ಅಭಿಪ್ರಾಯ / ಸಲಹೆಗಳು

Crime Reported in  Bajpe PS

ದಿನಾಂಕ:09-08-2021 ರಂದು ಪಿರ್ಯಾದಿ PRAMOD KUMAR ದಾರರು  3 ನೇ ಸಿಪ್ಟ್ ಇನ್ ಚಾರ್ಜ ಆಗಿ  ಕರ್ತವ್ಯ ನಿರ್ವಹಿಸಿಕೊಂಡಿದ್ದ ನಿರ್ಬಂದಿತ ಪ್ರದೇಶವಾದ ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಅದಾನಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗಿನ ಆಗಮನ ಗೇಟಿನ ಒಳಗೆ ಬೆಳಿಗ್ಗೆ ಸುಮಾರು 03.30 ಗಂಟೆಗೆ ಆಪಾದಿತ ಅನಿರುದ್ದ ಎಂಬಾತನು ಅಕ್ರಮ ಪ್ರವೇಶ ಮಾಡಿರುತ್ತಾನೆ ಎಂಬಿತ್ಯಾದಿಯಾಗಿರುತ್ತದೆ.

2) ದಿನಾಂಕ 08.08.2021 ರಂದು ಫಿರ್ಯಾದಿ Ramachandra Shetty ರವರು ಮೂಳೂರು ಗ್ರಾಮದ, ಕುಕ್ಕುದಕಟ್ಟೆ ಎಂಬಲ್ಲಿ ಇರುವಾಗ ಸಂಜೆ ಸುಮಾರು 16:45 ಗಂಟೆಗೆ ಮಂಗಳೂರು ತಾಲೂಕು, ಮೂಳೂರು ಗ್ರಾಮದ, ಕುಕ್ಕುದಕಟ್ಟೆ ವೈದ್ಯನಾಥ ದ್ವಾರದ ಬಳಿ ಗುರುಪುರ ಕಡೆಯಿಂದ ಗುರುಪುರ ಹಾಲಿನ ಡೈರಿ ಕಡೆಗೆ ಹಾಲನ್ನು ತೆಗೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರ ಪರಿಚಯದ ಗುರುವಪ್ಪ ಪೂಜಾರಿ (70 ವರ್ಷ) ಎಂಬವರು ತಮ್ಮ ಬಾಬ್ತು ಸ್ಕೂಟರ್ ನಂಬ್ರ ಕೆಎ-19ಇಸಿ-4508 ನೇದರಲ್ಲಿ ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಗುರುಪುರ ಕೈಕಂಬ ಕಡೆಗೆ ಕಾರು ನಂಬ್ರ ಕೆಎ-19ಎಂವೈ-5835 ನೇಯದನ್ನು ಅದರ ಚಾಲಕ ವಿನೋದರ ಪೂಜಾರಿ ಎಂಬವರು ಮಾನವ ಜೀವಕ್ಕೆ ಹಾನಿಯುಂಟಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಗುರುವಪ್ಪ ಪೂಜಾರಿರವರ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಗುರುವಪ್ಪ ಪೂಜಾರಿರವರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಅವರ ಬಲಕಾಲಿಗೆ ಗದ್ದಕ್ಕೆ ದೇಹದ ಅಲ್ಲಲ್ಲಿ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು ಗಾಯಾಳು ಗುರುವಪ್ಪ ಪೂಜಾರಿರವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಕರೆದು ಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಗುರುವಪ್ಪ ಪೂಜಾರಿರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ” ಎಂಬಿತ್ಯಾದಿ.

