ಅಭಿಪ್ರಾಯ / ಸಲಹೆಗಳು

Crime Reported in  Panambur PS

ಪಿರ್ಯಾದಿ TANSIRA MANZIL, MJM 1044 BLOCK 21 KASABA BENGRE ನಿವಾಸಿ TAMSIL (22) ರವರು ದಿನಾಂಕ 03-04-2021 ರಂದು ಬೆಳಿಗ್ಗೆ 10-00 ಗಂಟೆಗೆ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಕುಪ್ಪೆಪದವಿಗೆ ಮನೆಗೆ ಬೀಗ ಹಾಕಿ ಹೋದವರು ದಿನಾಂಕ 05-04-2021 ರಂದು ಬೆಳಿಗ್ಗೆ 10-00 ಗಂಟೆಗೆ  ವಾಪಸ್ ಮನೆಗೆ ಬಂದಿದ್ದು ಅದೇ ದಿನ ಸಂಜೆ 06-00 ಗಂಟೆ ಸಮಯಕ್ಕೆ ಬೆಡ್ ರೂಮಿಗೆ ಹೋಗಿ ನೋಡಿದಾಗ ಬೆಡ್ ರೂಮಿನಲ್ಲಿದ್ದ ಸ್ಟೀಲ್ ಕಪಾಟಿನ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು  ಲಾಕರ್ ನಲ್ಲಿದ್ದ ನಗದು ಸುಮಾರು 28.000/- ಮತ್ತು 6 ಜೊತೆ ಬೆಳ್ಳಿಯ ಕಾಲ್ಗೇಜ್ಜೆ ಮೌಲ್ಯ ಸುಮಾರು 6,000/- ಕಳವಾಗಿರುವುದು ಕಂಡು ಬಂತು.ಯಾರೋ ಕಳ್ಳರು ಮನೆಯ ಮಾಡಿನ ಹಂಚು ತೆಗೆದು ಒಳ ಪ್ರವೇಶಿಸಿ ಸ್ಟೀಲ್ ಕಪಾಟನ್ನು ತೆರೆದು ಲಾಕರ್ ನಲ್ಲಿದ್ದ ಸೊತ್ತುಗಳನ್ನು ಕಳವು ಮಾಡಿರುತ್ತಾರೆ.ಕಳವಾದ ಸೊತ್ತಿನ ಒಟ್ಟು ಮೌಲ್ಯ 34,000/- ಆಗಿರುತ್ತದೆ.ವಿಷಯ ತಿಳಿಯಲಾಗಿ ನೆರೆಯ ಅಯೂಬ್ ಎಂಬವರ ಮಗ ಫರಾಜ್ ಎಂಬವನು ಕಳವು ಮಾಡಿರುವ ಬಗ್ಗೆ ಸಂಶಯ ಇದ್ದು ಸದ್ರಿಯವನನ್ನು ಹುಡುಕಾಡಿದ್ದು ಈವರೆಗೆ ಪತ್ತೆಯಾಗದೇ ಇದ್ದುದ್ದರಿಂದ ಮನೆಯವರಲ್ಲಿ ವಿಚಾರ ವಿನಿಮಯ ಮಾಡಿ ತಡವಾಗಿ ಪಿರ್ಯಾದಿ ನೀಡಿರುವುದಾಗಿದೆ ಎಂಬಿತ್ಯಾದಿ.

 Crime Reported in  Surathkal PS

ದಿ. 06-04-2021 ರಂದು ಸುರತ್ಕಲ್  ಪೊಲೀಸ್ ಠಾಣಾ ಕಾನೂನು ಮತ್ತು ಸುವ್ಯವಸ್ಥೆ  ಪಿ. ಎಸ್. ಐ. ಪುನೀತ್ ಎಂ.  ಗಾಂವಾಕರ್ ಇವರು  ಠಾಣಾ  ಅಪರಾಧ ಪ್ರಕರಣದ  ಆರೋಪಿ ಹಸನ್ ಶಾಹೀಕ್ ಇವರು  ಆತನ ಮನೆಯಾದ  ಕಾಟಿಪಳ್ಳ ಗ್ರಾಮದ 6 ನೇ ಬ್ಲಾಕ್ ಸಿಟಿ ಡಾಮರೀಶ್ ಬಳಿ ಇರುವ ಮಾಹಿತಿ ಮೇರೆಗೆ  ಠಾಣಾ ಸಿಬ್ಬಂಧಿಗಳೊಂದಿಗೆ ರಾತ್ರಿ 21:30 ಗಂಟೆಗೆ  ಕಾಟಿಪಳ್ಳ ಗ್ರಾಮದ 6 ನೇ ಬ್ಲಾಕ್ ಸಿಟಿ ಡಾಮರೀಶ್  ಬಳಿ ನಿಂತಿದ್ದ  ಆರೋಫಿ  ಹಸನ್ ಶಾಹೀಕ್ ವರನ್ನು    ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ  ಆತ ಗಾಂಜಾ ಸೇವನೆ ಮಾಡಿದ ಬಗ್ಗೆ ಅನುಮಾನಗೊಂಡು ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಂತೆ  ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿದಲ್ಲಿ . ಆರೋಪಿ ಹಸನ್ ಶಾಹೀಕ್ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟ ಮೇರೆಗೆ    ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿಯಾಗಿರುತ್ತದೆ

Crime Reported in  Moodabidre PS

ಪಿರ್ಯಾದಿ Mubeen Ahammed (32) ರವರ   ತಾಯಿಯ ತಮ್ಮ ಮಹಮ್ಮದ್ ರಫೀಕ್ ಎಂಬವರ ಮನೆಯಲ್ಲಿ (D No 7-222, Maskan Manzil, Kana, Belvai village, Moodabidre Taluk) ಬಾಡಿಗೆದಾರರಾದ ರಝಾಕ್ ಎಂಬವರು ವಾಸ ಮಾಡಿಕೊಂಡಿದ್ದು, ರಝಾಕ್ ರವರು ಕೆಲಸದ ನಿಮಿತ್ತ ದಿನಾಂಕ: 01-04-2021 ರಂದು ಚಿತ್ರದುರ್ಗಾ ಕಡೆಗೆ ಹೋಗುವಾಗ ಮನೆಯ ಗಾರ್ಡನ್ ನಲ್ಲಿರುವ ಮರಗಿಡಗಳಿಗೆ ನೀರು ಹಾಕಲು ಪಿರ್ಯಾದುದಾರರಿಗೆ ಸೂಚಿಸಿದ್ದು, ಅದರಂತೆ ದಿನಾಂಕ: 04-04-2021 ರಂದು ಸಂಜೆ 6.30 ಗಂಟೆಗೆ ಸದ್ರಿ ಮನೆಯ ಗಾರ್ಡನ್ ನಲ್ಲಿರುವ ಮರಗಿಡಗಳಿಗೆ ನೀರು ನೀಡಿದ ಬಳಿಕ ಗೇಟನ್ನು ಬೀಗ ಹಾಕಿ ಬಂದವರು ದಿನಾಂಕ: 06-04-2021 ರಂದು ಬೆಳಿಗ್ಗೆ 09.30 ಗಂಟೆಗೆ ರಝಾಕ್ ರವರ ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲಿಗೆ ಅಳವಡಿಸಿದ ಕಬ್ಬಿಣದ ಬಾಗಿಲಿನ ಬೀಗ ಮುರಿದಿದ್ದು, ನಂತರ ಮನೆಯ ಸುತ್ತಲು ಹೋಗಿ ನೋಡಿದಾಗ ಮನೆಯ ಹಿಂಬಾಗಿಲು ತೆರೆದಿದ್ದನ್ನು ಕಂಡು ಪಿರ್ಯಾದುದಾರರು ಮನೆಯ ಬಾಡಿಗೆದಾರರಾದ ರಝಾಕ್ ರವರಿಗೆ ದೂರವಾಣಿ ಕರೆ ಮಾಡಿ ಈ ವಿಷಯವನ್ನು ತಿಳಿಸಿದಾಗ ರಝಾಕ್ ರವರು ಪಿರ್ಯಾದುದಾರರನ್ನು ಮನೆಯ ಒಳಗೆ ಹೋಗಿ ಪರಿಶೀಲಿಸಲು ಸೂಚಿಸಿದ ಮೇರೆಗೆ ಪಿರ್ಯಾದುದಾರರು ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಬೆಡ್ ರೂಮಿನ ಕಬಾರ್ಟ್ ತೆರೆದಿದ್ದು, ಇದರಲ್ಲಿ ಇರಿಸಿದ್ದ 5000/- ನಗದು ರೂಪಾಯಿ ಮತ್ತು ಒಂದು ಕೈ ಗಡಿಯಾರವನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂಬಿತ್ಯಾದಿ.

Crime Reported in  Mangalore East PS

ಪಿರ್ಯಾದಿ Enas D Souza (49) ರವರ ಮಗ ಸುಮಾರು 19 ವರ್ಷ ಪ್ರಾಯದ ಸೀಜು ಡಿ” ಸೋಜಾ ರವರು ಪದವಾ ಜೂನಿಯರ್ ಕಾಲೇಜಿನಲ್ಲಿ 2ನೇವರ್ಷದ  ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿರುವರು  ದಿನಾಂಕ 05-04-2021 ರಂದು ಎಂದಿನಂತೆ  ಬೆಳಿಗ್ಗೆ  7.00 ಗಂಟೆಗೆ ಮನೆಯಿಂದ ಶಾಲೆಗೆ ಹೋರಟು ಹೋದವರು ,ಪ್ರತಿ ನಿತ್ಯ  4.00 ಗಂಟೆಗೆ ಮನೆಗೆ ವಾಪಸ್ಸು ಬರುತ್ತಿದ್ದವರು ಸಂಜೆ  6.30 ಗಂಟೆಯ ವರೆಗೂ ಮನೆಗೆ ವಾಪಸ್ಸು ಬಾರದ ಕಾರಣ ಪಿರ್ಯಾದಿದಾರರು ಅವರ ಸ್ನೇಹಿತರಿಗೆ  ಕರೆ ಮಾಡಿ ವಿಚಾರಿಸಿದಾಗ  ಸೀಜು ಡಿ”ಸೋಜಾರವರು 3.30 ಗಂಟೆಗೆ ಸ್ಕೂಲ್ ಬ್ಯಾಗ್ ನ್ನು ಕಾಲೇಜಿನಲ್ಲಿ ಬಿಟ್ಟು ಹೋಗಿರುವ  ವಿಚಾರ ತಿಳಿದಲ್ಲಿ    ಮಂಗಳೂರು ಪರಿಸರದಲ್ಲಿ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 07-04-2021 07:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080