ಅಭಿಪ್ರಾಯ / ಸಲಹೆಗಳು

Crime Reported in  Panambur PS

ಪಿರ್ಯಾದಿದಾರಾದ ಎಸ್ ಆರ್ ಮಂಜುನಾಥ  ಎಂಬವರ ಜೊತೆ ಸುಮಾರು 10 ದಿನಗಳಿಂದ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ  ಎಂಬವನು ಮಂಗಳೂರು ನಗರದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಎಸ್ ಎಸ್ ಮೆಟಲ್ಸ್ ಅಂಡ್ ಇಂಡಸ್ಟ್ರೀಸ್  ಕಂಪನಿಯಲ್ಲಿ ಯಲ್ಲಿ ದಿನಾಂಕ 06-05-2021 ರಂದು ಮದ್ಯಾಹ್ನ ಸುಮಾರು 2-15 ಗಂಟೆಯ ಸುಮಾರಿಗೆ  ಪ್ಯಾಕ್ಟರಿಯಲ್ಲಿರುವ ಹಳೆಯದಾದ ಸಿಮೆಂಟ್ ಶೀಟ್  ಬದಲಿಸಿ ಹೊಸದನ್ನು ಅಳವಡಿಸುವ ಕೆಲಸ ಮಾಡುತ್ತಿದ್ದಾಗ ಸಿಮೆಂಟ್ ಶೀಟ್ ತುಂಡಾಗಿ ಸುಮಾರು 25 ಅಡಿ ಮೇಲಿನಿಂದ ಕೆಳಗೆ ಬಿದ್ದು, ಅವನ ತಲೆಗೆ ತೀವ್ರ ಗಾಯವಾಗಿ ದೇರಳಕಟ್ಟೆ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಸದ್ರಿಯವರನ್ನು ತೀವ್ರ ನಿಗಾ ಘಟಕ್ಕೆ  ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದು, ಆತನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಮಲ್ಲಿಕಾರ್ಜುನ  ಎಂಬಾತನು ಕೆಲಸ ಮಾಡುತ್ತಿದ್ದ ಎಸ್ ಎಸ್ ಮೆಟಲ್ಸ್ ಅಂಡ್ ಇಂಟಸ್ಟ್ರೀಸ್ ನ ಮಾಲಕರು, ಸೇಪ್ಟಿ ಬೆಲ್ಟನ್ನು ಒದಗಿಸದೇ, ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿರುವುದರಿಂದ ಮಲ್ಲಿಕಾರ್ಜುನ ಎಂಬವರು ಮೇಲಿಂದ ಕೆಳಗೆ ಬಿದ್ದು, ತೀವ್ರ ತರದ ಗಾಯವಾಗಲು  ಕಾರಣವಾಗಿರುತ್ತಾರೆ. ಎಂಬಿತ್ಯಾದಿ

