ಅಭಿಪ್ರಾಯ / ಸಲಹೆಗಳು

Crime Reported in  Traffic North PS

ದಿನಾಂಕ:15-05-2021 ರಂದು ಪಿರ್ಯಾದಿದಾರರಾದ ನಾಗೇಶ್ ರವರ ಅಣ್ಣನಾದ ಜಲಂಧರ್ ಮೂಲ್ಯರವರು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ KA19EH5260 ನೇಯದನ್ನು KIOCL ಕಡೆಯಿಂದ Total Gas  ಮಾರ್ಗವಾಗಿ  ಮುಂಗಾರು ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಬೆಳಿಗ್ಗೆ 10-15 ಗಂಟೆಗೆ RMC ಹೋಗುವ ರಸ್ತೆಯಲ್ಲಿ RMCಗಿಂತ ಸ್ವಲ್ಪ ಮುಂದೆ NMPT ಕಾಲೋನಿಗೆ ಹೋಗುವ ರಸ್ತೆ ಕೂಡುವಲ್ಲಿಗೆ ತಲುಪಿದಾಗ  ಮುಂಗಾರು ಜಂಕ್ಷನ್ ಕಡೆಯಿಂದ NMPT ಕಾಲೋನಿ ಕಡೆಗೆ ಕಾರು ನಂಬ್ರ KA19MG5620 ನೇಯದನ್ನು ಅದರ ಚಾಲಕ ನಾಗೇಶ್ ನಟರಾಜ್ ಶೆಟ್ಟಿ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮಲೇ ಬಲಬದಿಗೆ ತಿರುಗಿಸಿ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಜಲಂಧರ್ ಮೂಲ್ಯರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಸ್ವರೂಪದ ಗಾಯ, ಕೈ ಕಾಲಿಗೆ ತರಚಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರ್ಯಾದಿ ಸಾರಾಂಶ

Crime Reported in  Moodabidre PS

ಪಿರ್ಯಾದಿ Bhagyalata (49) ರವರ  ತಾಯಿ ಮತ್ತು ತಮ್ಮ ಅಸೌಖ್ಯದಿಂದ ಇದ್ದು ದಿನಾಂಕ: 11-05-2021 ರಂದು ಪಿರ್ಯಾದಿದಾರರ ತಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಮನೆಯಲ್ಲಿರುವ ವೃದ್ಧ ತಾಯಿಯನ್ನು ನೋಡಿಕೊಳ್ಳುವರೇ ಹೋಂ ನರ್ಸ ಒಬ್ಬರನ್ನು ಮನೆಗೆ ಬರಮಾಡಿಕೊಂಡಿದ್ದು ಆಕೆಯ ಹೆಸರು ಮಂಜುಳಾ ಎಂಬುದಾಗಿದ್ದು ಆಕೆಯು ದಿನಾಂಕ: 11-05-2021 ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಪಿರ್ಯಾದಿದಾರರ ಮನೆಯಲ್ಲಿದ್ದು ಸಂಜೆ ಹೊತ್ತು ವಾಪಾಸು ಆಕೆಯು ಹೋಗಿದ್ದು ದಿನಾಂಕ: 16-05-2021 ರಂದು ಪಿರ್ಯಾದಿದಾರರು ಕಪಾಟಿನಲ್ಲಿ ಇಟ್ಟಿದ್ದ ಹಣ ಲೆಕ್ಕ ಮಾಡಿದಾಗ 4500/- ರೂ ಕಡಿಮೆ ಬಂದಿದ್ದು ಸಂಶಯಗೊಂಡು ಕಪಾಟಿನಲ್ಲಿಟ್ಟಿದ್ದ ಚಿನ್ನದ ಕರಡಿಗೆ ನೋಡಿದಾಗ ಒಂದು ಜೊತೆ ವಜ್ರದ ಬೆಂಡೋಲೆ ಕಳುವಾಗಿದ್ದು ಅಂದಾಜು ಮೌಲ್ಯ2 ಲಕ್ಷ ರೂಪಾಯಿ ಆಗಿರುತ್ತದೆ. ಒಟ್ಟು ಮೌಲ್ಯ 2,04,500/- ರೂಪಾಯಿ ಆಗಿರುತ್ತದೆ.  ಎಂಬಿತ್ಯಾದಿ.

