Crime Reported in Mangalore East PS
ಪಿರ್ಯಾದಿ Suhan Shetty (27)ರವರ ತಂದೆ ಸುರೇಶ್ ಎಸ್. ಶೆಟ್ಟಿ(63) ರವರು ಕುದ್ರೋಳಿಯಲ್ಲಿರುವ ಕದಳಿ ಪ್ರೆಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ತಾಯಿ ಶ್ರೀಮತಿ ವಾಣಿ(53) ರವರು ದೇರಳಕಟ್ಟೆಯ ಎ.ಬಿ. ಶೆಟ್ಟಿ ಡಂಟಲ್ ಕಾಲೇಜಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಲಾಕ್ ಡೌನ್ ಆದ ಬಳಿಕ ಪಿರ್ಯಾದಿದಾರರ ತಂದೆಯ ಪ್ರೆಸ್ ಬಂದ್ ಆಗಿದ್ದು, ತಾಯಿ ಶ್ರೀಮತಿ ವಾಣಿ ರವರು ಚಿಟ್ ಫಂಡ್ ನಡೆಸುತ್ತಿದ್ದು, ಲಾಕ್ ಡೌನ್ ಆದ ಬಳಿಕ ಚಿಟ್ ಫಂಡ್ ಗೆ ಸಂಬಂಧಿಸಿ ಹಣದ ಅಡಚಣೆ ಉಂಟಾಗಿದ್ದು, ಈ ಬಗ್ಗೆ ಶ್ರೀಮತಿ ವಾಣಿ ರವರ ಹೆಸರಿನಲ್ಲಿರುವ ಕೋಟೆಕಾರ್ ಕೊಂಡಾಣದಲ್ಲಿರುವ ಜಾಗವನ್ನು ಸುರೇಶ್ ಶೆಟ್ಟಿ ಎಂಬವರಿಗೆ ಕರಾರುಪತ್ರದ ಮುಖೇನ ಮಾರಾಟ ಮಾಡಿದ್ದು, ಸುರೇಶ್ ಶೆಟ್ಟಿ ಮುಂಗಡ ಹಣ ನೀಡಿದ್ದು, ಬಾಕಿ ಹಣ ಕೊಡಲು ಬಾಕಿ ಇರಿಸಿಕೊಂಡು ವಾಣಿ ರವರ ವಿರುದ್ಧ ಸಿವಿಲ್ ದಾವೆ ದಾಖಲಿಸಿದ್ದರು. ಇದೇ ವಿಚಾರದಲ್ಲಿ ಇತ್ತೀಚಿನ ಕೆಲವು ಸಮಯಗಳಿಂದ ತುಂಬಾ ನೊಂದುಕೊಂಡಿದ್ದು, ಕುರಿಫಂಡ್ ನಲ್ಲಿ ಹಣ ತೆಗೆದವರಲ್ಲಿ ಕೆಲವರು ಕಂತು ಪಾವತಿಸದೇ ಇದ್ದು, ಕುರಿಫಂಡಿನ ಹಣ ತೆಗೆಯಲು ಬಾಕಿ ಇದ್ದವರಿಗೆ ಹಣವನ್ನು ಸಕಾಲದಲ್ಲಿ ಹಿಂತಿರುಗಿಸಲು ಆಗದೇ ಇದ್ದ ಕಾರಣ ಕೆಲವರು ಹಣ ಕೊಡುವಂತೆ ಪದೇ ಪದೇ ಒತ್ತಾಯಿಸಿ ಅವರ ಮನಸ್ಸನ್ನು ನೋಯಿಸುತ್ತಿದ್ದರು. ಈ ವಿಚಾರವನ್ನು ಸಂಬಂಧಿಕರಿಗೆಲ್ಲಾ ಹೇಳಿಕೊಂಡು ಮನೆಯಲ್ಲಿ ಕೂಗಿಕೊಂಡು ಇದ್ದವರು ಇದೇ ಬೇಸರದಿಂದ ಮಾನಸಿಕ ಒತ್ತಡಕ್ಕೊಳಗಾಗಿ ಪಿರ್ಯಾದಿದಾರರ ತಂದೆ ಮತ್ತು ತಾಯಿಯವರು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಡೆತ್ ನೋಟ್ ಬರೆದಿಟ್ಟು ದಿನಾಂಕ 09-06-2021 ರಂದು