ಅಭಿಪ್ರಾಯ / ಸಲಹೆಗಳು

 Crime Reported in  Traffic South PS

ದಿನಾಂಕ:07-07-2021 ರಂದು ಪಿರ್ಯಾದಿದಾರರಾದ   ವಿಜಿತ್ ರವರು ಸಹಸವಾರನಾಗಿ ಹಾಗೂ  ಧನುಷನು ಸವಾರನಾಗಿ ಬೈಕ್ ನಂಬ್ರ KA-19-HF-4365 ನೇದರಲ್ಲಿ ಕೊಟ್ಟಾರಕ್ಕೆ  ಹೋಗಿ ಕೆಲಸ ಮುಗಿಸಿ ವಾಪಾಸು ಬೈಕ್ ಸರ್ವಿಸ್ ಬಗ್ಗೆ ಪಂಡಿತ್ ಹೌಸ್ ನಲ್ಲಿ ಸರ್ವಿಸ್ ಸ್ಟೇಷನಿಗೆ ಹೋಗಿ ಸರ್ವಿಸ್ ಮಾಡಿಸಿ ನಂತರ ಪಂಡಿತ್ ಹೌಸ್ ನಿಂದ ತೊಕ್ಕೂಟು ಮಾರ್ಗವಾಗಿ ಮಂಗಳೂರು ಕಡೆಗೆ ಬರುತ್ತಿರುವಾಗ ಸಮಯ ಸುಮಾರು 19.30 ಗಂಟೆಗೆ ನೇತ್ರಾವತಿ ಸೇತುವೆ ಬಳಿ ರಾ.ಹೆ.66 ರ ಡಾಮಾರು ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ಮೋಟಾರು ಸೈಕಲನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮಲೆ ಬ್ರೇಕ್ ಹಾಕಿದ  ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ವಾಹನ ಸಮೇತ ರಸ್ತಗೆ ಬಿದ್ದರು ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಈ ಅಪಘಾತದಿಂದ ತಲೆಯ ಎಡಬದಿ  ಗುದ್ದಿದ ಗಾಯ ಹಾಗೂ ಬಲಕಾಲು ಮೂಳೆ ಮೂರಿತದಗಾಯ ಬಲಕಣ್ನಿನ ಮೇಲೆ ಗುದ್ದಿದ ರಕ್ತಗಾಯ ಹಾಗೂ  ಹೊಟ್ಟೆ ಬಳಿ ತರಚಿದ ಗಾಯವಾಗಿದ್ದು ಸವಾರನಾದ ಧನುಷನಿಗೆ  ತಲೆಯ ಎಡಬದಿಗೆ ರಕ್ತಗಾಯ ಹಾಗೂ ಎರಡು ಭುಜದ ಸೊಂಟಕ್ಕೆ ಗುದ್ದಿದ ಗಾಯ ಬಲಕಾಲು ಮೊಣಕಾಲಿಗೆ ರಕ್ತಗಾಯವಾಗಿದ್ದು ಕೊಡಲೇ ಅಲ್ಲಿ ಸೇರಿದ ಸಾರ್ವಜನಿಕರು ನಗರದ ವೆನ್ಲಾಕ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಪರಿಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

