Crime Reported in Mangalore East PS
ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ರಾಘವ ರವರು ದಿನಾಂಕ: 15-7-2021 ರಂದು ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ದೊಡ್ಡಬಸಪ್ಪ ರವರ ಜೊತೆ ರಾತ್ರಿ ವೇಳೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ದಿನಾಂಕ: 16-07-2021 ರಂದು ಬೆಳಗ್ಗಿನ ಜಾವ ಸುಮಾರು 02-30 ಗಂಟೆ ವೇಳೆಗೆ ಮಂಗಳೂರು ನಗರದ ಬೆಂದೂರುವೆಲ್ ಜಂಕ್ಷನ್ ನಲ್ಲಿ ಬಸ್ ಸ್ಟಾಂಡ್ ಹತ್ತಿರ ಒಬ್ಬನು ತನ್ನ ಇರುವಿಕೆಯನ್ನು ಮರೆಮಾಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಕಂಡು ಸಂಶಯಗೊಂಡು ಟಾರ್ಚ್ ಬೆಳಕಿನ ಸಹಾಯದಿಂದ ಅವರ ಹತ್ತಿರ ಹೋಗುವಷ್ಟ ರಲ್ಲಿ ಓಡಿ ಹೋಗಲು ಪ್ರಯತ್ನಿಸಿದವರನ್ನು ಹಿಡಿದು ವಿಚಾರಿಸಿದಾಗ ಅವರ ಹೆಸರು ಮಹಮ್ಮದ್ ರಹೀಂ, ಪ್ರಾಯ: 32 ವರ್ಷ, ತಂದೆ: ಬಾಬು, ವಾಸ: ಮುನೀಶ್ವರ ನಗರ, ಡೋರ್.ನಂಬ್ರ-440, 8ನೇ ಕ್ರಾಸ್, ಉದಯಗಿರಿ, ಮೈಸೂರು ಎಂದು ತಿಳಿಸಿದ್ದು, ಇವರು ಅಪರ ವೇಳೆಯಲ್ಲಿ ಮೇಲಿನ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದುದ್ದರಿಂದ ಇವನು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ರಾತ್ರಿ ವೇಳೆ ಹೊಂಚು ಹಾಕುತ್ತಿರುವುದಾಗಿ ಇವನ ವರ್ತನೆಯಿಂದ ಬಲವಾದ ಸಂಶಯ ಬಂದಿದ್ದು, ಇವನನ್ನು ವಶಕ್ಕೆ ಪಡೆದು ಇವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
2) ದಿನಾಂಕ:15-07-2021 ರಂದು ಪ್ರಕರಣದ ಪಿರ್ಯಾದಿ Jnanashekar PSIರವರು ಸಿಬ್ಬಂದಿಗಳ ಜೊತೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 12-30 ರ ವೇಳೆಗೆ ಪ್ರಶಾಂತ್ ಕುಮಾರ್ ಎಂಬಾತನು ಕುದ್ರೋಳಿ ಅಳಕೆ ಬ್ರಿಡ್ಜ್ ನ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಿದ್ದುದನ್ನು ಕಂಡು ಆತನ ಬಳಿ ಹೋಗಿ ಆತನನ್ನು ವಿಚಾರಿಸಲಾಗಿ ಆತನ ಮಾತು ತೊದಲುತ್ತಿದ್ದು, ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಆತನನ್ನು ಕೂಲಂಕುಷವಾಗಿ ವಿಚಾರಸಿದ್ದಲ್ಲಿ ಆತನು ಸಿಗರೇಟಿನ ಜೊತೆ ಗಾಂಜಾ ಸೇರಿಸಿ ಸೇದಿದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಆತನನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಲ್ಲಿ ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ ದ್ರಡಪಟ್ಟಿರುವುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.
