಾದಿದಾರರ ಮಗಳು  ಸ್ಟೆಪೀಲಿಯಾ ಸ್ಪೂರ್ತಿ ಡಿಸೋಜಾ  ಪ್ರಾಯ 20 ವರ್ಷ ಎಂಬಾಕೆಯು  ಕರ್ನಾಟಕ ಆರ್ಯುವೇದಿಕ್ ಕಾಲೇಜಿನಲ್ಲಿ 2ನೇ ವರ್ಷದ ಬಿ.ಎ.ಎಮ್.ಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಬಗ್ಗೆ ಪ್ರತಿದಿನ ಆಕೆಯನ್ನು ಪಿರ್ಯಾದಿದಾರರು ಕಾಲೇಜಿಗೆ ಬಿಟ್ಟು ಬರುತ್ತಿದ್ದು ಎಂದಿನಂತೆ ದಿನಾಂಕ  05.08.2021  ರಂದು  ಬೆಳಿಗ್ಗೆ  8:00  ಗಂಟೆಗೆ ಪಿರ್ಯಾದಿದಾರರು  ಆಕೆಯನ್ನು ಕಾಲೇಜಿಗೆ ಬಿಡಲು ಮನೆಗೆ ಹೋದಾಗ ಆಕೆಯು ಮನೆಯಲ್ಲಿರದೇ ಇದ್ದು ಎಲ್ಲಾ ಕಡೆ ಹುಡುಕಿದಲ್ಲಿ ಪತ್ತೆಯಾಗದೇ ಇದ್ದು  ಪತ್ತೆ ಮಾಡಿ ಕೊಡಬೇಕಾಗಿ ಕೋರಿದ ಪಿರ್ಯಾದಿ   ಎಂಬಿತ್ಯಾದಿ.

Crime Reported in  Konaje PS

ಪಿರ್ಯಾದಿ Mohammad Haneef ರವರ ಬಾಬ್ತು ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಜಂಕ್ಷನ್ ನ ಗೋಲ್ಡ್ ಕಿಂಗ್ ಜ್ಯುವೆಲ್ಲರ್ಸ್ ಅಂಗಡಿಗೆ ಯಾರೋ ಕಳ್ಳರು ದಿನಾಂಕ 05.08.2021 ರಂದು ರಾತ್ರಿ 7:30 ಗಂಟೆಯಿಂದ ದಿನಾಂಕ 06.08.2021 ರಂದು ಮುಂಜಾನೆ 03:00 ಗಂಟೆಯ ಮಧ್ಯೆ ಸಮಯದಲ್ಲಿ ಅಂಗಡಿಯ ಎಡ ಬದಿಯ ಗೋಡೆಯನ್ನು ಕೊರೆದು ಅಂಗಡಿಯ ಒಳ ಪ್ರವೇಶಿಸಿ ಅಂಗಡಿಯ ಡಿಸ್ ಪ್ಲೇಯಲ್ಲಿರಿಸಿದ್ದ ಕುತ್ತಿಗೆಯ ಬೆಳ್ಳಿಯ ಸರ-5 ಮತ್ತು ಕಾಲ್ಗೆಜ್ಜೆ- 4 ಜೊತೆ (ಒಟ್ಟು 350 ಗ್ರಾಂ) ಯನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬೆಳ್ಳಿಯ ಆಭರಣದ ಅಂದಾಜು ಮೌಲ್ಯ ರೂ 15,000/- ಆಗಬಹುದು ಎಂಬಿತ್ಯಾದಿ.

Crime Reported in  Kavoor PS

ಪಿರ್ಯಾದಿ YAMUNAPPA  MADAR ರವರಿಗೆ  ಯಲ್ಲಮ್ಮ ಎಂಬವರು ಪೋನ್ ಮೂಲಕ ತಿಳಿಸಿದ ಮಾಹಿತಿವೆನೆಂದರೆ, ದಿನಾಂಕ 06/08/2021 ರಂದು ಬೆಳಿಗ್ಗೆ 7.30 ಗಂಟೆಗೆ ನೆಕ್ಕಿಲಗುಡ್ಡೆಯಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನದ ಬೀಗ ತೆಗೆಯಲು ಬಂದಾಗ ದೇವಸ್ಥಾನದ ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಯಾರೋ ಕಳ್ಳರು ಕಳವು ಮಾಡಿದ ಬಗ್ಗೆ ತಿಳಿಸಿದಂತೆ ಪಿರ್ಯಾದಿದಾರರು ಬಂದು ನೋಡಿದಾಗ ದೇವರ ಮೂರ್ತಿಯ ಕುತ್ತಿಗೆಯಲ್ಲಿದ್ದ ಸುಮಾರು 15 ಗ್ರಾಂ ಚಿನ್ನದ ನೆಕ್ಲೇಸ್ ಅಂದಾಜು ಮೌಲ್ಯ 60000/- ರೂ, ಹಾಗೂ 200 ಗ್ರಾಂ ಬೆಳ್ಳಿಯ ದೇವರ ಆಭರಣ ಅಂದಾಜು ಮೌಲ್ಯ 15,000/- ರೂ,ಮತ್ತು ಸುಮಾರು 5000/- ರೂ, ಇರುವ ಎರಡು ಸ್ಟೀಲ್ ನ ಕಾಣಿಕೆ ಡಬ್ಬಿಗಳು ಒಟ್ಟು ಕಳುವಾದ ಸ್ವೊತ್ತುಗಳ ಅಂದಾಜು ಮೌಲ್ಯ 80.000/- ರೂ ಆಗಿದ್ದು, ದಿನಾಂಕ 05/08/2021 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ 06/08/2021 ರಂದು ಬೆಳಿಗ್ಗೆ 5.00 ರ ಮಧ್ಯೆ ಯಾರೋ ಕಳ್ಳರು ದೇವಸ್ಥಾನದ ಬಾಗಿಲಿನ ಬೀಗ ಮುರಿದು ಕಳವು ಮಾಡಿರುತ್ತಾರೆ ಎಂಬಿತ್ಯಾದಿ ಪಿರ್ಯಾದಿ.

