ಅಭಿಪ್ರಾಯ / ಸಲಹೆಗಳು

Crime Reported in  Barke PS

ದಿನಾಂಕ 12-05-2021 ರಂದು ಬರ್ಕೆ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾ.ಸು) ಹಾರುನ್ ಅಖ್ತರ್ ಠಾಣಾ ಸಿಬ್ಬಂದಿ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಬಿಜೈ ಮಾರ್ಕೆಟ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಬೆಳಿಗ್ಗೆ ಸುಮಾರು 8-45 ಗಂಟೆಗೆ ಮಂಗಳೂರು ನಗರದ ಬಿಜೈ ಮಾರ್ಕೇಟ್ ಒಳಗಿರುವ ಕೋಸ್ಟೆಲ್ ಚಿಕನ್ ಎಂಬ ಮಾಂಸದ ಅಂಗಡಿಯನ್ನು ತೆರೆದು  ಮಾಲೀಕರು ವ್ಯಾಪಾರ ಮಾಡುತ್ತಿದ್ದು, ಸದ್ರಿ ಮಾಂಸದ ಅಂಗಡಿಯ ಎದುರುಗಡೆ ಕೆಲವು ಸಾರ್ವಜನಿಕರು ಸಾರ್ವಜನಿಕ ಸ್ಥಳದಲ್ಲಿ ಸಾಮಾಜಿಕ ಅಂತರ, ಮತ್ತು ಕಡ್ಡಾಯ ಮಾಸ್ಕ್ ಧರಿಸದೇ ಇದ್ದು, ಮಾಂಸದ ಅಂಗಡಿಯ ಮಾಲಕರೊಂದಿಗೆ ವ್ಯವಹಾರ ಮಾಡಿಕೊಂಡಿದ್ದು, ಇವರಲ್ಲಿ ಯಾರಿಗಾದರೂ ಕೋವಿಡ್-19 ಸಾಂಕ್ರಾಮಿಕ ರೋಗದ ಲಕ್ಷಣಗಳಿದ್ದರೆ, ಅದು ಒಬ್ಬ ವ್ಯಕ್ತಿಯಿಂದ  ಇತರೇ ವ್ಯಕ್ತಿ ಅಥವಾ ಸಮೂದಾಯಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಸದ್ರಿ ಚಿಕನ್ ಅಂಗಡಿಯ ಮಾಲಕರು ಕೋವಿಡ್ -19  ಕೊರೋನಾ ಸಾಂಕ್ರಾಮಿಕ ಖಾಯಿಲೆ ಹರಡಿ ಮಾನವ ಜೀವಕ್ಕೆ ಹಾನಿಯಾಗುತ್ತದೆ ಎಂದು ತಿಳಿದಿದ್ದರೂ, ಸರ್ಕಾರ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿರುವುದರಿಂದ, ಕೋವಿಡ್-19 ಸಾಂಕ್ರಾಮಿಕ  ರೋಗ  ಹರಡುವಿಕೆಯನ್ನು ತಡೆಗಟ್ಟುವಿಕೆ ಬಗ್ಗೆ ಸರಕಾರ ಸೂಚಿಸಿದ ಅದೇಶಗಳನ್ನು ಪಾಲನೆ ಮಾಡುವಲ್ಲಿ ಸದ್ರಿ ಅಂಗಡಿ ಮಾಲಕನು ನಿರ್ಲಕ್ಷ್ಯ ವಹಿಸಿರುವುದರಿಂದ ಸದ್ರಿ ಮಾಂಸದ ಅಂಗಡಿಯ ಮಾಲೀಕನ ವಿರುದ್ದ  ಕಲಂ 269 ಐಪಿಸಿ ಮತ್ತು ಕಲಂ. 4, 5 KARNATAKA EPIDEMIC DISEASE ACT- 2020 -ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಂಬಿತ್ಯಾದಿ

