ಅಭಿಪ್ರಾಯ / ಸಲಹೆಗಳು

Crime Reported in Cyber Crime PS

ಪಿರ್ಯಾದಿದಾರರ ಭಾವನವರು ಮಂಗಳೂರಿನ ಅತ್ತಾವರದಲ್ಲಿ ಕರ್ನಾಟಕ ಡೆಂಟಲ್ ಅಂಡ್ ಸರ್ಜಿಕಲ್ ಎಂಬ ಸರ್ಜಿಕಲ್ ಮಾರಾಟದ ಅಂಗಡಿಯನ್ನು ಹೊಂದಿದ್ದು ಎಂ.ಜಿ ರೋಡ್ ನಲ್ಲಿರುವ ಐ.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಖಾತೆಯ ನ್ನು ಹೊಂದಿರುತ್ತಾರೆ. ಸದ್ರಿಯವರು ಹೊರದೇಶದಲ್ಲಿದ್ದು ಸದ್ರಿ ಸರ್ಜಿಕಲ್ ಅಂಗಡಿಯ ಎಲ್ಲಾ ವಹಿವಾಟನ್ನು ಪಿರ್ಯಾದಿದಾರರು ನೋಡಿಕೊಳ್ಳುತ್ತಿದ್ದು ದಿನಾಂಕ 22-04-2021 ರಂದು ಮಧ್ಯಾಹ್ನ ಸಮಯ ಸುಮಾರು  4.00 ಗಂಟೆಗೆ ಪಿರ್ಯಾದಿದಾರರಿಗೆ  ಓಂ ಸಾಯಿ ಎಂಟರ್ ಪ್ರೈಸಸ್ ಕಂಪೆನಿಯಿಂದ ಮೊಬೈಲ್ ನಂಬ್ರ 9582854198 ದಿಂದ  ವಾಟ್ಸಪ್ ಮೆಸೆಜ್ ಬಂದಿದ್ದು ಅದರಲ್ಲಿ 1 ಬಾಕ್ಸ್ ಗ್ಲವ್ಸ್ ಗೆ ರೂ.358.4 ರಂತೆ ಒಟ್ಟು 750 ಬಾಕ್ಸ್ ಗೆ ರೂ. 2,68,800/- ಕೊಡುವುದಾಗಿ ಆಫರ್ ಬಂದಿರುತ್ತದೆ. ಇದನ್ನು ನಂಬಿದ ಪಿರ್ಯಾದಿದಾರರು 9582854198 ಕ್ಕೆ ಕರೆ ಮಾಡಿ ಮಾತನಾಡಿದಾಗ  ಅರ್ಧ ಮುಂಗಡ ಹಣ ನೀಡಿ ನಿಮ್ಮ ವಸ್ತುಗಳನ್ನು ಕಳುಹಿಸಿಕೊಡುತ್ತೇವೆ ಹೇಳಿರುತ್ತಾರೆ. ಅದರಂತೆ ದಿನಾಂಕ 23-04-2021 ರಂದು ಮಧ್ಯಾಹ್ನ 4.00 ಗಂಟೆಗೆ 9582854198ನೇ ನಂಬ್ರದ ಅಪರಿಚಿತ ವ್ಯಕ್ತಿ  ನಮೂದಿಸಿದ ಐ.ಡಿ.ಎಫ್.ಸಿ ಖಾತೆ ಗೆ ನೆಟ್ ಬ್ಯಾಂಕಿಂಗ್ ಮೂಲಕ ಪಿರ್ಯಾದಿದಾರರು ಭಾವನವರ ಐ.ಡಿ.ಎಫ್.ಸಿ ಖಾತೆ ಯಿಂದ ರೂ.25,000/- ಕಳುಹಿಸಿಕೊಟ್ಟಿದ್ದು ಪುನಃ ದಿನಾಂಕ  24-04-2021 ರಂದು 1,09,400/- ನ್ನು ಕೂಡಾ ಕಳುಸಿದರೂ ಕೂಡಾ ಸರ್ಜಿಕಲ್ ಗ್ಲವ್ಸ್ ಬಾರದೇ ಇದ್ದು ಈ ಬಗ್ಗೆ ಪಿರ್ಯಾದಿದಾರರು ವಸ್ತುಗಳನ್ನು ಕಳುಹಿಸಿಕೊಡುವಂತೆ ಕೇಳಿದಾಗ 9582854198 ನಂಬ್ರವನ್ನು ಹೊಂದಿರುವ ವ್ಯಕ್ತಿ ಪೂರ್ತಿ ಹಣವನ್ನು ವರ್ಗಾಯಿಸುವಂತೆ ತಿಳಿಸಿ ಸರ್ಜಿಕಲ್ ವಸ್ತುವಾದ ಗ್ಲವ್ಸ್ ನ್ನು ಕಳುಹಿಸಿಕೊಡದೇ  ಅನಂತರ ದಿನಗಳಲ್ಲಿ ಪಿರ್ಯಾದಿದಾರರು  ಪೋನ್ ಮಾಡಿದಾಗ ಪಿರ್ಯಾದಿದಾರರ ಪೋನ್ ನಂಬ್ರವನ್ನು ಬ್ಲಾಕ್ ಮಾಡಿ ಪಿರ್ಯಾದಿದಾರರಿಗೆ  ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.

