ಅಭಿಪ್ರಾಯ / ಸಲಹೆಗಳು

Crime Reported in  Traffic North PS

ದಿನಾಂಕ 12-08-2021 ರಂದು ಫಿರ್ಯಾದಿ Ramesh Shetty ರವರು ಆತನೊಂದಿಗೆ ಕೆಲಸ ಮಾಡುವ ಸೂರಜ್ ಶೇಟ್ಟಿ ಎಂಬುವರೊಂದಿಗೆ ಆತನ ಬಾಬ್ತು KA19HD2239 ನಂಬ್ರದ ಸ್ಕೂಟರಿನಲ್ಲಿ ಸಹ ಸವಾರನಾಗಿ ಕಳಿತುಕೊಂಡು ಮನೆ ಕಡೆಗೆ ಹೋಗುತ್ತ ಸಂಜೆ ಸಮಯ ಸುಮಾರು 5-00 ಗಂಟೆಗೆ ಬೈಕಂಪಾಡಿಯ ಪಣಂಬೂರು ಪೊಲೀಸು ಠಾಣೆ ಸಮೀಪ ಸಮೀಪಿಸುತ್ತಿದ್ದಂತೆ ಸೂರಜ್ ಶೆಟ್ಟಿಯ ತಮ್ಮ ಸ್ಕೂಟರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತ ತನ್ನ ಸ್ಕೂಟರಿನ ಎದುರಿನಲ್ಲಿ ಹೋಗುತ್ತಿದ್ದ ಕಾರೋಂದನ್ನು ಬಲಬದಿಯಿಂದ ಓವರ್ ಟೇಕ್ ಮಾಡುವ ಬರದಲ್ಲಿ ರಸ್ತೆಗೆ ತೀರ ಬಲಬದಿಗೆ ಚಲಾಯಿಸಿಕೊಂಡು ಹೋಗಿ ರಾ.ಹೆ ರಸ್ತೆಕಡೆಯಿಂದ ಇಂಡಸ್ಟ್ರೀಯಲ್ ಏರಿಯಾ ಕಡೆಗೆ ನಾಗೇಶ್ ಎಂಬುವರು ಸವಾರಿ ಮಾಡಿಕೊಂಡು ಬರುತ್ತಿದ್ದ KA19EM2143 ನಂಬ್ರ ಮೋಟರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿದಾರರ ಬಲಕಾಲಿನ ಕೋಲು ಕಾಲಿಗೆ ಚರ್ಮ ಹರಿದ ರೀತಿಯ ರಕ್ತಗಾಯವಾಗಿದ್ದು ಬಲಕೈ ತಟ್ಟಿಗೆ ಹಾಗೂ ಬೆರಳುಗಳಿಗೆ ತರಚಿದ ಗಾಯವಾಗಿದ್ದು ಅಲ್ಲದೆ ಅಪಘಾತ ಪಡಿಸಿದ ಸ್ಕೂಟರ್ ಸವಾರನಿಗೆ ತಲೆಗೆ ಗುದ್ದಿದ ರೀತಿಯ ಗಂಭರ ಸ್ವರೂಪದ ಒಳ ಗಾಯ ಹಾಗೂ ಎಡಕೈ ಮೊಣಗಂಟಿನ ಬಳಿ ತರಚಿದ ರೀತಿಯ ಗಾಯವಾಗಿ  ಎಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in  Mangalore East PS

ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿಯ ಸಾರಂಶವೇನೆಂದರೆ ಪಿರ್ಯಾದಿ Sadananda R Sherwagara ದಾರರು ಆರೋಪಿ 1) Prasad Shetty 2) Nemiraj Shetty 3) Chandrashekhar Shetty ರವರಿಂದ ಜಾಗವನ್ನು ಖರೀದಿಸಿ ರಿಜಿಸ್ಟರ್ ಮಾಡಿಸಿದ ನಂತರ ಜಾಗದ ದಾಖಲೆಗಳು ಸರಿಯಾಗದೇ ಇದ್ದುದರಿಂದ ಆರೋಪಿತರನ್ನು ವಿಚಾರಿಸಿದಾಗ ಸರಿ ಮಾಡಿ ಕೊಡುತ್ತೇವೆಂದು ತಿಳಿಸಿದಂತೆ ಪಿರ್ಯಾದಿದಾರರು ದಿನಾಂಕ:03-07-2021 ರಂದು ಬೆಳಿಗ್ಗೆ ಗಂಟೆ ಸುಮಾರು 8-15 ನಿಮಿಷಕ್ಕೆ ಪದವು ಬಳಿಯಿರುವ ಪಿರ್ಯಾದಿದಾರರು ಖರೀದಿಸಿದ ಜಾಗವನ್ನು ಅಳತೆ ಮಾಡಿ ಗಡಿ ಗುರುತು ಮಾಡಿಕೊಡಬೇಕೆಂದು ಆರೋಪಿಗಳಲ್ಲಿ ತಿಳಿಸಿದಾಗ ಆರೋಪಿಗಳು ಸದ್ರಿ ಸ್ಥಳಕ್ಕೆ ಪಿರ್ಯಾದಿದಾರರನ್ನು ಕರೆಯಿಸಿ ಸದ್ರಿ ಜಾಗದ ಅಳತೆ ಮಾಡುವ ಸಂದರ್ಭದಲ್ಲಿ ಸದ್ರಿ ಜಾಗವು 83.5 ಸೆಂಟ್ಸ್ ಬದಲಾಗಿ ಕೇವಲ ಸೆಂಟ್ಸ್ 68 ಸೆಂಟ್ಸ್ ಸ್ಥಳವಿದ್ದು ಉಳಿದ ಜಾಗದಲ್ಲಿ ಆರೋಪಿಗಳು ಮನೆ ಕಟ್ಟಿದ್ದು ಈ ಬಗ್ಗೆ ಆರೋಪಿಗಳಲ್ಲಿ ಪಿರ್ಯಾದಿದಾರರು ಪ್ರಶ್ನಿಸಿದಾಗ ಆರೋಪಿಗಳು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅಂಗಿಯ ಕಾಲರ್ ನ್ನು ಹಿಡಿದು ದೈಹಿಕವಾಗಿ ಹಲ್ಲೆ ನಡೆಸಿ ಕೆಳಗೆ ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ಈ ಜಾಗಕ್ಕೆ ಕಾಲಿಟ್ಟರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿಯಾಗಿದೆ. `

Crime Reported in  Mulki PS

ಪಿರ್ಯಾದಿ Mrs. Latha Prabhat  ಹಾಗೂ ಮನೆಯವರು ದಿನಾಂಖ: 12-08-2021 ರಂದು ಬೆಳಿಗ್ಗೆ 10:00 ಗಂಟೆಗೆ ಮುಲ್ಕಿ ಕುಡ್ವ ನರ್ಸಿಂಗ್ ಹೋಮ್  ನಲ್ಲಿ ದಾಖಲಾಗಿದ್ದ ಪಿರ್ಯಾದಿದಾರರ ತಂದೆ ಸದಾನಂದ ಕೊಟ್ಯಾನ್ ರವರನ್ನು ನೋಡಲು ಹೋಗಿದ್ದ ಸಮಯ ಈ ದಿನ 10:00 ಗಂಟೆಯಿಂದ ಮದ್ಯಾಹ್ನ 3:15 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾಧಿದಾರರ ಮನೆಯ ಎದುರಿನ ಬಾಗಿಲಿನ ಚಿಲಕವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಓಳ ಪ್ರವೇಶಿಸಿ ಛಾವಡಿಯ ಬದಿಯಲ್ಲಿರುವ ಕೋಣೆಯ ಬಾಗಿಲನ್ನು ಕೂಡ ಮೀಟಿ ತೆರೆದು ಒಳ ಪ್ರವೇಶಿಸಿ ಕೋಣೆಯಲ್ಲಿದ್ದ ಗೋದ್ರೆಜ್ ಗಳ ಬೀಗ ಮುರಿದು ಬಟ್ಟೆ ಬರೆಗಳನ್ನು ಜಾಲಾಡಿ ಸೂಟ್ ಕೇಸ್ ನಲ್ಲಿದ್ದ 4 ಗ್ರಾಂ ತೂಕದ 1 ಜೋತೆ ಚಿನ್ನದ ಕಿವಿ ಓಲೆ, ಹವಳ ಇರುವ 14 ಗ್ರಾಂ ನ ಚಿನ್ನದ ಡಿಸ್ಕೋ ಚೈನ್, 3 ಗ್ರಾಂ ತೂಕದ ಚಿನ್ನದ ಓಡ್ಡು ಉಂಗುರ ಮತ್ತು ನಗದು ಹಣ 3500/- ರೂ ವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ನಗದು ಹಾಗೂ ಚಿನ್ನಾಭರಣದ ಒಟ್ಟು  ಮೌಲ್ಯ 87,500/- ರೂ. ಆಗಿರುತ್ತದೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 13-08-2021 02:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080