ಅಭಿಪ್ರಾಯ / ಸಲಹೆಗಳು

Crime Reported in  Traffic South PS

ದಿನಾಂಕ  12-07-2021 ರಂದು   ಪಿರ್ಯಾದಿ SUNAIN ರವರು ಸಹಸವಾರನಾಗಿ ಅವರ ತಂದೆ ಉಮ್ಮರ್ ಫಾರೂಕ್ ರವರು ಸವಾರನಾಗಿ ಸ್ಕೂಟರ್ ನಂಬರ್ KA-19-ED-6514 ನೇದರಲ್ಲಿ ಮುಡಿಪು ಕಡೆಯಿಂದ  ಅಸೈಗೋಳಿ ಕಡೆಗೆ ಹೋಗುತ್ತಿರುವ ಸಮಯ ಸುಮಾರು ಸಂಜೆ:18:30 ಗಂಟೆಗೆ ಅಸೈಗೋಳಿ ಅಭಯ ಆಶ್ರಮ ತಲುಪುತ್ತಿದ್ದಂತೆ ಪಿರ್ಯಾದಿದಾರ ಹಿಂದಗಡೆಯಿಂದ ಅಂದರೆ ಮುಡಿಪು  ಕಡೆಯಿಂದ ಅಸೈಗೋಳಿ ಕಡೆಗೆ ಬರುತ್ತಿದ್ದ ರಿಕ್ಷಾ ನಂಬ್ರ:KA-19-AC-7217  ನೇದರ ಚಾಲಕ ಮುಹಮ್ಮದ್ ಆಸಿಫ್ ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಮತ್ತು ತಂದೆ ಉಮ್ಮರ್ ಫಾರೂಕ್ ಸವಾರಿ ಮಾಡುತ್ತಿದ್ದ  ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದರು ಅವರನ್ನು ಚಿಕಿತ್ಸೆಗೆಂದು ಕಣಚೂರು ಆಸ್ವತ್ರೆಗೆ ದಾಖಲಿಸಿದ್ದು ವೈದ್ಯರು ಪರಿಕ್ಷೀಸಲಾಗಿ ಪಿರ್ಯಾದಿದಾರ ತಂದೆಗೆ ತಲೆಗೆ ಗುದ್ದಿದಗಾಯ ಮತ್ತು ಎರಡು ಕಾಲಿನ ಕೋಲುಕಾಲುಗಳಿಗೆ ಮೂಳೆ ಮುರಿತದ ಗಾಯ ಹಾಗೂ ಪಿರ್ಯಾದಿದಾರರಿಗೆ ತಲೆಯ ಹಿಂಬದಿಗೆ ಗುದ್ದಿದಗಾಯ ಮತ್ತು ಬಲಕಾಲಿಗೆ ತೆರಚಿದ ಗಾಯವಾಗಿದೆ ಎಂಬಿತ್ಯಾದಿ

