ಅಭಿಪ್ರಾಯ / ಸಲಹೆಗಳು

Crime Reported in Cyber Crime PS

ದಿನಾಂಕ: 14/06/2021 ರಂದು ಬೆಳಿಗ್ಗೆ 9.30 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿ 9339431456 ನೇ ನಂಬ್ರದಿಂದ ಕರೆ ಮಾಡಿ ತಾನು ಡಿ.ಟಿ.ಡಿ.ಸಿ ಕೊರಿಯರ್ ಸಂಸ್ಥೆಯಿಂದ ಮಾತನಾಡುವುದಾಗಿ ತಿಳಿಸಿ ಪಿರ್ಯಾದಿದಾರರು ಕಳುಹಿಸಿರುವ ಪಾರ್ಸೆಲ್ ನಲ್ಲಿ ಏರಿಯಾ ಪಿನ್ ಕೋಡ್ ತಪ್ಪಾಗಿ ನಮೂದಾಗಿದ್ದು ಕಳುಹಿಸಿದ ಪಾರ್ಸೆಲ್ ಡೆಲಿವರಿ ಮಾಡಬೇಕಾದಲ್ಲಿ ರೂ 10 ಪಾವತಿಸುವಂತೆ ತಿಳಿಸಿ, ಅವರ ಮೊಬೈಲ್ ಸಂಖ್ಯೆಗೆ ಹಣಪಾವತಿಸುವ ಬಗ್ಗೆ ಲಿಂಕ್ ಕಳುಹಿಸಿಕೊಟ್ಟಿದ್ದು ಸದ್ರಿ ಲಿಂಕ್ ಮೂಲಕ ಪಿರ್ಯಾದಿದಾರರು ತನ್ನ ಯು.ಪಿ.ಐ ಪಿನ್ ನಮೂದಿಸಿ ರೂ 10/- ಪಾವತಿಸಿರುತ್ತಾರೆ. ತದನಂತರ ದಿನಾಂಕ: 15/06/2021 ರಂದು ಪಿರ್ಯಾದಿದಾರರ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಕೆನರಾ , ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೊಟಾಕ್ ಮಹೀಂದ್ರ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು ರೂ 1,69,600/- ಗಳನ್ನು ಅಪರಿಚಿತ ವ್ಯಕ್ತಿಯು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿರುತ್ತಾನೆ ಎಂಬಿತ್ಯಾದಿ

2) ಪಿರ್ಯಾದಿದಾರರು ಮಂಗಳೂರು ನಗರದ ಆರ್ಯ ಸಮಾಜ ರೋಡಿನ ಎಸ್.ಬಿ.ಐ ಬ್ರಾಂಚ್ ನಲ್ಲಿ ಖಾತೆ ಹೊಂದಿದ್ದು  ದಿನಾಂಕ 13-06-2021 ರಂದು ರಾತ್ರಿ 9.43 ಗಂಟೆಗೆ ಪಿರ್ಯಾದಿದಾರರರ ಮೊಬೈಲ್ ಸಂಖ್ಯೆಗೆ ಯಾರೋ ಅಪರಿಚಿತರು ಮೊಬೈಲ್  ಎಸ್.ಎಂ.ಎಸ್ ಒಂದನ್ನು ಕಳುಹಿಸಿದ್ದು ಅದರಲ್ಲಿ “verify important Message  from SBI” HTTP://TINY.CC/V622UZ ಎಂಬ ಲಿಂಕ್ ಇದ್ದು ಪಿರ್ಯಾದಿದಾರರು ಸದ್ರಿ ಲಿಂಕನ್ನು ಒತ್ತಿದ ಕೂಡಲೇ ಎಸ್.ಬಿ.ಐ ಬ್ಯಾಂಕಿನ ವೆಬ್ ಸೈಟ್ ನಂತೆ ಕಾಣುವ ಪೇಜ್ ಓಪನ್ ಆಗಿದ್ದು ಅದರಲ್ಲಿ ಅರ್ಜಿದಾರರರಿಗೆ user name, password ನ್ನು ತುಂಬಲು ತಿಳಿಸಿ ನಂತರ ಓ.ಟಿ.ಪಿ ವಿವರವನ್ನು ಪಡೆದುಕೊಂಡು ಹಂತ ಹಂತವಾಗಿ ಪಿರ್ಯಾದಿದಾರರ ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ  ಒಟ್ಟು ರೂ.65,000/- ವನ್ನು ತನ್ನ ಖಾತೆಗೆ ವರ್ಗಾಯಿಸಕೊಂಡು ಮೋಸ ಮಾಡಿರುವುದಾಗಿದೆ. ಎಂಬಿತ್ಯಾದಿ.

