Crime Reported in Traffic North PS
ದಿನಾಂಕ 12-08-2021 ರಂದು ಪಿರ್ಯಾದಿ Mailarappa Neelappa Hosara ದಾರರ ತಂದೆಯಾದ ಹೊಸರ ನೀಲಪ್ಪ ನಿಂಗಪ್ಪ ರವರು ಬೈಕಂಪಾಡಿಯಲ್ಲಿ KA-19-AC-9468 ನಂಬ್ರದ ಮರೋಳಿ ಎಂಬ ಹೆಸರಿನ ಖಾಸಗಿ ಸಿಟಿ ಬಸ್ಸಿನಲ್ಲಿ ಹತ್ತಿ ಪಣಂಬೂರು ಬಸ್ಸು ಸ್ಟಾಫ್ ನಲ್ಲಿ ಇತರ ಪ್ರಯಾಣಿಕರು ಇಳಿದ ಬಳಿಕ ಸಂಜೆ ಸಮಯ ಸುಮಾರು 6-45 ಗಂಟೆಗೆ ಹೊಸರ ನೀಲಪ್ಪ ನಿಂಗಪ್ಪ ರವರು ಬಸ್ಸಿನಿಂದ ಕೆಳಗೆ ಇಳಿಯುತ್ತಿದಂತೆ ಬಸ್ಸಿನ ಚಾಲಕನಾದ ಜಯರಾಜ್ ಎಂಬವರು ನಿರ್ವಾಹಕನ ಸೂಚನೆಗೂ ಕಾಯದೆ ಬಸ್ಸನ್ನು ನಿರ್ಲಕ್ಷ್ಯ ತನದಿಂದ ಒಮ್ಮೆಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಹೊಸರ ನೀಲಪ್ಪ ನಿಂಗಪ್ಪ ರವರು ಬಸ್ಸಿನಿಂದ ಕೆಳಗೆ ಬಿದ್ದು ಸೊಂಟದ ಬಲ ಬದಿಗೆ ಗುದ್ದಿದ ರೀತಿಯ ಗಂಭೀರ ಸ್ವರೂಪದ ಒಳಗಾಯ, ಹಾಗೂ ಎಡ ಕೈ ಮೊಣಗಂಟಿನ ಬಳಿ ತರಚಿತ ರೀತಿಯ ಗಾಯವಾಗಿ ಎಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.
Crime Reported in Traffic South PS
ದಿನಾಂಕ:13-08-2021 ರಂದು ಪಿರ್ಯಾದಿ BHUVANESHWARI ರವರು ಮತ್ತು ಅವರ ಮಾವ ಚಂದ್ರಶೇಖರ ಹಾಗೂ ಅವರ ತಂಗಿಯ ಮಗಳು ಶ್ರೀಯರವರೊಂದಿಗೆ ಅವರ ಕುಟುಂಬದ ನಾಗದೇವತೆ ಮೂಲಸ್ಥಾನವಾದ ನೀರುಮಾರ್ಗದ ಓಂಟೆಮಾರು ಎಂಬಲ್ಲಿಗೆ ಅವರ ಗಂಡ ಸೀತಾರಾಮನವರೊಡನೆ ಅವರ ಬಾಬ್ತು ಆಟೋರಿಕ್ಷಾ ನಂಬ್ರ:KA-19-AA-8799 ನೇದರಲ್ಲಿ ಹೋಗಿ ವಾಪಾಸ್ಸು ನೀರು ಮಾರ್ಗದಿಂದ ಅವರ ಮನೆಯಾದ ಕುಡುಪುವಿನ ಕಡೆಗೆ ಪ್ರಯಾಣಿಸಿಕೊಂಡು ಬರುತ್ತಿರುವ ಸಮಯ ಸುಮಾರು ಮಧ್ಯಾಹ್ನ 2-00 ಗಂಟೆಗೆ ಕುಡುಪು ಕಟ್ಟೆ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ಅವರ ಗಂಡನಾದ ಚಾಲಕ ಸೀತಾರಾಮರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಆಟೋರಿಕ್ಷಾ ನಿಯಂತ್ರಣ ತಪ್ಪಿ ಅದರಲ್ಲಿ ಸಹ ಪ್ರಯಾಣೀಕರಾದ ಪಿರ್ಯಾದಿದಾರರು ಮತ್ತು ಚಂದ್ರಶೇಖರ,ಶ್ರೀಯರವರು ಆಟೋರಿಕ್ಷಾ ಸಮೇತ ರಸ್ತೆಗೆ ಬಿದ್ದು ಇದರ ಪರಿಣಾಮ ಪಿರ್ಯಾದಿದಾರರ ಎಡಕೈಗೆ ಮೂಳೆ ಮುರಿತದ ಗಾಯ ಹಾಗೂ ಕಾಲಿಗೆ ತರಚಿದ ಗಾಯ,ಅವರ ಮಾವ ಚಂದ್ರಶೇಖರರವರಿಗೆ ಮುಖಕ್ಕೆ ಗುದ್ದಿದ ರೀತಿಯ ರಕ್ತಗಾಯ ಮತ್ತು ಕೈಗೆ ಹಾಗೂ ಕಾಲುಗಳಿಗೆ ತರಚಿದ ಗಾಯ,ಶ್ರೀಯಳಿಗೆ ಯಾವುದೇ ರೀತಿಯ ಗಾಯವಾಗಿರುವುದಿಲ್ಲ ಚಾಲಕ ಪಿರ್ಯಾದಿದಾರರ ಗಂಡ ಸೀತಾರಾಮರಿಗೆ ಸಣ್ಣ ಪುಟ್ಟ ಗುದ್ದಿದ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪಿರ್ಯಾದಿದಾರರು ಒಳ ರೋಗಿಯಾಗಿ ದಾಖಲಾಗಿದ್ದು ಚಂದ್ರಶೇಖರರವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ತೆರೆಳಿರುತ್ತಾರೆ.ಎಂಬಿತ್ಯಾದಿ
Crime Reported in Mangalore South PS
ಪಿರ್ಯಾದಿದಾರರಾದ ಕೃಷ್ಣ ಬೆಸ್ರ ರವರು ಮಂಗಳೂರಿನ ದಕ್ಕೆಯಲ್ಲಿರುವ ಅಬ್ದುಲ್ ರಹೀಂ ಎಂಬವರ ಮಾಲಕತ್ವದ ಸಾಗರ್ ವಿಕಾಸ್ ಎಂಬ ಪರ್ಸೀನ್ ಬೋಟಿನಲ್ಲಿ ಕೆಲಸ ಮಾಡುತ್ತಿದ್ದು, ಪಿರ್ಯಾದಿದಾರ ಸಂಬಂಧಿಯಾದ ರಾಜು ಬೆಸ್ರ ಎಂಬವರು ಕೂಡ ಜೊತೆಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ: 12.08.2021 ರಂದು ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ರಾತ್ರಿ ಸಮಯ ಸುಮಾರು 11.30 ಗಂಟೆಗೆ ರಾಜು ಬೆಸ್ರ ರವರು ಬಹಿರ್ ದೆಸೆಗೆ ತೆರಳಿದ್ದು ಆ ಸಮಯ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರುತ್ತಾನೆ. ಪಿರ್ಯಾದಿದಾರರು ಹಾಗೂ ಬೋಟಿನಲ್ಲಿ ಇದ್ದ ಇತರರು ಆತನನ್ನು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿರುವುದಿಲ್ಲ. ತಕ್ಷಣ ಆತನು ನೀರಿನಲ್ಲಿ ಕಣ್ಮರೆಯಾಗಿರುತ್ತಾರೆ. ಆತನನ್ನು ಸುತ್ತಮುತ್ತಲಿನ ಪ್ರದೇಶದಲ್ಲಿ ಪತ್ತೆಗೆ ಪ್ರಯತ್ನಿಸಿದರೂ ಇದುವರೆಗೆ ಪತ್ತೆಯಾಗಿರುವುದಿಲ್ಲ. ತಕ್ಷಣ ಈ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಠಾಣಾಧಿಕಾರಿಯವರು ಪತ್ತೆಗೆ ಪ್ರಯತ್ನಿಸಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ. ಆದ್ದರಿಂದ ರಾಜು ಬೆಸ್ರ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಈ ಮೂಲಕ ವಿನಂತಿ ಎಂಬಿತ್ಯಾದಿ.
