ಅಭಿಪ್ರಾಯ / ಸಲಹೆಗಳು

Crime Reported in  Surathkal PS

ಪಿರ್ಯಾದಿ ಮುಹಮ್ಮದ್ ಶಿಹಾಬುದ್ದಿನ್ ರವರು MRPL ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು.ದಿನಾಂಕ 05/08/2021 ರಂದು ಮಧ್ಯಾಹ್ನ 13-50 ಗಂಟೆಗೆ ಸುರತ್ಕಲ್ ಠಾಣಾ ಸರಹದ್ದಿನ ಕಳವಾರು ಗ್ರಾಮದ PFCC ಯುನಿಟ್ ಬಳಿ ಬೈಕ್ ನಂಬ್ರ KA-20-ES-2017 ಅಪಾಚಿ ಬೈಕ್ ನ್ನು ಪಾರ್ಕ್ ಮಾಡಿ ಕೆಲಸಕ್ಕೆ ಹೋದವರು  ದಿನಾಂಕ 06/08/2021 ರಂದು ಬೆಳಿಗ್ಗೆ 06-10 ಗಂಟೆಗೆ ಬಂದು ನೋಡಲಾಗಿ ಬೈಕ್ ಕಳುವಾಗಿದ್ದು ಸದ್ರಿ ಬೈಕನ್ನು  ದಿನಾಂಕ: 05/08/2021 ಮಧ್ಯಾಹ್ನ 13-50 ಗಂಟೆಯಿಂದ ದಿನಾಂಕ 06/08/2021 ರ ಬೆಳಿಗ್ಗೆ 06-10 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಬೈಕನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಬೈಕನ ಅಂದಾಜು ಮೌಲ್ಯ 55,000/- ರೂ ಗಳು ಆಗಬಹುದು ಎಂಬಿತ್ಯಾದಿಯಾಗಿರುತ್ತದೆ.

Crime Reported in  Mangalore North PS

ಪಿರ್ಯಾದಿ PRADEEP RAI ದಾರರು ಮಂಗಳೂರು ನಗರದ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಮ್ಯಾಕ್ಸಿಮಝ್ ಕಮರ್ಷಿಯಲ್ ಕಾಂಪ್ಲೆಕ್ಷ್ ನಲ್ಲಿರುವ  ರಿಲಯನ್ಸ್ ನಿಪ್ಪೋನ್ ಲೈಫ್ ಇನ್ಸ್ಯುರೆನ್ಸ್ ಕಂಪೆನಿಯಲ್ಲಿ ಮಂಗಳೂರು ಏರಿಯಾ ಮೇನೆಜರ್ ಆಗಿ ಕೆಲಸ ಮಾಡಿಕೊಂಡಿದ್ದು ಅವರ ಮಾಲಕತ್ವದ  KA-19, ML-2193 ನೋಂದಣಿ ನಂಬ್ರದ  ಕಿಯಾ ಕಂಪೆನಿಯ ಸೆಲ್ಟೋಸ್ ಬಿಳಿ ಬಣ್ಣದ ಕಾರನ್ನು ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ  ಎಂದಿನಂತೆ ದಿನಾಂಕ :06-08-2021 ರಂದು ಪಾರ್ಕ್ ಮಾಡಿ  ಮಧ್ಯಾಹ್ನ ಸುಮಾರು 1-15 ಗಂಟೆಗೆ ಊಟಕ್ಕೆ ಹೋದ ಸಮಯದಲ್ಲಿ  ರೂ. 40,000/- ನಗದು ಮೊತ್ತ ಮತ್ತು ಕಛೇರಿಗೆ ಸಂಬಂಧಿಸಿದ ದಾಖಲಾತಿಗಳು ಇದ್ದ ಆಫೀಸ್ ಬ್ಯಾಗನ್ನು ಕಾರಿನಲ್ಲಿ ಇಟ್ಟು ಹೋಗಿದ್ದು ವಾಪಾಸು ಮದ್ಯಾಹ್ನ  1-45 ಗಂಟೆಯ ಕಾರಿನ ಬಳಿ ಬಂದು ನೋಡಿದಾಗ ಕಾರಿನ ಬಲಭಾಗದ ಹಿಂಬದಿಯ ಗಾಜನ್ನು ಒಡೆದು ಕಾರಿನ ಒಳಗಡೆ ಇಟ್ಟಿದ್ದ ರೂ. 40,000/- ನಗದು ಮೊತ್ತ ಮತ್ತು ಕಛೇರಿಗೆ ಸಂಬಂಧಿಸಿದ ದಾಖಲಾತಿಗಳು ಇದ್ದ ಬ್ಯಾಗನ್ನು  ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