Crime Reported in  Traffic South PS

ದಿನಾಂಕ  16-05-2021 ರಂದು   ಪಿರ್ಯಾದಿ RAVISHANKAR A ರವರು ಅವರ ಸ್ಕೂಟರ್ ನಂಬ್ರ KA-19-HD-5174 ನೇದನ್ನು ಸವಾರಿ ಮಾಡಿಕೊಂಡು ಹೋಗಿ ಅವರ ಮನೆಗೆ ಹಾಗೂ ಅವರ ಚಿಕ್ಕಮ್ಮ ನ ಮನೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿ ಮಾಡಿಕೊಂಡು ಸಾಮಾನುಗಳನ್ನು ಅವರ ಚಿಕ್ಕಮ್ಮ ನ ಮನೆಗೆ ಕೊಟ್ಟು ಬರಲು ಪಡೀಲ್ ಕಡೆಯಿಂದ ಬಿ.ಸಿ ರೊಡ್ ಕಡೆಗೆ ರಾ.ಹೆ 73 ರಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 9-30 ಗಂಟೆಗೆ  ಅವರ ಚಿಕ್ಕಮ್ಮ ನ ಮನೆಯ ಹತ್ತಿರದ ಅಶೋಕ್ ಲೇಲ್ಯಾಂಡ್ ಶೋ ರೂಂ ಎದುರು ತಲುಪಿದಾಗ ಪಿರ್ಯಾದಿದಾರರು ಅವರ ಚಿಕ್ಕಮ್ಮ ನ ಮನೆ ಕಡೆ ಹೋಗಲು ಇಂಡಿಕೇಟರ್ ಹಾಕಿ ಸ್ಕೂಟರ್ ನ್ನು ತಿರುಗಿಸುತ್ತಿರುವಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಪಡೀಲ್ ಕಡೆಯಿಂದ ಬಿ.ಸಿ ರೋಡ್ ಕಡೆಗೆ ಬರುತ್ತಿದ್ದ  ಪಿಕ್ ಆಫ್ ವಾಹನ  ನಂಬ್ರ:  KA-19-B-5019  ನೇದನ್ನು  ಅದರ   ಚಾಲಕ  ರವಿಕುಮಾರ್ ಟಿ.ಬಿ ಎಂಬಾತನು  ಅತೀ ವೇಗ ಹಾಗೂ ನಿರ್ಲ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಹಿಂಬದಿಗೆ ಪಿಕ್ ಆಪ್ ನ್ನು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು  ರಸ್ತೆಯ ಎಡ ಬದಿಗೆ  ಬಿದ್ದ ಪರಿಣಾಮ  ಅವರ ಎದೆಗೆ ಗುದ್ದಿದ ಗಾಯ ಹಾಗೂ ಬೆನ್ನಿನ ಮೂಳೆ ಮುರಿತದ ಗಾಯ ಮತ್ತು ಸ್ಕೂಟರಿನ ಹಿಂದೆ ಮುಂದೆ ಸಂಪೂರ್ಣ ಜಖಂಗೊಂಡಿದವರನ್ನು ಅಲ್ಲಿ ಸೇರಿದ ಜನರು ಹಾಗೂ ಅವರ ಚಿಕ್ಕಮ್ಮ ನ ಮನೆಯವರು ಬಂದು ಅವರನ್ನು ಉಪಚರಿಸಿ  ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ.ಎಂಬಿತ್ಯಾದಿ.

Crime Reported in  Kavoor PS

1)ಪಿರ್ಯಾದಿ HARISH H V PSI ರವರು ದಿನಾಂಕ 16-05-2021 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು ಬೆಳಿಗ್ಗೆ 07.15 ಗಂಟೆಗೆ ಕಾವೂರು ಜಂಕ್ಷನ್ ನಿಂದ ಕೂಳೂರು ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿರುವ ಸದತ್ ವಲಿ ಎಂಬ ಹೆಸರಿನ ಚಿಕನ್  ಅಂಗಡಿಯು ತೆರೆದುಕೊಂಡಿದ್ದು ಅಂಗಡಿಯ ಒಳಗೆ ಇದ್ದ ವ್ಯಕ್ತಿಯು ಮುಖಕ್ಕೆ ಮಾಸ್ಕ್ ಹಾಕದೇ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡದೇ ಗಿರಾಕಿಗಳೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದು, ಆತನಲ್ಲಿ ವಿಚಾರಿಸಿದಾಗ ರಶೀದ್ (36ವರ್ಷ) ಎಂಬುದಾಗಿ ತಿಳಿಸಿದ್ದು, ಇವರು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರು ಮಂಗಳೂರು ರವರು ಹೊರಡಿಸಿರುವ ಮಾರ್ಗಸೂಚಿ ಆದೇಶವನ್ನು ಉಲ್ಲಂಘಿಸಿ ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವಿರುವುದನ್ನು ತಿಳಿದು ಕೂಡ ನಿರ್ಲಕ್ಷವಹಿಸಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