Crime Reported in  Mangalore Rural PS

ಪಿರ್ಯಾದಿದಾರರ ಗಂಡನಾದ ಗಣೇಶ್ ಪೂಜಾರಿ (41) ಎಂಬವರು ಮಡಂತ್ಯಾರು ಹೆರಾಜೆ ಎಂಬ ಊರಿನವರಾಗಿದ್ದು ಪಿರ್ಯಾದಿದಾರರನ್ನು ಸರಿಯಾಗಿ ನೋಡಿಕೊಳ್ಳದೆ ಇರುವುದರಿಂದ ಪಿರ್ಯಾದಿದಾರರು ಅಡ್ಯಾರ್ ನಲ್ಲಿರುವ ತಮ್ಮ ಅಣ್ಣನ ಮನೆಯಲ್ಲಿ ತಮ್ಮ ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ಸುಮಾರು 02 ತಿಂಗಳಿನಿಂದ ಪಿರ್ಯಾದಿದಾರರ ಗಂಡನವರು ಪಿರ್ಯಾದಿದಾರರೊಂದಿಗೆ ವಾಸವಾಗಿದ್ದು ಅಡುಗೆ ಕೆಲಸಕ್ಕೆ ಹೋಗುತ್ತಿದ್ದವರು ದಿನಾಂಕ 14/07/2021 ರಂದು ಸಂಜೆ 07-00 ಗಂಟೆ ಸುಮಾರಿಗೆ ಮನೆಯಿಂದ ಅವರ ಲಗೇಜನ್ನು ಹಿಡಿದುಕೊಂಡು ಕೆಲಸಕ್ಕೆ ಹೋದವರು ಈ ವರೆಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಕಾಣೆಯಾದ ಗಂಡನನ್ನು ಪತ್ತೆ ಮಾಡಿಕೊಡುವರೆ ವಿನಂತಿ ಎಂಬಿತ್ಯಾದಿ ದೂರು

ಕಾಣೆಯಾದವರ ಚಹರೆಯ ವಿವರ:

ಹೆಸರು: ಗಣೇಶ್ ಪೂಜಾರಿ

ತಂದೆ: ದಿ| ತಿಮ್ಮಪ್ಪ ಪೂಜಾರಿ

ವಾಸ-ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಅಡ್ಯಾರ್ ಕಟ್ಟೆ, ಮಂಗಳೂರು

ಪ್ರಾಯ: 41 ವರ್ಷ

ಎತ್ತರ :5.3 ಅಡಿ

ಬಣ್ಣ: ಗೋದಿ ಮೈಬಣ್ಣ

Crime Reported in  Ullal PS

ದಿನಾಂಕ 05/08/2021 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿ Bhanu Prakash ರವರು ಚಾಲಕರಾಗಿ ಕೆಲಸ ಮಾಡುತ್ತಿದ್ದ ಆದ್ಯಾ-2 ನೊಂದಣಿ ನಂಬ್ರ IND KA 01M M 3097 ಸದ್ರಿ ಬೋಟಿನಲ್ಲಿ ತಾಂಡೇಲ ಸೌಂದಿರರಾಜನ್ ಮೀನುಗಾರಿಕೆ ಬಗ್ಗೆ ಮಂಗಳೂರಿನ ಹಳೆ ಬಂದರಿನಿಂದ ಹೊರಟು ಅದರಲ್ಲಿ ಇತರ 9 ಜನ ಮೀನುಗಾರರಿದ್ದು ಸದ್ರಿ ಬೋಟ್ ಉಳ್ಳಾಲ ಬರಕ ಎಂಬಲ್ಲಿಂದ ನೇರ ಪಶ್ಚಿಮದ ಕಡೆ 8-9 ನಾಟೇಕಲ್ ದೂರದಲ್ಲಿ ಮೀನುಗಾರಿಕೆಯಲ್ಲಿದ್ದಾಗ ಸಮುದ್ರದಲ್ಲಿ ಈ ಹಿಂದೆ ಮುಳುಗಿದ್ದ ಹಡಗಿನ ಅವಶೇಷಕ್ಕೆ ಪಿರ್ಯಾದಿದಾರರ ಬೋಟು ಡಿಕ್ಕಿ ಹೊಡೆದು ಸದ್ರಿ ಬೋಟ್ ಒಡೆದು ಸಮುದ್ರದ ನೀರು ಬೋಟಿನ ಒಳಗೆ ತುಂಬಿ, ಬೋಟ್ ಅದೇ ಜಾಗದಲ್ಲಿ ಮುಳುಗಿ ಹೋಗಿದ್ದು ಅದರಲ್ಲಿದ್ದ 10 ಮಂದಿ ಮೀನುಗಾರರ ಪೈಕಿ 9 ಜನರನ್ನು ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಇನ್ನೊಂದು ಬೋಟಿನವರು (IND KA 01M M 3433) ರಕ್ಷಣೆ ಮಾಡಿದ್ದು ಆದರೆ ಪಿರ್ಯಾದಿದಾರರ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಕಣ್ಣತಾಸನ್ ಸಮುದ್ರದ ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾನೆ ಎಂಬಿತ್ಯಾದಿ. ಈ ಘಟಣೆ ನಡೆಯುವಾಗ ಸುಮಾರು 1-15 ಗಂಟೆ ಆಗಿರಬಹುದು.ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 06-08-2021 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080