ಅಭಿಪ್ರಾಯ / ಸಲಹೆಗಳು

Crime Reported in  Mangalore Women PS

ಪಿರ್ಯಾದಿದಾರರಾದ ಅಪ್ರಾಪ್ತ ನೊಂದ ಬಾಲಕಿಯು 10 ನೇ ತರಗತಿ ಕಲಿಯುತ್ತಿದ್ದು, 2015-2016 ನೇ ಇಸವಿಯಲ್ಲಿ 5ನೇ ತರಗತಿ ಕಲಿಯುತ್ತಿದ್ದಾಗ ಅಪ್ರಾಪ್ತ ನೊಂದ ಬಾಲಕಿಯ ತಂದೆಯಾದ ಆರೋಪಿ ರಾಮಚಂದ್ರಪ್ಪ ಎಂಬಾತನು ಮನೆಯಲ್ಲಿ ಯಾರೂ ಇಲ್ಲದ ಸಮಯ ನೊಂದ ಬಾಲಕಿಗೆ ಅತ್ಯಾಚಾರ ಮಾಡಿರುತ್ತಾರೆ. ಅಲ್ಲದೇ ಇದೇ ರೀತಿ ಹಲವಾರು ಬಾರಿ ಅತ್ಯಾಚಾರವೆಸಗಿರುವುದರಿಂದ  ಅಪ್ರಾಪ್ತ ನೊಂದ ಬಾಲಕಿಯು ದೈಹಿಕ ಹಾಗೂ ಮಾನಸಿಕ ತೊಂದರೆಯಿಂದ  ಬಳಲುತ್ತಿರುವುದಾಗಿದೆ ಎಂಬಿತ್ಯಾದಿ.

Crime Reported in  Mangalore North PS

ಪ್ರಕರಣದ ಪಿರ್ಯಾದಿದಾರರು ಅಪ್ರಾಪ್ತ ವಯಸ್ಸಿನವರಾಗಿದ್ದು, ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, 2020 ನೇ ಇಸವಿ ಡಿಸೆಂಬರ್‌‌ ತಿಂಗಳಿನಲ್ಲಿ ಆರಾಪ್‌ ಎಂಬಾತನ ಪರಿಚಯವಾಗಿದ್ದು, 2021 ನೇ ಇಸವಿ ಜನವರಿ ತಿಂಗಳಿನಲ್ಲಿ ಆರೋಪಿ ಆರಾಫ್‌ ಮತ್ತು ಪಿರ್ಯಾದಿದಾರರ ವಿಚಾರ ಮನೆಯಲ್ಲಿ ಗೊತ್ತಾಗಿ ಆತನಲ್ಲಿ ಮಾತನಾಡದಂತೆ ತಿಳಿಸಿದರಿಂದ ಪಿರ್ಯಾದಿದಾರರು ಆತನ ಸಂಪರ್ಕದಿಂದ  ದೂರವಿದ್ದು, ಅದರೂ ಆರೋಪಿತನು ಆತನ ಇನ್‌ಸ್ಟಾಗ್ರಾಂ ಆಕೌಂಟ್‌‌ನಿಂದ  ಪಿರ್ಯಾದಿದಾರರ ಇನ್‌ಸ್ಟಾಗ್ರಾಂ ಆಕೌಂಟ್‌‌ಗೆ ಪಿರ್ಯಾದಿದಾರರಿಗೆ ನೋವುಂಟಾಗುವಂತೆ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದು, ಪ್ರತಿದಿನ ಪಿರ್ಯಾದಿದಾರರು ಕಾಲೇಜ್‌ಗೆ ಹೋಗುವ ಸಮಯ ಹಿಂಬಾಲಿಸುತ್ತಿದ್ದನು. ದಿನಾಂಕ 08-04-2021 ರಂದು 12-30 ಗಂಟೆಗೆ ಆರೋಪಿತನು ಪಿರ್ಯಾದಿದಾರರ ಮನೆಯ ಬಳಿಗೆ ಬಂದು ಪಿರ್ಯಾದಿದಾರರ ಮನೆಯವರಿಗೆ ಅವಾಚ್ಯಶಬ್ದಗಳಿಂದ ಬೈದಿರುವುದಾಗಿದೆ ಎಂಬಿತ್ಯಾದಿಯಾಗಿದೆ.