Crime Reported in  Mulki PS       

ಪ್ರಕರಣದ ಪಿರ್ಯಾಧಿ Vadiraja Acharya ರವರು  ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠದ ಆರ್ಚಕರಾಗಿದ್ದು ದಿನಾಂಕ: 12-07-2021 ರಂದು ಎಂದಿನಂತೆ ದೇವರಿಗೆ ದಿನನಿತ್ಯ ಪೂಜೆಯನ್ನು ಮುಗಿಸಿ ರಾತ್ರಿ ಸುಮಾರು 08:45 ಗಂಟೆಗೆ ಶ್ರೀ ದೇವಿ ಗರ್ಭಗುಡಿ, ಗಣಪತಿ ಗುಡಿ ಹಾಗೂ ಉತ್ತರ ದಿಕ್ಕಿನಲ್ಲಿರುವ ಮಠದ ಬಾಗಿಲು ಹಾಗೂ ಮಠದ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಮಠದ ಸಮೀಪವಿರುವ ವಸತಿ ಗೃಹಕ್ಕೆ ತೆರಳಿದ್ದು ದಿನಾಂಕ: 13-07-2021 ರಂದು ಬೆಳಿಗ್ಗೆ  ಸುಮಾರು 07:00 ಗಂಟೆಗೆ ಪೂಜೆಗೆಂದು ಮಠಕ್ಕೆ ಬಂದು ಮುಖ್ಯ ದ್ವಾರದ ಬಾಗಿಲು ತೆರೆದು ಒಳ ಪ್ರವೇಶಿಸಿ ಗರ್ಭಗುಡಿಯ ಬಾಗಿಲನ್ನು ತೆರೆಯಲೆಂದು ನೋಡಿದಾಗ ಯಾರೋ ಕಳ್ಳರು ಮಠದ ಉತ್ತರ ದಿಕ್ಕಿನ ಬಾಗಿಲನ್ನು ಒಡೆದು ಗರ್ಭಗುಡಿಯ ಬಾಗಿಲನ್ನು ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿ ಶ್ರೀ ದೇವಿಗೆ ಸಂಬಂಧಿಸಿದ ಹಾಗೂ ಗಣಪತಿ ಗುಡಿಗೆ ಪ್ರವೇಶಿಸಿ ದೇವರ ಬೆಳ್ಳಿಯ ಸೊತ್ತುಗಳು ಅಂದಾಜು 7 ಕೆ.ಜಿ 950 ಗ್ರಾಂ ಹಾಗೂ ಚಿನ್ನದ ಸೊತ್ತುಗಳು ಅಂದಾಜು 1 ಗ್ರಾಂ, ಹಾಗೂ 7 ಸೆಂಟ್ ವಜ್ರದ ಮೂಗುತಿ ಅಂದಾಜು 1 ಗ್ರಾಂ ಮತ್ತು ಗರ್ಭಗುಡಿಯ ಕಾಣಿಕೆ ಡಬ್ಬಿಯಲ್ಲಿದ್ದ ಚಿಲ್ಲರೆ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಸೊತ್ತುಗಳ ಅಂದಾಜು ಮೌಲ್ಯವು 3,29,000/- ರೂ ಆಗಬಹುದು. ಕಳುವಾದ ಸೊತ್ತುಗಳ ವಿವರ ಈ ಕೆಳಕಂಡಂತಿವೆ.

1] ದೇವಿಯ ಬೆಳ್ಳಿಯ ಕವಚ-1

2] ದೇವಿಯ ಬೆಳ್ಳಿಯ ಪ್ರಭಾವಳಿ-1

3] ದೇವಿಯ ಬೆಳ್ಳಿ ಮುಚ್ಚಿದ ಶಂಖ-1

4] ಬೆಳ್ಳಿಯ ದೊಡ್ಡ ಆರತಿ ತಟ್ಟೆ-1

5] ಬೆಳ್ಳಿಯ ಕವಚಕ್ಕೆ 7 ಸೆಂಟ್ ಡೈಮಂಡ್ ಹಾಕಿದ ಮೂಗುತಿ-1

6] ಹಿತ್ತಾಳೆಯ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣ

7] ಗಣಪತಿ ದೇವರ ಬೆಳ್ಳಿಯ ಕವಚ-1

8] ಗಣಪತಿ ದೇವರ ಬೆಳ್ಳಿಯ ಪ್ರಭಾವಳಿ-1

9] ಗಣಪತಿ ದೇವರ ಬಂಗಾರದ ನಾಮ-1

Crime Reported in  Ullal PS

ದಿನಾಂಕ 10/07/2021 ರಂದು ಬೆಳಿಗ್ಗೆ 9-00 ಗಂಟೆಗೆ  ಪಿರ್ಯಾದಿ Nagendra (35) ರವರ ಪತ್ನಿ ಶ್ರೀಮತಿ ಪ್ರೇಮ(30) ರವರು ತಾನು ವಾಸವವಾಗಿದ್ದ ಬಾಡಿಗೆ ಮನೆಯಾದ ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿಯ ಪದ್ಮಶಾಲಿ ಕಂಪೌಂಡ್ ಬಳಿಯಿಂದ ಹೊರಗಡೆ ಹೋದವರು ವಾಪಸ್ ಮನೆಗೆ ಬಾರದೆ ಇದ್ದವರನ್ನು ಪಿರ್ಯಾದಿದಾರರು ಅವರ ಸಂಬಂಧಿಕರ ಮನೆ, ಪ್ರೇಮಳ ಊರು ಮನೆ ಹಾಗೂ ಆಸುಪಾಸು ಮತ್ತು ಹೆಚ್ಚಿನ ಕಡೆ ಹುಡುಕಾಡಿದರೂ ಈತನಕ ಪತ್ತೆಯಾಗದೇ ಇದ್ದವರನ್ನು ಪತ್ತೆ ಹಚ್ಚಿಕೊಡುವ ಬಗ್ಗೆ ದಿನಾಂಕ 13/07/2021 ರಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Crime Reported in  Mangalore East PS

