ಅಭಿಪ್ರಾಯ / ಸಲಹೆಗಳು

Crime Reported in Konaje PS

ಪಿರ್ಯಾದಿ Mallikarajun Biradar ರವರು ದಿನಾಂಕ 13.06.2021 ರಂದು ಠಾಣೆಯಲ್ಲಿರುವಾಗ 10:00 ಗಂಟೆಗೆ ಉಪ್ಪಿನಂಗಡಿ ಕಡೆಯಿಂದ ಮೆಲ್ಕಾರ್ ಬೋಳಿಯಾರು-  ನಾಟೆಕಲ್ ರಸ್ತೆಯಾಗಿ ಕೇರಳಕ್ಕೆ ಕೆಎಲ್  14- ಆರ್-3536  ನೇ ಬಿಳಿಬಣ್ಣದ ಕಾರಿನಲ್ಲಿ ಇಬ್ಬರು ಯುವಕರು ಮಾದಕ ವಸ್ತುವಾದ ನಿಷೇದಿತ ಎಮ್ ಡಿ ಎಮ್ ಎ ಸಾಗಿಸುತ್ತಾರೆ ಎಂದು ಬಂದ   ಮಾಹಿತಿ ಮೇರೆಗೆ  ಠಾಣಾ   ಸಿಬ್ಬಂದಿಯವರೊಂದಿಗೆ ಸುಮಾರು 11.45 ಗಂಟೆಗೆ  ಮಂಜನಾಡಿ  ಗ್ರಾಮದ ನಾಟೆಕಲ್ ಬಳಿಯ ವಿಜಯ ನಗರ  ಎಂಬಲ್ಲಿಗೆ  ತಲುಪಿ ಕಾಯುತ್ತಿದ್ದಾಗ ಸುಮಾರು 13.00  ಗಂಟೆಗೆ ನಾಟೆಕಲ್ ಜಂಕ್ಷನ್  ಕಡೆಯಿಂದ ಬಂದ ಬಿಳಿ ಬಣ್ಣದ ಸ್ವಿಫ್ಟ್ ಕಾರ್ ನಂಬ್ರ ಕೆಎಲ್ 14-ಆರ್-3536 ನ್ನು  ನಿಲ್ಲಿಸಿ ಅದರಲ್ಲಿದ್ದ ಆರೋಪಿಗಳನ್ನು ಅಂಗಶೋದನೆ ಮಾಡಿದಾಗ ಇಬ್ಬರು ಆರೋಪಿಗಳ ವಶದಲ್ಲಿ ತಲಾ 20 ಗ್ರಾಂ ನಿಷೇದಿತ ಎಂಡಿಎಂಎ ಮಾದಕ ದ್ರವ್ಯ ಇದ್ದು ಕಾರನ್ನು ಪರೀಶಿಲಿಸಿದಾಗ   ಕಾರಿನ ಮುಂಬಾಗದ ಡ್ಯಾಷ್ ಬೊರ್ಡಿನಲ್ಲಿದ್ದ 25 ಗ್ರಾಂ ಎಮ್ ಡಿ ಎಮ್ ಎ ಎಂಬ ಮಾದಕ ದ್ರವ್ಯ ಹಾಗೂ ಹಿಂಬದಿ ಸೀಟಿನಲ್ಲಿ   ಡಿಜಿಟಲ್ ತೂಕಮಾಪಕ -1 ಮತ್ತು ಪ್ಲಾಸ್ಟಿಕ್ ಖಾಲಿ ಪಾಕೇಟ್ ಗಳು ಪತ್ತೆಯಾಗಿದ್ದು, ಆರೋಪಿಗಳ ವಶದಲ್ಲಿ ದೊರೆತ   65 ಗ್ರಾಂ ನಿಷೇದಿತ ಎಂಡಿಎಂಎ , ಮೊಬೈಲ್ ಫೋನ್ ಗಳು -4, ಕಾರು ನಂಬ್ರ ಕೆಎಲ್ 14 ಆರ್ 3536 ,ಡಿಜಿಟಲ್ ತೂಕಮಾಪಕ ಹಾಗೂ  ಖಾಲಿ ಪ್ಲಾಸ್ಟಿಕ್ ಪಾಕೆಟ್ ಗಳನ್ನು ಸ್ವಾದೀನಪಡಿಸಿಕೊಂಡಿದ್ದು  ಇವುಗಳ ಒಟ್ಟು ಮೌಲ್ಯ 9,01,500/- ರೂ ಆಗಬುಹುದು ಆರೋಪಿಗಳು ಈ ಎಂಡಿಎಂಎ ನ್ನು ಬೆಂಗಳೂರಿನ ಕಮನಹಳ್ಳಿಯಲ್ಲಿ ಖರೀದಿಸಿ ಕೇರಳದ ರಮೀಜ್ ಎಂಬಾತನಿಗೆ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಅಧಿಕ ಹಣ ಗಳಿಸುವ  ಉದ್ದೇಶದಿಂದ ಸಾಗಾಟ ಮಾಡುತ್ತಿದ್ದನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.