Crime Reported in  Bajpe PS

ಫಿರ್ಯಾದಿ Puuvappa H.M PSI ರವರಿಗೆ   ದಿನಾಂಕ 09-04-2021 ರಂದು ಬೆಳಿಗ್ಗೆ ಅಡ್ಡೂರು ಗ್ರಾಮ, ಪಾಂಡೇಲು ಮಂಜೊಟ್ಟಿ ಎಂಬಲ್ಲಿ ಅಬ್ದುಲ್ ಮಜೀದ್ ಎಂಬವರ ಮನೆಯ ಹಿಂಬದಿಯಲ್ಲಿ ದನವನ್ನು ಕಳವು ಮಾಡಿ ಅಕ್ರಮವಾಗಿ ಕಡಿದು ಮಾಂಸ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಬೆಳಿಗ್ಗೆ 08:00 ಗಂಟೆಗೆ ಮಂಗಳೂರು ತಾಲೂಕು,  ಅಡ್ಡೂರು ಗ್ರಾಮ, ಪಾಂಡೇಲು ಮಂಜೊಟ್ಟಿ ಎಂಬಲ್ಲಿರುವ ಅಬ್ದುಲ್ ಮಜೀದ್ ಎಂಬವರ ಮನೆಯ ಬಳಿ ಹೋಗಿ ನೋಡಿದಾಗ ಇಬ್ಬರು ವ್ಯಕ್ತಿಗಳು ದನವನ್ನು ಕಡಿದು ಹತ್ಯೆ ಮಾಡಿ ಮಾಂಸ ಮಾಡುತ್ತಿರುವುದು ಕಂಡು ಬಂದಿದ್ದು,  ಸದ್ರಿಯವರು ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಹೆಸರು ವಿಳಾಸವನ್ನು ಹೇಳಿದಾಗ ಒಬ್ಬಾತನು ತನ್ನ ಹೆಸರು 1)ಅಬ್ದುಲ್ ಮಜೀದ್ (35 ವರ್ಷ) ಮತ್ತು ಇನ್ನೊಬ್ಬ ತನ್ನ ಹೆಸರು 2)ಪಿ. ಮುಸ್ತಾಫ್ (30 ವರ್ಷ) ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿಯವರನ್ನು ವಿಚಾರಿಸಿದಾಗ ದನವನ್ನು ಕಳವು ಮಾಡಿ ಈ ಸ್ಥಳದಲ್ಲಿ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತುಂಡರಿಸುತ್ತಿರುವುದಾಗಿ ತಿಳಿಸಿದಂತೆ  ಒಟ್ಟು 164 ಕೆ.ಜಿ ದನದ ಮಾಂಸವಿದ್ದು ಇವುಗಳ ಅಂದಾಜು ಬೆಲೆ ಸುಮಾರು 35,000/- ರೂಪಾಯಿ ಆಗಬಹುದು. ಆರೋಪಿ ಮತ್ತು ಸೊತ್ತು ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in  Ullal PS

ದಿನಾಂಕ 8-4-2021 ರಂದು ಬೆಳಿಗ್ಗೆ 11-15 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಮೊಗವೀರಪಟ್ನ ಅರಬ್ಬೀ ಸಮುದ್ರ ದಡದಿಂದ ಪಶ್ಚಿಮಕ್ಕೆ ಸುಮಾರು 60 ಕಿಮೀ ದೂರದಲ್ಲಿ ಫಿರ್ಯಾದಿದಾರರಾದ ಮೊಹಮ್ಮದ್ ಫಯಾಜ್ ಹಸನ್ ರವರು ತನ್ನ ಅಣ್ಣ ದಾವೂದ್ನ ಮಾಲಕತ್ವದ IND-KA-01-MO-3022 ನೇ ನೋಂದಣಿ ನಂಬ್ರದ ಮೀನುಗಾರಿಕಾ ಗಿಲ್ನೆಟ್ ಬೋಟ್ ನಲ್ಲಿ ಫಿರ್ಯಾದಿದಾರರಾದ ಮೊಹಮ್ಮದ್ ಫಯಾಜ್ ಹಸನ್, ದಾವೂದ್, ಸಫಾನ್, ಜಾವೇದ್,  ಜಾಫರ್, ಜಮೀಲ್ ರವರು ಮೀನುಗಾರಿಕೆ ಮಾಡುತ್ತಾ ಮೀನು ತುಂಬಿದ ಮೀನಿನ ಬಲೆಯನ್ನು ದೋಣಿಗೆ ಎಳೆಯುತ್ತಿದ್ದಾಗ ದಾವೂದ್ (35) ರವರು ಆಯ ತಪ್ಪಿ ಅರಬ್ಬೀ ಸಮುದ್ರದ ನೀರಿಗೆ ಬಿದ್ದು ಕಾಣೆಯಾಗಿದ್ದು, ಕಾಣೆಯಾದವರನ್ನು ಹುಡುಕಾಡಿ ಈ ತನಕ ಪತ್ತೆಯಾಗದೇ ಇದ್ದುದರಿಂದ  ಕಾಣೆಯಾದವರನ್ನು ಪತ್ತೆ ಹಚ್ಚಿ ಕೊಡುವಂತೆ  ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

ಇತ್ತೀಚಿನ ನವೀಕರಣ​ : 09-04-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080