Crime Reported in Kankanady Town PS
ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಸುಂದರ್ ರಾಜ್ ರವರು ದಿನಾಂಕ 15-07-2021 ರಂದು ಠಾಣೆಯಲ್ಲಿ ನಡೆದ ಎಂ ಓ ಬಿ ಪರೇಡ್ ನಲ್ಲಿ ಹಾಜರಾದ ಎಂ ಓ ಬಿ ದಾರರುಗಳನ್ನು ವಿಚಾರಿಸುತ್ತಿದ್ದು, ಆ ಸಮಯ ಅಜ್ಮಲ್ ಪ್ರಾಯ:29 ವರ್ಷ ತಂದೆ:ಅಬ್ದುಲ್ ಹಮೀದ್ ವಾಸ :ಕುಂಡಲ ಹೌಸ್ ಬಳ್ಳೂರು ಗುಡ್ಡೆ ರೋಡ್ ಕಣ್ಣೂರು ಪೋಸ್ಟ್ ಮಂಗಳೂರು ನಗರ ಎಂಬಾತನನ್ನು ವಿಚಾರಿಸುತ್ತಿರುವಾಗ ಆತನು ಮಾತನಾಡುವಾಗ ಮಾತು ತೊದಲುತ್ತಿದ್ದು, ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿದ್ದುದರಿಂದ ಆತನನ್ನು ಕೂಲಂಕುಷವಾಗಿ ವಿಚಾರಣೆಗೆ ನಡೆಸಿದಾಗ ಆತನು ತಾನು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿರುವ ಮೇರೆಗೆ, ಗಾಂಜಾ ಸೇವಿಸಿದ್ದು ದೃಡೀಕರಿಸುವರೇ ವೈದ್ಯಾಧಿಕಾರಿಯವರು ಎ.ಜೆ ಆಸ್ಪತ್ರೆ ಮಂಗಳೂರು ಇವರ ಮುಂದೆ ಹಾಜರು ಪಡಿಸಿದಲ್ಲಿ ಗಾಂಜಾ ಸೇವನೆ ಮಾಡಿರುವುದಾಗಿ ಧೃಢಿಕರಣ ಪತ್ರವನ್ನು ನೀಡಿರುವುದರಿಂದ ಆತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.
Crime Reported in Panambur PS
ದಿನಾಂಕ 15-07-2021 ರಂದು ಪಿರ್ಯಾದಿ KUMARESHAN-PSI ರವರು ಸಿಬ್ಬಂದಿಗಳಾದ ಡೇವಿಡ್ ಡಿಸೋಜಾ , ಕಮಲಾಕ್ಷ ಮತ್ತು ದಾದಾಸಾಬ್ ರವರ ಜೊತೆಯಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ದಿನಾಂಕ 15-07-2021ರ ಸಮಯ `ಸುಮಾರು ಬೆಳಗ್ಗೆ ಜಾವ 9-00 ಗಂಟೆಗೆ ಕಸಬಾ ಬೇಂಗ್ರೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬ ಗಾಂಜ ವಸ್ತುವನ್ನು ಸೇವನೆ ಮಾಡಿದಂತೆ ಕಂಡುಬಂದಿದ್ದು, ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ತೆಗೆದು ಕೊಂಡು ಸಿಬ್ಬಂಧಿಗಳ ಮೂಲಕ ವೈದ್ಯಕೀಯ ತಪಾಸಣೆ ಬಗ್ಗೆ ವೈದ್ಯರ ಬಳಿ ಕಳುಹಿಸಿಕೊಟ್ಟಿದ್ದು. ವೈದ್ಯಾಧಿಕಾರಿಗಳು ಪರೀಕ್ಷಿಸಿದಲ್ಲಿ ಅಬ್ದುಲ್ ಸಮದ್ ಎಂಬಾತನು ಗಾಂಜ ಸೇವನೆ ಮಾಡಿರುವುದು ದೃಡ ಪಟ್ಟಿರುವುದರಿಂದ ಆತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ
Crime Reported in Kavoor PS