Crime Reported in  Kavoor PS

ತಾರೀಕು 12/05/2021 ರಂದು ಫಿರ್ಯಾದಿ HARISH H V PSI ರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು ಬೆಳಗ್ಗೆ 08:40 ವೇಳೆಗೆ ಗಾಂಧಿನಗರ ಬಳಿಯಿರುವಾಗ ಮೇಲಾಧಿಕಾರಿಯವರಿಗೆ ಬಂದ ಮಾಹಿತಿಯಂತೆ ಕೂಳೂರು ಬಳಿಯಿರುವ ಮಂಗಳ ಟೆಕ್ಸ್ ಟೈಲ್ ಎಂಬ ಹೆಸರಿನ ಬಟ್ಟೆ ಅಂಗಡಿಯನ್ನು ತೆರೆದಿಟ್ಟುಕೊಂಡು ವ್ಯಾಪಾರದಲ್ಲಿ ತೊಡಗಿರುವ ಬಗ್ಗೆ ನಿಸ್ತಂತು ಮೂಲಕ ತಿಳಿಸಿ ಕೂಡಲೇ ಅಲ್ಲಿಗೆ ಹೋಗಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದಂತೆ ಫಿರ್ಯಾದಿದಾರರು ಸದ್ರಿ ಸ್ಥಳಕ್ಕೆ ಸಮಯ ಸುಮಾರು 08:50 ವೇಳೆಗೆ ತೆರಳಿ ನೋಡಿದಾಗ ಅಂಗಡಿ ಒಳಗಡೆ ಆಪಾದಿತ ನವೀನ್ ಚಂದ್ರ ಎಂಬವರು ಮುಖಕ್ಕೆ ಮಾಸ್ಕ್ ಧರಿಸದೇ ವ್ಯಾಪಾರದಲ್ಲಿ ತೊಡಗಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಮಾರ್ಗಸೂಚಿ ಆದೇಶವನ್ನು ಪಾಲಿಸದೇ ಉಲ್ಲಂಘಿಸಿ ತನ್ನ ಅಂಗಡಿಯನ್ನು ತೆರೆದು ಮುಖಕ್ಕೆ ಮಾಸ್ಕ್ ಧರಿಸದೇ ಮುಂಜಾಗ್ರತಾ ಕ್ರಮ ವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವಿರುವುದನ್ನು ತಿಳಿದು ಕೂಡ ನಿರ್ಲಕ್ಷ ವಹಿಸಿರುವುದರಿಂದ ಇವರ ಮೇಲೆ THE DISASTER MANAGEMENT ACT, 2005 (U/s-51(b)); IPC 1860 (U/s-269) ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

