Crime Reported in Cyber Crime PS
ಪಿರ್ಯಾದಿದಾರರು ಆರ್.ಬಿ.ಎಲ್ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಹೊಂದಿದ್ದು ದಿನಾಂಕ: 03.06.2021 ರಂದು 11.34 ರಿಂದ 13.52 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮೊಬೈಲ್ ಸಂಖ್ಯೆಗೆ ಆರ್.ಬಿ.ಎಲ್ ಕಸ್ಟಮರ್ ಕೇರ್ ನಂಬ್ರ: 0226232-7777 ನೇಯದರಿಂದ ಅಪರಿಚಿತ ವ್ಯಕ್ತಿ ಕರೆ ಮಾಢಿ ಕ್ರೆಡಿಟ್ ಕಾರ್ಡ್ ನ ಕ್ರೆಡಿಟ್ ಲಿಮಿಟ್ ಹೆಚ್ಚು ಮಾಡುವುದಾಗಿ ತಿಳಿಸಿ, ಕ್ರೆಡಿಟ್ ಕಾರ್ಡ್ ಮಾಹಿತಿ ಹಾಗೂ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ ನಂಬ್ರವನ್ನು ಪಡೆದುಕೊಂಡು, ಆರ್.ಬಿ.ಎಲ್ ಕ್ರೆಡಿಟ್ ಕಾರ್ಡ್ ನಿಂದ ರೂ 29,900/- ಗಳನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.
Crime Reported in Mangalore Women PS
ದಿನಾಂಕ 08-06-2021 ರಂದು ಮದ್ಯಾಹ್ನ ಸುಮಾರು 14.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಯಾಸ್ಮಿನ್ ಪ್ರಾಯ 28 ವರ್ಷ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ದಿನಾಂಕ 14-04-2013 ರಂದು ಮಹಮ್ಮದ್ ಅಶ್ರಫ್ ಎಂಬುವರೊಂದಿಗೆ ಗುರುಪುರದ ಮೆಗಾ ಪ್ಲಾಜಾ ಹಾಲ್ ನಲ್ಲಿ ಮದುವೆಯಾಗಿದ್ದು, ಮದುವೆಯಾದ 2 ತಿಂಗಳ ಬಳಿಕ ಪಿರ್ಯಾದಿದಾರರ ಗಂಡ ವಿದೇಶಕ್ಕೆ ಹೋಗಿದ್ದು, ಪಿರ್ಯಾದಿದಾರರು ಗಂಡನ ಸಂಬಂಧಿಕರೊಂದಿಗೆ ವಾಸವಾಗಿದ್ದ ಸಮಯ ಆರೋಪಿತರುಗಳು ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ. ಅಲ್ಲದೇ ಪಿರ್ಯಾದಿದಾರರ ಗಂಡ ವಿದೇಶಕ್ಕೆ ಹೋದ ಬಳಿಕ ಫೋನ್ ಮೂಲಕ ಮಾತನಾಡುವಾಗ ಅವಾಚ್ಯ ಶಬ್ದಗಳಿಂದ ಬೈದು, ಯಾವುದೇ ಖರ್ಚಿಗೆ ಹಣ ನೀಡದೇ ಇದ್ದು, ಪಿರ್ಯಾದಿದಾರರು ಅವಶ್ಯಕತೆಗಳ ಬಗ್ಗೆ ಹೇಳಿದಾಗ ಪಿರ್ಯಾದಿದಾರರ ಗಂಡ ನಿನಗೆ ನನಗಿಂತ ನನ್ನ ತಂದೆಯೇ ಮುಖ್ಯ. ನೀನು ಅವರು ಹೇಳಿದಂತೆ ಕೇಳುತ್ತಿರಬೇಕು, ಅವರ ಜೊತೆಯಲ್ಲಿ ಇರಬೇಕು ಎಂದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ನಂತರ ಪಿರ್ಯಾದಿದಾರರು ಎರೆಡು ತಿಂಗಳ ಗರ್ಭೀಣಿಯಾಗಿದ್ದಾಗ ಆರೋಪಿತರೆಲ್ಲರೂ ಸೇರಿ ಮನೆಯಿಂದ ಹೊರ ಹಾಕಿದ್ದು, ಅಂದಿನಿಂದ ಪಿರ್ಯಾದಿದಾರರು ತಾಯಿ ಮನೆಯಲ್ಲಿಯೇ ಮಗುವಿನೊಂದಿಗೆ ವಾಸವಾಗಿರುತ್ತಾರೆ. ಪಿರ್ಯಾದಿದಾರರು ಅನೇಕ ಬಾರಿ ಗಂಡನ ಮನೆಗೆ ಹೋದಾಗ ಪಿರ್ಯಾದಿದಾರರ ಮಾವ, ಅತ್ತೆ, ಗಂಡನ ಅಕ್ಕ ಮತ್ತು ಗಂಡನ ತಮ್ಮ ಅಜರುದ್ಧೀನ್ ಪಿರ್ಯಾದಿದಾರರಿಗೆ ಅವಮಾನ ಮಾಡಿ ಮನೆಯಿಂದ ಹೊರ ಹಾಕುತ್ತಿದ್ದರು. ದಿನಾಂಕ 26-04-2021 ರಂದು ಬೆಳಿಗ್ಗೆ ಪಿರ್ಯಾದಿದಾರರು ಗಂಡನ ಬಗ್ಗೆ ವಿಚಾರಿಸಿಕೊಂಡು ಬರಲೆಂದು ಗಂಡನ ಮನೆಗೆ ಹೋದಾಗ ಆರೋಪಿ 1 ರಿಂದ 4 ನೇ ರವರು ಬೈದು ಮನೆಯಿಂದ ಹೊರ ಹಾಕಿರುತ್ತಾರೆ ಎಂಬಿತ್ಯಾದಿ.
Crime Reported in Mangalore Rural PS
ಮಾರಕ ಖಾಯಲೆಯಾದ ಕೋವಿಡ್-19 ಸಾಂಕ್ರಮಿಕ ರೋಗ ತೀವ್ರಗತಿಯಲ್ಲಿ ಹರಡುತ್ತಿರುವುದರಿಂದ ರೋಗ ಹರಡದಂತೆ ನಿಯಂತ್ರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಲಾಕ್ಡೌನ್ ಜಾರಿಗೊಳಿಸಿದ್ದು, ಸದ್ರಿ ಲಾಕ್ ಡೌನ್ ಆದೇಶದ ಪಾಲನೆಗಾಗಿ ಫಿರ್ಯಾಧಿ Ramakrishna ASI ದಾರರು ದಿನಾಂಕ: 08-06-2021 ರಂದು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 11.00 ಗಂಟೆಗೆ ಮಂಗಳೂರು ನಗರ ತಿರುವೈಲ್ ಗ್ರಾಮದ ವಾಮಂಜೂರು ಜಂಕ್ಷನ್ ಎಂಬಲ್ಲಿಗೆ ತಲುಪಿದಾಗ KA-19-EX-9143 ನೇ ನೋಂದಣಿ ಸಂಖ್ಯೆಯ ಹೊಂಡಾ ಡಿಯೋ ಸ್ಕೂಟರನ್ನು ಓರ್ವ ಯುವಕನು ಕರ್ನಾಟಕ ರಾಜ್ಯ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಲಾಕ್ ಡೌನ್ ಆದೇಶದ ಅರಿವಿದ್ದರೂ ಅನಾವಶ್ಯಕವಾಗಿ ಸುತ್ತಾಡುತ್ತಿದ್ದು, ಈತನು ಸರಕಾರದ ಆದೇಶವನ್ನು ಉಲ್ಲಂಘಿಸಿ ಸಾಂಕ್ರಾಮಿಕ ರೋಗದ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿರುವುದಲ್ಲದೇ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ ಬಗ್ಗೆ KA-19-EX-9143 ನೇ ನೋಂದಣಿ ಸಂಖ್ಯೆಯ ಹೊಂಡಾ ಡಿಯೋ Scooty ಸವಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in Kavoor PS
