ಅಭಿಪ್ರಾಯ / ಸಲಹೆಗಳು

Crime Reported in  Mangalore East PS

ಪಿರ್ಯಾದಿದಾರರಾದ ಕುಶಾಲಪ್ಪ ರವರು ರವರು ತನ್ನ ಬಾಬ್ತು  ಕೆಎ 21-ಇವಿ- 3619 ನೇ ಹೀರೋ ಪ್ಯಾಶನ್ ಪ್ರೋ ಬೈಕ್ ನ್ನು ದಿನಾಂಕ: 08-07-2021 ರಂದು ನಗರದ ಬಲ್ಮಠದ ವೈನ್ ಗೇಟ್ ಶೆಡ ನಲ್ಲಿ  ಪಾರ್ಕ್ ಮಾಡಿ, ಕೆಲಸಕ್ಕೆ ಹೋಗಿ ದಿನಾಂಕ: 09-07-2021 ರಂದು ಬೆಳಿಗ್ಗೆ 7-00 ಗಂಟೆಗೆ ಬಂದು ನೋಡಿದಾಗ  ಅಲ್ಲಿ ಬೈಕ್ ಇಲ್ಲದೇ ಇದ್ದು,  ಪಿರ್ಯಾದಿದಾರರ ಹೀರೋ ಪ್ಯಾಶನ್ ಪ್ರೋ ಬೈಕನ್ನು ದಿನಾಂಕ: 08-07-2021 ರಂದು ರಾತ್ರಿ ಸಮಯದಿಂದ  ದಿನಾಂಕ: 09-07-2021 ರ ಬೆಳಿಗ್ಗೆ 7-00 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿದ್ದು, ಇದರ ಮೌಲ್ಯ ರೂ: 30,000/- ಆಗಬಹುದು. ಇದರ ಚಾಸಿಸ್ ನಂ: MBLHA10BSFHK44880, ಇಂಜಿನ್ ನಂಬರ್: HA10EVFHKH7880 ಮಾಡೆಲ್- 2016, ಬಣ್ಣ: ಗ್ರೇ ಮತ್ತು ಕಪ್ಪು ಆಗಿರುತ್ತದೆ ಪಿರ್ಯಾದಿದಾರರು ಕಳವಾದ ತನ್ನ ಬೈಕ್ ನ್ನು ನಗರ ಎಲ್ಲಾ ಕಡೆ ಹುಡಕಾಡಿದ್ದು, ಪತ್ತೆಯಾಗದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ

Crime Reported in  Bajpe PS

 “ಫಿರ್ಯಾದಿ Yathish Moolya ರವರು ದಿನಾಂಕ 10.08.2021 ರಂದು ಬೆಳಿಗ್ಗೆ ತನ್ನ ಸಹೋದರ ಯಶವಂತ ಎಂಬವರ ಮೋಟಾರ್ ಸೈಕಲ್ ನಂಬ್ರ ಕೆಎ-19ಇಎಂ-7895 ನೇಯದರಲ್ಲಿ ಸಹಸವಾರನಾಗಿ ಕುಳಿತುಕೊಂಡು ಕಟೀಲಗೆ ಕೆಲಸಕ್ಕೆ ಹೋಗುತ್ತಿರುವಾಗ ಮೋಟಾರ್ ಸೈಕಲನ್ನು ಯಶವಂತರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದು ಬೆಳಿಗ್ಗೆ ಸುಮಾರು 08:00 ಗಂಟೆಗೆ ಮಂಗಳೂರು ತಾಲೂಕು, ಬಜಪೆ ಗ್ರಾಮದ, ಸಂಜೀವ ಶೆಟ್ಟಿ ಹಾಲ್ ಬಳಿ ತಲುಪುತ್ತಿದ್ದಂತೆಯೇ ರಸ್ತೆಗೆ ದನವೊಂದು ಅಡ್ಡ ಬಂದ ಪರಿಣಾಮ ವಶವಂತರವರು ಮೋಟಾರ್ ಸೈಕಲಿನ ಬ್ರೇಕನ್ನು ಒಮ್ಮೆಲೇ ಹಾಕಿದ್ದು ಇದರ ಪರಿಣಾಮ ಫಿರ್ಯಾದಿದಾರರು ರಸ್ತೆ ಹೊಂಡಕ್ಕೆ ಬಿದ್ದು ಅವರ ಎಡಕಾಲಿನ ಕೋಲು ಕಾಲಿಗೆ ಭಾರಿ ರಕ್ತ ಗಾಯ ಬಲ ಮೊಣಗಂಟಿಗೆ, ಬಲ ಕೈ ಗಂಟಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಎ.ಜೆ. ಆಸ್ಪತ್ರೆಗೆ ದಾಖಲಾಗಿರುತ್ತಾರೆ” ಎಂಬಿತ್ಯಾದಿ.

