ಅಭಿಪ್ರಾಯ / ಸಲಹೆಗಳು

Crime Reported in  Konaje PS

ಕೊಣಾಜೆ ಠಾಣೆಯ ಪಿಎಸ್ಐ Mallikarjun Biradar ರವರು ಠಾಣಾ ಸಿಬ್ಬಂದಿಗಳೊಂದಿಗೆ ಹಾಗೂ ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಬೆಳ್ಮ ಗ್ರಾಮ ದೇರಳಕಟ್ಟೆ ಎಂಬಲ್ಲಿ ವಾಹನಗಳನ್ನು ತಪಾಸಣೆ ಮಾಡಿಕೊಂಡಿರುವಾಗ ದಿನಾಂಕ 07.05.2021 14.15 ಗಂಟೆಗೆ ತೊಕ್ಕೊಟ್ಟು ಕಡೆಯಿಂದ ನಾಟೆಕಲ್ ಕಡೆಗೆ ಸ್ಕೂಟರ್ ಒಂದು ಬಂದಿದ್ದು ನಿಲ್ಲಿಸಲು ಸೂಚಿಸಿದಾಗ ಸವಾರನು ನಿಲ್ಲಿಸದೇ ತಿರುಗಿ ಹೋಗಲು ಪ್ರಯತ್ನಿಸಿದ್ದು, ಆತನನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ವಿಚಾರಿಸಿದಲ್ಲಿ ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡಲು ಹೋಗುತ್ತಿದ್ದುದಾಗಿ ತಡವರಿಸುತ್ತಾ ನುಡಿದಿದ್ದು, ವಿಚಾರಸಿಲಾಗಿ ಆರೋಪಿ ಮಹಮ್ಮದ್ ಹನೀಫ್ @ ನಾಟೆಕಲ್ ಹನೀಫ್ ಪ್ರಾಯ: 33 ವರ್ಷ ತಂದೆ: ದಿ. ಎಮ್ ಬಾವಾ ವಾಸ: ಫಾತಿಮಾ ಕಾಂಪ್ಲೆಕ್ಸ್ ಹಿಂದುಗಡೆ, ನಾಟೆಕಲ್ ಜಂಕ್ಷನ್, ಮಂಜನಾಡಿ ಗ್ರಾಮ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದ್ದು ನಂತರ  ಆತನ  ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದ ಸುಮಾರು 1ಕೆ.ಜಿ 215 ಗ್ರಾಂ ಪ್ಲಾಸ್ಟಿಕ್ ಸಮೇತ ಗಾಂಜಾವನ್ನು ಹಾಗೂ ರೆಡ್ ಮಿ ಕಂಪನಿಯ ಮೊಬೈಲ್ ಫೋನ್ ನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ  ಕೆ ಎ 19 ಇ ವೈ 9001 ಸ್ಕೂಟರ್ ನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲಾಗಿರುತ್ತದೆ. ಸ್ವಾಧೀನಕ್ಕೆ ಪಡೆದುಕೊಳ್ಳಲಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 47,000/- ರೂ ಆಗಬಹುದು ಎಂಬಿತ್ಯಾದಿ .

