ಅಭಿಪ್ರಾಯ / ಸಲಹೆಗಳು

 

Crime Reported in Mangalore East Traffic PS                                         

ದಿನಾಂಕ: 04-06-2021 ರಂದು ಬೆಳಿಗ್ಗೆ ಸುಮಾರು 07:00 ಗಂಟೆಗೆ ಮಂಗಳೂರು ನಗರದ ಕದ್ರಿ ಪಾರ್ಕ್ ಬಳಿ ಪದವು ಕಡೆಯಿಂದ ಕೆಪಿಟಿ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ KA-19-AC-4820  ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ರಾಮ್‌ ಭಟ್‌ ಪಾಟೇಲ್‌‌ ಎಂಬಾತನಿಗೆ  ಢಿಕ್ಕಿ ಪಡಿಸಿದ ಪರಿಣಾಮ ಅಪಘಾತಕ್ಕೆ ಒಳಗಾದ ವ್ಯಕ್ತಿಯು ರಸ್ತೆಯ ಬದಿಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಹಾಗೂ ಸೊಂಟಕ್ಕೆ ಗುದ್ದಿದ ಗಂಭೀರ ಸ್ವರೂಪದ ಗಾಯವಾಗಿದ್ದು, ಅಪಘಾದ ಬಳಿಕ ಆಟೋರಿಕ್ಷಾ ಚಾಲಕನು ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು ವ್ಯಕ್ತಿಯನ್ನು ರಸ್ತೆಯ ಬದಿಯಲ್ಲಿ ಎಳೆದುಕೊಂಡು ಹೋಗಿ ಕುಳ್ಳಿರಿಸಿ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದು, ಪಿರ್ಯಾದಿ GURUPRASAD ರವರು ಗಾಯಾಳುವನ್ನು 108 ಅಂಬುಲೆನ್ಸ್‌ ನಲ್ಲಿ ಹಾಕಿ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ

Crime Reported in Mulki PS

ದಿನಾಂಕ 06-06-2021ರಂದು ಪಿರ್ಯಾದಿ Kusumadhara K-PI ರವರು ಸಿಬ್ಬಂದಿಗಳೊಂದಿಗೆ 19-15 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಲಿಂಗಪ್ಪಯ್ಯ ಕಾಡಿನ ನಾಗ ಬನದ ಹನುಮಾನ್ ದೇವಸ್ಥಾನದ ಕಡೆಗೆ ಹೋಗುವ ಓಣಿ ಬಳಿ ಪ್ರಕರಣದ ಆರೋಪಿಯು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಪಂಚರ 19-30 ಗಂಟೆಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ  ಲಿಂಗಪ್ಪಯ್ಯ ಕಾಡಿನ ನಾಗಬನದ ಬಳಿ ಹನುಮಾನ್ ದೇವಸ್ಥಾನದ ಕಡೆಗೆ ಹೋಗುವ ಓಣಿ ಬಳಿಗೆ ಬಂದಾಗ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ರಕರಣದ ಆರೋಪಿಯು ಬಿಳಿ ಬಣ್ಣದ ಗೋಣಿಯನ್ನು ಹಿಡಿದು ಕೊಂಡು ನಿಂತಿರುವುದು ಕಂಡು ಬಂದ ಮೇರೆಗೆ ಆತನ ಬಳಿಗೆ ಹೋದಾಗ ಆತನು ಗೋಣಿಯನ್ನು ಬಿಸಾಡಿ ಪರಾರಿಯಾಗಿದ್ದು ಬಳಿಕ ಸದ್ರಿ ಗೋಣಿಯನ್ನು ಪರಿಶೀಲಿಸಿದಾಗ ಅದರಲ್ಲಿ (1) ತಲಾ 90 ಎಂಎಲ್ ಮದ್ಯ ತುಂಬಿದ ಓರಿಜಿನಲ್ ಚಾಯ್ಸ್ ಎಂಬ ಹೆಸರಿನ ವಿಸ್ಕಿಯ 80 ಸ್ಯಾಟೇಜ್ ಗಳು (2) ತಲಾ 180 ಎಂ.ಎಲ್.ಬ್ಯಾಗ್ ಪೈಪರ್ ಎಂಬ ಹೆಸರಿನ ವಿಸ್ಕಿ ಒಟ್ಟು 2 ಸ್ಯಾಚೆಟ್ ಗಳು ಮತ್ತು ತಲಾ 500 ಎಂ.ಎಲ್. ಮದ್ಯ ತುಂಬಿದ ಯು.ಬಿ. ಎಕ್ಸ್ ಪೋರ್ಟ್ ಸ್ಟ್ರಾಂಗ್  ಬೀರ್ ಎಂಬ ಹೆಸರಿನ ಒಟ್ಟು 5 ಟಿನ್ ಗಳು ಇರುವುದು ಕಂಡು ಬಂದಿರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದಿದ್ದರೂ ಮದ್ಯವನ್ನು ಮಾರಾಟ ಮಾಡಿದ್ದಲ್ಲದೇ, ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ಸರ್ಕಾರದ ಕಟ್ಟು ನಿಟ್ಟಿನ ಆದೇಶವಿದ್ದರೂ ಸದ್ರಿ ಅದೇಶವನ್ನು ಧಿಕ್ಕರಿಸಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಿ ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದು ಗೊತ್ತಿದ್ದರೂ ಕೂಡಾ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆಯನ್ನು ಉಲ್ಲಂಘನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 Crime Reported in Moodabidre PS

ಮೂಡಬಿದರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸುದೀಪ್ ಎಮ್.ವಿ ರವರು ದಿನಾಂಕ: 06-06-2021 ರಂದು ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಮಯ ಸುಮಾರು 16.00 ಗಂಟೆಗೆ ಮೂಡಬಿದರೆ ತಾಲೂಕು ಕಡಂದಲೆ ಗ್ರಾಮದ, ಕಲ್ಲೊಳ್ಳಿ ಎಂಬಲ್ಲಿ ಸೂರಜ್ ಎಂಬಾತನು ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಅಲ್ಲಿಗೆ 16.30 ಗಂಟೆಗೆ ತೆರಳಿ ದಾಳಿ ನಡೆಸಿದಾಗ ಇತ್ತಿಚೆಗೆ ರಾಜ್ಯ ಸರ್ಕಾರವು ಜಾರಿ ಮಾಡಿರುವ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಂಭವ ಇದೆ ಎಂದು ತಿಳಿದು ಕೂಡ ವಿಧಿ ವಿರುದ್ಧವಾಗಿ ನಿರ್ಲಕ್ಷತನ ವಹಿಸಿ ಸರಕಾರ ನಿಗದಿಪಡಿಸಿದ ಯಾವುದೇ ಮಾನದಂಡಗಳನ್ನು ಪಾಲಿಸದೇ ಜನರನ್ನು ಗುಂಪುಗೂಡಿಸಿಕೊಂಡು ಮಧ್ಯ ಮಾರಾಟ ಮಾಡುತ್ತಿದ್ದ ಸೂರಜ್ ಹಾಗೂ ಮದ್ಯ ಖರೀದಿಸಲು ಬಂದಿದ್ದ ಗಿರಾಕಿಗಳು ಓಡಿ ಹೋಗಿರುತ್ತಾರೆ. ನಂತರ ಸ್ಥಳದಲ್ಲಿ ಮಾರಾಟಕ್ಕಿಟ್ಟಿರುವ ಸುಮಾರು 3231.96/- ರೂ ಮೌಲ್ಯದ ಮದ್ಯದ ಸಾಚೆಟ್ಸ್ ಗಳನ್ನ ಸ್ವಾಧಿನಪಡಿಸಿಕೊಂಡು ಕ್ರಮಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

2) ದಿನಾಂಕ: 05-06-2021 ರಂದು ಪ್ರಕರಣದ ಪಿರ್ಯಾದಿ Suhail ರವರು ಏರ್ ಟೆಲ್ ಕಂಪನಿಯಲ್ಲಿ ತನ್ನೊಂದಿಗೆ ಕೆಲಸ ಮಾಡುವ ಅಂಡ್ರಿಯಾ ಡಿಸೋಜಾ, ಮತ್ತು ಅವರ ಅಕ್ಕ ರೇಷ್ಮಾ ಎಂಬುವರನ್ನು ಮಧ್ಯಾಹ್ನ 13.30 ಗಂಟೆಗೆ ಕೊಡ್ಯಡ್ಕ ಮನೆಗೆ ಬಿಟ್ಟು ವಾಪಾಸು ಮೂಡಬಿದ್ರೆ ಕಡೆಗೆ ಬರುತ್ತಾ ಪುತ್ತಿಗೆ ಮಸೀದಿ ಬಳಿ ತಲುಪುತ್ತಿದ್ದಂತೆ ಆರೋಪಿ ನಾಗು ಎಂಬಾತನು ಕಾರಿಗೆ ಕೈತೊರಿಸಿದ್ದು ಈ ಸಮಯ ಪಿರ್ಯಾದಿಯು ಕಾರನ್ನು ನಿಧಾನಿಸಿದಾಗ ಆರೋಪಿಗಳಾದ ಪ್ರೇಮ್ ಹಾಗೂ ಇತರರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅಲ್ಲೇ ಸಮೀಪದ ಗುಡ್ಡಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ 30 ರಿಂದ 35 ಜನರು ಸೇರಿದ್ದು, ಆರೋಪಿಗಳು ಅಕ್ರಮ ಕೂಟವನ್ನು ಸೇರಿಸಿಕೊಂಡು ಸಮಾನ ಉದ್ದೇಶದಿಂದ ಪ್ರಕರಣದ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ಹಿಂದೂ ಹೆಣ್ಣು ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿಯಾ ಎಂಬುದಾಗಿ ಬೈದು, ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ಒದ್ದಿದ್ದು, ಇತರ ವ್ಯಕ್ತಿಗಳು ಕೈ ಹಾಗೂ ಬೆನ್ನಿಗೆ ಗುದ್ದಿ ನೋವುಂಟುಮಾಡಿದ್ದು, ನಮ್ಮ ಮೇಲೆ ದೂರು ನೀಡಿದ್ದಲ್ಲಿ ನಿನ್ನ ಮೇಲೆ ಸುಳ್ಳು ಕೇಸು ದಾಖಲಿಸುತ್ತೇವೆ ಎಂದು ಹೆದರಿಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಪಿರ್ಯಾದಿಯ ಸಾರಾಂಶವಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-06-2021 12:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080