Crime Reported in  Bajpe PS

“ಫಿರ್ಯಾದಿ Poovappa H.M. PSI ರವರು   ದಿನಾಂಕ 12.06.2021 ರಂದು ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸುಮಾರು 08:00 ಗಂಟೆಗೆ ಮಂಗಳೂರು ತಾಲೂಕು, ಬಜಪೆ  ಗ್ರಾಮದ, ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕಿನ ಎದುರುಗಡೆ ಇರುವ ರೆಬೆಲ್ಲೋ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ರೆಬೆಲ್ಲೋ ಟೆಕ್ಸ್ ಟೈಲ್ ಎಂಬ ಬಟ್ಟೆ ಅಂಗಡಿಯನ್ನು ಆರೋಪಿ ಗೋಡ್ವಿನ್ ರೆಬೆಲ್ಲೋ ಎಂಬವರು ತೆರೆದಿದ್ದು, ಫಿರ್ಯಾದಿದಾರರು ಸದ್ರಿ ಅಂಗಡಿಗೆ ತೆರಳಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಕರ್ನಾಟಕ ಸರಕಾರ ಲಾಕ್ ಡೌನ್ ಆದೇಶ ಜಾರಿಯಲ್ಲಿ ಇರುವ ಬಗ್ಗೆ ತಿಳಿಸಿ, ಅಗತ್ಯ ಸಾಮಾನುಗಳ ಮಾರಾಟವನ್ನು ಹೊರತುಪಡಿಸಿ, ಅನಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇಲ್ಲದೇ ಇರುವ ಬಗ್ಗೆ ತಿಳಿಸಿದ್ದು,  ಆರೋಪಿಯು ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವುದು  ಮನಗಂಡು ಸಹ ಸರಕಾರ ಘೋಷಿಸಿರುವ ಲಾಕ್ ಡೌನ್  ಆದೇಶವನ್ನು  ಪಾಲಿಸದೇ  ತಮ್ಮ ಅಂಗಡಿಯನ್ನು ತೆರೆದು ಗ್ರಾಹಕರಿಗೆ  ಬಟ್ಟೆಗಳನ್ನು  ಮಾರಾಟ ಮಾಡಿ  ಸುರಕ್ಷತೆಗಾಗಿ  ಕೈ ಗವಚ,  ಧರಿಸದೇ ಗ್ರಾಹಕರಿಗೆ ಸ್ಯಾನಿ ಟೈಸರ್, ಹ್ಯಾಂಡ್ ವಾಷ್ ಗಳನ್ನು  ಇಡದೇ,  ವ್ಯಾಪಾರವನ್ನು ಮಾಡುತ್ತಿದ್ದುದರಿಂದ  ಆರೋಪಿಯ ವಿರುದ್ದ  ಕಲಂ: 269 ಐ.ಪಿ.ಸಿ. ಮತ್ತು ಕಲಂ: 51(ಬಿ)  ವಿಪತ್ತು ನಿರ್ವಹಣಾ ಕಾಯ್ದೆ 2005  ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ”  ಎಂಬಿತ್ಯಾದಿ

Crime Reported in  Mangalore South PS

ದಿನಾಂಕ 12-05-2021 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿಎಸ್ಐ ಶೀತಲ್ ಅಲಗೂರು, ಠಾಣಾ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ  ಸುಮಾರು 10-30 ಗಂಟೆಗೆ ಮಂಗಳೂರು ನಗರದ ಅತ್ತಾವರ ವೈಧ್ಯನಾಥ ನಗರದಲ್ಲಿರುವ “R K Traders General Mechants” ಎಂಬ ಹೆಸರಿನ ಅಂಗಡಿ ಮಾಲಕ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಿದ ಸಮಯ ಮುಗಿದ ನಂತರವು ಅಂಗಡಿಯನ್ನು ತೆರೆದು, ವ್ಯಾಪಾರ ಮಾಡಿ, ಕೋವಿಡ್-19 ಸಾಂಕ್ರಾಮಿಕ  ರೋಗ   ಹರಡುವಿಕೆಯನ್ನು ತಡೆಗಟ್ಟುವಿಕೆ ಬಗ್ಗೆ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಆದೇಶಗಳನ್ನು ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿರುತ್ತಾರೆ. ಸದ್ರಿ ಅಂಗಡಿಯ ಮಾಲಕನ ವಿರುದ್ದ ಕಲಂ: 51 (B)  ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕಲಂ 269 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ  ಎಂಬಿತ್ಯಾದಿಯಾಗಿರುತ್ತದೆ.

