Crime Reported in Cyber Crime PS
Cyber Tip Line ಮುಖಾಂತರ ಕಳುಹಿಸಿಕೊಟ್ಟಿರುವ ದೂರನ್ನು ದಿನಾಂಕ: 11/05/2021 ರಂದು ಸ್ವೀಕರಿಸಿ ವರದಿ ಹಾಗೂ ಸಿಡಿಯನ್ನು ಪರಿಶೀಲಿಸಲಾಗಿ 25-06-2020 ರಂದು, ಮಗುವಿನ ಅಶ್ಲೀಲತೆಯ ವೀಡಿಯೋವನ್ನು ಡೌನ್ ಲೋಡ್ ಮಾಡಿ ಫೇಸ್ ಬುಕ್ ಮೆಸೆಂಜರ್ ನಲ್ಲಿ ಚಾಟ್ ಮಾಡಿರುವ ಹಾಗೂ ಅಪ್ ಲೋಡ್ ಮಾಡಿರುವ ಮಾಹಿತಿ ಒಳಗೊಂಡಿರುವುದು ಕಂಡುಬರುತ್ತದೆ. ಸದ್ರಿ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಿ ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿ Ashi Hyder ಮತ್ತು Ilyas ಎಂಬವರ ವಿರುದ್ದ ಕಲಂ:67(ಬಿ) ಐಟಿ ಕಾಯ್ದೆ ರಂತೆ ಸ್ವಯಂ ಪ್ರೇರಿತವಾಗಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗಿದೆ ಎಂಬಿತ್ಯಾದಿ
Crime Reported in Mangalore North PS
ತಾರೀಖು 12.07.2021 ರಂದು ಬೆಳಗ್ಗೆ 07.20 ಗಂಟೆಗೆ ಶ್ರೀಮತಿ ದೀಪಿಕಾ ಡಿಸೋಜಾ (45) ಕಿರಿಯ ಆರೋಗ್ಯ ನೀರೀಕ್ಷಕರವರು, ಮಂಗಳೂರು ಮಹಾನಗರ ಪಾಲಿಕೆ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 12.07.201ರಂದು ಬೆಳಗಿನ ಸಮಯ 05.00 ಗಂಟೆಗೆ ಉಪ ನಿರ್ದೇಶಕರು ಪಶು ಸಂಗೋಪ ಇಲಾಖೆ ಇವರು ನೀಡಿದ ಮಾಹಿತಿಯಂತೆ ತಾನು ಹಾಗೂ ಇತರ ಆರೋಗ್ಯ ಇಲಾಖೆಯ 04 ಜನ ಸಿಬ್ಬಂದಿಗಳೊಂದಿಗೆ ಮಂಗಳೂರು ನಗರದ ಕುದ್ರೋಳಿ ಮಂಡಿಗೆ ಭೇಟಿ ನೀಡಿ ಪರೀಶೀಲಿಸಿದಾಗ ಕಸಾಯಿ ಖಾನೆ ಕೊಠಡಿಯಲ್ಲಿ ಅಪ್ರಾಪ್ತ ವಯಸ್ಸಿನ 03 ವರ್ಷ ಪ್ರಾಯದ ಕೋಣಗಳನ್ನು ಗುತ್ತಿಗೆ ದಾರರು ಕೂಡಿ ಹಾಕಿದ್ದು ಸದ್ರಿ ಕೋಣಗಳು ಅಪ್ರಾಪ್ತ ವಯಸ್ಸಿನ ಜಾನುವಾರುಗಳೆಂದು ಉಪ ನಿರ್ದೇಶಕರು ತಿಳಿಸಿರುತ್ತಾರೆ. ಈ ಅಪ್ರಾಪ್ತ ವಯಸ್ಸಿನ 03 ಕೋಣಗಳನ್ನು ಮಾಂಸಕ್ಕಾಗಿ ಕಡಿಯುವ ಉದ್ದೇಶದಿಂದ ಕೂಡಿ ಹಾಕಿರುವುದನ್ನು ವಶಪಡಿಸಿಕೊಂಡಿದ್ದು ವಧೆ ಮಾಡಲು ನಿರ್ಧರಿಸಿರುವ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ
