ಅಭಿಪ್ರಾಯ / ಸಲಹೆಗಳು

Crime Reported in  Kankanady Town PS

ಕೋವಿಡ್ -19 ಸಾಂಕ್ರಮಿಕ ರೋಗವಾಗಿದ್ದು ಸಾಮಾಜಿಕವಾಗಿ ಹರಡುತ್ತಿರುವ ಕಾರಣದಿಂದ ಪಿರ್ಯಾದಿದಾರರಾದ ಪಿಎಸ್ಐ  ರಘುನಾಯಕ  ರವರು ಸಿಬ್ಬಂದಿಯವರೊಂದಿಗೆ ದಿನಾಂಕ 11-05-2021 ರಂದು  ಠಾಣಾ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ  ತಡೆಗಟ್ಟುವಿಕೆ ಸಂಬಂಧ ಸರ್ಕಾರವು ದಿನಾಂಕ 10-04-2021 ರಿಂದ ದಿನಾಂಕ 24-05-2021 ರವರೆಗೆ ಲಾಕ್ ಡೌನ್ ವಿಧಿಸಿ ಹೊರಡಿಸಿದ  ಅದೇಶಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆಯೇ ಎಂಬ ಬಗ್ಗೆ ನಿಗಾ ವಹಿಸಲು ಮತ್ತು ಕಾಯ್ದೆಯ ಅದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಣ್ಣೂರು  ಜಂಕ್ಷನ್ ಬಳಿ ಸಿಬ್ಬಂದಿಗಳೂಂದಿಗೆ ವಾಹನ ತಪಾಸಣೆ ನಡೆಸುತ್ತಿರುವ ಸಮಯ  ಬೆಳಿಗ್ಗೆ 11:00 ಗಂಟೆಗೆ  KA-19-EW-9380  ನೇ ದ್ವಿಚಕ್ರ ವಾಹನದ ಸವಾರನು ಯಾವುದೇ ನಿಯಮ ಪಾಲಿಸದೇ ಸಾರ್ವಜನಿಕವಾಗಿ ತಿರುಗಾಡಿಕೊಂಡು ನಿರ್ಲಕ್ಷ್ಯತನವನ್ನು ಉಂಟು ಮಾಡಿ ಸರ್ಕಾರದ ಆದೇಶವನ್ನು ಪಾಲಿಸದೇ ಆದೇಶವನ್ನು ಉಲ್ಲಂಘಿಸಿರುವುದರಿಂದ  ಆರೋಪಿ ವಿರುದ್ದ THE DISASTER MANAGEMENT ACT, 2005 (U/s-51(b)); IPC 1860 (U/s-269)ರಂತೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in Bajpe PS

ದಿನಾಂಕ 11.06.2021 ರಂದು ಬೆಳಿಗ್ಗೆ ಸುಮಾರು 09:30 ಗಂಟೆಗೆ ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ, ಕೈಕಂಬ ಪೇಟೆಯಲ್ಲಿರುವ ಇಸಾ ಫ್ಯಾನ್ಸಿ ಎಂಬ ಫ್ಯಾನ್ಸಿ ಅಂಗಡಿಯನ್ನು ಆರೋಪಿ ಮಹಮ್ಮದ್ ಜುನೈದ್ ಎಂಬಾತನು ತೆರೆದಿದ್ದು, ಆರೋಪಿಯು ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವುದು  ಮನಗಂಡು ಸಹ ಸರಕಾರ ಘೋಷಿಸಿರುವ ಲಾಕ್ ಡೌನ್  ಆದೇಶವನ್ನು  ಪಾಲಿಸದೇ  ತಮ್ಮ ಅಂಗಡಿಯನ್ನು ತೆರೆದು ಗ್ರಾಹಕರಿಗೆ  ಶೃಂಗಾರ ಸಾಮಾಗ್ರಿಗಳನ್ನು  ಮಾರಾಟ ಮಾಡಿ  ಸುರಕ್ಷತೆಗಾಗಿ  ಕೈ ಗವಚ,  ಧರಿಸದೇ ಗ್ರಾಹಕರಿಗೆ ಸ್ಯಾನಿ ಟೈಸರ್, ಹ್ಯಾಂಡ್ ವಾಷ್ ಗಳನ್ನು  ಇಡದೇ,  ವ್ಯಾಪಾರವನ್ನು ಮಾಡುತ್ತಿದ್ದುದರಿಂದ ಆರೋಪಿಯ ವಿರುದ್ದ  ಕಲಂ: 269 ಐ.ಪಿ.ಸಿ. ಮತ್ತು ಕಲಂ: 51(ಬಿ)  ವಿಪತ್ತು ನಿರ್ವಹಣಾ ಕಾಯ್ದೆ 2005  ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ”  ಎಂಬಿತ್ಯಾದಿ

