ಅಭಿಪ್ರಾಯ / ಸಲಹೆಗಳು

Crime Reported in Cyber Crime PS

ಪಿರ್ಯಾದಿದಾರರು ಮಂಗಳೂರಿನ ಉರ್ವ ಮಾರ್ಕೆಟ್ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು ಡೆಬಿಟ್ ಕಾರ್ಡ್ನ್ನು ಕೂಡ ಹೊಂದಿರುವುದಾಗಿದೆ. ದಿನಾಂಕ: 24-05-2021 ಬೆಳಿಗ್ಗೆ 11.00 ಗಂಟೆ ಸಮಯಕ್ಕೆ ಯಾರೋ ಅಪರಿಚಿತ ವ್ಯಕ್ತಿಯೊಬ್ಬರು ಪಿರ್ಯಾದಿದಾರರಿಗೆ ಕರೆ ಮಾಡಿ ಕೆನರಾ ಬ್ಯಾಂಕ್ ಎ.ಟಿ.ಎಂ ಕಾರ್ಡ್ ಬ್ಲಾಕ್ ಆಗಿರುತ್ತದೆ ಎಂಬುದಾಗಿಯೂ ತಾನು ಕೆನರಾ ಬ್ಯಾಂಕ್ ಬೆಂಗಳೂರಿನಿಂದ ಮಾತನಾಡುವುದಾಗಿ ತಿಳಿಸಿ ಬ್ಯಾಂಕ್ ಟೈ ಅಪ್ ಆಗಿರುವುದರಿಂದ ಬ್ಯಾಂಕ್ ವಿವರವನ್ನು ಒದಗಿಸುವಂತೆ ಹೇಳಿ  ಪಿರ್ಯಾದಿದಾರರಿಂದ ಬ್ಯಾಂಕ್ ವಿವರ ಹಾಗೂ ಒ.ಟಿ.ಪಿ ವಿವರವನ್ನು ಪಡಕೊಂಡು ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂ.55,906/- ನ್ನು  ತನ್ನ ಖಾತೆಗೆ ವರ್ಗಾಯಿಸಿ ಮೋಸ ಮಾಡಿರುತ್ತಾನೆ ಎಂಬಿತ್ಯಾದಿ.

2) ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯ ಕೇಂದ್ರ ಸರ್ಕಾರವು ಕಾಣೆಯಾದ ಮತ್ತು ಶೋಷಿತ ಮಕ್ಕಳ ಕೇಂದ್ರವನ್ನು (National Centre for Missing and Exploited Children)  ದಿನಾಂಕ: 26-04-2019 ರಂದು ಸ್ಥಾಪಿಸಿರುತ್ತದೆ. ಶೋಷಿತ ಮಕ್ಕಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ Cyber Tip Line ರಿಪೋರ್ಟ್ ಸಿಡಿಯನ್ನು  NCRB ರವರಿಂದ ಬೆಂಗಳೂರು ಸಿಐಡಿ ಯವರು ಅಂಚೆ ಮೂಲಕ ಸ್ವೀಕರಿಸಿಕೊಂಡು ಸದ್ರಿ ಟಿಪ್ ಲೈನ್ ನಲ್ಲಿ ನೋಂದಣಿಯಾಗಿರುವ ದೂರುಗಳನ್ನು ಪರಿಶೀಲಿಸಿ ವಿಚಾರಣೆ ಕೈಗೊಂಡು ದೂರನ್ನು ಸಂಬಂಧಪಟ್ಟ ಸರಹದ್ದಿನ ಪೊಲೀಸು ಅಧಿಕಾರಿಗಳು ದಾಖಲಿಸಿಕೊಂಡು ತನಿಖೆ /ವಿಚಾರಣೆ ಕೈಗೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಅದರಂತೆ ಮಂಗಳೂರಿಗೆ ಸಂಬಂದಿಸಿದ ದೂರನ್ನು   ಸೈಬರ್ ಕ್ರೈಂ ವಿಭಾಗ , ಸಿಐಡಿ ಬೆಂಗಳೂರುರವರು ಸ್ವೀಕರಿಸಿ  ದೂರಿನ ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡು ಮುಂದಿನ ತನಿಖೆ ಬಗ್ಗೆ  ಸೈಬರ್ ಕ್ರೈಂ ಪೊಲೀಸ್ ಠಾಣೆ ಮಂಗಳೂರು ನಗರ ಕ್ಕೆ ಕಳುಹಿಸಿಕೊಟ್ಟಿದ್ದನ್ನು  ದಿನಾಂಕ: 27/04/2021 ರಂದು ಸ್ವೀಕರಿಸಿ  ವರದಿ ಹಾಗೂ ಸಿಡಿಯನ್ನು ಪರಿಶೀಲಿಸಲಾಗಿ  24/06/2020 ರಂದು, ಮಗುವಿನ ಅಶ್ಲೀಲತೆಯ ವೀಡಿಯೋವನ್ನು Prasanth Pachhu (Screen Name; prasanth.pachhu.3) ಎಂಬುವರು ಡೌನ್ ಲೋಡ್ ಮಾಡಿ  Devi Ka Nair ಎಂಬುವವರಿಗೆ ಫೇಸ್ ಬುಕ್ ಮೆಸೆಂಜರ್ ನಲ್ಲಿ  ಚಾಟ್ ಮಾಡಿರುವ  ಹಾಗೂ ಅಪ್ ಲೋಡ್ ಮಾಡಿರುವ ಮಾಹಿತಿ ಇರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಅಶ್ಲೀಲತೆ ವೀಡಿಯೋ, ಆರೋಪಿಯ ಮೊಬೈಲ್ ನಂಬರ್, ಇಮೇಲ್ ಐಡಿ ಇತರೆ ಒಳಗೊಂಡಿರುವುದು ಕಂಡುಬರುತ್ತದೆ.  ಸದ್ರಿ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಿ ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿಯ ವಿರುದ್ದ ಕಲಂ:67(ಬಿ) ಐಟಿ ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

3) ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯ ಕೇಂದ್ರ ಸರ್ಕಾರವು ಕಾಣೆಯಾದ ಮತ್ತು ಶೋಷಿತ ಮಕ್ಕಳ ಕೇಂದ್ರವನ್ನು (National Centre for Missing and Exploited Children)  ದಿನಾಂಕ: 26-04-2019 ರಂದು ಸ್ಥಾಪಿಸಿರುತ್ತದೆ. ಶೋಷಿತ ಮಕ್ಕಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ Cyber Tip Line ರಿಪೋರ್ಟ್ ಸಿಡಿಯನ್ನು  NCRB ರವರಿಂದ ಬೆಂಗಳೂರು ಸಿಐಡಿ ಯವರು ಅಂಚೆ ಮೂಲಕ ಸ್ವೀಕರಿಸಿಕೊಂಡು ಸದ್ರಿ ಟಿಪ್ ಲೈನ್ ನಲ್ಲಿ ನೋಂದಣಿಯಾಗಿರುವ ದೂರುಗಳನ್ನು ಪರಿಶೀಲಿಸಿ ವಿಚಾರಣೆ ಕೈಗೊಂಡು ದೂರನ್ನು ಸಂಬಂಧಪಟ್ಟ ಸರಹದ್ದಿನ ಪೊಲೀಸು ಅಧಿಕಾರಿಗಳು ದಾಖಲಿಸಿಕೊಂಡು ತನಿಖೆ /ವಿಚಾರಣೆ ಕೈಗೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಅದರಂತೆ Cyber Tip Line ರಲ್ಲಿ ಮಂಗಳೂರಿಗೆ ಸಂಬಂದಿಸಿದ ದೂರನ್ನು ಸೈಬರ್ ಕ್ರೈಂ ವಿಭಾಗ , ಸಿಐಡಿ ಬೆಂಗಳೂರುರವರು ಸ್ವೀಕರಿಸಿ  ದೂರಿನ ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡು ಮುಂದಿನ ತನಿಖೆ ಬಗ್ಗೆ  ಸೈಬರ್ ಕ್ರೈಂ ಪೊಲೀಸ್ ಠಾಣೆ ಮಂಗಳೂರು ನಗರ ಕ್ಕೆ ಕಳುಹಿಸಿಕೊಟ್ಟಿದ್ದನ್ನು  ದಿನಾಂಕ: 11/05/2021 ರಂದು ಸ್ವೀಕರಿಸಿ  ವರದಿ ಹಾಗೂ ಸಿಡಿಯನ್ನು ಪರಿಶೀಲಿಸಲಾಗಿ  17/05/2020 ರಂದು, ಮಗುವಿನ ಅಶ್ಲೀಲತೆಯ ವೀಡಿಯೋವನ್ನು  Nagesh Suvarna ಎಂಬುವವರಿಗೆ ಫೇಸ್ ಬುಕ್ ಮೆಸೆಂಜರ್ ನಲ್ಲಿ  ಚಾಟ್ ಮಾಡಿರುವ  ಹಾಗೂ ಅಪ್ ಲೋಡ್ ಮಾಡಿರುವ ಮಾಹಿತಿ ಒಳಗೊಂಡಿರುವುದು ಕಂಡುಬರುತ್ತದೆ.  ಅದರಂತೆ ಆರೋಪಿ ವಿರುದ್ದ ಕಲಂ:67(ಬಿ) ಐಟಿ ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