Crime Reported in  Ullal PS

ದಿನಾಂಕ. 28-7-2021 ರಂದು 18-00 ಗಂಟೆಯಿಂದ 21-15 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಕಾಚಾರು ಎಂಬಲ್ಲಿ ಫಿರ್ಯಾದಿದಾರರಾದ ನಿತಿನ್ ರವರು ನಿಲ್ಲಿಸಿದ್ದ ಕೆಎ-19-ಇಎಂ-7706 ನೇ ಯಮಹಾ ಎಫ್ ಝಡ್ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲಿನ ಅಂದಾಜು ಮೌಲ್ಯ ರೂ. 35,000/- ಆಗಬಹುದು. ಮೋಟಾರು ಸೈಕಲ್ 2014, ಇದರ ಬಣ್ಣ ಕಪ್ಪು ಆಗಿರುತ್ತದೆ ಎಂಬಿತ್ಯಾದಿ.

Crime Reported in  Mangalore East Traffic PS                                 

ದಿನಾಂಕ:10-08-2021 ರಂದು ರಾತ್ರಿ ಸಮಯ ಪಿರ್ಯಾದಿ CHETHAN ರವರು ಮನೆಯಲ್ಲಿದ್ದಾಗ ಸದ್ರಿಯವರಿಗೆ ಸ್ನೇಹಿತ ನವೀನ ಎಂಬುವರು ಕರೆ ಮಾಡಿ ತನ್ನ ಸಂಬಂಧಿ ದಯಾನಂದರವರು KA-19-EM-5857 ನಂಬ್ರದ ಮೋಟಾರು ಸೈಕಲ್ನಲ್ಲಿ ಸವಾರನಾಗಿದ್ದುಕೊಂಡು ನಂತೂರು ಕಡೆಯಿಂದ ಬಿಕರ್ನಕಟ್ಟೆ ಕೈಕಂಬದ ಕಡೆಗೆ ರಾ.ಹೆ-73ರ ಡಾಮಾರು ರಸ್ತೆಯಲ್ಲಿ ಹೋಗುತ್ತಾ ರಾತ್ರಿ ಸಮಯ ಸುಮಾರು 8-30 ಗಂಟೆಗೆ ಬಿಕರ್ನಕಟ್ಟೆಯ ಕಂಡೆಟ್ಟು ಕ್ರಾಸ್ ಬಳಿ ತಲುಪುತ್ತಿದ್ದಂತೆ KA-19-AA-9322 ನಂಬ್ರದ ಗೂಡ್ಸ್ ಲಾರಿಯನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಓವರ್ ಟೆಕ್ ಮಾಡುವ ಭರದಲ್ಲಿ ದಯಾನಂದರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ನ ಬಲಭಾಗ ಹ್ಯಾಂಡಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ದಯಾನಂದರವರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಡಿಕ್ಕಿಪಡಿಸಿದ ಲಾರಿಯ ಎಡಹಿಂಭಾಗದ ಚಕ್ರಕ್ಕೆ ಸಿಲುಕಿ ಸದ್ರಿ ಚಕ್ರವು ಅವರ ತಲೆಯ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಸ್ಥಳಕ್ಕೆ ಬಂದು ನೋಡಿ ಮೃತ ದೇಹವನ್ನು ಜಿಲ್ಲಾ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ಆಂಬುಲೇನ್ಸ್ ಮೂಲಕ ಸಾಗಿಸಿರುವುದಾಗಿದೆ. ಅಪಘಾತಪಡಿಸಿದ ಗೂಡ್ಸ್ ಲಾರಿ ಚಾಲಕನ ಹೆಸರು ಮಹಮ್ಮದ್ ಎಂದು ತಿಳಿದುಬಂದಿರುತ್ತದೆ ಎಂಬಿತ್ಯಾದಿ.

