Feedback / Suggestions

Crime Reported in  Barke PS

ಪಿರ್ಯಾದಿ PRIYANKA ರವರು ಯೆನಪೋಯ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 08-07-2021 ರಂದು ಮದ್ಯಾಹ್ನ ಸುಮಾರು 2.30 ಗಂಟೆಗೆ ನೆರೆಕರೆಯವರು ಫೋನ್ ಮಾಡಿ ಪಿರ್ಯಾದಿದಾರರ ತಂದೆ ರವೀಂದ್ರ (72 ವರ್ಷ) ಎಂಬವರಿಗೆ ಮನೆಯಲ್ಲಿದ್ದ ರಕ್ಷಿತ್ ನು ಹೊಡೆಯುತ್ತಿರುವುದಾಗಿ ಮಾಹಿತಿ ನೀಡಿದಂತೆ ಮನೆಗೆ ಬಂದಾಗ ತಂದೆಯವರ ಮುಖದಲ್ಲಿ, ತಲೆಯಲ್ಲಿ, ಬಾಯಿಯಲ್ಲಿ ರಕ್ತ ಸುರಿಯುತ್ತಿದ್ದು, ತಂದೆಯವರಲ್ಲಿ ವಿಚಾರಿಸಿದಾಗ  ರಕ್ಷಿತ್ ನು ಮರದ ತುಂಡಿನಿಂದ ಹೊಡೆದಿದ್ದಲ್ಲದೇ ಬ್ಯಾವರ್ಸಿ, ಮಗನೇ ಎಂಬುದಾಗಿ ಬೈದಿರುವುದಾಗಿ ತಿಳಿಸಿದ್ದು, ಕೂಡಲೇ ಸದ್ರಿಯವರನ್ನು ಚಿಕಿತ್ಸೆ ಬಗ್ಗೆ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು, ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಯಲ್ಲಿದ್ದ ಕಾರಣ ಈ ದಿನ ಬಂದು ದೂರು ನೀಡುತ್ತಿದ್ದು, ತಂದೆಯವರಿಗೆ ಗಂಭೀರ ಗಾಯಗೊಳಿಸಿ ಬೈದು ಬೆದರಿಕೆ ಹಾಕಿದ ರಕ್ಷಿತ್ ನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿರುತ್ತದೆ

Crime Reported in  Mangalore East Traffic PS        

ದಿನಾಂಕ: 08-07-2021 ರಂದು ಪಿರ್ಯಾದಿ PRAKASHರವರು ತನ್ನ ಮೋಟಾರು ಸೈಕಲ್ ನಂಬ್ರ KA-21-R-8242 ನೇದರಲ್ಲಿ ಸವಾರರಾಗಿದ್ದುಕೊಂಡು ಮಂಗಳೂರು ನಗರದ KSRTC ಕಡೆಯಿಂದ KPT ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ-01:50 ಗಂಟೆಗೆ ಬಿಜೈನ ಶೆಲ್ ಪೆಟ್ರೋಲ್ ಬಂಕ್ ಬಳಿ ತೆರೆದ ಡಿವೈಡರ್ ಸಮೀಪ ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂದೆ ಸಾಗುತ್ತಿದ್ದ KA-20-AB-1637 ನಂಬ್ರದ 407 ಲಾರಿಯನ್ನು ಅದರ ಚಾಲಕ ಉಮೇಶ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತೆರೆದ ಡಿವೈಡರ್ ನಲ್ಲಿ ಬಿಜೈ ಕಡೆಗೆ ಯೂ ಟರ್ನ್ ಮಾಡಲು ಯಾವುದೇ ಸೂಚನೆ ನೀಡದೇ ಒಮ್ಮೆಲೆ ಬಲಕ್ಕೆ ತಿರುಗಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಎಡಕಾಲಿನ ಕಿರುಬೆರಳು ಹಾಗೂ ತೊರುಬೆರಳಿಗೆ ಮೂಳೆಮುರಿತದ ಗಂಭೀರ ಗಾಯ ಹಾಗೂ ಹಣೆಯ ಎಡಹುಬ್ಬಿನ ಬಳಿ ಚರ್ಮ ಹರಿದ ರಕ್ತ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ವಿನಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ತಾದಿ.

Last Updated: 09-07-2021 07:02 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080