Crime Reported in Cyber Crime PS
ಪಿರ್ಯಾದಿರವರು ಮಂಗಳೂರು ಬಲ್ಮಠ ಕ್ರಿಸ್ಟೆಲ್ ಆರ್ಕ್ ನಲ್ಲಿರುವ ಎಸ್.ಬಿ.ಐ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು. ದಿನಾಂಕ: 13/05/2021 ರಂದು 20.00 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ನೇಯದಕ್ಕೆ ತಮ್ಮ ಎಸ್.ಬಿ.ಐ ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಲಿಂಕ್ ಮಾಡುವ ಬಗ್ಗೆ ಒಂದು ಸಂದೇಶ ಬಂದಿದ್ದು ಅದರಲ್ಲಿ ನಮೂದಾಗಿದ್ದ ಲಿಂಕ್ ನಲ್ಲಿ ಪಿರ್ಯಾದಿದಾರರು ಕ್ಲಿಕ್ ಮಾಡಿದಾಗ ಎಸ್.ಬಿ.ಐ ಯೋನೋ ಆಪ್ ನಂತೆ ತೋರುವ ವೆಬ್ ಸೈಟ್ ತೆರೆದಿದ್ದು ಅದರಲ್ಲಿ ಪಿರ್ಯಾದಿದಾರರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಯೂಸರ್ ಐಡಿ ಮತ್ತು ಪಾಸ್ ವರ್ಡ್ ದಾಖಲಿಸಿದ್ದು ಕೂಡಲೇ ಪಿರ್ಯಾದಿದಾರರ ಮೊಬೈಲ್ ಗೆ 8102716811 ನೇ ನಂಬ್ರದಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಎಸ್.ಬಿ.ಐ ಬ್ಯಾಂಕ್ ಅಧಿಕಾರಿಯೆಂದು ತಿಳಿಸಿ ಮೊಬೈಲ್ ಗೆ ಬರುವ ಓ.ಟಿ.ಪಿ ಯನ್ನು ಒದಗಿಸುವಂತೆ ಕೇಳಿಕೊಂಡಿದ್ದು ಅದನ್ನು ನಂಬಿದ ಪಿರ್ಯಾದಿದಾರರು ತನ್ನ ಮೊಬೈಲ್ ಗೆ ಬಂದ ಓಟಿಪಿಯನ್ನು ಅಪರಿಚಿತ ವ್ಯಕ್ತಿಗೆ ನೀಡಿದ್ದು ಆತನು ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂ 5,72,000/- ಗಳನ್ನು ಅನಧಿಕೃತವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಿ ಮೋಸ ಮಾಡಿರುತ್ತಾನೆ ಎಂಬಿತ್ಯಾದಿ.
Crime Reported in Mulki PS
ದಿನಾಂಕ 14-05-2021 ರಂದು ಪಿರ್ಯಾದಿ Vinayaka Torgal PSI ರವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 09.30 ಗಂಟೆಗೆ ಕರ್ನಾಡು ಗ್ರಾಮದ ಬಿಜಾಪುರ ಕಾಲೋನಿ ಹಳೆಯ ಅಂಬೋಡಿ ವೈನ್ ಶಾಫ್ ಬಳಿ ಇರುವ ಬಾವಿ ಬಳಿ ಕುಳಿತ ಒಬ್ಬ ವ್ಯಕ್ತಿ ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿದಾರರು ಸಿಬ್ಬಂದಿಯೊಂದಿಗೆ 09.50 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಸದ್ರಿ ಸ್ಥಳದಲ್ಲಿ ಒಬ್ಬ ವ್ಯಕ್ತಿ ಹೊಗೆಬತ್ತಿಯನ್ನು ಸೇದುತ್ತಿರುವುದು ಕಂಡು ಬಂದಿದ್ದು, ಪಿರ್ಯಾದಿದಾರರು ಆತನ ಬಳಿ ತೆರಳಿ ವಾಹನವನ್ನು ನಿಲ್ಲಿಸಿದಂತೆ ಆತನು ಪಿರ್ಯಾದಿದಾರರನ್ನು ಮತ್ತು ಸಿಬ್ಬಂದಿಯನ್ನು ಕಂಡು ತನ್ನ ಕೈಯಲ್ಲಿದ್ದ ಹೊಗೆ ಬತ್ತಿಯನ್ನು ಬಾವಿಗೆ ಬಿಸಾಡಿದ್ದು, ಆತನನ್ನು ವಿಚಾರಿಸಿದಾಗ ಆತನ ಹೆಸರು Mohammad Irshad(A1) /Husain /,Ashraya Colony,Lingappayyakadu, ಎಂಬುದಾಗಿ ತಿಳಿಸಿದ್ದು ಆತ ಹೊಗೆ ಬತ್ತಿಯೊಂದಿಗೆ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಆತನ ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ನೀಡಿರುವ ಮೇರೆಗೆ ಆತನ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ.