ಕಾಣೆಯಾದವರ ಚಹರೇ; ಹೆಸರು – ರಾಜು ಬೆಸ್ರ ಪ್ರಾಯ-32 ವರ್ಷ, ಎತ್ತರ-5 ಅಡಿ, ಕೂದಲು-ಕಪ್ಪು ಕೂದಲು,ಮೈ ಬಣ್ಣ-ಎಣ್ಣೆಕಪ್ಪು ಮೈಬಣ್ಣ, ಶರೀರ-ಸಧಾರಣ ಶರೀರ, ಧರಿಸಿದ ಬಟ್ಟೆ-ಕಪ್ಪು ಬಣ್ಣದ ಅರ್ಧ ಚಡ್ಡಿ , ಕಪ್ಪು ಮತ್ತು ಬಿಳಿ ಮಿಶ್ರಿತ ಟಿ ಶರ್ಟ್ ಧರಿಸಿರುತ್ತಾರೆ. ಮಾತನಾಡುವ ಭಾಷೆ- ಹಿಂದಿ, ಜಾರ್ಕಾಂಡ್ವಿ.
Crime Reported in Mangalore Women PS
ಪಿರ್ಯಾದಿದಾರರಾದ ವಿನೋದ್ ಕುಮಾರ್ ರವರ ಮೊದಲನೇ ಮಗಳಾದ ಗಾಯಿತ್ರಿ 19 ವರ್ಷ ಎಂಬಾಕೆಯು ದ್ವೀತೀಯ ವರ್ಷದ ಡಿಗ್ರಿ ಕಲಿಯುತ್ತಿದ್ದು, ದಿನಾಂಕ 12-08-2021 ರಂದು ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಮನೆಯಿಂದ ಬೆಳಿಗ್ಗೆ ಸುಮಾರು 8.30 ಗಂಟೆಗೆ ಹೋದವಳು ಮದ್ಯಾಹ್ನ ಪರೀಕ್ಷೆ ಮುಗಿದರು ಮನೆಗೆ ಬಾರದೇ ಇದ್ದು, ಮನೆಯಲ್ಲಿ ಸಂಜೆಯವರೆಗೂ ಕಾದರು ಪಿರ್ಯಾದಿದಾರರ ಮಗಳು ಗಾಯಿತ್ರಿ ಮನೆಗೆ ಬರಲಿಲ್ಲ. ಪಿರ್ಯಾದಿದಾರರು ಹಾಗೂ ಅವರ ಮನೆಯವರು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ನನ್ನ ಮಗಳನ್ನು ಹುಡುಕಿಕೊಡುವಂತೆ ಕೇಳಿಕೊಂಡಿರುತ್ತಾರೆಂಬಿತ್ಯಾದಿ
Crime Reported in Ullal PS
ಪ್ರಕರಣದ ಪಿರ್ಯಾದಿ Chandrashekar ರವರು ಮಾಡೂರು ಶ್ರೀ ವನ ದುರ್ಗಾ ಪರಮೇಶ್ವರಿ ಅಯ್ಯಪ್ಪ ಭಜನಾ ಮಂದಿರದ ಸಮಿತಿಯ ಕಾರ್ಯದರ್ಶಿಯಾಗಿರುತ್ತಾರೆ. ದಿನಾಂಕ:12-08-2021 ರಂದು ರಾತ್ರಿ ಪೂಜೆ ಮುಗಿಸಿ ರಾತ್ರಿ 7-20 ಗಂಟೆಗೆ ಪಿರ್ಯಾದಿದಾರರು , ಮಂದಿರದ ಗುರುಸ್ಮಾಮಿ ಭಾಸ್ಕರ ಕರ್ಕೇರ ಮತ್ತುಅರ್ಚಕರಾದ ವೆಂಕಟೇಶ್ ಭಟ್ ಇವರುಗಳಲ್ಲಿ ಗುರುಸ್ಮಾಮಿ ರವರು ಮಂದಿರದ ಬಾಗಿಲಿಗೆ ಬೀಗ ಹಾಕಿ ಭದ್ರ ಪಡಿಸಿ ತಮ್ಮ ತಮ್ಮ ಮನೆಗೆ ತೆರಳಿದ್ದು, ದಿನಾಂಕ:13-08-2021 ರಂದು ಬೆಳಿಗ್ಗೆ 04-45 ಗಂಟೆಗೆ ಗುರುಸ್ಮಾಮಿ ಭಾಸ್ಕರ ಕರ್ಕೇರಾರವರು ಪಿರ್ಯಾದಿದಾರರಿಗೆ ಮಂದಿರಕ್ಕೆ ಬರುವಂತೆ ಕರೆ ಮಾಡಿದ್ದು, ತಕ್ಷಣ ಬಂದು ನೋಡಿದಾಗ ಮಂದಿರದ ಮುಖ್ಯ ದ್ವಾರದ ಬೀಗವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಒಡೆದು ಮಂದಿರದ ಒಳಗೆ ಪ್ರವೇಶಿಸಿ, ಮಂದಿರದ ಗರ್ಭಗುಡಿಯ ಮರದ ಬಾಗಿಲನ್ನು ಯಾವುದೋ ಸಾಧನದಿಂದ ಒಡೆದು ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಯಲ್ಲಿದ್ದ ಸಮಾರು 12 ಗ್ರಾಂ ತೂಕದ ರುದ್ರಾಕ್ಷಿಗೆ ಚಿನ್ನದ ಕವರ್ ಮಾಡಿದ ಸರ-1, ಸುಮಾರು 6 ಗ್ರಾಂ ತೂಕದ ಚಿನ್ನದ ಪದಕ-1, ಬೆಳ್ಳಿಯ ಸರಗಳು-2, ಬೆಳ್ಳಿಯ ಪ್ರಭಾವಳಿ-1 , ಕಾಣಿಕೆ ಡಬ್ಬಿ-2 ಇವುಗಳ ಅಂದಾಜು ಮೌಲ್ಯ 4,50,000/- ಆಗಬಹದು. ಇವುಗಳನ್ನು ಯಾರೋಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಎಂಬಿತ್ಯಾದಿ.
