ಅಭಿಪ್ರಾಯ / ಸಲಹೆಗಳು

Crime Reported in  Traffic South PS

ಪಿರ್ಯಾದಿ ADHI NARAYANA(33) ರವರ ತಾಯಿ ಶ್ರೀಮತಿ ನಾಗಮ್ಮ (55 ವರ್ಷ) ರವರು ದಿನಾಂಕ: 08-04-2021 ರಂದು ಬೆಳಿಗ್ಗೆ ಸಮಯ ಸುಮಾರು 08-45 ಗಂಟೆಗೆ ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಶ್ರೀ ಗಣೇಶೋತ್ಸವ ಸಮಿತಿ ಕಣ್ಣೂರು, ಶ್ರೀ ಲಕ್ಷ್ಮೀ ನಾರಾಯಣ ಸಭಾ ಭವನದ ಹತ್ತಿರ ರಾ.ಹೆ – 73 ರ ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಡಾಮಾರು ರಸ್ತೆಯನ್ನು ದಾಟುತ್ತಿರುವಾಗ ಅದೇ ರಸ್ತೆಯಲ್ಲಿ ಅಂದರೆ ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಕಾರು ನಂಬ್ರ: KL-13-AK-2333 ನೇದರ ಚಾಲಕ ತಾಜುದ್ದೀನ್ ಎಂಬವರು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ನಾಗಮ್ಮ ರವರಿಗೆ ಡಿಕ್ಕಿ ಪಡಿಸಿರುತ್ತಾರೆ. ಈ ಅಪಘಾತದ ಪರಿಣಾಮ ನಾಗಮ್ಮರವರು ಡಾಮಾರು ರಸ್ತೆಗೆ ಬಿದ್ದು ಅವರಿಗೆ ತಲೆಯ ಹಿಂಬದಿಗೆ ಗಂಭೀರ ಸ್ವರೂಪದ ಗಾಯ ಹಾಗೂ ಎಡ ಕೈ ಮೂಳೆ ಮುರಿತದ ಗಾಯ ಮತ್ತು ದೇಹದ ಇತರ ಭಾಗಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಅಪಘಾತಪಡಿಸಿದ ಕಾರು ಚಾಲಕ ಸೇರಿ ಗಾಯಾಳು ನಾಗಮ್ಮರವರನ್ನು ಅಪಘಾತಪಡಿಸಿದ ಕಾರಿನಲ್ಲೇ ಚಿಕಿತ್ಸೆ ಬಗ್ಗೆ ಫರ್ಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ನಾಗಮ್ಮರವರು ಸಮಯ 10-20 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಎಂಬಿತ್ಯಾದಿ.

Crime Reported in Moodabidre PS

ದಿನಾಂಕ 08-04-2021 ರಂದು ಪಿರ್ಯಾದಿ GANESH S DEVADIGA (36)ರವರ ನೆರೆಕರೆಯ ನಿವಾಸಿ ಜಯ ವಿ ಶೆಟ್ಟಿ ಪ್ರಾಯ 45 ವರ್ಷ ಎಂಬವರು ಬೆಳಗಿನ ಸಮಯ ಅಲಂಗಾರಿನಿಂದ ಅವರ ಮನೆಯಾದ ಕೆಸರುಗದ್ದೆ ಕಡೆಗೆ ಪಾದಾಚಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ  ಬೆಳಿಗ್ಗೆ ಸುಮಾರು 05-40 ಗಂಟೆಗೆ ಪಡುಮಾರ್ನಾಡು ಗ್ರಾಮದ ಬನ್ನಡ್ಕ ದೇವಸ್ಥಾನದ ಬಳಿ ತಲಪುವಾಗ ಅವರ ಹಿಂದಿನಿಂಧ ಅಂದರೆ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಕೆಎ 51 ಎ ಎಫ್ 1810 ನೇ ವಿಶಾಲ್ ಬಸ್ಸನ್ನು ಅದರ ಚಾಲಕ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಢು ಬಂದು ಪಾದಾಚಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಯ ವಿ ಶೆಟ್ಟಿ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಜಯ ವಿ ಶೆಟ್ಟಿರವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲೆನ್ಸ್ ನಲ್ಲಿ ಮೂಡಬಿದ್ರೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದಾಗ ಚಿಕಿತ್ಸೆಯಲ್ಲಿದ್ದ ಜಯ ವಿ ಶೆಟ್ಟಿರವರು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ಬೆಳಿಗ್ಗೆ 07-37 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬಿತ್ಯಾದಿಯಾಗಿದೆ.

