Feedback / Suggestions

Crime Reported in  Ullal PS

ದಿನಾಂಕ: 07-07-2021  ರಂದು ಫಿರ್ಯಾದಿ Sandeep G.S ರವರು ಮತ್ತು ಸಿಬ್ಬಂದಿಗಳು ಇಲಾಖಾ  ವಾಹನ ದಲ್ಲಿ ಬೆಳಗಿನ  ಜಾವ 5-00 ಗಂಟೆಗೆ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿ ಇದ್ದು, ಉಳ್ಳಾಲ ಗ್ರಾಮದ ಕೋಟೆಪುರದ ಬಳಿಯಿಂದ ಸಾಮಾನ್ಯ ಮರಳನ್ನು ಕಳವು ನಡೆಸಿಕೊಂಡು ಟಿಪ್ಪರ್ ಲಾರಿಗಳಿಗೆ, ಟೆಂಪೋಗಳಿಗೆ ಸಾಮಾನ್ಯ ಮರಳು ತುಂಬಿಸಿಕೊಂಡಿರುತ್ತಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಕೋಟೆಪುರದ ಸಮುದ್ರ ದಡದ ಬಳಿಗೆ ತೆರಳಿ ಪರಿಶೀಲಿಸಲಾಗಿ  ಸ್ಥಳದಲ್ಲಿ ಸುಮಾರು 15 ರಿಂದ 20 ಮಂದಿಗಳು ಸೇರಿಕೊಂಡು  ಎರಡು ಟಿಪ್ಪರ್ ಲಾರಿಗಳಿಗೆ ಸಮುದ್ರ ತೀರದಿಂದ ಸಾಮಾನ್ಯ ಮರಳನ್ನು ತೆಗೆದು ತುಂಬಿಸಿಕೊಂಡಿದ್ದು, ಎರಡು ಟೆಂಪೋಗಳಿಗೆ ಸಾಮಾನ್ಯ ಮರಳು ತುಂಬಿಸಿಕೊಳ್ಳುತ್ತಿದ್ದರು. ಅಲ್ಲದೇ ಮೂರು ಸ್ಕೂಟರ್ ಗಳು, ಒಂದು ಮೋಟಾರು ಬೈಕ್ ನಿಂತಿರುವುದು ಕಂಡು ಬಂದಿರುತ್ತದೆ. ಒರ್ವನು ಒಂದು ಸ್ಕೂಟರ್ ನ ಬಳಿಯಲ್ಲಿ  ಕುಳಿತುಕೊಂಡಿದ್ದನು. ಬೆಳಿಗ್ಗೆ 06-00 ಗಂಟೆಗೆ ಆರೋಪಿಗಳು ಸಾಮಾನ್ಯ ಮರಳು ತುಂಬಿಸಿಕೊಳ್ಳುತ್ತಿದ್ದ ಸ್ಥಳಕ್ಕೆ ಬಂದಾಗ  ಆರೋಪಿಗಳೆಲ್ಲ ಕೋಟೆಪುರ ನದಿಯ ಕಡೆಗೆ ಓಣಿಯಲ್ಲಿ ಪರಾರಿಯಾಗಿದ್ದು, ಸ್ಕೂಟರ್ ಬಳಿಯಲ್ಲಿ ನಿಂತುಕೊಂಡಿದ್ದ ಯುವಕನನ್ನು ಸುತ್ತುವರಿದು ಹಿಡಿದು ನಂತರ ಸ್ಥಳದಲ್ಲಿ ನಿಂತಿದ್ದ ಟಿಪ್ಪರ್ ಲಾರಿಯನ್ನು ಪರಿಶೀಲಿಸಲಾಗಿ ಈಚರ್ ಟಿಪ್ಪರ್ ಲಾರಿಯ ನೊಂದಣಿ ನಂಬ್ರ ಪರಿಶೀಲಿಸಲಾಗಿ ಕೆಎ 19 ಡಿ 8456 ಆಗಿರುತ್ತದೆ. ಈ ಟಿಪ್ಪರ್ ಲಾರಿಯ ಬಾಡಿಯನ್ನು ಪರಿಶೀಲಿಸಲಾಗಿ ಸಾಮಾನ್ಯ ಮರಳು ತುಂಬಿರುವುದು ಕಂಡು ಬಂದಿರುತ್ತದೆ. ಇನ್ನೊಂದು ಟಿಪ್ಪರ್ ಲಾರಿಯನ್ನು ಪರಿಶೀಲಿಸಲಾಗಿ ಈಚರ್ ಟಿಪ್ಪರ್ ಲಾರಿಯ ನೊಂದಣಿ ನಂಬ್ರ ಪರಿಶೀಲಿಸಲಾಗಿ ಕೆಎ 19 ಎಎ 3710 ಆಗಿರುತ್ತದೆ. ಈ ಟಿಪ್ಪರ್ ಲಾರಿಯ ಬಾಡಿಯನ್ನು ಪರಿಶೀಲಿಸಲಾಗಿ ಸಾಮಾನ್ಯ ಮರಳು ತುಂಬಿರುವುದು ಕಂಡು ಬಂದಿರುತ್ತದೆ. ಟೆಂಪೋದ ನೊಂದಣಿ ನಂಬ್ರ ಪರಿಶೀಲಿಸಲಾಗಿ ಕೆಎ 19 ಎ 1241 ಆಗಿರುತ್ತದೆ. ಇದರ ಬಾಡಿಯನ್ನು ಪರಿಶೀಲಿಸಲಾಗಿ 4 