Crime Reported in  Traffic North PS

ದಿನಾಂಕ:07-05-2021 ರಂದು ಪಿರ್ಯಾದಿದಾರರಾದ ಕಿಶನ್ ಕುಮಾರ್ ರವರ ಗೆಳೆಯ ಪ್ರಶಾಂತ್ ಸಾಮಂತ್ ರವರು ಚೇತನ್ ಎಂಟರ್ ಪ್ರೈಸಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲಸದ ನಿಮಿತ್ತ ನೀರು ಮಾರ್ಗದ ಕಡೆಯಿಂದ ಪದವಿನಂಗಡಿ ಕಡೆಗೆ ಮೋಟಾರ್ ಸೈಕಲ್ ನಂಬ್ರ KA19EY7386 ನೇಯದ್ದನ್ನು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಬೆಳಿಗ್ಗೆ 10-15 ಗಂಟೆಗೆ ಪೆರ್ಲಗುರಿ ಕ್ರಾಸ್ ಬಳಿ ತಲುಪಿದಾಗ ಸ್ಕೂಟರ್ ಸವಾರರೊಬ್ಬರು ರಸ್ತೆಗೆ ಅಡ್ಡ ಬಂದಾಗ ಅವರಿಗೆ  ಡಿಕ್ಕಿಯಾಗುವುದನ್ನು ತಪ್ಪಿಸುವ ಸಲುವಾಗಿ ಮೋಟಾರ್ ಸೈಕಲ್ ನ್ನು ರಸ್ತೆಯ ಎಡಬದಿಗೆ ಚಲಾಯಿಸಿದಾಗ ಮೋಟಾರ್ ಸೈಕಲಿನ ನಿಯಂತ್ರಣ ತಪ್ಪಿ ವಾಸು ಬೇಕರಿಯ ಅಂಗಡಿಯ ಜಗಲಿಕಟ್ಟೆಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪ್ರಶಾಂತ್ ಸಾಮಂತ್ (30) ರವರ ತಲೆಗೆ ಎದೆಗೆ ಹಾಗೂ ಹೊಟ್ಟೆಗೆ ಗುದ್ದಿದ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎಸ್ ಸಿ ಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದವರು ಚಿಕಿತ್ಸೆ ಪಲಕಾರಿಯಾಗದೇ ಈ ದಿನ ದಿನಾಂಕ:07-05-2021 ರಂದು 12-46 ಗಂಟೆಗೆ ಮೃತಪಟ್ಟಿರುವುದಾಗಿ ಪಿರ್ಯಾದಿ ಸಾರಾಂಶ.

Crime Reported in  Moodabidre PS

ಪಿರ್ಯಾದಿ Sharada ರವರ ಹಿರಿಯ ಮಗಳಾದ ರೇಷ್ಮಾ, ಪ್ರಾಯ: 19 ವರ್ಷ ಎಂಬುವಳು ದಿನಾಂಕ: 24-04-2021 ರಂದು ಬೆಳಗ್ಗೆ 8.30 ಗಂಟೆಗೆ ಕೆಲಸಕ್ಕೆಂದು ಹೋದವಳು ವಾಪಾಸು ಮನೆಗೆ ಬಾರದೇ ಇರುವುದರಿಂದ  ಅವಳ ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಎಲ್ಲ ಕಡೆಗೂ ಹುಡುಕಾಡಿ ಈ ವರೆಗೂ ಪತ್ತೆಯಾಗದ ಕಾರಣ ಈ ದಿನ 07-05-2021 ರಂದು ಠಾಣೆಗೆ ಬಂದು ಕಾಣೆಯಾದ ರೇಷ್ಮಾಳನ್ನು ಪತ್ತೆ ಹಚ್ಚಿ ಕೊಡಬೇಕೆಂದು ದೂರು ನೀಡಿರುವುದು ಎಂಬಿತ್ಯಾದಿ.

2)  ದಿನಾಂಕ: 06-05-2021 ರಂದು 08.00 ಗಂಟೆಗೆ ಮೂಡಬಿದರೆ ತಾಲೂಕು, ಮಾರ್ಪಾಡಿ ಗ್ರಾಮದ, ಮೂಡಬಿದರೆ ಪೇಟೆಯ, ಮಸೀದಿ ರಸ್ತೆಯಲ್ಲಿರುವ ಪಿ. ಇಸ್ಮಾಯಿಲ್ ಸಾಹೇಬ್ GROCERY  ಅಂಗಡಿಯ ಮಾಲಿಕರು ಕೋವಿಡ್-19 ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಗ್ರಾಹಕರು ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಹ್ಯಾಂಡ್ ವಾಷ್/ಸ್ಯಾನಿಟೈಸರ್ ಇಡುವ ವ್ಯವಸ್ಥೆ ಮಾಡದೆ ನಿರ್ಲಕ್ಷ ತೋರಿರುತ್ತಾರೆ.  ಈತನ ವಿರುದ್ದ ಕಲಂ: 269 ಐ.ಪಿ.ಸಿ ಮತ್ತು ಕಲಂ: 4 ಮತ್ತು 5 ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರಂತೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರು.