ತಾರೀಕು 08/06/2021 ರಂದು ಫಿರ್ಯಾದಿ HARISH H V PSI ರವರು ಕಾವೂರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ ಕಾವೂರು ಜಂಕ್ಷನ ಬಳಿ ತಲುಪಿದಾಗ ಸಮಯ ಸುಮಾರು ಬೆಳಗ್ಗೆ 10:30 ರ ವೇಳೆಗೆ ಕಾವೂರಿನ ಕೋರ್ದಬ್ಬು ದೈವಸ್ಥಾನದ ಬಳಿಯಿರುವ ಫಾತಿಮಾ ಸುಪರ್ ಮಾರ್ಕೆಟ್ ಎಂಬ ಹೆಸರಿನ ಅಂಗಡಿಯು ತೆರೆದುಕೊಂಡಿದ್ದು, ಅಂಗಡಿ ಒಳಗಡೆ ಆಪಾದಿತ ಶಾಕೀರ್ ಎಂಬವರು ನಿಗದಿತ ಸಮಯವನ್ನು ಮೀರಿ ಅಂಗಡಿಯನ್ನು ತೆರೆದು ವ್ಯಾಪಾರದಲ್ಲಿ ತೊಡಗಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಮಾರ್ಗಸೂಚಿ ಆದೇಶವನ್ನು ಪಾಲಿಸದೇ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಹಾಗೂ ಅಂಗಡಿಯೊಳಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗಿರಾಕಿಗಳೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದು, ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವಿರುವುದನ್ನು ತಿಳಿದು ಕೂಡ ನಿರ್ಲಕ್ಷವಹಿಸಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
Crime Reported in Mulki PS
ದಿನಾಂಕ: 08-06-2021 ರಂದು ಪಿರ್ಯಾದಿ Chandrashekhar- HC ರವರು ಹೆಚ್.ಸಿ ಮಹೇಶ್ ರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ 9:30 ಗಂಟೆಗೆ ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ ಮುಲ್ಕಿ ಜಂಕ್ಷನ್ ಎಂಬಲ್ಲಿರುವ ಡಿಜಿಟಲ್ ಕಮ್ಯೂನಿಕೇಷನ್ ಎಂಬ ಮೊಬೈಲ್ ಅಂಗಡಿಯನ್ನು ತೆರೆದು ಅಲ್ಲಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದ್ದು ಆರೋಪಿಯು ಸರಕಾರದ ನಿಯಮದಂತೆ ಸದ್ರಿ ಅಂಗಡಿಯನ್ನು ತೆರೆಯಬಾರದೆಂದು ಸರ್ಕಾರದ ಕಟ್ಟು ನಿಟ್ಟಿನ ಆದೇಶವಿದ್ದರೂ ಸದ್ರಿ ಆದೇಶವನ್ನು ಉಲ್ಲಂಘನೆ ಮಾಡಿ ಅಂಗಡಿಯನ್ನು ತೆರೆದು ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದು ಗೊತ್ತಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ಅಂಗಡಿಯನ್ನು ತೆರೆದಿರುವುದು ಕಂಡು ಬಂದಿರುವುದರಿಂದ ಆರೋಪಿ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in Moodabidre PS