4) ಪಿರ್ಯಾದಿದಾರರು ಐಸಿಐಸಿಐ ಬ್ಯಾಂಕ್ ಚಿಲಿಂಬಿ  ಮಂಗಳೂರು ಇಲ್ಲಿ  ಉಳಿತಾಯ ಖಾತೆ ಹೊಂದಿದ್ದು.  ಪಿರ್ಯಾದಿದಾರರು ಉಪಯೋಗಿಸುತ್ತಿದ್ದ ಮೊಬೈಲ್ ಸಂಖ್ಯೆಯ ಸಿಮ್ ಕಾಲಾವಕಾಶ ನವೀಕರಣ  ಮಾಡುವ ಬಗ್ಗೆ ಕಸ್ಟಮರ್ ಕೇರ್ ನಿಂದ ಸಂದೇಶಗಳು ಬರುತ್ತಿದ್ದು, ಈ ಬಗ್ಗೆ ಸದ್ರಿಯವರು ದಿನಾಂಕ: 09.06.2021ರಂದು ಸುಮಾರು 15.00 ಗಂಟೆಗೆ ಕಸ್ಟಮರ್ ಕೇರ್ ಎಂದು ತಿಳಿಸಲಾದ  ಮೊಬೈಲ್ ನಂಬರ್ ಗೆ ಸಂಪರ್ಕಿಸಿದಾಗ ಯಾರೋ ಅಪರಿಚಿತರು 4068153200ನೇ ನಂಬರ್ ನಿಂದ  ಕರೆ ಮಾಡಿ ತಾನು ಬಿಎಸ್ ಎನ್ ಎಲ್ ಕಸ್ಟಮರ್ ಕೇರ್ ನಿಂದ ಕರೆ ಮಾಡುವುದಾಗಿ ತಿಳಿಸಿ, ರೀಚಾರ್ಜ್ ಮಾಡಲು ಪಿರ್ಯಾದಿದಾರರಿಗೆ  ಐಸಿಐಸಿಐ ನ ನೆಟ್ ಬ್ಯಾಂಕಿಂಗ್ ಆಪ್ ಡೌನ್ ಲೋಡ್ ಮಾಡಲು ತಿಳಿಸಿ,  ಸದ್ರಿ ಯವರು  ಡೌನ್ ಲೋಡ್ ಮಾಡಿಕೊಂಡಿದ್ದು, ಬಳಿಕ  ANY DESK APP  ಆಪ್ ಡೌನ್ ಲೋಡ್ ಮಾಡಲು ತಿಳಿಸಿ,  ಸದ್ರಿ  ಪಿರ್ಯಾದಿದಾರರು ಡೌನ್ ಲೋಡ್ ಮಾಡಿಕೊಂಡಿದ್ದು, ಸದ್ರಿ ಫಿರ್ಯಾದಿದಾರರ ಖಾತೆಯ ನಿಯಂತ್ರಣ ಪಡೆದುಕೊಂಡು  ಫಿರ್ಯಾದಿದಾರರ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ. 1,27,017/- ಹಣವನ್ನು  ಅನಧಿಕೃತವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಿ ಮೋಸ ಮಾಡಿರುತ್ತಾನೆ ಎಂಬಿತ್ಯಾದಿ

5) ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯ ಕೇಂದ್ರ ಸರ್ಕಾರವು ಕಾಣೆಯಾದ ಮತ್ತು ಶೋಷಿತ ಮಕ್ಕಳ ಕೇಂದ್ರವನ್ನು (National Centre for Missing and Exploited Children)  ದಿನಾಂಕ: 26-04-2019 ರಂದು ಸ್ಥಾಪಿಸಿರುತ್ತದೆ. ಶೋಷಿತ ಮಕ್ಕಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ Cyber Tip Line ರಿಪೋರ್ಟ್ ಸಿಡಿಯನ್ನು  NCRB ರವರಿಂದ ಬೆಂಗಳೂರು ಸಿಐಡಿ ಯವರು ಅಂಚೆ ಮೂಲಕ ಸ್ವೀಕರಿಸಿಕೊಂಡು ಸದ್ರಿ ಟಿಪ್ ಲೈನ್ ನಲ್ಲಿ ನೋಂದಣಿಯಾಗಿರುವ ದೂರುಗಳನ್ನು ಪರಿಶೀಲಿಸಿ ವಿಚಾರಣೆ ಕೈಗೊಂಡು ದೂರನ್ನು ಸಂಬಂಧಪಟ್ಟ ಸರಹದ್ದಿನ ಪೊಲೀಸು ಅಧಿಕಾರಿಗಳು ದಾಖಲಿಸಿಕೊಂಡು ತನಿಖೆ /ವಿಚಾರಣೆ ಕೈಗೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಅದರಂತೆ ಮಂಗಳೂರಿಗೆ ಸಂಬಂದಿಸಿದ ದೂರನ್ನು   ಸೈಬರ್ ಕ್ರೈಂ ವಿಭಾಗ , ಸಿಐಡಿ ಬೆಂಗಳೂರುರವರು ಸ್ವೀಕರಿಸಿ  ದೂರಿನ ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡು ಮುಂದಿನ ತನಿಖೆ ಬಗ್ಗೆ   ಸೈಬರ್ ಕ್ರೈಂ ಪೊಲೀಸ್ ಠಾಣೆ ಮಂಗಳೂರು ನಗರ ಕ್ಕೆ ಕಳುಹಿಸಿಕೊಟ್ಟಿದ್ದನ್ನು  ದಿನಾಂಕ: 11/05/2021 ರಂದು ಸ್ವೀಕರಿಸಿ  ವರದಿ ಹಾಗೂ ಸಿಡಿಯನ್ನು ಪರಿಶೀಲಿಸಲಾಗಿ  25/06/2020 ರಂದು, ಮಗುವಿನ ಅಶ್ಲೀಲತೆಯ ವೀಡಿಯೋವನ್ನು Prajwal Kotian (Screen Name; pajju_birva) ಎಂಬುವರು ಡೌನ್ ಲೋಡ್ ಮಾಡಿ  KULAL ಎಂಬುವವರಿಗೆ ಇನ್ಸ್ಟಾಗ್ರಾಮ್ ನಲ್ಲಿ  ಚಾಟ್ ಮಾಡಿರುವ  ಹಾಗೂ ಅಪ್ ಲೋಡ್ ಮಾಡಿರುವ ಮಾಹಿತಿ ಇರುತ್ತದೆ.  ಸದ್ರಿ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಿ ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿಯ ವಿರುದ್ದ ಕಲಂ:67(ಬಿ) ಐಟಿ ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported in Panambur PS

ಪಿರ್ಯಾದಿ IBRAHIM SIRAZ ರವರು ಬೈಕಂಪಾಡಿಯಲ್ಲಿರುವ ಎ.ಪಿ.ಎಂ.ಸಿ.ಯಲ್ಲಿ  ತರಕಾರಿ ರಖಂ ವ್ಯಾಪಾರ ಮಾಡಿಕೊಂಡಿದ್ದು, ತರಕಾರಿಗಳೊಂದಿಗೆ ಬೆಳ್ಳುಳ್ಳಿ ಯ ವ್ಯಾಪಾರವನ್ನು ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ಗೋಡಾಮಿನಲ್ಲಿ ಇಟ್ಟಿದ್ದ ಬೆಳ್ಳುಳ್ಳಿ ಯ ಕೆಲವು ಬಾಕ್ಸ್ ಹಾಗೂ ಚೀಲಗಳು ಇಟ್ಟ ಸ್ಥಳದಿಂದ ಕಡಿಮೆಯಾಗುತ್ತಿದ್ದು, ದಿನಾಂಕ 09-06-2021 ರಂದು ಬೆಳಿಗ್ಗೆ ಸುಮಾರು 4 ಗಂಟೆಗೆ ನೋಡಿದಾಗ ಗೋಡಾನಿನ ಟರ್ಪಾಲು ಸರಿಸಿರುವುದು ಕಂಡುಬಂದಿರುತ್ತದೆ. ನಂತರ ಒಳಗೆ ಹೋಗಿ ನೋಡಿದಾಗ ಗೋಡಾನ್ ನಲ್ಲಿ ಇಟ್ಟು ಹೋಗಿದ್ದ ಬೆಳ್ಳುಳ್ಳಿ ಚೀಲಗಳು ಕಡಿಮೆ ಇರುವುದು ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲಿಸಿದಾಗ ದಿನಾಂಕ 01-06-2021 ರಿಂದ ಈ ದಿನ ದಿನಾಂಕ 09-06-2021 ರ ಬೆಳಿಗ್ಗೆ 4 -00 ಗಂಟೆ ಮಧ್ಯದಲ್ಲಿ ಒಟ್ಟು 11 ಬಾಕ್ಸ್ ಬೆಳ್ಳುಳ್ಳಿ ಬಾಕ್ಸ್ ಮತ್ತು ಚೀಲಗಳನ್ನು ಗೋಡಾನ್ ಒಳಗಿನಿಂದ ಗೋಡಾನಿನ ಬಾಗಿಲಿನ ಟರ್ಪಾಲನ್ನು ಸರಿಸಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 45,000/- ಆಗಬಹುದು. ಕಳವಾದ ಸೊತ್ತು ಮತ್ತು ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂಬಿತ್ಯಾದಿ ಸಾರಾಂಶವಾಗಿರುತ್ತದೆ