Crime Reported in  Moodabidre PS               

ದಿನಾಂಕ: 12-05-2021 ರಂದು ಠಾಣಾ ಪಿ.ಎಸ್.ಐ ಸಿದ್ದಪ್ಪ ರವರು ಮತ್ತು ಸಿಬ್ಬಂದಿಗಳಾದ ಗೋವಿಂದರಾಜ್ ಹಾಗೂ ಸಂತೋಷ್ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆ ತಾಲೂಕು ಮಾರ್ಪಾಡಿ ಗ್ರಾಮದ, ಮಸೀದಿ ರಸ್ತೆಯ ಬಳಿಯ ರಿಯಾ ಟ್ರೇಡರ್ ಅಂಗಡಿಯನ್ನು ಸಮಯ ಸುಮಾರು 07.30 ಗಂಟೆಗೆ ಆರೋಪಿಯು ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯ ಹಿನ್ನೆಲೆಯಲ್ಲಿ ಸರ್ಕಾರದ ಹೊರಡಿಸಿದ ಲಾಕ್ ಡೌನ್ ಆದೇಶವನ್ನು ಅನುಸರಿಸದೇ ಅಂಗಡಿ ತೆರೆಯಲು ಅನುಮತಿ ಇಲ್ಲದೇ ಇದ್ದರೂ ಹಾಗೂ ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡಬಹುದು ಎಂಬ ಸ್ಪಷ್ಟ ಅರಿವಿದ್ದರೂ ಕೂಡ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದರಿಂದ ಆರೋಪಿ ವಿರುದ್ದ IPC 1860 (U/s-269); THE DISASTER MANAGEMENT ACT, 2005 (U/s-51(b)) ರಂತೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

2) ದಿನಾಂಕ 11-05-2021 ರಂದು ಪಿರ್ಯಾದಿದಾರರಾದ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕೆಲ್ಲಪುತ್ತಿಗೆ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಗೂಡಂಗಡಿಯ ಹಿಂಭಾಗದ ತೆರೆದ ಸ್ಥಳದಲ್ಲಿ ಅರೋಪಿ ಜಯ ಪೂಜಾರಿ ಮತ್ತು ಆತನ ಹೆಂಡತಿ ಹಾಗೂ ಇತರರು ಸೇರಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ ಸಮಯ 19.40 ಗಂಟೆಗೆ ಸ್ಥಳಕ್ಕೆ ಹೋಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಲ್ಲಿಗೆ ದಾಳಿ ಮಾಡಿ ಸ್ಥಳವನ್ನು ಪರಿಶೀಲಿಸಲಾಗಿ ಪ್ಲಾಸ್ಟಿಕ್ ಚೀಲವೊಂದರಲ್ಲಿ Mysore Lancer  ಎಂದು ಬರೆದಿರುವ 90 ML ನ 20 ಸ್ಯಾಚೇಟ್‌ಗಳು ಇದ್ದು ಇದರ ಮೌಲ್ಯ ಸುಮಾರು ರೂ 700/- ಆಗಿದ್ದು ಮುಂದಿನ ಕ್ರಮದ ಬಗ್ಗೆ ಅದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಅಲ್ಲದೇ,  ಆರೋಪಿ ಜಯ ಪೂಜಾರಿ ಮತ್ತು ಆತನ ಹೆಂಡತಿ ಹಾಗೂ ಇತರರು ಇತ್ತೀಚೆಗೆ ಕೋವಿಡ್ -19 ಕೋರೋನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಅತ್ಯಂತ ವೇಗವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವ ಉದ್ದೇಶದಿಂದ ಸರಕಾರವು ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಪಾಲನೆ ಮಾಡುವಂತೆ ಆದೇಶವನ್ನು ಮಾಡಿದ್ದರೂ ಸಹ ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ರೋಗವು ಹರಡುವ ಸಾದ್ಯತೆ ಇದೆ ಎಂದು ತಿಳಿದೂ ಕೂಡಾ ಸರಕಾರದ ಆದೇಶವನ್ನು ಉಲ್ಲಂಘಿಸಿ ಜನರನ್ನು ಗುಂಪು ಗೂಡಿರುವ ರೀತಿಯಲ್ಲಿ ನಿಲ್ಲಿಸಿ ಯಾವುದೇ ಮುಂಜಾಗರೂಕತಾ ಕ್ರಮ  ವಹಿಸದೇ ಸಾಮಾಜಿಕ ಅಂತರವನ್ನು ಪಾಲನೆ ಮಾಡದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದಾಗಿದೆ ಎಂಬಿತ್ಯಾದಿಯಾಗಿದೆ.

ಇತ್ತೀಚಿನ ನವೀಕರಣ​ : 12-05-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080