ಅಭಿಪ್ರಾಯ / ಸಲಹೆಗಳು

Crime Reported in  Kavoor PS  

ಫಿರ್ಯಾದಿ JOCHIM DSOUZA  ರವರು ಬೈಕಂಪಾಡಿಯ CR ASIA ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು. ಮಂಗಳೂರು ತಾಲೂಕಿನ ಪಂಜಿಮೊಗರು ಎಂಬಲ್ಲಿ ಫಿರ್ಯಾದಿದಾರರ ಹೆಸರಿನಲ್ಲಿ ಜಾಗ ಮತ್ತು ಮನೆಯಿದ್ದು ಅದನ್ನು ಬಾಡಿಗೆ ನೀಡಿರುತ್ತಾರೆ ಈ ಮನೆಯ ಹಿಂಬದಿಯಲ್ಲಿ ವಾಸವಾಗಿರುವ ಮ್ಯಾಕ್ಸಿಂ ಡಿಸೋಜಾ ಎಂಬವರು ತಾರೀಕು 10/05/2021 ರಂದು ಸಮಯ ಸುಮಾರು 09;00 ಗಂಟೆಗೆ ಫಿರ್ಯಾದಿದಾರರು ಹಾಲು ತರಲು ಮಂಜಟ್ಟಿ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿರುವಾಗ ಪಂಜಿಮೊಗರು ಮಸೀದಿ ಬಳಿ ತಲುಪಿದಾಗ ಮ್ಯಾಕ್ಸಿಂ ಡಿಸೋಜಾ ಎಂಬವರು ಫಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ತಡೆದು ನಿಲ್ಲಿಸಿ ಬೇವರ್ಸಿ ..ಮಗನೆ, ನಿನ್ನನ್ನು ನಿನ್ನ ಹೆಂಡತಿಯನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ರಸ್ತೆ ಬದಿ ಬಿದ್ದಿದ್ದ ಕಲ್ಲಿನಿಂದ  ಹೊಡೆಯಲು ಬಂದ ಸಮಯ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಈ ಕಲ್ಲಿನ ಏಟು ಹೆಲ್ಮೆಟ್ ಗೆ ತಾಗಿದ್ದು ಪುನಹಃ ಅದೇ ಕಲ್ಲಿನಿಂದ ಕೈಗೆ ಗುದ್ದಿದಾಗ ಪಿರ್ಯಾದಿದಾರರು ಬೊಬ್ಬೆ ಹೊಡೆದ ಕಾರಣ ಅವರು ಕಲ್ಲನ್ನು ಬಿಸಾಡಿ ಬೈಕ್ ಚಲಾಯಿಸಿಕೊಂಡು ಹೋಗಿರುತ್ತಾನೆ, ಎಂಬಿತ್ಯಾದಿ.

Crime Reported in  Bajpe PS    

ದಿನಾಂಕ 12.05.2021 ರಂದು ಮಂಗಳೂರು ತಾಲೂಕು, ಬಜಪೆ ಗ್ರಾಮದ, ಶನೀಶ್ವರ ದೇವಸ್ಥಾನದ ಬಳಿ ವೇದಾ ಎಂಬವರ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೂರು ನಂಬರ್ ಗಳನ್ನು ಆಯ್ಕೆ ಮಾಡಿ ಈ ನಂಬರ್ ಗಳ ಮೇಲೆ ಹಣವನ್ನು ಪಣವಾಗಿಟ್ಟು ಮಟ್ಕಾ ಎಂಬ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ಸಂಜೆ 16:15 ಗಂಟೆಗೆ ತೆರಳಿದಾಗ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು  ಗೂಡಂಗಡಿ ಬಳಿ ನಿಂತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ದುರ್ಗೇಶ ಎಂಬುದಾಗಿ ತಿಳಿಸಿದ್ದು ತಾನು ಕೇರಳದ ಮತ್ತು ನಾಗಾಲ್ಯಾಂಡ್‌ ಮೂರು ನಂಬರ್ ಗಳ ಮಟ್ಕಾ ಜೂಜಾಟದ ಬಗ್ಗೆ ಸಾರ್ವಜನಿಕರಿಂದ ಮೂರು ಅದೃಷ್ಟದ ಸಂಖ್ಯೆಯನ್ನು ಆಯ್ಕೆ ಮಾಡಿ ಆ ಸಂಖ್ಯೆಯ ಮೇಲೆ ಹಣವನ್ನು ಪಣವಾಗಿ ಇಡುತ್ತಿದ್ದು ಈ ಮಟ್ಕಾ ಜೂಜಾಟದಿಂದ ಸಂಗ್ರಹವಾದ ಹಣವನ್ನು ವೇದಾ ಎಂಬವರಿಗೆ ನೀಡುತ್ತಿರುವುದಾಗಿ ತಿಳಿಸಿದ್ದು,  ಆರೋಪಿಯ ಪ್ಯಾಂಟಿನ ಕಿಸೆಯಲ್ಲಿ ಮಟ್ಕಾ ಜೂಜಾಟದಲ್ಲಿ ಸಂಗ್ರಹವಾದ ಹಣ ರೂ. 510/- ಮತ್ತು ನೊಕಿಯಾ ಕಂಪೆನಿ ಮೊಬೈಲ್ ಫೋನ್-1, ಕಾಗದದ ಚೂರಿನಲ್ಲಿ ಮಟ್ಕಾ ಜೂಜಾಟದ ಬಗ್ಗೆ ನಂಬರ್ ಬರೆದ ಚೀಟಿಗಳು-7 ನೇಯದನ್ನು ಸ್ವಾಧೀನ ಪಡಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ” ಎಂಬಿತ್ಯಾದಿ.