ಮಂಗಳೂರು ನಗರದಲ್ಲಿ ಕನ್ನ ಕಳವು ಹಾಗೂ ಮಾದಕ ದ್ರವ್ಯ ಸಾಗಾಟವನ್ನು ತಡೆಗಟ್ಟುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಒಳಗೋಂಡರವರನ್ನು ವಿಚಾರಿಸಿ ಮಾಹಿತಿ ಸಂಗ್ರಹಿಸಿ, ಇಂತಹ ಪ್ರಕರಣಗಳು ತಡೆಗಟ್ಟುವ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಲು ಇಲಾಖಾ ಮೇಲಾಧಿಕಾರಿಗಳ ಆದೇಶದಂತೆ ಪಿರ್ಯಾದಿದಾರರು ದಿನಾಂಕ: 15/07/2021 ರಂದು ಬೆಳಿಗ್ಗೆ 4.00 ಗಂಟೆಗೆ ಠಾಣೆಯಿಂದ ಹೊರಟು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸಿ ಆಪಾದಿತ LIKHITH(A1) SURESH(A2) NAGARAJ(A3) DEVIPRASAD(A4) ರವರುಗಳನ್ನುವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಲ್ಲಿ ಗಾಂಜಾ ಸೇವನೆ ಮಾಡಿದ ನಶೆಯಲ್ಲಿ ಕಂಡುಬಂದಿದ್ದರಿಂದ ಇವರುಗಳನ್ನು ವೈದ್ಯಕೀಯ ತಪಾಸಣೆ ಬಗ್ಗೆ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಇವರನ್ನು ಪರೀಕ್ಷಿಸಿ ಆರೋಪಿತರು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ ಇವರುಗಳ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ
Crime Reported in Mangalore South PS
ಪಿರ್ಯಾದಿದಾರರಾದ ನಿರ್ಮಲಾ.ಎ ಪ್ರಾಯ:48 ವರ್ಷ,ಎಂಬವರಿಗೆ ಸುಮಾರು 28 ವರ್ಷಗಳ ಹಿಂದೆ ಆರೋಪಿ ಸೂರಜ್ ಎಂಬವರೊಂದಿಗೆ ವಿವಾಹವಾಗಿರುತ್ತದೆ. ಸುಮಾರು 4 ವರ್ಷಗಳ ಹಿಂದೆ ಆರೋಪಿ ಸೂರಜ್ ಹಾಗೂ ಪಿರ್ಯಾದಿದಾರರ ವೈವಾಹಿಕ ಜೀವನದಲ್ಲಿ ಮನಸ್ತಾಪ ಉಂಟಾಗಿ ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಬಗ್ಗೆ ಪಿರ್ಯಾದಿದಾರರು ಈಗಾಗಲೇ ಬರ್ಕೆ ಪೊಲೀಸ್ ಠಾಣೆಯಲ್ಲಿ ಹಾಗೂ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದಾಗಿದೆ. ಹೀಗಿರುವಲ್ಲಿ ದಿನಾಂಕ 21-06-2021 ರಂದು ಆರೋಪಿ ಸೂರಜ್ ನು ಪಿರ್ಯಾದಿದಾರರಿಗೆ ಸಂಬಂಧಿಸಿದ ಬೆನ್ ಅಪಾರ್ಟಮೆಂಟ್ ಡೋರ್ ನಂಬ್ರ 17-15-1204/10 ನೇ ಮನೆಗೆ ಸಂಬಂಧಿಸಿದ ಪಾರ್ಕಿಂಗ್ ಜಾಗಕ್ಕೆ ಉದ್ದೇಶ ಪೂರ್ವಕವಾಗಿ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರಿಗೆ ಬೇವರ್ಷಿ ನಿನಗೆ ಇಲ್ಲಿ ಜಾಗವಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆಹಾಕಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ
2) ಪಿರ್ಯಾದಿ Manual Babu ರವರು ದಿನಾಂಕ:14-07-2021 ರಂದು ರಾತ್ರಿ 8.00 ಗಂಟೆಗೆ ಮಂಗಳೂರು ನಗರದ ಫಳ್ನೀರ್ ರಸ್ತೆಯಲ್ಲಿರುವ ಫಿಲ್ ಪಿಲ್ ಹೋಟೆಲ್ ಗೆ ಊಟ ಮಾಡುವ ಸಲುವಾಗಿ ತನ್ನ ಸ್ನೇಹಿತ ಜೋಬಿನ್ ಹಾಗೂ ಶಾಕೀರ ರವರ ಜೊತೆ ಹೋಗಿದ್ದು, ಈ ಸಮಯ ಹೋಟೆಲ್ ನಲ್ಲಿದ್ದ ಪಿರ್ಯಾದಿದಾರರಿಗೆ ಪರಿಚಯವಿರುವ ಇಂದಿರಾ ಕಾಲೇಜಿನ ವಿಧ್ಯಾರ್ಥಿಗಳಾದ ಶ್ರೀಲಾಲ್, ಜುರೈಜ್ ಹಾಗೂ ರಸೆಲ್ ರವರ ಪೈಕಿ ಶ್ರೀಲಾಲ್ ರವರು ಪಿರ್ಯಾದಿದಾರರನ್ನು ನೋಡಿ, “ಏನು ಮೈರೆ, ಮುಖ ಮುಖ ನೋಡುತ್ತೀಯಾ, ನೀವು ನನ್ನ ಜೂನಿಯರ್ ಗಳು ನಾನು ಸೀನಿಯರ್, ನಾನು ಬರುವಾಗ ನೀನು ಎದ್ದು ನಿಂತು ರೆಸೆಪೆಕ್ಟ್ ಕೊಡಬೇಕು” ಎಂದು RAGING ಮಾಡಿರುತ್ತಾರೆ. ಬಳಿಕ ರಾತ್ರಿ 10-30 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಅತ್ತಾವರ ಕಿಂಗ್ಸ್ ಕೊರ್ಟ್ ಅಪಾರ್ಟಮೆಂಟ್ ನ ರೂಮಿನಲ್ಲಿ ಇರುವ ಸಮಯ ಆರೋಪಿಗಳಾದ ಶ್ರೀಲಾಲ್, ಶಾಹಿದ್, ಅಮ್ಜದ್, ಜುರೈಜ್, ಹುಸೈನ್ ಹಾಗೂ ಲಿಮ್ಸ್ ರವರು ಅಕ್ರಮ ಕೂಟ ಸೇರಿಕೊಂಡು ಮಾರಕಾಯುಧದೊಂದಿಗೆ ಸಜ್ಜಾಗಿ, ಪಿರ್ಯಾದಿದಾರರ ರೂಮಿಗೆ ಏಕಾಏಕಿಯಾಗಿ ಅಕ್ರಮಪ್ರವೇಶ ಮಾಡಿ, ಪಿರ್ಯಾದಿದಾರರನ್ನು ಉದ್ದೇಶಿಸಿ “ನೀನು ಜೂನಿಯರ್, ನಾವು ಸೀನಿಯರ್, ನಾವು ಬರುವಾಗ ನೀನು ತಲೆ ತಗ್ಗಿಸಿ ಕುಳಿತುಕೊಳ್ಳಬೇಕು, ನಾವು ಹೇಳಿದಂತೆ ನೀವು ಕೇಳಬೇಕು” ಎಂದು ಹೇಳಿ, ಪಿರ್ಯಾದಿದಾರರಲ್ಲಿ ಬಟ್ಟೆಗಳನ್ನು ತೆಗೆದು ಒಳ ಚಡ್ಡಿಯಲ್ಲಿ ನಿಲ್ಲಲು ಹಾಗೂ ಪದೇ ಪದೇ ಕುಳಿತುಕೊಳ್ಳಲು ಹಾಗೂ ಎದ್ದು ನಿಲ್ಲಲು ಹೇಳಿ RAGING ಮಾಡಿದಾಗ, ಪಿರ್ಯಾದಿದಾರರು ಒಪ್ಪದೇ ಇದ್ದುದ್ದರಿಂದ ಶ್ರೀಲಾಲ್, ಪಿರ್ಯಾದಿದಾರರನ್ನು ಉದ್ದೇಶಿಸಿ “ಮೈರೆ ಸೀನಿಯರ್ಸ್ ಗೆ ರೆಸ್ಪೆಕ್ಟ್ ಕೊಡಲು ಆಗುವುದಿಲ್ವಾ” ಎಂಬುದಾಗಿ ಕೆಟ್ಟ ಶಬ್ದಗಳಿಂದ ಬೈದು, ಕೈಯಿಂದ ಮುಖಕ್ಕೆ ಹಾಗೂ ಲಿಮ್ಸ್ ಎಂಬಾತನು ಪಂಚ್ ನಿಂದ ಪಿರ್ಯಾದಿದಾರರ ಬಲ ಕಣ್ಣಿನ ಹುಬ್ಬಿನ ಬಳಿ ಹಾಗೂ ಬಲ ಕಿವಿಯ ಬಳಿ, ಇತರರು ಕೈಯಿಂದ ಹೊಡೆದಿರುತ್ತಾರೆ. ಅಲ್ಲದೆ ಆರೋಪಿ ಲಿಮ್ಸ್ ಪಿರ್ಯಾದಿದಾರರನ್ನು ಉದ್ದೇಶಿಸಿ ನಾಳೆಯಿಂದ ನೀನು ಕಾಲೇಜಿಗೆ ಬರುವಾಗ ನಮ್ಮನ್ನು ನೋಡಿದ ಕೂಡಲೇ ತಲೆ ಅಡಿಗೆ ಹಾಕಿಕೊಂಡು ಹೋಗಬೇಕು, ಇಲ್ಲದೇ ಇದ್ದಲ್ಲಿ ನಿನ್ನನ್ನು ಕೊಲೆ ಮಾಡುತ್ತೇನೆ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ, ಎಂಬಿತ್ಯಾದಿಯಾಗಿರುತ್ತದೆ.