Crime Reported in  Ullal PS    

ಪಿರ್ಯಾದಿ Hassainar ರವರು ತಲಪಾಡಿ ಗ್ರಾಮದ ಮೇಗಿನ ಪಂಜಾಳ ರಸ್ತೆಯ ಬದಿಯಲ್ಲಿ ಅಲ್ಪಾಲ್ ತಟ್ಟುಕಡ ಎಂಬ ಹೆಸರಿನ ತಮ್ಮ ಅಂಗಡಿಗೆ ದಿನಾಂಕ 09/08/2021 ರಂದು ಬೆಳಗ್ಗೆ ಸುಮಾರು 05-25 ಗಂಟೆ ಸಮಯಕ್ಕೆ ಮನೆಯಿಂದ ಹೊರಟು ಬರುವಾಗ ಸುಮಾರು 14700/- ರೂಪಾಯಿ ಹಣವನ್ನು ಒಂದು ಪ್ಲಾಸ್ಟೀಕ್ ಕವರ್ ನಲ್ಲಿ ಹಾಕಿ ಕೈಯಲ್ಲಿ ಹಿಡಿದುಕೊಂಡು ಅಂಗಡಿಗೆ ಬಂದು ಅಂಗಡಿಯ ಬಾಗಿಲು ತೆರೆಯುತ್ತಿದ್ದಂತೆ ಪಿರ್ಯಾದಿದಾರರ ಹಿಂಭಾಗದಿಂದ ಒಬ್ಬ ಅಪರಿಚಿತ ವ್ಯಕ್ತಿ ಬಂದು ಕುತ್ತಿಗೆಯನ್ನು ಕೈಯಿಂದ ಬಲವಾಗಿ ಒತ್ತಿ ಹಿಡಿದು ಕೈಯಲ್ಲಿದ್ದ ಹಣವಿರವ ಪ್ಲಾಸ್ಟಿಕ್ ಕವರ್ ನ್ನು ಬಲವಂತವಾಗಿ ಎಳೆದು ತೆಗೆದಾಗ, ಪಿರ್ಯಾದಿದಾರರು ಹಿಂಬದಿ ತಿರುಗಿ ನೋಡಿದಾಗ ಸುಮಾರು 2-3 ವ್ಯಕ್ತಿಗಳು ಅಲ್ಲಿದ್ದು ಪಿರ್ಯಾದಿದಾರರು ನೋವಿನಿಂದ ಕೆಳಗಡೆ ಬಿದ್ದು ಕಿರುಚಾಡುವುದನ್ನು ಕಂಡು ಆರೋಪಿಗಳು ಪಿರ್ಯಾದಿದಾರರಿಂದ ಕಿತ್ತುಕೊಂಡ ಹಣದೊಂದಿಗೆ ಅಲ್ಲಿಂದ ಪರಾರಿ ಆಗಿರುತ್ತಾರೆ  ಆರೋಪಿಗಳನ್ನು ವಿದ್ಯುತ್ ಬೆಳಕಿನ ಸಹಾಯದಿಂದ ನಾನು ಸರಿಯಾಗಿ ನೋಡಿದ್ದು ಸುಮಾರು 25 ರಿಂದ 30 ವರ್ಷದ ಒಳಗಿನ ವ್ಯಕ್ತಿಗಳಾಗಿರುತ್ತಾರೆ ಎಂಬಿತ್ಯಾದಿ.

2) ದಿನಾಂಕ. 8-8-2021 ರಂದು ಮಂಗಳೂರು ನಗರ ಅಪರಾಧ ವಿಭಾಗದ  (ಸಿಸಿಬಿ) ಪಿಎಸ್ಐ ಪ್ರದೀಪ್.ಟಿ.ಆರ್. ರವರು ಸಿಬ್ಬಂದಿಗಳ ಜೊತೆಯಲ್ಲಿ 18-45 ಗಂಟೆಯ ಸಮಯಕ್ಕೆ ಸೋಮೇಶ್ವರ ಗ್ರಾಮದ ಸೋಮೇಶ್ವರ ಬಸ್ಸ್ಟಾಂಡ್ ಬಳಿ, ತಲುಪಿದಾಗ ಅಲ್ಲಿಯೇ ರಸ್ತೆ ಬದಿಯಲ್ಲಿರುವ ಬಸ್ಸ್ಟಾಂಡ್ನಲ್ಲಿ ಆರೋಪಿಗಳಾದ 1)ಪ್ರೀತೇಶ್ @ ಪ್ರೀತು, 2)ಪ್ರೀತಮ್, ಹಾಗೂ 3)ಗಣೇಶ ಎಂಬವರುಗಳು ಕೈಯಲ್ಲಿ ಮೊಬೈಲ್ ಪೋನ್ ಹಿಡಿದುಕೊಂಡು “Starexch games” ಎಂಬ ಬೆಟ್ಟಿಂಗ್ ಆ್ಯಪ್ ಮೂಲಕ ಹಣವನ್ನು ಪಣವಾಗಿಟ್ಟುಕೊಂಡು ಎಲ್ಕೆಕೆ ಗೆ 10000 ಎನ್ಆರ್ಕೆ ಗೆ 5000 ಎಂದು ಹೇಳುತ್ತಾ ಮೊಬೈಲ್ ಪೋನ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದವರನ್ನು ಪತ್ತೆ ಮಾಡಿದ್ದು, ಆರೋಪಿಗಳು ಈ ಅಕ್ರಮ ಜೂಜಾಟವಾದ ಕ್ರಿಕೆಟ್ ಬೆಟ್ಟಿಂಗ್ ಗಾಗಿ ಉಪಯೋಗಿಸಿದ 4 ಮೊಬೈಲ್ ಪೋನ್ಗಳು, ನಗದು ಹಣ ರೂ.3600/- ಹೀಗೇ ಒಟ್ಟು ರೂ.44,600/- , ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಈ ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾದ ಆರೋಪಿಗಳ ಜೊತೆಗೆ ಇತರ ಆರೋಪಿಗಳಾದ 4)ಆನಂದ ಬೆಳಗಾಂ 5)ಚೇತನ್ ಸಾಗರ್ 6)ಅಶೋಕ ಶಿಬರಗಟ್ಟಿ 7)ಪ್ರಜ್ವಲ್ 8)ಕಿರಣ್ ಡಿ ಸೋಜ 9)ಬಸು.ಜೆ. 10)ಆಲಿ 11)ಚೆನ್ನಪ್ಪ ಗೌಡ್ರು 12)ಝುಬೀರ್ ಎಂಬವರು ಕೂಡಾ ಭಾಗಿಯಾಗಿರುವುದರಿಂದ ಸದ್ರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ವರದಿ ಮೇರೆಗೆ ದಾಖಲಾದ ಪ್ರಕರಣ ಸಾರಾಂಶ.

ಇತ್ತೀಚಿನ ನವೀಕರಣ​ : 09-08-2021 08:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080