2) ಪಿರ್ಯಾದಿ HARISH H V PSI ರವರು ದಿನಾಂಕ 16-05-2021 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು ಬೆಳಿಗ್ಗೆ 07.20 ಗಂಟೆಗೆ ಕಾವೂರು ಜಂಕ್ಷನ್ ನಿಂದ ಕೂಳೂರು ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿರುವ ಕಾವೂರು ಚಿಕನ್ ಎಂಬ ಹೆಸರಿನ ಚಿಕನ್ ಅಂಗಡಿಯು ತೆರೆದುಕೊಂಡಿದ್ದು ಅಂಗಡಿಯ ಒಳಗೆ ಇದ್ದ ವ್ಯಕ್ತಿಯು ಮುಖಕ್ಕೆ ಮಾಸ್ಕ್ ಹಾಕದೇ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡದೇ ಗಿರಾಕಿಗಳೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದು, ಆತನಲ್ಲಿ ವಿಚಾರಿಸಿದಾಗ ಸೀತಾರಾಮ(59 ವರ್ಷ) ಎಂಬುದಾಗಿ ತಿಳಿಸಿದ್ದು, ಇವರು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರು ಮಂಗಳೂರು ರವರು ಹೊರಡಿಸಿರುವ ಮಾರ್ಗಸೂಚಿ ಆದೇಶವನ್ನು ಉಲ್ಲಂಘಿಸಿ ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವಿರುವುದನ್ನು ತಿಳಿದು ಕೂಡ ನಿರ್ಲಕ್ಷವಹಿಸಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in  Ullal PS

ದಿನಾಂಕ: 16-05-2021 ರಂದು ರಾತ್ರಿ 9-00 ಗಂಟೆಯ ಸಮಯಕ್ಕೆ ಫಿರ್ಯಾದಿ ಫೈಜಲ್ ಪಿ.ಕೆ ರವರು ತನ್ನ ಸಿಬ್ಬಂದಿಗಳ ಜೊತೆಯಲ್ಲಿ ಮಂಗಳೂರು ತಾಲೂಕು ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ  ಕ್ಯಾಲಿಕಟ್ ಕಿಚನ್ ಎಂಬ ಹೋಟೆಲಿನಲ್ಲಿ ತನ್ನ ಸಹ ಸಿಬ್ಬಂದಿಗಳ ಜೊತೆಯಲ್ಲಿ ಇದ್ದ ಸಮಯ ಆರೋಪಿಗಳಾದ ಲುಕ್ಮಾನ್, ಅಜ್ಮಾಲ್, ರಿಜ್ವಾನ್, ಇಮ್ರಾನ್, ಫವಾಝ್, ನಿಜಾಮ್, ಇರ್ಫಾನ್, ತೌಫಿಕ್ ರವರುಗಳು ಬಂದು ತಿಂಡಿ ತಿನಸಿಗೆ ಹೊರಗಡೆಯಿಂದಲೇ ಅರ್ಡರ್ ಮಾಡಿದಾಗ ಸತೀಶ್ ರವರು ಈ ಸಲ ತಿಂಡಿ ತಿನಸುಗಳ ಮೊತ್ತವನ್ನು ಪಾವತಿಸುವುದಕ್ಕೆ ಹೇಳಿದ್ದಕ್ಕೆ ಆರೋಪಿಗಳು ಹೊರ ಹೋಗಿ ಇತರರನ್ನು ಸೇರಿಸಿಕೊಂಡು ಕೈಯಲ್ಲಿ ಕಲ್ಲು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಹೋಟೆಲ್ ನ ಒಳಗಡೆ ಅಕ್ರಮ ಪ್ರವೇಶ ಮಾಡಿ ‘’ ಏ ಬೇವಾರ್ಸಿಗಳೇ ನಿಮಗೆ ನಾವು ಕೇಳುವಾಗ ಉಚಿತವಾಗಿ ತಿಂಡಿಗಳನ್ನು ಕೊಡಲು ಆಗುವುದಿಲ್ಲವಾ? ನಾವು ನಿಮಗೆ ಹಣ ಕೊಡಬೇಕಾ ’’ ಎಂದು ಬೈಯುತ್ತಾ ಕೌಂಟರ್ ನಲ್ಲಿದ್ದ ಸತೀಶ್ ಚಂದ್ರರವನ್ನು ಕೊಲೆ ಮಾಡುವ ಉದ್ದೇಶದಿಂದ ಲುಕ್ಮಾನ್ ನು ಕೈಯಲ್ಲಿದ್ದ ದೊಣ್ಣೆಯಿಂದ ಸತೀಶ್ ರವರ ತಲೆಗೆ ಜೋರಾಗಿ ಹೊಡೆದಾಗ ಅಲ್ಲಿದ್ದವರೆಲ್ಲಾ ಸತೀಶರವರ ರಕ್ಷಣೆಗೆ ಹೋದಾಗ ಬಾಕಿ ಉಳಿದ ಆರೋಪಿಗಳು ಕೈಗಳಲ್ಲಿದ್ದ ಕಲ್ಲು ಮತ್ತು ದೊಣ್ಣೆಗಳಿಂದ ಕಿಟಕಿ ಪಾತ್ರೆಗಳಿಗೆ ಹೊಡೆದು ಹೋಟೇಲಿನ ಟೇಬಲ್ ಚಯರ್ ಗಳಿಗೆ ಹೊಡೆದು ಹುಡಿ ಮಾಡಿ ಸುಮಾರು 20 ಸಾವಿರ ರೂಪಾಯಿ ನಷ್ಟವುಂಡು ಮಾಡಿರುತ್ತಾರೆ.  ಆರೋಪಿಗಳು ಕಲ್ಲು ದೊಣ್ಣೆಗಳನ್ನು ಅಲ್ಲೇ ಬಿಸಾಡಿ ನಾವು ಕೋರ್ಟ್ ಪೊಲೀಸ್ ಸ್ಟೇಷನ್ ಗೆ ಹೋಗಿ ಬಂದವರು ನಾವು ಯಾರಿಗೂ ಹೆದರುವುದಿಲ್ಲ. ನಾಳೆಯಿಂದ ಮತ್ತೆ ಎನಾದರೂ ಹಣ ಕೇಳಿದರೆ ನಿಮ್ಮಲ್ಲಿ ಯಾರಾನ್ನಾದರೂ ಕೊಲೆ ಮಾಡಲಾಗುವುದು ಎಂದು ಬೆದರಿಸಿ, ಕೋವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Crime Reported in  Moodabidre PS       