ಬುಟ್ಟಿ ಸಾಮಾನ್ಯ ಮರಳು ತುಂಬಿರುವುದು ಕಂಡುಬಂದಿರುತ್ತದೆ. ಇನ್ನೊಂದ ಟೆಂಪೋ ದ ನೊಂದಣಿ ನಂಬ್ರ ಪರಿಶೀಲಿಸಲಾಗಿ ಕೆಎ 14 -8133 ಆಗಿರುತ್ತದೆ. ಇದಲ್ಲಿಯೂ ಸುಮಾರು 6 ಬುಟ್ಟಿ ಸಾಮಾನ್ಯ ಮರಳು ತುಂಬಿರುವುದು ಕಂಡು ಬಂದಿರುತ್ತದೆ. ಸ್ಥಳದಲ್ಲಿ ಸಾಮಾನ್ಯ ಮರಳು ಸಾಗಾಟಕ್ಕೆ ಎಸ್ಕಾರ್ಟ್ ಮಾಡಲು ನಿಂತಿದ್ದ ಕೆಎ 19 ಇಜೆ 4465 ನೇ ನಂಬ್ರದ ಮೋಟಾರು ಬೈಕ್-1, ಸ್ಕೂಟರ್ ನೊಂದಣಿ ನಂಬ್ರಗಳಾದ ಕೆಎ 19 ಇಜಿ 3101, ಕೆಎ 19 ಎಸ್ 5547 ಮತ್ತು ಕೆಎ 19 ಹೆಚ್ ಎ 2428 ಆಗಿರುತ್ತದೆ. ಸ್ಕೂಟರ್ ನೊಂದಣಿ ನಂಬ್ರದಲ್ಲಿ ಕುಳಿತಿದ್ದ ಯುವಕನನ್ನು ವಿಚಾರಿಸಿಕೊಂಡಲ್ಲಿ ಈತನ ಹೆಸರು ಮೊಹಮ್ಮದ್ ಶಾರೂಖ್ ಪ್ರಾಯ 27 ವರ್ಷ ತಂದೆ: ಸಂಶುದ್ದೀನ್ ವಾಸ: ಶಾರೂಖ್ ಮಂಝಿಲ್, ಮಿನ್ಕಾಯಿಲ್ ಮಸೀದಿ  ಎದುರು, ಕೋಟೆಪುರ, ಸಿ ರೋಡ್, ಉಳ್ಳಾಲ, ಮಂಗಳೂರು ಎಂಬುದಾಗಿ ತಿಳಿಸಿರುತ್ತೇನೆ. ಅಲ್ಲದೇ ಸಾಮಾನ್ಯ ಮರಳು ಎಸ್ಕಾರ್ಟ್ ಮಾಡುವ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ಸ್ಥಳದಲ್ಲಿ ಪರಾರಿಯಾದ ವ್ಯಕ್ತಿಗಳ ಬಗ್ಗೆ ಈತನಲ್ಲಿ ಮಾಹಿತಿ ಪಡೆಯಲಾಗಿ ಇವರುಗಳ ಹೆಸರು ರಝಾಕ್, ಹಕೀಂ,ಸವಾದ್, ಅಜರ್, ಇಸಾಕ್, ಹೈದರ್, ಇಜಾಜ್, ಜುಫ್ಫಿ, ಅಮೀರ್, ಇರ್ಫಾನ್, ಯೂಸೂಫ್ ಮತ್ತು ಇತರರು ಸರಕಾರಿ ಪೊರಂಬೋಕು ಸ್ಥಳವಾದ ಸಮುದ್ರ ತೀರದಿಂದ ಸಾಮಾನ್ಯ ಮರಳನ್ನು ಕಳವು ನಡೆಸಿಕೊಂಡು ಯಾವುದೇ ಪರವಾನಿಗೆ ಹೊಂದದೇ ಹಾಗೂ ರಾಜಸ್ವ ಧನವನ್ನು ಸರಕಾರಕ್ಕೆ ಪಾವತಿಸದೇ ಕಳವು ನಡೆಸಿ ಅಕ್ರಮವಾಗಿ ಸಾಗಾಟ ಮಾಡಲು ಟಿಪ್ಪರ್ ಲಾರಿಗಳಿಗೆ ಮತ್ತು ಟೆಂಪೋಗಳಿಗೆ ತುಂಬಿಸಿಕೊಳ್ಳತ್ತಿರುವುದು  ಖಚಿತ ಪಡಿಸಿಕೊಂಡ ಮೇರೆಗೆ ಈ ಸಾಮಾನ್ಯ ಮರಳು ತುಂಬಿದ ಟಿಪ್ಪರ್ ಲಾರಿಗಳನ್ನು  ಸ್ಥಳದಿಂದ ವಶಕ್ಕೆ ಪಡೆದುಕೊಂಡು ವಶಕ್ಕೆ ಪಡೆದುಕೊಂಡಿರುವ ಮೊಹಮ್ಮದ್ ಶಾರೂಖ್ ಮತ್ತು ಸಾಮಾನ್ಯ ಮರಳನ್ನು ಕಳವು ನಡೆಸಿ ತುಂಬಿಸಿಕೊಳ್ಳುತ್ತಿದ್ದ ರಝಾಕ್, ಹಕೀಂ,ಸವಾದ್, ಅಜರ್, ಇಸಾಕ್, ಹೈದರ್, ಇಜಾಜ್, ಜುಫ್ಫಿ, ಅಮೀರ್, ಇರ್ಫಾನ್, ಯೂಸೂಫ್ ಮತ್ತು ಇತರರ  ವಿರುದ್ಧ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Crime Reported in  Panambur PS