Crime Reported in Mulki PS
ದಿನಾಂಕ:12-12-2020 ರಂದು ಆರೋಪಿ ಶ್ರೀಮತಿ ಫಾತಿಮಾ ಶರೀಫ್ ಯಾನೆ ಫರೀದ ಬೇಗಂ ಎಂಬಾಕೆಯು ಆಕೆಯ ಮೊಬೈಲ್ ನಂಬ್ರದಿಂದ ಫಿರ್ಯಾದಿ Harish J Acharya ದಾರರ ಮೊಬೈಲ್ ನಂಬ್ರಕ್ಕೆ ಕರೆ ಮಾಡಿ ತನಗೆ ಚಿನ್ನದ ಆಭರಣಗಳು ಸಾಲದ ರೂಪದಲ್ಲಿ ಬೇಕು ಎಂಬುದಾಗಿ ಹೇಳಿ ಫಿರ್ಯಾದಿದಾರರ ಮುಲ್ಕಿ ಪಂಚಮಹಲ್ ರಸ್ತೆಯ ಅರುಣಾ ಜುವೆಲ್ಲರಿ ಅಂಗಡಿಗೆ ಬಂದು ಎರಡು ಜೊತೆ ಚಿನ್ನದ ಬೆಂಡೋಲೆಗಳನ್ನು ಪಡೆದುಕೊಂಡು ಬಜಪೆ ವಿಜಯ ಬ್ಯಾಂಕ್ ಶಾಖೆಯ ಚೆಕ್ ನಲ್ಲಿ ರೂ: 23,189/- ಎಂದು ನಮೂದಿಸಿ ನೀಡಿ ಕೊಟ್ಟಿದ್ದು, ತದನಂತರ ದಿನಾಂಕ: 14-12-2020 ರಂದು ಆರೋಪಿತೆ ಶ್ರೀಮತಿ ಫಾತಿಮಾ ಶರೀಫ್ ಯಾನೆ ಫರೀದ ಬೇಗಂ ಳು ತನಗೆ ಕರೆ ಮಾಡಿ ಇನ್ನೂ ನಾಲ್ಕು ಚಿನ್ನದ ಉಂಗುರ, ಒಂದು ಜೊತೆ ಕೊಪ್ಪು, ಒಂದು ಜೊತೆ ಜಿಪ್ಸ್ ರಿಂಗ್, ಎರಡು ಜೊತೆ ಚಿನ್ನದ ಬೆಂಡೋಲೆ ಕೇಳಿ ಪಡೆದುಕೊಂಡು ಮೊದಲು ನೀಡಿದ ರೂ: 23,189/-ರ ಚೆಕ್ ನ್ನು ವಾಪಾಸ್ಸು ಪಡೆದುಕೊಂಡು ಒಟ್ಟು ಮೌಲ್ಯ ರೂ: 1,55,100/-ಕ್ಕೆ ಸಂಬಂಧಪಟ್ಟಂತೆ ಫೆಡರಲ್ ಬ್ಯಾಂಕ್ ಕಿನ್ನಿಗೋಳಿ ಶಾಖೆಯ ಖಾತೆ ಗೆ ಸಂಬಂಧಪಟ್ಟಂತೆ ಚೆಕ್ ನ್ನು ನೀಡಿ, ದಿನಾಂಕ: 15-12-2020 ರಂದು ಆರೋಪಿತೆ ಶ್ರೀಮತಿ ಫಾತಿಮಾ ಶರೀಫ್ ಯಾನೆ ಫರೀದ ಬೇಗಂ ಳು ಕರೆ ಮಾಡಿ ತನಗೆ ಇನ್ನೂ ಮೂರು ಜೊತೆ ಚಿನ್ನದ ಬೆಂಡೋಲೆ, ಮೂರು ಜೊತೆ ಚಿನ್ನದ ಸ್ಟಾರ್ ಜಾಲರಿ, ಎರಡು ಚಿನ್ನದ ಚೈನ್, ಎಂಟು ಚಿನ್ನದ ಉಂಗುರ ಮತ್ತು ಒಂದು ಚಿನ್ನದ ಬ್ರಾಸ್ ಲೈಟ್ ಬೇಕೆಂದು ತಿಳಿಸಿದ ಮೇರೆಗೆ ಚಿನ್ನಾಭರಣಗಳನ್ನು