Crime Reported in  Surathkal PS

ದಿನಾಂಕ:06-05-2021 ರಂದು ಬೆಳಿಗ್ಗೆ 11.00 ಗಂಟೆಗೆ ಇಡ್ಯಾ ಗ್ರಾಮದ ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಹಿಂಬದಿಯಲ್ಲಿ ಫೈನ್ ಪ್ಲಾಸ್ಟಿಕ್ ಎಂಬ ಹೆಸರಿನ ಅಂಗಡಿಯನ್ನು ಅದರ ಮಾಲೀಕ ಹೈದರ್ (53) ಎಂಬವನು ತೆರೆದಿಟ್ಟು  ಕೋವಿಡ್ ನಿಯಮಾವಳಿಯನ್ನು ಪಾಲಿಸದೆ, ಸೋಂಕು ಹರಡುವಿಕೆಯನ್ನು ತಡೆಯಲು ಬೇಕಾದ ಎಲ್ಲಾ ನಿಯಾಮಾವಳಿಯನ್ನು ನಿರ್ಲಕ್ಷಿಸಿ, ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಅಪರಾಧವೆಸಗಿರುತ್ತಾರೆ, ಎಂಬಿತ್ಯಾದಿ

Crime Reported in  Kavoor PS

ದಿನಾಂಕ 06-05-2021 ರಂದು ಸಮಯ ಸುಮಾರು 12.55 ಗಂಟೆಗೆ ಠಾಣಾ ವ್ಯಾಪ್ತಿಯ  ಲ್ಯಾಂಡ್ ಲಿಂಕ್ಸ್ ಕೊಂಚಾಡಿ ಬಳಿಯಿರುವ  ಶ್ರೀ ಭಗವತಿ ಜನರಲ್ ಸ್ಟೋರ್ ಅಂಗಡಿಯನ್ನು ತೆರೆದುಕೊಂಡಿದ್ದು ಶ್ರೀ ಭಗವತಿ ಜನರಲ್ ಸ್ಟೋರ್ ಒಳಗಡೆ ಅಂಗಡಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಶ್ರೀ ಹರೀಶ (55 ವರ್ಷ) ಎಂಬುದಾಗಿ ಹೆಸರು ವಿಳಾಸವನ್ನು ತಿಳಿಸಿರುತ್ತಾರೆ. ಅಲ್ಲದೇ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿ ಆದೇಶದ ಬಗ್ಗೆ ವಿಚಾರಿಸಿದಲ್ಲಿ ಈ ಬಗ್ಗೆ ತನಗೆ ತಿಳಿದಿರುವುದಾಗಿ ತಿಳಿಸಿದ್ದು ಆದರೂ ಕೂಡ ಇದನ್ನು ಉಲ್ಲಂಘಿಸಿ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೊಂಕು ಹರಡುವ ಸಂಭವಿರುವುದನ್ನು ತಿಳಿದು ಕೂಡ ನಿರ್ಲಕ್ಷ ವಹಿಸಿರುವುದರಿಂದ ಇವರ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

Crime Reported in  Mangalore Rural PS

ಸಾಂಕ್ರಮಿಕ ರೋಗವಾದ ಕೋವಿಡ್-19 ದಿನೇ ದಿನೇ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ತಾಲುಕು ವಾಮಂಜೂರು ಲಲಿತ್ ನಾರಾಯಣ್ ಚೇಂಬರ್ನಲ್ಲಿರುವ ಜಯಲಕ್ಷ್ಮಿ ಟೆಕ್ಸಟೈಲ್ಸ್ ಅಂಗಡಿ ಮಾಲೀಕನು ತಮ್ಮ ಬಟ್ಟೆ ಅಂಗಡಿಯನ್ನು ತೆರೆಯುವರೇ ನಿರ್ಭಂಧವಿದ್ದರೂ ಕೂಡಾ ಗ್ರಾಹಕರನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು, ಸದ್ರಿ ಮಾಲೀಕನು ಸರ್ಕಾರದ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಆದೇಶಕ್ಕೆ ವಿರುದ್ದವಾಗಿ ಅಂಗಡಿಯನ್ನು ತೆರೆದು ಕೋವಿಡ್-19 ಸಾಂಕ್ರಾಮಿಕ ರೋಗವು ತೀವ್ರಗತಿಯಲ್ಲಿ ಹರಡುತ್ತಿದ್ದರೂ ಇದನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಇರುವ ಸಾಮಾಜಿಕ ಅಂತರವನ್ನು ಉಲ್ಲಂಘಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗ್ರಾಹಕರ ಮೂಲಕ ಕೊರೋನಾ ಮಾರಕ ರೋಗವನ್ನು ಹರಡಿಸುವುದಕ್ಕೆ ಕಾರಣರಾಗಿದ್ದು, ಸದ್ರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಆನಂದ ಶೆಟ್ಟಿಗಾರ ಎಂಬಾತನ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ

Crime Reported in  Bajpe PS

ದಿನಾಂಕ 05/05/2021 ರಂದು ಪಿರ್ಯಾದಿ ಠಾಣಾ ಸಿಬ್ಬಂದಿ Thirupati Chavan ದಾರರಿಗೆ ಮತ್ತು ಇತರ ಸಿಬ್ಬಂದಿಯವರಿಗೆ ಕೋವಿಡ್  -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ  ಸರಕಾರ ಈಗಾಗಲೇ ಜಾರಿ ಮಾಡಿದ್ದ ಲಾಕ್ ಡೌನ್ ಹಿನ್ನಲೆಯಲ್ಲಿ ಬಜಪೆ ಠಾಣಾ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಕೈಕಂಬ ಜಂಕ್ಷನ್ ನಲ್ಲಿ ಹಗಲು ಚೆಕ್  ಪಾಯಿಂಟ್  ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ಸಿಬ್ಬಂದಿಗಳು ಸಮವಸ್ತ್ರದಲ್ಲಿ ಕರ್ತವ್ಯದಲ್ಲಿರುವ ಸಮಯ ಸುಮಾರು 14.00 ಗಂಟೆಗ ಗಂಜಿಮಠ ಕಡೆಯಿಂದ ಓರ್ವ ನೀಲಿ ಬಣ್ಣದ ಕೆಎ 19ಹೆಚ್.ಎ. 0218 ನೇ ಬೈಕ್ ನಲ್ಲಿ ಸವಾರನು ಮುಖಕ್ಕೆ  ಮಾಸ್ಕ್ ಮತ್ತು ಹೆಲ್ಮಟ್ ಹಾಕದೇ ಬೈಕನ್ನು ಚಲಾಯಿಸಿಕೊಂಡು ಬರುತ್ತಿರುದುನ್ನು ನೋಡಿದ ಸಿಬ್ಬಂದಿಗಳು ಬೈಕನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಸವಾರನು ಬೈಕನ್ನು  ನಿಲ್ಲಿಸುವಂತೆ ಮಾಡಿ ಅವಾಚ್ಯ ಶಬ್ದಗಳಿಂದ “......ಪೊಲೀಸ್ ಗಳ ನಿಮಗೆ ಕೆಲಸವಿಲ್ಲವೇ? .....” ಎಂದು ಬೈದು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದ ಬ್ಯಾರಿಕೇಟನ್ನು ಎಡ ಕೈಯಿಂದ ದೂಡಿ ಬೈಕನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿರುತ್ತಾನೆ. ಬೈಕಿನ ಸವಾರನಿಗೆ ಪ್ರಾಣಕ್ಕೆ ಅಪಾಯಕರವಾದ ಕರೋನ ಸೋಂಕು ಹರಡುವ ಸಾಧ್ಯತೆ ಇರುವುದು ಗೊತ್ತಿದ್ದರೂ ಸಹ ಮುಖಕ್ಕೆ ಮಾಸ್ಕನ್ನು ಧರಸಿಸದೇ, ಕೋವಿಡ್ -19 ವೈರಸ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿದ ಮಾರ್ಗ ಸೂಚಿಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಅವಾಚ್ಯ ಶಬ್ದಗಳಿಂದ ಬೈದು, ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 07-05-2021 06:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080