ಪ್ರಕರಣದ ಪಿರ್ಯಾಧಿ A B NOUSAD ರವರು ಡಿ.ವೈ.ಎಫ್,ಐ ಸಂಘಟನೆಯ ಜಿಲ್ಲಾ ಸದಸ್ಯರಾಗಿ ಮತ್ತು ಮಂಗಳೂರು ನಗರದ ಡಿ.ವೈ.ಎಫ್,ಐ ಸಂಘಟನೆಯ ಉಪಾಧ್ಯಕ್ಷರಾಗಿದ್ದು, ಫರ್ನಿಚರ ಶಾಪ್ ಹೊಂದಿ ವ್ಯವಹಾರ ಮಾಡಿಕೊಂಡಿರುತ್ತಾರೆ. ಈ ದಿನ ದಿನಾಂಕ: 06-07-2021 ರಂದು ರಾತ್ರಿ ಸಮಯ ಸುಮಾರು  08-00 ಗಂಟೆಗೆ ಬೆಂಗರೆಯ ಮೊಹಿಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ, ಬೆಂಗರೆ ಗ್ರಾಮಾದ ನದಿತೀರದಲ್ಲಿ ಕೋಸ್ಟಲ್ ಬರ್ತ್ ಎಂಬ ಯೋಜನೆಯಿಂದ  ಊರಿಗಾಗುವ ಸಮಸ್ಯೆ ಬಗ್ಗೆ ಮಸೀದಿ ಅಧ್ಯಕ್ಷರಾದ ಅಸ್ಲಾಂ ರವರ ಅಧ್ಯಕ್ಷತೆಯಲ್ಲಿ ಕರೆದ ಸಭೆಯಲ್ಲಿ ಕೋಸ್ಟಲ್ ಬರ್ತ್ ಯೋಜನೆಯ ಬಗ್ಗೆ ಪಿರ್ಯಾಧಿದಾರರು ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಾಗ ಏಕಾಏಕಿ ಎಸ್.ಡಿ.ಪಿ.ಐ ನ ಕಾರ್ಯಕರ್ತ ವದೂದು ಎಂಬಾತನು ಕೈಯಿಂದ ಹಲ್ಲೆ ನಡೆಸಿದಾಗ, ಆತನ ಜೊತೆಗೂಡಿದ ಕಬೀರ್ ಎಂಬಾತನು ಪಿರ್ಯಾಧಿದಾರರಿಗೆ  ಜೀವ ಬೆದರಿಕೆ ಒಡ್ಡಿ. ಎಸ್.ಡಿ.ಪಿ.ಐ ನ ಕಾರ್ಯಕರ್ತತರನ್ನು ಸೇರಿಸಿ ಪಿರ್ಯಾಧಿದಾರರು ಮಸೀದಿಯಿಂದ  ಹೊರಗಡೆ  ಹೋಗುವಾಗ ಪಿರ್ಯಾಧಿದಾರರನ್ನು ತಡೆದು ಎಲ್ಲರೂ  ಸೇರಿ ಗುಂಪು ಘರ್ಷಣೆಗೆ ಉತ್ತೇಜನ ಮಾಡಿರುವುದಾಗಿದೆ. ಈ ರೀತಿ ಅಕ್ರಮ ಕೂಟ ಸೇರಿಸಿ ಅಶಾಂತಿ ಸೃಷ್ಟಿಗೆ ಎಸ್.ಡಿ.ಪಿ.ಐ ನ ಮುಖಂಡ ಅನೀಶ್ ಎಂಬಾತನು ಪ್ರೆರೇಪಿಸಿರುತ್ತಾನೆ. ತನ್ನ ಮೇಲೆ ಹಲ್ಲೆ ಮಾಡಿ, ತನಗೆ ಜೀವ ಬೆದರಿಕೆ ಒಡ್ಡಿ, ಪ್ರದೇಶ ಶಾಂತಿ ನೆಮ್ಮದಿ ಕದಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ

2)ಪ್ರಕರಣದ ಪಿರ್ಯಾಧಿ WADOOD ರವರು  ದಿನಾಂಕ: 06-07-2021 ರಂದು ರಾತ್ರಿ 07-30 ಗಂಟೆಗೆ ಅಲ್  ಮದ್ರಸತುಲ್ ದೀನೀಯ ಎಸೋಷಿಯೇಸನ್  ಬೆಂಗರೆ ಎಂಬಲ್ಲಿ ಅದರ ಅಧ್ಯಕ್ಷ್ಯರಾದ ಅಸ್ಲಾಂ ಬೆಂಗರೆಯವರ ನೇತ್ವತ್ರದಲ್ಲಿ ನಡೆಯುತ್ತಿದ್ದ ,  ಸಾಗರ ಮಾಲ ಯೋಜನೆಗೆ ಸಂಬಂದಿಸಿದ ಮಿಟಿಂಗ್ ಗೆ ಹೋಗಿದ್ದು, ಮೀಟಿಂಗ್ ಮಧ್ಯದಲ್ಲಿ ನೌಶಾದ್ ಎಂಬುವರು ಬಂದು ಕಳೆದ ಹೋದ ವಿಚಾರವನ್ನು ಪ್ರಸ್ತಾಪಿಸಿದಾಗ  ಜಮಾತ್ ಅಧ್ಯಕ್ಷರಾದ ಅಸ್ಲಾಂ, ಉಪಾಧ್ಯಕ್ಷರಾಧ ಸುಲೇಮಾನ್  ಮತ್ತು ಮಹಾನಗರ ಪಾಲಿಕೆ ಸದಸ್ಯರಾದ ಮುನೀಬ್ ರವರು  ನೌಶದ್ ರವರಲ್ಲಿ ಕಳೆದು ಹೋದ  ವಿಚಾರ ಪ್ರಸ್ತಾಪಿಸುವುದು  ಬೇಡ ಎಂದು ಕೇಳಿಕೊಂಡರು ನೌಶಾದ್ ರವರು  ಪಸ್ತಾಪಿಸುತ್ತಿರುವಾಗ ಪಿರ್ಯಾಧಿದಾರರು ತಡೆದಾಗ  ನೌಶದ್ ರವರು ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದದಲ್ಲಿ ನಿಂದಿಸಿ, ಪಿರ್ಯಾಧಿದಾರರ  ತಂದೆ ತಾಯಿಯನ್ನು  ಬೈದು ಹಲ್ಲೆ ಮಾಡಿರುತ್ತಾರೆ. ಮಿಟಿಂಗ್ ಮುಕ್ತಾಯಗೊಂಡ ನಂತರ ಪಿರ್ಯಾಧಿದಾರರು ಹೊರಗಡೆ ಬಂದಾಗ  ನೌಶದ್, ಮುಆಝ್, ಮನ್ಸೂರ್ , ಬಿಲಾಲ್, ಹನೀಫ್, ತಂಝೀಲ್, ಇಮ್ರಾನ್ ಸೋಡಾ, ಫಯಾಝ್, ರಿಜ್ವಾನ್,  ಯಾಹೆಯ್ಯ ಎಂಬುವರು ಪಿರ್ಯಾಧಿದಾರರನ್ನು ತಡೆದು ಕೈಯಲ್ಲಿ ಹಲ್ಲೆ ಮಾಡಿರುತ್ತಾರೆ,  ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿಕೆ. ಎಂಬಿತ್ಯಾಧಿ ಸಾರಾಂಶವಾಗಿರುತ್ತದೆ.