ದಿನಾಂಕ: 08-06-2021 ರಂದು ಠಾಣಾ ಉಪನಿರೀಕ್ಷಕರಾದ ಪಿ.ಎಸ್.ಐ ಸುದೀಪ್ ಎಮ್.ವಿ ಮತ್ತು ಸಿಬ್ಬಂದಿಗಳಾದ ಸಿ.ಪಿ.ಸಿ ಪ್ರದೀಪ್ ಮತ್ತು ಸಿ.ಪಿ.ಸಿ ಯಶವಂತ್ ರವರ ಜೊತೆಯಲ್ಲಿ ಬೆಳಗ್ಗೆ ಸಮಯ ಸುಮಾರು 10.15 ಗಂಟೆಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆ ತಾಲೂಕು ಮೂಡಬಿದ್ರೆ ಪೇಟೆಯಿಂದ ಇರುವೈಲ್ ರಸ್ತೆಯ ಕಡೆಗೆ ಹೋಗುತ್ತಾ ಅಲ್ಲಿರುವ “ತೇಜಸ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್” ಅಂಗಡಿಯನ್ನು ತೆರೆದು ಆರೋಪಿಯು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ಅಂಗಡಿಯನ್ನು ತೆರೆಯಲು ಅನುಮತಿ ಇಲ್ಲದೆ ಇದ್ದರೂ ಸಹ ತೆರೆದಿಟ್ಟು ವ್ಯಾಪಾರದಲ್ಲಿ ತೊಡಗಿರುತ್ತಾರೆ. ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in Konaje PS
ದಿನಾಂಕ 07.06.2021 ರಂದು ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿ ಸೈಟ್ ಎಂಬಲ್ಲಿ ಪಿರ್ಯಾದಿ Pradeep (32) ರವರು ಅವರ ಸ್ನೇಹಿತ ಮಹಾಂತೇಶ್ ಬಸವರಾಜ್ ಕೊಪ್ಪಡ್ ಎಂಬುವರೊಂದಿಗೆ ಅವರ ಮನೆಯ ಬಳಿ ಮಾತನಾಡುತ್ತಿದ್ದಾಗ ಪಿರ್ಯಾದಿದಾರರ ನೆರೆಕರೆ ವಾಸಿಗಳಾದ ಹಾಗೂ ಸ್ನೇಹಿತರಾದ ಶ್ರವಣ್ ಸುಜಿತ್ ಚೇತನ್ ಆಶೀಸ್ ಕಾರ್ತಿಕ್ ಶರಣ್ ಮತ್ತಿತ್ತರ ಯುವಕರು ಪಿರ್ಯಾದಿದಾರರನ್ನು ಉದ್ದೇಶೀಸಿ ‘’ದಾನೆ ಬಾರಿತೋಪನ “ಎಂದು ತುಳುವಿನಲ್ಲಿ ಬೈದು ಕಾರ್ತಿಕ್ ಮತ್ತು ಸುಜಿತ್ ರವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ದೂಡಿ ಹಾಕಿದಲ್ಲದೆ ಮತ್ತಿಬ್ಬರು ಕೈಯಿಂದ ಹೊಡೆದರು ಆಶೀಸ್ ಎಂಬಾತನು ಬಾಟಲಿಯಿಂದ ಎಡಕೆನ್ನೆಗೆ ಹೊಡೆದನು ಮತ್ತು ಚೇತನ್ ಎಂಬಾತನು ಕಬ್ಬಿಣದ ರಾಡ್ ನಿಂದ ಬಲಗೈ ನ ಮುಂಗೈಗೆ ಹೊಡೆದನು ಮತ್ತು ಎಲ್ಲರೂ ಸೇರಿ ಪಿರ್ಯಾದಿದಾರರಿಗೆ ಪೊಲೀಸರಿಗೆ ಈ ವಿಷಯ ತಿಳಿಸಿದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹಾಗೂ ಬೇವರ್ಸಿ ..ಮಗನೆ ಎಂದೂ ಅವಾಚ್ಯ ಶಬ್ದಗಳಿಂದ ಬೈದು ಮೊಬೈಲ್ ಫೋನ್ ನ್ನು ಕಾಲಿನಿಂದ ತುಳಿದು ಜಖಂ ಮಾಡಿರುತ್ತಾರೆ ಅವರು ಹಲ್ಲೆ ಮಾಡಿದ ಪರಿಣಾಮ ಪ್ರಜ್ಞಾಹೀನನಾಗಿದ್ದು ಅಣ್ಣ ದೀಪಕ್ ರವರು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ
