ಅಭಿಪ್ರಾಯ / ಸಲಹೆಗಳು

Crime Reported in Mulki PS

ಪಿರ್ಯಾದಿ Kusumadhara K –PI ರವರು ದಿನಾಂಕ 11-06.2021 ಸಮಯ ಸುಮಾರು 00.30 ಗಂಟೆಗೆ ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ  ಪಂಡಿತ್ ಹರಿಭಟ್ ರಸ್ತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಪ್ರಕರಣದ ಆರೋಪಿಗಳು ಪಂಡಿತ್ ಹರಿಭಟ್ ರಸ್ತೆಯಲ್ಲಿ ಪಾವಂಜೆ ಕಡೆಗೆ   KA-12-Z-5868  ನೇ ನೊಂದಣಿ ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದು, ಪಿರ್ಯಾದಿದಾರರು ಸದ್ರಿ ವಾಹನವನನ್ನು ನಿಲ್ಲಿಸಿ ತಪಾಸಣೆ ನಡೆಸಲಾಗಿ ಸದ್ರಿ ಕಾರಿನಲ್ಲಿದ್ದ ಆರೋಪಿಗಳು ಸರಕಾರದ ನಿಯಮದಂತೆ ಬೆಳಿಗ್ಗೆ 10:00 ಗಂಟೆಯ ನಂತರ ಸಂಚರಿಸಲು ಅವಕಾಶ ಇಲ್ಲ ಎಂದು ಸರಕಾರ ಕಟ್ಟು ನಿಟ್ಟಿನ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಸದ್ರಿಯವರು ಸಾರ್ವಜನಿಕ ಸ್ಥಳದಲ್ಲಿ ತಮ್ಮ ಕಾರಿನಲ್ಲಿ ತಿರುಗಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದು ಗೊತ್ತಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದ್ದು, ಕೊರೊನಾ ವೈರಸ್ ಹರಡದಂತೆ ಯಾವುದೇ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದೇ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ್ಯ ಮಾಡಿರುತ್ತಾರೆ ಎಂಬಿತ್ಯಾದಿ.,

Crime Reported in Moodabidre PS

ದಿನಾಂಕ: 11-06-2021 ರಂದು ಠಾಣಾ ಉಪನಿರೀಕ್ಷಕರಾದ ಪಿ.ಎಸ್.ಐ ಸುದೀಪ್ ಎಮ್.ವಿ ರವರೊಂದಿಗೆ ಸಮವಸ್ತ್ರಧಾರಿಗಳಾಗಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ಸಮಯ ಸುಮಾರು 12.00 ಗಂಟೆಗೆ ಮೂಡಬಿದರೆ ತಾಲೂಕು, ತೋಡಾರು ಗ್ರಾಮದ, ತೋಡಾರ್ ಜಂಕ್ಷನ್ ಎಂಬಲ್ಲಿಗೆ ಬಂದಾಗ ರಫ ಚಿಕನ್ ಸೆಂಟರ್ ಎಂಬ ಹೆಸರಿನ ಅಂಗಡಿಯ ಮಾಲಿಕನು ಅಂಗಡಿಯನ್ನು ತೆರೆದು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ನಿಗದಿಪಡಿಸಿದ ಅವಧಿಯನ್ನು ಮೀರಿ ಅಂಗಡಿಯನ್ನು ತೆರೆದಿಟ್ಟು ವ್ಯಾಪಾರದಲ್ಲಿ ತೊಡಗಿರುತ್ತಾರೆ. ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದು  ಎಂಬಿತ್ಯಾದಿ.

Crime Reported in Mangalore East PS

ದಿನಾಂಕ: 10-06-2021 ರಂದು ಪೊಲೀಸ್ ನಿರೀಕ್ಷಕರು, ಸಿಸಿಬಿ, ಮಂಗಳೂರು ನಗರ ರವರಿಗೆ ಬಂದ ಖಚಿತ ಮಾಹಿತಿಯಂತೆ 15-45 ಗಂಟೆಗೆ ಪ್ರಕರಣದ ಫಿರ್ಯಾದಿದಾರರು ಸಿಸಿಬಿ ಘಟಕದ ಸಿಬ್ಬಂದಿಗಳ ಜೊತೆಯಲ್ಲಿ ಮಂಗಳೂರು ನಗರದ ಕದ್ರಿ ಮಲ್ಲಿಕಟ್ಟೆಯ ತೇಜಸ್ವಿನಿ ಆಸ್ಪತ್ರೆ ಬಳಿ ಕೇರಳ ಮೂಲದ ಮೊಹಮ್ಮದ್ ಅಜಿನಾಸ್ ಎಂಬಾತನು ಬೈಕ್ ನಂಬ್ರ: ಕೆಎಲ್-18-ಎಫ್-3859 ಹೀರೊ ಹೋಂಡಾ ಪ್ಯಾಶನ್ ಫ್ರೋ  ಇದರಲ್ಲಿ ಅಕ್ರಮವಾಗಿ  ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಾದ LSD, ಹಶೀಶ್, ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದು ಆತನ ವಶದಲ್ಲಿ ಮಾದಕ ವಸ್ತುವಿರುವುದನ್ನು ತಿಳಿದು ಸ್ಥಳದಲ್ಲಿ ಆತನ ಬೈಕ್ ಸ್ವಾಧೀನಪಡಿಸಿಕೊಂಡು ಮಾದಕ ವಸ್ತುವನ್ನು ಹೊಂದಿರುವುದರಿಂದ ಆತನ ಅಂಗ ಶೋಧನೆ ಮಾಡಿ ಆತನ ವಶದಲ್ಲಿದ್ದ ಒಟ್ಟು 15 ಗ್ರಾಂ 15 ಮಿಲಿಗ್ರಾಂ ತೂಕದ 840 ಎಲ್ ಎಸ್ ಡಿ ಸ್ಟ್ಯಾಂಪ್ ಗಳು, ರೆಡ್ ಮೀ ಮೊಬೈಲ್, ಫೋನ್, ನೋಕಿಯಾ ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿರುವುದಾಗಿದೆ. ಆರೋಪಿ ಮೊಹಮ್ಮದ್ ಅಜಿನಾಸ್ ಎಂಬಾತನಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 17,15,500/- ಆಗಬಹುದು

Crime Reported in Bajpe PS

ಪಿರ್ಯಾದಿ PURANDARA NAIK ರವರು ಮರಾಠಿ ನಾಯ್ಕ್ ಜಾತಿಗೆ ಸೇರಿದ್ದು ಕೋವಿಡ್ ನಿಯಮವನ್ನು ಉಲ್ಲಂಘಿಸಿ ಅಪರಿಚಿತ ವ್ಯಕ್ತಿಯೊಬ್ಬರು ಸದ್ರಿಯವರ ಊರಿನಲ್ಲಿ ತಿರುಗಾಡುತ್ತಿರುವ ಬಗ್ಗೆ ಊರಿನವರ ಗಮನಕ್ಕೆ ಬಂದಿರುತ್ತದೆ. ದಿನಾಂಕ 07-06-2021 ರಂದು ಮದ್ಯಾಹ್ನ ಸುಮಾರು 3-00 ಗಂಟೆಗೆ ಗಾಡಿಯ ಶಬ್ದ ಕೇಳಿ ಪಿರ್ಯಾದಿದಾರರು ಮತ್ತು ಅವರ ಊರಿನ ಗುಣಪಾಲ ನಾಯ್ಕ, ರಾಜೇಶ್ ನಾಯ್ಕ ಮತ್ತು ಮಂಜುನಾಥ ನಾಯ್ಕ ರವರು ಜೊತೆ ಸೇರಿ ಕಂಬಳ ಕೋಡಿ ಅಶ್ವಥಕಟ್ಟೆಯ ಬಳಿ ಹೋದಾಗ ಪೊದೆಗಳಲ್ಲಿ ನೋಡಿದಾಗ KA 19 EG 6272 ನೇ ನಂಬ್ರದ ಬೈಕ್ ನಿಲ್ಲಿಸಿದ್ದು ಸದ್ರಿ ಸ್ಥಳದಲ್ಲಿ ಹುಡುಗಾಟ ನಡೆಸಿದಾಗ ವ್ಯಕ್ತಿಯೊಬ್ಬರು ನಿಂತುಕೊಂಡಿದ್ದು ಸದ್ರಿಯವರಲ್ಲಿ ವಿಚಾರಿಸಿದಾಗ ಹಮೀದ್ (35) ತಂದೆ:- ಹಸನಬ್ಬ ಎಂಬುದಾಗಿ ತಿಳಿಸಿದ್ದು ಸದ್ರಿಯವರಲ್ಲಿ “ಲಾಕ್ ಡೌನ್ ಟೈಮ್ ಡ್ ಇರ್ ದಾನೆ ಮುಲು” ಎಂದು ಕೇಳಿದಾಗ ಆಪಾಧಿತ ಹಮೀದ್ ಗುಣಪಾಲ ನಾಯ್ಕ್ ರವರನ್ನು ದೂಡಿ ಕೈಯಿಂದ ಹಲ್ಲೆ ನಡೆಸಿ “ಬೇವರ್ಸಿ ...ಮಗ, ನಾಯಿ ಈ ಎರೇ ಕೇನರೆ” ಎಂದು ನೆಲಕ್ಕೆ ದೂಡಿದ್ದು ಇದನ್ನು ಕೇಳಲು ಬಂದ ಪಿರ್ಯಾದಿದಾರರನ್ನು ಮತ್ತು ರಾಜೇಶ್ ನಾಯ್ಕ, ಮಂಜುನಾಥ ನಾಯ್ಕ ಮತ್ತು ಜಯಪಾಲ ನಾಯ್ಕ ರವರನ್ನು ಉದ್ದೇಶಿಸಿ “ನೀಕುಲ್ ನಾಯ್ಕೆರೆಡ್  ದಾದಾ ಮಲ್ ಪರೆ ತೀರುಂಡ್, ನೀಕ್ ಲೆಗ್ ಗವರ್ನಮೆಂಟ್ ದ ಸಪೋರ್ಟ್ ಉಂಡ್ ಅಂದ್ ನಿಕ್ ಲೆಗ್ ಬಾರಿ ಚರ್ಬಿ” ಎಂಬುದಾಗಿ ಹೇಳಿ ಜಾತಿ ನಿಂದನೆ ಮಾಡಿ “ನಿಕ್ ಲೆನ್ ಎಲ್ಲೆ ತೂಪೆ” ಎಂದು ಹೇಳಿ ಜೀವ ಬೆದರಿಕೆ ಹಾಕಿರುತ್ತಾನೆ ಎಂಬಿತ್ಯಾದಿಯಾಗಿರುತ್ತದೆ