Crime Reported in  Urva PS

ಪಿರ್ಯಾದು SHASHI BHUSHAN ರವರ ತಂಗಿಯಾದ  ಶ್ರೀಮತಿ  ಪ್ರೀತಿ ಪಾಂಡೆ   ಎಂಬವರನ್ನು 20-11-2020 ನೆ ನವೆಂಬರ್ ತಿಂಗಳಲ್ಲಿ   ರಾಕೇಶ್ ಓಝಾ ಎಂಬವರಿಗೆ ವಿವಾಹ ಮಾಡಿಕೊಟ್ಟಿದ್ದು, ನಂತರ  03-12-2021 ರ ಸಮಯಕ್ಕೆ ಪಿರ್ಯಾದುದಾರರ  ತಂಗಿಯಾದ ಶ್ರೀಮತಿ  ಪ್ರೀತಿ ಪಾಂಡೆ ಹಾಗೂ ಅವರ ಗಂಡನಾದ ರಾಕೇಶ್ ಓಝಾ,  ರಾಕೇಶ್ ಓಝಾನ ತಮ್ಮನಾದ ಅಮೀತ್ ಓಝಾ,  ಮತ್ತು ತಂಗಿಯಾದ   ಸ್ನೇಹಾ ಪಾಂಡೆ ಯು ಜೊತೆಯಾಗಿ ಮಂಗಳೂರು ನಲ್ಲಿ ವಾಸ್ತವ್ಯ ವಿದ್ದು, ಹೀಗಿರುತ್ತಾ ಸ್ವಲ್ಪ ಸಮಯದ ಬಳಿಕ ಪಿರ್ಯಾದುದಾರರ ತಂಗಿಯ ಗಂಡನಾದ   ರಾಕೇಶ್ ಓಝಾ , ಅವರ ತಂದೆಯಾದ ರಾಜೇಶ್ವರ ಓಝಾ , ತಾಯಿಯಾದ ಸೌಮತಿ ಓಝಾ,  ತಮ್ಮನಾದ ಅಮಿತ್   ಓಝಾ, ಮತ್ತು  ತಂಗಿಯಾದ  ಸ್ನೇಹಾ ಪಾಂಡೆ,ಯವರು ಜೊತೆಯಾಗಿ ಸೇರಿಕೊಂಡು ತನ್ನ ತಂಗಿಯಲ್ಲಿ 5 ಲಕ್ಷ ಹಣ ಮತ್ತು ನಾಲ್ಕು ಚಕ್ರದ  ವಾಹನವನ್ನು ಖರೀದಿಸಲು ಹಣವನ್ನು ವರದಕ್ಷಿಣಿಯಾಗಿ ನೀಡಬೇಕು  ಇಲ್ಲದಿದ್ದಲ್ಲಿ, ನಿಮ್ಮ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿಯೂ, ಇದೇ ವಿಚಾರದಲ್ಲಿ ಪಿರ್ಯಾದುದಾರರ ಕಡೆಯವರು ಸ್ವಲ್ಪ  ತಿಂಗಳು ಸಮಯ  ಬೇಕು,  ಈ  ಬಗ್ಗೆ ತಯಾರಿಯನ್ನು  ಮಾಡಬೇಕು   ಎಂಬುದಾಗಿ  ಹೇಳಿದಾಗ  ಸ್ವಲ್ಪ ದಿನಗಳ  ವರೆಗೆ ಸರಿಯಾಗಿದ್ದು,  ನಂತರದ  ದಿನಗಳಲ್ಲಿ  ಪಿರ್ಯಾದಿದಾರರ  ತಂಗಿಯವರು  ಪಿರ್ಯಾದಿದಾರರಲ್ಲಿ  ಪ್ರತೀ  ದಿನವು  ಕಣ್ಣಿರು  ಸುರಿಸುತ್ತಾ  ತನ್ನ  ಗಂಡನ  ಕಡೆಯವರು ವರದಕ್ಷಿಣೆಗಾಗಿ  ಹಿಂಸಿಸಿರುವುದಾಗಿ  ತಿಳಿಸಿವುದಲ್ಲದೆ,ಅದೇ  ಸಮಯಕ್ಕೆ  ದ್ವಿತೀಯ  ಬಾರಿಗೆ  ನಾನು  ನನ್ನ  ತಂದೆಯವರು,  ತಂಗಿಯ  ಮಾವನಲ್ಲಿ,  ಗಂಡನಲ್ಲಿ  ಹಾಗೂ  ತಮ್ಮನಲ್ಲಿ ,  ತಾವು  ಕೇಳಿರುವ  