2) ದಿನಾಂಕ 07.06.2021 ರಂದು ಬೆಳಗಿ ಜಾವ 01 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿಯ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ಪಿರ್ಯಾದಿ Sudeep (22)ರವರು ತನ್ನ ಮೋಟಾರ್ ಸೈಕಲ್ ನ್ನು ಸರಿಮಾಡುತ್ತಿದ್ದು ಪಿರ್ಯಾದಿದಾರರಿಗೆ ಪರಿಚಯವಿರುವ ಮಹಾಂತೇಶ್ ಮತ್ತು ಪ್ರದೀಪ್ ರವರು ಅವರ ಬಳಿ ಬಂದು ಇಷ್ಟು ರಾತ್ರಿಯಲ್ಲಿ ಏನು ಮಾಡುತ್ತಿದ್ದೀರಿ ಎಂದೂ ಕೇಳಿದಾಗ ಮೋಟಾರ್ ಸೈಕಲ್ ನ್ನು ಹಾಳಾಗಿದೆ ಅದನ್ನು ಸರಿಮಾಡುತ್ತಿದ್ದೆನೆಂದು ತಿಳಿಸಿದ್ದು ನಂತರ ಪಿರ್ಯಾದಿ ಅವರಲ್ಲಿ ನಿವಿಬ್ಬರು ಯಾಕೆ ರಾತ್ರಿಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದೀರಿ ಎಂದು ಕೇಳಿದಾಗ ಇದರಿಂದ ಕೋಪಗೊಂಡ ಅವರು ನನಗೆ “ಬೇವರ್ಸಿ ...ಮಗ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಆ ಸಮಯ ನಾನು ಮನೆ ಕಡೆ ತಿರುಗಿ ಹೋರಟಿದ್ದು ಆಗ ಅವರು ನನ್ನನ್ನು ತಡೆದು ನಿಲ್ಲಿಸಿ ಕೈಯಿಂದ ಬೆನ್ನಿಗೆ ಗುದ್ದಿ ಬಲಗಾಲಿನ ತೊಡೆಗೆ ಕಾಲಿನಿಂದ ತುಳಿದು ನಮಗೆ ಉಪದೇಶ ಮಾಡಿದರೆ ಜಾಗೃತೆ ಎಂದು ಹೇಳಿ ಹೋಗಿದ್ದು ನಂತರ ಅವರು ಹೊಡೆದ ಕಾರಣ ನೋವು ಕಾಣಿಸಿಕೊಂಡಿದ್ದು ಅವರ ಪರಿಚಯದ ಜಿತೇಶ್ ರವರ ಸಹಾಯದಿಂದ ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ
Crime Reported in Surathkal PS
ದಿನಾಂಕ 07.06.2021 ರಂದು ಬೆಳಿಗ್ಗೆ 10.40 ಗಂಟೆಗೆ ಪಿರ್ಯಾದಿ ANNAPPA VANDSE ಸಿಪಿಸಿ ರವರು ಬೈಕ್ ರೌಂಡ್ಸ್ ಕರ್ತವ್ಯದಲ್ಲಿರುವಾಗ ಚೊಕ್ಕಬೆಟ್ಟು ಜಂಕ್ಷನ್ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರು ಗಂಡಸರು ಕೈ ಕೈ ಮಿಲಾಯಿಸಿಕೊಂಡು ಜಗಳ ಮಾಡುತ್ತಿರುವ ಬಗ್ಗೆ ಬೆಳಿಗ್ಗೆ 10.45 ಗಂಟೆಗೆ ಸ್ಥಳಕ್ಕೆ ಹೋದಾಗ ಅಲ್ಲಿ ಸಾರ್ವಜನಿಕ ರಸ್ತೆಯಲ್ಲಿ 2 ಜನರು ಕೈಗಳಿಂದ ಹೊಡೆದಾಟ ಮಾಡಿ ಸಾರ್ವಜನಿಕರಿಗೆ ನಡೆದಾಡಲು