ಅಭಿಪ್ರಾಯ / ಸಲಹೆಗಳು

Crime Reported in  Mulki PS

ದಿನಾಂಕ 11.08.2021 ರಂದು ಸಮಯ ಸುಮಾರು ಮಧ್ಯಾಹ್ನ 1.30 ಗಂಟೆಗೆ ಪಿರ್ಯಾದಿ Pundalika Shettigar ದಾರರು ಅವರ ಅಕ್ಕನ ಮಗಳಾದ ಭವ್ಯಳ ಸಾಂಸಾರಿಕ ಜೀವನದ ಬಗ್ಗೆ ಆಕೆಯ ಗಂಡನಾದ ಸಂತೋಷ್ ಪದ್ಮಶಾಲಿ ಎಂಬಾತನ ಜೊತೆ ಮಾತುಕತೆ ನಡೆಸಲು ಪಿರ್ಯಾದಿದಾರರು ಮತ್ತು ಇತರರು ಭವ್ಯಳ ಗಂಡನ ಮನೆಯಲ್ಲಿ ಸಂತೋಷನ ಜೊತೆ ಮಾತುಕತೆ ನಡೆಸುತ್ತಿದ್ದಾಗ ಆರೊಪಿ ಸಂತೋಷನು ಏಕಾಏಕಿ ಪಿರ್ಯಾದಿದಾರರಿಗೆ ಮತ್ತು ಅವರ ಜೊತೆ ಬಂದವರಿಗೆ “ ಬೇವರ್ಸಿ ... ಬಾಲೆಲು ಎಂದು” ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಚೂರಿಯೊಂದರಿಂದ ಪಿರ್ಯಾದಿದಾರರ ಜೊತೆಗೆ ಬಂದಿದ್ದ ಅವರ ಅಕ್ಕ ಯಶೋದರವರಿಗೆ ಬೀಸಿದಾಗ  ಅವರು ತಪ್ಪಿಸಿಕೊಂಡಿದ್ದು ಈ ಸಮಯ ಮಧ್ಯ ಪ್ರವೇಶಿಸಿದ ಪಿರ್ಯಾದಿದಾರರಿಗೆ ಆರೋಪಿ ಚೂರಿಯನ್ನು ಬೀಸಿದ ಪರಿಣಾಮ ಪಿರ್ಯಾದಿದಾರರ ಎಡ ಬದಿಯ ಗಲ್ಲಕ್ಕೆ ಚೂರಿ ತಾಗಿ ರಕ್ತಗಾಯವಾಗಿದ್ದು ಅಲ್ಲದೇ ಪಿರ್ಯಾದಿದಾರರೊಂದಿಗೆ ಬಂದಿದ್ದ ಇತರರಿಗೂ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದು ಎಂಬಿತ್ಯಾದಿ.