ಬೆಳಿಗ್ಗೆ 07-00 ಗಂಟೆಯಿಂದ 08-30 ಗಂಟೆ ಮದ್ಯೆ ಪಿರ್ಯಾದಿದಾರರ ತಾಯಿ ಶ್ರೀಮತಿ ವಾಣಿ ರವರು ಮನೆಯ ಮಾಡಿನ ಕಬ್ಬಿಣದ ರಾಡ್ ಗೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯ ಮಾಡಿಕೊಂಡಿದ್ದು, ಹಾಗೇ ಪಿರ್ಯಾದಿದಾರರ ತಂದೆ ಸುರೇಶ್ ಎಸ್. ಶೆಟ್ಟಿ ರವರು ನೆರೆಮನೆಯ ನವೀನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಶ್ರೀಮತಿ ವಾಣಿ ರವರ ಜಾಗ ಖರೀದಿಸಿದ ಸುರೇಶ್ ಶೆಟ್ಟಿ ರವರು ಜಾಗದ ಹಣ ನೀಡದೇ ಇದ್ದು, ಚಿಟ್ ಫಂಡಿನ ಬಾಬ್ತು ಬರಬೇಕಾದ ಹಣ ಬಾರದೇ ಇದ್ದುದರಿಂದ ಶ್ರೀಮತಿ ವಾಣಿ ರವರು ಹಣ ನೀಡಬೇಕಾದವರಿಗೆ ಹಣ ನೀಡಲು ಸಾಧ್ಯವಾಗದೇ ಇದ್ದುದರಿಂದ ಪಿರ್ಯಾದಿದಾರರ ತಂದೆ ಮತ್ತು ತಾಯಿ ರವರು ಮಾನಸಿಕ ಒತ್ತಡದಿಂದ ದುಷ್ಟ್ರೇರಣೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ
Crime Reported in Mangalore Women PS
ಸಾರಾಂಶವೇನೆಂದರೆ, ನೊಂದ ಅಪ್ರಾಪ್ತ ಬಾಲಕಿ ಒಂದೂವರೆ ವರ್ಷದ ಹಿಂದೆ ಸ್ನೇಹಿತರ ಮುಖಾಂತರ ಆರೋಪಿ ಜೋಕಟ್ಟೆಯ ಅಬ್ದುಲ್ ರಫೂರ್ ಎಂಬಾತನ ಪರಿಚಯವಾಗಿರುತ್ತದೆ. ಆರೋಪಿ ಅಪ್ರಾಪ್ತ ನೊಂದ ಬಾಲಕಿಗೆ ಮೊಬೈಲ್ ಫೋನ್ ತೆಗೆಸಿಕೊಟ್ಟು ಪ್ರತಿ ದಿನ ಫೋನ್ ಹಾಗೂ ಮೆಸೇಜ್ ಮಾಡಿ ಮಾತನಾಡುತ್ತಿದ್ದು, 2020 ನೇ ಅಕ್ಟೋಬರ್ ಮೊದಲನೇ ವಾರದಿಂದ ಅಪ್ರಾಪ್ತ ನೊಂದ ಬಾಲಕಿಯ ಮನೆಗೆ ಪ್ರತಿ ದಿನ ರಾತ್ರಿ 1.00 ಗಂಟೆಗೆ ಅಪ್ರಾಪ್ತ ನೊಂದ ಬಾಲಕಿಯ ಮನೆಯ ಕಂಪೌಂಡ್ ಗೋಡೆಯನ್ನು ಹಾರಿ, ಅಪ್ರಾಪ್ತ ನೊಂದ ಬಾಲಕಿಗೆ ಮನೆಯ ಬಾಲ್ಕನಿಯ ಬಾಗಿಲನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದು, ಬಾಗಿಲು ಓಪನ್ ಮಾಡಿದಾಗ ಆರೋಪಿತನು ಕೋಣೆಯ ಒಳಗೆ ಬಂದು ಅಪ್ರಾಪ್ತ ನೊಂದ ಬಾಲಕಿಯನ್ನು ಗಟ್ಟಿಯಾಗಿ ಅಪ್ಪಿ ಹಿಡಿದು, ಕಿಸ್ ಮಾಡಿ, ಮದುವೆಯಾಗುವುದಾಗಿ ನಂಬಿಸಿ, ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಪರ್ಕ ನಡೆಸಿರುತ್ತಾನೆ. ಆರೋಪಿತನು ಅಪ್ರಾಪ್ತ ನೊಂದ ಬಾಲಕಿಗೆ ಹಲವಾರು ಬಾರಿ ಲೈಂಗಿಕ ಸಂಪರ್ಕ ನಡೆಸಿದ್ದು, ದಿನಾಂಕ 09-06-2021 ರಂದು ಅಪ್ರಾಪ್ತ ನೊಂದ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಕಾವೂರು ಗಾಂಧಿನಗರದ ಕ್ಷಿನಿಕ್ ಗೆ ಹೋಗಿ ಅಲ್ಲಿನ ವೈದ್ಯರ ಸೂಚನೆಯಂತೆ ನೊಂದ ಅಪ್ರಾಪ್ತ ಬಾಲಕಿಯು ಗರ್ಭೀಣಿಯಾಗಿರುವುದರಿಂದ ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ
Crime Reported in Bajpe PS
ಪಿರ್ಯಾದಿ Abdul Hameed ರವರು ದಿನಾಂಕ 07-06-2021 ರಂದು ಸಂಜೆ ಸುಮಾರು 4.00 ಗಂಟೆಗೆ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ, ಕೋರ್ಡೆಲ್, ಐಡಿಯಲ್ ಇಂಗ್ಲೀಷ್ ಮೀಡಿಯಂ ಶಾಲೆ ಬಳಿ ತನ್ನ ನೆರೆಮನೆಯ ಲಕ್ಷ್ಮೀಶ ರಾವ್ ಎಂಬವರ ಮನೆಗೆ ಹೋಗುವ ಸಮಯ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ “ನೀನು ಯಾರು? ನಿನಗೆ ಇಲ್ಲಿ ಏನು ಕೆಲಸ” ಎಂದು ಪ್ರಶ್ನಿಸಿ ಅದರಲ್ಲಿ ಒಬ್ಬಾತ ತನ್ನ ಬಳಿ ಇದ್ದ ಕೋಳಿಯ ಬಾಲಿನಿಂದ ಪಿರ್ಯಾದಿದಾರರ ಎಡಕೈಗೆ ಬೀಸಿದಾಗ ತರಚಿದ ಗಾಯಉಂಟಾಗಿದ್ದು ಪಿರ್ಯಾದಿದಾರರು ತಪ್ಪಿಸಲು ಪ್ರಯತ್ನಿಸಿದಾಗ ಅವರ ಹಣೆಯ ಭಾಗಕ್ಕೆ ಗಾಯವಾಗಿರುತ್ತದೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಲಕ್ಷೀಶ ರವರ ಗೇಟಿನ ಒಳಗೆ ಓಡಿದಾಗ ಈ ಇಬ್ಬರ ಜೊತೆ ಇನ್ನಿಬ್ಬರು ಜೊತೆ ಸೇರಿ ಪಿರ್ಯಾದಿದಾರರನ್ನು ಉದ್ದೇಶಿಸಿ “ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಬೆದರಿಕೆ ಹಾಕಿ ಓಡಿ ಹೋಗಿದ್ದು, ಗಲಾಟೆ ಸಮಯ ಪಿರ್ಯಾದಿದಾರರ 10,000/- ರೂಗಳು ಕಳೆದುಹೋಗಿರುತ್ತದೆ ಎಂಬಿತ್ಯಾದಿ.