ಪಿರ್ಯಾದಿ Adithi (21) ರವರ ತಂದೆ ಸುಮಾರು 60 ವರ್ಷ ಪ್ರಾಯದ ತಾರಾನಾಥ ಮರೋಳಿ ಇವರು ದಿನಾಂಕ:10-07-2021 ರಂದು ಬೆಳಿಗ್ಗೆ ತನ್ನ ಮನೆಯಾದ  Student Lane Alvares  Road,, Kadri, ಮನೆಯಿಂದ ಹೋಗಿದ್ದು ಪಿರ್ಯಾದಿದಾರರು ಸದ್ರಿ ದಿನ ಮಧ್ಯಾಹ್ನ ತಂದೆಯವರನ್ನು ಮನೆಗೆ ಬರುವಂತೆ ತಿಳಿಸಿದರೂ ತನ್ನ ಮೊಬೈಲ್ ಪೋನನ್ನು ಸ್ವಿಚ್ ಆಫ್ ಮಾಡಿಕೊಂಡು ತನ್ನ ಸ್ಕೂಟರನ್ನು ಮಾರಾಟವನ್ನು ಮಾಡಿ ಬಂದ ಹಣವನ್ನೂ ತೆಗದುಕೊಂಡು ಮನೆಗೆ ಬಾರದೆ ಕಾಣೆಯಾಗಿದ್ದವರನ್ನು ಕಳೆದ 3 ದಿನಗಳಿಂದ ಸಂಬಂದಿಕರು ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಸದ್ರಿ ತಾರಾನಾಥರು ಈ ಹಿಂದೆಯೂ ಹಲವು ಸಲ ಮನೆಯಿಂದ ಹೋಗಿದ್ದು ಸುಮಾರು ದಿನಗಳ ಬಳಿಕ ಮನೆಗೆ ಬರುತ್ತಿದ್ದವರಾಗಿರುತ್ತಾರೆ ಎಂಬಿತ್ಯಾದಿ.

ಕಾಣೆಯಾದ ವ್ಯಕ್ತಿಯ ಚಹರೆಯ ವಿವರ:-

ಹೆಸರು: ತಾರಾನಾಥ ಮರೋಳಿ

ಪ್ರಾಯ: 60 ವರ್ಷ,

ಎತ್ತರ:  5 ಅಡಿ 4 ಇಂಚು,

ಚಹರೆ; ಎಣ್ಣ ಕಪ್ಪು ಮೈ ಬಣ್ಣ, ಧೃಡಕಾಯ ಶರೀರ, 10 ನೇ  ತರಗತಿಯವರೇಗೆ ಕಲಿತ್ತಿರುತ್ತಾರೆ.

ಮಾತನಾಡುವ ಭಾಷೆ: ಕನ್ನಡ, ತುಳು, ಮಳೆಯಾಳಿ, ಹಿಂದಿ ಮಾತನಾಡುತ್ತಾರೆ.