Crime Reported in  Konaje PS

ದಿನಾಂಕ 10.08.2021 ರಂದು ಪಿಎಸ್ಐ ಮಲ್ಲಿಕಾರ್ಜುನ ಬಿರಾದಾರ ರವರು ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಇಲಾಖಾ ವಾಹನದಲ್ಲಿ ರೌಂಡ್ಸ್ ನಲ್ಲಿ ಇರುವ ಸಮಯ ಸುಮಾರು 11.15 ಗಂಟೆಗೆ ಕ್ಯಾಂಪಸ್ ಫ್ರಂಟ್ ಆಪ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳಾದ ಮಹಮ್ಮದ್ ಒವೈಸ್, ಮಹಮ್ಮದ್ ನಿಯಾಜ್ ಎಂಬವರುಗಳ ನೇತೃತ್ವದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ NEP ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿ ಜಾರಿಗೊಳಿಸದಂತೆ ಮಂಗಳೂರು ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಆಡಳಿತ ಕಛೇರಿವರೆಗೆ ರ್ಯಾಲಿ ನಡೆಸಿ ಪ್ರತಿಭಟನೆಗೆ ಸುಮಾರು 150 ರಿಂದ 200 ಜನ ಯುವಕ ಮತ್ತು ಯುವತಿಯರು ಮಹಮ್ಮದ್ ಒವೈಸ್ ಹಾಗೂ ಮಹಮ್ಮದ್ ನಿಯಾಜ್ ಎಂಬವರುಗಳ ನೇತೃತ್ವದಲ್ಲಿ ಗುಂಪು ಸೇರಿಕೊಂಡು ಧ್ವಜಗಳು ಹಾಗೂ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಯಾವುದೇ ಸಾಮಾಜಿಕ ಅಂತರವನ್ನು ಪಾಲಿಸದೆ ಮತ್ತು ಹಲವರು ಮಾಸ್ಕನ್ನು ಧರಿಸದೇ ಘೋಷಣೆಗಳನ್ನು ಕೂಗುತ್ತಿದ್ದು, ಅವರಿಗೆ ಕೋವಿಡ್-19 ನಿಯಮ ಪಾಲನೆಯ ಬಗ್ಗೆ ತಿಳಿಸಿ ಹೇಳಿದರೂ ಕೂಡ ಕೇಳದೆ ಮೆರವಣಿಗೆ ಹೊರಟು ವಿಶ್ವವಿದ್ಯಾನಿಲಯದ ಆಡಳಿತ ಕಛೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ಹಾಗೂ ಜಿಲ್ಲಾಧಿಕಾರಿಗಳು ಹೊರಡಿಸಿದ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಆರೋಪಿಗಳ ವಿರುದ್ದ ಕಲಂ.269 ಐಪಿಸಿ ಹಾಗೂ 5(1), 5(4) ಕರ್ನಾಟಕ ಎಪಿಡಮಿಕ್ ಡಿಸೀಸ್ ಆಕ್ಟ್ ನಂತೆ ಕಾನೂನು ಕ್ರಮ ಜರುಗಿಸಲಾಗಿರುತ್ತದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 11-08-2021 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080