Crime Reported in Mangalore North PS

ದಿನಾಂಕ 13.06.2021 ರಂದು ರಾತ್ರಿ 11-00 ಗಂಟೆಯಿಂದ ಬೆಳಗ್ಗೆ 05-00 ಗಂಟೆಯ ತನಕ ಗುರಪ್ಪ ಕಾಂತಿ ಪಿಎಸ್ ಐ ಕಾಸು -1 ಉತ್ತರ ಠಾಣೆ ರವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ನಗರ ನಿಸ್ತಂತು ಕೊಠಡಿಯಿಂದ ಮಂಗಳೂರು ಹಂಪನಕಟ್ಟೆಯಲ್ಲಿರುವ ಗ್ರಾಂಡ್ ಪ್ಲಾಜಾ ಹೋಟೆಲ್ ನಲ್ಲಿ ಗಲಾಟೆ ನಡೆಯುತ್ತಿದೆ ಅಲ್ಲಿಗೆ ಹೋಗಿ ನೋಡಿ ಎಂದು ಹೇಳಿದಂತೆ ಹೊಯ್ಸಳ ಸಿಬ್ಬಂದಿಗಳೊಂದಿಗೆ ಗ್ರಾಂಡ್ ಪ್ಲಾಜಾ ಹೋಟೆಲ್ ಗೆ ತೆರಳಿ ಸ್ವಾಗತಕಾರರಲ್ಲಿ ವಿಚಾರಿಸಿ 4 ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 4408 ನೇದರಲ್ಲಿ ಇಬ್ಬರು ಯುವಕರು ಅಮಲು ಪದಾರ್ಥ ಸೇವಿಸಿ ಗಲಾಟೆ ಮಾಡುತ್ತಿರುವುದನ್ನು ಕಂಡು ಆತನ ಹೆಸರು ಕೇಳಲಾಗಿ ಒಬ್ಬಾತ ರಾಮ್ ಮೆಹ್ರಾ ಹಿಮಾಚಲ ಪ್ರದೇಶ ರಾಜ್ಯ ಇನ್ನೋಬ್ಬಾತ ಅಹಮ್ಮದ್ ಮೊಹಮ್ಮದ್ ಮುಸಬಾ ಅಲ್ ಮಾಮರಿ ಓಮನ್ ದೇಶ ಎಂದು ತಿಳಿಸಿದ್ದು, ಅವರಲ್ಲಿ ಅಮಲು ಪದಾರ್ಥ ಸೇವನೆ ಮಾಡಿದ್ದೀರ ಎಂದು ಕೇಳಿದಾಗ ಗಾಂಜಾ ಮತ್ತು ಎಂಡಿಎಂಎ ಸೇವನೆ ಮಾಡಿರುವುದು ಒಪ್ಪಿಕೊಂಡಂತೆ ಅವರು ವಾಸವಿರುವ ಕೊಠಡಿ ಸಂಖ್ಯೆ 4408 ನೇದನ್ನು ಪರಿಶೀಲಿಸಿ ನೋಡಲಾಗಿ ಕೊಠಡಿಯಲ್ಲಿ 52 ಗ್ರಾಂ ಗಾಂಜಾ ಹಾಗೂ 1.93 ಗ್ರಾಂ ಎಂಡಿಎಂಎ ಎಂಬ ಮಾಧಕ ವಸ್ತು, ಮೊಬೈಲ್ ಪೋನ್ ಗಳು -4, ಲ್ಯಾಪ್ ಟಾಪ್, ಎಟಿಎಂ ಕಾರ್ಡ್, ಪಾಸ್ ಪೋರ್ಟ್, ಭಾರತೀಯ ನೋಟುಗಳು, ವಿದೇಶಿ ಕರೆನ್ಸಿಗಳು ಪತ್ತೆಯಾಗಿದ್ದು, ಈ ಎಲ್ಲಾ ಸೊತ್ತುಗಳನ್ನು ಪಂಚರ ಸಮಕ್ಷಮ ಮಹಜರು ಮುಖೇನಾ ಸ್ವಾಧಿನಪಡಿಸಿಕೊಂಡು ಆರೋಪಿಗಳಿಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

 

Crime Reported in Mulki PS  

Lingappayyakadu, Karnadu Village  ನಿವಾಸಿ ಪಿರ್ಯಾದಿದಾರರ ಮಗಳು,  ಶಂಕ್ರಮ್ಮ (ಪ್ರಾಯ 22 ವರ್ಷ) ಎಂಬುವರು  ದಿನಾಂಕ 12.06.2021 ರಂದು ರಾತ್ರಿ 02.00  ಗಂಟೆಯ ವೇಳೆಗೆ ಆಕೆಯು ಪಿರ್ಯಾದಿದಾರರ  ಮನೆಯಲ್ಲಿ  ಮಲಗಿದ್ದವಳು ಕಾಣೆಯಾಗಿದ್ದು, ಅವಳು ಆಕಾಶ ಸಾಗರ ಎಂಬಾತನೊಂದಿಗೆ ಹೋಗಿರುವ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನಂತೆ ಪ್ರಥಮ ವರ್ತಮಾನ ವರದಿ. 

ಕಾಣೆಯಾದವರ ಚಹರೆ:-

ಹೆಸರು: ಶಂಕ್ರಮ್ಮ

ಪ್ರಾಯ: 22 ವರ್ಷ

ಎತ್ತರ: 5.1 ಅಡಿ

ಮೈಬಣ್ಣ ಗೋದಿ ಮೈ ಬಣ್ಣ ದುಂಡು ಮುಖ

ಧರಿಸಿದ ಬಟ್ಟೆ: ನೀಲಿ ಬಣ್ಣದ ಲಗ್ಗಿನ್ಸ್, ಹಸಿರು ಬಣ್ಣದ ಟಾಪ್

ಗೊತ್ತಿರುವ ಭಾಷೆ: ಕನ್ನಡ

 

ಇತ್ತೀಚಿನ ನವೀಕರಣ​ : 15-06-2021 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080