Crime Reported in Panambur PS
ಪಿರ್ಯಾದಿದಾರಾದ ಮುನೀರ್ ಆಹಮ್ಮದ್ ಎಂಬವರು ತಮ್ಮ ಕುಟುಂಬದೊಂದಿಗೆ ಮಂಗಳೂರು ನಗರದ ಜೋಕಟ್ಟೆ ಗ್ರಾಮದ ಕೆಳಗಿನ ತೋಕೂರು ಎಂಬಲ್ಲಿ ವಾಸವಾಗಿದ್ದು. ಸದ್ರಿಯವರು ತಮ್ಮ ವಾಸದ ಮನೆಯನ್ನು ದಿನಾಂಕ 12-06-2021 ರಂದು 09-30ಗಂಟೆಗೆ ಬೀಗ ಹಾಕಿ ಬಜಪೆಗೆ ಹೋಗಿದ್ದು, ದಿನಾಂಕ 14-06-2021 ರಂದು ವಾಪಾಸು ಬಂದಿದ್ದು, ಆ ಸಮಯ ಪಿರ್ಯಾದಿಯ ಮನೆಯ ಹಾಲ್ ನ ಚಾವಣಿಯ 3 ಹಂಚು ತುಂಡಾಗಿ ಮನೆಯ ಒಳಗೆ ಬಿದ್ದುದ್ದು ಅದರ ಜೊತೆಯಲ್ಲಿ ತೆಂಗಿನಕಾಯಿಯು ಬಿದ್ದಿರುವುದರಿಂದ ಮನೆ ಕ್ಲೀನ್ ಮಾಡಿ ಹಂಚನ್ನು ಸರಿಪಡಿಸಿದ್ದಾಗಿಯೂ, ನಂತರ ದಿನಾಂಕ 18-06-2021 ರಂದು ಪಿರ್ಯಾದಿ ಹೆಂಡತಿ ಮನೆಗೆ ಬಂದು ಮನೆಯ ಗೋದ್ರೇಜ್ ಒಳಗಡೆ ನೋಡಿದಾಗ ಚಿನ್ನಾಭರಣ ಬಾಕ್ಸ್ ನಲ್ಲಿದ್ದ ಸುಮಾರು 276 ಗ್ರಾಂ ತೂಕದ ಚಿನ್ನಾಭರಣಗಳು ಮೌಲ್ಯ ಸುಮಾರು ರೂ. 8,28,000/- ಹಾಗೂ ರೂ. 5,500/- ನಗದು ಕಳವಾಗಿರುತ್ತದೆ. ದಿನಾಂಕ 12-06-2021 ರಂದು 09-30 ಗಂಟೆಯಿಂದ ದಿನಾಂಕ 14-06-2021 ರಂದು ಬೆಳಿಗ್ಗೆ 08-00 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮನೆಯ ಹಂಚು ತೆಗೆದು ಒಳಪ್ರವೇಶಿಸಿ ಕಳವು ಮಾಡಿದ್ದು, ಕಾನೂನಿನ ಬಗ್ಗೆ ಸರಿಯಾದ ಜ್ಞಾನ ಇಲ್ಲದೇ ಇದ್ದುದ್ದರಿಂದ ವಿಳಂಬವಾಗಿ ದೂರು ನೀಡಿದ್ದಾಗಿಯೂ, ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಮತ್ತು ಕಳವಾದ ಚಿನ್ನಾಭರಣಗಳನ್ನು ಪತ್ತೆ ಹಚ್ಚಿ ಕೊಡಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ
2) ಪಿರ್ಯಾಧಿ MADHAVA SALIYANರವರ ಬಾಬ್ತು ಬೈಕಂಪಾಡಿ ಮೀನಕಳಿಯಾದಲ್ಲಿರುವ ಅವರ ಕುಟುಂಬದ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದಲ್ಲಿ ಪೂಜಾರಿಯಾಗಿದ್ದು, ಪಿರ್ಯಾದುದಾರರು ಎಂದಿನಂತೆ ದಿನಾಂಕ 11-07-2021 ರಂಧು ಬೆಳಿಗ್ಗೆ 6.00 ಗಂಟೆಗೆ ದೈವಸ್ಥಾನಕ್ಕೆ ನೀರು ಮತ್ತು ಅಗರಬತ್ತಿಯನ್ನು ಇಡಲು ಹೋದ ಸಮಯ ನೋಡಲಾಗಿ ದೈವಸ್ಥಾನದ ಬೀಗ ಒಡೆದು ದೈವ ಸ್ಥಾನದ ಬಾಗಿಲು ತೆರೆದಿದ್ದು, ಯಾರೋ ಕಳ್ಳರು ದಿನಾಂಕ: 10-06-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 11-06-2021 ರ ಬೆಳಿಗ್ಗೆ 6.00 ಮಧ್ಯೆ ದೈವಸ್ಧಾನದ ಬಾಗಿಲಿನ ಬೀಗ ಒಡೆದು ದೈವಸ್ಥಾನದ ಒಳಗಡೆ ನುಗ್ಗಿ ಒಳಗಡೆ ಇದ್ದ ಸುಮಾರು 75,000/-ರಿಂದ 80,000/- ರೂ. ಮೌಲ್ಯದ ದೈವದ ಬೆಳ್ಳಿಯ ಚಿಕ್ಕ ಮೂರ್ತಿ ಸಹಿತ ಚಿನ್ನಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳಾವಾದ ಸೊತ್ತುಗಳನ್ನು ಮತ್ತು ಕಳಾವು ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿಯಾಗಿರುತ್ತದೆ.
ಕಳಾವದ ಸೊತ್ತುಗಳ ವಿವರ.
1.ಚಿನ್ನದ ಕರಿಮಣಿ ಸರ ( ಮೂರ್ತಿಗೆ ಹಾಕಿದ ಸಣ್ಣದು)
2.ಚಿನ್ನದ 7 ಕಲ್ಲಿನ ಮೂಗುತಿ
3.ದೈವದ ಪಾಪೆಗೆ ತೊಡಿಸಿದ ಬಳೆ ಮತ್ತು ಕಿವಿಯೋಲೆ
4.ಪಂಜುರ್ಲಿ ದೈವದ ಕಡ್ಸಲೆ
5.ಬೆಳ್ಳಿಯ ಪಂಜರ್ಲಿ ದೈವದ ಪಾಪೆ
6.ಬೆಳ್ಳಿಯ ಕಲ್ಲುರ್ಟಿ ದೈವದ ಪಾಪೆ
7.ಕಲ್ಲುರ್ಟಿ ದೈವದ ಬೆತ್ತದ ಬೆಳ್ಳಿಯ ಹಿಡಿ
8.ಬೆಳ್ಳಿಯ ಗೆಜ್ಜೆ ಒಂದು ಜೊತೆ
Crime Reported in Moodabidre PS