Crime Reported in Mangalore South PS

 ಪ್ರಕರಣದ ಪಿರ್ಯಾದಿ Bhola Vishwakarma ರವರು ಹಾಗೂ ಮೃತ ಚಮನ್ ಸಾಬ್ (31) ಮಂಗಳೂರು ನಗರದ ಮಂಗಳೂರು ಜೆಪ್ಪಿನ ಮೊಗರು ಮಹಾಕಾಳಿ ಪಡ್ಪುವಿನ ಏರಾಡಿ ಎಂಬಲ್ಲಿ ನಿರ್ಮಾಣವಾಗುತ್ತಿರುವ 4 ಮಹಡಿಯ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿರುವುದಾಗಿದೆ. ಸದ್ರಿ ನಿರ್ಮಾಣ ಹಂತದ ಕಟ್ಟಡದ 3 ನೇ ಮಹಡಿಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಸೊಂಟಕ್ಕೆ ಬೆಲ್ಟ್, ತಲೆಗೆ ಹೆಲ್ಮೆಟ್ ಹಾಗೂ ಕೆಲಸ ಮಾಡುವ ಓಪನ್ ಫೋರ್ಚ್ ಏರಿಯಾದಲ್ಲಿ  ನೆಟ್ ಗಳನ್ನು ಅಳವಡಿಸದೇ ಹಾಗೂ ಕೆಲಸಗಾರರ ಸುರಕ್ಷತೆಯ ಬಗ್ಗೆ ಯಾವುದೇ ಸೂಕ್ತ ಕ್ರಮಗಳನ್ನು ವಹಿಸದೇ, ಕೆಲಸ ಮಾಡಿಸಿದರೆ ಕೆಲಸ ಮಾಡುವ ಕೆಲಸಗಾರರು ಆಯತಪ್ಪಿ ಕೆಳಗೆ ಬಿದ್ದಾಗ ಮರಣ ಸಂಭವಿಸಬಹುದು ಎಂಬುದಾಗಿ ಕಟ್ಟಡದ ಕೆಲಸದ ಮೇಲ್ವಿಚಾರಣೆಯನ್ನು ನೋಡುತ್ತಿದ್ದ ಸೈದುದ್ದೀನ್, ಸೈಟ್ ಇಂಜಿನಿಯರ್ ಆದ ಮೊಹಮ್ಮದ್ ಅರಾಫತ್ ಹಾಗೂ ವೆಲ್ಡಿಂಗ್ ನ ಸೂಪರ್ ವೈಸರ್ ಆದ ಫೈಜಲ್ ರವರಿಗೆ ತಿಳಿವಳಿಕೆಯಿದ್ದರೂ, ಅವರುಗಳು, ಚಮನ್ ಸಾಬ್ ರವರು ದಿನಾಂಕ : 09-06-2021 ರಂದು ಕಟ್ಟಡದ ಮಧ್ಯದಲ್ಲಿರುವ ಓಪನ್ ಫೋರ್ಚ್ ಏರಿಯಾದ ಮುಖಾಂತರ 3 ನೇ ಮಹಡಿಯಲ್ಲಿ ನಿಂತುಕೊಂಡು ಪೈಪ್ ಗಳನ್ನು ಮೇಲಕೆತ್ತುವ ಕೆಲಸ ಮಾಡುತ್ತಿದ್ದ ಸಮಯ ಅವರಿಗೆ ಸೊಂಟಕ್ಕೆ ಬೆಲ್ಟ್, ತಲೆಗೆ ಹೆಲ್ಮೆಟ್ ಹಾಗೂ ಓಪನ್ ಫೋರ್ಚ್ ಏರಿಯಾದಲ್ಲಿ  ನೆಟ್ ಗಳನ್ನು ಅಳವಡಿಸದೇ ಕೆಲಸ ಮಾಡಿಸಿರುವ ಪರಿಣಾಮ ಚಮನ್ ಸಾಬ್ ರವರು ಕೆಲಸ ಮಾಡುವ ಸಮಯ 16-00 ಗಂಟೆಗೆ ಆಯತಪ್ಪಿ ಕೆಳಗಡೆ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿದೆ

Crime Reported in Ullal PS       

ಪ್ರಕರಣದ ಫಿರ್ಯಾದಿದಾರಾದ ಶಿವಕುಮಾರ್ ಕೆ. ಪೊಲೀಸ್ ಉಪ ನಿರೀಕ್ಷಕರವರು ಸಂಜೆ 15-45 ಗಂಟೆಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸಿಕೊಂಡು ತೊಕ್ಕೊಟ್ಟು ಕಡೆಗೆ ಬರುತ್ತಿರುವಾಗ ಕಲ್ಲಾಪು ಬಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿಯ ಖಾಲಿ ಸ್ಥಳದಲ್ಲಿ ನವಾಝ್ ಎಂಬಾತನು ಸಾಮಾನ್ಯ ಮರಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಅಕ್ರಮ ದಾಸ್ತಾನು ಇರಿಸಿರುತ್ತಾನೆ. ಎಂಬುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಂತೆ ಫಿರ್ಯಾದಿದಾರರು ಖಚಿತ ಮಾಹಿತಿ ಬಂದ ಸ್ಥಳಕ್ಕೆ ಸಂಜೆ 16-00 ಗಂಟೆಗೆ ಬಂದು ನೋಡಿದಾಗ ಕಲ್ಲಾಪು ಬಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿಯಲ್ಲಿ ರಸ್ತೆಯ ಬದಿಯ ಖಾಲಿ ಸ್ಥಳದಲ್ಲಿ ಸುಮಾರು 15 ರಿಂದ 20 ಟಿಪ್ಪರ್ ಲಾರಿಯಲ್ಲಿ ತುಂಬ ಬಹುದಾದಷ್ಟು ಸಾಮಾನ್ಯ ಮರಳಿನ ಲೋಡ್ ಅಕ್ರಮವಾಗಿ ದಾಸ್ತಾನು ಇರಿಸಿರುವುದು ಕಂಡು ಬಂದಿದ್ದು, ಸದ್ರಿ ನವಾಝ್  ಎಂಬಾತನು ಸಾಮಾನ್ಯ ಮರಳನ್ನು ಅಕ್ರ,ಮ ಲಾಭಗಳಿಸುವ ಉದ್ದೇಶದಿಂದ ಕಲ್ಲಾಪು ಬಳಿಯ ನೇತ್ರಾವತಿ ನದಿಯಿಂದ ಕಳವು ಮಾಡಿಕೊಂಡು ಯಾವುದೇ ಪರವಾನಿಗೆ ಹೊಂದದೇ ಹಾಗೂ ರಾಜಸ್ವ ಧನವನ್ನು ಸರಕಾರಕ್ಕೆ ಪಾವತಿಸದೇ ಕಳವು ನಡೆಸಿ ಅಕ್ರಮವಾಗಿ ಕಲ್ಲಾಪು ಬಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿಯ ಖಾಲಿ ಸ್ಥಳದಲ್ಲಿ ಸಂಗ್ರಹಿಸಿಟ್ಟಿರುವ ನವಾಝ್ ಎಂಬಾತನ ವಿರುದ್ಧ ದಾಖಲಿಸಿದ ಪ್ರಕರಣದ ಸಾರಂಶ. ಸಾಮಾನ್ಯ ಮರಳಿನ  ಅಂದಾಜು ಮೌಲ್ಯ 45,000/- ಆಗಬಹುದು ಎಂಬಿತ್ಯಾದಿಯಾಗಿರುತ್ತದೆ.