Crime Reported in Ullal PS

ದಿನಾಂಕ: 11-05-2021 ರಂದು ರೇವಣ ಸಿದ್ದಪ್ಪ. ಪಿಎಸ್ಐ, ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ತಾಲೂಕು ಪೆರ್ಮನ್ನೂರು  ಗ್ರಾಮದ ತೊಕ್ಕೊಟು ಹೆಚ್.ಇ. ವೆಜಿಟೇಬಲ್ಸ್ ಎಂಬ ತರಕಾರಿ ಮಾರಾಟದ ಅಂಗಡಿಯ ಬಳಿಗೆ ಬೆಳಿಗ್ಗೆ 07:40 ಗಂಟೆಗೆ ತಲುಪುವಾಗ ಸದ್ರಿ ಅಂಗಡಿಯಲ್ಲಿ ಗ್ರಾಹಕರನ್ನು ಒಗ್ಗೂಡಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಹಾಗೂ ಸಮರ್ಪಕವಾಗಿ ಮಾಸ್ಕ್ ಧರಿಸದೇ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಲು ಸಹಕರಿಸಿದಲ್ಲದೆ ಸದ್ರಿ ಅಂಗಡಿಯವರಾದ ಸದಕತ್ತುಲ್ಲಾ ಎಂಬವರು ಸರಕಾರದ ಆದೇಶವನ್ನು ಉಲ್ಲಂಘಿಸಿರುವುದರಿಂದ ಇವರ ವಿರುದ್ಧ THE DISASTER MANAGEMENT ACT, 2005 (U/s-51(b)); IPC 1860 (U/s-269) ರಂತೆ ದಾಖಲಿಸಿದ ಪ್ರಕರಣದ ಸಾರಾಂಶ.

2) ದಿನಾಂಕ. 11-5-2021 ರಂದು ಬೆಳಿಗ್ಗೆ 05-00 ಗಂಟೆಯಿಂದ ಪ್ರಕರಣದ ಫಿರ್ಯಾದಿದಾರರಾದ ಅಕ್ಬರ್.ವೈ ಸಿಪಿಸಿ  ರವರು ಸಿದ್ಧಪ್ಪ ಸಿಪಿಸಿ  ರವರ ಜೊತೆಯಲ್ಲಿ ಸಮವಸ್ತ್ರದಲ್ಲಿ ಉಳ್ಳಾಲ ಮಾಸ್ತಿಕಟ್ಟೆ ಚಕ್ಪಾಯಿಂಟ್ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ 08-00 ಗಂಟೆಯ ಸಮಯಕ್ಕೆ ಉಳ್ಳಾಲ ಮಾಸ್ತಿಕಟ್ಟೆಯ ಬಳಿಯಿರುವ ಬಹು ಮಹಡಿ ಕಟ್ಟಡದ ಒಂದನೇ ಮಹಡಿಯಲ್ಲಿದ್ದ ಪೋಸ್ ಗ್ಯಾಲರಿ ಎಂಬ ಕಾಸ್ಮೆಟಿಕ್ ಮತ್ತು ಫ್ಯಾನ್ಸಿ ಅಂಗಡಿಯ ಮಾಲಕರಾದ ಅಬ್ದುಲ್ ಸಮದ್ ರವರು ಅಂಗಡಿಯ ಶೆಟರ್ ಬಾಗಿಲು ತೆರೆದು ಗಿರಾಕಿಗಳನ್ನು ಅಂಗಡಿಯ ಒಳಗೆ ಕರೆದುಕೊಂಡು ವ್ಯಾಪಾರ ಮಾಡುತ್ತಿದ್ದುದನ್ನು ಗಮನಿಸಿ ಫಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಅಂಗಡಿಯ ಒಳಗೆ ಗಿರಾಕಿಗಳನ್ನು ಒಟ್ಟು ಸೇರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಸ್ಯಾನಿಟೈಸರ್ ಬಳಸದೇ, ಕೈಗೆ ಗ್ಲೌಸ್ ಹಾಕದೇ ಒಬ್ಬರು ಮುಟ್ಟಿದ ಆಭರಣಗಳನ್ನು ಇನ್ನೊಬ್ಬರು ಮುಟ್ಟಿಕೊಂಡು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸರಕಾರ ಹೊರಡಿಸಿರುವ ಆದೇಶವನ್ನು ಅಂಗಡಿ ಮಾಲಕ ಅಬ್ದುಲ್ ಸಮದ್ ರವರು ಉಲ್ಲಂಘಿಸಿರುವುದರಿಂದ ಇವರ ವಿರುದ್ಧ THE KARNATAKA EPIDEMIC DISEASES ACT, 2020 (U/s-5(4)); IPC 1860 (U/s-269) ರಂತೆ ದಾಖಲಿಸಿದ ಪ್ರಕರಣದ ಸಾರಾಂಶ.

 

ಇತ್ತೀಚಿನ ನವೀಕರಣ​ : 11-05-2021 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080