Crime Reported in  Mangalore South PS

ಪಿರ್ಯಾದಿ DEEPAK KUMAR ರವರು ಉಪಯೋಗಿಸುತ್ತಿದ್ದ ಪಿರ್ಯಾದಿದಾರರ ತಾಯಿ ಗೀತಾ ಸತೀಶ್ ರವರ ಆರ್. ಸಿ. ಮಾಲಕತ್ವದ CHASSIS NUMBER-MB8DP12DFL8244759,ENIGING NUMBER-AF212313694, KA19 HE 3570 ನೊಂದಣಿ ಸಂಖ್ಯೆ ಕಡು ನೀಲಿ ಬಣ್ಣದ ಸುಜುಕಿ ಕಂಪನಿಯ ಎಸ್ಸಿಸ್ ದ್ಚಿಚಕ್ರವಾಹನವನ್ನು ಯಾರೋ ಕಳ್ಳರು ದಿನಾಂಕ 26-07-2021ರಂದು 16-45 ಗಂಟೆಯಿಂದ 17-20 ಗಂಟೆಯ ಮದ್ಯಾವದಿಯಲ್ಲಿ ಮಂಗಳೂರು ನಗರದ ಬದ್ರಿಯಾ ಜಂಕ್ಷನ್ ಬಳಿಯ ಬಾವಾ ಬಿಲ್ಡಿಂಗ್ ಕಟ್ಟಡದ ಎದುರು ರಸ್ತೆಯ ಪಕ್ಕದಲ್ಲಿ ಕೀ ಸಹಿತ ಪಾರ್ಕ್ ಮಾಡಿಟ್ಟಿರುವುದನ್ನು  ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಸೀಟ್ ಕೆಳಗಡೆ ಬಾಕ್ಸ್ ನಲ್ಲಿ  ಪಿರ್ಯಾದುದಾರರಿಗೆ ಸಂಬಂಧಿಸಿದ ಎಸ್.ಬಿ.ಐ. ಮತ್ತು ಬ್ಯಾಂಕ್ ಆಫ್ ಬರೋಡಾಕ್ಕೆ ಸಂಬಂಧಿಸಿದ ಎರಡು ಎಟಿಎಂ ಕಾರ್ಡ್ ಹಾಗೂ ಪಿರ್ಯಾದುದಾರರ ಶಾಫ್  ಗೆ ಸಂಬಂಧಿಸಿದ ಎರಡು  ಚೆಕ್ ಗಳು ಕೂಡ ಇರುತ್ತದೆ. ಕಳವಾದ ದ್ಚಿಚಕ್ರ ವಾಹನದ  ಅಂದಾಜು ಮೌಲ್ಯ 50,000/- ರೂಪಾಯಿ ಆಗಬಹುದು ಕಳವಾದ ದ್ವಿ ಚಕ್ರ ವಾಹನವನ್ನು ಪಿರ್ಯಾದಿದಾರರು ಹಾಗೂ ಅವರ ಸ್ನೆಹಿತರು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಸಿಕ್ಕಿರುವುದಿಲ್ಲ ಎಂಬಿತ್ಯಾದಿಯಾಗಿದೆ.

ಇತ್ತೀಚಿನ ನವೀಕರಣ​ : 07-08-2021 06:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080