Crime Reported in  Cyber Crime PS

ಪಿರ್ಯಾದಿದಾರರು ಮಂಗಳೂರು ನಗರದ ವಾಮಂಜೂರು ಸೈಂಟ್ ಜೋಸೆಪ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮಾಡುತಿದ್ದು ನಗರದ ಕದ್ರಿ ಹೆಚ್.ಡಿ.ಎಫ್.ಸಿ ಬ್ರಾಂಚಿನಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಪಿರ್ಯಾದಿದಾರರಿಗೆ ದಿನಾಂಕ 07-07-2021 ರಂದು ಬೆಳಿಗ್ಗೆ 11.00 ಗಂಟೆಗೆ 09959689529 ನೇ ನಂಬ್ರದಿಂದ ಪೋನ್  ಕರೆಯೊಂದು ಬಂದಿದ್ದು ಪೋನಿನಲ್ಲಿ ಮಾತನಾಡಿದ ಮಹಿಳೆಯು ತನ್ನ ಹೆಸರು Mehr Anuzya ಎಂಬುದಾಗಿಯೂ  ತಾನು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಯೂನಿವರ್ಸಿಟಿಯಿಂದ ಮಾತನಾಡುತಿದ್ದು ನಿಮಗೆ ಒಂದು ಲಿಂಕ್ ಕಳುಹಿಸಲಾಗಿದೆ ಅದರಲ್ಲಿ 3ನೇ ವರ್ಷದ ಕಂಪ್ಯೂಟರ್ ಸೈನ್ಸ್ ಕ್ಲಾಸಿನ ಶುಲ್ಕ ಹಾಗೂ ಡೆಪಾಸಿಟ್ ನ್ನು ಕಟ್ಟಬೇಕು ಇಲ್ಲವಾದಲ್ಲಿ ಹಾಲ್ ಟಿಕೆಟ್ ಕ್ಯಾನ್ಸೆಲ್ ಮಾಡುವುದಾಗಿ ಹೆದರಿಸಿ ತಿಳಿಸಿ ಪೋನ್ ಕಟ್ ಮಾಡಿರುತ್ತಾರೆ. ಕೂಡಲೇ ಪಿರ್ಯಾದಿದಾರರಿಗೆ https://c6cmall.com/#/pages/regist/index?code=266046 ಎಂಬುದಾಗಿ ಲಿಂಕ್ ಎಸ್.ಎಂ.ಎಸ್ ಮುಖೇನ ಬಂದಿದ್ದು ಪಿರ್ಯಾದಿದಾರರು ಸದ್ರಿ ಲಿಂಕನ್ನು ಒತ್ತಿದಾಗ ವೆಬ್ ಪೇಜ್ ಒಂದು ಓಪನ್ ಆಗಿದ್ದು ಅದರಲ್ಲಿ ತನ್ನ ಕಾಲೇಜಿನ ವಿವರವನ್ನು ಭರ್ತಿ ಮಾಡಿ ಕೇಳಲಾದ ಪಾಸ್ ವರ್ಡ್ ಹಾಗೂ ಮೊಬೈಲ್ ಪೋನ್ ನಂಬರ್ ವಿವರವನ್ನು ಭರ್ತಿ ಮಾಡಿದಾಗ ರೀಚಾರ್ಜ್ ಬಗ್ಗ wallet ನ್ನು ಕಳುಹಿಸಿದಂತೆ ಪಿರ್ಯಾದಿದಾರರು ರೂ.200/- ನ್ನು ರೀಚಾರ್ಜ್ ಮಾಡಿರುತ್ತಾರೆ. ದಿನಾಂಕ 08-07-2021 ರಂದು ಕೂಡಾ ಅದೇ ಪೋನ್ ನಂಬ್ರದಿಂದ ಮಹಿಳೆಯು ಮಾತನಾಡಿದ್ದು ಪಿರ್ಯಾದಾರರು ತನ್ನ ಖಾತೆಯಿಂದ ರೂ.74,126/- ನ್ನು ವರ್ಗಾಯಿಸಿದ್ದು ದಿನಾಂಕ 09-07-2021 ರಂದು ತನ್ನ ಖಾತೆಯಿಂದ 60,000/- ವರ್ಗಾಯಿಸಿದ್ದು ತನ್ನ ಬಳಿ ಹಣವಿಲ್ಲದೇ ಇದ್ದುದರಿಂದ ತನ್ನ ಅಕ್ಕ ರವರ ಹೆಚ್.ಡಿ.ಎಫ್.ಸಿ ಖಾತೆ ಯಿಂದ ರೂ. 1,00,000/- ನ್ನು ವರ್ಗಾಯಿಸಿರುತ್ತಾರೆ. ಆದುದರಿಂದ ಪಿರ್ಯಾದಿದಾರರಿಗೆ ತಾನು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿಶ್ವ ವಿದ್ಯಾಲಯದಿಂದ ಕರೆ ಮಾಡುವುದಾಗಿ ನಂಬಿಸಿ ಪಿರ್ಯಾದಿದಾರರಿಗೆ 3ನೇ ವರ್ಷದಕಂಪ್ಯೂಟರ್ ಸೈನ್ಸ್  ಕ್ಲಾಸಿನ ಶುಲ್ಕ ಹಾಗೂ ಡಿಪಾಸಿಟ್ ಪಾವಿತಿಸಬೇಕೆಂದು ತಿಳಿಸಿ ಪಿರ್ಯಾದಿದಾರರ ಹೆಚ್.ಡಿ.ಎಫ್.ಸಿ ಖಾತೆಯಿಂದ ಹಂತ ಹಂತವಾಗಿ ರೂ.1,34,326/- ಹಾಗೂ ಪಿರ್ಯಾದಿದಾರರ ಅಕ್ಕನ ಹೆಚ್.ಡಿ.ಎಫ್.ಸಿ ಖಾತೆಯಿಂದ ರೂ.1,00,000/- ನ್ನು   ಒಟ್ಟು ರೂ.2,34,326/- ನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 13-07-2021 07:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080