ಅಡ್ಡಿಪಡಿಸುತ್ತಿರುವುದು ಕಂಡು ಬಂದಿರುತ್ತದೆ. ಸದ್ರಿ 2 ಜನರನ್ನು ಪಿರ್ಯಾದಿದಾರರು ಹಿಡಿಯಲು ಹೋದಾಗ ಅವರಿಬ್ಬರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು ಸದ್ರಿಯವರ ಬಗ್ಗೆ ಅಲ್ಲಿ ಸೇರಿದವರಲ್ಲಿ ವಿಚಾರಿಸಲಾಗಿ ಅವರ ಹೆಸರು 1) ಉಮ್ಮರ್ ಫಾರೂಕ್ ಹಾಗೂ ಇನ್ನೊಬ್ಬನ ಹೆಸರು ಮೊಹಮ್ಮದ್ ಅಸ್ಲಾಂ @ ಮುನ್ನಾ ಎಂದು ಅವರಿಬ್ಬರೂ ವ್ಯಯಕ್ತಿಕ ದ್ವೇಷದಿಂದ ಜಗಳವಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿರುತ್ತದೆ. ಆದುದರಿಂದ ಆರೋಪಿಗಳಾದ ಉಮ್ಮರ್ ಫಾರೂಕ್ ಹಾಗೂ ಮೊಹಮ್ಮದ್ ಅಸ್ಲಾಂ @ ಮುನ್ನಾ ರವರು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಮಾಡಿ ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡಿರುತ್ತಾರೆ ಎಂಬಿತ್ಯಾದಿ.
2) ದಿನಾಂಕ: 07-06-2021 ರಂದು ಶ್ರೀ ಪುನೀತ್ ಗಾಂವ್ಕರ್ ಪಿಎಸ್ಐ ಕಾ&ಸು-1 ಸುರತ್ಕಲ್ ಪೊಲೀಸ್ ಠಾಣೆ ರವರು ಸುರತ್ಕಲ್ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ನಲ್ಲಿರುವ ಸಮಯ ರಾತ್ರಿ 21-00 ಗಂಟೆಗೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕಬೆಟ್ಟು 8ಎ ಬ್ಲಾಕಿನ ರುದ್ರಭೂಮಿಯ ಬಳಿ ಓರ್ವ ಯುವಕ ಅಮಲು ಪದಾರ್ಥ ಸೇವಿಸಿದಂತೆ ಆವರ ನಡವಳಿಕೆಯಲ್ಲಿ ಕಂಡು ಬಂದ ಮೇರೆಗೆ ಆತನನ್ನು ವಿಚಾರಿಸಿಕೊಂಡಾಗ ಜಾಕ್ಸನ್ (18) ಎಂದು ತಿಳಿಸಿರುತ್ತಾನೆ. ಅಮಲು ಪದಾರ್ಥ ಸೇವಿಸಿದ ಬಗ್ಗೆ ಸದ್ರಿಯವನನ್ನು ವಿಚಾರಿಸಲಾಗಿ ಈತನು ಈ ದಿನ ಮಧ್ಯಾಹ್ನ ಒಬ್ಬ ವ್ಯಕ್ತಿಯಿಂದ ಸ್ವಲ್ಪ ಗಾಂಜಾವನ್ನು ಖರೀದಿಸಿ ಸೇವಿಸಿರುವುದಾಗಿ, ಸೇವನೆ ಮಾಡಿದ ಸಿಗರೇಟ್ ತುಂಡನ್ನು ಬಿಸಾಡಿ ತಿರುಗಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡ ಮೇರೆಗೆ ಸದ್ರಿ ವ್ಯಕ್ತಿಯನ್ನು ಮಂಗಳೂರು ಎ.ಜೆ ಅಸ್ಪತ್ರೆಯ ವೈದ್ಯಾಧಿಕಾರಿಗಳ ಮುಂದೆ ಹಾಜರು ಪಡಿಸಿದ್ದು ಪರೀಕ್ಷೆ ನಡೆಸಿದ ವೈದ್ಯಾದಿಕಾರಿಯವರು ಗಂಜಾ ಸೇವನೆ ಮಾಡಿರುವುದಾಗಿ ವರದಿ ನೀಡಿರುವ ಮೇರೆಗೆ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.