Crime Reported in Mangalore South PS

ಪಿರ್ಯಾದಿದಾರರಾದ ನಜೀರ್ ಅಹ್ಮದ್ ಬಾವಾ ರವರು ತಮ್ಮ ಹೆಂಡತಿ ಹಾಗೂ 7 ಜನ ಮಕ್ಕಳೊಂದಿಗೆ ಕಾಪ್ರಿಗುಡ್ಡೆ ಅತ್ತಾವರ ಮಂಗಳೂರ ಇಲ್ಲಿ ವಾಸವಾಗಿದ್ದು  ದಿನಾಂಕ 12.06.2021 ರಂದು ಮದ್ಯಾಹ್ನ 3.00 ಗಂಟೆಗೆ ಅವರ 2 ನೇ ಮಗನಾದ ನಬಿಲ್ ಅಹ್ಮದ್ ನು ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಈ ವರೆಗೆ ವಾಪಸ್ಸು ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಿದರೂ ಹಾಗೂ ನಬೀಲ್ ನ ಸ್ನೇಹಿತರನ್ನು ವಿಚಾರಿಸಲಾಗಿ ಯಾವುದೇ ಮಾಹಿತಿ ಮತ್ತು ಸುಳಿವು ಸಿಕ್ಕಿರುವುದಿಲ್ಲ ಆದ್ದರಿಂದ ಪಿರ್ಯಾದಿದಾರರ ಮಗನನ್ನು  ಪತ್ತೆ ಮಾಡಿಕೊಡಬೇಕಾಗಿ ಈ ಮೂಲಕ ವಿನಂತಿ ಎಂಬಿತ್ಯಾದಿ.

ಕಾಣೆಯಾದವರ ಚಹರೆ; ಹೆಸರು –ನಬೀಲ್ ಅಹ್ಮದ್ ಪ್ರಾಯ-20 ವರ್ಷ, ಎತ್ತರ-5 ಅಡಿ, ಕೂದಲು-ಕಪ್ಪು ಕೂದಲು ಕುರುಚಲು ಗಡ್ಡ, ಮೈ ಬಣ್ಣ-ಎಣ್ಣೆಕಪ್ಪು ಮೈಬಣ್ಣ, ಶರೀರ-ದಪ್ಪ ಶರೀರ, ಧರಿಸಿದ ಬಟ್ಟೆ-ಜೀನ್ಸ್ ಪ್ಯಾಂಟ್, ಬಿಳಿ ಶರ್ಟ್, ಮಾತನಾಡುವ ಭಾಷೆ-ತುಳು, ಬ್ಯಾರಿ, ಇಂಗ್ಲೀಷ, ಹಿಂದಿ, ಕನ್ನಡ. 