 Crime Reported in  Mangalore East Traffic PS                                

ದಿನಾಂಕ:13-05-2021 ರಂದು ಪಿರ್ಯಾದಿ PRATHAP CHANDRA SHETTY ರವರು ತನ್ನ ಬಾಬ್ತು KA-19-EM-4880 ನಂಬ್ರದ ಮೋಟಾರು ಸೈಕಲ್ ನಲ್ಲಿ ಕೆಪಿಟಿ ಕಡೆಗೆ ಬರುತ್ತಾ ಬೆಳಿಗ್ಗೆ ಸುಮಾರು 09:00 ಗಂಟೆಗೆ ಮಂಗಳೂರು ನಗರದ ಬಟ್ಟಗುಡ್ಡೆ ಶರಭಿ ಬಾರ್ ನಿಂದ ಸ್ಪಲ್ಪ ಮುಂದೆ ಏರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ KA-19-HC-9471 ನಂಬ್ರದ ಸ್ಕೂಟರನ್ನು ಅದರ ಸವಾರ ನಿಕಿಲ್ ಸಾಲ್ಯನ್ ಎಂಬಾತನು ಸಹಸವಾರ ವಿನೋದ ಎಂಬಾತನನ್ನು ಕುಳ್ಳಿರಿಸಿಕೊಂಡು ಕೆಪಿಟಿ ಕಡೆಯಿಂದ ಏಕ ಮುಖ ಸಂಚಾರ ವ್ಯವಸ್ಥೆಯ ವಿರುದ್ದ ದಿಕ್ಕಿನಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲ್ಯಕ್ಷ್ಯತನದಿಂದ ಅಪಾಯಕಾರಿ ರಿತೀಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ್ದು ಡಿಕ್ಕಿಯ ಪರಿಣಾಮ ಪಿರ್ಯಾದಿದಾರರ ಮೋಟಾರು ಸೈಕಲ್ ಜಖಂಗೊಂಡಿದ್ದು ಪಿರ್ಯಾದಿದಾರರ ಹಣೆಗೆ ತರಚಿದ ರಕ್ತಗಾಯವಾಗಿದ್ದು, ನಿಖಿಲ್ ಸಾಲ್ಯನ್ ನ ತಲೆಗೆ ಗಾಯವಾಗಿರುತ್ತದೆ,ಸ್ಕೂಟರ್ ಸವಾರ ಹೆಲ್ಮಟ್ ಧರಿಸಿರಲಿಲ್ಲ ಪಿರ್ಯಾದಿದಾರರು ವಿನಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಆರೋಪಿ ಸ್ಕೂಟರ್ ಸವಾರ ಎಜೆ ಆಸ್ಪತ್ರೆಯಲ್ಲಿ ಒಳಾ ರೋಗಿಯಾಗಿ ದಾಖಲಾಗಿರತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 13-05-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080