Crime Reported in  Mulki PS  

ಮೂಲ್ಕಿ ಪೊಲೀಸ್ ಠಾಣಾ ಹೆಚ್.ಸಿ Pramod Devadiga ರವರಿಗೆ ದಿನಾಂಕ: 06-07-2021 ರಂದು 10.15 ಗಂಟೆಗೆ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ಕೆಮ್ರಾಲ್ ಗ್ರಾಮದ ಸಾರಥಿ ಬಾರ್ ಗೆ ಹೋಗುವ ರಸ್ತೆಯ ಬಲಭಾಗದ ಸಾರ್ವಜನಿಕ ಸ್ಥಳದಲ್ಲಿ ರಾಜೇಶ್ ಕುಮಾರ್  ಎಂಬವರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಚೀಟಿ ಬರೆಯುತ್ತಿರುವ ಬಗ್ಗೆ ಮಾಹಿತಿ ಬಂದಂತೆ ಸ್ಥಳಕ್ಕೆ 10.30 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿ ನೋಡಲಾಗಿ ರಾಜೇಶ್ ಕುಮಾರ್  ಎಂಬವರು  ಮಟ್ಕಾ ದಂಧೆ ಬಗ್ಗೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಜೂಜಾಟ ಆಡುತ್ತಿರುವುದು ಕಂಡು ಬಂದಿರುವುದರಿಂದ ಠಾಣೆಗೆ ಹಿಂತಿರುಗಿ ಬಂದು ಅವನನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ನೀಡಿದ ದೂರಿನ ಪ್ರಕಾರ ಆರೋಪಿತನ ಮೇಲೆ 78(i)(iii) ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