2) ದಿನಾಂಕ 14-05-2021 ರಂದು ಪಿರ್ಯಾದಿ Vinayak Torgal – PSI ರವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 11.30 ಗಂಟೆಗೆ ಬಪ್ಪನಾಡು ಗ್ರಾಮದ ಕೊಳಚಿ ಕಂಬ್ಲ ನದಿ ದಡದಲ್ಲಿ ಕುಳಿತ ಒಬ್ಬ ವ್ಯಕ್ತಿ ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿದಾರರು ಸಿಬ್ಬಂದಿಯೊಂದಿಗೆ 11.45 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಸದ್ರಿ ಸ್ಥಳದಲ್ಲಿ ಒಬ್ಬ ವ್ಯಕ್ತಿ ಹೊಗೆಬತ್ತಿಯನ್ನು ಸೇದುತ್ತಿರುವುದು ಕಂಡು ಬಂದಿದ್ದು, ಪಿರ್ಯಾದಿದಾರರು ಆತನ ಬಳಿ ತೆರಳಿದಾಗ ಆತನು ಪಿರ್ಯಾದಿದಾರರನ್ನು ಮತ್ತು ಸಿಬ್ಬಂದಿಯನ್ನು ಕಂಡು ತನ್ನ ಕೈಯಲ್ಲಿದ್ದ ಹೊಗೆ ಬತ್ತಿಯನ್ನು ನದಿಗೆ ಬಿಸಾಡಿದ್ದು, ಆತನನ್ನು ವಿಚಾರಿಸಿದಾಗ ಆತನ ಹೆಸರು Asif(A1) / Abdul Rahiman ಎಂಬುದಾಗಿ ತಿಳಿಸಿದ್ದು ಆತ ಹೊಗೆ ಬತ್ತಿಯೊಂದಿಗೆ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಆತನ ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ನೀಡಿರುವ ಮೇರೆಗೆ ಆತನ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ
Crime Reported in Bajpe PS
“ಫಿರ್ಯಾದಿ Raghavendra Naik PSI ರವರು ದಿನಾಂಕ 14.05.2021 ರಂದು ಠಾಣಾ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ತಾಲೂಕು ತೆಂಕ ಉಳಿಪ್ಪಾಡಿ ಗ್ರಾಮದ, ಸಾದೂರು ಎಂಬಲ್ಲಿ ನೀರು ಹೋಗುವ ತೋಡಿನಲ್ಲಿ ಅಕ್ರಮವಾಗಿ ಜೆ.ಸಿ.ಬಿ. ಮುಖಾಂತರ ಮರಳನ್ನು ತೆಗೆದು ಟಿಪ್ಪರಿಗೆ ತೊಂಬಿಸಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸದ್ರಿ ಸ್ಥಳಕ್ಕೆ ಬೆಳಿಗ್ಗೆ 11:00 ಗಂಟೆಗೆ ತಲುಪಿದಾಗ ಜೆ.ಸಿ.ಬಿ. ಮುಖಾಂತರ ತೋಡಿನಿಂ ಮರಳನ್ನು ತೆಗೆದು ಸಾಗಾಟ ಮಾಡಲು ತಯಾರಿ ಮಾಡುತ್ತಿದ್ದವರನ್ನು ತಡೆದು ನಿಲ್ಲಿಸಿದಾಗ ಒಬ್ಬ ವ್ಯಕ್ತಿ ಓಡಿ ಹೋಗಿದ್ದು, ಟಿಪ್ಪರ್ ನಲ್ಲಿ ಸುಮಾರು ಅರ್ಧ ಲೋಡ್ ನಷ್ಟು ಸಾಮಾನ್ಯ ಮರಳು ಇದ್ದು ವಿಚಾರಿಸಲಾಗಿ ಟಿಪ್ಪರ್ ಚಾಲಕನು ತನ್ನ ಹೆಸರು ಮನ್ಸೂರು ಎಂಬುದಾಗಿ ತಿಳಿಸಿದ್ದು ಜೆ.ಸಿ.ಬಿ. ಆಪರೇಟರ್ ತನ್ನ ಹೆಸರು ತೋಮಸ್ ಎಂಬುದಾಗಿ ತಿಳಿಸಿದ್ದು ಓಡಿ ಹೋದ ವ್ಯಕ್ತಿಯು ವಿನಯ ಆಗಿರುತ್ತಾನೆ. ಜೆ.ಸಿ.ಬಿ.ಯ ನಂಬ್ರ ಕೆಎ-19ಝಡ್-3803 ಆಗಿದ್ದು ಟಿಪ್ಪರ್ ಲಾರಿಯ ನಂಬ್ರ ಕೆಎ-24-4750 ಆಗಿದ್ದು. ಆರೋಪಿಗಳು ಯಾವುದೇ ಪರವಾನಿಗೆ ಪಡೆಯದೇ ತೋಡಿನಿಂದ ಸರಕಾರಿ ಸೊತ್ತಾದ ಸಾಮಾನ್ಯ ಮರಳನ್ನು ಕಳವು ಮಾಡಿರುವುದಾಗಿದೆ. ಕಳವು ಮಾಡಿದ ಮರಳಿನ ಮೌಲ್ಯ ಸುಮಾರು 3,000/- ಆಗಿದ್ದು ಟಿಪ್ಪರ್ ಲಾರಿಯ ಮೌಲ್ಯ ಸುಮಾರು ಆರು ಲಕ್ಷವಾಗಿದ್ದು ಜೆ.ಸಿ.ಬಿ.ಯ ಮೌಲ್ಯ ಸುಮಾರು ಹತ್ತು ಲಕ್ಷ ಆಗಬಹುದು ಆರೋಪಿಗಳನ್ನು ಮತ್ತು ಸೊತ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in Surathkal PS
ದಿ : 14-05-2021 ರಂದು ಠಾಣಾ ಪಿಸಿ ಸಂತೋಷ ರಾಥೋಡ್ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಫಿರ್ಯಾಧಿ Punith Gaovkar ರವರು ಸಿಬ್ಬಂಧಿಗಳೊಂದಿಗೆ ಕುಳಾಯಿ ಗ್ರಾಮದ ಅಡ್ಕ ಎಂಬಲ್ಲಿನ ರೈಲ್ವೆ ಹಳಿ ಬಳಿಯ ಖಾಲಿ ಸ್ಥಳದಲ್ಲಿ ಮಾನವ ಜೀವಕ್ಕೆ ಅಪಾಯಕರವಾದ ಕರೋನ ಸೊಂಕು ಹರಡುವ ಸಾದ್ಯತೆಯಿರುವುದನ್ನು