Crime Reported in Panambur PS
ದಿನಾಂಕ 09-06-2021 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಪಿರ್ಯಾಧಿದಾರರಾದ ಪಣಂಬೂರು ಪೊಲೀಸ್ ಠಾಣೆಯ ಕಾನೂನು ಶಿಸ್ತು ವಿಭಾಗದ ಪೊಲೀಸ್ ಉಪ ನಿರೀಕ್ಷಕ ಉಮೇಶ್ ಕುಮಾರ್ ಎಂ.ಎನ್. ರವರು ಮತ್ತು ಅಪರಾಧ ವಿಭಾಗದ ಪಿ.ಎಸ್.ಐ ಕುಮಾರೇಶನ್ ರವರುಗಳು ಪಣಂಬೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು ಬೆಳಿಗ್ಗೆ 09-35 ಗಂಟೆಗೆ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ದುರ್ಗಾದಯ ಕಾಂಪ್ಲೆಕ್ಸ್ ನಲ್ಲಿರುವ ಪುತ್ರನ್ ಎಲೆಕ್ಡ್ರೀಕಲ್ ಮಳಿಗೆ ಮಾಲೀಕನಾದ ಅಮಿತ್ ಕುಂದರ್, ಪ್ರಾಯ 39 ವರ್ಷ,ತಂದೆ. ಶ್ರೀನಿವಾಸ ಕುಂದರ್, ವಾಸ. ಗೌರಿ ನಿವಾಸ, ಕುಳಾಯಿ, ಹೊಸಬೆಟ್ಟು, ಸುರತ್ಕಲ್, ಮಂಗಳೂರು ತಾಲೂಕು.ಎಂಬಾತನು ಮಾನ್ಯ ಜಿಲ್ಲಾಧಿಕಾರಿಯವರು ದಕ್ಷಿಣ ಕನ್ನಡ ಜಿಲ್ಲೆಯವರು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕೋವಿಡ್ ಸೊಂಕು ಖಾಯಿಲೆ ಹರಡದಂತೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಆದೇಶ ಮಾಡಿ ಬಿಡುಗಡೆ ಮಾಡಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಲಾಕ್ ಡೌನ್ ಜ್ಯಾರಿಯಲ್ಲಿದರು ಕೂಡ ಅಗತ್ಯ ಸೇವೆಯಲ್ಲಿ ಸೂಚಿಸದ ವ್ಯವಹಾರದ ವ್ಯಾಪಾರವನ್ನು ಲಾಭಕ್ಕಾಗಿ ತೆರೆದು ಕೊರೋನ ಸೊಂಕು ಹರಡಲು, ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರಿರುತ್ತಾರೆ. ಆಪಾದಿತನು ಕಲಂ:269 ಐ.ಪಿ.ಸಿ ಮತ್ತು ಕಲಂ..51 (b) ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 (DM ACT) ಅನ್ವಯ ಅಪರಾಧ ಎಸಗಿದ್ದು, . ಆಪಾದಿತನ ವಿರುದ್ದ ಕಾನೂನುಕ್ರಮ ಜರುಗಿಸಿರುವುದು ಎಂಬಿತ್ಯಾದಿ.
Crime Reported in Kavoor PS
ತಾರೀಕು 09/06/2021 ರಂದು ಫಿರ್ಯಾದಿ PRATIBHA K H PSI ರವರು ಕಾವೂರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ ಕೂಳೂರು ಜಂಕ್ಷನ್ ನಿಂದ ಕಾವೂರು ಜಂಕ್ಷನ್ ಕಡೆಗೆ ಬರುತ್ತಿದ್ದಾಗ ಸಮಯ ಸುಮಾರು ಬೆಳಗ್ಗೆ 10:15 ರ ವೇಳೆಗೆ ಗಾಂಧೀನಗರದ ಮುಗ್ರೋಡಿ ಕಾಂಪ್ಲೇಕ್ಸ್ ನಲ್ಲಿರುವ ಬೆಂಗಳೂರು ಅಯ್ಯಂಗಾರ್ ಬೇಕರಿ ಎಂಬ ಹೆಸರಿನ ತಿಂಡಿತಿನಿಸುಗಳ ಅಂಗಡಿಯು ತೆರೆದುಕೊಂಡಿದ್ದು, ಅಂಗಡಿ ಒಳಗಡೆ ಆಪಾದಿತ ರಮೇಶ್ ಎಂಬವರು ನಿಗದಿತ ಸಮಯವನ್ನು ಮೀರಿ ಅಂಗಡಿಯನ್ನು ತೆರೆದು ವ್ಯಾಪಾರದಲ್ಲಿ ತೊಡಗಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಮಾರ್ಗಸೂಚಿ ಆದೇಶವನ್ನು ಪಾಲಿಸದೇ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಹಾಗೂ ಅಂಗಡಿಯೊಳಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗಿರಾಕಿಗಳೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದು, ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವವಿರುವುದನ್ನು ತಿಳಿದು ಕೂಡ ನಿರ್ಲಕ್ಷವಹಿಸಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.