Crime Reported in Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ: 13-06-2021 ರಂದು ಪಿರ್ಯಾದಿ Sudeep M Vರವರು ಠಾಣಾ ಸಿಬ್ಬಂದಿಗಳಾದ ಸಿಬ್ಬಂದಿಗಳ  ಜೊತೆಯಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 11.00 ಗಂಟೆಗೆ ಮೂಡಬಿದರೆ ತಾಲೂಕು ಬೆಳುವಾಯಿ ಗ್ರಾಮದ ಬೆಳುವಾಯಿ ಜಂಕ್ಷನ್ ತಲುಪುವಾಗ ಜಂಕ್ಷನ್ ಬಳಿಯಿರುವ ಬಿ.ಎಲ್. ಸುವರ್ಣ ಮರ್ಚಂಟ್ ಅಂಗಡಿಯನ್ನು ಅವಧಿ ಮೀರಿ ವ್ಯಾಪಾರಕ್ಕಾಗಿ ತೆರೆದಿಟ್ಟು ಆರೋಪಿಯು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ಅಂಗಡಿಯನ್ನು ತೆರೆಯಲು ಅನುಮತಿ ಇಲ್ಲದೆ ಇದ್ದರೂ ಸಹ ತನ್ನ ಅಂಗಡಿಯನ್ನು ತೆರೆದಿಟ್ಟು ವ್ಯಾಪಾರದಲ್ಲಿ ತೊಡಗಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಎಂಬಿತ್ಯಾದಿ.

2) ದಿನಾಂಕ: 13-06-2021 ರಂದು ಬೆಳುವಾಯಿ ಗ್ರಾಮದ ಕುಕ್ಕುಡೇಲ್ ಮೈದಾನ ಒಂದರಲ್ಲಿ ಸತೀಶ್, ಸಂದೀಪ್, ಪ್ರವೀಣ್, ನವೀನ್, ಯೋಗೀಶ್, ದೇವು @ದೇವುರಾಜ್, ವಿಶ್ವನಾಥ @ ವಿಶ್ವ, ಪಾವು ಮತ್ತು ಇತರರು ಸೇರಿಸಿಕೊಂಡು ತೀವ್ರ ನಿರ್ಲಕ್ಷ್ಯತನದಿಂದ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಕೊರೋನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಬಗ್ಗೆ ಸ್ಪಷ್ಟ ತಿಳುವಳಿಕೆ ಇದ್ದರೂ ಕೂಡಾ ಸರಕಾರದ ನಿಯಮಾವಳಿಯಂತೆ ದೈಹಿಕ ಅಂತರವನ್ನು ಕಾಯ್ದುಕೊಳ್ಳದೇ ಮುಖಕ್ಕೆ ಮಾಸ್ಕನ್ನು ಕೂಡಾ ಧರಿಸದೇ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಸಂಖ್ಯೆ ಮತ್ತು ಚಿಹ್ನೆಗಳ ಆಧಾರದ ಮೇಲೆ 16.30 ಗಂಟೆಗೆ ಅದೃಷ್ಟದ ಇಸ್ಪೀಟ್ ಜೂಜಾಟದ ಅಂದರ್ ಬಾಹರ್ (ಉಳಾಯಿ-ಪಿದಾಯಿ) ಆಟವನ್ನು ಆಡಿಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿ ಜುಗಾರಿ ಆಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳನ್ನು, ರೂ: 800-00 ನಗದು ಹಾಗೂ ಸ್ಥಳದಲ್ಲಿದ್ದ ಕೆಎ-20 ಎಸ್-1275 ಹಿರೋ ಹೋಡ ಸ್ಪ್ಲೆಂಡರ್, ಕೆಎ-19 ಈಎಲ್-6799 ಹಿರೋ ಗ್ಲಾಮರ್, ಕೆಎ-19 ಹೆಚ್‌ಜಿ-1800 ಹೋಡ ಆಕ್ಟಿವಾ, ಕೆಎ-19 ಈಎಲ್-9065 ಹೀರೋ ಇಗ್ನೈಟರ್, ಕೆಎ-19 ಹೆಚ್‌ಸಿ-4673 ಹೋಂಡ ಶೈನ್  ನಂಬ್ರದ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿರುವುದು ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 14-06-2021 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080