ದಿನಾಂಕ: 12-07-2021 ರಂದು ಕೆಎ-19-ಎಂಇ-7249 ನಂಬ್ರದ ವ್ಯಾಗನರ್ ಕಾರು ಚಾಲಕ ಪ್ರೇಮ್ ರೋಶನ್ ಡಿಕೋಸ್ತಾರವರು ತನ್ನ ಕಾರನ್ನು ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಮೂಡಬಿದ್ರೆ ತಾಲೂಕು ತೋಡಾರು ಗ್ರಾಮದ ದೇವಿನಗರ ಕ್ರಾಸ್ ಎಂಬಲ್ಲಿ ರಸ್ತೆ ಬದಿಯಲ್ಲಿ ಅಬ್ದುಲ್ ರಹಿಮಾನ್‌ರವರ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಅಜ್ಮಾ ಪಾತಿಮಾ ಪ್ರಾಯ 5 ವರ್ಷ ಎಂಬರಿಗೆ ಡಿಕ್ಕಿಯಾದ ಪರಿಣಾಮ ಅಜ್ಮಾ ಫಾತಿಮಾ ರವರ ತಲೆಗೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳು ಹಾಗೂ ದೇಹದ ಇತರ ಕಡೆಗಳಿಗೆ ಗಾಯ ನೋವುಗಳಾದವಳನ್ನು ಚಿಕಿತ್ಸೆಯ ಬಗ್ಗೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆಯನ್ನು ವೈದ್ಯರು ಪರೀಕ್ಷಿಸಿ ಅಜ್ಮಾ ಫಾತಿಮಾಳು ಬೆಳಿಗ್ಗೆ 11-40 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದು ಎಂಬಿತ್ಯಾದಿ
Crime Reported in Mangalore Women PS
ಪಿರ್ಯಾದಿದಾರರಾದ ಟ್ರೇಸ್ಸಿ ಸಿಕ್ವೇರಾ ರವರು ಬ್ಲಿಸ್ ಸಿಗ್ನೇಚರ್ ಸಲೂನ್ ಮತ್ತು ಸ್ಪಾ ಅನ್ನು ನೋಡಿಕೊಳ್ಳುತ್ತಿದ್ದು, ದಿನಾಂಕ 01-07-2021 ರಂದು ಸಂಜೆ 4.15 ಗಂಟೆಗೆ ಎಂದಿನಂತೆ ಪಿರ್ಯಾದಿದಾರರು ತಮ್ಮ ಶಾಫಿಗೆ ತೆರಳಿದಾಗ ಅಲ್ಲಿ ಪಿರ್ಯಾದಿದಾರರ ಗಂಡ ನೇಮಿಸಲ್ಪಟ್ಟ ಆರೋಪಿ ಅಬ್ದುಲ್ ದಾವೂದ್ ಎಂಬಾತನು ಬಂದು, ಪಿರ್ಯಾದಿದಾರರು ಕ್ಯಾಶ್ ಕೌಂಟರ್ ನಿಂದ 14 ಸಾವಿರ ಕ್ಯಾಶ್ ಹಾಗೂ ರಿಪೋಟರ್್ ಪುಸ್ತಕವನ್ನು ತೆಗೆಯುತ್ತಿದ್ದ ಸಮಯ ಆರೋಫಿ ಬಲಪ್ರಯೋಗ ಮಾಡಿ, ಅಡ್ಡಹಾಕಿ ಕುತ್ತಿಗೆ ಹಿಡಿದು, ಮೈಗೆ ಕೈ ಹಾಕಿ 14 ಸಾವಿರ ಹಣವನ್ನು ಕಸಿದುಕೊಂಡು ಮಾನಕ್ಕೆ ಕುಂದು ಮಾಡಿ ಜೀವ ತೆಗೆಯುವುದಾಗಿ ಹೆದರಿಸಿ ಆಘಾತ ಉಂಟು ಹೆದರಿಸಿ ಆಘಾತ ಉಂಟು ಮಾಡಿರುತ್ತಾನೆ