Crime Reported in Mulki PS

ದಿನಾಂಕ 07.04.2021 ರಂದು ಮುಲ್ಕಿ ಪೊಲೀಸ್ ಠಾಣಾ ಅಪರಾಧ ಪ್ರಕರಣದ ಆರೋಪಿಗಳಾದ ಅನ್ಸಾರ್ ಮತ್ತು ಸಾಧಿಕ್ ರವರಿಗೆ ವಿಚಾರಣೆಗೆ ಹಾಜರಾಗುವುವಂತೆ ಪ್ರಕರಣದ ತನಿಖಾಧಿಕಾರಿ ಪಿ.ಎಸ್.ಐ ರವರು ನೊಟೀಸ್ ಜ್ಯಾರಿ ಮಾಡುವರೇ ಕಳುಹಿಸಿಕೊಟ್ಟಂತೆ ಪಿರ್ಯಾದಿ Ashok K ರವರು ಸುರೇಶ್ ರವರ ಜೊತೆ ಸುಮಾರು 6.45 ಗಂಟೆಗೆ ಲಿಂಗಪ್ಪಯ್ಯಕಾಡು  ಶಾಫಿ ಜುಮ್ಮಾ ಮಸೀದಿ ಬಳಿ ಬಂದಾಗ ಅನ್ಸಾರ್ ನ ಕುರಿತು ಸದ್ರಿ ಪ್ರಕರಣದ ತನಿಖಾಧಿಕಾರಿಗಳ ಮುಂದೆ ತನಿಖೆಗೆ ಹಾಜರಾಗುವಂತೆ ಕಲಂ 41(ಎ) ಸಿ.ಆರ್.ಪಿ.ಸಿ ಪ್ರಕಾರ ನೊಟೀಸ್ ಇದೆ ನಿಮಗೆ ಜ್ಯಾರಿ ಮಾಡಬೇಕಾಗಿದೆ ಎಂದು ತಿಳಿಸಿದಾಗ ಪ್ರಕರಣದ ಆರೋಪಿ ಅನ್ಸಾರ್ ಪಿರ್ಯಾದಿದಾರರನ್ನು ದೂಡಿ ಹಾಕಿ ಹತ್ತಿರದ ಕೋಳಿ ಅಂಗಡಿ ಹಫೀಝ್ ರವರ ಮನೆಗೆ ಓಡಿ ಹೋದಾಗ ಇನ್ನೊಬ್ಬ ಆರೋಪಿ ಸಾದಿಕ್ ಕೂಡಾ ಆತನನ್ನು ಹಿಂಬಾಲಿಸಿ ಓಡಿ ಹೋಗಿದ್ದು ಪಿರ್ಯಾದಿದಾರರು ಮತ್ತು ಸುರೇಶ್ ರವರು ಸದ್ರಿ ಮನೆಯ ಬಳಿ ಹೋದಾಗ ಆರೋಪಿ ಅನ್ಸಾರ್ ಒಂದು ಚೂರಿಯನ್ನು ತೆಗೆದು ಪಿರ್ಯಾದಿದಾರರಿಗೆ ಬೀಸಲು ಬಂದು ಕೊಲ್ಲುತ್ತೇನೆಂದು ಪಿರ್ಯಾದಿದಾರರ ಕುತ್ತಿಗೆಗೆ ಬೀಸಿದಾಗ ಪಿರ್ಯಾದಿದಾರರು ತನ್ನ ಎಡಗೈಯಿಂದ ಆತನನ್ನು ತಡೆದಾಗ ಪಿರ್ಯಾದಿದಾರರ ಎಡಕೋಲು ಕೈಗೆ ರಕ್ತಗಾಯವಾಗಿದ್ದು ಠಾಣೆಗೆ ಮಾಹಿತಿ ನೀಡಿದಂತೆ ಪೊಲೀಸ್ ನಿರೀಕ್ಷಕರು ಠಾಣಾ ಪಿ.ಎಸ್.ಐ, ಮಹಿಳಾ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಸ್ಥಳಕ್ಕೆ ಬರುವ ವೇಳೆಗೆ ಆರೋಪಿಗಳು ಇದ್ದ ಮನೆಗೆ ಬಾಗಿಲು ಹಾಕಿ ಆರೋಪಿಗಳು ಮನೆಯೊಳಗಿದ್ದು ಬಾಗಿಲಲ್ಲಿ ಇದ್ದ ಆರೋಪಿ ಅನ್ಸಾರ್, ಸಾಧಿಕ್ , ಜುಬೇದಾ, ಮಮ್ತಾಜ್ ರವರು ಪಿರ್ಯಾದಿದಾರರು ಮತ್ತು ಸುರೇಶ್ ರವರನ್ನು ಮನೆಯೊಳಗೆ ಎಳೆದುಕೊಳ್ಳಲು ಪ್ರಯತ್ನಿಸಿದ್ದು ಆಗ ಪಿರ್ಯಾದಿದಾರರು ಬಾಗಿಲಿನ ಬಳಿ ಬಲವಾಗಿ ಹಿಡಿದು ನಿಂತುಕೊಂಡಿದ್ದು ನಂತರ ಆರೋಪಿಗಳು ಪಿರ್ಯಾದಿದಾರರು ಮತ್ತು ಇತರರ ಮೇಲೆ ಮುಗಿಬಿದ್ದಿದ್ದು. ಗಾಯಗೊಂಡ ಪಿರ್ಯಾದಿದಾರರು ಹಾಗೂ ಸತೀಶ್ ರವರು ಚಿಕಿತ್ಸೆ ಬಗ್ಗೆ ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 08-04-2021 07:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080