2) ಪ್ರಕರಣದ ಫಿರ್ಯಾದಿದಾರರಾದ ಪ್ರದೀಪ್ ಟಿ.ಅರ್. ಪಿಎಸ್ಐ ರವರು ದಿನಾಂಕ: 09-06-2021 ರಂದು ಮದ್ಯಾಹ್ನ 15-15 ಗಂಟೆಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕಲ್ಲಾಪು ಬಳಿಯ ನಿರ್ಮಾಣ ಹಂತದ ಮಾರ್ಕೆಟ್ ಬಳಿಯ ಖಾಲಿ ಸ್ಥಳದಲ್ಲಿ ಜಲೀಲ್ ಎಂಬಾತನು ಸಾಮಾನ್ಯ ಮರಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಅಕ್ರಮ ದಾಸ್ತಾನು ಇರಿಸಿರುತ್ತಾನೆ ಎಂಬುದಾಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದಂತೆ ಸದ್ರಿ ಸ್ಥಳಕ್ಕೆ ಮದ್ಯಾಹ್ನ 15-15 ಗಂಟೆಗೆ ಕಲ್ಲಾಪು ಬಳಿಯಲ್ಲಿ ನಿರ್ಮಾಣ ಹಂತದ ಮಾರ್ಕೆಟ್ ಬಳಿಯಲ್ಲಿ ಖಾಲಿ ಸ್ಥಳದಲ್ಲಿ ಸುಮಾರು 20 ರಿಂದ 25 ಟಿಪ್ಪರ್ ಲಾರಿಯಲ್ಲಿ ತುಂಬಬಹುದಾದಷ್ಟು ಸಾಮಾನ್ಯ ಮರಳಿನ ಲೋಡ್ ಅಕ್ರಮವಾಗಿ ದಾಸ್ತಾನು ಇರಿಸಿರುವುದು ಕಂಡು ಬಂದಿದ್ದು, ಸದ್ರಿ ಜಲೀಲ್ ಎಂಬಾತನು ಸಾಮಾನ್ಯ ಮರಳನ್ನು ಅಕ್ರ,ಮ ಲಾಭಗಳಿಸುವ ಉದ್ದೇಶದಿಂದ ಕಲ್ಲಾಪು ಬಳಿಯ ನೇತ್ರಾವತಿ ನದಿಯಿಂದ ಕಳವು ಮಾಡಿಕೊಂಡು ಯಾವುದೇ ಪರವಾನಿಗೆ ಹೊಂದದೇ ಹಾಗೂ ರಾಜಸ್ವ ಧನವನ್ನು ಸರಕಾರಕ್ಕೆ ಪಾವತಿಸದೇ ಕಳವು ನಡೆಸಿ ಅಕ್ರಮವಾಗಿ ಕಲ್ಲಾಪು ಬಳಿಯಲ್ಲಿ ನಿರ್ಮಾಣ ಹಂತದ ಮಾರ್ಕೆಟ್ ಬಳಿಯಲ್ಲಿ ಖಾಲಿ ಸ್ಥಳದಲ್ಲಿ ಸಂಗ್ರಹಿಸಿಟ್ಟಿರುವ ಜಲೀಲ್ ಎಂಬಾತನ ವಿರುದ್ಧ ದಾಖಲಿಸಿದ ಪ್ರಕರಣದ ಸಾರಂಶ.. ಸಾಮಾನ್ಯ ಮರಳಿನ  ಅಂದಾಜು ಮೌಲ್ಯ 60,000/- ಆಗಬಹುದು ಎಂಬಿತ್ಯಾದಿಯಾಗಿರುತ್ತದೆ.

Crime Reported in Mangalore North PS

ಪಿರ್ಯಾದಿ HC CHETANKUMAR H R rvru ಜಿಲ್ಲಾಧಿಕಾರಿಯವರ ಕಛೇರಿಯಿಂದ ನೇಮಕ ಮಾಡಿದ ಪ್ರಮೋದ್ ಎಲೋಷಿಯಸ್ ಡಿಕುನ್ಹಾ ರವರೊಂದಿಗೆ ದಿನಾಂಕ 10.06.2021 ರಂದು ಬೆಳಿಗ್ಗೆ 06:00 ರಿಂದ ಪಿ.ವಿ.ಎಸ್. ಸರ್ಕಲ್ ಬಳಿಯ  ಈ ಹಿಂದಿನ ಕುದ್ಮಲ್ ರಂಗ್ ರಾವ್ ಹಾಸ್ಟೇಲ್ ಮುಂಭಾಗದ ಚೆಕ್ ಪಾಯಿಂಟ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸುಮಾರು 10:10 ಗಂಟೆಗೆ ಬಂಟ್ಸ್ ಹಾಸ್ಟೇಲ್ ಕಡೆಯಿಂದ ಪಿ.ವಿ.ಎಸ್. ಕಡೆಗೆ  ಕೆಎ03-ಎಂ.ಎಲ್-1437 ನೇ ಮಾರುತಿ ವೇಗನಾರ್   ಕಾರೊಂದು ಬರುವುದನ್ನು ಕಂಡು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಕೋವಿಡ್ -19 ಕೊರೋನಾ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆ ಹರಡಿ ಮಾನವ ಜೀವಕ್ಕೆ ಹಾನಿಯಾಗುತ್ತದೆ ಎಂದು ತಿಳಿದಿದ್ದರೂ ಕಾರಿನ ಚಾಲಕ ಶೇಖ್ ಇಂಮ್ತಿಯಾಜ್ ಅಹಮ್ಮದ್ ರವರು  ಕಾರಿನೊಳಗಡೆ ಸಾಮಾಜಿಕ ಅಂತರವನ್ನು ಕಾಪಾಡದೇ ಕಾರಿನ ಚಾಲಕನ ಬದಿ ಸೀಟಿನಲ್ಲಿ ಒಬ್ಬನನ್ನು ಮತ್ತು ಹಿಂಬದಿ ಸೀಟಿನಲ್ಲಿ 3 ಮಂದಿಯನ್ನು ಒತ್ತೊತ್ತಾಗಿ ಕೂರಿಸಿಕೊಂಡು ಸರಕಾರ ಹೊರಡಿಸಿದ  ನಿಯಮಾವಳಿಗಳನ್ನು  ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ  ನಿರ್ಲಕ್ಷ್ಯತನ ತೋರಿ ತಿರುಗಾಡಿಕೊಂಡಿತ್ತಾರೆ ಎಂಬುದಾಗಿ ಸಾರಾಂಶ