2) ಮೂಲ್ಕಿ ಪೊಲೀಸ್ ಠಾಣಾ  ಎ ಎಸ್ ಐ  ಚಂದ್ರಶೇಖರ್ ರವರಿಗೆ ದಿನಾಂಕ: 06-07-2021 ರಂದು 10.30  ಗಂಟೆಗೆ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ಕೆಮ್ರಾಲ್ ಗ್ರಾಮದ ಪಕ್ಷಿಕೆರೆ ಬಸ್ ಸ್ಟ್ಯಾಂಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಲೀಲಾಧರ ಎಂಬವರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಚೀಟಿ ಬರೆಯುತ್ತಿರುವ ಬಗ್ಗೆ ಮಾಹಿತಿ ಬಂದಂತೆ ಎ ಎಸ್ ಐ ಚಂದ್ರಶೇಖರ್ ರವರು ಮಫ್ತಿಯಲ್ಲಿ ಸ್ಥಳಕ್ಕೆ 10.45  ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿ ನೋಡಲಾಗಿ ಲೀಲಾಧರ  ಎಂಬವರು  ಮಟ್ಕಾ ದಂಧೆ ಬಗ್ಗೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಜೂಜಾಟ ಆಡುತ್ತಿರುವುದು ಕಂಡು ಬಂದಿರುವುದರಿಂದ ಠಾಣೆಗೆ ಹಿಂತಿರುಗಿ ಬಂದು ಅವನನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ನೀಡಿದ ದೂರಿನ ಪ್ರಕಾರ ಆರೋಪಿತನ ಮೇಲೆ 78(i)(iii) ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

3)ಪಿರ್ಯಾದಿ Asha (45) ರವರೊಂದಿಗೆ ಆಕೆಯ ಚಿಕ್ಕಮ್ಮನ ಮಗಳು ಯುಕ್ತಾ ಎಂಬವರು ವಾಸ ಮಾಡಿಕೊಂಡಿದ್ದು, ಮೆಡಲಿನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಪ್ರಸ್ತುತ Online Class ಗಳನ್ನು ಮನೆಯಲ್ಲಿ ಕೇಳುತ್ತಾ ವಿದ್ಯಾಭ್ಯಾಸ ಮಾಡಿಕೊಂಡಿದ್ದವರು ದಿನಾಂಕ 06/07/2021 ರಂದು ಬೆಳಿಗ್ಗೆ 9.30 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮನೆಯಾದ ಕಾರ್ನಾಡು ಗ್ರಾಮದ ಶೆಟ್ಟಿ ತೋಟ ಧರ್ಮಸ್ಥಾನದ ಬಳಿಯಿಂದ ಆಕೆಯು ಮೊಬೈಲ್ ಗೆ  ಸ್ಕ್ರೀನ್ ಗಾರ್ಡ್ ಹಾಕಿಸಿ ಬರುತ್ತೇನೆಂದು ಮುಲ್ಕಿಗೆ ತೆರಳಿದವಳು ವಾಪಾಸ್ ಮನೆಗೂ ಬಾರದೇ, ಇತರ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾಳೆ ಎಂಬಿತ್ಯಾದಿ

ಕಾಣೆಯಾದವರ ಚಹರೆ:-

ವಯಸ್ಸು- 19  ವರ್ಷ

ಎತ್ತರ - 5.4 ಅಡಿ

ಮೈಬಣ್ಣ - ಗೋಧಿ ಮೈಬಣ್ಣ, ಸಪೂರ ಶರೀರ

ಧರಿಸಿದ್ದ ಬಟ್ಟೆ - ಪಿಂಕ್ ಮತ್ತು ಕಪ್ಪು ಬಣ್ಣದ ಪ್ಯಾಂಟ್, ಬಣ್ಣದ ಟಾಪ್

Last Updated: 07-07-2021 07:34 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080