Crime Reported in  Mangalore West Traffic PS     

ದಿನಾಂಕ 10-05-2021 ರಂದು ಬೆಳಿಗ್ಗೆ ಸುಮಾರು 8.01 ಗಂಟೆಗೆ ಪಿರ್ಯಾದಿ Ravi ರವರಿಗೆ  ಪರಿಚಯಸ್ಥರಾದ ಶ್ರೀ ಪಿ.ಎಸ್ ಅಶ್ವಥ್ ನಾರಾಯಣ ಪ್ರಾಯ 46 ರವರು ಅವರ ಬಾಬ್ತು KA-19-D-8012ನೇ ಕಾರನ್ನು ಅವರ ಮನೆಯಾದ ಬಿಜೈ ಕಾಪಿಕಾಡ್ ಕುದ್ಮಲ್ ಗಾರ್ಡನ್ ಕಡೆಯಿಂದ ಹ್ಯಾಟ್ ಹಿಲ್ ಕಡೆಗೆ ಚಲಾಯಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹ್ಯಾಟ್ ಹಿಲ್ ಬ್ಯಾರಿಸ್ ಶಾಲೆ ಬಳಿ ರಸ್ತೆಯ ಬದಿಯಲ್ಲಿರುವ ಎರಡು ಆವರಣದ ಗೋಡೆಗೆ ಕಾರು ಡಿಕ್ಕಿಯಾಗಿ ರಸ್ತೆಯ ಮದ್ಯದಲ್ಲಿ ನಿಂತಿದ್ದು ಶ್ರೀ ಅಶ್ವತ್ ನಾರಾಯಣರವರು ಬಾಯಲ್ಲಿ ರಕ್ತವನ್ನು ಕಾರುತ್ತಿದ್ದು ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರು ಅಶ್ವತ್ ನಾರಾಯಣರವರನ್ನು ನಗರದ ಬರ್ಕೆ ಪೊಲೀಸ್ ಠಾಣೆಯ ಹೊಯ್ಸಳ ವಾಹನದಲ್ಲಿ ಉಳ್ಳಾಲ ಜನರ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಅಶ್ವತ್ ನಾರಾಯಣ ರವರು ಈ ದಿನ ಬೆಳಿಗ್ಗೆ 8.30 ಗಂಟೆಗೆ ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ ಎಂಬಿತ್ಯಾದಿ.

Crime Reported in  Kavoor PS              

ತಾರೀಕು 10/05/2021 ರಂದು ಫಿರ್ಯಾದಿ MOHANDAS KOTIAN ರವರು ಠಾಣಾ ವ್ಯಾಪ್ತಿಯ ಕೂಳೂರು ಜಂಕ್ಷನ್ ಬಳಿ ಲಾಕ್ ಡೌನ್ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಾ ಕೂಳೂರು ಜಂಕ್ಷನ್ ವಠಾರದಲ್ಲಿ ಸಂಚರಿಸಿಕೊಂಡಿರುವ ಸಮಯ ಸುಮಾರು 09:00 ರ ವೇಳೆಗೆ ಕೂಳೂರಿನಲ್ಲಿರುವ ಮಂಗಳೂರು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಮಹಾಲಸ ಜನರಲ್ ಸ್ಟೋರ್ ಎಂಬ ಹೆಸರಿನ ದಿನಸಿ ಸಾಮಗ್ರಿ ಅಂಗಡಿಯ ಬಳಿ ಗಿರಾಕಿಗಳು ನಿಂತುಕೊಂಡಿರುವುದನ್ನು ನೋಡಿ, ನಂತರ ಹತ್ತಿರ ಹೋಗಿ ನೋಡಿದಾಗ ಅಂಗಡಿಯ ಒಳಗಡೆ ಆಪಾದಿತ ಮಂಜುನಾಥ ಪೈ ಎಂಬವರು ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ, ಗಿರಾಕಿಗಳೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವ್ಯಾಪಾರದಲ್ಲಿ ತೊಡಗಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಮಾರ್ಗಸೂಚಿ ಆದೇಶವನ್ನು ಪಾಲಿಸದೇ ಉಲ್ಲಂಘಿಸಿ ತನ್ನ ಅಂಗಡಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವವಿರುವುದನ್ನು ತಿಳಿದು ಕೂಡ ನಿರ್ಲಕ್ಷ್ಯ ವಹಿಸಿರುವುದರಿಂದ ಇವರ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 Crime Reported in  Mangalore South PS

ದಿನಾಂಕ 10-05-2021 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿಎಸ್ಐ ಶೀತಲ್ ಅಲಗೂರುರವರು ಠಾಣಾ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ  ಸುಮಾರು 09-30  ಗಂಟೆಗೆ ಮಂಗಳಾದೇವಿ ದೇವಸ್ಥಾನದ ಬಳಿ ““ಶ್ರೀ ಮಂಗಳಾದೇವಿ ಜನರಲ್ ಸ್ಟೊರ್” ಎಂಬ ದಿನಸಿ ಅಂಗಡಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಿದ ಸಮಯ ಮುಗಿದ ನಂತರವು ಅಂಗಡಿಯ ಮಾಲಕ ತೆರೆದಿದ್ದು, ಅಂಗಡಿಯ ಮುಂಭಾಗದಲ್ಲಿ ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗುಂಪು ಸೇರಿಸಿಕೊಂಡು, ಕೋವಿಡ್-19 ಸಾಂಕ್ರಾಮಿಕ  ರೋಗ  ಹರಡುವಿಕೆಯನ್ನು ತಡೆಗಟ್ಟುವಿಕೆ ಬಗ್ಗೆ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಆದೇಶಗಳನ್ನು ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿರುತ್ತಾರೆ. ಸದ್ರಿ ಅಂಗಡಿಯ ಮಾಲಕನ ವಿರುದ್ದ  ಕಲಂ: 4 (2) (A), 5 (1), (4) ಕರ್ನಾಟಕ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆ 2020 ಮತ್ತು ಕಲಂ 269 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ 

 Crime Reported in  Ullal PS

1) ಫಿರ್ಯಾದಿದಾರರು ಯೆನಪೋಯ ದೇರಳಕಟ್ಟೆ ಅಸ್ಪತ್ರೆಯಲ್ಲಿ M.N.O.ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 29-04-2021 ರಂದು ರಾತ್ರಿ ಕರ್ತವ್ಯ ಇದ್ದುದರಿಂದ ಫಿರ್ಯಾದಿದಾರರ ಕೆಎ 19 ಇಎಲ್ 3462 ಮೋಟಾರ್ ಸೈಕಲ್ ನೇದನ್ನು ಸಂಜೆ 17-45 ಗಂಟೆಗೆ ಯೆನಪೋಯ ಅಸ್ಪತ್ರೆ ಬಳಿ ಯಲ್ಲಿ ಪಾರ್ಕ್ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದರು.  ದಿನಾಂಕ: 30-04-2021 ರಂದು ಬೆಳಿಗ್ಗೆ 08-00 ಗಂಟೆಗೆ ಫಿರ್ಯಾದಿದಾರರು ಕರ್ತವ್ಯ ಮುಗಿಸಿ, ಮನೆಗೆ ಹೋಗಲು ಮೋಟಾರ್ ಸೈಕಲ್ ಪಾರ್ಕ್  ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ಸ್ಥಳದಲ್ಲಿ ಬೈಕ್ ಇರದೇ ಇದ್ದು, ಈ ಬಗ್ಗೆ ಸುತ್ತಮುತ್ತಲಿನಲ್ಲಿ ಪರಿಚಯಸ್ಥರಲ್ಲಿ ವಿಚಾರಿಸಿದ್ದು, ಬೈಕ್ ಪತ್ತೆಯಾಗದೇ ಇದ್ದು, ಯಾರೋ ಕಳ್ಳರು ಫಿರ್ಯಾದಿದಾರರ ಮೋಟಾರ್ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದು, ಇದನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಫಿರ್ಯಾದಿ.

2) ದಿನಾಂಕ: 10-05-2021 ರಂದು ಮಂಗಳೂರು ತಾಲೂಕು ತಲಪಾಡಿ ಗ್ರಾಮದ ಕೆ3.ಸಿ. ರೋಡ್ ಜಂಕ್ಷನ್ ಪ್ರದೇಶದಲ್ಲಿರುವ ಐ.ಬಿ ಕಲೆಕ್ಷನ್ಸ್ ಜಂಟ್ಸ್, ಕಿಡ್ಸ್, ಮತ್ತು ಲೇಡಿಸ್ ಫ್ಯಾಶನ್ ವೇರ್ ಎಂಬ ನಾಮಫಲಕ ಇರುವ ಬಟ್ಟೆ ಬರೆಗಳ ಮಾರಾಟದ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದ  ಐ.ಬಿ ಕಲೆಕ್ಷನ್ಸ್ ಜಂಟ್ಸ್, ಕಿಡ್ಸ್, ಮತ್ತು ಲೇಡಿಸ್ ಫ್ಯಾಶನ್ ವೇರ್ ಅಂಗಡಿ ಮಾಲಿಕ ಹಫೀಝ್ ಎಂಬಾತನು ದೇಶಾದ್ಯಂತ ಹರಡಿರುವ ಹಾಗೂ ಮಾನವ ಜೀವಕ್ಕೆ ಅಪಾಯವಾಗುವ ಕೋವಿಡ್ 19 ಕೋರನಾ ವೈರಸ್ ಸಾಂಕ್ರಾಮಿಕ  ರೋಗದ ಸೋಂಕು ಹರಡದಂತೆ ಅದನ್ನು  ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಿರುವ ಸರಕಾರದ ಆದೇಶವನ್ನು ಉಲ್ಲಂಘಿಸಿರುವುದರಿಂದ ಈತನ ವಿರುದ್ದ ದಾಖಲಿಸಿದ ಪ್ರಕರಣದ ಸಾರಾಂಶ