Crime Reported in Mangalore Rural PS
ದಿನಾಂಕ 10-07-2021 ರಂದು ಪ್ರಕರಣದ ಪಿರ್ಯಾದಿ ಶ್ರೀ ದಯಾಳ್ ರಾಜ್ ರವರು ವಾಮಂಜೂರಿಗೆ ಬಂದವರು ವಾಪಸ್ ತನ್ನ ಮನೆಯಾದ ಪಚ್ಚನಾಡಿ ಗ್ರಾಮದ ಆಶ್ರಯ ಕಾಲೋನಿಗೆ ಹೋಗುವರೇ ವಾಮಂಜೂರು ಸಂತೋಷ ನಗರ ಮಾರ್ಗವಾಗಿ ಸಂತೋಷ ನಗರದ ನಾಯಕ್ ಎಂಬುವರ ಅಂಗಡಿಗೆ ರಾತ್ರಿ 9:30 ಗಂಟೆಗೆ ಹೋಗಿ ಅಂಗಡಿ ಮಾಲಕರಾದ ನಾಯಕ್ರವರ ಪತ್ನಿಯಲ್ಲಿ ಸಿಗರೇಟ್ ಕೇಳಿ ಸಿಗರೇಟಿನ ಹಣ ನೀಡಿ ಮತ್ತು ತಾನು ಈ ಹಿಂದೆ ಹಣ ನೀಡಲು ಏನಾದರು ಬಾಕಿ ಇದೆಯೇ ಎಂದು ಕೇಳಿದಾಗ ನಿನ್ನ ಹಣ ಯಾರಿಗೆ ಬೇಕು ಎಂದು ಅಂಗಡಿಯವರ ಮಾಲಿಕರ ಪತ್ನಿ ಹೇಳಿದ್ದು ಅದಕ್ಕೆ ಪಿರ್ಯಾದಿದಾರರು ಆ ರೀತಿ ಏಕೆ ಮಾತನಾಡುತ್ತಿದ್ದಿರಿ, ಎಂದು ಕೇಳಿದಾಗ ಅಲ್ಲಿದ್ದ ರಚನ್ ಮತ್ತು ರೋಹಿತ್ ಎಂಬವರು ಪಿರ್ಯಾದಿದಾರರನ್ನು ಉದ್ದೇಶಿಸಿ ಬೇವರ್ಸಿ ..ಮಗ ಅಂಗೆಇಯವರಿಗೆ ಯಾಕೆ ಜೋರು ಮಾಡುತ್ತೀ, ಎಂದು ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಪಿರ್ಯಾದಿದಾರರ ತಲೆಗೆ ಸೋಡಾ ಬಾಟಲಿಯಿಂದ ಹೊಡೆದು ಗಾಯಗೊಳಿಸಿರುತ್ತಾರೆ.ಗಾಯಗೊಂಡ ಪಿರ್ಯಾದಿಯು ತಮ್ಮ ಮೇಲೆ ಪೊಲೀಸ್ ಕೇಸ್ ನೀಡಬಹುದದೆಂದು ಪಿರ್ಯಾದಿದಾರರನ್ನು ಅಲ್ಲಿಂದ ಹೋಗಲು ಬಿಡದೆ ಪದವಿನಂಗಡಿಗೆ ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿಕೊಂಡು ಹೋಗಿ ಅಲ್ಲಿಂದ ಒಂದು ಸ್ವಿಪ್ಟ್ ಕಾರಿನಲ್ಲಿ ಇತರ ಇಬ್ಬರೊಂದಿಗೆ ಆರೋಪಿತರು ಪಿರ್ಯಾದಿದಾರರನ್ನು ಮಂಗಳೂರು ಎ.ಜೆ ಆಸ್ಪತ್ರೆಯ ಗೇಟಿನ ಮುಂದುಗಡೆ ಬಿಟ್ಟು ಹೋಗಿದ್ದು, ಆರೋಪಿಗಳ ಸ್ನೇಹವನ್ನು ಬಿಟ್ಟು ಪಿರ್ಯಾದಿದಾರರು ತಮ್ಮಿಷ್ಟಕ್ಕೆ ಇದ್ದರೆಂಬ ದ್ವೇಷದಿಂದ ಆರೋಪಿಗಳು ಈ ಕೃತ್ಯವನ್ನು ನಡೆಸಿರುತ್ತಾರೆ ಎಂಬಿತ್ಯಾದಿ ಪಿರ್ಯಾದಿ ಸಾರಾಂಶ.