ಮನಗಂಡು ಸಹ ಮುಖಕ್ಕೆ ಮಾಸ್ಕ್ ಗಳನ್ನು ಧರಿಸದೇ ಸಾಮಾಜಿತ ಅಂತರವನ್ನು ಪಾಲಿಸದೇ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಈಗಾಗಲೇ ಹೊರಡಿಸಿರುವ ಸರಕಾರದ ಆದೇಶವನ್ನು ಉಲ್ಲಂಘಿಸಿದಲ್ಲದೇ ಕರೋನಾ ನಿಯಂತ್ರಣಕ್ಕೆ ಮತ್ತು ಸುರಕ್ಷತೆಗೆ ಯಾವುದೇ ಕ್ರಮಗಳನ್ನು ಕೈಗೊಳದೇ ಸಾರ್ವಜನಿಕ ಸ್ಥಳದಲ್ಲಿ ಎರಡು ಕೋಳಿಗಳ ಕಾಲಿಗೆ ಸಣ್ಣ ಚೂರಿಗಳನ್ನು ಕಟ್ಟಿ, ಅವುಗಳನ್ನು ಕಾದಾಡಲು ಬಿಟ್ಟು ತಮ್ಮ ಸ್ವಂತ ಲಾಭಗೋಸ್ಕರ ಹಣವನ್ನು ಪಣವಾಗಿರಿಸಿ ಚೂರಿಯಿಂದ ಚುಚ್ಚಿ ಹಿಂಸೆ ನೀಡಿ ಕೋಳಿ ಅಂಕ ಎಂಬ ಜುಗಾರಿ ಆಟ ಆಡಿದ ಆರೋಫಿಗಳಾದ ಅಕ್ಷಯ @ ಅಕ್ಷತ್ ಪ್ರಾಯ: 25 ವರ್ಷ 2) ಸುನೀಲ್ ಪ್ರಾಯ: 41 ವರ್ಷ 3) ರಾಜೇಶ್ ಪ್ರಾಯ: 40 ವರ್ಷ 4) ಚಂದ್ರಶೇಖರ ಪ್ರಾಯ: 28 ವರ್ಷ 5) ನಿಖಿಲ್ ಶೆಟ್ಟಿ ಪ್ರಾಯ: 23 ವರ್ಷ ಇವರನ್ನು ವಶಕ್ಕೆ ಪಡೆದು ಮೇಲ್ಕಾಣಿಸಿದ ಕೋಳಿ ಅಂಕಕ್ಕೆ ಉಪಯೋಗಿಸಿದ ಎರಡು ಸಣ್ಣ ಚೂರಿಗಳು ಹಾಗೂ ಕಪ್ಪು ಬಣ್ಣದ ನೂಲುಗಳು-2 ಹಾಗೂ ನಗದು ರೂ 400/ ಮಾತ್ರ ( ರೂಪಾಯಿ ನಾಲ್ಕೂರು ಮಾತ್ರ) ಕೆಂಪು ಕಪ್ಪು ಬಣ್ಣದ ಕೋಳಿ -1 ( ಕುಪ್ಪು ಕುಪುಲೆ ) ಮತ್ತು ಹಳದಿ ಕಾವೆ ಬಣ್ಣದ ಗರಿವುಳ್ಳ ಕೋಳಿ -1 (ಹಳದಿ ಕಾವೆ) ಗಳನ್ನು ವಶಕ್ಕೆ ಪಡೆದಿರುವುದಾಗಿದೆ ಮೇಲ್ಕಾಣಿಸಿದ ಎರಡು ಕೋಳಿಗಳ ಒಟ್ಟು ಅಂದಾಜು ಮೌಲ್ಯ ರೂ 1,500/- ಮೇಲ್ಕಾಣಿಸಿದ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in Ullal PS