ದಿನಾಂಕ: 02-03-2021 ರಂದು ಸಮಯ ಸುಮಾರು 12.30 ಗಂಟೆಗೆ ರೇಷ್ಮಾ ಶೇಖ್ ಎಂಬುವಳು ಪಿರ್ಯಾದಿ Nisar Ahammad ರವರ ವಾಸ್ತವ್ಯದ ಪ್ಲಾಟ್ ನಿವಾಸಿ ಇಮ್ರಾನ್ ರವರ ಪರಿಚಯವಿರುವುದಾಗಿ ಎಂದು ಪಿರ್ಯಾದಿದಾರರಿಗೆ ತನ್ನನ್ನು ತಾನು ಪರಿಚಯಿಸಿಕೊಂಡು ಪಿರ್ಯಾದಿದಾರರ ಕೆ.ಎ-20-ಪಿ-8779 ನೇ ನಂಬ್ರದ ಸ್ವಿಪ್ಟ್ ಕಾರನ್ನು ಒಂದು ವಾರದ ಮಟ್ಟಿಗೆ ಉಪಯೋಗಕ್ಕಾಗಿ ಪಡೆದುಕೊಂಡು, ಒಂದು ವಾರದ ಬಳಿಕ ಕಾರನ್ನು ಹಿಂದಿರುಗಿಸಲು ರೇಷ್ಮಾ ರವರಿಗೆ ಪೋನ್ ಕರೆ ಮಾಡಿ ವಿಚಾರಿಸಿದಾಗ ಏನೆನೋ ಕಾರಣ ಹೇಳಿ ಕಾರನ್ನು ವಾಪಾಸು ನೀಡದೇ ಸತಾಯಿಸಿದ್ದು ಇಮ್ರಾನ್ ರವರು ಬೆಂಗಳೂರಿಗೆ ಹೋಗಿ ವಿಚಾರಿಸಿದಾಗ ಸದ್ರಿ ಕಾರನ್ನು ರೇಷ್ಮಾ ಶೇಖ್ ಳು ಆಶೀಕ್, ಕಿರಣ್ ಮತ್ತು ಬೆಂಗಳೂರಿನ ಕೆಲ ನಿವಾಸಿಗಳ ಜೊತೆ ಸೇರಿಕೊಂಡು ಅಕ್ರಮವಾಗಿ ಬೆರೆಯವರಿಂದ ಹಣವನ್ನು ಪಡೆದು, ನಕಲಿ ದಾಖಲೆಗಳನ್ನು ಸೃಷ್ಠಿಸಿ ಅಡವಿಟ್ಟು ವಂಚನೆ ಮಾಡಿರುವುದು ತಿಳಿದುಬಂದಿರುತ್ತದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕಾರನ್ನು ದೊರಕಿಸಿಕೊಡಬೆಕೆಂದು ನೀಡಿರುವ ದೂರು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 17-05-2021 04:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080