Crime Reported in Traffic North PS
ದಿನಾಂಕ; 10-07-2021 ರಂದು ಫಿರ್ಯಾದಿದಾರದ ಪ್ರದೀಪ್ ಭಂಡಾರಿ ರವರ ಆಟೋಎಲೆಕ್ಟ್ರಿಕ್ ನಲ್ಲಿ ಕೆಲಸ ಮಾಡುವ ತೇಜಸ್ ರವರು KA19EQ9416 ನಂಬ್ರ ಸ್ಕೂಟರನ್ನು ರಾ.ಹೆ 66 ರ ಮಂಗಳೂರು-ಉಡುಪಿ ರಸ್ತೆಯಲ್ಲಿ ಪಣಂಬೂರುನಿಂದ ಕುಳಾಯಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ರಾತ್ರಿ 20-30 ಜೋಕಟ್ಟೆ ಕ್ರಾಸ್ ದಾಟಿ ಸ್ವಲ್ಪ ಮುಂದೆ ತಲುಪಿದಾಗ ಪಣಂಬೂರು ಕಡೆಯಿಂದ ಅದೇ ಮಾರ್ಗದಲ್ಲಿ KA01AH4357 ನೇ ನಂಬ್ರದ ಬುಲೆಟ್ ಟ್ಯಾಂಕರನ್ನು ಅದರ ಚಾಲಕ ಲಕ್ಷ್ಮಣ ಎಂಬುವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸ್ಕೂಟರನ ಎಡಬಾಗದ ಹಿಂಬಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ತೇಜಸ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಆತನ ಸೊಂಟದ ಭಾಗಕ್ಕೆ ಹಾಗೂ ತೊಡೆಗಳ ಸಂದಿಗೆ ಗಂಭಿರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರ್ಯಾದಿ ಸಾರಾಂಶ.
Crime Reported in Surathkal PS
ಪಿರ್ಯಾದಿ ಸುಧಾಕರ ದೇವಾಡಿಗ ಎಂಬುವರು ದಿನಾಂಕ 11/07/2021 ರಂದು ಬೆಳಿಗ್ಗೆ ಅವರ ಬಾಬ್ತು ಆಟೋ ರಿಕ್ಷಾ ನಂಬ್ರ KA-19-AC-0501 ರಲ್ಲಿ ಚೇಳ್ಯಾರುನಿಂದ ಸುರತ್ಕಲ್ ಗೆ ಬರುತ್ತಿರುವ ಸಮಯ ತಡಂಬೈಲ್ ಶ್ರೀ ದುರ್ಗಾಂಬಾ ದೇವಸ್ಥಾನದಿಂದ ಸ್ವಲ್ಪ ಮುಂದೆ ಕೈ ತೋರಿಸಿದ ಪ್ರಯಾಣಿಕರನ್ನು ರಿಕ್ಷಾಕ್ಕೆ ಹತ್ತಿಸುವ ಸಮಯದಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ ನಂಬ್ರ KA-20-AA-1389 ನೇದರ ಚಾಲಕನು ಜೋರಾಗಿ ಹಾರ್ನ್ ಮಾಡಿದಾಗ ಪಿರ್ಯಾದಿದಾರರು ರಿಕ್ಷಾವನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋದ ಸಮಯದಲ್ಲಿ ಬೆಳಿಗ್ಗೆ 08-45 ಗಂಟೆಗೆ ಸೂರಜ್ ಹೋಟೇಲ್ ಎದುರು ಸದ್ರಿ ಬಸ್ಸಿನ ಚಾಲಕ ಅಟೋ ರಿಕ್ಷಾಕ್ಕೆ ತಾಗಿಸುವಂತೆ ಬಂದು ಬಸ್ಸನ್ನು ರಿಕ್ಷಾಕ್ಕೆ ಅಡ್ಡ ಇಟ್ಟು ಬಸ್ಸಿನ ಚಾಲಕ ಇಳಿದು ಬಂದು