ಪಡೆದುಕೊಂಡು ಅದರ ಬಾಬ್ತು 2,56,320/-ಕ್ಕೆ ಸಂಬಂಧಪಟ್ಟಂತೆ ಕಿನ್ನಿಗೋಳಿ ಫೆಡರಲ್ ಬ್ಯಾಂಕ್ ನ ಖಾತೆ ಸಂಬಂಧಪಟ್ಟಂತೆ ಚೆಕ್ ನ್ನು ಸಹಿ ಮಾಡಿ ನೀಡಿರುವುದಲ್ಲದೇ, ಅದೇ ದಿನ ಸಂಜೆ ಆರೋಪಿತಳು ತನ್ನ ಅತ್ತೆಗೆ ಚಿನ್ನದ ಚೈನ್ ಮತ್ತು ಉಂಗುರಗಳು ಬೇಕಾಗಿರುತ್ತದೆ ಎಂಬುದಾಗಿ ಹೇಳಿದ್ದು, ಫಿರ್ಯಾದಿದಾರರು ಈ ಮೊದಲು ಚೆಕ್ ಗಳನ್ನು ಕಲೆಕ್ಷನ್ ಗಾಗಿ ದಿನಾಂಕ: 14-12-2020 ರಂದು ದಿನಾಂಕ: 15-12-2020 ರಂದು ಮುಲ್ಕಿ ಕಾರ್ಪೋರೇಷನ್ ಬ್ಯಾಂಕ್ (ಪ್ರಸ್ತುತ ಯೂನಿಯನ್ ಬ್ಯಾಂಕ್ ) ಹಾಕಿದಾಗ ದಿನಾಂಕ: 19-12-2020 ರಂದು Drawers Signature Differs ಎಂಬುದಾಗಿ ಹಿಂಬರಹ ನೀಡಿದ್ದು , ಈ ಮಾಹಿತಿಯನ್ನು ಆರೋಪಿ ಶ್ರೀಮತಿ ಫಾತಿಮಾ ಶರೀಫ್ ಯಾನೆ ಫರೀದ ಬೇಗಂ ಳಿಗೆ ತಿಳಿಸಿದಾಗ ಆಕೆಯು ಈ ಮೊದಲು ಚೆಕ್ ಬೌನ್ಸ್ ಆದ ಬಗ್ಗೆ ಖರ್ಚಿನ ಬಾಬ್ತು ಒಟ್ಟು ರೂ:4,12,010/- ವನ್ನು ವಾಮಂಜೂರು ಕಾರ್ಪೋರೇಷನ್ ಬ್ಯಾಂಕ್ ಗೆ ಕೆನರಾ ಬ್ಯಾಂಕ್ ನ ಚೆಕ್ ನಂಬ್ರ: 009459 ನ್ನು ಹಾಕಿರುವುದಾಗಿ ತಿಳಿಸಿ ಹಾಕಿ ಕೌಂಟರ ಫೈಲ್ ಕಳುಹಿಸಿದ್ದು, ಈ ಚೆಕ್ ದಿನಾಂಕ 29-12-2020 ರಂದು Drawers Signature Differs ಎಂಬುದಾಗಿ ನಮೂದಿಸಿ ಚೆಕ್ ಅಮಾನ್ಯ ಗೊಂಡಿದ್ದು, ಇದನ್ನು ಆರೋಪಿಗೆ ತಿಳಿಸಿದಾಗ ಆಕೆ ಹಾಗೂ ಅಕೆಯ ಗಂಡ ರಮೀಝ್ ರಾಝ್ ರವರು ಹಣವನ್ನು ಒಂದು ವಾರದೊಳಗೆ ನೀಡುತ್ತೇವೆ ಎಂದು ಭರವಸೆ ನೀಡಿ ದಿನಾಂಕ: 08-01-2021 ರಂದು ಬಂಗಾರದ ಬಾಬ್ತು 3,00,000/- ಹಣದ ಚೆಕ್ ಕಾರ್ಫೋರೇಷನ್ ಬ್ಯಾಂಕ್ ವಾಮಂಜೂರು ಶಾಖೆಯಲ್ಲಿ ಮುಲ್ಕಿಯಲ್ಲಿರುವ ಫಿರ್ಯಾದಿದಾರರ ಖಾತೆಗೆ ಜಮಾ ಮಾಡಿ ಪ್ರತಿಯನ್ನು ವಾಟ್ಸಾಫ್ ಮೂಲಕ ತಿಳಿಸಿದ್ದು ಈ ಚೆಕ್ ಕೂಡಾ ದಿನಾಂಕ 16-01-2021 ರಂದು Insufficient Funds ಎಂದು ಅಮಾನ್ಯ ಗೊಂಡಿರುವುದಲ್ಲದೇ, ಈ ಬಗ್ಗೆ ಆರೋಪಿಗಳಲ್ಲಿ ವಿಚಾರಿಸಿದಾಗ ದಿನಾಂಕ: 01-02-2021 ರಂದು ರೂ: 4,25,000/- ರ ಬ್ಯಾಂಕ್ ಆಫ್ ಬರೋಡಾದ ಚೆಕ್ ನ್ನು ಪಾಂಡೇಶ್ವರದ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಹಾಕಿದ್ದಾಗಿ ತಿಳಿಸಿದ್ದು ಈ ಚೆಕ್ ಕೂಡಾ ದಿನಾಂಕ: 05-02-2021 ರಂದು Account Blocked ಎಂದು ಅಮಾನ್ಯ ಗೊಂಡಿದ್ದು, ಬಳಿಕ ಪುನ: ಅದೇ ದಿನ 4,12,010 ರ ಬಾಬ್ತು ಕಿನ್ನಿಗೋಳಿ ಫೆಡರಲ್ ಬ್ಯಾಂಕ್ ನ ಚೆಕ್ ನ್ನು 2ನೇ ಆರೋಫಿ ರಮೀಝ್ ರಾಝ್ ಹಾಕಿದ್ದು ಇದೂ ಕೂಡಾ ದಿನಾಂಕ: 10-02-2021 ರಂದು Drawers Signature Differs ಎಂದು ಅಮಾನ್ಯ ಗೊಂಡಿದ್ದು, ದಿನಾಂಕ: 01-02-2021 ರಂದು ಆರೋಪಿಗಳು ಹಾಕಿದ ಚೆಕ್ ನ್ನು ಪಾಂಡೇಶ್ವರ ಕಾರ್ಫೋರೇಷನ್ ಬ್ಯಾಂಕ್ ನಿಂದ ಪಡೆದು ತನ್ನ ಖಾತೆಗೆ ದಿನಾಂಕ: 06-4-2021 ರಂದು ಹಾಕಿದಾಗ Account Blocked ಎಂದು ಅಮಾನ್ಯ ಗೊಂಡಿರುತ್ತದೆ. ಈ ಬಗ್ಗೆ ಆರೋಪಿಗಳಿಗೆ ತಿಳಿಸಿದಾಗ ಮುಂದಕ್ಕೆ ಕೊಡುತ್ತೇನೆ ಎಂದು ಕೊಡದೇ ಮೋಸ ಮಾಡಿದ್ದಲ್ಲದೇ ಚೆಕ್ ನ ಬಗ್ಗೆ ಫೆಡರಲ್ ಬ್ಯಾಂಕ್ ಕಿನ್ನಿಗೋಳಿ ಶಾಖೆಯಲ್ಲಿ ವಿಚಾರಿಸಿದಾಗ ಚೆಕ್ ನ ಖಾತೆದಾರರು ಆರೋಪಿಗಳಾದ ಅಕ್ಬರ್ ಮತ್ತು ಝೀನತ್ ಎಂಬುದಾಗಿ ತಿಳಿದು ಬಂದಿದ್ದು, ಆರೋಪಿಗಳಾದ 1ಫಾತಿಮಾ ಶರೀಫ್ ಯಾನೆ ಫರೀದ ಬೇಗಂ ಮತ್ತು2 ರಮೀಝ್ ರಾಝ್ ನೇರವರು ಆರೋಪಿ ಅಕ್ಬರ್ ಮತ್ತು ಝೀನತ್ ಖಾತೆಯ ಚೆಕ್ ಗಳನ್ನು ತನ್ನದೆಂದು ಬಿಂಬಿಸಿ ನೀಡಿ ನಂಬಿಸಿ ಮೋಸ ಗೊಳಿಸಿದ್ದಲ್ಲದೇ, ಆರೋಪಿ ಅಕ್ಬರ್ ಮತ್ತು ಝೀನತ್ರವರು ತಮ್ಮ ಖಾತೆಯ ಚೆಕ್ ಗಳನ್ನು 1ನೇ ಆರೋಪಿಗೆ ನೀಡಿ ಕೃತ್ಯ ಎಸಗಲು ಸಹಕರಿಸಿ ಫಿರ್ಯಾದಿದಾರರಿಗೆ ಒಟ್ಟು ಸೇರಿಕೊಂಡು ಮೋಸ ಮತ್ತು ವಂಚನೆ ಮಾಡುವ ಉದ್ದೇಶದಿಂದ ರೂ 4,13,780/- ಗಳಷ್ಟು ಆರ್ಥಿಕ ನಷ್ಟವುಂಟು ಮಾಡಿರುವುದಾಗಿದೆ ಎಂಬಿತ್ಯಾದಿ.
Crime Reported in Moodabidre PS
ದಿನಾಂಕ: 15-07-2021 ರಂದು ಬೆಳಿಗ್ಗೆ 11-00 ಗಂಟೆಗೆ ಮೂಡುಬಿದಿರೆ ತಾಲೂಕು ಪ್ರಾಂತ್ಯ ಗ್ರಾಮದ ಪ್ರಾಂತ್ಯ ಶಾಲಾ ಮೈದಾನದಲ್ಲಿ ಮೂವರು ಯುವಕರು ಯಾವುದೋ ಮಾದಕ ವಸ್ತು ಸೇವನೆ ಮಾಡಿರುವಂತೆ ಇರುತ್ತಾರೆ ಎಂಬುದಾಗಿ ಬಾತ್ಮಿದಾರರಿಂದ ದೊರೆತ ಖಚಿತ ಮಾಹಿತಿಯಂತೆ ಪಂಚಾಯತುದಾರರ ಸಮಕ್ಷಮದಲ್ಲಿ ಪಿರ್ಯಾದಿದಾರರು ಠಾಣಾ ಸಿಬ್ಬಂದಿಗಳೊಂದಿಗೆ ಸಮವಸ್ತ್ರದಲ್ಲಿ ಬೆಳಿಗ್ಗೆ 11-45 ಗಂಟೆಗೆ ದಾಳಿ ನಡೆಸಿ ಮಾದಕ ವಸ್ತುವಾದ ಗಾಂಜಾವನ್ನು ಸೇವನೆ ಮಾಡಿದ್ದಾರೆ ಎನ್ನಲಾದ 1) ಫಹೀಮ್ ಖಾನ್, 2) ಪಹಾದ್ ನಝೀರ್, 3) ಮಹಮ್ಮದ್ ರಾಶೀದ್ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ಎ.ಜೆ ಆಸ್ಪತ್ರೆ ಮಂಗಳೂರಿನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯಾಧಿಕಾರಿಯವರು ದೃಢ ಪತ್ರವನು ನೀಡಿರುವುದರಿಂದ ಆರೋಪಿಗಳ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಜರುಗಿಸಿರುವುದು ಎಂಬಿತ್ಯಾದಿ