ವರದಕ್ಷಿಣೆ ಹಣವನ್ನು ಕೊಡಲು  ಸ್ವಲ್ಪ  ಸಮಯ ಬೇಕೆಂದು  ಕೇಳಿದಾಗ, ಅವರುಗಳ  ಮಾತನ್ನು  ಕೇಳದೆ ನಿರಂತರವಾಗಿ  ಹೊಡೆಯುವುದು,  ಮತ್ತು  ಹಿಂಸಿಸುತ್ತಿರುವ  ಬಗ್ಗೆ ತಿಳಿಸಿದ್ದು,  ಅಲ್ಲದೆ, ಪಿರ್ಯಾದಿದಾರರ  ತಂಗಿಯ ಗಂಡನ ಚಿಕ್ಕಪ್ಪನಾದ ರತನೇಶ್ವರ್ ಓಜಾ, ದೀಪಿಕಾ ಒಜಾ ರವರು  ಕೂಡಾ 5 ಲಕ್ಷ  ಹಣಕ್ಕೆ ಮತ್ತು   ನಾಲ್ಕುಚಕ್ರದದ  ವಾಹನಕ್ಕೆ  ಹಣ  ನೀಡುವಂತೆ ಕೇಳಿಕೊಂಡು  ಹೊಡೆಯುತ್ತಿರುವುದಾಗಿ  ತಿಳಿಸಿರುವುದಲ್ಲದೇ,  ಕೊಡದೇ ಇದ್ದಲ್ಲಿ ಪಿರ್ಯಾದಿದಾರರ  ತಂಗಿಯನ್ನು  ಕೊಲ್ಲುವುದಾಗಿ  ಹೇಳಿರುತ್ತಾರೆ.  ಅಲ್ಲದೆ  ದಿನಾಂಕ  06.07.2021  ರಂದು  ಸಂಜೆ  6:00  ಗಂಟೆ  ಸಮಯಕ್ಕೆ  ಪಿರ್ಯಾದಿದಾರರ  ತಂಗಿಯ  ತಂದೆಯವರು  ಪಿರ್ಯಾದಿದಾರರಿಗೆ  ಪೋನ್  ಕರೆ  ಮಾಡಿ  ನಿಮ್ಮ ತಂಗಿ  ಆತ್ಮಹತ್ಯೆ  ಮಾಡಿಕೊಂಡಿರುವ  ಬಗ್ಗೆ  ತಿಳಿಸಿರುವುದಾಗಿಯು,  ಈ  ಸಾವಿಗೆ  ಇವರುಗಳು  ಬೇಡಿಕೆ  ಇಟ್ಟಿದ್ದ  5 ಲಕ್ಷ  ಹಣ  ಮತ್ತು  ನಾಲ್ಕು  ಚಕ್ರದ  ವಾಹವನ್ನು  ಕೊಡಲು ಪಿರ್ಯಾದಿದಾರರ  ಕಡೆಯವರು  ವಿಫಲವಾಗಿದ್ದು, ತಂಗಿಯ ಗಂಡನಾದ  ರಾಕೇಶ್  ಓಝಾ,  ತಮ್ಮ  ಅಮಿತ್ ಓಝಾ, ತಂಗಿ ಸ್ನೇಹಾ  ಪಾಂಡೆ, ತಂದೆಯಾದ ರಾಜೇಶ್ವರ್ ಓಝಾ,  ಅತ್ತೆಯಾದ ಸೌಮತಿ ದೇವಿ,  ಚಿಕ್ಕಪ್ಪನಾದ ರತನೇಶ್ವರ್ ಓಝಾ ಮತ್ತು ಅವರ ಹೆಂಡತಿ ದೀಪಿಕಾ ಓಝಾ ಇವರುಗಳಿಂದ ವರದಕ್ಷಿಣೆಗಾಗಿ  ನಡೆದ ಕ್ರೌರ್ಯ, ಹಾಗೂ  ಕಿರುಕುಳಕ್ಕೆ  ಒಳಪಟ್ಟು,  ಪಿರ್ಯಾದಿದಾರರ  ತಂಗಿಯ ಸಾವು ಉಂಟಾಗಲು, ಕಾರಣರಾಗಿರುತ್ತಾರೆ ಎಂಬಿತ್ಯಾದಿಯಾಗಿ ನೀಡಿದ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು

ಇತ್ತೀಚಿನ ನವೀಕರಣ​ : 08-07-2021 06:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080