Crime Reported in Kankanady Town PS
ಪಿರ್ಯಾದಿ Gilbert Richard Lobo ರವರು ತನ್ನ ಪತ್ನಿ ಹಾಗೂ ಮಗನೊಂದಿಗೆ ಮಾವಲೀನ್, ಕೆಂಬಾರ್ ಮಾರ್ಗ ಪ್ರಶಾಂತ್ ಭಾಗ್ ಮಂಗಳೂರು ಎಂಬಲ್ಲಿ ವಾಸವಾಗಿದ್ದು, ಪಿರ್ಯಾದುದಾರರ ಪತ್ನಿ ವೆರೋನಿಕ E M ಮಿನೇಜಸ್ ರವರು ಬಜಾಲ್ ಸೇಂಟ್ ಜೋಸೆಫ್ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದು, ಪ್ರಸ್ತುತ ನಿವೃತ್ತಿ ಹೊಂದಿ ಮನೆಯಲ್ಲಿರುವುದಾಗಿದೆ, ಈ ಹಿಂದೆ ಸುಮಾರು 06 ತಿಂಗಳ ಮೊದಲು ಮನೆ ಬಿಟ್ಟು ಹೋದವರು ನಾಲ್ಕು ದಿನಗಳ ನಂತರ ಮನೆಗೆ ವಾಪಾಸು ಬಂದಿರುತ್ತಾರೆ. ಆ ಸಮಯ ವಿಚಾರಿಸಿದಾಗ ಪ್ರಾರ್ಥನ ಕೂಟಕ್ಕೆ ಹೋಗಿರವುದಾಗಿ ತಿಳಿಸಿರುತ್ತಾರೆ. ಸದ್ರಿಯವರು ದಿನಾಂಕ 03-08-2021 ರಂದು ಬೆಳಿಗ್ಗೆ ಸುಮಾರು 10.00 ಗಂಟೆಗೆ ಹೊರಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಈವರೆಗೂ ಮನೆಗೂ ವಾಪಾಸು ಬಂದಿರುವುದಿಲ್ಲ. ಪಿರ್ಯಾದುದಾರರು ಎಲ್ಲಾ ಕಡೆ ಹುಡುಕಾಡಿದರು ವೆರೋನಿಕ E M ಮಿನೇಜಸ್ ರವರು ಪತ್ತೆಯಾಗಿರುವುದಿಲ್ಲ, ಆದುದರಿಂದ ಕಾಣೆಯಾದ ವೆರೋನಿಕ E M ಮಿನೇಜಸ್ ರವರನ್ನು ಪತ್ತೆಮಾಡಿ ಕೊಡಬೇಕಾಗಿ ಕೋರಿಕೆ.ಎಂಬಿತ್ಯಾದಿ.
ಕಾಣೆಯಾದವರ ಚಹರೆ: ಎತ್ತರ -5.2 ಇಂಚು. ಸಾಧರಣ ಶರೀರ, ದುಂಡು ಮುಖ, ಬಿಳಿ ಮೈ ಬಣ್ಣ,ಕೆಂಪು ಬಣ್ಣದ ಸಲ್ವಾರ್ ಧರಿಸಿರುತ್ತಾರೆ,ಕನ್ನಡ, ಕೊಂಕಣಿ, ತುಳು,ಇಂಗ್ಲೀಷ್ ಮತ್ತು ಹಿಂದಿ ಮಾತನಾಡುತ್ತಾರೆ.