ಬಸ್ ನಿಲ್ದಾಣದ ಪಕ್ಕ ಪಿಕಪ್ ಮಾಡುತ್ತಿಯಾ ಬೆವರ್ಸಿ ಮಗ ಎಂದು ಅವಾಚ್ಯ ಶಬ್ದದಿಂದ ಬೈದು ಎಡ ಕೆನ್ನೆಗೆ ಕೈಯಿಂದ ಹಲ್ಲೆ ಮಾಡಿದ ಸಮಯ ಬಸ್ಸಿನ ಕಂಡಕ್ಟರ್ ಕೂಡಾ ಬಂದು ಪಿರ್ಯಾದಿದಾರರನ್ನು ರಿಕ್ಷಾದಿಂದ ಎಳೆದು ಹಾಕಿ ಇಬ್ಬರು ಸೇರಿ ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ
2)ಪಿರ್ಯಾದಿ Laxman Moolya ರವರು ದಿನಾಂಕ 10-07-2021 ರಂದು ಸಂಜೆ ಸುಮಾರು 04-30 ಗಂಟೆಗೆ ಹೊಸಬೆಟ್ಟು ಗ್ರಾಮದ ಪಿರ್ಯಾದಿದಾರರ ವಾಸ್ತವ್ಯದ ಮನೆಯನ್ನು ಬೀಗ ಹಾಕಿ ಬಂಟ್ವಾಳದಲ್ಲಿರುವ ಪಿರ್ಯಾದಿದಾರರ ಅತ್ತೆಯ ಮನೆಗೆ ಹೋಗಿದ್ದು ದಿನಾಂಕ 11-07-2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಗೆ ವಾಪಸ್ ಬಂದಾಗ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಮುಖ್ಯ ದ್ವಾರವನ್ನು ಬಲವಂತವಾಗಿ ಒಡೆದು ಒಳ ಪ್ರವೇಶಿಸಿ ಪಿರ್ಯಾದಿದಾರರ ಮನೆಯ ಮಾಸ್ಟರ್ ಬೆಡ್ ರೂಮ್ ನಲ್ಲಿದ್ದ 3 ಕಪಾಟುಗಳನ್ನು ಬಲವಂತವಾಗಿ ಒಡೆದು ಜಾಲಾಡಿ ಕಪಾಟಿನಲ್ಲಿರಿಸಿದ್ದ ಪಿರ್ಯಾದಿದಾರರ ಪತ್ನಿ ವಿಜಯಲಕ್ಷ್ಮೀ ರವರ ಸುಮಾರು 40 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಸುಮಾರು 44 ಗ್ರಾಂ ತೂಕದ ಚಿನ್ನದ ಚೈನ್, ಸುಮಾರು 44 ಗ್ರಾಂ ಚಿನ್ನದ ಹವಳದ ಸರ, ಸುಮಾರು 22 ಗ್ರಾಂ ಚಿನ್ನದ ಮುತ್ತಿನ ಸರ, ಸುಮಾರು 28 ಗ್ರಾಂ ಚಿನ್ನದ ನೆಕ್ಲೇಸ್, ಸುಮಾರು 14 ಗ್ರಾಂ ತೂಕದ ಪೆಡೆಂಟ್ ಇರುವ ಚಿನ್ನದ ಸರ, ಸುಮಾರು 104 ಗ್ರಾಂ ತೂಕದ 4 ಜೊತೆ ಚಿನ್ನದ ಬಳೆ, ಸುಮಾರು 12 ಗ್ರಾಂ ಒಂದು ಜೊತೆ ಚಿನ್ನದ ಹ್ಯಾಂಗಿಂಗ್ ಕಿವಿವೋಲೆ, ಹಾಗೂ ಪಿರ್ಯಾದಿದಾರರಿಗೆ ಸಂಬಂಧಪಟ್ಟ ಅಂದಾಜು ಸುಮಾರು 24 ಗ್ರಾಂ ತೂಕದ 6 ಚಿನ್ನದ ಉಂಗುರ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸುಮಾರು 288 ಗ್ರಾಂ ತೂಕದ ಒಡವೆಗಳ ಅಂದಾಜು ಮೌಲ್ಯ ಸುಮಾರು 14,00,000/-ರೂಪಾಯಿಗಳಷ್ಟು ಆಗಿರುತ್ತದೆ ಆದ್ದರಿಂದ ಮುಂದಿನ ಕ್ರಮದ ಬಗ್ಗೆ ಕೋರಿಕೆ ಎಂಬಿತ್ಯಾದಿ.