Crime Reported in Kavoor PS

ತಾರೀಕು 10/06/2021 ರಂದು ಫಿರ್ಯಾದಿ HARISH H V ರವರು ಕಾವೂರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ ಮೂಡುಶೆಡ್ಡೆ ಜಂಕ್ಷನ್ ಬಳಿ ತಲುಪಿದಾಗ ಸಾರ್ವಜನಿಕರೊಬ್ಬರ ಮಾಹಿತಿ ಎನೆಂದರೆ ಶಿವಶಕ್ತಿ ಭಜನಾ ಮಂದಿರ ಬಳಿ NAVEEL HAIR DRESSERS ಸೆಲೂನ್ ನಲ್ಲಿ ಸಾಮಾಜಿಕ ಅಂತರವಿಲ್ಲದೆ ಗಿರಾಕಿಗಳನ್ನು ಸೇರಿಸಿಕೊಂಡು ಹೇರ್ ಕಟಿಂಗ್ ಮಾಡುತ್ತಿರುವುದಾಗಿ ತಿಳಿಸಿದಂತೆ ಸಮಯ ಸುಮಾರು 08:40 ರ ವೇಳೆಗೆ ಅಂಗಡಿ ಬಳಿ ಹೋಗಿ ನೋಡಿದಾಗ ಸೆಲೂನ್ ನಲ್ಲಿ ಗ್ರಾಹಕರನ್ನು ಕುರಿಸಿ ಕಟಿಂಗ್ ಮಾಡಲು ತೋಡಗಿದ್ದ ಆಪಾದಿತ ವಿವೇಕ್  ಎಂಬವರು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಮಾರ್ಗಸೂಚಿ ಆದೇಶವನ್ನು ಪಾಲಿಸದೇ ಕಟಿಂಗ್ ಅಂಗಡಿಯನ್ನು ತೆರೆದು ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಹಾಗೂ ಅಂಗಡಿಯೊಳಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗಿರಾಕಿಗಳಿಗೆ ಒಳಗೆ ಕೂರಿಸಿ ಕಟಿಂಗ್ ಮಾಡುತ್ತಿದ್ದು, ಕೋರೊನಾ ವೈರಸ್ ಹರಡುತ್ತಿದ್ದ ಬಗ್ಗೆ ತಿಳಿ  ಹೇಳಿದರು ಕೂಡ  ಉಡಾಫೆ ರೀತಿಯಲ್ಲಿ ಮಾತನಾಡಿ ನಿರ್ಲಕ್ಷತನದಿಂದ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಹಾಗೂ  ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವವಿರುವುದನ್ನು ತಿಳಿದು ಕೂಡ ನಿರ್ಲಕ್ಷವಹಿಸಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in Moodabidre PS

ದಿನಾಂಕ:10-06-2021 ರಂದು ಪಿರ್ಯಾದಿ Sudeep M V PSI ರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 08.00 ಗಂಟೆಗೆ ಮೂಡಬಿದರೆ ತಾಲೂಕು ಮಾರ್ಪಾಡಿ ಗ್ರಾಮದ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದ ಶವಗಾರದ ಬಳಿ ಇರುವ ಹೊಟೇಲ್ ಶಿವ ಸಾಗರ್ ಎಂಬ ಹೆಸರಿನ ಹೊಟೇಲನ್ನು ಆರೋಪಿಯು ಕೋವಿಡ್-19  ಸಾಂಕ್ರಾಮಿಕ ಖಾಯಿಲೆಯ ಹಿನ್ನೆಲೆಯಲ್ಲಿ ಸರ್ಕಾರದ ಹೊರಡಿಸಿದ ಲಾಕ್ ಡೌನ್ ಆದೇಶವನ್ನು ಅನುಸರಿಸದೇ ಕೇವಲ ಪಾರ್ಸಲ್ ಸೇವೆಯನ್ನು ಮಾತ್ರ ನೀಡಲು ಸರಕಾರ ಅನುಮತಿಸಿದ್ದರೂ ಸಹ ಹೋಟೆಲಿನಲ್ಲಿ ಗ್ರಾಹಕರು ಕುಳಿತು ಉಪಹಾರ ಸೇವಿಸಲು ಅವಕಾಶ ಮಾಡಿಕೊಟ್ಟು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 10-06-2021 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080