Crime Reported in Ullal PS       

 ಫಿರ್ಯಾದಿದಾರರಾದ ಶಿವಕುಮಾರ್ ಕೆ, ಪಿಎಸ್ಐ ರವರು ದಿನಾಂಕ: 10-06-2021 ರಂದು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮದ್ಯಾಹ್ನ 2-00 ಗಂಟೆಗೆ ಉಳ್ಳಾಲ ಗ್ರಾಮದ ಬಸ್ತಿಪಡ್ಪು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಯಾವುದೋ ನಶೆ ಬರುವ ವಸ್ತುವನ್ನು ಸೇವಿಸಿ, ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು ವಿಚಾರಿಸಲಾಗಿ ಆತನು ನಿಷೇದಿತ ಮಾದಕ ವಸ್ತುವಿನ ತಂಬಾಕು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆತನ ಹೆಸರು ವಿಚಾರಿಸಲಾಗಿ ನಿಹಾಲ್ ಅಬ್ದುಲ್ ಮೊಹಮ್ಮದ್, ತಂದೆ: ಶಾಲಿ ಎಂಬುದಾಗಿ ತಿಳಿಸಿದ್ದು, ಈತನು ಕಾನೂನು ಬಾಹಿರವಾಗಿ ನಿಷೇದಿತ ಮಾದಕ ದ್ರವ್ಯ ಸೇವನೆ ಯಾ ತಂಬಾಕು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಯಿಂದ ಧೃಡಪಟ್ಟಿದ್ದು, ಅಲ್ಲದೇ ಈತನು ಮಾದಕ ದ್ರವ್ಯ ಸೇವನೆ ಮಾಡಿ ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾಡಿಕೊಂಡು ಕೋವಿಡ್ 19 ಸಾಂಕ್ರಾಮಿಕ ರೋಗದ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಿರುವ ಸರಕಾರದ ಅದೇಶವನ್ನು ಉಲ್ಲಂಘಿಸಿ, ನಿರ್ಲಕ್ಷಿಸಿರುವ ನಿಹಾಲ್ ಅಬ್ದುಲ್ಲಾ ಮೊಹಮ್ಮದ್ ನ ವಿರುದ್ಧ ದಾಖಲಿಸಿದ ಪ್ರಕರಣದ ಸಾರಂಶ. ಎಂಬಿತ್ಯಾದಿಯಾಗಿದೆ

ಇತ್ತೀಚಿನ ನವೀಕರಣ​ : 11-06-2021 05:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080