Crime Reported in Mangalore East Traffic PS                                                          

ದಿನಾಂಕ: 16-06-2021 ರಂದು ಪಿರ್ಯಾದಿ Maria Dsouza (67)ರವರು ತನ್ನ ಅಣ್ಣ ಅಂಟೋನಿ ಮೆನೆಜಸ್ ಮತ್ತು ಅಣ್ಣನ ಹೆಂಡತಿ ಶ್ರೀಮತಿ ಶಾಲಿನಿಯೊಂದಿಗೆ ಬಲ್ಮಠದ ನಂದಿಕೂರು ಕ್ಲಿನಿಕ್ ಗೆ ರಕ್ತ ಪರೀಕ್ಷೆ ಬಗ್ಗೆ ಬಂದಿದ್ದವರು ಬೆಳಿಗ್ಗೆ ಸುಮಾರು 09-00 ಗಂಟೆಗೆ ಮಂಗಳೂರು ನಗರದ ಬಲ್ಮಠ ನಂದಿಕೂರು ಕ್ಲಿನಿಕ್  ಕಡೆಯಿಂದ ವೈನ್ ಗೇಟ್ ಕಡೆಗೆ ರಸ್ತೆ ದಾಟುತ್ತಿದ್ದ ವೇಳೆ KA-19-AA-1500 ನಂಬ್ರದ ಲಾರಿಯನ್ನು ಅದರ ಚಾಲಕ ಅಬ್ದುಲ್ ಆಸಿಫ್ ಎಂಬಾತನು ಜ್ಯೋತಿ ಕಡೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರೆ`ಶ್ರೀಮತಿ ಮರಿಯ ಡಿಸೋಜ ರವರಿಗೆ ಢಿಕ್ಕಿ ಪಡಿಸಿದ ಪರಿಣಾಮ ಮರಿಯಾ ಡಿಸೋಜರವರು ಕಾಂಕ್ರೀಟ್ ರಸ್ತೆಗೆ  ಬಿದ್ದಿದ್ದು,  ಈ ಅಪಘಾತದಿಂದ ಮರಿಯ ಡಿಸೋಜರವರ ಬಲಕಾಲಿನ ಪಾದಕ್ಕೆ ಎರಡು ಬೆರಳುಗಳಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಅಲ್ಲದೇ ಬಲಕಾಲಿನ ಪಾದಕ್ಕೆ ಚರ್ಮ ಹರಿದ ಆಳ ಗಾಯವಾಗಿದ್ದು, ತುಟಿಯ ಬಲಬದಿಗೆ ಚರ್ಮ ಹರಿದ ಗಾಯವಾಗಿದ್ದು, ಹಾಗೂ ಹಣೆಯ ಎಡಬದಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಒಳರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬಿತ್ಯಾದಿ.

