ಅಭಿಪ್ರಾಯ / ಸಲಹೆಗಳು

Crime Reported in Mangalore East PS

ದಿನಾಂಕ: 11-06-2021 ರಂದು ಸಂಜೆ:05-45 ಗಂಟೆಗೆ ಮಂಗಳೂರು ನಗರದ ಯೆಯ್ಯಾಡಿ ವೈನ್ಸ್ ಆಂಡ್ ಸ್ಪೀರಿಟ್ ಬಳಿ ಸಾರ್ವಜನಿಕ ಖಾಲಿ ಜಾಗದಲ್ಲಿ ಜನರು ಗುಂಪು ಸೇರಿಕೊಂಡು ಸರಕಾರ ಹೊರಡಿಸಿದ ಕೋವಿಡ್ -19 ಮಾರ್ಗ ಸೂಚಿಯನ್ನು ಪಾಲಿಸದೇ ಮುಖಕ್ಕೆ  ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದೆ ಕೊಳ್ಳದೇ  ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಕಾರ್ಡ್ ಗಳಿಂದ ಅಂದರ್ ಬಾಹರ್ ಎಂಬ ಜುಗಾರಿ  ಆಡುತ್ತಿದ್ದಾರೆ  ಎಂಬುದಾಗಿ  ದೊರೆತ ಖಚಿತ ವರ್ತಮಾನದ ಮೇರೆಗೆ, PSI Anitha Nikkam ರವರು ಸಿಬ್ಬಂದಿಗಳೊಂದಿಗೆ ಯೆಯ್ಯಾಡಿ ವೈನ್ಸ್ ಆಂಡ್ ಸ್ಪೀರಿಟ್ ಬಳಿ ಖಾಲಿ ಜಾಗಕ್ಕೆ ಸಂಜೆ: 6-45 ಗಂಟೆಗೆ ದಾಳಿ ನಡೆಸಿ,   ಕೋವಿಡ್ -19 ಮಾರ್ಗ ಸೂಚಿಯನ್ನು ಪಾಲಿಸದೇ ಮುಖಕ್ಕೆ  ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದೆ ಕೊಳ್ಳದೇ  ಜುಗಾರಿ ಆಟ ಆಡುತ್ತಿದ್ದ ಜೂಜಾಟ  ಆಡುತ್ತಿದ್ದ 1)  ವಿಶ್ವಾಸ್ ಶೆಟ್ಟಿ (2) ಸಂತೋಷ್ ದೇವಾಡಿಗ. (3) ಸಂದೀಪ್ ಪೂಜಾರಿ (4) ಸುದರ್ಶನ್ ಪೂಜಾರಿ (5) ಮನೋಜ್ (6) ಅವೀತ್ (7) ಮಹಂತಪ್ಪ (8) ಪುರುಷೋತ್ತಮ ಸುವರ್ಣ. (9) ಸಂದೀಪ್ ಇವರನ್ನು ವಶಕ್ಕೆ ಪಡೆದು  ಜುಗಾರಿ ಆಟಕ್ಕೆ ಉಪಯೋಗಿಸಿದ  2370/- ಇಸ್ಪೀಟು ಎಲೆಗಳು-52,    ಪ್ಲಾಸ್ಟಿಕ್ ಗೋಣಿಯನ್ನು ಪಂಚರ ಸಮಕ್ಷಮದಲ್ಲಿ  ಮಹಜರು ಮೂಲಕ  ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ

 

Crime Reported in Mangalore South PS

ದಿನಾಂಕ 11-06-2021 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿ.ಎಸ್.ಐ ಮಂಜುಳಾ ಎಲ್ (ಕಾ&ಸು-2) ರವರು ಠಾಣಾ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಂತೆ, ಬೆಳಿಗ್ಗೆ ಸುಮಾರು 08-00 ಗಂಟೆಗೆ ಮಂಗಳೂರು ನಗರದ ಮಹಾಕಾಳಿ ಪಡ್ಪು ರೈಲ್ವೆ ಬಳಿ  “ಮೊಬೈಲ್ ಪಾಯಿಂಟ್” ಎಂಬ ಹೆಸರಿನ ಮೊಬೈಲ್  ಅಂಗಡಿ ಮಾಲಕ, ಮಾನ್ಯ ಜಿಲ್ಲಾಧಿಕಾರಿಗಳು ಕೋವಿಡ್-19 ಸಾಂಕ್ರಾಮಿಕ  ರೋಗ ಹರಡುವಿಕೆಯನ್ನು ತಡೆಗಟ್ಟುವಿಕೆ ಬಗ್ಗೆ, ಅತ್ಯಾವಶ್ಯಕ ಸೇವೆಗಳನ್ನು ಹೊರತು ಪಡಿಸಿ, ಉಳಿದ ವಾಣಿಜ್ಯ ಉದ್ದೇಶದ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿರುವುದನ್ನು ತಿಳಿದೂ, ಸದ್ರಿ ಅಂಗಡಿಯಲ್ಲಿ ವ್ಯಾಪಾರ ಮಾಡುವ ಗ್ರಾಹಕರ ಪೈಕಿ ಯಾರಿಗಾದರೂ ಕೋವಿಡ್-19 ಸಾಂಕ್ರಾಮಿಕ ರೋಗದ ಲಕ್ಷಣಗಳಿದ್ದರೆ, ಅದು ಒಬ್ಬ ವ್ಯಕ್ತಿಯಿಂದ ಇತರೇ ವ್ಯಕ್ತಿ ಅಥವಾ ಸಮೂದಾಯಕ್ಕೆ ಹರಡುವ ಸಾಧ್ಯತೆ ಇರುವ ಬಗ್ಗೆ ತಿಳಿದೂ ಸಹಾ ಮಾನ್ಯ ಜಿಲ್ಲಾಧಿಕಾರಿಯವರ ಆದೇಶಗಳನ್ನು ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿರುತ್ತಾರೆ. ಹಾಗಾಗಿ ಸದ್ರಿ ಅಂಗಡಿಯ ಮಾಲಕನ ವಿರುದ್ದ ಕಲಂ: 4,5 ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ-2020 ಹಾಗೂ ಕಲಂ 269 ಐ.ಪಿ.ಸಿ ಯಂತೆ ಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ, ಎಂಬಿತ್ಯಾದಿಯಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 12-06-2021 05:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080