 Crime Reported in  Surathkal PS IPC 1860 (U/s-384,387)

ಪಿರ್ಯಾದಿ Babu Devadiga (64) ದಾರರ ಮಗ ಭರತ್ ರಾಜ್ ಎಂಬಾತನು ಕೆಲವು  ಸಮಯದ ಹಿಂದೆ ಅವರ ಮನೆಯ ಪಕ್ಕದ  ಬೈಲಗುತ್ತು ಎಂಬಲ್ಲಿಗೆ  ಮೇಯಲು ಕಟ್ಟಿದ ದನವನ್ನು ವಾಪಸ್ಸು ಕರೆದುಕೊಂಡು ಬರುವ ಸಮಯದಲ್ಲಿ ಮಧ್ಯಾಹ್ನ ಸಮಯ ಸುಮಾರು 12.30 ಗಂಟೆಗೆ ಪಿರ್ಯಾದಿದಾರರ ಮಗ ಸಿಗರೇಟ್ ಎಳೆಯುತ್ತಿರುವ ಸಮಯ ಆರೋಪಿ ರಂಜಿತ್ ಆತನ ಮೊಬೈಲಿನಲ್ಲಿ ಸೀಗರೇಟ್ ಎಳೆಯುವುದನ್ನು ವಿಡಿಯೋ ಮಾಡಿರುವುದಾಗಿಯೂ, ಸದ್ರಿ ವಿಡಿಯೋವನ್ನು ವೈರಲ್ ಮಾಡುವುದಾಗಿಯೂ ಬೆದರಿಸಿ  ಹಣ ಕೊಡು ವಂತೆ ಒತ್ತಡ ಹಾಕಿದ ಪರಿಣಾಮ  ಪಿರ್ಯಾದಿದಾರರ ಮಗ ರಂಜಿತನಿಗೆ ಆತನ 1/2  ಪವನ್ ತೂಕದ ಉಂಗುರ,  1 ಪವನ್ ತೂಕದ ಬ್ರಾಸ್ ಲೈಟ್, ಮತ್ತು ಪಿರ್ಯಾದಿದಾರರ  ಹೆಂಡತಿಯ 2 1/2 ಪವನ್ ತೂಕದ ಹವಳದ ಸರ  ಹಾಗೂ 4 ಪವನ್ ತೂಕದ ಕರಿಮಣಿ ಸರವನ್ನು ಕೊಟ್ಟಿರುತ್ತಾನೆ. ತದ ನಂತರ ಕೂಡಾ ರಂಜಿತನು ಇನ್ನು ಕೂಡಾ ಚಿನ್ನದ ಆಭರಣವನ್ನು ತಂದು ಕೊಡುವಂತೆಯೂ, ಇಲ್ಲದಿದ್ದರೆ ವಿಡಿಯೋವನ್ನು ವೈರಲ್ ಮಾಡುತ್ತೇನೆಂದು ಬೆದರಿಕೆ ಹಾಕಿದ ಕಾರಣ ಪಿರ್ಯಾದಿದಾರರ ಮಗ  ದಿನಾಂಕ: 25-04-2021 ರಂದು ಬೆಳಿಗ್ಗೆ 8.00 ಗಂಟೆಗೆ ಮಧ್ಯ ಖಡ್ಗೇಶ್ವರಿ ಹಾಲ್ ನ ಬಳಿಯಲ್ಲಿ ರಂಜಿತನಿಗೆ ಮನೆಯಲ್ಲಿಟ್ಟಿದ್ದ ತನ್ನ1 1/2 ಪವನ್ ತೂಕದ ಚೈನ್, ತನ್ನ ಮಗನ  1/2 ಪವನ್ ತೂಕದ ಚೈನ್ ನನ್ನು ಕೊಟ್ಟಿರುವುದಾಗಿ  ಹಾಗೂ ಚಿನ್ನದ ಒಡವೆಗಳ ಒಟ್ಟು ಅಂದಾಜು ಮೌಲ್ಯ 3 ಲಕ್ಷ ರೂಪಾಯಿ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 10-05-2021 07:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080