Crime Reported in Surathkal PS     

ದಿನಾಂಕ: 15-06-2021 ರಂದು ಸಮಯ ಸಂಜೆ 05-00 ಗಂಟೆಗೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸುರತ್ಕಲ್ PHC ಬಳಿ ಚೆಕ್ ಪಾಯಿಂಟ್ ನಲ್ಲಿ  ಎಎಸ್ಐ ರಾಜನ್ ರವರು ಕರ್ತವ್ಯದಲ್ಲಿರುವ ಸಮಯ ಸುರತ್ಕಲ್ ಕಡೆಯಿಂದ ಇಬ್ಬರು ಯುವಕರು   ಬರುತ್ತಿದ್ದು ಅಮಲು ಪದಾರ್ಥ ಸೇವಿಸಿದಂತೆ ಅವರ ನಡುವಳಿಕೆಯಿಂದ ಕಂಡು ಬಂದ ಮೇರೆಗೆ ಆವರ ಅವರನ್ನು  ವಿಚಾರಿಸಿಕೊಂಡಾಗ 1) ರಾಕೀಬ್(28) 2) ರಾಯೀದ್(21) ಎಂದು ತಿಳಿಸಿರುತ್ತಾರೆ. ಅಮಲು ಪದಾರ್ಥ ಸೇವಿಸಿದ ಬಗ್ಗೆ ಸದ್ರಿಯವರಲ್ಲಿ  ವಿಚಾರಿಸಲಾಗಿ ಇವರು ನಿನ್ನೆ ದಿನ  ಪರಿಚಯವಾದ ಒಬ್ಬ ವ್ಯಕ್ತಿಯಿಂದ ಸ್ವಲ್ಪ ಗಾಂಜಾವನ್ನು ಖರೀದಿಸಿ ಈ ದಿನ ಸೇವಿಸಿರುವುದಾಗಿ, ಸೇವನೆ ಮಾಡಿದ ಸಿಗರೇಟ್ ತುಂಡನ್ನು ಬಿಸಾಡಿರುವುದಾಗಿ ಒಪ್ಪಿಕೊಂಡ ಮೇರೆಗೆ ಅವರನ್ನು ಅಂಗಶೋಧನೆ ನಡೆಸಿದಲ್ಲಿ ಯಾವುದೇ ಗಾಂಜಾ ಪತ್ತೆಯಾಗಿರುವುದಿಲ್ಲ. ಯುವಕರನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ಎ.ಜೆ ಅಸ್ಪತ್ರೆಯ ವೈದ್ಯಾಧಿಕಾರಿಗಳ ಮುಂದೆ ಹಾಜರು ಪಡಿಸಿದ್ದು ಪರೀಕ್ಷೆ ನಡೆಸಿದ ವೈದ್ಯಾದಿಕಾರಿಯವರು ಗಾಂಜಾ ಸೇವನೆ ಮಾಡಿರುವುದಾಗಿ ವರದಿ ನೀಡಿರುವ ಮೇರೆಗೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Crime Reported in Traffic North PS

ದಿನಾಂಕ:08-06-2021 ರಂದು ಬೆಳಿಗ್ಗೆ 06-45 ಗಂಟೆಗೆ ಪಿರ್ಯಾದಿದಾರರಾದ ಪಿ ಹೆಚ್ ಮೊಹಮ್ಮದ್ ರವರ ಮಗ ಮಿಗ್ದಾದ್  ನಿಜಾಮ್ ಅಪ್ತರ್ ರವರು KA19EY6505 ನೇ ನಂಬ್ರದ ಮೋಟಾರ್ ಸೈಕಲಿನಲ್ಲಿ ರಿಜ್ವಾನ್ ಸವಾರರಾಗಿ ಮಿಗ್ದಾದ್ ನಿಜಾಮ್ ಅಪ್ತರ್ ರವರು ಸಹ ಸವಾರರಾಗಿ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ರಾಹೆ 66 ಹೊಸಬೆಟ್ಟು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಮೋಟಾರ್ ಸೈಕಲ್ ನಂಬ್ರ KA19EJ3991 ನೇಯದ್ದನ್ನು ಅದರ ಸವಾರ ಮಯ್ಯದ್ದಿ ಎಂಬವರು ಹೊಸಬೆಟ್ಟು ಜಂಕ್ಷನ್  ಬಳಿ ಉಡುಪಿ ಮಂಗಳೂರು ರಾಹೆ 66 ರ ಎಕಮುಖ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಅಂದರೆ ದೀಪ ಫಾರ್ಮ್ ಕಡೆಯಿಂದ ಹೊಸಬೆಟ್ಟು ಜಕ್ಷನ್ ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ರಿಜ್ವಾನ್ ಸವಾರರಾಗಿ ಮಿಗ್ದಾದ್ ನಿಜಾಮ್ ಅಪ್ತರ್ ರವರು ಸಹ ಸವಾರರಾಗಿ ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ಸವಾರರಿಬ್ಬರು ರಸ್ತೆಗ ಬಿದ್ದ ಪರಿಣಾಮ ಸವಾರ ರಿಜ್ವಾನ್ ರವರ ಎಡಕೈ ಮತ್ತು ಸೊಂಟಕ್ಕೆ ರಕ್ತಗಾಯ ಹಾಗೂ ಮಿಗ್ದಾದ್ ನಿಜಾಮ್ ಅಪ್ತಾರ್ ರವರ ಎಡಭುಜಕ್ಕೆ ಮೂಳೆ ಮುರಿತ ತೀವ್ರ ಸ್ವರೂಪದ ರಕ್ತಗಾಯ, ತಲೆಗೆ ಕುತ್ತಿಗೆಗೆ ಗುದ್ದಿದ ಗಾಯಗಾಯವಾಗಿ ಚಿಕಿತ್ಸೆಯ ಬಗ್ಗೆ ಮಿಗ್ದಾದ್ ನಿಜಾಮ್ ಅಪ್ತರ್ ರವರು ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೂ ಸಹ ಎಡಕಾಲು ಮತ್ತು ಬಲ ಕೈಗೆ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರ್ಯಾದಿ ಸಾರಾಂಶ.

ಇತ್ತೀಚಿನ ನವೀಕರಣ​ : 16-06-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080