Crime Reported in  Moodabidre PS    

ಮಾನ್ಯ ನ್ಯಾಯಾಲಯದಿಂದ ಸ್ವೀಕೃತವಾದ ಖಾಸಗಿ ಪಿರ್ಯಾದಿಯ ಸಾರಾಂಶವೇನೆಂದರೆ, ಪಿರ್ಯಾದಿ ABDUL GAFOOR ಮತ್ತು ಅಬ್ದುಲ್ ಅಜೀಜ್ ಎಂಬವರು ಮೂಡಬಿದರೆ ತಾಲೂಕು ಮಾರ್ಪಾಡಿ ಗ್ರಾಮದ ಪಂಚಮಿ ಅಪಾಟ್ ಮೆಂಟ್, ನ ಜಿ.ಎ ಟ್ರೇಡರ್ಸ್ತ  ಎಂಬ ಹೆಸರಿನ ಅಂಗಡಿಯಲ್ಲಿ ನೀರುಳ್ಳಿ, ಬೆಳ್ಳುಳ್ಳಿ, ಬಟಾಟೆ, ಮೆಣಸಿನ ಕಾಯಿ ಹೋಲ್ ಸೇಲ್ ವ್ಯಾಪಾರವನ್ನು ಮಾಡಿಕೊಂಡಿದ್ದು, ಆರೋಪಿ NAVEEN NORANHA(A1) DHANANJAYA KOTIAN(A2)ಗಳು ದಿನಾಂಕ: 04-12-2020 ರಂದು ಪಿರ್ಯಾ ದುದಾರರ ಅಂಗಡಿಯಿಂಧ  ನೀರುಳ್ಳಿ, ಬೆಳ್ಳುಳ್ಳಿ, ಬಟಾಟೆ, ಮೆಣಸಿನ ಕಾಯಿಯನ್ನು ಖರೀದಿ ಮಾಡಿ ಹಣವನ್ನು ಪಿರ್ಯಾದಿದಾರರ ಪಾಲುದಾರರಾದ ಅಬ್ದುಲ್ ರಿಯಾಜ್ ರವರ ಸಿಂಡಿಕೇಟ್ ಬ್ಯಾಂಕಿನ ಖಾತೆಗೆ ಹಣವನ್ನು ವರ್ಗಾಯಿಸಿ ನಂಬಿಕೆ ಉಂಟು ಮಾಡುತ್ತಿದ್ದರು. ಇದೇ ರೀತಿ ಪಿರ್ಯಾ ದುದಾರರ ಅಂಗಡಿಯಿಂದ ಆರೋಪಿತರು ದಿನಾಂಕ: 01-04-2021 ರ ವರಗೆ ಸುಮಾರು 21,14,428/- ಮೌಲ್ಯದ  ನೀರುಳ್ಳಿ, ಬೆಳ್ಳುಳ್ಳಿ, ಬಟಾಟೆ, ಮೆಣಸಿನ ಕಾಯಿಯನ್ನು ಖರೀದಿಸಿದ್ದು ಈ ಪೈಕಿ ರೂ-11,43,257/- ಹಣವನ್ನು ನೀಡಿರುತ್ತಾರೆ. ಬಾಕಿಯುಳಿದ ಹಣವನ್ನು ಕೇಳಿದಾಗ 2 ನೇ ಆರೋಪಿಯು ದಿನಾಂಕ:18-12-2020 ರಂದು ಕೆನರಾ ಬ್ಯಾಂಕ್ ಪೆರ್ಮುದೆ ಶಾಖೆಯ ಚೆಕ್ ನ್ನು ಬ್ಯಾಂಕಿಗೆ ಹಾಕಿದಾಗ ಚಕ್ ಅಮಾನ್ಯಗೊಂಡಿದ್ದು  ಆರೋಪಿತರು ಪಿರ್ಯಾ್ದುದಾರರಿಗೆ ಮತ್ತು ಅವರ ಪಾಲುದಾರರಾದ ಅಬ್ದುಲ್ ಅಝೀಜ್ ರವರಿಗೆ ಹಣ ನೀಡುವುದಾಗಿ ನಂಬಿಸಿ ಮೋಸ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ

2) ಪುತ್ತಿಗೆ ಗ್ರಾಮದ ಹಂಡೇಲು ಸುತ್ತು ಎಂಬಲ್ಲಿ ಒಬ್ಬ ವ್ಯಕ್ತಿಯು ತುಂಬಾ ದಿನದಿಂದ ನೀಲಿ ಬಣ್ಣದ ಆಕ್ಟೀವಾ ಸ್ಕೂಟರ್ ನಲ್ಲಿ ಬಂದು ಸರಿಸುಮಾರು 8-00 ಗಂಟೆಯಿಂದ 9-00 ಗಂಟೆಯ ಮಧ್ಯಾವಧಿಯಲ್ಲಿ ಕಸವನ್ನು ತಂದು ಬೀಸಾಡುತ್ತಿದ್ದು ಈ ಬಗ್ಗೆ ಅಲ್ಲಿನ ಪರಿಸರದ ಜನರು ಪಿರ್ಯಾದಿ MURALIDHARA P ದಾರರಿಗೆ ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು ಆತನನ್ನು ಹಿಡಿಯಲು ಪ್ರಯತ್ನಿಸಿದ್ದು ಆ ವ್ಯಕ್ತಿಯು ತಪ್ಪಿಸಿಕೊಂಡಿರುತ್ತಾನೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಆಗಿದ್ದು ಇಲ್ಲಿ ಮನೆಯ ತ್ಯಾಜ್ಯಗಳನ್ನು ತಂದು ಬೀಸಾಡುತ್ತಿರುವುದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇರುತ್ತದೆ. ಮತ್ತು ವಾತಾವರಣವನ್ನು ಆರೋಗ್ಯಕ್ಕೆ ಹಾನಿಕಾರಕ ವಾಗುವಂತೆ ಮಾಡುತ್ತದೆ ಎಂಬ ಅರಿವಿದ್ದು, ಉದ್ದೇಶ ಪೂರ್ವಕವಾಗಿ ನಿರ್ಲಕ್ಷತನವಹಿಸಿ ತಂದು ಬೀಸಾಡುತ್ತಿರುವುದಾಗಿದೆ.  ಆದುದ್ದರಿಂದ ಆ ವ್ಯಕ್ತಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಜರುಗಿಸುವಂತೆ ವಿನಂತಿಸಿಕೊಂಡಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 12-08-2021 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080