ದಿನಾಂಕ; 14-05-2021 ರಂದು ಫಿರ್ಯಾದಿದಾರರಾದ ಪಿಎಸ್ಐ Pradeep T.R ಮತ್ತು ಸಿಬ್ಬಂದಿಯವರು ರೌಂಡ್ಸ್ ನಲ್ಲಿರುವಾಗ ಸಮಯ ಬೆಳಿಗ್ಗೆ 07-45 ಗಂಟೆಗೆ ಕಲ್ಲಾಪು ಬಳಿ ವಾಹನ ತಪಾಸಣೆ ಮಡುತ್ತಿದ್ದ ಸಿಬ್ಬಂದಿಗಳು ಚೆಕ್ ಪಾಯಿಂಟ್ ನಲ್ಲಿ ಟಿಪ್ಪರ್ ಲಾರಿಯನ್ನು ನಿಲ್ಲಿಸದೇ ಹೋಗಿರುವ ಬಗ್ಗೆ ಫಿರ್ಯಾದಿದಾರರಿಗೆ ಮಾಹಿತಿ ನೀಡಿದಂತೆ ಫಿರ್ಯಾದಿದಾರರು ಟಿಪ್ಪರ್ ಲಾರಿಯನ್ನು ಹಿಂಬಾಲಿಸಿಕೊಂಡು ಕೋಟೆಕಾರ್ ಬೀರಿ ಎಂಬಲ್ಲಿ ನಿಲ್ಲಿಸಿ, ಟಿಪ್ಪರ್ ಲಾರಿಯನ್ನು ಪರಿಶೀಲಿಸಲಾಗಿ ಟಿಪ್ಪರ್ ಲಾರಿ ನೊಂದಣಿ ನಂಬ್ರ ಕೆಎ06 ಡಿ 9549 ಆಗಿದ್ದು, ಇದರ ಚಾಲಕನ ಹೆಸರು ಇಮ್ತಿಯಾಝ್, ಕಲ್ಲಾಪು ಪೆರ್ಮನ್ನೂರು ಎಂಬುದಾಗಿ ತಿಳಿಸಿ್ದ್ದು, ಲಾರಿಯನ್ನು ಪರಿಶೀಲಿಸಲಾಗಿ ಸಾಮಾನ್ಯ ಮರಳು ತುಂಬಿರುವುದು ಕಂಡು ಬಂದಿರುತ್ತದೆ. ಇಮ್ತಿಯಾಝ್ ನಲ್ಲಿ ಪರವಾನಿಗೆ ಬಗ್ಗೆ ವಿಚಾರಿಸಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಈ ಸಾಮಾನ್ಯ ಮರಳು ಸಾಗಾಟಕ್ಕೆ ಟಿಪ್ಪರ್ ಲಾರಿ ಮಾಲಕ ನವಾಝ್ ಕಲ್ಲಾಪು ಮತ್ತು ತೊಹಿದ್ ಕಲ್ಲಾಪು ಮಾಹಿತಿ ನೀಡಿದ ಬಗ್ಗೆ ತಿಳಿಸಿರುತ್ತಾನೆ. ಕೆಎ06 ಡಿ 9549 ನೇ ಟಿಪ್ಪರ್ ಮಾಲಕ ನವಾಝ್ ಕಲ್ಲಾಪು ಎಂಬವರು ಕರ್ನಾಟಕ ರಾಜ್ಯ ಸರಕಾರದಿಂದ ಮರಳು ಸಾಗಾಟದ ಬಗ್ಗೆ ಯಾವುದೇ ಪರವಾನಿಗೆಯನ್ನು ಪಡೆಯದೇ ರಾಜ್ಯಸ್ವಕ್ಕೆ ನಷ್ಟ ಉಂಟು ಮಾಡಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ ಸಾಮಾನ್ಯ ಮರಳನ್ನು ಕಳವು ಮಾಡಿಕೊಂಡು ಯಾವುದೇ ಪರವಾನಿಗೆ ಇಲ್ಲದೇ , ಸಾಗಾಟ ಮಾಡಿರುವುದು ಕಂಡು ಬಂದಿರುವುದರಿಂದ ಟಿಪ್ಪರ್ ಲಾರಿ ಚಾಲಕ ಇಮ್ತಿಯಾಜ್, ಮಾಲಕ ನವಾಝ್ ಕಲ್ಲಾಪು, ಮತ್ತು ತೋಹಿದ್ ಕಲ್ಲಾಪು ಇವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.
2) ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪಿರ್ಯಾದಿದಾರರು ದಿನಾಂಕ :14-05-2021 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದ ಬಗ್ಗೆ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 08-35 ಗಂಟೆಗೆ ಉಳ್ಳಾಲ ಗ್ರಾಮದ ತೊಕ್ಕೊಟ್ಟು ಒಳಪೇಟೆ ಕೃಷಿ ಸಂಶೋಧನೆ ಬಳಿಗೆ ತಲುಪುವಾಗ ತೊಕ್ಕೊಟ್ಟು ಒಳಪೇಟೆ ಕಡೆಯಿಂದ ಬರುತ್ತಿದ್ದ ಕೆಎಲ್ 07 ಬಿಹೆಚ್. 4578 ಟಿಪ್ಪರ್ ಲಾರಿಯನ್ನು ತಪಾಸಣೆ ಸಲುವಾಗಿ ನಿಲ್ಲಿಸಿದಾಗ ಅದರ ಚಾಲಕನು ಲಾರಿಯಿಂದ ಇಳಿದು ಓಡಿ ಹೋಗಿದ್ದು, ಸದ್ರಿ ಲಾರಿಯನ್ನು ಪರಿಶೀಲಿಸಿ ನೋಡಿದಾಗ ಸದ್ರಿ ಲಾರಿ ಚಾಲಕ ಮತ್ತು ಮಾಲಕರು ಸೇರಿಕೋಂಡು ಕರ್ನಾಟಕ ರಾಜ್ಯ ಸರಕಾರದಿಂದ ಯಾವುದೆ ಪರವಾನಿಗೆ ಪಡೆಯದೇ, ರಾಜ್ಯಸ್ವಕ್ಕೆ ನಷ್ಟ ಉಂಟು ಮಾಡಿ, ಅಕ್ರಮ ಲಾಭ ಗಳಿಸುವ ಉದ್ದೇಶದಸಿಂದ ಎಲ್ಲಿಂದಲೋ ಸಾಮಾನ್ಯ ಮರಳನ್ನು ಕಳವು ಮಾಡಿ ಟಿಪ್ಪರ್ ಲಾರಿಗೆ ತುಂಬಿಸಿ, ಅಕ್ರಮ ಸಾಗಾಟ ಮಾಡುತ್ತಿದ್ದುದ್ದಲ್ಲದೇ, ಕೋವಿಡ್ 19 ಸಾಂಕ್ರಮಿಕ ರೋಗ್ವನ್ನು ಹರಡುವುದನ್ನು ತಡೆಗಟ್ಟುವ ನಿಟ್ಟಿನ ಲ್ಲಿ ಹೊರಡಿಸಿರುವ ಕರ್ನಾಟಕ ಸರಕಾರದ ಅದೇಶವನ್ನು ಉಲ್ಲಂಘಿಸಿರುವುದರಿಂದ ಸದ್ರಿ ಲಾರಿ ಚಾಲಕ ಮಾಲಕ ಹಾಗೂ ಕೃತ್ಯದ ಲ್ಲಿ ಸಹಕರಿಸಿದ ಇತರರ ವಿರುದ್ಧ ದಾಖಲಿಸಿದ ಪ್ರಕರಣದ ಸಾರಾಂಶ.
3) ದಿನಾಂಕ: 13-05-2021 ರಂದು ಮದ್ಯಾಹ್ನ 12-45 ಗಂಟೆ ಸಮಯಕ್ಕೆ ರಂಝಾನ್ ಹಬ್ಬದ ಪ್ರಯುಕ್ತ ಮನೆಯಲ್ಲಿ ಎಲ್ಲರೂ ಇದ್ದು, ಮದ್ಯಾಹ್ನ ಊಟದ ಸಮಯದಲ್ಲಿ ಮನೆಯಲ್ಲಿ ಎಲ್ಲರೂ ಊಟಕ್ಕೆ ಕುಳಿತ್ತಿರುವಾಗ Badriya Manzil, Vidyanagara, Near Falaha School,, Talapady Village ನಿವಾಸಿ ಫಿರ್ಯಾದಿ U.Nazeer (46) ದಾರರ ಸಣ್ಣ ಮಗ ಅಬೂಬಕ್ಕರ್ ಅದಿನಾನ್ ಎಂಬಾತಾನ ಕಾಲು ಊಟದ ಬಟ್ಟಲಿಗೆ ಸ್ವಲ್ಪ ತಾಗಿದ್ದಕ್ಕೆ ಫಿರ್ಯಾದಿದಾರರ ದೊಡ್ಡ ಮಗ ಶೇಖ್ ಝಾಯೀದ್ ನಿಝ್ಮಾನ್ ನು(19) ಅಬೂಬಕ್ಕರ್ ಅದಿನಾನ್ ಗೆ ಊಟದ ಬಟ್ಟಲಿಗೆ ಕಾಲು ತಾಗಿಸಬೇಡ, ನಿನಗೆ ಕಾಣುವುದಿಲ್ಲವೇ ಎಂದು ಜೋರು ಮಾಡಿದಾಗ ಅವರಿಬ್ಬರು ಅಣ್ಣತಮ್ಮಂದಿರೊಳಗೆ ಮಾತಿಗೆ ಮಾತು ಬೆಳೆದು ಜೋರಾಗಿ ಜಗಳವಾಗಿ ಅವರಿಬ್ಬರ ಮೊಬೈಲ್ ಫೋನನ್ನು ಶೇಖ್ ಝಾಯೀದ್ ನಿಝ್ಮಾನ್ ನು ಬಿಸಾಡಿದ್ದಕ್ಕೆ ಕೋಪಗೊಂಡ ಫಿರ್ಯಾದಿದಾರರ ಪತ್ನಿ ನಸೀಮಳು ಶೇಖ್ ಝಾಯೀದ್ ನಿಝ್ಮಾನ್ ನಿಗೆ ಜೋರು ಮಾಡಿದ್ದಕ್ಕೆ ಕೋಪಗೊಂಡು ಮನೆಯಿಂದ ಹೊರಗೆ ಹೋದವನು ವಾಪಾಸ್ ಮನೆಗೆ ಬಾರದೇ ಕಾಣಿಯಾಗಿರುತ್ತಾನೆ. ಕಾಣೆಯಾದ ಶೇಖ್ ಝಾಯೀದ್ ನಿಝ್ಮಾನ್ ನನ್ನು ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ಹಾಗೂ ಅಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿ ಪ್ರಕರಣದ ಸಾರಂಶ
Crime Reported in Moodabidre PS
ದಿನಾಂಕ 14-05-2021 ರಂದು ಪಿರ್ಯಾದಿ Praveen Jain ರವರ ಪರಿಚಯದ ಸಂತೋಷ್ ಎಂಬವರು ಅವರ ಮಾಲೀಕತ್ವದ ಕೆಎ-19-ಈ ಆರ್ -6455 ನಂಬ್ರದ ಮೋಟಾರ್ ಬೈಕನ್ನು ಸವಾರಿ ಮಾಡಿಕೊಂಡು ಔಷದ ತರಲೆಂದು ಬೆಳುವಾಯಿಯ ಗೀತಾಂಜಲಿ ಮೆಡಿಕಲ್ ಶಾಪಿಗೆ ಬಂದು ಔಷದ ಖರೀದಿಸಿ ವಾಪಸು ಮನೆಗೆ ಹೋಗುತ್ತಾ ಬೆಳುವಾಯಿ ಜಂಕ್ಷನ್ ನಿಂದ ಮುಂದಕ್ಕೆ ಅಳಿಯೂರು ಕಡೆಗೆ ಹಾದು ಹೋದ ರಸ್ತೆಯನ್ನು ತಲುಪುತ್ತಿದ್ದಂತೆ ಸಮಯ ಸುಮಾರು ಬೆಳಿಗ್ಗೆ 10-30 ಗಂಟೆಗೆ ಕಾರ್ಕಳ ಕಡೆಯಿಂದ ಕೆಎ-19-ಎಂಜೆ-4079 ನಂಬ್ರದ ಕಾರಿನ ಚಾಲಕ ನಿರ್ಲಕ್ಷತನ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಂತೋಷ್ ರವರು ಸವಾರಿ ಮಾಡುತ್ತಿದ್ದ ಮೋಟಾರ್ ಬೈಕಿನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಸಂತೋಷ್ ರವರು ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿಗೆ ಗಂಬೀರ ಸ್ವರೂಪದ ಗಾಯವಾಗಿ ಅಲಂಗಾರಿನ ಮೌಂಟ್ ರೋಸಾರಿಯೋ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಯನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